ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಪುತ್ತೂರಿನ ಗಡಿಗ್ರಾಮಗಳಲ್ಲಿ ಬೇಟೆಗಾರನಿಗೆ ಬಲಿಯಾಗುತ್ತಿರುವ ಕಾಟಿಗಳು

Posted by Vidyamaana on 2023-09-29 12:00:28 |

Share: | | | | |


ಪುತ್ತೂರಿನ ಗಡಿಗ್ರಾಮಗಳಲ್ಲಿ ಬೇಟೆಗಾರನಿಗೆ ಬಲಿಯಾಗುತ್ತಿರುವ ಕಾಟಿಗಳು

ಪುತ್ತೂರು: ಕಾಡು ನಾಶವಾಗುತ್ತಿದ್ದಂತೆಯೇ ಆಹಾರ ಹರಿಸಿ ಕಾಡುಪ್ರಾಣಿಗಳು ನಾಡಿಗೆ ಬರುವುದು ಮತ್ತು ನಾಡಿಗೆ ಬಂದು ಕೃಷಿಗಳನ್ನು ನಾಶ ಮಾಡುವುದು ಪುತ್ತೂರು ತಾಲೂಕಿನ ಗಡಿಗ್ರಾಮಗಳಲ್ಲಿ ನಿತ್ಯದ ಪರಿಪಾಠವಾಗಿದೆ. ಕಾಡಿನಲ್ಲಿ ಆಹಾರದ ಕೊರತೆಯುಂಟಾದಾಗ ಮಾತ್ರ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತವೆ, ಆಹಾರ ಕೊರತೆಯಾಗಲು ಕಾಡುಗಳ ನಾಶವೂ ಕಾರಣವಾಗಿದೆ. ಕಾಡುಗಳ ರಕ್ಷಣೆಗೆ ಮತ್ತು ಕಾಡುಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅದೆಷ್ಟೋ ಅಧಿಕಾರಿಗಳನ್ನು ಇರಿಸಿಕೊಂಡಿದೆ, ಆದರೆ ಕಾಡು ನಾಶವಾಗುತ್ತಲೇ ಇದೆ ಕಾಡುಪ್ರಾಣಿಗಳು ನಾಡಿಗೆ ಬರುತ್ತಲೇ ಇದೆ. ಇಲ್ಲಿ ವಿಶೇಷವೇನೆಂದರೆ ನಾಡಿಗೆ ಬಂದ ಕಾಡುಪ್ರಾಣಿಗಳು ಮರಳಿ ಕಾಡು ಸೇರುವುದೇ ಇಲ್ಲ ಅವು ಮಾನವ ಹೊಟ್ಟೆ ಪಾಲಾಗುತ್ತಿದೆ ಎಂಬ ಆತಂಕದ ವಿಚಾರ ಬೆಳಕಿಗೆ ಬಂದಿದೆ.

ಪುತ್ತೂರು ತಾಲೂಕಿನ ಕೇರಳ ಗಡಿಗ್ರಾಮಗಳಲ್ಲಿ ಇಂಥಹದೊಂದು ಅಮಾನವೀಯ ಕೃತ್ಯಗಳು ನಿತ್ಯವೂ ನಡೆಯುತ್ತಿದೆ. ನೆಟ್ಟಣಿಗೆ ಮುಡ್ನೂರು, ಪಾಣಾಜೆ, ಜಾಲ್ಸೂರು ಗಡಿಗ್ರಾಮಗಳಲ್ಲಿ ಕಾಡಾಣೆಗಳ ಹಾವಳಿ ಇಲ್ಲ. ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಇದೆ. ಕಾಡುಕೋಣಗಳು ಗುಂಪುಗುಂಪಾಗಿ ರಾತ್ರಿ ವೇಳೆ ಕೆಲವೊಮ್ಮೆ ಹಗಲು ವೇಳೆಯೇ ನಾಡಿಗೆ ಬಂದು ಕೃಷಿಗಳನ್ನು ತಿಂದು ಹಾಕುತ್ತಿದೆ. ಈ ವಿಚಾರವನ್ನು ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಹೇಳುತ್ತಲೇ ಇದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದರೆ ವ್ಯವಸ್ಥೆ ಮಾಡುವ ಎಂದು ತಲೆ ಆಡಿಸುತ್ತಲೇ ಕಾಲ ಕಳೆಯುತ್ತಿದ್ದಾರೆ. ಕಾಡು ಕೋಣಗಳು ನಾಡಿಗೆ ಬರದಂತೆ ತಡೆಗಟ್ಟುವುದು ಬಿಡಿ ಆ ಗ್ರಾಮಗಳಿಗೆ ತೆರಳಿ ಪರಿಶೀಲನೆ ಮಾಡಲು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಸಮಯ ಕೂಡಿ ಬರುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.


ಕಾಡುಕೋಣ ಕೊಂದು ತಿನ್ನುತ್ತಾರೆ

ರಾತ್ರಿ ವೇಳೆ ಕೆಲವೊಂದು ಆಯಕಟ್ಟಿನ ಸ್ಥಳಗಳಿಂದಲೇ ಕಾಡುಕೋಣಗಳು ಬರುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳುವ ಬೇಟೆಗಾರರು ರಾತ್ರಿ ವೇಳೆ ಅವುಗಳನ್ನು ಗುಂಡು ಹೊಡೆದು ಸಾಯಿಸುತ್ತಾರೆ. ಕಾಡು ಕೋಣಗಳ ಬರುತ್ತವೆ , ದಾಳಿ ಮಾಡುತ್ತದೆ ಎಂಬ ಕಾರಣಕ್ಕೆ ಸಂಜೆಯಾಗುತ್ತಲೇ ಗ್ರಾಮಸ್ಥರು ಮನೆ ಸೇರುವ ಕಾರಣ ಬೇಟೆಗಾರರಿಗೆ ಅವುಗಳನ್ನು ಹಿಡಿದು ಕೊಲ್ಲಲು ಸುಲಭವಾಗುತ್ತಿದೆ. ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಅವುಗಳನ್ನು ಕೊಲ್ಲುವ ಮತ್ತು ಆ ಬಳಿಕ ಮಾಂಸ ಮಾಡಿ ಕೇರಳಕ್ಕೆ ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ. ಈಗಾಗಲೇ ನೂರಾರು ಕಾಡುಕೋಣಗಳನ್ನು ಭೇಟೆಗಾರರು ಕೊಂದು ಮುಗಿಸಿದ್ದಾರೆ ಎಂಬ ಆತಂಕದ ಮಾಹಿತಿಯನ್ನು ಗ್ರಾಮಸ್ಥರು ಹೊರ ಹಾಕಿದ್ದಾರೆ. ಕಾಡುಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಬೇಟೆಗಾರರ ಜೊತೆ ಕೆಲವೊಂದು ಮೇಲಧಿಕಾರಿಗಳಿಗೆ ನಿಟಕ ಕೃಪಾಕಟಾಕ್ಷ ಇರುವುದರಿಂದ ಇದೊಂದು ವ್ಯವಹಾರಿಕ ದಂಧೆಯಾಗಿ ಪರಿಣಮಿಸಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಕಾಡುಕೋಣಗಳೇ ನಾಶವಾದರೂ ಅಚ್ಚರಿಯಿಲ್ಲ. ಈ ಪರಿಸ್ಥಿತಿ ತಲೆದೋರುವ ಮುನ್ನ ಜಿಲ್ಲಾಮಟ್ಟದ ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ತುರ್ತು ಕ್ರಮ: ಡಿಸಿಎಫ್

ಈ ವಿಚಾರದಲ್ಲಿ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಕಾಡುಕೋಣಗಳು ಸೇರಿದಂತೆ ಕಾಡುಪ್ರಾಣಿಗಳನ್ನು ಭೇಟೆಯಾಡುವುದು ಅಕ್ಷಮ್ಯ ಅಪರಾಧವಾಗಿದೆ. ಪಾಣಭಾಜೆ, ಜಾಲ್ಸೂರು ಹಾಗೂ ಕರ್ನೂರು ಗಡಿಗ್ರಾಮದಲ್ಲಿ ವಿಶೇಷ ತಪಾಸಣೆ ಮಾಡುವಂತೆ ಕ್ರಮಕೈಗೊಳ್ಳುತ್ತೇನೆ. ಸಾರ್ವಜನಿಕರು ಇಂಥಹ ಕೃತ್ಯಗಳು ಕಂಡು ಬಂದಲ್ಲ ನೇರವಾಗಿ ನನಗೆ ಕರೆ ಮಾಡಿ ತಿಳಿಸಬಹುದು.


ಆಂಟ್ಯನಿ ಮರಯಪ್ಪನ್, ಡಿಸಿಎಫ್ ಮಂಗಳೂರು

ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸುಮಾ

Posted by Vidyamaana on 2023-08-14 03:17:04 |

Share: | | | | |


ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸುಮಾ

ಬೆಳ್ತಂಗಡಿ: ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತಗಾಗಿ ಮೃತಪಟ್ಟ ಘಟನೆ ಆ 13 ರಂದು  ನಡೆದಿದೆ.


ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿ  ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತಪಟ್ಟ ಯುವತಿಯಾಗಿದ್ದಾಳೆ.


ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ವಿದ್ಯಾರ್ಥಿನಿ ಸುಮ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ ಆಗಸ್ಟ್11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ಗುಣಮುಖವಾಗಿರುವ ಕಾರಣ ತನ್ನ ಅಕ್ಕನ ಮನೆ ಬಳ್ಳಮಂಜಕ್ಕೆ ತೆರಳಿದ್ದು. ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಲೋ ಬಿಪಿ ಉಂಟಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಪ್ರಾಣಿ ಸಾಕಾಣೆದಾರರಿಗೆ ಗುಡ್ ನ್ಯೂಸ್ – ತಾಲೂಕಿಗೆ ಬಂತು ಪಶು ಸಂಜೀವಿನಿ ಆಂಬುಲೆನ್ಸ್

Posted by Vidyamaana on 2023-08-06 15:16:43 |

Share: | | | | |


ಪ್ರಾಣಿ ಸಾಕಾಣೆದಾರರಿಗೆ ಗುಡ್ ನ್ಯೂಸ್ – ತಾಲೂಕಿಗೆ ಬಂತು ಪಶು ಸಂಜೀವಿನಿ ಆಂಬುಲೆನ್ಸ್

ಪುತ್ತೂರು: ಪಶುಗಳಿಗೆ ಸೇರಿದಂತೆ ಯಾವುದೇ ಪ್ರಾಣಿಗಳಿಗೆ ತೊಂದರೆಯಾದಲ್ಲಿ ವೈದ್ಯರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿ ಮೂಕಪ್ರಾಣಿಗಳನ್ನು ಸಲಹುವ ವ್ಯವಸ್ಥೆಗೆ ರಾಜ್ಯದ ಕಾಂಗ್ರೆಸ್ ಸರಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 10 ಪಶು ಸಂಜೀವಿನಿ ಆಂಬುಲೆನ್ಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಇದರಿಂದ ಪಶು ಸಾಕಾಣಿಕೆದಾರರಿಗೆ ಪ್ರಯೋಜನವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಪುತ್ತೂರಿಗೆ ಆಗಮಿಸಿದ ಅಂಬುಲೆನ್ಸ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ‘ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಏಕೈಕ ಉದ್ದೇಶದಿಂದ ಈ ವ್ಯವಸ್ಥೆಯನ್ನು ಸರಕಾರ ಜಾರಿಗೆ ತಂದಿದೆ. ಪ್ರಾಣಿಗಳಿಗೆ ಅನಾರೋಗ್ಯ ಕಂಡುಬಂದಲ್ಲಿ ಟೋಲ್ ಫ್ರೀ ನಂಬರಿಗೆ ಕರೆ ಮಾಡಿದರೆ ಸ್ಥಳಕ್ಕೆ ಬಂದು ನಿಮ್ಮ ಪ್ರಾಣಿಗಳನ್ನು ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತದೆ ಬಳಿಕ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಒಪ್ಪಿಸಲಾಗುತ್ತದೆ.


ಮನುಷ್ಯರ ಹಾಗೇ ಪ್ರಾಣಿಗಳು ಎಂಬ ಭಾವನೆ ನಮ್ಮಲ್ಲಿರಬೇಕು, ಪ್ರಾಣಿಗಳಿಗೆ ಅನಾರೋಗ್ಯ ಕಂಡು ಬಂದಲ್ಲಿ ಅವುಗಳಿಗೆ ಎಲ್ಲಾ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಉದ್ಯಮಿಗಳಾದ ರಿತೇಶ್ ಶೆಟ್ಟಿ, ನಗರ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಖಿಲ್ ಸಾಮೆತ್ತಡ್ಕ, ಉದ್ಯಮಿ ನಿಹಾಲ್ ಶೆಟ್ಟಿ, ಪ್ರಗತಿಪರ ಕೃಷಿಕರಾದ ರಾಕೇಶ್ ಬಡಗನ್ನೂರು, ಅಶ್ವಿನ್ ಬಡಗನ್ನೂರು ಮತ್ತಿತರರು ಉಪಸ್ತಿತರಿದ್ದರು.

ಕಾಪು : ಪಿಲಿ ಕೋಲ ಸಂಪನ್ನ ಓರ್ವನನ್ನು ಸ್ಪರ್ಶಿಸಿದ ಪಿಲಿ!

Posted by Vidyamaana on 2024-05-05 17:20:58 |

Share: | | | | |


ಕಾಪು : ಪಿಲಿ ಕೋಲ ಸಂಪನ್ನ ಓರ್ವನನ್ನು ಸ್ಪರ್ಶಿಸಿದ ಪಿಲಿ!

ಕಾಪು: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿರುವ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ-ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ ಮೇ 4ರಂದು ಸಂಪನ್ನಗೊಂಡಿತು.2 ಗಂಟೆಯ ಬಣ್ಣಗಾರಿಕೆಯ ಬಳಿಕ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬಂದ ಹುಲಿಚಂಡಿ ದೈವವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಮುಂದೆ ಗ್ರಾಮ ಭೇಟಿಗೆ ತೆರಳುವುದು ಸಂಪ್ರದಾಯವಾಗಿದೆ.

ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಅರುಣ್ ಪುತ್ತಿಲ ಕಿಡಿ

Posted by Vidyamaana on 2023-05-02 07:51:47 |

Share: | | | | |


ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಅರುಣ್ ಪುತ್ತಿಲ ಕಿಡಿ

ಪುತ್ತೂರು : ಚುನಾವಣೆಯ ಹೊಸ್ತಿಲಿನಲ್ಲಿಯೇ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪ್ರಣಾಳಿಕೆ ಕೆಲವು ವಿಚಾರವು ಕಿಚ್ಚು ಹಚ್ಚಿದೆ.

ಈ ಬಗ್ಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಪ್ರತಿಕ್ರಿಯಿಸಿದ್ದು, ‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳದ ನಿಷೇಧದ ಉಲ್ಲೇಖ ನನ್ನ ಗಮನಕ್ಕೆ ಬಂದಿದೆ.., ಹಿಂದೂ ಸಮಾಜದ ಮೇಲೆ ಕಾಂಗ್ರೆಸ್ ನ ಇಂತಹ ಷಡ್ಯಂತ್ರಗಳು ನಡೆಯಲು ಬಿಡುವುದಿಲ್ಲ. ಧರ್ಮ ವಿರೋಧದ ಯೋಚನೆಯನ್ನು ನಾವು ವಿರೋಧಿಸಬೇಕಾಗಿದೆ. ಇಂತಹ ಯೋಚನೆಗಳಿಂದ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದಿದ್ದಾರೆ.

ಭಜರಂಗದಳವನ್ನು ನಿಷೇಧ ಮಾಡಬೇಕು ಎಂಬ ಯೋಚನೆಯಡಿಯಲ್ಲಿ ಪ್ರಣಾಳಿಕೆ ಸೇರಿಸುವಂತ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಇದನ್ನು ನಾವು ಖಂಡಿಸುತ್ತೇವೆ.

ಪ್ರಣಾಳಿಕೆಯಿಂದ ಈ ವಿಚಾರವನ್ನು ಕೈ ಬಿಡದೆ ಇದ್ರೆ ಕಾಂಗ್ರೆಸ್ ಸರ್ವನಾಶವಾಗುವುದು ಖಂಡಿತ. ನಿಷೇಧ ಮಾಡುವುದು ಬಿಡಿ.., ಒಬ್ಬ ಹಿಂದೂ ಕಾರ್ಯಕರ್ತನನ್ನು ಮುಟ್ಟುವಂತಹ ಪ್ರಯತ್ನವನ್ನು ಮಾಡಿದ್ರೇ ನಾವು ಇದಕ್ಕೆ ಉತ್ತರವನ್ನು ಕೊಡುತ್ತೇವೆ ಎಂದು ಅವರು ಗುಡುಗಿದ್ದಾರೆ..

ತನ್ನ ಕಾರು ಚಾಲಕನಿಗೆ ದೀಪಾವಳಿಯ ಬಂಪರ್ ಉಡುಗೋರೆ ಕೊಟ್ಟ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ

Posted by Vidyamaana on 2023-11-16 14:16:22 |

Share: | | | | |


ತನ್ನ ಕಾರು ಚಾಲಕನಿಗೆ ದೀಪಾವಳಿಯ ಬಂಪರ್ ಉಡುಗೋರೆ ಕೊಟ್ಟ  ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರು ತನ್ನ ಕಾರು ಚಾಲಕನಿಗೆ ದೀಪಾವಳಿ ಪ್ರಯುಕ್ತ ಸುಮಾರು ೧,೩೦೦೦೦ ರೂ ಮೌಲ್ಯದ ಟಿವಿಎಸ್ ರೈಡರ್ ಬೈಕನ್ನು ಉಡುಗೋರೆಯಾಗಿ ನೀಡಿದ್ದಾರೆ.


ಕಳೆದ ಹತ್ತು ವರ್ಷಗಳಿಂದ ಹೇಮನಾಥ ಶೆಟ್ಟಿಯವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿರುವ ಪಾಣಾಜೆ ನಿವಾಸಿ ದಿನೇಶ್ ಉಡುಗೋರೆ ಪಡೆದುಕೊಂಡ ಚಾಲಕ.


ದೀಪಾವಳಿ ಸಂದರ್ಭದಲ್ಲಿ ತಮ್ಮ ಸಿಬಂದಿಗಳಿಗೆ ಬೋನಸ್, ಸಿಹಿತಿಂಡಿ ಅಥವಾ ಊಟೋಪಚಾರಗಳನ್ನು ನೀಡುವುದು ಸಾಮಾನ್ಯವಾಗಿದೆ. ಆದರೆ ಪ್ರಾಮಾಣಿಕವಾಗಿ ಚಾಲನಾ ಕೆಲಸ ಮಾಡುತ್ತಿರುವ ದಿನೇಶ್ ತನ್ನ ಮಾಲಕರಿಂದ ಭಾರೀ ಮೊತ್ತದ ಬೈಕನ್ನು ಉಡುಗೋರೆಯಾಗಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೇಮನಾಥ ಶೆಟ್ಟಿಯವರನ್ನು ಕೇಳಿದರೆ ದೀಪಾವಳಿ ಪ್ರಯುಕ್ತ ಸಣ್ಣ ಗಿಫ್ಟ್ ನೀಡಿದ್ದೇನೆ ಎಂದಷ್ಟೇ ಹೇಳಿದರು.

ನಾನು ಕಳೆದ ಹತ್ತು ವರ್ಷಗಳಿಂದ ಹೇಮನಾಥ ಶೆಟ್ಟಿಯವರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಅವರ ಕುಟುಂಬದ ಎಲ್ಲರೂ ನನ್ನನ್ನು ಅವರ ಕುಟುಂಬದ ಸದಸ್ಯನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಕಷ್ಟದ ಸಮಯದಲ್ಲಿ ನೆರವಾಗುತ್ತರೆ. ನನಗೆ ಮನೆ ಕಟ್ಟಲು ನೆರವಾಗಿದ್ದಾರೆ. ಈ ಬಾರಿ ಬೈಕನ್ನು ಉಡುಗೋರೆಯಾಗಿ ನೀಡಿದ್ದಾರೆ. ಇದು ನನ್ನ ಜೀವನದಲ್ಲಿ ಮರೆಯಲಾರದ ದಿನವಾಗಿದೆ

ದಿನೇಶ್ ಪಾಣಾಜೆ, ಕಾರು ಚಾಲಕ



Leave a Comment: