ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಆ. 1ರಂದು ವಿಶ್ವ ಜನಸಂಖ್ಯಾ ದಿನಾಚರಣೆ

Posted by Vidyamaana on 2023-07-28 08:19:47 |

Share: | | | | |


ಆ. 1ರಂದು ವಿಶ್ವ ಜನಸಂಖ್ಯಾ ದಿನಾಚರಣೆ

ಪುತ್ತೂರು: ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು, ಹೆಚ್.ಪಿ.ಆರ್. ಪ್ಯಾರಾ ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ಆ. 1ರಂದು ಬೆಳಿಗ್ಗೆ 10ಕ್ಕೆ ಪುತ್ತೂರು ಪುರಭವನದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ 2023 ನಡೆಯಲಿದೆ.

ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸುವರು. ಡಿ.ಎಚ್.ಓ. ಡಾ. ಕಿಶೋರ್ ಕುಮಾರ್ ಎಂ. ಅಧ್ಯಕ್ಷತೆ ವಹಿಸುವರು. ಎಸಿ ಗಿರೀಶ್ ನಂದನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು, ತಹಸೀಲ್ದಾರ್ ಶಿವಶಂಕರ್, ತಾ.ಪಂ. ಇಓ ನವೀನ್ ಕುಮಾರ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ, ಹೆ.ಪಿ.ಆರ್. ಪ್ಯಾರಾ ಮೆಡಿಕಲ್ ಕಾಲೇಜಿನ ಇಮ್ನೀಸ್ ಮುಖ್ಯ ಅತಿಥಿಯಾಗಿರುವರು.

ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ಸಂಪನ್ಮೂಲ ವ್ಯಕ್ತಿಯಾಗಿರುವರು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದರುದ್ದೀನ್ ಎಂ.ಎಸ್., ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಬಿಂದು ಫ್ಯಾಕ್ಟರಿಗೆ ಭೇಟಿ

Posted by Vidyamaana on 2023-04-25 16:26:51 |

Share: | | | | |


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಬಿಂದು ಫ್ಯಾಕ್ಟರಿಗೆ ಭೇಟಿ

ಪುತ್ತೂರು: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಪ್ರತಿಷ್ಠಿತ ನರಿಮೊಗರಿನಲ್ಲಿರುವ ಬಿಂದು ಫ್ಯಾಕ್ಟರಿಗೆ ಮಂಗಳವಾರ ಭೇಟಿ ನೀಡಿದರು.

ಬಿಂದು ಫ್ಯಾಕ್ಟರಿಯ ಪ್ರಮುಖರು ಹಾಗೂ ಸಿಬ್ಬಂದಿಗಳೊಂದಿಗೆ ಮಾತನಾಡಿ ಫ್ಯಾಕ್ಟರಿಯ ಕಾರ್ಯಚಟುವಟಿಕೆ ಕುರಿತು ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು

ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

Posted by Vidyamaana on 2024-06-25 17:16:35 |

Share: | | | | |


ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

ರೀಲ್ಸ್ ಇಲ್ಲದೆ ದಿನವೇ ಮುಂದೆ ಸಾಗದ ಪರಿಸ್ಥಿತಿ ಎದುರಾಗಿದೆ. ರೀಲ್ಸ್‌ಗಾಗಿ ಜನರು ಅಪಾಯಕಾರಿ ಸ್ಟಂಟ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಈ ರೀತಿಯ ಸ್ಟಂಟ್ ದುರಂತದಲ್ಲಿ ಅಂತ್ಯವಾಗಿದೆ. ಶಾಲಾ ಬಾಲಕಿಯರಿಬ್ಬರು ರೀಲ್ಸ್‌ಗಾಗಿ ಸ್ಟಂಟ್ ಮಾಡಿದ್ದಾರೆ. ಒರ್ವ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ್ದಾಳೆ. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ಬಾಲಕಿ ಇದೀಗ ಎದ್ದು ನಿಲ್ಲದ ಪರಿಸ್ಥಿತಿಯಲ್ಲಿದ್ದಾಳೆ.ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕಿಯರು ಹೆದ್ದಾರಿಯಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಬಾಲಕಿಯರ ಸ್ಟಂಟ್ ಮತ್ತಷ್ಟು  ವೈರಲ್ ಆಗಲಿದೆ ಎಂದು ಸಾಹಸ ಪ್ರದರ್ಶನ ಮಾಡಿದ್ದಾರೆ. ರಸ್ತೆಯಲ್ಲಿ ಬಾಲಕಿ ಮತ್ತೊಬ್ಬ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರದಿಂದ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ ಬಾಲಕಿ ನೆಲಕ್ಕೆ ಲ್ಯಾಂಡಿಂಗ್ ಆಗವಾಗ ಕಾಲು ಜಾರಿದೆ. ಪರಿಣಾಮ ದೊಪ್ಪನೆ ಬಿದ್ದಿದ್ದಾಳೆ.

ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

Posted by Vidyamaana on 2023-08-19 14:25:24 |

Share: | | | | |


ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

ಪುತ್ತೂರು: ಅಭಿರಾಮ್‌ ಫ್ರೆಂಡ್ಸ್‌ (ರಿ.) ಪುತ್ತೂರು ಇದರ ವತಿಯಿಂದ ಹಿರಿಯ ಪ್ರಾ. ಶಾಲೆ ಕೃಷ್ಣನಗರ ಹಾಗೂ ಕೇಪುಳು, ನೆಲ್ಲಿಕಟ್ಟೆ, ರೋಟರಿಪುರ, ಕೆಮ್ಮಾಯಿ ಗುಂಡಿಜಾಲು, ಬೀರ್ನಹಿತ್ಲು ಅಂಗನವಾಡಿಯ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಿಹಿತಿಂಡಿ ವಿತರಿಸಿದರು.

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಗೆ ಚಯರ್‌, ಟೇಬಲ್‌ ವಿತರಣೆ:

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಯ ಮಕ್ಕಳಿಗೆ ನಲಿ-ಕಲಿಗೆ ಬೇಕಾದಂತಹ‌ ಮೂರು ಟೇಬಲ್‌ ಹಾಗೂ 15 ಚಯರ್ ಗಳನ್ನು ಅಭಿರಾಮ್‌ ಫ್ರೆಂಡ್ಸ್‌ (ರಿ.)ನ  ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾರವರಿಗೆ ಹಸ್ತಾಂತರಿಸಿದರು. ಅಭಿರಾಮ್‌ ಫ್ರೆಂಡ್ಸ್‌ (ರಿ.)ನ ಅಧ್ಯಕ್ಷ ತೇಜಕುಮಾರ್‌ ಕೆಮ್ಮಾಯಿ, ಕಾರ್ಯದರ್ಶಿ ಸನತ್‌ ಸುವರ್ಣ, ಉಪಾಧ್ಯಕ್ಷರಾದ ಪ್ರಜೀತ್ ಮಂಜಲ್ಪಡ್ಪು, ಹರ್ಷಿತ್‌ ರಾಮ್‌ ಬಳ್ಳಾಲ್‌, ಖಜಾಂಜಿ ಜಯೇಶ್‌ ಹಾಗೂ ಸದಸ್ಯರಾದ ಶರತ್‌ ಕೇಪುಳು, ರಮೇಶ್‌ ಬಂಡಾಜೆ, ಭರತ್‌, ಚಿದಾನಂದ ಕೇಪುಳು, ರಾಜೇಶ್‌ ಜಿಡೆಕಲ್ಲು, ಕಾರ್ತಿಕ್‌ ಊರಮಾಲು, ಕಿಶೋರ್‌ ತಾರಿಗುಡ್ಡೆ, ಪ್ರದೀಪ್‌ ಕೇಪುಳು, ಅವಿನಾಶ್‌ ಶೆಟ್ಟಿ, ಅಭಿಷೇಕ್‌ ಶೆಟ್ಟಿ, ಕಾರ್ತಿಕ್ ಚಿಕ್ಕಪುತ್ತೂರು, ಶಾಲಾ ಎಸ್‌ಡಿಎಂಸಿ ಸದಸ್ಯರು, ಬನ್ನೂರು ಗ್ರಾ, ಪಂ ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಅಂದ್ರಟ ಮಕ್ಕಳ ಪೋಷಕರು, ಊರುವರು ಉಪಸ್ಥಿತರಿದ್ದರು.

ಕಣ್ಣೂರು - ಅಪಘಾತಕ್ಕೀಡಾದ ಸಿಎನ್ ಜಿ ಆಟೋ ರಿಕ್ಷಾಕ್ಕೆ ಬೆಂಕಿ - ಇಬ್ಬರ ಸಜೀವ ದಹನ

Posted by Vidyamaana on 2023-10-14 13:17:23 |

Share: | | | | |


ಕಣ್ಣೂರು - ಅಪಘಾತಕ್ಕೀಡಾದ ಸಿಎನ್ ಜಿ ಆಟೋ ರಿಕ್ಷಾಕ್ಕೆ ಬೆಂಕಿ - ಇಬ್ಬರ ಸಜೀವ ದಹನ

ಕಣ್ಣೂರು ಅಕ್ಟೋಬರ್ 14: ಸಿಎನ್ ಜಿ ಚಾಲಿತ ಆಟೋ ರಿಕ್ಷಾವೊಂದು ಅಪಘಾತಕ್ಕೀಡಾದ ಬಳಿಕ ಬೆಂಕಿ ಹೊತ್ತಿಕೊಂಡು ಆಟೋದಲ್ಲಿದ್ದ ಇಬ್ಬರು ಸಜೀವವಾಗಿ ದಹನವಾದ ಘಟನೆ ಕಣ್ಣೂರಿನ ಕತಿರೂರಿನಲ್ಲಿ ನಡೆದಿದೆ.ಅಪಘಾತದಲ್ಲಿ ಚಾಲಕ ಅಭಿಲಾಷ್ (37) ಮತ್ತು ಆತನ ಸ್ನೇಹಿತ ಸಜೀಶ್ (36) ಸುಟ್ಟು ಕರಕಲಾಗಿದ್ದಾರೆ.ಆಟೋರಿಕ್ಷಾ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಟೋ ಪಲ್ಟಿಯಾಗಿದ್ದು, ಈ ವೇಳೆ ಸಿಎನ್ ಜಿ ಸಿಲಿಂಡರ್‌ನಿಂದ ಬೆಂಕಿ ಹೊತ್ತಿಕೊಂಡಿದೆ.


ಬೆಂಕಿಯ ಕೆನ್ನಾಲಗೆಗೆ ಸ್ಥಳೀಯರಿಗೂ ಆಟೋ ರಿಕ್ಷಾದ ಹತ್ತಿರಕ್ಕೂ ಹೋಗಲು ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಪೊಲೀಸರು ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರಿಬ್ಬರ ಶವಗಳು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಅವರನ್ನು ಗುರುತಿಸಲು ಸಾಕಷ್ಟು ಸಮಯ ಹಿಡಿಯಿತು. ಪೊಲೀಸರು ಆಟೋದಲ್ಲಿದ್ದ ಲೈಸೆನ್ಸ್ ಪ್ಲೇಟ್ ಬಳಸಿ ಅದು ಅಭಿಲಾಷ್ ಅವರದ್ದೇ ಎಂದು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಸಜೀಶ್ ತನ್ನ ಸಹೋದರಿಯ ಮನೆಗೆ ಭೇಟಿ ನೀಡಲು ಆಗಾಗ್ಗೆ ಅಭಿಲಾಷ್ ಆಟೋದಲ್ಲಿ ಬಂದಿದ್ದ ಎಂದು ತಿಳಿದು ಬಂದಿದೆ.ದುರಂತವೆಂದರೆ, ಸಹೋದರಿಯ ಮನೆಯಿಂದ ಕೇವಲ ನೂರು ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಅಭಿಲಾಷ್ ಆರು ತಿಂಗಳ ಹಿಂದೆಯಷ್ಟೇ ಆಟೋ ಖರೀದಿಸಿದ್ದರು.

ಬಂಟ್ವಾಳ:ಸರಕಾರಿ ಆಸ್ಪತ್ರೆ ಪಕ್ಕವೇ ರೋಗ ಉತ್ಪಾದನಾ ಘಟಕ

Posted by Vidyamaana on 2023-03-23 07:40:43 |

Share: | | | | |


ಬಂಟ್ವಾಳ:ಸರಕಾರಿ ಆಸ್ಪತ್ರೆ ಪಕ್ಕವೇ ರೋಗ ಉತ್ಪಾದನಾ ಘಟಕ

ಬಂಟ್ವಾಳ: ಆಸ್ಪತ್ರೆಗಳಿರುವುದು ಜನರ ಆರೋಗ್ಯ ಕಾಪಾಡಲು. ಆದರೆ ಇಂತಹ ಆಸ್ಪತ್ರೆಗಳ ಪಕ್ಕವೇ ಸೊಳ್ಳೆ ಉತ್ಪಾದನಾ ತಾಣ ಇದ್ದರೆ? ಅಲ್ಲೇ ರೋಗ ಬರಿಸಿ, ನೇರವಾಗಿ ಆಸ್ಪತ್ರೆ ದಾರಿ ತೋರಿಸುವುದೇ?

ಇದು ಬಂಟ್ವಾಳ ಸರಕಾರಿ ಆಸ್ಪತ್ರೆಯ ಕಥೆ. ತಾಲೂಕು ಆಸ್ಪತ್ರೆ ಬಹಳ ಸುವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಿದೆ. ಆದರೆ ಆಸ್ಪತ್ರೆಯ ಪಕ್ಕದಲ್ಲಿ ಸೊಳ್ಳೆ ಉತ್ಪತ್ತಿ ಮಾಡಿ, ರೋಗ ಪಸರಿಸುವ ಚರಂಡಿಯೊಂದಿದೆ. ಇದು ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಂತಿದೆ.


ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ಮುಂಭಾಗ ಮುಖ್ಯರಸ್ತೆ ಹಾದು ಹೋಗುತ್ತದೆ. ಈ ಮುಖ್ಯರಸ್ತೆಯ ಇನ್ನೊಂದು ಮಗ್ಗುಲಲ್ಲಿ ಈ ಚರಂಡಿ ಇದೆ. ಪೇಟೆ ಬೆಳೆದಂತೆ ಚರಂಡಿಗಳು ದುಸ್ಥಿತಿಯನ್ನು ತಲುಪುವುದು ಸಾಮಾನ್ಯ. ಆದರೆ ಆಸ್ಪತ್ರೆ ಪಕ್ಕದಲ್ಲೇ ಹೀಗಿದ್ದರೆ…?


ರೋಗವನ್ನು ಶಮನ ಮಾಡಬೇಕಾದ ಮಹತ್ತರ ಜವಾಬ್ದಾರಿಯನ್ನು ಆಸ್ಪತ್ರೆಗಳು ನಿರ್ವಹಿಸುತ್ತವೆ. ಅದೇ ಆಸ್ಪತ್ರೆಗಳಿಗೆ ಬಂದವರು ರೋಗವನ್ನು ಹೊತ್ತು ಕೊಂಡೊಯ್ದರೆ! ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗದೇ? ಆಸ್ಪತ್ರೆ ಸುವ್ಯವಸ್ಥಿತವಾಗಿ ಇರಬೇಕು ಎಂದು ಬಯಸುವುದು ಎಷ್ಟು ಸರಿಯೋ, ಅದೇ ರೀತಿ ಆಸ್ಪತ್ರೆಯ ಸುತ್ತಮುತ್ತಲ ಪರಿಸರವನ್ನು ಜಾಗೃತೆಯಿಂದ ಕಾಪಾಡಬೇಕಾದ ಜವಾಬ್ದಾರಿ ಸ್ಥಳೀಯಾಡಳಿತಕ್ಕಿದೆಯಲ್ಲವೇ?

Recent News


Leave a Comment: