ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಸುದ್ದಿಗಳು News

Posted by vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಪದವಿ ಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ.

 Share: | | | | |


ಹರೇಕಳ ಕಡವಿನಬಳಿ ನೇತ್ರಾವತಿಯಲ್ಲಿ ತಾಯಿ-ಮಗುವಿನ ಮೃತದೇಹ ಪತ್ತೆ!

Posted by Vidyamaana on 2024-03-31 15:11:28 |

Share: | | | | |


ಹರೇಕಳ ಕಡವಿನಬಳಿ ನೇತ್ರಾವತಿಯಲ್ಲಿ ತಾಯಿ-ಮಗುವಿನ ಮೃತದೇಹ ಪತ್ತೆ!

ಮುಡಿಪು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ.‌ ತಾಯಿಯು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.

ಮೃತ ಮಹಿಳೆಯನ್ನು ನಾಗರಾಜ್ ಎಂಬವರ ಪತ್ನಿ ಚೈತ್ರಾ( 30) ಎಂದು ಗುರುತಿಸಲಾಗಿದೆ. ಅಡ್ಯಾರ್ ನಿವಾಸಿಯಾಗಿರುವ ಇವರು ತನ್ನ ಒಂದು ವರ್ಷದ ಮಗು ದಿಯಾಂಶ್ ಜತೆ ಮಧ್ಯಾಹ್ನ ಸೇತುವೆಯ ಮೂಲಕ ನಡೆದುಕೊಂಡು ಬಂದು ಹರೇಕಳ ಕಡವಿನಬಳಿ ಬಂದಿದ್ದರು ಎನ್ನಲಾಗಿದೆ. ನದಿಯ ಸಮೀಪ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಗಮನಿಸಿದ್ದರು. ಆದರೆ ಮಧ್ಯಾಹ್ನ ಬಳಿಕ ಆಕೆಯ ಮನೆಯವರು ಬಂದು ವಿಚಾರಿಸಿದ್ದು, ಆ ಬಳಿಕ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ತಿಳಿದಿತ್ತು.

BURNING TRAIN : ಬೆಂಕಿ ಅನಾಹುತ : ಧಗಧಗಿಸಿದ ರೈಲು..! - VIDEO

Posted by Vidyamaana on 2024-06-03 21:20:29 |

Share: | | | | |


BURNING TRAIN : ಬೆಂಕಿ ಅನಾಹುತ : ಧಗಧಗಿಸಿದ ರೈಲು..! - VIDEO

ನವದೆಹಲಿ : ನೋಡ ನೋಡುತ್ತಿದ್ದಂತೆಯೇ ರೈಲೊಂದು ಹೊತ್ತಿ ಉರಿದ ಘಟನೆ ನವದೆಹಲಿಯಲ್ಲಿ ನಡೆದಿದೆ 

ದಕ್ಷಿಣ ದೆಹಲಿಯ ತುಘಲಕಾಬಾದ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಷ್ಟರಲ್ಲಿ ಪಕ್ಕದಲ್ಲಿದ್ದ ಮತ್ತೊಂದು ರೈಲು ಬೆಂಕಿ ತಗುಲಿದೆ

VIRAL VIDEO: ಕುಡಿದ ಮತ್ತಿನಲ್ಲಿ ಗೂಳಿಯ ಕೊಂಬು ಹಿಡಿದ ವ್ಯಕ್ತಿಗೆ ಆಗಿದ್ದೇನು..?

Posted by Vidyamaana on 2023-10-22 17:23:38 |

Share: | | | | |


VIRAL VIDEO: ಕುಡಿದ ಮತ್ತಿನಲ್ಲಿ ಗೂಳಿಯ ಕೊಂಬು ಹಿಡಿದ ವ್ಯಕ್ತಿಗೆ ಆಗಿದ್ದೇನು..?

ನವದೆಹಲಿ: ಸೋಷಿಯಲ್​ ಮೀಡಿಯಾದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಜನರ ಗಮನ ಸೆಳೆದರೆ, ಇನ್ನೂ ಕೆಲವು ಜನರ ಜನರ ಮೊಗದಲ್ಲಿ ಮಂದಹಾಸ ಮೂಡಿಸುತ್ತವೆ. ವೈರಲ್ ವಿಡಿಯೋಗಳು ಇಂದು ಅತ್ಯಂತ ಜನಪ್ರಿಯವಾಗಿವೆ.

VIRAL VIDEO: ಕುಡಿದ ಮತ್ತಿನಲ್ಲಿ ಗೂಳಿಯ ಕೊಂಬು ಹಿಡಿದ ವ್ಯಕ್ತಿಗೆ ಆಗಿದ್ದೇನು..?


ಫನ್ನಿ ಫನ್ನಿ ವಿಡಿಯೋಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ.ಈ ರೀತಿಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.


ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಗೂಳಿ ಜೊತೆಗೆ ಸೆಣಸಾಡಲು ಹೋಗಿ ಅವಾಂತರ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕುಡಿದ ನಶೆಯಲ್ಲಿದ್ದ ಆ ವ್ಯಕ್ತಿ ನಡುರಸ್ತೆಯಲ್ಲಿ ಸುಮ್ಮನೆ ನಿಂತಿದ್ದ ಗೂಳಿ ಬಳಿ ಹೋಗಿ ಅದರ ಕೊಂಬು ಹಿಡಿಯಲು ಯತ್ನಿಸಿದ್ದಾನೆ. ಹಲವಾರು ಬಾರಿ ಕೊಂಬು ಹಿಡಿಯಲು ಯತ್ನಿಸಿದ ವ್ಯಕ್ತಿಯ ವರ್ತನಯಿಂದ ಗೂಳಿಗೆ ಕಡುಕೋಪ ಬಂದಿದೆ.


ಇರಲಾರದವರು ಇರುವೆ ಬಿಟ್ಟುಕೊಂಡರು ಎಂಬ ಗಾದೆಯಂತೆ ಈ ವ್ಯಕ್ತಿ ಸುಮ್ಮನೆ ಇದ್ದ ಗೂಳಿಗೆ ಕಾಟ ಕೊಟ್ಟಿದ್ದಾನೆ. ಪರಿಣಾಮ ಕೋಪಗೊಂಡ ಗೂಳಿ ಆತನನ್ನು ತನ್ನ ಕೊಂಬಿನಿಂದ ತಿವಿದು ಮೇಲಕ್ಕೆ ಎತ್ತಿ ಬೀಸಾಡದೆ. ಪರಿಣಾಮ ನೆಲಕ್ಕೆ ಬಿದ್ದ ವ್ಯಕ್ತಿಯ ನಶೆ ಇಳಿದುಹೋಗಿದೆ. ಕೂಡಲೇ ಆತ ಗೂಳಿಯ ಸಹವಾಸ ಸಾಕು ಅಂತಾ ರಸ್ತೆ ಬದಿ ತೆರಳಿ ಕುಳಿತುಕೊಂಡಿದ್ದಾನೆ.ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಅನೇಕರು ಶೇರ್ ಸಹ ಮಾಡಿದ್ದಾರೆ. ಕುಡಿದ ನಶೆಯಲ್ಲಿ ಗೂಳಿ ಜೊತೆ ಗುಮ್ಮಿಸಿಕೊಂಡ ವ್ಯಕ್ತಿಯ ಸ್ಥಿತಿಯನ್ನು ಕಂಡು ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

ನೂತನ ಕಚೇರಿಯಲ್ಲಿ ಶಾಸಕರ ಮೊದಲ ಜನತಾದರ್ಶನ

Posted by Vidyamaana on 2023-08-31 01:26:20 |

Share: | | | | |


ನೂತನ ಕಚೇರಿಯಲ್ಲಿ ಶಾಸಕರ ಮೊದಲ ಜನತಾದರ್ಶನ

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರಐಯವರ ನೂತನ ಕಚೇರಿಯಲ್ಲಿ ಆ. ೩೦ ರಂದು ಮೊದಲ ಜನತಾದರ್ಶನ ಕಾರ್ಯಕ್ರಮ ನಡೆಯಿತು. ಕಚೇರಿಯಲ್ಲಿ ಸರ್ವಜನಿಕರು ಕಿಕ್ಕಿರಿದು ಸೇರಿದ್ದರು. ಸೇರಿದ ಸಾರ್ವಜನಿಕರಿಂದ ಶಾಸಕರು ಅಹವಾಲು ಸ್ವೀಕರಿಸಿ ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರವನ್ನು ಸೂಚಿಸಿದರು. ಈ ಹಿಂದೆ ಶಾಸಕರ ಚುನಾವಣಾ ಕಚೇರಿಯಲ್ಲಿ ನಡೆಯುತ್ತಿದ್ದ ಅಹವಾಲು ಸ್ವೀಕಾರ ಕಾರ್ಯ ಇಂದು ನೂತನ ಕಚೇರಿಯಲ್ಲಿ ನಡೆಯಿತು. ವಿಶಾಲವಾದ ಪಾರ್ಕಿಂಗ್ ಮತ್ತು ವಿಸ್ತ್ರತವಾದ ಕಚೇರಿ ಇರುವ ಕಾರಣ ಜನರಿಗೆ ಶಾಸಕರನ್ನು ಭೇಟಿಯಾಗಲು ಸುಲಭ ಸಾಧ್ಯವಾಯಿತು. ಕಚೇರಿಗೆ ಬಂದ ಸಾರ್ವಜನಿಕರನ್ನು ವಿವಿಧ ಸೆಕ್ಷನ್‌ಗಳಲ್ಲಿರುವ ಸಿಬಂದಿಗಳು ಮಾತನಾಡಿಸಿ ಅವರಿಗೆ ಸೂಕ್ತ ಸಲಹೆ ಮತ್ತು ಮಾಹಿತಿಗಳನ್ನು ಒದಗಿಸಿದಿರು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಕೊರತೆ ಇದ್ದವರಿಗೆ ದಾಖಲೆಗಳನ್ನು ಸಂಗ್ರಹಿಸಿ ಅರ್ಜಿ ನೀಡುವುದು ಮತ್ತು ಎಲ್ಲಿ ಹೇಗೆ ಅರ್ಜಿ ನೀಡಬೇಕಗಿದೆ ಎಂಬುದನ್ನು ಸಿಬಂದಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಹೊಸ ಕಚೇರಿಗೆ ಬಂದ ಸಾರ್ವಜನಿಕರು ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ನೂಕು ನುಗ್ಗಾಟ ಇಲ್ಲದೆ ಸರತಿ ಸಾಲಿನಲ್ಲಿ ಬಂದು ಶಾಸಕರನ್ನು ಭೇಟಿಯಾಗಲು ಅನುಕೂಲ ಕಲ್ಪಿಸಿದ್ದೀರಿ, ಕುಡಿಯುವ ನೀರು ಮತ್ತು ಸಿಬಂದಿಗಳಿಂದ ಸೂಕ್ತ ಸಲಹೆ ಮತ್ತು ಮಾಹಿತಿಯನ್ನು ಒದಗಿಸಿದ್ದೀರಿ ಎಂದು ಕೆಲವರು ಬಹಳ ಖುಷಿಯಿಂದ ಹೇಳಿದ್ದಾರೆ. ಜನರ ಹಿತಕ್ಕಾಗಿಯೇ ವಿಶಾಲವಾದ ಕಚೇರಿಯನ್ನು ಆರಂಭಿಸಿದ್ದೇನೆ, ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಯೂ ನನ್ನನ್ನು ಭೇಟಿಯಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಯಾವುದೇ ಮಧ್ಯವರ್ತಿಗಳ ಸಹಕಾರವೂ ಬೇಡ. ನಾನು ಕಚೇರಿಯಲ್ಲಿ ಇಲ್ಲದೇ ಇದ್ದರೂ ಸಾರ್ವಜನಿಕರು ತಮ್ಮ ಕೆಲಸವನ್ನು ಮಾಡಿಕೊಂಡು ಹೋಗಬಹುದು. ಸಾರ್ವಜನಿಕರ ತೃಪ್ತಿಯಿಂದ ನಾನು ಕೂಡಾ ಸಂತುಷ್ಟನಾಗಿದ್ದೇನೆ

ಅಶೋಕ್ ರೈ, ಶಾಸಕರು ಪುತ್ತೂರು

ನನ್ನ ಮಗನಿಗೆ ಕೊಡೋ ಶಿಕ್ಷೆ ಹೇಗಿರ್ಬೇಕಂದ್ರೆ ಮುಂದೆ ಇಂಥ ಕೆಲ್ಸಕ್ಕೆ ಯಾರೂ ಕೈ ಹಾಕ್ಬಾರ್ದು

Posted by Vidyamaana on 2024-04-20 09:47:56 |

Share: | | | | |


ನನ್ನ ಮಗನಿಗೆ ಕೊಡೋ ಶಿಕ್ಷೆ ಹೇಗಿರ್ಬೇಕಂದ್ರೆ ಮುಂದೆ ಇಂಥ ಕೆಲ್ಸಕ್ಕೆ ಯಾರೂ ಕೈ ಹಾಕ್ಬಾರ್ದು

ಹುಬ್ಬಳಿ : ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿ(Hubballi) ನೇಹಾ ಹತ್ಯೆ ಪ್ರಕರಣ ಜನತೆಯನ್ನು ರೊಚ್ಚಿಗೆಬ್ಬಿಸಿದೆ. ಹಂತಕನ ವಿರುದ್ಧ ಜನ ಕೊತ ಕೊತ ಕುದಿಯುತ್ಯಿದ್ದಾರೆ. ಈ ಬೆನ್ನಲ್ಲೇ ನೇಹಾ ಹಂತಕ ಪಯಾಜ್ ತಂದೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ನನ್ನ ಮಗನಿಗೆ ಯಾವುದೇ ಶಿಕ್ಷೆ ನೀಡಿದರೂ ಸ್ವಾಗತಿಸುತ್ತೇನೆ. ಅವನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ. ಆ ಶಿಕ್ಷೆ ಹೇಗಿರಬೇಕು ಅಂದ್ರೆ ಮುಂದೆ ಇಂಥ ಕ್ರೂರ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಅಂಥ ಶಿಕ್ಷೆ ನನ್ನ ಮಗನಿಗೆ ಆಗಬೇಕು ಎಂದು ನೇಹಾ ಹಿರೇಮಠ (Neha Hiremath Murder Case) ಕೊಲೆ ಪ್ರಕರಣದ ಆರೋಪಿ ಫಯಾಜ್ (Fayaz) ತಂದೆ‌ ಬಾಬಾ ಸಾಹೇಬ್‌ ಸುಬಾನಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.

ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪ-ಪುತ್ತಿಲ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲು

Posted by Vidyamaana on 2023-10-07 04:47:42 |

Share: | | | | |


ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪ-ಪುತ್ತಿಲ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲು

ಪುತ್ತೂರು:ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ಸಂದರ್ಭ ನಡೆದ ಕಲ್ಲುತೂರಾಟದಿಂದ ಮನೆಗಳಿಗೆ ಹಾನಿಯಾಗಿರುವ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದ್ದ ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಸ್ಥಳೀಯ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?

ಕಲ್ಲುತೂರಾಟದಿಂದ ಮನೆಗೆ ಹಾನಿಯಾಗಿ ಸಂತ್ರಸ್ತರಾಗಿದ್ದವರ ಭೇಟಿ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 153 ಎ ಅಡಿಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.


ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?

Recent News


Leave a Comment: