ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ: ಜಿಲ್ಲಾಧಿಕಾರಿ

Posted by Vidyamaana on 2023-07-24 01:17:37 |

Share: | | | | |


ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ: ಜಿಲ್ಲಾಧಿಕಾರಿ

ಮಂಗಳೂರು: ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್ ಹೇಳಿದ್ದಾರೆ.


ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ , ಪುತ್ತೂರು , ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ತಹಸೀಲ್ದಾರ್ ಹಂತದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪುತ್ತೂರು : ಹರೀಶ್ ನಿಧನ

Posted by Vidyamaana on 2024-07-28 16:45:21 |

Share: | | | | |


ಪುತ್ತೂರು : ಹರೀಶ್ ನಿಧನ

ಪುತ್ತೂರು: ಏಳ್ಮುಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ವಿ.ಶೆಣೈ ಪೆಟ್ರೋಲ್ ಬಂಕ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹರೀಶ್ ನಾಯ್ಕ (67) ಅವರು ಜು.27ರಂದು ಹೃದಯಾಘಾತದಿಂದ ನಿಧನರಾದರು.

ಸುಳ್ಯ: ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯನ ಶವ ಹೊಳೆಯಲ್ಲಿ ಪತ್ತೆ

Posted by Vidyamaana on 2023-05-18 10:21:58 |

Share: | | | | |


ಸುಳ್ಯ: ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯನ ಶವ ಹೊಳೆಯಲ್ಲಿ ಪತ್ತೆ

ಸುಳ್ಯ: ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ನವೀನ್ ರೈ ಮೇನಾಲ ಅವರ ಮೃತದೇಹ ಸುಳ್ಯದ ಹೊಳೆಯಲ್ಲಿ ಪತ್ತೆಯಾಗಿದೆ.

ಪಯಸ್ವಿನಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ.

ಮಂಗಳೂರು: ಜೆಡಿಎಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆಯಾಗಿದ್ದ ಸುಮತಿ SDPI ಸೇರ್ಪಡೆ

Posted by Vidyamaana on 2023-06-22 01:51:24 |

Share: | | | | |


ಮಂಗಳೂರು: ಜೆಡಿಎಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆಯಾಗಿದ್ದ ಸುಮತಿ SDPI ಸೇರ್ಪಡೆ

ಮಂಗಳೂರು : ಜೆಡಿಎಸ್ ಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಸುಮತಿ ಹೆಗ್ಡೆ ಎಸ್.ಡಿ.ಪಿ.ಐ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.ಜೆಡಿಎಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆಯಾಗಿದ್ದ ಸುಮತಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಳಿಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.ಎಸ್.ಡಿ.ಪಿ. ಐ ಪಕ್ಷದ ಸಂಸ್ಥಾಪನಾ ದಿನಾಚರಣೆ ಸಂಬಂಧಿಸಿದ ನಾಯಕರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸುಮತಿ ಹೆಗ್ಡೆ ಎಸ್.ಡಿ.ಪಿ.ಐಗೆ ಸೇರ್ಪಡೆಗೊಂಡರು.


ಸುಮತಿ ಹೆಗ್ಡೆಯವರೊಂದಿಗೆ ಮಹಿಳಾ ಜೆಡಿಎಸ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿತಾ, ಜೆಡಿಎಸ್ ಮಂಗಳೂರು ನಗರ ಕಾರ್ಯದರ್ಶಿ ಅಲ್ತಾಫ್ ತುಂಬೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.

ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ,ರಾಷ್ಟ್ರೀಯ ಕಾರ್ಯದರ್ಶಿಗಳಾದ ರಿಯಾಝ್ ಫರಂಗಿಪೇಟೆ, ಅಲ್ಫೋನ್ಸ್ ಫ್ರಾಂಕೊ, ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ,ರಾಜ್ಯ ಮುಖಂಡರಾದ ಅಥಾವುಲ್ಲ ಜೋಕಟ್ಟೆ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

ಪೊಲೀಸರನ್ನು ಸತಾಯಿಸಿದ ಯಲ್ಲಪ್ಪ ಬಂಧನ

Posted by Vidyamaana on 2024-03-18 09:42:56 |

Share: | | | | |


ಪೊಲೀಸರನ್ನು ಸತಾಯಿಸಿದ ಯಲ್ಲಪ್ಪ ಬಂಧನ

ಬೈಂದೂರು: ತಲೆ ಇಲ್ಲದ ಶವ ಇದೆ ಎಂದು ಸುಳ್ಳು ಮಾಹಿತಿ ನೀಡಿ ಪೊಲೀಸರನ್ನು ದಿನವಿಡೀ ಅಲೆದಾಡಿಸಿದ ಭೂಪ ಬೈಂದೂರು ಪೊಲೀಸರ ಅತಿಥಿಯಾಗಿದ್ದಾನೆ.

ಬೈಂದೂರು ಠಾಣೆಯ ಪೊಲೀಸ್‌ ಉಪನಿರೀಕ್ಷಕ ತಿಮ್ಮೇಶ ಬಿ.ಎನ್‌. ಠಾಣೆಯಲ್ಲಿರುವಾಗ ಬಾಗಲ ಕೋಟೆಯ ಪಕೀರಪ್ಪ ಯಲ್ಲಪ್ಪ (30) ಬಂದು ಯಡ್ತರೆ ಗ್ರಾಮದ ಮಧ್ದೋಡಿ ಗೇರು ಹಾಡಿಯಲ್ಲಿ ತಲೆ ಇಲ್ಲದ ಮನುಷ್ಯನ ದೇಹ ಬಿದ್ದಿದೆ ಎಂದನು. ಪೊಲೀಸರು ಆತನ ಜತೆಯಲ್ಲಿ ಹೋಗಿ ಸಾರ್ವಜನಿಕರ ಸಹಕಾರದೊಂದಿಗೆ ಗೇರು  ಹಾಡಿಯಲ್ಲಿ ದಿನವಿಡೀ ಹುಡುಕಿದರೂ ಎಲ್ಲಿಯೂ ಮೃತದೇಹ ಕಂಡು ಬರಲಿಲ್ಲ.

ಆತನು ಬೇರೆ ಬೇರೆ ಕಡೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಇದೆ, ಇಲ್ಲಿ ಇದೆ ಎಂದು ಹೇಳಿದ್ದು ಎಲ್ಲಿ ಹುಡುಕಿದರೂ ಮೃತ ದೇಹ ಕಾಣಿಸಲಿಲ್ಲ. ಮರು ದಿನವೂ ಹುಡುಕಿದ ಪೊಲೀಸರು ಸುಸ್ತಾದರು. ಸುಳ್ಳು ಮಾಹಿತಿ ನೀಡಿದ ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪೋಷಕರೇ ಗಮನಿಸಿ : ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Posted by Vidyamaana on 2024-06-22 11:31:59 |

Share: | | | | |


ಪೋಷಕರೇ ಗಮನಿಸಿ : ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ : ಬೇಟಿ ಬಚಾವೋ-ಬೇಟಿ ಪಡಾವೋ ಅಭಿಯಾನದ ಅಡಿಯಲ್ಲಿ ಭಾರತ ಸರ್ಕಾರದ ಸಣ್ಣ ಠೇವಣಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್ವೈ ಯೋಜನೆ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2015 ರಲ್ಲಿ ಪ್ರಾರಂಭಿಸಿದರು. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್ವೈ) ಅನ್ನು ದೇಶದಲ್ಲಿ ಹೆಣ್ಣು ಮಗುವಿನ ಭವಿಷ್ಯವನ್ನು ಭದ್ರಪಡಿಸಲು ವಿನ್ಯಾಸಗೊಳಿಸಲಾದ ಕಾರ್ಯತಂತ್ರದ ಹೂಡಿಕೆ ಯೋಜನೆಯಾಗಿ ಪರಿಚಯಿಸಲಾಯಿತು.

ಸುಕನ್ಯಾ ಸಮೃದ್ಧಿ ಯೋಜನೆ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಜನನದಿಂದ 10 ವರ್ಷದವರೆಗೆ ಖಾತೆಯನ್ನು ತೆರೆಯಲು ಅನುವು ಮಾಡಿಕೊಡುತ್ತದೆ, ಖಾತೆಯು 21 ವರ್ಷಗಳ ನಂತರ ಪರಿಪಕ್ವಗೊಳ್ಳುತ್ತದೆ. ಮುಕ್ತಾಯದ ನಂತರ, ಮಗಳ ಶಿಕ್ಷಣ ಅಥವಾ ಮದುವೆಯ ವೆಚ್ಚಗಳನ್ನು ಬೆಂಬಲಿಸಲು ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು.



Leave a Comment: