ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ದೂಮಡ್ಕದಲ್ಲಿ ೨೭ ನೇ ವರ್ಷದ ಮೊಸರುಕುಡಿಕೆ ಉತ್ಸವಕ್ಕೆ ಶಾಸಕರಿಂದ ಚಾಲನೆ

Posted by Vidyamaana on 2023-09-06 16:32:38 |

Share: | | | | |


ದೂಮಡ್ಕದಲ್ಲಿ ೨೭ ನೇ ವರ್ಷದ ಮೊಸರುಕುಡಿಕೆ ಉತ್ಸವಕ್ಕೆ ಶಾಸಕರಿಂದ ಚಾಲನೆ

ಪುತ್ತೂರು: ನಮಗೆ ಕಷ್ಟ ಬಂದಾಗ, ಜೀವನದಲ್ಲಿ ಸೋತಾಗ ನಮಗೆ ದೇವರ ನೆನಪಾಗುತ್ತದೆ, ನಾವು ದೇವರಿರುವ ಜಾಗವನ್ನು ಹುಡುಕಿಕೊಂಡು ಹೋಗುತ್ತೇವೆ, ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ , ಹಬ್ಬ ಹರಿದಿನಗಳಲ್ಲೂ ನಾವು ದೇವರ ಬಳಿ ಹೋಗುತ್ತೇವೆ ಆದರೆ ನಮ್ಮ ಮನೆಯೊಳಗೇ ಇರುವ ತಂದೆ ತಾಯಿ ಎಂಬ ದೇವರನ್ನು ಮರೆತುಬಿಡುತ್ತೇವೆ, ತಂದೆ ತಾಯಿಯ ಮನಸ್ಸಿಗೆ ನೋವು ಮಾಡಿದವನಿಗೆ ದೇವರ ಆಶೀರ್ವಾದ ಎಂದಿಗೂ ಲಭಿಸುವುದಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ದೂಮಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ ೨೭ ನೇ ವರ್ಷದ ಮೊಸರುಕುಡಿಕೆ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ಆಶೀರ್ವಾದವನ್ನು ನಾವು ಮೊದಲು ಪಡೆಯಬೇಕು, ಜೀವ ಇರುವಾಗ ನಾವು ಅವರ ಚಾಕರಿಯನ್ನು ಮಾಡಬೇಕು. ಮುದಿ ಪ್ರಾಯದಲ್ಲಿ ಅವರನ್ನು ಆಶ್ರಮಕ್ಕೆ ಸೇರಿಸುವ ಸಂಸ್ಕಾರ ನಮ್ಮದಲ್ಲ ನಾವು ತಂದೆ ತಾಯಿಯನ್ನು ಎಲ್ಲಿಯತನಕ ಮನಸಾರೆ ಪ್ರೀತಿಸುವುದಿಲ್ಲವೋ ಅಲ್ಲಿಯವರೆಗೆ ನವು ಜೀವನದಲ್ಲಿ ಉದ್ದಾರ ಆಗುವುದೇ ಇಲ್ಲ ಎಂದು ಹೇಳಿದ ಶಾಸಕರು ನಮಗೆ ದೇವರು ಒಲಿಯಬೇಕಾದರೆ ಮೊದಲು ಜನ್ಮ ಕೊಟ್ಟ ದೇವರನ್ನು ಮನೆಯಲ್ಲೇ ಪೂಜಿಸಬೇಕು ಎಂದು ಹೇಳಿದರು. ನಾವು ಕಷ್ಟ ಬಂದಾಗ ಪ್ರಶ್ನೆ ಕೇಳಲು ಹೋಗುತ್ತೇವೆ, ನಮಗೆ ಯಾರಾದರೂ ಏನಾದರು ಮಾಡಿದ್ದಾರ ಎಂದು ಕೇಳಲು ಹೋಗುತ್ತೇವೆ ಅವರ ಬಳಿ ಹೋಗುವ ಬದಲು ತಂದೆ ತಾಯಿಯನ್ನು ಗೌರವಿಸಿ ಅಷ್ಟೇ ಸಾಕು ನಮಗೆ ದೇವರು ಎಲ್ಲವನ್ನೂ ಕೊಡುತ್ತಾನೆ ಎಂದು ಹೇಳಿದರು.ವೇದಿಕೆಯಲ್ಲಿ ಬೈಲಾಡಿ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಘಾಟೆ, ಬೈಲಾಡಿ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಬ್ಥರಮಜಲು, ದೂಮಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಗಣೇಶ್ ರೈ, ದೂಮಡ್ಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷರಾದ ಶೀನಪ್ಪ ನಾಯ್ಕ, ಬೆಟ್ಟಂಪಾಡಿ ಗ್ರಾಪಂ ಸದಸ್ಯ ನವೀನ್ ರೈ, ಮಹಾಲಿಂಗ ನಾಯ್ಕ, ಬೆಳಿಯೂರುಕಟ್ಟೆ ಸರಕರಿ ಪಪೂ ಕಾಲೇಜು ಪ್ರಾಂಶುಪಾಲರಾದ ಹರಿಪ್ರಕಾಶ್ ಬೈಲಾಡಿ ಮೊದಲಾದವರು ಉಪಸ್ತಿತರಿದ್ದರು.

ನೇಣು ಬಿಗಿದು ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ

Posted by Vidyamaana on 2024-05-13 17:08:28 |

Share: | | | | |


ನೇಣು ಬಿಗಿದು  ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ

ಬೆಳ್ಳಾರೆ: ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಾರುವಿನಲ್ಲಿ ನಡೆದಿದೆ.

ಬೆಳ್ಳಾರೆ ನೆಟ್ಟಾರು ನಿವಾಸಿ ಚರಣ್ (22) ಆತ್ಮಹತ್ಯೆಗೆ ಶರಣಾದ ಯುವಕ.

ಮಾ. 7ರಂದು ನಯಾ ಚಪ್ಪಲ್ ಬಜಾರ್ ನ ನವೀಕೃತ ಮಳಿಗೆ ಶುಭಾರಂಭ

Posted by Vidyamaana on 2024-03-02 12:33:31 |

Share: | | | | |


ಮಾ. 7ರಂದು ನಯಾ ಚಪ್ಪಲ್ ಬಜಾರ್ ನ ನವೀಕೃತ ಮಳಿಗೆ ಶುಭಾರಂಭ

ಪುತ್ತೂರು: ನಯಾ ಚಪ್ಪಲ್ ಬಜಾರ್ನ ನವೀಕೃತ ಮಳಿಗೆಯ ಉದ್ಘಾಟನೆ ಮಾರ್ಚ್ 7ರಂದು ಬೆಳಿಗ್ಗೆ 10ಕ್ಕೆ ದರ್ಬೆ ಬುಶ್ರಾ ಟವರ್ನಲ್ಲಿ ನಡೆಯಲಿದೆ.

1998ರಲ್ಲಿ ಆಗಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರುಗಡೆ ಇದ್ದ ಎ.ಎಂ. ಕಾಂಪ್ಲೆಕ್ಸ್ನಲ್ಲಿ ನಯಾ ಚಪ್ಪಲ್ ಬಜಾರ್ ಕಾರ್ಯಾಚರಣೆ ಆರಂಭಿಸಿತು. ಬಳಿಕ ದರ್ಬೆಯ ಬುಶ್ರಾ ಟವರ್ಗೆ ಸ್ಥಳಾಂತರಗೊಂಡಿತು. ಸುಮಾರು 26 ವರ್ಷಗಳ ಸುದೀರ್ಘ ಪಯಣದಲ್ಲಿ  ಗ್ರಾಹಕರ ಮನಸೂರೆಗೊಂಡಿರುವ ರಫೀಕ್ ಎಂ.ಜಿ. ಮಾಲಕತ್ವದ ನಯಾ ಚಪ್ಪಲ್ ಬಜಾರ್ ಇದೀಗ ಆಧುನಿಕತೆಗೆ ತಕ್ಕಂತೆ ನವೀಕೃತಗೊಂಡು ಶುಭಾರಂಭಗೊಳ್ಳುತ್ತಿದೆ.


ನೂತನ ಸಂಸ್ಥೆಯನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅವರು ನವೀಕೃತ ಮಳಿಗೆಯನ್ನು ಉದ್ಘಾಟಿಸುವರು. ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿರುವರು. ದರ್ಬೆ ಬುಶ್ರಾ ಟವರ್ನ ಮಾಲಕ ಅಬ್ದುಲ್ ಅಜೀಜ್ ಅವರು ಪ್ರಥಮ ಗ್ರಾಹಕರಾಗಿ ಉಪಸ್ಥಿತರಿರುವರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಪುತ್ತೂರು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಹಾಜಿ ಕೆ.ಪಿ., ಮಹಾವೀರ ಮೆಡಿಕಲ್ ಸೆಂಟರಿನ ಡಾ. ಅಶೋಕ್ ಪಡಿವಾಳ್,  ದರ್ಬೆ ಬಿಓಬಿಯ ಸೀನಿಯರ್ ಮ್ಯಾನೇಜರ್ ಸಾದೀಕ್ ಎಸ್.ಎಂ., ಲಿಯೋ ಜಿಲ್ಲಾ ಅಧ್ಯಕ್ಷೆ ಡಾ. ರಂಜಿತಾ ಎಚ್. ಶೆಟ್ಟಿ, ಕ್ರಿಸ್ಟೋಫರ್ ಕಾಂಪ್ಲೆಕ್ಸಿನ ವಲೇರಿಯನ್ ಡಯಾಸ್, ಡಾ. ಜಸ್ಪ್ರಿತ್ ಸಿಂಗ್ ದಿಲ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜಯರಾಜ್ ಭಂಡಾರಿ, ಪುತ್ತೂರು ಅಗ್ರಝೋನ್, ಸಿಝ್ಲರ್ನ ಪಿ.ಎನ್. ಪ್ರಸನ್ನ ಕುಮಾರ್ ಶೆಟ್ಟಿ, ಮದರ್ ಇಂಡಿಯಾದ ಎಂ.ಜಿ. ರಜಾಕ್ ಅತಿಥಿಗಳಾಗಿರುವರು ಎಂದು ಸಂಸ್ಥೆಯ ಮಾಲಕ ಎಂಜಿ ರಫೀಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ತಂಡದ ಕಬಡ್ಡಿ ತರಬೇತುದಾರರಾಗಿ ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆ

Posted by Vidyamaana on 2023-11-26 22:22:27 |

Share: | | | | |


ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ತಂಡದ ಕಬಡ್ಡಿ ತರಬೇತುದಾರರಾಗಿ ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆ

ಪುತ್ತೂರು : ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಲಿಟ್ಲ್ ಫ್ಲವರ್ ಶಾಲೆಯ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಗೊಂಡಿದ್ದಾರೆ.


ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಮಹಾಸಂಸ್ಥಾನದಲ್ಲಿ ನಡೆದ 14 ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆಯ ನೇತೃತ್ವದ ತಂಡ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಜನವರಿ 28 ರಂದು ನಡೆಯುವ 14 ರ ವಯೋಮಾನದ ಬಾಲಕಿಯರ ಕಬಡ್ಡಿ ತಂಡದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಲಿಟ್ಲ್ ಫ್ಲವರ್ ಶಾಲೆಯ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಗೊಂಡಿದ್ದಾರೆ

ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಸರಣಿ ಕಳ್ಳತನ ಸಿ.ಸಿ ಕ್ಯಾಮರಾಕ್ಕೆ ಕವಚ ಹಾಕಿ ನುಗ್ಗಿದ ಕಳ್ಳರು ಆತಂಕದಲ್ಲಿ ವ್ಯಾಪರಸ್ಥರು

Posted by Vidyamaana on 2023-12-26 07:25:23 |

Share: | | | | |


ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಸರಣಿ ಕಳ್ಳತನ ಸಿ.ಸಿ ಕ್ಯಾಮರಾಕ್ಕೆ ಕವಚ ಹಾಕಿ ನುಗ್ಗಿದ ಕಳ್ಳರು  ಆತಂಕದಲ್ಲಿ ವ್ಯಾಪರಸ್ಥರು

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಇರುವ ಹೋಟೆಲ್, ಮೆಡಿಕಲ್‌ ಹಾಗೂ ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.


ಬ.ಸಿ.ರೋಡಿನ ಆನಿಯಾ ದರ್ಬಾರ್ ಹೋಟೆಲಿಗೆ ನುಗ್ಗಿದ ಕಳ್ಳರು ಕ್ಯಾಶ್ ಡ್ರಾಯರ್ ನಲ್ಲಿದ್ದ 70 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಎಗರಿಸಿದ್ದಾರೆ.


ಮುಸುಕುಧಾರಿಯಾಗಿರುವ ಕಳ್ಳನೋರ್ವ ಹೋಟೆಲಿನ ಗೇಟಿನ ಬೀಗವನ್ನು ಬಲವಂತವಾಗಿ ತೆಗೆಯುವ ದೃಶ್ಯ సిసి ಟಿವಿಯಲ್ಲಿ ದೊರಕಿದ್ದು, ಉಳಿದಂತೆ ಒಳ ಪ್ರವೇಶಿಸುವ ಹಂತದಲ್ಲಿ ಸಿಸಿ ಕ್ಯಾಮರಾಕ್ಕೂ ಕವಚ ಹಾಕಿ ನುಗ್ಗಿದ್ದಾನೆ. ಹೋಟೆಲ್ ನ ಇನ್ನೊಂದು ಪಕ್ಕದಲ್ಲಿರುವ ಅಂಗಡಿ, ಮೇಲಂತಸ್ತಿನಲ್ಲಿರುವ ಮೆಡಿಕಲ್ ಗೂ ನುಗ್ಗಿದ್ದಾರೆ.


ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಶೋರೂಂನಿಂದ ತರುತ್ತಿದ್ದ ಹೊಸ ಫಾರ್ಚೂನರ್ ಕಾರು ಬಸ್ ಗೆ ಡಿಕ್ಕಿ

Posted by Vidyamaana on 2024-06-27 12:46:15 |

Share: | | | | |


ಶೋರೂಂನಿಂದ ತರುತ್ತಿದ್ದ ಹೊಸ ಫಾರ್ಚೂನರ್ ಕಾರು ಬಸ್ ಗೆ ಡಿಕ್ಕಿ

ಉಡುಪಿ: ಕುಂದಾಪುರ ಶೋರೂಂನಿಂದ ಮಂಗಳೂರು ಶೋರೂಂನತ್ತ ಹೊಸ ಫಾರ್ಚೂನರ್ ಕಾರನ್ನು ಕೊಂಡೊಯ್ಯುತ್ತಿದ್ದಾಗ ಕಾರು ಚಾಲಕ ನಿಲ್ಲಿಸಿದ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಉಡುಪಿಯ ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.ಢಿಕ್ಕಿ ಹೊಡೆದ ರಭಸಕ್ಕೆ ಹೊಚ್ಚ ಹೊಸ ಫಾರ್ಚೂನ‌ರ್ ಕಾರು ನಜ್ಜುಗುಜ್ಜಾಗಿದೆ.

Recent News


Leave a Comment: