ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಮೈಮೇಲಿನ ಅರಶಿನ ಮಾಗುವ ಮುನ್ನವೇ ಮಸಣ ಸೇರಿದಾಕೆಯ ಮನಕಲಕುವ ಕಥೆ

Posted by Vidyamaana on 2023-04-24 11:03:16 |

Share: | | | | |


ಮೈಮೇಲಿನ ಅರಶಿನ ಮಾಗುವ ಮುನ್ನವೇ ಮಸಣ ಸೇರಿದಾಕೆಯ ಮನಕಲಕುವ ಕಥೆ

ಬೆಳ್ತಂಗಡಿ: 15 ವರ್ಷ ಮನಸಾರೆ ಪ್ರೀತಿ ಮಾಡಿ, ಕೊನೆಗೆ ಆ ಪ್ರೀತಿ ಕಣ್ಣೆದುರೇ ಮಣ್ಣಾದಾಗ ಆ ಹೆಣ್ಣು ಮಗಳಾದರೂ ಏನು ಮಾಡಿಯಾಳು? ಹಾಗಾಗಿ ಮೈಮೇಲಿನ ಅರಶಿನ ಮಾಗುವ ಮುನ್ನವೇ ಆತ್ಮಹತ್ಯೆಯ ಹಾದಿ ಹಿಡಿದಿದ್ದಾಳೆ ಎನ್ನುವುದು ಇದೀಗ ಬಹಿರಂಗವಾಗಿದೆ.

ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯದ ಸಹ ಅಧ್ಯಕ್ಷರಾಗಿ ಶಕುಂತಳಾ ಶೆಟ್ಟಿ, ಸಂಯೋಜಕರಾಗಿ ಚಂದ್ರಹಾಸ ಶೆಟ್ಟಿ ನೇಮಕ

Posted by Vidyamaana on 2024-04-19 07:17:43 |

Share: | | | | |


ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯದ ಸಹ ಅಧ್ಯಕ್ಷರಾಗಿ ಶಕುಂತಳಾ ಶೆಟ್ಟಿ, ಸಂಯೋಜಕರಾಗಿ ಚಂದ್ರಹಾಸ ಶೆಟ್ಟಿ ನೇಮಕ

ಪುತ್ತೂರು : ಮುಂದಿನ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯದ ಸಹ ಅಧ್ಯಕ್ಷರಾಗಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹಾಗೂ ಸಂಯೋಜಕರಾಗಿ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ರವರನ್ನು ನೇಮಕ ಮಾಡಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆದೇಶ ಹೊರಡಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಶಕ್ತಿಯನ್ನು ಹೆಚ್ಚಿಸಲು ನೂತನ ಪದಾಧಿಕಾರಿಗಳಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ

ಬಕ್ರೀದ್ ಹಬ್ಬದ ಪ್ರಯುಕ್ತ ಸಿಟಿ ಗೋಲ್ಡ್ ಸಮೂಹ ಸಂಸ್ಥೆಗೆ ರಜೆ

Posted by Vidyamaana on 2023-06-28 11:51:14 |

Share: | | | | |


ಬಕ್ರೀದ್ ಹಬ್ಬದ ಪ್ರಯುಕ್ತ ಸಿಟಿ ಗೋಲ್ಡ್  ಸಮೂಹ ಸಂಸ್ಥೆಗೆ ರಜೆ

ಪುತ್ತೂರು: ಚಿನ್ನಾಭರಣ ಮಳೆಗೆಯಾದ ಸಿಟಿ ಗೋಲ್ಡ್ ಡೈಮಂಡ್ ಸಂಸ್ಥೆಗೆ ಬಕ್ರೀದ್ ಹಬ್ಬದ ಪ್ರಯುಕ್ತ ಗುರುವಾರ (ಜೂನ್ 29)ದಂದು ರಜೆ ಘೋಷಿಸಲಾಗಿದೆ.

ಕಾಸರಗೋಡು, ಮಂಗಳೂರು, ಪುತ್ತೂರು, ಉಪ್ಪಳದಲ್ಲಿ ಸಂಸ್ಥೆಯ ಶಾಖೆಯ ಜೊತೆಗೆ ಸಿಟಿ ಕಿಡ್ಸ್ ಶೋರೂಂಗೂ ರಜೆ ನೀಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮಹಿಳೆಯಿಂದ 3೦ ಸಾವಿರ ಲಂಚ ಪಡೆದ ಉಗ್ರಾಣಿ

Posted by Vidyamaana on 2023-09-06 18:39:08 |

Share: | | | | |


ಮಹಿಳೆಯಿಂದ 3೦ ಸಾವಿರ ಲಂಚ ಪಡೆದ ಉಗ್ರಾಣಿ

ಪುತ್ತೂರು: ಅಕ್ರಮಸಕ್ರಮ ಕಡತ ವಿಲೇವಾರಿ ಮಾಡುವುದಾಗಿ ಹೇಳಿ ಮಹಿಳೆಯಿಂದ ಪಡೆದ ಲಂಚದ ಹಣವನ್ನು ಹಿಂತಿರುಗಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಗ್ರಾಮವೊಂದರ ಉಗ್ರಾಣಿಗೆಗೆ ಸೂಚನೆಯನ್ನು ನೀಡಿದ್ದಾರೆ.

ಕುಂಡಡ್ಕ ದಲ್ಲಿ ಶ್ರೀ ಕೃಷ್ಣಾಅಷ್ಟಮಿ ಕಾರ್ಯಕ್ರಮಕ್ಕೆ ತೆರಳಿದ ಶಾಸಕರ ಬಳಿ ಬಂದ ಚಂದ್ರಾವತಿ ಎಂಬ ಮಹಿಳೆ ನಾನು ಶಕುಂತಳಾ ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದ್ದೆ. ನನ್ನ ಮನೆ ಸರಕಾರಿ ಜಾಗದಲ್ಲಿದೆ. ನನ್ನ ಮನೆ ಇರುವ ಜಾಗವನ್ನು ಸಕ್ರಮ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದೇನೆ. ಸಲ್ಲಿಸಿದ ಅರ್ಜಿಯ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ . ನಾನು ಅರ್ಜಿ ಕೊಟ್ಟಾಗ ನನ್ನಿಂದ ನನ್ನ ಗ್ರಾಮದ ಉಗ್ರಾಣಿ ಒಟ್ಟು ೩೦ ಸಾವಿರ ಹಣವನ್ನು ಲಂಚವಾಗಿ ಪಡೆದುಕೊಂಡಿದ್ದಾರೆ. ಏಳು ವರ್ಷ ಕಳೆದರೂ ನನಗೆ ಅಕ್ರಮ ಸಕ್ರಮದಲ್ಲಿ ಜಾಗ ರೆಕಾರ್ಡ್ ಆಗಲಿಲ್ಲ, ನಾನು ಬಡವೆ, ನನ್ನಲ್ಲಿ ಏನೂ ಇಲ್ಲ, ನಾನು ಬೀಡಿಕಟ್ಟಿ ಜೀವನ ಮಾಡುವುದು,  ಆದರೂ ನನ್ನಿಂದ ಹಣಪಡೆದುಕೊಂಡಿದ್ದಾರೆ. ಹಣ ಕೊಟ್ಟರೂ ಕೆಲಸ ಮಾಡಿಲ್ಲ ನನಗೆ ನ್ಯಾಯ ಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ. ಕೂಡಲೇ ಹಣ ಪಡೆದುಕೊಂಡ ಉಗ್ರಾಣಿಗೆ ಕರೆ ಮಾಡಿದ ಶಾಸಕರು ಬಡ ಮಹಿಳೆಯಿಂದ ಲಂಚವಾಗಿ ಪಡೆದುಕೊಂಡ ೩೦ ಸಾವಿರ ಹಣವನ್ನು ವಾರದೊಳಗೆ ಮಹಿಳೆಗೆ ಪಾವತಿಸಿಬೇಕು ಇಲ್ಲವಾದರೆ ಕೆಲಸದಿಂದ ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಗೆ ಸಾಂತ್ವನ ಹೇಳಿದ ಶಾಸಕರು ನಿಮ್ಮ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚನೆ ಕೊಡುತ್ತೇನೆ. ಅಕ್ರಮ ಸಕ್ರಮ ಸಮಿತಿಯಾದ ತಕ್ಷಣವೇ ನಿಮ್ಮ ಜಾಗ ನಿಮಗೆ ರೆಕಾರ್ಡ್ ಆಗಲಿದೆ ಎಂದು ಹೇಳಿದಾಗ ಮಹಿಳೆ ಶಾಸಕರಿಗೆ ನಮಸ್ಕರಿಸಿದರು.

ಬಜ್ಪೆ :ಯುವಕನಿಗೆ ಚೂರಿ ಇರಿತ ಪ್ರಕರಣ

Posted by Vidyamaana on 2023-09-04 06:48:12 |

Share: | | | | |


ಬಜ್ಪೆ :ಯುವಕನಿಗೆ ಚೂರಿ ಇರಿತ ಪ್ರಕರಣ

ಮಂಗಳೂರು: ಯುವಕನಿಗೆ ಚೂರಿ ಇರಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಸುರತ್ಕಲ್ ಪೊಲೀಸರು ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 


ಸುರತ್ಕಲ್ ಠಾಣೆ ವ್ಯಾಪ್ತಿಯ ಕಳವಾರಿನಲ್ಲಿ ನಿನ್ನೆ ರಾತ್ರಿ ಶಾಂತಿಗುಡ್ಡೆ ನಿವಾಸಿ ಅಬ್ದುಲ್  ಸಫ್ವಾನ್‌ (23) ಎಂಬಾತನಿಗೆ ಚೂರಿ ಇರಿತ ಆಗಿತ್ತು. ಪ್ರಕರಣ ಸಂಬಂಧಿಸಿ ಕಳವಾರು ನಿವಾಸಿಗಳಾದ ಪ್ರಶಾಂತ್ (28), ಧನರಾಜ್ (23) ಮತ್ತು ಯಜ್ಞೆಶ್ (22) ಎಂಬವರನ್ನು ಬಂಧಿಸಲಾಗಿದೆ. 

ಆಗಸ್ಟ್ 31ರಂದು ನಡೆದ ಗಲಾಟೆ ಬಗ್ಗೆ ಮಾತುಕತೆಗೆಂದು ಇಬ್ಬರನ್ನು ಕರೆದಿದ್ದು ಅಬ್ದುಲ್ ಸಫ್ವಾನ್ ಮತ್ತು ಮೊಹಮ್ಮದ್ ಸಫ್ವಾನ್ ಬೈಕಿನಲ್ಲಿ ಬರುತ್ತಿದ್ದಾಗಲೇ ಎರಡು ಬೈಕ್ ಗಳಲ್ಲಿ ಬಂದಿದ್ದ ಐದಾರು ಮಂದಿ ತಡೆದು ಹಲ್ಲೆ ನಡೆಸಿದ್ದರು‌‌. ಅಬ್ದುಲ್ ಸಫ್ವಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಬಳಿಕ ಸ್ಥಳದಲ್ಲಿ ಜನ ಸೇರುತ್ತಿದ್ದಾಗ ಆರೋಪಿಗಳು ಪರಾರಿಯಾಗಿದ್ದರು. ಸಫ್ವಾನ್‌ ಅವರ ಕೈ , ತೋಳು ಹಾಗೂ ಬೆನ್ನಿಗೆ ಚೂರಿಯಿಂದ ಇರಿದ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ. 


ಸ್ಥಳಕ್ಕೆ ತೆರಳಿ ತನಿಖೆ‌ ನಡೆಸಿದ್ದ  ಸುರತ್ಕಲ್ ಠಾಣೆ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿದ್ದಾರೆ. ‌ಹಲವರನ್ನು ವಶಕ್ಕೆ ಪಡೆದಿದ್ದು ಮೂವರನ್ನು ಬಂಧಿಸಿದ್ದಾಗಿ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪುನೀತ್, ಬಬ್ಬು ಗಣೇಶ್ ಸೇರಿದಂತೆ ಹಲವರ ವಿರುದ್ಧ ಕೊಲೆಯತ್ನ, ಜೀವ ಬೆದರಿಕೆ ಬಗ್ಗೆ ಪ್ರಕರಣ ದಾಖಲಾಗಿದೆ.

ರಾಜ್ಯ ಸರ್ಕಾರದಿಂದ ಅರ್ಚಕರು ನೌಕರರಿಗೆ ಗುಡ್ ನ್ಯೂಸ್

Posted by Vidyamaana on 2023-10-15 10:39:08 |

Share: | | | | |


ರಾಜ್ಯ ಸರ್ಕಾರದಿಂದ ಅರ್ಚಕರು ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದು, ಬಿ ಮತ್ತು ಸಿ ವರ್ಗದ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರ ಅರ್ಚಕರು ಮತ್ತು ಸಿಬ್ಬಂದಿಯ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.ಸರ್ಕಾರವು ಪಿಯುಸಿ ವಿದ್ಯಾರ್ಥಿಗಳಿಗೆ 5,000 ರೂ., ಐಟಿಐ/ ಜೆಒಸಿ/ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 5,000 ರೂ., ಪದವಿಗೆ 7,000 ರೂ., ಸ್ನಾತಕೋತ್ತರರಿಗೆ 15,000 ರೂ., ಆಯುರ್ವೇದ 25,000 ರೂ. ವಾರ್ಷಿಕ ಆರ್ಥಿಕ ನೆರವು ನೀಡಲಿದೆ. ಹೋಮಿಯೋಪತಿ ಕೋರ್ಸ್‌ಗಳು, ತಾಂತ್ರಿಕ ಶಿಕ್ಷಣಕ್ಕೆ (ಎಂಜಿನಿಯರಿಂಗ್) 25,000 ರೂ., ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ 50,000 ರೂ. ಮತ್ತು ವಿದೇಶದಲ್ಲಿ ಅಧ್ಯಯನಕ್ಕೆ 1 ಲಕ್ಷ ರೂ. ನೆರವು ಸಿಗಲಿದೆ ಎಂದು ಹೇಳಿದ್ದಾರೆ.


ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ನೌಕರರ ಪೈಕಿ ವರ್ಷಕ್ಕೆ 1,200 ಮಂದಿಯನ್ನು ಕಾಶಿ, ಗಯಾ ಯಾತ್ರೆಗೆ ಉಚಿತವಾಗಿ ಕಳುಹಿಸಲಾಗುವುದು. ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ನೌಕರರು ಮೃತರಾದರೆ ಅವರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.



Leave a Comment: