ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಆಫರ್

Posted by Vidyamaana on 2024-04-24 04:21:00 |

Share: | | | | |


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಆಫರ್

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಮುಂಗಡ ಬುಕ್ಕಿಂಗ್ ಆಫರ್ ಏಪ್ರಿಲ್ 20ರಿಂದ ಮೇ.9ರವರೆಗೆ ಲಭ್ಯವಿದೆ.


ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿಯೂ ಈ ರಿಯಾಯಿತಿ ಆಫರ್ ಲಭ್ಯವಿದೆ. ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ ಅಕ್ಷಯ ತೃತೀಯ ಎಂಬುವುದು ಶುಭದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಜನರು ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ ಏಕೆಂದರೆ ಇದು ಕುಟುಂಬಕ್ಕೆ ಸಮೃದ್ಧಿ ಮತ್ತು ಆದೃಷ್ಟವನ್ನು ತರುತ್ತದೆ ಎಂಬುದು ನಂಬಿಕೆ ಆದುದರಿಂದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಮುಂಗಡ ಬುಕ್ಕಿಂಗ್ ಆಫರ್, ಮದುವೆ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಹಾಗೂ ಗ್ರಾಹಕರಿಗೆ ಮೆಚ್ಚಿನ ಆಭರಣಗಳನ್ನು ಆಯ್ಕೆ ಮಾಡಿ ಚಿನ್ನದ ನಾಣ್ಯವನ್ನು ಗೆಲ್ಲುವ ಸುವರ್ಣವಕಾಶ ಕಲ್ಪಿಸಿದೆ.

ಉಪ್ಪಿನಂಗಡಿ ಬಿ ಆರ್ ಅಂಬೇಡ್ಕರ್ ವಸತಿ‌ ಶಾಲೆಯಲ್ಲಿ ವಾರ್ಷಿಕೋತ್ಸವ

Posted by Vidyamaana on 2024-01-01 13:35:14 |

Share: | | | | |


ಉಪ್ಪಿನಂಗಡಿ ಬಿ ಆರ್ ಅಂಬೇಡ್ಕರ್ ವಸತಿ‌ ಶಾಲೆಯಲ್ಲಿ ವಾರ್ಷಿಕೋತ್ಸವ

ಪುತ್ತೂರು: ನಗರದ ಹೊರವಲಯದ‌ಪಡ್ಡಾಯೂರಿನಲ್ಲಿರುವ ಅಂಬೇಡ್ಕರ್ ವಸತಿ‌ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವಲ್ಲಿ ಪ್ರಯತ್ನ ಮಾಡುತ್ತೇನೆ ಮತ್ತು ತಾಲೂಕಿನಲ್ಲಿ ಬಾಡಿಗೆ ಕಟ್ಟಡದಲ್ಲಿರುವ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪಡ್ಡಾಯೀರಿನಲ್ಲಿರುವ ಉಪ್ಪಿನಂಗಡಿ ಅಂಬೇಡ್ಕರ್ ವಸತಿ‌ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಸತಿ‌ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇಲ್ಲಿನ ಶಿಕ್ಷಣ‌ಮತ್ತು ಇತರೆ  ಸೌಲಭ್ಯಗಳು ಚೆನ್ನಾಗಿರುವ ಬಗ್ಗೆ ಪೋಷಕರು ತಿಳಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕರು ಹೇಳಿದರು.ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಶಿಕ್ಷಣವನ್ನು‌ನೀಡಬೇಕಿದೆ ಎಂದು ಹೇಳಿದರು.


ವೇದಿಕೆಯಲ್ಲಿಶಿಕ್ಷಕ‌ರಕ್ಷಕ‌ಸಮಿತಿ ಅಧ್ಯಕ್ಷ ರವೀಂದ್ರ ರೈ,  ಸಮಾಜ ಕಲ್ಯಾಣ ಇಲಾಖೆ ಮೆನಜರ್ ಕೃಷ್ಣ ಕುಮಾರ್,  ಶಾಲಾ ಪ್ರಾಂಶುಪಾಲರಾದ ಸತೀಶ್ ಟಿ , ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದಮುರಳೀದರ್ ಜಿ,ಪುಂಜಾಲಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಕುಮಾರ್,ಎಸ್ ಜಿ ಎಂ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀನಿವಾಸ,ಮೊರಾರ್ಜಿ ದೇಸಾಯಿ ವಸತಿ ಶಾಲೆ ಪುತ್ತೂರು ಪ್ರಾಂಶುಪಾಲರಾದ ಅರುಣ್ ಕುಮಾರ್, ಸಿಆರ್ ಪಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಣಕಿ ವಾಣಿ ಸ್ವಾಗತಿಸಿದರು.

ನಮ್ಮ ಊರಿನ ನಿಮ್ಮ ಅಂಗಡಿ ಮಂಗಲ್ ಹೈಪರ್ ಮಾರ್ಕೆಟ್ ಶುಭಾರಂಭ

Posted by Vidyamaana on 2024-04-02 17:35:20 |

Share: | | | | |


ನಮ್ಮ ಊರಿನ ನಿಮ್ಮ ಅಂಗಡಿ ಮಂಗಲ್ ಹೈಪರ್ ಮಾರ್ಕೆಟ್ ಶುಭಾರಂಭ

ಪುತ್ತೂರು: ಕಳೆದ ಹಲವಾರು ವರುಷಗಳಿಂದ ಗುಣಮಟ್ಟ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ನಗರದ ಹೊರವಲಯದಲ್ಲಿರುವ ಮಂಜಲ್ಪಡುವಿನಲ್ಲಿ ವ್ಯವಹರಿಸುತ್ತಿರುವ ಮಂಗಲ್ ಸ್ಟೋರ್ಸ್‌ ನೂತನ ಮಳಿಗೆ "ಮಂಗಲ್ ಹೈಪರ್ ಮಾರ್ಕೆಟ್" ಪುತ್ತೂರಿನ ಹೃದಯ ಭಾಗದಲ್ಲಿರುವ ಜಿ.ಎಲ್.ಒನ್ ಮಾಲ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.

ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮಾಸ್ಟರ್ ಪ್ಲಾನರಿಯ ಆಡಳಿತ ನಿರ್ದೇಶಕ ಎಸ್. ಕೆ ಆನಂದ್ ಮತ್ತು ಜಿಎಲ್.ಒನ್ ಮಾಲ್‌ನ ಮಾಲಕ ಬಲರಾಮ ಆಚಾರ್ಯರವರು ದೀಪ ಪ್ರಜ್ವಲಿಸಿದರು.

ಮಾಲ್ ಪರಿಪೂರ್ಣತೆಗೆ ಹೈಪರ್ ಮಾರ್ಕೆಟ್ ಅವಶ್ಯ : ಬಲರಾಮ ಆಚಾರ್ಯ:

ಬಲರಾಮ ಆಚಾರ್ಯ ಮಾತನಾಡಿ, ಜಿ.ಎಲ್.ಒನ್ ಮಾಲ್ ಆರಂಭಗೊಂಡು ಇಂದಿಗೆ ಒಂದು ವರ್ಷ ಪೂರ್ಣವಾಗಿದೆ. ಕಾಕತಾಳೀಯವೆಂಬಂತೆ ಇಂದು ಹೈಪರ್ ಮಾರ್ಕೆಟ್ ಆರಂಭಗೊಂಡಿದೆ. ಇಲ್ಲಿಗೆ ಹೈಪರ್ ಮಾರ್ಕೆಟ್ ಬರಬೇಕೆಂದು ಪ್ರಯತ್ನಪಟ್ಟಿದ್ದೆವು. ಹೊಸ ಅವಕಾಶ ಹುಟ್ಟಿಕೊಂಡು ಹೈಪರ್ ಮಾರ್ಕೆಟ್ ಶುಭಾರಂಭಗೊಂಡಿದೆ. ಮಾಲ್ ಪರಿಪೂರ್ಣವಾಗಿ ಇರಬೇಕಾದರೆ ಒಂದು ಹೈಪರ್ ಮಾರ್ಕೆಟ್ ಅವಶ್ಯಕತೆ ಇದೆ. ಇದು ಎಲ್ಲಾ ಗ್ರಾಹಕರಿಗೆ ಉಪಯುಕ್ತವಾಗಲಿ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

ದಾನ ಧರ್ಮ ಮಾಡಲು ಮನಸ್ಸು ಬೇಕು – ಪಂಜಿಗುಡ್ಡೆ ಈಶ್ವರ ಭಟ್:


ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

Posted by Vidyamaana on 2024-05-20 14:34:59 |

Share: | | | | |


ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

ಲಕ್ನೋ: ವ್ಯಕ್ತಿಯೊಬ್ಬ ಮತದಾನ ಮಾಡುವಾಗ ಬಿಜೆಪಿ ಅಭ್ಯರ್ಥಿಗೆ ಹಲವು ಬಾರಿ ಮತದಾನ ಮಾಡಿದ್ದು, ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದು ವೈರಲ್ ಆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೃತ್ಯವೆಸಗಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಎಕ್ಸ್ ನಲ್ಲಿ ವಿಡಿಯೋ ಹಂಚಿ ಆಗ್ರಹಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು.

ನಾಪತ್ತೆಯಾಗಿದ್ದ ಕಾರ್ಕಳ ಹೆಡ್ ಕಾನ್ಸ್ ಟೇಬಲ್ ಶವ ಬಾವಿಯಲ್ಲಿ ಪತ್ತೆ ; ಕಾರ್ಕಳ ಪೊಲೀಸರ ತನಿಖೆ

Posted by Vidyamaana on 2023-10-23 15:51:51 |

Share: | | | | |


ನಾಪತ್ತೆಯಾಗಿದ್ದ ಕಾರ್ಕಳ ಹೆಡ್ ಕಾನ್ಸ್ ಟೇಬಲ್ ಶವ ಬಾವಿಯಲ್ಲಿ ಪತ್ತೆ ; ಕಾರ್ಕಳ ಪೊಲೀಸರ ತನಿಖೆ

ಉಡುಪಿ, ಅ.23: ಮನೆಗೆ ಬರುತ್ತೇನೆಂದು ಹೇಳಿ ನಾಪತ್ತೆಯಾಗಿದ್ದ ಕಾರ್ಕಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 


ಕಾರ್ಕಳ ನಗರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶೃತಿನ್ ಶೆಟ್ಟಿ (35) ಮೃತದೇಹ ಕಾರ್ಕಳ ಪುಲ್ಕೇರಿ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಅಸಹಜ ಸಾವೆಂದು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಅಕ್ಟೋಬರ್ 19ರಂದು ಶೃತಿನ್ ಶೆಟ್ಟಿ ಕಾರ್ಕಳ ಠಾಣೆಗೆ ಕರ್ತವ್ಯಕ್ಕೆಂದು ತೆರಳಿ, ಅಲ್ಲಿ ರಜೆ ಹಾಕಿ ನಾಪತ್ತೆಯಾಗಿದ್ದರು.


ಪಡುಬಿದ್ರೆಯ ಕಾಪು ಜನಾರ್ದನ ದೇವಸ್ಥಾನ ಬಳಿಯ ಅಂಗಡಿಮನೆ ನಿವಾಸಿ ಶೃತಿನ್ ಶೆಟ್ಟಿ (35) ಎರಡು ತಿ‌ಂಗಳ ಹಿಂದೆಯಷ್ಟೆ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ ಪಡೆದು ಕಾರ್ಕಳ ನಗರ ಠಾಣೆಗೆ ಬಂದಿದ್ದರು.  19 ರಂದು ಸಂಜೆ 7.30ಕ್ಕೆ ಪತ್ನಿಗೆ ಫೋನ್ ಮಾಡಿ, ಮನೆಗೆ ಬರುತ್ತಿದ್ದೇನೆ ಎಂದು ಶೃತಿನ್ ಹೇಳಿದ್ದರು. ಮನೆಗೂ ಬಾರದೇ ಇದ್ದುದರಿಂದ ಮತ್ತು ಪತಿಯ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಪತ್ನಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಬಾವಿಯಲ್ಲಿ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಸಾವಿನ ಹಿಂದೆ ಬೇರೆ ಕಾರಣ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.‌

ವಿಟ್ಲ:ಮಹಿಳೆ ಆತ್ಮಹತ್ಯೆ

Posted by Vidyamaana on 2023-01-28 15:59:05 |

Share: | | | | |


ವಿಟ್ಲ:ಮಹಿಳೆ ಆತ್ಮಹತ್ಯೆ

ವಿಟ್ಲ: ಖಿನ್ನತೆಗೆ ಒಳಗಾದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.

         ಕೊಳ್ಳಾಡು ಗ್ರಾಮದ ತೋಡ್ಲ ನಿವಾಸಿ ದಿ. ಕರುಣಾಕರ ಪೂಜಾರಿ ಯವರ ಪತ್ನಿ ಶಾಲಿನಿ(38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

           ಶಾಲಿನಿ ಅವರ ಪತಿ ಕೆಲ ವರ್ಷಗಳ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಇವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.ಇಂದು ಬೆಳಿಗ್ಗೆ ಶಾಲಿನಿಯವರು ಮನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದು, ಸಂಬಂಧಿಕರು ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದಿದಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಯಾವುದೋ ಮಾತ್ರೆಗಳನ್ನು ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ..



Leave a Comment: