ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಬಡ ಮಹಿಳೆಯಿಂದ ಪಡ್ಕೊಂಡ ಲಂಚದ ಹಣ ವಾಪಾಸು ಕೊಟ್ಟ ಉಗ್ರಾಣಿ

Posted by Vidyamaana on 2023-09-14 18:46:57 |

Share: | | | | |


ಬಡ ಮಹಿಳೆಯಿಂದ ಪಡ್ಕೊಂಡ ಲಂಚದ ಹಣ ವಾಪಾಸು ಕೊಟ್ಟ ಉಗ್ರಾಣಿ

ಪುತ್ತೂರು; ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಲು ಮಹಿಳೆಯೊಬ್ಬರಿಂದ ಲಂಚಪಡೆದಿದ್ದ ಹಣವನ್ನು ಉಗ್ರಾಣಿಯೊಬ್ಬರು ಮರಳಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಶಾಸಕರಾದ ಅಶೋಕ್ ರಯಯವರು ಕುಂಡಡ್ಕ ದೇವಸ್ಥಾನಕ್ಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಕುಳಗ್ರಾಮದ ಮಹಿಳೆ ಚಂದ್ರಾವತಿ ಎಂಬವರು ಶಾಸಕರ ಬಳಿ ಬಂದು ನನ್ನ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿಲ್ಲ, ನನಗೆ ಅಕ್ರಮ ಸಕ್ರಮ ಸಂಜೂರು ಮಾಡಿಲ್ಲ, ನಾನು ಉಗ್ರಾನಿಗೆ ೩೦ ಸಾವಿರ ಹಣ ನೀಡಿದ್ದೇನೆ, ಬೀಡಿ ಕಟ್ಟಿ ಜೀವನ ಮಾಡುವ ನನ್ನಿಂದ ಉಗ್ರಾನಿ ೩೦ ಸಾವಿರ ಲಂಚ ಪಡೆದುಕೊಂಡಿದ್ದಾರೆ, ಹಣ ಕೊಟ್ಟರೂ ನನ್ನ ಕೆಲಸ ಮಾಡಿಕೊಟ್ಟಿಲ್ಲ ನನಗೆ ನ್ಯಾಯ ಕೊಡಬೇಕು, ನನಗೆ ಅಕ್ರಮ ಸಕ್ರಮ ಮಾಡಿಕೊಡಬೇಕು ಎಂದು ಶಾಸಕರಾದ ಅಶೋಕ್ ರೈಯವರಲ್ಲಿ ಹೇಳಿಕೊಂಡಿದ್ದರು.

ಮಹಿಳೆಯ ಆರೋಪವನ್ನು ಆಲಿಸಿದ ಶಾಸಕರು ತಕ್ಷಣವೇ ಉಗ್ರಾನಿಯ ನಂಬರ್ ಪಡೆದು ಕರೆ ಮಾಡಿ ನೀವು ಚಂದ್ರಾವತಿಯವರಿಂದ ಅಕ್ರಮ ಸಕ್ರಮ ವಿಲೇವಾರಿಗೆ ಪಡೆದುಕೊಂಡಿರುವ ೩೦ ಸಾವಿರ ಹಣವನ್ನು ಒಂದು ವಾರದೊಳಗೆ ಮರಳಿ ಕೊಡಬೇಕು ಇಲ್ಲವಾದರೆ ನಿಮ್ಮನ್ನು ಕೆಲಸದಿಂದ ಸಸ್ಪೆಂಡ್ ಮಾಡಿಸುತ್ತೇನೆ, ಬಡವರಿಂದ ಹಣ ಯಾಕೆ ಪಡೆದುಕೊಂಡಿದ್ದೀರಿ ಎಂದು ಹೇಳಿ ಪಡೆದ ಹಣವನ್ನು ಮರಳಿಸಲು ಒಂದು ವಆರದ ಗಡುವು ನೀಡಿದ್ದರು.

ಸೆ. ೧೪ ರಂದು ಮಹಿಳೆಯ ಮನೆಗೆ ಬಂದ ಉಗ್ರಾಣಿ ತಾನುಪಡೆದುಕೊಂಡಿದ್ದ ೩೦ ಸಾವಿರ ಲಂಚದ ಹಣವನ್ನು ಮರಳಿಸಿದ್ದಾರೆ.

ನಾವು ಗ್ಯಾರಂಟಿ ಕೊಟ್ಟೂ ದಿವಾಳಿಯಾಗಿಲ್ಲ, ಮೋದಿ ನಮ್ಮ ಗ್ಯಾರಂಟಿಯನ್ನೇ ಕದ್ಬಿಟ್ಟಿದ್ದಾರೆ ; ಸಿಎಂ ಸಿದ್ದರಾಮಯ್ಯ

Posted by Vidyamaana on 2024-02-17 22:02:06 |

Share: | | | | |


ನಾವು ಗ್ಯಾರಂಟಿ ಕೊಟ್ಟೂ ದಿವಾಳಿಯಾಗಿಲ್ಲ, ಮೋದಿ ನಮ್ಮ ಗ್ಯಾರಂಟಿಯನ್ನೇ ಕದ್ಬಿಟ್ಟಿದ್ದಾರೆ ; ಸಿಎಂ ಸಿದ್ದರಾಮಯ್ಯ

ಮಂಗಳೂರು, ಫೆ.17: ಇಡೀ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯ ನಮ್ಮದು. ಆದರೆ 4.30 ಲಕ್ಷ ಕೋಟಿ ರೂಪಾಯಿ ತೆರಿಗೆಯನ್ನು ಪ್ರತಿ ವರ್ಷ ಕೇಂದ್ರಕ್ಕೆ ನೀಡುತ್ತೇವೆ. ನಮಗೆ ತಿರುಗಿ ಕೋಡುತ್ತಿರೋದು ಕೇವಲ 50,527 ಕೋಟಿ. ಇದು ಅನ್ಯಾಯ ಅಲ್ವೇ.. 25 ಮಂದಿ ಎಂಪಿಗಳು ಕೋಲೆ ಬಸವರ ಥರ ಹೋಗಿದ್ದೀರಲ್ಲಾ.. ಕನ್ನಡಿಗರಿಗಾದ ಅನ್ಯಾಯವನ್ನು ನೀವು ಕೇಳಿದ್ದೀರಾ.. ನೀವು ಕನ್ನಡಿಗರಿಗೆ ದ್ರೋಹ ಮಾಡಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


ನಗರದ ಅಡ್ಯಾರಿನಲ್ಲಿ ನಡೆದ ಎರಡು ಜಿಲ್ಲೆಗಳ ಕಾರ್ಯಕರ್ತರ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ವೀರಾವೇಶದ ಭಾಷಣ ಮಾಡಿದರು. ದೇಶ ಮತ್ತು ರಾಜ್ಯದ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬಲ್ಲವರು ಕರಾವಳಿ ಜನ. ಹಾಗಾಗಿ ಕೈಮುಗಿದು ಕೇಳಿಕೊಳ್ಳುತ್ತೇನೆ, ಬಿಜೆಪಿಯನ್ನು ನಂಬಬೇಡಿ, ಬಿಜೆಪಿ ಎಂದೂ ನುಡಿದಂತೆ ನಡೆದಿಲ್ಲ. ಪ್ರಧಾನಿ ಹತ್ತು ವರ್ಷಗಳ ಹಿಂದೆ ಏನೇನು ಹೇಳಿದ್ರು ಅಂತ ಮನನ ಮಾಡಿಕೊಳ್ಳಿ. ಕೋಮುವಾದ ಹೇಳೋದು ಬಿಟ್ಟರೆ, ಧರ್ಮಗಳ ನಡುವೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೇನು ಮಾಡಿದ್ದಾರೆ. 2014ರಲ್ಲಿ ಮೋದಿ ಕೊಟ್ಟ ಭರವಸೆ ಈಡೇರಿಸಿದ್ದಾರೆಯೇ.. ಬೆಲೆಯೇರಿಕೆ ಕಡಿಮೆ ಮಾಡಿ ಅಚ್ಚೇ ದಿನ ತಂದಿದ್ದಾರೆಯೇ.. ಪೆಟ್ರೋಲ್, ಡೀಸೆಲ್ ಬೆಲೆ ಏನಾಗಿದೆ, ಗೊಬ್ಬರ, ಗ್ಯಾಸ್ ಬೆಲೆ ಏನಾಗಿದೆ ಅಂತ ಯೋಚನೆ ಮಾಡಿ ನೋಡಿ.ಗ್ಯಾರಂಟಿ ಕೊಟ್ಟರೂ ದಿವಾಳಿಯಾಗಿಲ್ಲ


ನಮ್ಮ ಕಾರ್ಯಕರ್ತರು ಪ್ರಜ್ಞಾವಂತರಿದ್ದಾರೆ, ನುಡಿದಂತೆ ನಡೆದಿದ್ದೇವೋ ಅಂತ ವಿಮರ್ಶೆ ಮಾಡುವ ಶಕ್ತಿ ಇದೆ, ನಾವು ಆರೇ ತಿಂಗಳಲ್ಲಿ ಚುನಾವಣೆಯಲ್ಲಿ ಹೇಳಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ ಬರೋಬ್ಬರಿ 155 ಕೋಟಿ ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡಿದ್ದಾರೆ. ಬಿಜೆಪಿಯವರು ಯಾವತ್ತಾದರೂ ಇಂಥ ಕೆಲಸ ಮಾಡಿದ್ರಾ.. ಒಂದು ಲಕ್ಷ ಜನರು ಯುವನಿಧಿಯನ್ನು ನೋಂದಣಿ ಮಾಡಿಸಿದ್ದಾರೆ. ಈ ವರ್ಷ ಯಾವುದೇ ಮಧ್ಯವರ್ತಿ ಇಲ್ಲದೆ 36 ಸಾವಿರ ಕೋಟಿ ರೂ. ಜನರ ಖಾತೆಗೆ ನೇರವಾಗಿ ತಲುಪಿಸಿದ್ದೇವೆ, ಬಿಜೆಪಿಯವರು ಗ್ಯಾರಂಟಿ ಕೊಡಕ್ಕಾಗಲ್ಲ, ರಾಜ್ಯ ದಿವಾಳಿಯಾಗತ್ತೆ ಎಂದಿದ್ದರು. ಗ್ಯಾರಂಟಿ ಕೊಟ್ಟು ದಿವಾಳಿ ಆಗಿಲ್ಲ, ಆರ್ಥಿಕವಾಗಿ ಸುಭದ್ರವಾಗಿದ್ದೇವೆ.


ನಿನ್ನೆ 3.83 ಲಕ್ಷ ಕೋಟಿ ರೂ. ಬಜೆಟ್ ಮಾಡಿದ್ದೇನೆ. ಹಿಂದಿನ ಬಾರಿ ಬಿಜೆಪಿ 3.2 ಲಕ್ಷ ಕೋಟಿ ಬಜೆಟ್ ಮಂಡಿಸಿತ್ತು. ಆನಂತರ ನಾನು ಅಧಿಕಾರಕ್ಕೆ ಬಂದು 3.27 ಲಕ್ಷ ಕೋಟಿ ಮಧ್ಯಂತರ ಬಜೆಟ್ ಮಾಡಿದ್ದೆ. ಈಗ 46 ಸಾವಿರ ಕೋಟಿ ಹೆಚ್ಚುವರಿಯಾಗಿ 3.83 ಲಕ್ಷ ಕೋಟಿಯಾಗಿದೆ. ಬೊಕ್ಕಸ ದಿವಾಳಿಯಾದ್ರೆ ಇದನ್ನು ಮಾಡೋಕೆ ಆಗುತ್ತಾ ಮೋದಿಯವರೇ ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ. ಈಗ ಮೋದಿ ಗ್ಯಾರಂಟಿ ಹೇಳುತ್ತಿದ್ದಾರೆ, ನಮ್ಮ ಗ್ಯಾರಂಟಿಯನ್ನೇ ಕದ್ಬಿಟ್ಟಿದ್ದಾರೆ. ಇವರು ಹೇಳಿದ್ದನ್ನು ಮಾಡಿದ್ದಾರೆಯೇ ಎಂದು ಹೇಳಿದ ಸಿದ್ದರಾಮಯ್ಯ, ಬಜೆಟ್ ಅಧಿವೇಶವನ್ನು ಬಹಿಷ್ಕರಿಸಿದ್ದು ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಆಗಿಲ್ಲ. ಬಿಜೆಪಿಯವರು ಮೊದಲೇ ಪ್ಲೇಕಾರ್ಡ್ ಹಿಡಿದು ಬಂದಿದ್ದರು. ಇವರಿಗೆ ಸತ್ಯ ತಡೆಯಕ್ಕಾಗಲ್ಲ. ಮೈಉರಿ ಬಂದಿದೆ. ನಾವು ಗ್ಯಾರಂಟಿ ಕೊಟ್ಟೂ ಇಷ್ಟೊಂದು ಕೊಡುಗೆ ಕೊಡುತ್ತೀವಲ್ಲಾ.. ಚರ್ಚೆ ಮಾಡೋದಕ್ಕೂ ಬರ್ತಾ ಇಲ್ಲ ಎಂದರು.  ಕೇಂದ್ರ ಸರಕಾರಕ್ಕೆ ರಾಜ್ಯದಿಂದ 4.30 ಲಕ್ಷ ಕೋಟಿ ಹೋಗುತ್ತಿದ್ದರೆ ಮರಳಿ ಬರೋದು 50,257 ಸಾವಿರ ಕೋಟಿ. ಅಂದರೆ ನೂರು ಕೋಟಿ ತೆರಿಗೆಯಲ್ಲಿ ವಾಪಸ್ ಬರ್ತಿರೋದು 13 ರೂ. ಮಾತ್ರ. ಇದನ್ನು ಹೇಳಿದ್ರೆ ವರಿಗೆ ಮೈಯಲ್ಲಿ ಉರಿ ಬರತ್ತೆ. ಏಳು ಕೋಟಿ ಕನ್ನಡಿಗರ ರಕ್ಷಣೆಯ ಬದ್ಧತೆ ಇದ್ರೆ ಬಿಜೆಪಿಯವರೂ ದೆಹಲಿಯಲ್ಲಿ ನಡೆಸಿದ ಧರಣಿಯಲ್ಲಿ ಭಾಗವಹಿಸಬೇಕಿತ್ತು. ಎಲ್ಲರಿಗೂ ಪತ್ರ ಬರೆದಿದ್ದೇನೆ, ಕನ್ನಡಿಗರಿಗೆ ಅನ್ಯಾಯ ಆಗಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ. ಮಿಸ್ಟರ್ ಕಟೀಲ್, ಶೋಭಾ ಕರಂದ್ಲಾಜೆ ಯಾವತ್ತಾದರೂ ನೀವು ಈ ಬಗ್ಗೆ ಬಾಯಿ ಬಿಟ್ಟಿದ್ದೀರಾ.. ನಿಮಗೆ ಸ್ವಾಭಿಮಾನ ಇದ್ದರೆ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.


14ನೇ ಹಣಕಾಸು ಆಯೋಗದಲ್ಲಿ 4.78 ಪರ್ಸೆಂಟ್ ಅನುದಾನ ಅಂತ ಇತ್ತು. 15ನೇ ಹಣಕಾಸು ಆಯೋಗ ಅದನ್ನು 3.7 ಪರ್ಸೆಂಟ್ ಮಾಡಿತ್ತು. ಇದರ ಪ್ರಕಾರ. 5400 ಕೋಟಿ ಅನುದಾನ ಕೊಡಬೇಕಿತ್ತು, ಕರ್ನಾಟಕದಿಂದಲೇ ಗೆದ್ದು ಹೋಗಿರುವ ನಿರ್ಮಲಾ ಸೀತಾರಾಮನ್ ಕೊಡಕ್ಕಾಗಲ್ಲ ಎಂದು ತಿರಸ್ಕರಿಸಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಮಿಸ್ಟರ್ ಅಶೋಕ, ಯಡಿಯೂರಪ್ಪ, ಬೊಮ್ಮಾಯಿ ಗೊತ್ತಾಗಲ್ವೇ.. ಟೋಪಿ ಹಾಕ್ಕೊಂಡವರು ನನ್ನ ಕಚೇರಿಗೆ ಬರಬೇಡಿ ಅಂತ ಯತ್ನಾಳ್ ಹೇಳ್ತಾರೆ, ಮೋದಿ ಸಬ್ ಕಾ ವಿಕಾಸ್, ಸಬ್ ಕಾ ಸಾಥ್ ಅಂತ ಹೇಳ್ತಾರಲ್ಲಾ..  


ಮೋದಿ ಸಿರಿವಂತರ ಪರವಾಗಿದ್ದಾರೆ


ಬಡವರಿಗೆ ಬ್ಯಾಂಕ್ ಸವಲತ್ತು ಸಿಗಬೇಕು ಅಂತ ಇಂದಿರಾ ಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದರು. ಇವತ್ತು ಮೋದಿ ಬ್ಯಾಂಕನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಬಡವರ ಮೇಲೆ ತೆರಿಗೆ ಹೆಚ್ಚಿಸುತ್ತಾರೆ. ಕಾರ್ಪೊರೇಟ್ ಕಂಪನಿಗಳ 30 ಪರ್ಸೆಂಟ್ ಇದ್ದ ತೆರಿಗೆಯನ್ನು 22 ಪರ್ಸೆಂಟಿಗೆ ಇಳಿಸುತ್ತಾರೆ. ಇವರು ಶ್ರೀಮಂತರು, ಉದ್ಯಮಿಗಳ ಪರವಾಗಿದ್ದಾರೆ ಅನ್ನೋದನ್ನು ಬೇರೆ ಹೇಳಬೇಕಾ.. ನಾವು ಈ ಬಾರಿ 28ರಲ್ಲಿ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಯವರ ಹಾಗೆ 28ರಲ್ಲಿ 28 ಅಂತ ಸುಳ್ಳು ಹೇಳಲ್ಲ ಎಂದರು.

ಭಾರತದಲ್ಲಿ ಭಾನುವಾರದ ರಜೆ ರದ್ದು ? ಮಹತ್ವದ ಮುನ್ಸೂಚನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

Posted by Vidyamaana on 2024-05-28 20:39:20 |

Share: | | | | |


ಭಾರತದಲ್ಲಿ ಭಾನುವಾರದ ರಜೆ ರದ್ದು ? ಮಹತ್ವದ ಮುನ್ಸೂಚನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಾರದ ರಜಾದಿನವನ್ನು ಭಾನುವಾರದಿಂದ ಶುಕ್ರವಾರಕ್ಕೆ ಬದಲಾಯಿಸುವ ಜಾರ್ಖಂಡ್ ಜಿಲ್ಲೆಯ ಪ್ರಯತ್ನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತನಾಡಿದ್ದಾರೆ. ದುಮ್ಕಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತದಲ್ಲಿ ಭಾನುವಾರದ ರಜಾದಿನವು ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಬೇರುಗಳನ್ನು ಹೊಂದಿದೆ ಮತ್ತು ಕ್ರಿಶ್ಚಿಯನ್ ಸಮುದಾಯದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದರು.

ನವದೆಹಲಿ : ಕೆಂಪು ಕೋಟೆ ಯಲ್ಲಿ ಪ್ರಧಾನಿ ಮೋದಿ ಮಾಡಿದ ಘೋಷಣೆ ಕುರಿತು ಯೋಜನೆ ಅನುಷ್ಠಾನ ಪರಾಮರ್ಶೆ ಸಭೆ

Posted by Vidyamaana on 2023-10-08 08:49:37 |

Share: | | | | |


ನವದೆಹಲಿ : ಕೆಂಪು ಕೋಟೆ ಯಲ್ಲಿ  ಪ್ರಧಾನಿ ಮೋದಿ ಮಾಡಿದ ಘೋಷಣೆ ಕುರಿತು ಯೋಜನೆ ಅನುಷ್ಠಾನ ಪರಾಮರ್ಶೆ ಸಭೆ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಪರಾಮರ್ಶೆ ಸಭೆ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಗೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಮಾಡಿದ ಘೋಷಣೆಗಳು ಹಾಗೂ ಯೋಜನೆ ಅನುಷ್ಠಾನ ಕುರಿತು ಪರಾಮರ್ಶೆ ಸಭೆ ನಡೆಸಲಾಗಿದೆ. ಪ್ರಮುಖವಾಗಿ ವಸತಿ ಮತ್ತು ಇಂಧನ ಸೌಲಭ್ಯಗಳ ಒದಗಿಸುವ ಯೋಜನೆ ಕುರಿತು ಚರ್ಚಿಸಲಾಗಿದೆ.ಇದೇ ವೇಳೆ ಬಡ ಹಾಗೂ ಮಧ್ಯಮ ವರ್ಗದ ಮನೆಗಳಿಗೆ ಸೋಲಾರ್ ಒದಗಿಸುವ ಯೋಜನೆ ಕುರಿತು ಪರಾಮರ್ಶೆ ನಡೆಸಿದ್ದಾರೆ. 

ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ:ಡಾ ಜೆ.ಸಿ.ಅಡಿಗ

ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ್ದ ಪ್ರಧಾನಿ ಮೋದಿ ದೇಶವನ್ನುದ್ಧೇಶಿ ಭಾಷಣ ಮಾಡಿದ್ದರು. ಈ ವೇಳೆ ಕೆಲ ಘೋಷಣೆಗಳನ್ನು ಮಾಡಿದ್ದರು. ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಒದಿಗಿಸುವ ಕುರಿತು ಘೋಷಿಸಿದ್ದರು. ಇದೀಗ ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಕನಸು ನನಸಾಗಿಸಲು ಮೋದಿ ಯೋಜನೆಗಳ ಪರಾಮರ್ಶೆ ನಡೆಸಿದ್ದಾರೆ.ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೋಲಾರ್ ಸೌಲಭ್ಯ ಯೋಜನೆಯನ್ನು ಮೋದಿ ಘೋಷಿಸಿದ್ದರು. ಈ ಕುರಿತು ಮೋದಿ ಚರ್ಚಿಸಿದ್ದಾರೆ. ಯೋಜನೆ ಪ್ರತಿಯೊಬ್ಬ ಫಲಾನುಭವಿಗೆ ಯಾವುದೇ ಸಮಸ್ಯೆಗಳಿಲ್ಲದೆ ತಲುಪಬೇಕು. ಸರಳ ಹಾಗೂ ಸುಲಭವಾಗಿ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆಯುವಂತಾಗಬೇಕು ಎಂದು ಮೋದಿ ಸೂಚಿಸಿದ್ದಾರೆ

ಎ.23-24: ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವ

Posted by Vidyamaana on 2024-04-23 08:15:59 |

Share: | | | | |


ಎ.23-24: ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವ

ಪುತ್ತೂರು: ೧೯೬೪ರಲ್ಲಿ ಪುತ್ತೂರಿನ ಕೆಮ್ಮಿಂಜೆಯಲ್ಲಿ ನಿರ್ಮಿಸಲಾದ ಶ್ರೀ ರಾಮ ಭಜನಾ ಮಂದಿರವನ್ನು ನವೀಕರಿಸಲಾಗಿದ್ದುö,  ಇದರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮಗಳು ಏಪ್ರಿಲ್ ೨೩ ಮತ್ತು ೨೪ರಂದು  ನಡೆಯಲಿದೆ ಎಂದು ಶ್ರೀ ರಾಮ ಭಜನಾ ಮಂದಿರ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಚಂದ್ರಶೇಖರ ಕೆಮ್ಮಿಂಜೆ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ೨೩ರಂದು ಸಂಜೆ ೭ ಗಂಟೆಯಿAದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 

ಕುಸಿದು ಬಿದ್ದ ಚೈತ್ರಾ ಕುಂದಾಪುರ – ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್‌

Posted by Vidyamaana on 2023-09-15 09:58:06 |

Share: | | | | |


ಕುಸಿದು ಬಿದ್ದ ಚೈತ್ರಾ ಕುಂದಾಪುರ – ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್‌

ಬೆಂಗಳೂರು : ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ.


ವಿಚಾರಣೆ ವೇಳೆ ಮೂರ್ಛ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಚೈತ್ರಾ ಬಾಯಿಯಲ್ಲಿ ನೊರೆ ಬಂದ ದೃಶ್ಯ ಸೆರೆಯಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಚೈತ್ರಾ ಮೂರ್ಛ ರೋಗದಿಂದ ಬಳಲುತ್ತಿದ್ದು, ವಿಚಾರಣೆ ವೇಳೆ ಪ್ರಜ್ಞೆ ತಪ್ಪಿರುವ ಸಾಧ್ಯತೆಯಿದೆ.



Leave a Comment: