ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಮಾಲ್​ನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಅಶ್ವಥ್ ನಾರಾಯಣ್ ಪೊಲೀಸ್ ವಶಕ್ಕೆ

Posted by Vidyamaana on 2023-11-01 13:18:22 |

Share: | | | | |


ಮಾಲ್​ನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಅಶ್ವಥ್ ನಾರಾಯಣ್ ಪೊಲೀಸ್ ವಶಕ್ಕೆ

ಬೆಂಗಳೂರು : ನಗರದ ಮಾಲ್​ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮಿ ವ್ಯಕ್ತಿಯ ಬಂಧನವಾಗಿದೆ. ಬಂಧಿತ ನಿವೃತ್ತ ಶಿಕ್ಷಕ ಎಂದು ತಿಳಿದು ಬಂದಿದೆ. ವ್ಯಕ್ತಿಯನ್ನು ಬಸವೇಶ್ವರ ನಗರದ ಅಶ್ವಥ್ ನಾರಾಯಣ್ ಎಂದು ಗುರುತಿಸಲಾಗಿದೆ. ಆರೋಪಿ ಅಶ್ವಥ್ ನಾರಾಯಣ್ ವಾಸವಿದ್ದ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದನು.ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪ್ರತಿಷ್ಠಿತ ಮಾಲ್​ ನಲ್ಲಿ ಲೈಂಗಿಕ ಕಿರುಕುಳ (Sexual harassment) ನೀಡಿರುವ ವಿಡಿಯೋ ವೈರಲ್ (Viral Video) ಆಗಿತ್ತು. ಯಶವಂತ್ ಎಂಬ ಯುವಕ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ರು. 


ಅಕ್ಟೋಬರ್ 29ರ ಭಾನುವಾರ ಸಂಜೆ ಸುಮಾರು 6.30ರ ವೇಳೆಗೆ ಬೆಂಗಳೂರಿನ ಲೂಲು ಮಾಲ್​ನಲ್ಲಿ ಈ ಘಟನೆ ನಡೆದಿತ್ತು.

ಕಾಸರಗೋಡಿನಲ್ಲಿ ಇಬ್ಬರು ಯುವಕರಿಗೆ ರೈಲು ಢಿಕ್ಕಿ; ಯುವಕರು ಮೃತ್ಯು

Posted by Vidyamaana on 2024-01-30 18:39:39 |

Share: | | | | |


ಕಾಸರಗೋಡಿನಲ್ಲಿ ಇಬ್ಬರು ಯುವಕರಿಗೆ ರೈಲು ಢಿಕ್ಕಿ; ಯುವಕರು ಮೃತ್ಯು

ಕಾಸರಗೋಡು: ಪಳ್ಳಂ ರೈಲ್ವೇ ಸೇತುವೆ ಬಳಿ ಮುಂಜಾನೆ ಸಮಯದಲ್ಲಿ ಇಬ್ಬರು ಯುವಕರಿಗೆ ರೈಲು ಢಿಕ್ಕಿಯಾಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.


ಯುವಕರಿಬ್ಬರು 20ರಿಂದ 25 ವರ್ಷದೊಳಗಿನವರಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ. ಇಂದು ಮುಂಜಾನೆ 5:30ರ ಸುಮಾರಿಗೆ ಇಬ್ಬರು ಯುವಕರ ಮೃತದೇಹಗಳು ರೈಲು ಹಳಿಯಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.


ಇನ್ನು ಘಟನಾ ಸ್ಥಳಕ್ಕೆ ಸ್ಥಳೀಯರು ನೀಡಿದ ಮಾಹಿತಿಯಂತೆ ರೈಲ್ವೆ ಪೊಲೀಸರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದ ಸುಪ್ರೀಂ ಕೋರ್ಟ್‌: ನನ್ನೆಲ್ಲಾ ಪ್ಲ್ಯಾನ್‌ ಉಲ್ಟಾ ಆಯಿತು ಎಂದ ಖ್ಯಾತ ಅಥ್ಲೀಟ್‌!

Posted by Vidyamaana on 2023-10-19 09:23:38 |

Share: | | | | |


ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದ ಸುಪ್ರೀಂ ಕೋರ್ಟ್‌: ನನ್ನೆಲ್ಲಾ ಪ್ಲ್ಯಾನ್‌ ಉಲ್ಟಾ ಆಯಿತು ಎಂದ ಖ್ಯಾತ ಅಥ್ಲೀಟ್‌!

  ಸುಪ್ರೀಂ ಕೋರ್ಟ್‌ ಮಂಗಳವಾರ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ್ದು, ಇದರ ಬೆನ್ನಲ್ಲೇ ದೇಶದ ಪ್ರಮುಖ ಸಲಿಂಗಿ ಜೋಡಿಗಳಲ್ಲಿ ಆತಂಕ ಶುರುವಾಗಿದೆ.ಈ ಕುರಿತು ಭಾರತದ ಖ್ಯಾತ ಸ್ಪ್ರಿಂಟರ್‌ ಹಾಗೂ ಒಲಿಂಪಿಯನ್‌ ದ್ಯುತಿ ಚಂದ್‌ ಬೇಸರ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್‌ ತೀರ್ಪು ನನ್ನೆಲ್ಲಾ ಪ್ಲ್ಯಾನ್‌ಗಳನ್ನು ಉಲ್ಟಾ ಮಾಡಿದೆ ಎಂದು ಅವರು ಹೇಳಿದ್ದಾರೆ.ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನಿರಾಕರಿಸಿದೆ.ಇದರಿಂದ ತೀರ್ಪು ನಿರೀಕ್ಷೆಯಲ್ಲಿದ್ದ ದೇಶದ ಪ್ರಮುಖ ಸಲಿಂಗ ಜೋಡಿಗಳಿಗೆ ಇದರಿಂದ ದೊಡ್ಡ ಆಘಾತವಾಗಿದೆ.


ನಾನು ನನ್ನ ಜೊತೆಗಾರ್ತಿ ಮೊನಾಲಿಸಾರನ್ನು ಮದುವೆಯಾಗುವ ಎಲ್ಲಾ ಪ್ಲ್ಯಾನ್‌ ಮಾಡಿದ್ದೆ. ಆದರೆ, ಸುಪ್ರೀಂ ಕೋರ್ಟ್‌ ತೀರ್ಪು ಈ ಪ್ಲ್ಯಾನ್‌ಗಳನ್ನು ಹಾಳು ಮಾಡಿದೆ ಎಂದು ದ್ಯುತಿ ಚಂದ್‌ ಹೇಳಿದ್ದಾರೆ.

ನಾನು ಹಾಗೂ ಮೋನಾಲಿಸಾ ಕಳೆದ ಐದು ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದೇವೆ. ವಯಸ್ಕರಾರಿಗೂ ನಾವು ತುಂಬಾ ಸಂತೋಷದಿಂದ ಬದುಕುತ್ತಿದ್ದೇವೆ . ನಮ್ಮ ಬದುಕಿನಲ್ಲಿ ನಮ್ಮದೇ ಆದಂಥ ಸ್ವಂಥ ನಿರ್ಧಾರಗಳನ್ನು ಮಾಡಲು ನಾವೀಗ ಶಕ್ತರಾಗಿದ್ದೇವೆ. ಸಲಿಂಗ ವಿವಾಹವನ್ನು ಮಾನ್ಯ ಮಾಡಿ ಸಂಸತ್ತು ಹೊಸ ಕಾನೂನು ಜಾರಿ ಮಾಡಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದು ದ್ಯುತಿ ತಿಳಿಸಿದ್ದಾರೆ.2019ರ ಮೇ ತಿಂಗಳಲ್ಲಿ ಭಾರತದಲ್ಲಿ ಮುಕ್ತವಾಗಿ ಹೇಳಿಕೊಂಡ ದೇಶದ ಮೊದಲ ಲೆಸ್ಬಿಯನ್‌ ಅಥ್ಲೀಟ್‌ ಆಗಿ ದ್ಯುತಿ ಚಂದ್‌ ಗುರುತಿಸಿಕೊಂಡರು. ಇದಕ್ಕಾಗಿ ಅವರು ತಮ್ಮ ಕುಟುಂಬದಿಂದ ದೊಡ್ಡ ಮಟ್ಟದ ಟೀಕೆ ಎದುರಿಸಿದ್ದರು.


2021 ರಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ಕ್ವೀನ್ಸ್ ಬ್ಯಾಟನ್‌ನಲ್ಲಿ ಭಾಗವಹಿಸಿದ್ದಲ್ಲದೇ, ಕಾಮನ್‌ವೆಲ್ತ್ ದೇಶಗಳಲ್ಲಿ ಹೋಮೋಫೋಬಿಯಾ ಬಗ್ಗೆ ಬೆಳಕು ಚೆಲ್ಲುವ ಅವಕಾಶವನ್ನು ಪಡೆದರು.


2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ LGBTQIA+ ಧ್ವಜವನ್ನು ಹಿಡಿದಿದ್ದ ದ್ಯುತಿ ಅವರು ಹೋಮೋಫೋಬಿಯಾ ವಿರುದ್ಧ ಪ್ರಬಲ ಸಂದೇಶವನ್ನು ಕಳುಹಿಸಿದ್ದರು.2015 ರಲ್ಲಿ ಸ್ಪೋರ್ಟ್ಸ್ ಆರ್ಬಿಟ್ರೇಷನ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಐಎಎಎಫ್‌ ವಿರುದ್ಧ ದ್ಯುತಿ ಚಂದ್‌ ಲಿಂಗ ಪ್ರಕರಣವನ್ನು ಗೆದ್ದಿದ್ದರು. ಒಂದು ವರ್ಷಅಮಾನತುಗೊಂಡ ನಂತರ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಯಿತು.

ಸಿಎಎಸ್‌ ಎರಡು ವರ್ಷಗಳವರೆಗೆ ಐಎಎಎಫ್‌ ನೀತಿಯನ್ನು ಅಮಾನತುಗೊಳಿಸಿತು. ನಂತರ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆಯು ನೀತಿಯನ್ನು ಬದಲಾಯಿಸಿತು, ಇದು ಈಗ 400m ನಿಂದ 1500m ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಮಹಿಳಾ ಅಥ್ಲೀಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ, 100m ಮತ್ತು 200m ನಲ್ಲಿ ಸ್ಪರ್ಧಿಸುವ ದ್ಯುತಿಯನ್ನು ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿತು.


ಮೊನಾಲಿಸಾ ಕುರಿತು ಹೇಳುದಾದರೆ , ತನ್ನ ಗ್ರಾಮದಲ್ಲಿ ಖುದುರ್ಕುನಿ ಪೂಜೆಯ ಸಮಯದಲ್ಲಿ ದ್ಯುತಿ ಚಂದ್‌ರನ್ನು ಮೊದಲು ಭೇಟಿಯಾಗಿದ್ದರು ಮತ್ತು ಬಿಎ ಪದವಿಯನ್ನು ಪೂರ್ಣಗೊಳಿಸಿದ ನಂತರ ದಂಪತಿಗಳು ಒಟ್ಟಿಗೆ ವಾಸ ಮಾಡಲು ಆರಂಭಿಸಿದ್ದಾರೆ.

ಶಾಸಕರ ಇಂದಿನ ಕಾರ್ಯಕ್ರಮ ಜು 02

Posted by Vidyamaana on 2023-07-02 02:13:16 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 02

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 2 ರಂದು..

ಬೆಳಿಗ್ಗೆ 10 ಗಂಟೆಗೆ ಬನ್ನೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಳ ವೀಕ್ಷಣೆ

10.30 ಬನ್ನೂರು ಕುಂಟ್ಯಾನ ದೇವಳದ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ 

 ಭಾಗವಹಿಸಲಿದ್ದಾರೆ.

PSI ನೇಮಕಾತಿ ಹಗರಣದ ಬೆನ್ನಲ್ಲೇ ಕಾನ್ಸ್ ಟೇಬಲ್ ಪರೀಕ್ಷೆಯಲ್ಲೂ ಅಕ್ರಮ : ನಾಲ್ವರು ಸಿಸಿಬಿ ವಶಕ್ಕೆ

Posted by Vidyamaana on 2023-09-11 09:47:24 |

Share: | | | | |


PSI ನೇಮಕಾತಿ ಹಗರಣದ ಬೆನ್ನಲ್ಲೇ ಕಾನ್ಸ್ ಟೇಬಲ್ ಪರೀಕ್ಷೆಯಲ್ಲೂ ಅಕ್ರಮ : ನಾಲ್ವರು ಸಿಸಿಬಿ ವಶಕ್ಕೆ

ಬೆಂಗಳೂರು : ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಸಶಸ್ತ್ರಮೀಸಲು ಪೊಲೀಸ್ ಪಡೆಯ ) ಕಾನ್ ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲೂ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಅಕ್ರಮ ಎಸಗಲು ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೊಪ್ಪಳ ಜಿಲ್ಲೆ ಕುಷ್ಠಗಿ ಮೂಲದ ಬಸವರಾಜ್, ದಿಲೀಪ್, ತಿಮ್ಮೇಗೌಡ ಮತ್ತು ತುಮಕೂರು ಚಿಕ್ಕನಾಯಕನಹಳ್ಳಿ ಮೂಲದ ಹರಿಪ್ರಸಾದ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ಪರೀಕ್ಷೆಗೆ ಒಂದು ದಿನ ಮುನ್ನ ಆರೋಪಿಗಳು ಅಭ್ಯರ್ಥಿಗಳನ್ನ ಒಂದೆಡೆ ಸೇರಲು ಹೇಳಿದ್ದರು. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನೀಡಲು ಏಜೆಂಟರು ತಯಾರಾಗಿದ್ದರು. ಇದೀಗ ಸಿಸಿಬಿ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಮುಂದಾಗಿದ್ದ ನಾಲ್ವರು ಏಜೆಂಟ್​​ಗಳನ್ನ ಬಂಧಿಸಿದ್ದಾರೆ


ಈ ಆರೋಪಿಗಳು 2018ರಲ್ಲಿ ನಡೆದಿದ್ದ ಕಾನ್ ಸ್ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು, ನಂತರ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು. ಬಳಿಕ ಭಾನುವಾರ ರಾಜ್ಯದಲ್ಲಿ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಸಂಬಂಧ ಆರೋಪಿಗಳು ಕೆಲದಿನಗಳ ಹಿಂದೆ ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ

ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆ

Posted by Vidyamaana on 2024-01-08 15:31:10 |

Share: | | | | |


ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆ

ಪುತ್ತೂರು: ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಹಾಗೂ ಕಾರ್ಯಾಧ್ಯಕ್ಷರಾಗಿ ಎನ್. ಚಂದ್ರಹಾಸ ಶೆಟ್ಟಿರವರು ಆಯ್ಕೆಯಾಗಿದ್ದಾರೆ.

ಉದ್ಯಮಿ ರಾಕೇಶ್ ಮಲ್ಲಿರವರು ಬಂಟ್ವಾಳ ತಾಲೂಕಿನವರಾಗಿದ್ದು, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಕಾರ್ಯಾಧ್ಯಕ್ಷರಾಗಿ, ಕಾಂಗ್ರೆಸ್‌ ಕಾರ್ಮಿಕ ಘಟಕದ ಇಂಟಕ್ ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎನ್.ಚಂದ್ರಹಾಸ ಶೆಟ್ಟಿಯವರು ಪ್ರತಿಷ್ಠಿತ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿಯಾಗಿದ್ದು, ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷರಾಗಿ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ನಡುವೆ ಉದ್ಯಮಿ ಮುತ್ತಪ್ಪ ರೈ ನೇತೃತ್ವದ ಪುತ್ತೂರಿನ ಕೋಟಿ ಚೆನ್ನಯ ಕಂಬಳದ ಮುಂದಾಳತ್ವ ವಹಿಸಿಕೊಂಡು ಅದರ ಯಶಸ್ಸಿಗಾಗಿ ಈಗಲೂ ಶ್ರಮಿಸುತ್ತಾ ಬಂದಿರುತ್ತಾರೆ.

Recent News


Leave a Comment: