ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಚರಣ್‌ರಾಜ್ ರೈ ಹತ್ಯೆ ಪ್ರಕರಣ:ಆರೋಪಿಗಳಿಗೆ ಆಶ್ರಯ ಆರೋಪಿ ಪ್ರಜ್ವಲ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು

Posted by Vidyamaana on 2023-08-05 01:43:38 |

Share: | | | | |


ಚರಣ್‌ರಾಜ್ ರೈ ಹತ್ಯೆ ಪ್ರಕರಣ:ಆರೋಪಿಗಳಿಗೆ ಆಶ್ರಯ ಆರೋಪಿ ಪ್ರಜ್ವಲ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು

ಪುತ್ತೂರು:ವರ್ಷದ ಹಿಂದೆ ಪೆರ್ಲಂಪಾಡಿಯಲ್ಲಿ ನಡೆದ ಚರಣ್‌ ರಾಜ್ ರೈ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪಿ ಪ್ರಜ್ವಲ್ ರವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜೂನ್ 04 2022 ರಂದು, ಚರಣ್‌ ರಾಜ್‌ರವರ ಮಾವ ಕಿಟ್ಟಣ್ಣ ರೈ ಎಂಬವರು ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಕೆಲಸಕ್ಕೆಸಹಾಯ ಮಾಡಲು ಚರಣ್‌ರಾಜ್ ಸ್ನೇಹಿತ ನವೀನ್ ಕುಮಾರ್ ಕಾರಿನಲ್ಲಿ ಪೆರ್ಲರಿಪಾಡಿಗೆ ತೆರಳಿ ಮೆಡಿಕಲ್ ಶಾಪ್ ಬಳಿ ಕೆಲಸದಲ್ಲಿ ತೊಡಗಿದ್ದರು.ಈ ವೇಳೆ ಚರಣ್‌ ರಾಜ್ ರೈರವರು ಹೊರಗಡೆ ಬಂದು ಕಾರಿನ ಬಳಿ ಮೊಬೈಲ್ ಫೋನಲ್ಲಿ ಮಾತನಾಡುತ್ತಿದ್ದಾಗ ದುಷ್ಕರ್ಮಿಗಳು ಅವರಿಗೆ ಹಲ್ಲೆ ಮಾಡಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ 7ನೇ ಆರೋಪಿಯನ್ನಾಗಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು.ಆ ಬಳಿಕ ಪ್ರಜ್ವಲ್‌ ರವರು ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್‌ ಶೆಟ್ಟಿ ಅವರು ಆರೋಪಿ ಪ್ರಜ್ವಲ್‌ಗೆ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿದ್ದಾರೆ.ಆರೋಪಿ ಪರ ವಕೀಲರಾದ ರಾಜಶೇಖರ ಎಸ್ ಮತ್ತು ಮಹೇಶ್ ಕಜೆ ಅವರು ವಾದಿಸಿದ್ದರು.

ಉಪ್ಪಿನಂಗಡಿ : ಜ.13, 14 ರಂದು ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವ

Posted by Vidyamaana on 2024-01-11 20:59:54 |

Share: | | | | |


ಉಪ್ಪಿನಂಗಡಿ : ಜ.13, 14 ರಂದು ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವ

ಉಪ್ಪಿನಂಗಡಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವವು 2024 ಜನವರಿ 13, 14ರಂದು ಉಪ್ಪಿನಂಗಡಿಯ ಸರಳಿಕಟ್ಟೆಯ ಮಸೀದಿ ಸಭಾಂಗಣದಲ್ಲಿ ನಡೆಯಲಿದೆ. ಶಾಖೆ, ಸೆಕ್ಟರ್, ಡಿವಿಷನ್ ಸಾಹಿತ್ಯೋತ್ಸವ ಈಗಾಗಲೇ ಮುಕ್ತಾಯಗೊಂಡಿದ್ದು, ಡಿವಿಷನ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ನಡೆಯುವ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. 5 ವೇದಿಕೆಗಳಲ್ಲಿ ಜೂನಿಯರ್, ‌ಸೀನಿಯರ್, ಜನರಲ್, ಹಾಗೂ ಕ್ಯಾಂಪಸ್ ವಿಭಾಗಗಳಲ್ಲಿ ನಡೆಯುವ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ 6 ಡಿವಿಷನ್ ನಿಂದ ಸುಮಾರು 900 ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಯನ್ನು ಅಲಂಕರಿಸಲಿದ್ದಾರೆ ಎಂದು ಸಂಘಾಟಕರು ತಿಳಿಸಿದ್ದಾರೆ.

ಬಾಳೆಹೊನ್ನೂರು :ಅಲ್ ಬದ್ರಿಯಾ ಜುಮಾ ಮಸೀದಿ ಯಲ್ಲಿ ಸಂಭ್ರಮದ ಈದುಲ್ ಅಝಾ ಆಚರಣೆ

Posted by Vidyamaana on 2023-06-30 01:53:34 |

Share: | | | | |


ಬಾಳೆಹೊನ್ನೂರು :ಅಲ್ ಬದ್ರಿಯಾ ಜುಮಾ ಮಸೀದಿ ಯಲ್ಲಿ ಸಂಭ್ರಮದ ಈದುಲ್ ಅಝಾ ಆಚರಣೆ

ಚಿಕ್ಕಮಗಳೂರು: ಬಾಳೆಹೊನ್ನೂರಿನ ಮಸೀದಿಕೆರೆಯ ಅಲ್ ಬದ್ರಿಯಾ ಜುಮಾ ಮಸೀದಿಯಲ್ಲಿ ತ್ಯಾಗ,ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬ ಆಚರಿಸಲಾಯಿತು.ನಮಾಝ್‌ಗೆ ನೇತೃತ್ವವನ್ನು ನೀಡಿದ ಮಸೀದಿಯ ಖತೀಬರಾದ ಸ್ವಾದಿಕ್ ಸಖಾಫಿ ಕರಿಂಬಿಲ ರವರು ತ್ಯಾಗ,ಬಲಿದಾನ,ಶಾಂತಿ ಸೌಹಾರ್ದತೆಯ ಬಗ್ಗೆ ಭಾಷಣ ಮಾಡಿದರು.ನಮಾಝ್‌ನ ನಂತರ SSF ಮಸೀದಿಕೆರೆ ಯುನಿಟ್ ಇದರ ವತಿಯಿಂದ ಸೆ 10 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ವಿದ್ಯಾರ್ಥಿ ಸಮಾವೇಶ ಹಾಗೂ ನವೆಂಬರ್ ತಿಂಗಳಿನಲ್ಲಿ ಮುಂಬೈ‌ನ ಏಕತಾ ಉದ್ಯಾನದಲ್ಲಿ ನಡೆಯಲಿರುವ SSF ನ ಐವತ್ತನೇ ಸಂಭ್ರಮಾಚರಣೆಯ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಗೋಲ್ಡನ್‌ ಕಿ ಮುಹಬ್ಬತ್ ಎಂಬ ಹೆಸರಿನೊಂದಿಗೆ ಸರ್ವ ಧರ್ಮೀಯರಿಗೂ ಸಿಹಿ ವಿತರಿಸಿದರು.ಈ ವೇಳೆ SYS ಮಸೀದಿಕೆರೆ ಯುನಿಟ್‌ನ ಅಧ್ಯಕ್ಷರಾದ ಇಬ್ರಾಹಿಂ,ಕಾರ್ಯದರ್ಶಿ ಉಮರ್,SSF ಚಿಕ್ಕಮಗಳೂರು ಜಿಲ್ಲಾ ದ‌ಅವಾ ಕಾರ್ಯದರ್ಶಿ ಜಾಶಿರ್‌ ಹಿಮಮಿ ಸಖಾಫಿ,SSF ಬಾಳೆಹೊನ್ನೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ರಮೀಝ್ ಅಕ್ಷರನಗರ, ಮಸೀದಿಕೆರೆ ಯುನಿಟ್‌ನ ಕಾರ್ಯದರ್ಶಿಯಾದ ಖಲಂದರ್ ಮಸೀದಿಕೆರೆ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಪ್ರಮಾಣವಚನ ಸ್ವೀಕಾರ ಸಮಾರಂಭ

Posted by Vidyamaana on 2023-05-20 04:04:58 |

Share: | | | | |


ಪ್ರಮಾಣವಚನ ಸ್ವೀಕಾರ ಸಮಾರಂಭ

ಬೆಂಗಳೂರು : ಇಂದು ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ  ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಇಂದು ಮಧ್ಯಾಹ್ನ 12.30 ಕ್ಕೆ ರಾಜ್ಯಪಾಲ ಥಾವತ್ ಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಬೋಧಿಸಲಿದ್ದಾರೆ. ಇಂದು ಮಧ್ಯಾಹ್ನ 12.30 ಕ್ಕೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಹಾಜಿ ಮುಸ್ತಫಾ ಕೆಂಪಿ ಅವರಿಗೆ ಕಾವ್ಯ ನಮನ

Posted by Vidyamaana on 2023-06-27 02:58:33 |

Share: | | | | |


ಹಾಜಿ ಮುಸ್ತಫಾ ಕೆಂಪಿ ಅವರಿಗೆ ಕಾವ್ಯ ನಮನ

*ಅಕ್ಷರ ತರ್ಪಣ*


ಸಣ್ಣ ಪ್ರಾಯ..

ಶತಾಯುಷಿಯ

ಚಿಂತನೆ ಅಭಿಪ್ರಾಯ...


ನಾವು ಮಳೆ ಕಂಡರೆ

ಅವನು ಮೋಡ ಕಾಣುವ..


ನಾಳಿನ ಸಂಗತಿ

ಅರಿಯುವ ಶೀಫ್ರಮತಿ...


ಚಂದದ ನಗು

ಕಣ್ಣೀರು ಅಡಗಿಸುವ ಮಗು...


ಮುಳ್ಳನ್ನು ಮುಳ್ಳಿಂದ 

ತೆಗೆಯುವ ಚಾಕಚಕ್ಯತೆ

ಹೂವ ಮುಡಿಗೇರಿಸುವ ನೈಪುಣ್ಯತೆ...


ಸೌಹಾರ್ದದ ತೇರು

ಕಿಂಚಿತ್ತೂ 

ಅದರಲ್ಲಿ ಇಲ್ಲ ಏರುಪೇರು....


ದುಡ್ಡಿದ್ದರೆ ರಾಜ

ದುಡ್ಡಿಲ್ಲದಿದ್ದರೆ ಮಹಾರಾಜ...


ಪರಿಹಾರವಿಲ್ಲದ ಸಮಸ್ಯೆ ಇಲ್ಲ

ಸಮಸ್ಯೆಗಳು 

ಇವನ ಬಳಿ ನಿಲ್ಲುವುದಿಲ್ಲ...


ಸಂಘರ್ಷ 

ಇವನೆದುರು ಸೋತು

ಸಂಘರ್ಷವೇ ಮರಣದ ಹೇತು...


ಒಡಹುಟ್ಟಿದವನಲ್ಲ

ಆದರೂ ಸಹೋದರ...


ಸಮವಯಸ್ಕನಲ್ಲ

ಆದರೂ ಗೆಳೆಯ...


ಹಿರಿಯನಲ್ಲ

ಆದರೂ ವಿಮರ್ಷಕ....


ಛಲ  ಹೊರತು ಹಠ ಇಲ್ಲ

ಬಲ  ಹೊರತು  ಅಹಂ ಇಲ್ಲ

ಬುದ್ಧಿವಾದ ಹೇಳುವ ಮಾತ್ರವಲ್ಲ

ಬುದ್ದಿವಾದ ಕೇಳುವವ ...


ನಾಳೆ ಕಾಣ ಸಿಗುತ್ತಿ

ಪತ್ರಿಕೆಯೊಂದರ ಒಳಪುಟದಲ್ಲಿ

ಒಂದು ಪಟ ನಾಲ್ಕುಗೆರೆ...

ತಿಂಗಳ ಬಳಿಕ ಪತ್ರಿಕೆ  ಗುಜರಿಗೆ.

ಗುಜರಿಯಿಂದ ದಿನಸಿ ಅಂಗಡಿಗೆ

ಅಲ್ಲಿಂದ ಅದೇ ಪತ್ರಿಕೆಯಲ್ಲಿ

ಕಟ್ಟಿಕೊಟ್ಟ ಸಾಮಾನು

ಪುನ ಅದೇ ಮರಣ ಮನೆಗೆ...


ಬದುಕಿಷ್ಟೇ ಗೆಳೆಯಾ

ಮರೆಯುವರು ,ಎಲ್ಲರೂ ಮರೆಯುವರು

ಎಲ್ಲರನ್ನೂ ಮರೆಯುವರು...

ಇಂದು ನೀನು ಮುಂದೆ

ಮುಂದೆ ನಾನು ನಿನ್ನ ಹಿಂದೆ

ವಿದಾಯದ ವೇಳೆಯಲ್ಲಿ 

ಇದುವೇ  ಮುಸ್ತಾ

ನಿನಗೊಂದು ಕಾವ್ಯ ನಮನ  ಕವನ!


*ಜಮುಕ್ರಿ...*

ಮುಕ್ರಂಪಾಡಿ: ಮಹಿಳಾ ಪ ಪೂ ಕಾಲೇಜಿನ ಅಭಿವೃದ್ದಿ ಸಮಿತಿ ಸಭೆ

Posted by Vidyamaana on 2024-05-11 20:03:17 |

Share: | | | | |


ಮುಕ್ರಂಪಾಡಿ: ಮಹಿಳಾ ಪ ಪೂ ಕಾಲೇಜಿನ ಅಭಿವೃದ್ದಿ ಸಮಿತಿ ಸಭೆ

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಮಹಿಳಾ ಪ ಪೂ ಕಾಲೇಜಿನ ಅಭಿವೃದ್ದಿ ಸಮಿತಿ ಸಭೆಯು ಅಧ್ಯಕ್ಷರಾದ ಶಾಸಕರಾದ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿಗೆ ಈ ಬಾರಿ ಪಿಯು ಪರೀಕ್ಷೆಯಲ್ಲಿ ಶೇ. ೧೦೦ ಪಲಿತಾಂಶ ಬಂದಿದ್ದು ಇದಕ್ಕಾಗಿ ಶಿಕ್ಷಕ ವೃಂದವನ್ನು , ಅಭಿವೃದ್ದಿ ಸಮಿತಿಯವರನ್ನು ಶಾಸಕರು ಅಭಿನಂದಿಸಿದರು. ಕಾಲೇಜಿನಲ್ಲಿ ಮೂಲಭೂತ ಸೌಕರ್ಯದ ಕೊರತೆ ಇರುವ ಬಗ್ಗೆ ಪ್ರಾಂಶುಪಾಲರು ಶಾಸಕರ ಗಮನಕ್ಕೆ ತಂದರು.

Recent News


Leave a Comment: