ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಸುದ್ದಿಗಳು News

Posted by vidyamaana on 2024-07-25 16:34:52 |

Share: | | | | |


ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ

ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.

Additional Image


ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.


ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 Share: | | | | |


ಉಪ್ಪಿನಂಗಡಿ ಬಿ ಆರ್ ಅಂಬೇಡ್ಕರ್ ವಸತಿ‌ ಶಾಲೆಯಲ್ಲಿ ವಾರ್ಷಿಕೋತ್ಸವ

Posted by Vidyamaana on 2024-01-01 13:35:14 |

Share: | | | | |


ಉಪ್ಪಿನಂಗಡಿ ಬಿ ಆರ್ ಅಂಬೇಡ್ಕರ್ ವಸತಿ‌ ಶಾಲೆಯಲ್ಲಿ ವಾರ್ಷಿಕೋತ್ಸವ

ಪುತ್ತೂರು: ನಗರದ ಹೊರವಲಯದ‌ಪಡ್ಡಾಯೂರಿನಲ್ಲಿರುವ ಅಂಬೇಡ್ಕರ್ ವಸತಿ‌ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವಲ್ಲಿ ಪ್ರಯತ್ನ ಮಾಡುತ್ತೇನೆ ಮತ್ತು ತಾಲೂಕಿನಲ್ಲಿ ಬಾಡಿಗೆ ಕಟ್ಟಡದಲ್ಲಿರುವ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪಡ್ಡಾಯೀರಿನಲ್ಲಿರುವ ಉಪ್ಪಿನಂಗಡಿ ಅಂಬೇಡ್ಕರ್ ವಸತಿ‌ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಸತಿ‌ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇಲ್ಲಿನ ಶಿಕ್ಷಣ‌ಮತ್ತು ಇತರೆ  ಸೌಲಭ್ಯಗಳು ಚೆನ್ನಾಗಿರುವ ಬಗ್ಗೆ ಪೋಷಕರು ತಿಳಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕರು ಹೇಳಿದರು.ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಶಿಕ್ಷಣವನ್ನು‌ನೀಡಬೇಕಿದೆ ಎಂದು ಹೇಳಿದರು.


ವೇದಿಕೆಯಲ್ಲಿಶಿಕ್ಷಕ‌ರಕ್ಷಕ‌ಸಮಿತಿ ಅಧ್ಯಕ್ಷ ರವೀಂದ್ರ ರೈ,  ಸಮಾಜ ಕಲ್ಯಾಣ ಇಲಾಖೆ ಮೆನಜರ್ ಕೃಷ್ಣ ಕುಮಾರ್,  ಶಾಲಾ ಪ್ರಾಂಶುಪಾಲರಾದ ಸತೀಶ್ ಟಿ , ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದಮುರಳೀದರ್ ಜಿ,ಪುಂಜಾಲಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಕುಮಾರ್,ಎಸ್ ಜಿ ಎಂ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀನಿವಾಸ,ಮೊರಾರ್ಜಿ ದೇಸಾಯಿ ವಸತಿ ಶಾಲೆ ಪುತ್ತೂರು ಪ್ರಾಂಶುಪಾಲರಾದ ಅರುಣ್ ಕುಮಾರ್, ಸಿಆರ್ ಪಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಣಕಿ ವಾಣಿ ಸ್ವಾಗತಿಸಿದರು.

ಸೂರಿಕುಮೇರು : ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದ ಬಾಳೆಹಣ್ಣು ಸಾಗಾಟದ ಪಿಕಪ್

Posted by Vidyamaana on 2023-10-04 09:41:44 |

Share: | | | | |


ಸೂರಿಕುಮೇರು : ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದ ಬಾಳೆಹಣ್ಣು ಸಾಗಾಟದ ಪಿಕಪ್

ವಿಟ್ಲ : ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ  ಸೂರಿಕುಮೇರಿನಲ್ಲಿ ಪಿಕಪ್ ವಾಹನವೊಂದು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯ ಮೇಲೆ ನಿಂತ ಘಟನೆ  ಅ 03 ರಂದು ಬುಧವಾರ ಮುಂಜಾನೆ ನಡೆದಿದೆ.


    ಸೂರಿಕುಮೇರ್ ಬದ್ರಿಯಾ ಜುಮಾ ಮಸೀದಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಹೊಸ ರಸ್ತೆಯಲ್ಲಿ ತಮಿಳುನಾಡು ನೋಂದಾಯಿತ ಬಾಳೆಹಣ್ಣು ಸಾಗಾಟದ ಪಿಕಪ್ ವಾಹನವು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯೊಳಗೆ ನಿಂತಿದೆ, ನಿದ್ದೆಯ ಮಂಪರಿನಲ್ಲಿ ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.

ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬ ದುರಂತ ಅಂತ್ಯ: 41 ಕೋಟಿ ರೂ.ಬಂಗಲೆಯಲ್ಲಿ ಮೂವರ ಶವ ಪತ್ತೆ!

Posted by Vidyamaana on 2023-12-30 22:25:45 |

Share: | | | | |


ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬ ದುರಂತ ಅಂತ್ಯ: 41 ಕೋಟಿ ರೂ.ಬಂಗಲೆಯಲ್ಲಿ ಮೂವರ ಶವ ಪತ್ತೆ!

ವಾಷಿಂಗ್ಟನ್​: ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಮ್ಯಾಸಚೂಸೆಟ್ಸ್‌ನ ಡೋವರ್‌ನಲ್ಲಿರುವ ಅವರ ಬಂಗಲೆಯಲ್ಲಿ ದಂಪತಿ ಮತ್ತು 18 ವರ್ಷದ ಯುವತಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ರಾಕೇಶ್ ಕಮಲ್ (57), ಟೀನಾ (54) ಮತ್ತು ಅವರ ಪುತ್ರಿ ಅರಿಯಾನಾ (18) ಎಂದು ಗುರುತಿಸಲಾಗಿದೆ. ರಾಕೇಶ್ ಮೃತದೇಹದ ಬಳಿ ಬಂದೂಕು ಪತ್ತೆಯಾಗಿದ್ದು, ಅವರ ಸಾವಿನ ಹಿಂದೆ ಹಲವು ಅನುಮಾನಗಳಿವೆ.ರಾಕೇಶ್ ಕಮಲ್ ದಂಪತಿ ಅಮೆರಿಕದಲ್ಲಿ ಶ್ರೀಮಂತ ಕುಟುಂಬ. ಕಮಲ್ ತಮ್ಮ ಶಿಕ್ಷಣವನ್ನು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಬೋಸ್ಟನ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪೂರ್ಣಗೊಳಿಸಿದರು. ಟೀನಾ ತನ್ನ ಶಿಕ್ಷಣವನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಇಬ್ಬರಿಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿದ್ದ ಕಾರಣ 2016ರಲ್ಲಿ ಎಡುನೋವಾ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದರು.


ಆದರೆ ಹಣಕಾಸಿನ ತೊಂದರೆಗಳಿಂದಾಗಿ ಇದು 2021 ರಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು. ಕಳೆದ ವರ್ಷ ಸೆಪ್ಟೆಂಬರ್ 22ರಂದು ಶಿಕ್ಷಣ ಸಂಸ್ಥೆಯ ದಿವಾಳಿತನದ ಅರ್ಜಿಯನ್ನೂ ಸಲ್ಲಿಸಲಾಗಿದೆಯಂತೆ. ಇದರ ನಡುವೆ ಕಮಲ್ ದಂಪತಿ 2019 ರಲ್ಲಿ ಪ್ರತಿಷ್ಠಿತರು ವಾಸಿಸುವ ಮ್ಯಾಸಚೂಸೆಟ್ಸ್‌ನಲ್ಲಿ 4 ಮಿಲಿಯನ್ ಡಾಲರ್ ಕೊಟ್ಟು ಬೃಹತ್​ ಬಂಗಲೆ ಖರೀದಿಸಿದ್ದರು. 19 ಸಾವಿರ ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಕಟ್ಟಡದಲ್ಲಿ 11 ಮಲಗುವ ಕೋಣೆಗಳಿದ್ದವು. ಈಗ ಆ ಕಟ್ಟಡದ ಮೌಲ್ಯ 5 ಮಿಲಿಯನ್ ಡಾಲರ್ (ರೂ. 41.26 ಕೋಟಿ). ಸದ್ಯ ಈ ಬಂಗಲೆಯಲ್ಲೇ ಕಮಲ್ ದಂಪತಿ ವಾಸವಿದ್ದರು.ಎರಡು ದಿನವಾದರೂ ಕಮಲ್ ದಂಪತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅವರ ಸಂಬಂಧಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಕಟ್ಟಡಕ್ಕೆ ತೆರಳಿ ಪರಿಶೀಲಿಸಿದಾಗ ಮೂರು ಶವಗಳು ಪತ್ತೆಯಾಗಿವೆ. ಘಟನೆ ವೇಳೆ ಯಾರೂ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಅವರ ಸಾವಿಗೆ ಕೌಟುಂಬಿಕ ಕಲಹಗಳೇ? ಹಣಕಾಸಿನ ತೊಂದರೆಗಳು ಕಾರಣವೇ? ಅಥವಾ ಹೊರಗಿನವರಿಗೆ ಸಂಬಂಧವಿದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ; ರೊಚ್ಚಿಗೆದ್ದ ಆಟಗಾರರಿಂದ ಮೈದಾನದಲ್ಲೇ ಫೈಟಿಂಗ್

Posted by Vidyamaana on 2023-02-22 04:33:01 |

Share: | | | | |


ಬೆಳ್ತಂಗಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ; ರೊಚ್ಚಿಗೆದ್ದ ಆಟಗಾರರಿಂದ ಮೈದಾನದಲ್ಲೇ ಫೈಟಿಂಗ್

ಬೆಳ್ತಂಗಡಿ: ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನಗೊಂಡ ಆಟಗಾರರು ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ ಮುಂಡಾಜೆಯಲ್ಲಿ ನಡೆದಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಅಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಆಟಗಾರರ ಮಧ್ಯೆ ಗಲಾಟೆ ನಡೆದಿದ್ದು, ಸದ್ಯ ಹೊಡೆದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಆಡೂರು ಮೈದಾನದಲ್ಲಿ ಫೆ. 19ರಂದು . ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಕಬಡ್ಡಿ ವಂದ್ಯಾವಳಿ ಆಯೋಜಿಸಿದ್ದರು. ಇದರಲ್ಲಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಹಾಗೂ ಆಟಗಾರರ ಮಧ್ಯೆ ನಡೆದ ಹೊಡೆದಾಟವಾಗಿದೆ.

ಹೊಸ ಕಾರು ಖರೀದಿಸಿದ ಪ್ರಿಯಾಮಣಿ, ಬೆಲೆ ಎಷ್ಟು ಗೊತ್ತೆ

Posted by Vidyamaana on 2024-02-25 08:33:25 |

Share: | | | | |


ಹೊಸ ಕಾರು ಖರೀದಿಸಿದ ಪ್ರಿಯಾಮಣಿ, ಬೆಲೆ ಎಷ್ಟು ಗೊತ್ತೆ


ಕರ್ನಾಟಕ ಮೂಲದ ನಟಿ ಪ್ರಿಯಾಮಣಿ ಇತ್ತೀಚೆಗಷ್ಟೆ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ

ಕನ್ನಡತಿ ನಟಿ ಪ್ರಿಯಾಮಣಿ, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರತಿಭಾವಂತ ನಟಿ ಈಗಲೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.ಬರೋಬ್ಬರಿ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ನಟನೆಯಲ್ಲಿ ತೊಡಗಿಸಿಕೊಂಡಿರುವ ಪ್ರಿಯಾಮಣಿ, ಈಗಲೂ ಸಾಲು-ಸಾಲು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.ಇತ್ತೀಚೆಗಷ್ಟೆ ಪ್ರಿಯಾಮಣಿ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಮರ್ಸಿಡೀಸ್ ಬೆಂಜ್ ನ ಜಿಎಲ್​ಸಿ ಕಾರನ್ನು ಪ್ರಿಯಾಮಣಿ ಖರೀದಿ ಮಾಡಿದ್ದಾರೆ.

ತಮ್ಮ ಪತಿ ಮುಸ್ತಾಫಾ ರಾಜಾ, ಅತ್ತೆಯೊಟ್ಟಿಗೆ ಮರ್ಸಿಡೀಜ್ ಬೆಂಜ್ ಶೋರೂಂಗೆ ಬಂದು ಮೆಚ್ಚಿನ ಕಾರನ್ನು ಖರೀದಿ ಮಾಡಿದ್ದಾರೆ ಪ್ರಿಯಾಮಣಿಅರಿಶಿಣ-ಕುಂಕುಮವಿಟ್ಟು, ತೆಂಗಿನ ಕಾಯಿ ಒಡೆದು, ಹಾರ ಹಾಕಿ ಕಾರಿಗೆ ಪೂಜೆ ಮಾಡಿ ಕಾರನ್ನು ಕೊಂಡೊಯ್ದಿದ್ದಾರೆ ಪ್ರಿಯಾಮಣಿ.

ಪ್ರಿಯಾಮಣಿ ಕಾರು ಖರೀದಿ ಮಾಡಿರುವ ಚಿತ್ರಗಳನ್ನು ಮರ್ಸಿಡೀಜ್ ಬೆಂಜ್ ಇಂಡಿಯಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.ಅಂದಹಾಗೆ ಪ್ರಿಯಾಮಣಿ ಖರೀದಿ ಮಾಡಿರುವ ಐಶಾರಾಮಿ ಮರ್ಸಿಡೀಜ್ ಬೆಂಜ್ ಜಿಎಲ್​ಸಿ ಕಾರಿನ ಬೆಲೆ ಬೆಂಗಳೂರಿನಲ್ಲಿ 90.15 ಲಕ್ಷದಿಂದ ಒಂದು ಕೋಟಿ ಆಗುತ್ತದೆ.

BREAKING : ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ : ಲ್ಯಾಬ್ ರಿಪೋರ್ಟ್‌ ಬಿಡುಗಡೆ ಮಾಡಿದ ಆಹಾರ ಇಲಾಖೆ

Posted by Vidyamaana on 2024-07-31 20:48:56 |

Share: | | | | |


BREAKING : ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ : ಲ್ಯಾಬ್ ರಿಪೋರ್ಟ್‌ ಬಿಡುಗಡೆ ಮಾಡಿದ ಆಹಾರ ಇಲಾಖೆ

ಬೆಂಗಳೂರು : ಕುರಿ ಮಾಂಸದ ಜೊತೆ ನಾಯಿ ಮಾಂಸ ಬೆರೆಸಿದ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಲ್ಯಾಬ್ ರಿಪೋರ್ಟ್ ನಲ್ಲಿ ಮೇಕೆ ಮಾಂಸ ಅನ್ನೋದು ಇದೀಗ ದೃಢವಾಗಿದೆ. ಈ ಕುರಿತು ಆಹಾರ ಇಲಾಖೆಯು ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಪ್ರಕಟಿಸಿದೆ.

ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ಮಾಂಸ ವಶಕ್ಕೆ ಪಡೆದು ಪರಿಶೀಲನೆ ಮಾಡಿದ ಆಹಾರ ಸುರಕ್ಷತಾ ಇಲಾಖೆಯು ಎಲ್ಲ ಬಾಕ್ಸ್‌ನಲ್ಲಿರುವುದು ಕುರಿ ಮಾಂಸ ಎಂದು ಪರೀಕ್ಷಾ ವರದಿ ನೀಡಿದೆ.



Leave a Comment: