ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ನೆಲ್ಯಾಡಿ: ನಕಲಿ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚನೆ-ಆರೋಪಿಗಳ ಬಂಧನ

Posted by Vidyamaana on 2024-02-03 22:41:50 |

Share: | | | | |


ನೆಲ್ಯಾಡಿ: ನಕಲಿ ಬಳೆಗಳನ್ನು ಅಡವಿಟ್ಟು  ಸಾಲ ಪಡೆದು ವಂಚನೆ-ಆರೋಪಿಗಳ ಬಂಧನ

ಪುತ್ತೂರು: ನಕಲಿ ಬಳೆಗಳನ್ನು ಅಡವಿಟ್ಟು ಸಹಕಾರಿ ಸಂಘದಿಂದ ಸಾಲ ಪಡೆದು ವಂಚಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನೆಲ್ಯಾಡಿ ಗ್ರಾಮದ ಪಡ್ಡಡ್ಕ ನಿವಾಸಿ ಸೆಬಾಸ್ಟಿನ್ ಹಾಗೂ ಕೇರಳ ನಿವಾಸಿ ಡಾನಿಶ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಜ.27ರಂದು ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರ ಸಂಘದಲ್ಲಿ ಮೇಲ್ನೋಟಕ್ಕೆ ನಕಲಿ ಎಂದು ಕಂಡುಬಾರದಂತಹ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡಮಾನವಿರಿಸಿ, ಸಂಘದಿಂದ ರೂ.1.40 ಲಕ್ಷ ಪಡೆದು ಮೋಸ ಮಾಡಿದ್ದರು. ಈ ಬಗ್ಗೆ ಸಂಘದ ಪ್ರಧಾನ ವ್ಯವಸ್ಥಾಪಕಿ ಚೈತನ್ಯ ಸಿ.ಹೆಚ್.ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಇನ್ನಷ್ಟು ಸಂಘಗಳಿಗೆ ವಂಚನೆ:

ಸಹಕಾರ ಸಂಘಗಳಲ್ಲಿ ನಕಲಿ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚಿಸುತ್ತಿರುವ ಕೇರಳದ ಜಾಲವೊಂದು ದ.ಕ.ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಈ ಜಾಲದ ಸದಸ್ಯರು ನೆಲ್ಯಾಡಿ, ಕಡಬ, ಉಪ್ಪಿನಂಗಡಿಯ ಹಲವು ಸಹಕಾರಿ ಸಂಘಗಳಲ್ಲಿ ನಕಲಿ ಬಳೆಗಳನ್ನು ಅಡವಿಟ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಲ್ಲಿ ವಂಚನೆಯ ಜಾಲದ ಬಗ್ಗೆ ಇನ್ನಷ್ಟೂ ಮಾಹಿತಿ ಸಿಗುವ ಸಾಧ್ಯತೆ ಇದೆ

ಏ.10 ರಿಂದ 17 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಗೊನೆ ಮುಹೂರ್ತ

Posted by Vidyamaana on 2023-04-01 05:58:56 |

Share: | | | | |


ಏ.10 ರಿಂದ 17 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಗೊನೆ ಮುಹೂರ್ತ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ಬರ ದೇವಸ್ಥಾನದಲ್ಲಿ ಏ.10 ರಿಂದ 17 ರ ತನಕ ನಡೆಯುವ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಶನಿವಾರ ನಡೆಯಿತು.

ಬೆಳಿಗ್ಗೆ ಶ್ರೀ ದೇವಸ್ಥಾನದ ಗರ್ಭಗುಡಿ ಎದುರು ಪ್ರಾರ್ಥನೆ ನೆರವೇರಿಸಿದ ಬಳಿಕ ದೇವಸ್ಥಾನದ ಪಕ್ಕದ ತೋಟವೊಂದರಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಗೊನೆ ಮುಹೂರ್ತ ನೆರವೇರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಡಾ.ಸುಧಾ ಎಸ್.ರಾವ್, ವೀಣಾ ಬಿ.ಕೆ., ಪ್ರಧಾನ ಅರ್ಚಕ ವಸಂತ ಕೆದಿಲಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಅರಿಯಡ್ಕ: ದಲಿತ ಕಾಲನಿಗೆ ಅಶೋಕ್ ರೈ ಭೇಟಿ ಮತ ಯಾಚನೆ

Posted by Vidyamaana on 2023-04-26 06:37:19 |

Share: | | | | |


ಅರಿಯಡ್ಕ: ದಲಿತ ಕಾಲನಿಗೆ ಅಶೋಕ್ ರೈ ಭೇಟಿ ಮತ ಯಾಚನೆ

ಪುತ್ತೂರು: ಅರಿಯಡ್ಕ ಗ್ರಾಮದ ಶೇಕಮಲೆ ದಲಿತ ಕಾಲನಿಗೆ ಕಾಂಗ್ರೆಸ್  ಅಭ್ಯರ್ಥಿ ಅಶೋಕ್ ರೈ ಭೇಟಿ ನೀಡಿ ಮತ ಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲನಿಗೆ ತೆರಳುವ ರಸ್ತೆಯಲ್ಲಿ ಹೊಳೆ ಇದ್ದು ಅದಕ್ಕೆ ಸೇತುವೆ ಇಲ್ಲದೆ ಸಮಸ್ಯೆಯಾಗಿದ್ದು ಮಳೆಗಾಲದಲ್ಲಿ ಶಾಲೆಗೆ ಮಕ್ಕಳು ತೆರಳಲೂ ಸಾಧ್ಯವಾಗುತ್ತಿಲ್ಲ. ಸೇತುವೆ ನಿರ್ಮಾಣ ಮಾಡಿಕೊಡುವಂತೆ ಕಾಲನಿ ನಿವಾಸಿಗಳು ಮನವಿ ಮಾಡಿದರು.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 24

Posted by Vidyamaana on 2023-09-24 04:48:01 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 24

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 24 ರಂದು



*ಬೆಳಿಗ್ಗೆ  9 ಗಂಟೆಗೆ ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ*


 *ಬೆಳಿಗ್ಗೆ 11 ಗಂಟೆಗೆ ಕೋಡಿಂಬಾಡಿ ಮಹಿಷ‌ಮರ್ಧಿನಿ ದೇವಸ್ಥಾನದಲ್ಲಿ‌ ನವರಾತ್ರಿ ಆಮಂತ್ರಣ ಪತ್ರ ಬಿಡುಗಡೆ*



*12.30 ಕ್ಕೆ ಮುಂಡೂರು ನೂತನ ರಸ್ತೆ  ಉದ್ಘಾಟನೆ*


*ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ ಮಹಿಳಾ ಘಟಕ ರಚನೆ ಕೆಯ್ಯೂರಿನಲ್ಲಿ*



*3.00 ಕ್ಕೆ ಕೊಳ್ತಿಗೆಯಲ್ಲಿ‌ವಲಯ ಕಾಂಗ್ರೆಸ್ ಸಭೆ*


*ಸಂಜೆ 7 ಗಂಟೆಗೆ ಮೊಟ್ಟೆತ್ತಡ್ಕದಲ್ಲಿ‌ಮಸೀದಿ‌ಕಟ್ಟಡ ಉದ್ಘಾಟನ ಕಾರ್ಯಕ್ರಮ ದಲ್ಲಿ 


  ಭಾಗವಹಿಸಲಿದ್ದಾರೆ

BREAKING: ಹೆಲಿಕಾಪ್ಟ‌ರ್ ಪತನ, ಇರಾನ್ ಅಧ್ಯಕ್ಷರು ಸೇರಿದಂತೆ ಎಲ್ಲರೂ ದುರ್ಮರಣ!

Posted by Vidyamaana on 2024-05-20 09:24:27 |

Share: | | | | |


BREAKING: ಹೆಲಿಕಾಪ್ಟ‌ರ್ ಪತನ, ಇರಾನ್ ಅಧ್ಯಕ್ಷರು ಸೇರಿದಂತೆ ಎಲ್ಲರೂ ದುರ್ಮರಣ!

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಪತ್ತೆಯಾಗಿದೆ ಆದರೆ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಇರಾನ್ನ ರೆಡ್ ಕ್ರೆಸೆಂಟ್ ಮುಖ್ಯಸ್ಥರು ಹೇಳಿದ್ದಾರೆ.ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವ ಹುಸೇನ್ ಅಮಿರಾಬ್ಡೊಲ್ಲಿಯನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತದ ಸ್ಥಳದಲ್ಲಿ ಬದುಕುಳಿದವರು ಕಂಡುಬಂದಿಲ್ಲ ಎಂದು ಇರಾನಿನ ಸರ್ಕಾರಿ ಮಾಧ್ಯಮ ಸೋಮವಾರ ತಿಳಿಸಿದೆ.

ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

Posted by Vidyamaana on 2023-10-31 16:39:21 |

Share: | | | | |


ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

ಪುತ್ತೂರು: ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಅ.೩೦ರಂದು ಮಿತ್ತೂರಿನಲ್ಲಿ ಶುಭಾರಂಭಗೊಂಡಿತು.


ಸಂಸ್ಥೆಯ ಕಛೇರಿಯನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಯಶಸ್ಸು ಕಾಣಬೇಕಾದರೆ ಪ್ರಾಮಾಣಿಕತೆ ಮುಖ್ಯ, ಪ್ರಾಮಾಣಿಕ ವ್ಯವಹಾರವನ್ನು ನಾವು ಮಾಡಿದಾಗ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ, ಜನರ ವಿಶ್ವಾಸವೇ ಉದ್ಯಮದ ಯಶಸ್ಸಿನ ಮೂಲ ಎಂದು ಅವರು ಹೇಳಿದರು.


ನಾವು ಮಾಡುವ ವ್ಯವಹಾರವನ್ನು ನಾವು ಪ್ರೀತಿಸಬೇಕು, ಆಗ ಆ ವ್ಯವಹಾರ ಯಶಸ್ಸು ಕಾಣುತ್ತದೆ ಎಂದು ಹೇಳಿದ ಶಾಸಕರು ಭಾರತ್ ವೆಹಿಕಲ್ ಬಜಾರ್ ಅತ್ಯುತ್ತಮ ವ್ಯವಹಾರದ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳಗಲಿ ಶುಭ ಹಾರೈಸಿದರು.

ಎಚ್.ಎಂ.ಎಸ್ ಗ್ರೂಪ್ ಬೆಂಗಳೂರು ಇದರ ಸುಭೋದ್ ಬಿ ಶೆಟ್ಟಿ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಮೂಲಕ ಉತ್ತಮ ವಿಶ್ವಾಸಾರ್ಹ ವ್ಯವಹಾರದ ಮೂಲಕ ವಾಹನಗಳ ಖರೀದಿ, ಮಾರಾಟ ವ್ಯವಹಾರ ನಡೆಯಲಿದ್ದು ಜನರು ಪೂರ್ಣ ವಿಶ್ವಾಸದೊಂದಿಗೆ ಇಲ್ಲಿ ವ್ಯವಹರಿಸಬಹುದಾಗಿದೆ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು.

ವಾಹನಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿದ ಸಯ್ಯದ್ ಮಹಮ್ಮದ್ ಮಿಹ್ರಾಜ್ ಅಲ್ ಹಾದಿ ಅಲ್ ಅಶ್‌ಅರಿ ತಂಙಳ್ ಮಾತನಾಡಿ ವಿಶ್ವಾಸಾರ್ಹ ವ್ಯವಹಾರದ ಮೂಲಕ ಭಾರತ ವೆಹಿಕಲ್ ಬಜಾರ್ ಜನರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಸರ್ವೀಸ್ ಘಟಕವನ್ನು ಉದ್ಘಾಟಿಸಿದ ತುಮಕೂರಿನ ಉದ್ಯಮಿ ಸುರೇಶ್ ಬಿ.ಎಸ್ ಮಾತನಾಡಿ ನೂತನವಾಗಿ ಶುಭಾರಂಭಗೊಂಡ ಭಾರತ್ ವೆಹಿಕಲ್ ಬಜಾರ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.


ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತಾ ಡಿ ಪೂಜಾರಿ ಮಾತನಾಡಿ ಸೇವೆ, ವಿಶ್ವಾಸ, ವ್ಯವಹಾರ ಇದು ಉತ್ತಮವಾಗಿದ್ದಾಗ ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.


ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಶುಭಾರಂಭಗೊಂಡಿರುವುದು ಅತೀವ ಸಂತಸ ತಂದಿದೆ. ಇದರ ಮಾಲಕರಾದ ಅಶ್ರಫ್ ಅವರು ವೆಹಿಕಲ್ ವ್ಯವಹಾರದಲ್ಲಿ ಈಗಾಗಲೇ ಛಾಪು ಮೂಡಿಸಿದ್ದು ಈ ಸಂಸ್ಥೆ ಯಶಸ್ಸು ಕಾಣಲಿದೆ ಎಂದು ಹೇಳಿ ಶುಭ ಹಾರೈಸಿದರು.

ಯುವ ಉದ್ಯಮಿ ಬಾತಿಷಾ ಅಳಕೆಮಜಲು ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಪ್ರಾಮಾಣಿಕ ವ್ಯವಹಾರದ ಮೂಲಕ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.


ಸಂಸ್ಥೆಯ ಕಟ್ಟಡದ ಮಾಲಕ ಎ ವೆಂಕಪ್ಪ ನಾಯ್ಕ, ಕೊಡಾಜೆ ಮದ್ರಸದ ಅಧ್ಯಾಪಕ ಜಾಫರ್ ಸಾದಿಕ್ ಅರ್ಷದಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್ ಹರೀಶ್ ಎಂ ಶೆಟ್ಟಿ ಮಾತನಾಡಿ ವ್ಯವಹಾರದಲ್ಲಿ ಹಣಕ್ಕಿಂತಲೂ ಹೆಚ್ಚಾಗಿ ವಿಶ್ವಾಸ ಮುಖ್ಯವಾಗಿದ್ದು ೨೦೦೬ರಲ್ಲಿ ಸಣ್ಣ ಮಟ್ಟಿನಲ್ಲಿ ಪ್ರಾರಂಭಿಸಿದ ನಮ್ಮ ಸಂಸ್ಥೆ ಜನರ ವಿಶ್ವಾಸ ಗಳಿಸಿದ ಸಂಸ್ಥೆಯಾಗಿದೆ. ಅಶ್ರಫ್ ಪುತ್ತೂರು ಮತ್ತು ನಮ್ಮದು ಆಕಸ್ಮಿಕ ಭೇಟಿಯಾಗಿದ್ದು ಅವರ ಆಲೋಚನೆಯಂತೆ ನಾವು ಗೂಡ್ಸ್ ಮತ್ತು ಕಾರು, ದ್ವಿಚಕ್ರ ವಾಹನಗಳ ಸೆಕೆಂಡ್ ಹ್ಯಾಂಡ್ ವೆಹಿಕಲ್ ಯಾರ್ಡ್ ಪ್ರಾರಂಭಿಸಿದ್ದೇವೆ. ನಾವು ಅಭಿವೃದ್ಧಿ ಆಗುವುದರ ಜೊತೆಗೆ ಗ್ರಾಹಕರು ಕೂಡಾ ಅಭಿವೃದ್ಧಿ ಕಾಣಬೇಕೆನ್ನುವುದು ನಮ್ಮ ಕನಸಾಗಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.


ಖಾಝಿ ಝಯ್ನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಆಗಮಿಸಿ ಶುಭ ಹಾರೈಸಿದರು

ಗೌರವಾರ್ಪಣಾ ಕಾರ್ಯಕ್ರಮ

ಸಾನ್ವಿ ಇಂಜಿನಿಯರಿಂಗ್ ವರ್ಕ್ಸ್ ಕಬಕ ಇದರ ಮನೋಹರ ಶೆಟ್ಟಿ, ಪೈಂಟರ್ ಹರೀಶ್ ನಾಯ್ಕ ಹಾಗೂ ವಿನಾಯಕ ಬೆಸ್ಟ್ ಮಾರುತಿ ಪಾಯಿಂಟ್ ಕಬಕ ಇದರ ದಿನೇಶ್ ಪಿ ಅವರನ್ನು  ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್, ಉದ್ಯಮಿ ಹರೀಶ್ ಎಂ ಶೆಟ್ಟಿ ಅವರನ್ನು ಇದೇ ವೇಳೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು


 


ಸಯ್ಯದ್ ಇಬ್ರಾಹಿಂ ಹಂಝ ತಂಙಳ್ ಪಾಟ್ರಕೋಡಿ ದುವಾ ನೆರವೇರಿಸಿದರು.


ವೇದಿಕೆಯಲ್ಲಿ ಶಾಂತ ಬಿ ಹರೀಶ್ ಶೆಟ್ಟಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಾಜೆ(ರಾಜ್‌ಕಮಲ್), ಮಿತ್ತೂರು ಶುಭೋದಯ ಫ್ಯೂಯಲ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ನ್ಯಾಯವಾದಿ ರಮಾನಾಥ ರೈ ಆಗಮಿಸಿ ಶುಭ ಹಾರೈಸಿದರು.


ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ಪುತ್ತೂರು ಅತಿಥಿಗಳನ್ನು ಸತ್ಕರಿಸಿ ಸ್ಮರಣಿಕೆ ನೀಡಿ ಗೌರವಿಸಿದರು.


ಯೂಸುಫ್ ರೆಂಜಲಾಡಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಕಲ್ಲಡ್ಕ, ಶರೀಫ್ ಮಿತ್ತೂರು ಬಡಾಜೆ, ಆಸಿಫ್ ಮಠ, ಅಬ್ದುಲ್ ಖಾದರ್ ಕಬಕ ಸಹಕರಿಸಿದರು.

ಮೂರು ವಾಹನಗಳ ಮಾರಾಟ:

ಶುಭಾರಂಭ ದಿನದಂದೇ ಮೂರು ವಾಹನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಯಿತು. ಖರೀದಿಸಿದ ಮೂವರಿಗೂ ಗಿಫ್ಟ್ ನೀಡಿ ಗೌರವಿಸಲಾಯಿತು



Leave a Comment: