ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


BREAKING : ಭಾರತ ಸೇರಿ ವಿಶ್ವದ್ಯಾಂತ ಮೆಟಾದ ಫೇಸ್ಬುಕ್ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ; ಬಳಕೆದಾರರ ಪರದಾಟ

Posted by Vidyamaana on 2024-03-05 21:38:52 |

Share: | | | | |


BREAKING : ಭಾರತ ಸೇರಿ ವಿಶ್ವದ್ಯಾಂತ ಮೆಟಾದ ಫೇಸ್ಬುಕ್ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ; ಬಳಕೆದಾರರ ಪರದಾಟ

ನವದೆಹಲಿ : ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಭಾರತ ಸೇರಿ ವಿಶ್ವದ್ಯಾಂತ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ.ಪ್ರಪಂಚದಾದ್ಯಂತದ ಬಳಕೆದಾರರು ತಮ್ಮ ಫೇಸ್ಬುಕ್ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸೇರಿದಂತೆ ಕಂಪನಿಯ ಒಡೆತನದ ಇತರ ಸೇವೆಗಳಲ್ಲಿ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ.

ಕಾರ್ಕಳ ಪರಶುರಾಮ ಮೂರ್ತಿ ಮಾಯ

Posted by Vidyamaana on 2023-10-15 16:21:58 |

Share: | | | | |


ಕಾರ್ಕಳ ಪರಶುರಾಮ ಮೂರ್ತಿ ಮಾಯ

ಕಾರ್ಕಳ: ಪ್ರವಾಸಿ ಕೇಂದ್ರ ಪರಶುರಾಮ ಥೀಮ್ ಪಾರ್ಕ್ ನಲ್ಲಿ ದಿಢೀರ್ ಆಗಿ ಪರುಶುರಾಮ ಮೂರ್ತಿ ಕಾಣೆಯಾಗಿದ್ದು, ಮತ್ತೆ ವಿವಾದಕ್ಕೆ ಒಳಗಾಗಿದೆ. ಎರಡು ದಿನಗಳಿಂದ ಮೂರ್ತಿಯ ಸುತ್ತ ಕಪ್ಪು ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು ಪತ್ತೆಯಾಗಿತ್ತು. ಇದೀಗ ಡ್ರೋಣ್ ಕ್ಯಾಮರಾದಲ್ಲಿ ಕಪ್ಪು ಪ್ಲ್ಯಾಸ್ಟಿಕ್ ಹೊದಿಕೆಯ ಒಳಗಿನ ಅಸಲಿ ಬಣ್ಣ ಬಯಲಾಗಿದ್ದು, ಪರಶುರಾಮ ಮೂರ್ತಿಯ ಪಾದ ಮತ್ತು ಕಾಲು ಬಿಟ್ಟು ಮೇಲಿನ ಭಾಗ ಮಾಯವಾಗಿರುವುದು ಕಂಡುಬಂದಿದೆ.


ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಲಾಗಿರುವ ಪರುಶುರಾಮನ ಮೂರ್ತಿ ನಕಲಿ ಎನ್ನುವ ಬಗ್ಗೆ ಭಾರೀ ಆರೋಪ ಕೇಳಿಬಂದಿತ್ತು. ಇದೀಗ ಮೂರ್ತಿ ನಾಪತ್ತೆ ಆಗುತ್ತಲೇ ಹೋರಾಟಗಾರರು ಮೂರ್ತಿ ಕಾಣೆಯಾಗಿದೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೂರ್ತಿ ತೆರವು ಹಿನ್ನೆಲೆಯಲ್ಲಿ ಉಮ್ಮಿಕಲ್ ಬೆಟ್ಟಕ್ಕೆ ಕಾಂಗ್ರೆಸ್‌ ಮುಖಂಡ ಉದಯ ಕುಮಾರ್‌ ಶೆಟ್ಟಿ ಭೇಟಿ ನೀಡಿದ್ದು ಶಾಸಕ ಸುನಿಲ್ ಕುಮಾರ್ ಬಗ್ಗೆ ಆರೋಪ ಮಾಡಿದ್ದಾರೆ.ಪರಶುರಾಮನ ಕಂಚಿನ ಮೂರ್ತಿಯ ಕಾಲಿನ ಭಾಗ ಮಾತ್ರವಿದ್ದು, ದೇಹದ ಉಳಿದ ಭಾಗ ತೆರವು ಮಾಡಲಾಗಿದೆ. ಜಿಲ್ಲಾ ನಿರ್ಮಿತಿ ಕೇಂದ್ರದ ಮೇಲ್ವಿಚಾರಣೆಯಲ್ಲಿ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಮೂರ್ತಿ ತೆರವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಜನರ ದಿಕ್ಕು ತಪ್ಪಿಸಿ ಕಾಮಗಾರಿ ನಡೆಸುವ ಅಗತ್ಯ ಇಲ್ಲ. ಈ ಬಗ್ಗೆ ಎನ್‌ಐಟಿಕೆ ಹಾಗೂ ಎಂಐಟಿ ತಂತ್ರಜ್ಞರ ತಂಡ ಅಗಮಿಸಿ ಮೂರ್ತಿಯ ಅಡಿಪಾಯ ಪರಿಶೀಲನೆ ನಡೆಸಬೇಕು ಎಂದು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.


ಮೂರ್ತಿಯ ಮೇಲಿನ ಭಾಗ ಫೈಬರ್ ನಿಂದ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತನ್ನು ಹೋರಾಟಗಾರರು ಹೇಳಿಕೊಂಡಿದ್ದರು. ಇದೀಗ ಮೂರ್ತಿಯನ್ನು ತೆರವುಗೊಳಿಸಿ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ನಾನಾ ರೀತಿಯ ಶಂಕೆಗೆ ಕಾರಣವಾಗಿದೆ

ಜಂಟಿ ಅಧಿವೇಶನ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣದ ಹೈಲೆಟ್ಸ್‌

Posted by Vidyamaana on 2023-07-03 07:58:57 |

Share: | | | | |


ಜಂಟಿ ಅಧಿವೇಶನ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣದ ಹೈಲೆಟ್ಸ್‌

ಬೆಂಗಳೂರು : ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಮಾತನಾಡಿದ ಅವರು ಕುವೆಂಪು ಸೇರಿದಂತೆ ನಾಡಿನ ನಾನಾ ಕವಿಗಳ ಆಶಯವನ್ನು ತಿಳಿಸಿದರು.ಇನ್ನೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸರ್ಕಾರವನ್ನು ನಡೆಸಲಾಗುವುದು ಅಂಥ ತಿಳಿಸಿದರು.ಇನ್ನೂ ರಾಜ್ಯದ ಸರ್ವೋತ್ತಮ ಅಭಿವೃದ್ದಿಗೆ ಬದ್ದವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಪ್ರಯತ್ನ ನಡೆಸಲಾಗುವುದು ಅಂತ ತಿಳಿಸಿದರು. ಅನ್ನದಾತನದ ಯೋಜನೆ ಮೂಲಕ ಎಲ್ಲರಿಗೂ 5 ಕೆಜಿ ಅಕ್ಕಿಯನ್ನು ನೀಡಲಾಗುವುದು ಅಂಥ ತಿಳಿಸಿದ ಅವರು ಈ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ಮಾಡಲಾಗುವುದು ಅಂತ ತಿಳಿಸಿದರು. ಈ ಯೋಜನೆ ಆರಂಭದಲ್ಲಿ ಸದ್ಯ ಹಣವನ್ನು ಡಿಬಿಟಿ ಮೂಲಕ ಹಣವನ್ನು ನೀಡಲಾಗುವುದು. ಇಂದಿರಾ ಕ್ಯಾಂಟಿನ್‌ ಮೂಲಕ ಹಸಿವು ನೀಗಿಸುವುದಕ್ಕೆ ಮುಂದಾಗಿದ್ದಾವೆ ಅಂತ ತಿಳಿಸಿದ ಅವರು


ಅನ್ನದಾತನದ ಯೋಜನೆ ಮೂಲಕ ಎಲ್ಲರಿಗೂ 5 ಕೆಜಿ ಅಕ್ಕಿಯನ್ನು ನೀಡಲಾಗುವುದು ಅಂಥ ತಿಳಿಸಿದ ಅವರು ಈ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ಮಾಡಲಾಗುವುದು ಅಂತ ತಿಳಿಸಿದರು. ಈ ಯೋಜನೆ ಆರಂಭದಲ್ಲಿ ಸದ್ಯ ಹಣವನ್ನು ಡಿಬಿಟಿ ಮೂಲಕ ಹಣವನ್ನು ನೀಡಲಾಗುವುದು. ಇಂದಿರಾ ಕ್ಯಾಂಟಿನ್‌ಮೂಲಕ ಹಸಿವು ನೀಗಿಸುವುದಕ್ಕೆ ಮುಂದಾಗಿದ್ದಾವೆ ಅಂತ ತಿಳಿಸಿದ ಅವರು ಯುವ ಜನತೆಗೆ ಹಣವನ್ನು ನೀಡಲಾಗುವುದು ಈ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುವುದು ಅಂದರು. ಇನ್ನೂ ಗೃಹ ಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್‌ ನೀಡಲಾಗುವುದು, ಇದಲ್ಲದೇ ಗೃಹ ಲಕ್ಮಿ ಯೋಜನಡೆ ಅಡಿಯಲ್ಲಿ, ಮಹಿಳೆಯರ ಆರ್ಥೀಕ ಪರಿಸ್ಥಿತಿಯನ್ನು ಉತ್ತಮಗೊಳಿಸಲಾಗುವುದು ಅಂತ ತಿಳಿಸಿದರು. ಇದು ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದು ಅಂತ ತಿಳಿಸಿದರು. ನಮ್ಮ ಸರ್ಕಾರವು ಎಲ್ಲಾ ಜಾತಿ, ವರ್ಗದವರಿಗೆ ಜನ ಕಲ್ಯಾಣಕ್ಕೆ ಶ್ರಮಿಸುವೆ ಅಂಥ ತಿಳಿಸಿದರು.ಅಧುನಿಕ ನಿರ್ಮಾಣ ಮಾಡುವುದು ನಮೆಲ್ಲರ ಆಶಯವಾಗಿದೆ, ಇದಕ್ಕೆ ನಾವು ಬದ್ದರಾಗಿದ್ದೇವೆ ಅಂದ್ರು. ಶಿಕ್ಷಣ ನೀಡುವುದು ನಮ್ಮ ಅದ್ಯತೆ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರ ಸಹಕರದೊಂದಿಗೆ ಮಕ್ಕಳಿಗೆ ಬೇಕಾಗಿರುವ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಾಗುವುದು. ರಾಜ್ಯದ ರೈತರ ಅಭಿವೃದ್ದಿಗೆ ನಾವು ಕಠಿ ಬದ್ದರಾಗಿದ್ದೇವೆ ಅಂತ ತಿಳಿಸಿದರು. ಬಡತನ ಕೆಳಗೆ ಇರುವವರಿಗೆ ಮನೆಯನ್ನು ನೀಡಲಾಗುವುದು, ಇದಲ್ಲದೇ ಹೈನುಗಾರಿಕೆಯಲ್ಲಿ ಮುಂದುವರೆದ ನೀತಿಯನ್ನು ಅನುಸರಿಸಿಕೊಳ್ಳಲಾಗುವುದು ಅಂತ ತಿಳಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಕ್ಷಮೆ ಕೇಳಿದ ಪುತ್ತಿಲ ಅಭಿಮಾನಿ

Posted by Vidyamaana on 2023-10-09 20:39:31 |

Share: | | | | |


ಶಾಸಕ ಅಶೋಕ್ ಕುಮಾರ್ ರೈ ಕ್ಷಮೆ ಕೇಳಿದ ಪುತ್ತಿಲ ಅಭಿಮಾನಿ


ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಹಾಕಲಾಗಿದ್ದ ಸುವೋ ಮೋಟೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೀಡಿಯೋ ಬಿಟ್ಟಿದ್ದ ಪುತ್ತಿಲ ಅಭಿಮಾನಿಯೋರ್ವರು ಇದೀಗ ಕ್ಷಮೆ ಯಾಚಿಸಿದ್ದಾರೆ.

"ಪ್ರೀತಿದ ಶಾಸಕರೇ, ಈರ್ ಸರಕಾರದ ಒಂಜಿ ಭಾಗ ಪನ್ಪುನ ದೃಷ್ಟಿಡ್ದ್, ವಿಷಯ ತೆರಿಪಾವುನ ಬೇಲೆ ಮನ್ತೆ. ಆಂಡ ಅಯ್ನ್ ಅಪಗನೆ ಡಿಲೀಟ್ ಮನ್ತೆ. ಅಂಚ ವೀಡಿಯೋ ಪಾಡುನ ಬೋಡ್ಚಿ ಪಂಡ್ದ್ ಪಂಡೆರ್. ವೈರಲ್ ಮನ್ಪುನ ಎಂಚಾಂದ್ ಎಂಕ್ ತೆರಿದಿಜ್ಜಿ. ಶಾಸಕರೇ, ಈರ್ ಎನಾಡ್ದ್ ಹಿರಿಯರಾದುಲ್ಲಾರ್, ಎನ್ನ ಪಾತೆರಡ್ದ್ ಬೇಜರಾದಿತ್ಂಡ ಕ್ಷಮೆ ಕೇನುವೆ."

ಹೀಗೆ ಗಣೇಶ್ ವಿದ್ಯಾಪುರ ಎನ್ನುವ ವ್ಯಕ್ತಿಯೋರ್ವರು ವೀಡಿಯೋ ಹಂಚಿಕೊಂಡಿದ್ದಾರೆ. ಶಿವಮೊಗ್ಗದ ಘಟ‌ನೆ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಸುವೋ ಮೋಟೊ ಪ್ರಕರಣ ದಾಖಲಿಸಲಾಗಿತ್ತು. ಆಗ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಹೆಸರು ಹೇಳಿ ವೀಡಿಯೋ ಮಾಡಿದ್ದ ಇದೇ ಯುವಕ, ಈಗ ಕ್ಷಮೆ ಕೇಳಿದ್ದಾರೆ.

ಮಂಗಳೂರು: ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ಅರೋಪ; ಮಹಿಳೆಯರಿಂದ ವ್ಯಕ್ತಿಗೆ ಬಿತ್ತು ಗೂಸಾ

Posted by Vidyamaana on 2024-07-14 21:14:28 |

Share: | | | | |


ಮಂಗಳೂರು: ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ಅರೋಪ; ಮಹಿಳೆಯರಿಂದ ವ್ಯಕ್ತಿಗೆ ಬಿತ್ತು ಗೂಸಾ

ಮಂಗಳೂರು : ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೋರ್ವನಿಗೆ ಮಹಿಳೆಯರು ಸೇರಕೊಂಡು ಬಸ್​ನಲ್ಲೇ ಗೂಸಾ ಕೊಟ್ಟ ಘಟನೆ ಬೆಂಗಳೂರಿನಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ನಡೆದಿದೆ. ಕೆಎಸ್​ಆರ್​ಟಿಸಿ ಬಸ್​ನಲ್ಲಿ ಆರೋಪಿ ಪ್ರಯಾಣ ಮಾಡುತ್ತಿದ್ದ

77ನೇ ಸ್ವಾತಂತ್ರ್ಯೋತ್ಸವ ಆಚರಣೆಗಾಗಿ ಆಕರ್ಷಣ್ ಇಂಡಸ್ಟ್ರೀಸ್ ನೀಡಿದೆ ವಿಶೇಷ ಕೊಡುಗೆ

Posted by Vidyamaana on 2024-08-10 05:25:50 |

Share: | | | | |


77ನೇ ಸ್ವಾತಂತ್ರ್ಯೋತ್ಸವ ಆಚರಣೆಗಾಗಿ ಆಕರ್ಷಣ್ ಇಂಡಸ್ಟ್ರೀಸ್ ನೀಡಿದೆ ವಿಶೇಷ ಕೊಡುಗೆ

ಪುತ್ತೂರು: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರಿನ ಪ್ರತಿಷ್ಠಿತ ಆಕರ್ಷಣ್ ಇಂಡಸ್ಟ್ರೀಸ್ ವಿಶೇಷ ಕೊಡುಗೆಗಳನ್ನು ಗ್ರಾಹಕರ ಕೈಗೆ ನೀಡುತ್ತಿದೆ. ಅದರಲ್ಲೂ, ಸೈನಿಕರಿಗಾಗಿ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ.

ಈ ಎಲ್ಲಾ ಕೊಡುಗೆಗಳು ಆಗಸ್ಟ್ 10ರಿಂದ 14ರವರೆಗೆ ಅಂದರೆ ಕೇವಲ 5 ದಿನಗಳು ಮಾತ್ರ ಇರಲಿವೆ.

ಆಕರ್ಷಣ್ ರೆಡಿವಾಲ್:

ರೆಡಿವಾಲ್ – ರೆಡಿಮೇಡ್ ಕಂಪೌಂಡ್ ಗಳಿಗೆ ಇಗೀಗ ಹೆಚ್ಚಿನ ಬೇಡಿಕೆ ಕೇಳಿಬರುತ್ತಿದೆ. ಈ ಆಫರ್ ನಡಿ ನೀವು ಖರೀದಿ ಮಾಡಿದರೆ ರೆಡಿವಾಲ್ – ರೆಡಿಮೇಡ್ ಕಂಪೌಂಡ್ ಗಳನ್ನು ಉಚಿತವಾಗಿ ಅಳವಡಿಸಿಕೊಡಲಾಗುವುದು. ಇದರೊಂದಿಗೆ ಬೇಲಿಕಂಬ, ಪೆಪ್ಪರ್ ಪೋಲ್ (PEPPER POLE) ಅನ್ನು ಬುಕ್ ಮಾಡಿದಲ್ಲಿ, ಸಾಗಾಟದ ವೆಚ್ಚವನ್ನು ಉಚಿತವಾಗಿ ಪಡೆಯಬಹುದು.

ನಿಮ್ಮ ಮನೆಗೆ ಕೇವಲ ಎರಡೇ ದಿನದಲ್ಲಿ ಕಂಪೌಂಡ್ ನಿರ್ಮಿಸಲು ಸಾಧ್ಯ ಎನ್ನುವುದನ್ನು ಆಕರ್ಷಣ್ ರೆಡಿವಾಲ್ ನಿರೂಪಿಸಿದೆ. Prestressed Technologyಯಿಂದ ತಯಾರಿಸಿದ ಉತ್ಕೃಷ್ಟ ಗುಣಮಟ್ಟದ ಕಂಬಿಯನ್ನು ಉಪಯೋಗಿಸಿ ತಯಾರಿಸಿದ ರೆಡಿವಾಲ್ ರೆಡಿಮೇಡ್ ಕಂಪೌಂಡ್ ಬೇಡಿಕೆಯ ಉತ್ಪನ್ನವಾಗಿದೆ.

ಪೆಪ್ಪರ್ ಪೋಲ್ (Pepper Pole)


Recent News


Leave a Comment: