ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಪತ್ನಿ ಕೊಂದು ಪೊಲೀಸ್​ ಠಾಣೆಗೆ ಶರಣಾಗಲು ತೆರಳುತ್ತಿದ್ದ ಪತಿ ಅಪಘಾತಕ್ಕೆ ಬಲಿ

Posted by Vidyamaana on 2023-09-02 05:48:16 |

Share: | | | | |


ಪತ್ನಿ ಕೊಂದು ಪೊಲೀಸ್​ ಠಾಣೆಗೆ ಶರಣಾಗಲು ತೆರಳುತ್ತಿದ್ದ ಪತಿ ಅಪಘಾತಕ್ಕೆ ಬಲಿ

ಆದಿಲಾಬಾದ್​: ಮದುವೆಯಾದ ಮೂರ್ನಾಲ್ಕು ತಿಂಗಳಲ್ಲೇ ಪತ್ನಿಯನ್ನು ಬರ್ಬರವಾಗಿ ಕೊಂದು ಪೊಲೀಸ್​ ಠಾಣೆಗೆ ಶರಣಾಗಲು ತೆರಳುತ್ತಿದ್ದ ವೇಳೆ ಆತನು ಸಹ ಅನಿರೀಕ್ಷಿತವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಆದಿಲಾಬಾದ್’ನಲ್ಲಿ ನಡೆದಿದೆ.


ಪತ್ನಿ ದೀಪಾಳನ್ನು ಕೊಲೆಗೈದು ಬೈಕಿನಲ್ಲಿ ಠಾಣೆಗೆ ತೆರಳಿದ ಅರುಣ್ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅರುಣ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.


ಈ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಪೊಲೀಸ್​ ಅಧಿಕಾರಿ ಎಂ.ಅಶೋಕ್ ಹಾಗೂ ಸ್ಥಳೀಯರ ಪ್ರಕಾರ, ಮೇ 11ರಂದು ನಿಜಾಮಾಬಾದ್ ಜಿಲ್ಲೆಯ ಬಾಲ್ಕೊಂಡದ ಚೌಹಾಣ್ ಲಕ್ಷ್ಮಿ ಮತ್ತು ಗೋಪಿಚಂದ್ ಅವರ ಕಿರಿಯ ಪುತ್ರಿ ದೀಪಾ ಅವರು ಆದಿಲಾಬಾದ್ ಉಪನಗರ ಬಂಗಾರಗುಡ್ಡದ ಮೋಹಿತೆ ಅರುಣ್ ಅವರೊಂದಿಗೆ ವಿವಾಹವಾಗಿದ್ದರು. ಮದುವೆಯಾಗಿ ಒಂದು ವಾರದ ಬಳಿಕ ಅರುಣ್ ಪತ್ನಿಗೆ ಅನುಮಾನದಿಂದ ಕಿರುಕುಳ ನೀಡಲಾರಂಭಿಸಿದ್ದ. ಆಗಾಗ ಜಗಳ ಮಾಡುತ್ತಿದ್ದರು. ದೀಪಾ ತನ್ನ ತಂದೆಗೆ ಕರೆ ಮಾಡಿ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದರು. ಹೀಗಾಗಿ ಅವರ ತಂದೆ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆಗಸ್ಟ್​ 28ರಂದು ಅರುಣ್ ತನ್ನ ಅತ್ತೆ ಮನೆಗೆ ತೆರಳಿ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಆದಿಲಾಬಾದ್‌ಗೆ ಕರೆತಂದಿದ್ದ.ಶುಕ್ರವಾರ ಬೆಳಗ್ಗೆ ಅರುಣ್ ತನ್ನ ಪತ್ನಿಯೊಂದಿಗೆ ಮತ್ತೆ ಜಗಳವಾಡಿದ್ದಾನೆ. ಆಕೆಯ ಕುತ್ತಿಗೆ ಕೊಯ್ದು, ತಲೆಯನ್ನು ಮಂಚಕ್ಕೆ ಜಜ್ಜಿದ್ದರಿಂದ ಗೃಹಿಣಿ ಸಾವನ್ನಪ್ಪಿದ್ದಾಳೆ. ಬಳಿಕ ಅರುಣ್​ ಅದಿಲಾಬಾದ್ ಗ್ರಾಮಾಂತರ ಪೊಲೀಸರಿಗೆ ಶರಣಾಗಲು ತೆರಳಿದ್ದನು. ಅರುಣ್​ ತಂದೆ ಜೈವಂತ್ ರಾವ್ ತನ್ನ ಮಗನ ಬೈಕ್ ಪತ್ತೆಯಾಗದ ಕಾರಣ ಮಗನಿಗೆ ಕರೆ ಮಾಡಿದ್ದಾರೆ. ಆಗ ಅರುಣ್​ ನಾನು ನನ್ನ ಪತ್ನಿಯನ್ನು ಕೊಂದಿದ್ದು, ಪೊಲೀಸ್ ಠಾಣೆಗೆ ತೆರಳುತ್ತಿದ್ದೇನೆ ಎಂದು ತಂದೆ ಜೈವಂತ್ ರಾವ್​ಗೆ ತಿಳಿಸಿದ್ದಾನೆ. ಕೂಡಲೇ ನೀನು ಮನೆಗೆ ಬರುವಂತೆ ಜೈವಂತ್ ರಾವ್ ಮಗನಿಗೆ ಸೂಚಿಸಿದ್ದಾರೆ. ಅಪ್ಪನ ಮಾತಿನಂತೆ ಮಗ ಅರುಣ್​ ಮನೆಗೆ ಹಿಂತಿರುಗುವಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅರುಣ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಈ ವಿಷಯವನ್ನು ಅರುಣ್​ ತಂದೆ ಜೈವಂತ್​ ರಾವ್​ಗೆ ತಿಳಿಸಿದ್ದಾರೆ. ನಂತರ ಜೈವಂತ್ ರಾವ್ ತನ್ನ ಸೊಸೆಯನ್ನು ನನ್ನ ಮಗನೇ ಕೊಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಮೃತ ಗೃಹಿಣಿ ದೀಪಾ ಅವರ ತಾಯಿ ಲಕ್ಷ್ಮಿ ಅವರ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಮೃತ ಅರುಣ್ ಅವರ ತಂದೆ ಜೈವಂತ್ ರಾವ್ ಮತ್ತು ತಾಯಿ ಪದ್ಮಾ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅದಿಲಾಬಾದ್ ಎರಡನೇ ನಗರ ಪೊಲೀಸರು ರಸ್ತೆ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟಾಟಾ ಸುಮೋ - ಬಸ್‌ ನಡುವೆ ಭೀಕರ ಅಪಘಾತ 5 ಮಂದಿ ಸ್ಥಳದಲ್ಲೇ ಸಾವು

Posted by Vidyamaana on 2023-10-16 16:10:38 |

Share: | | | | |


ಟಾಟಾ ಸುಮೋ - ಬಸ್‌ ನಡುವೆ ಭೀಕರ ಅಪಘಾತ 5 ಮಂದಿ ಸ್ಥಳದಲ್ಲೇ ಸಾವು

ಗದಗ ಅ.16: ಕೆಎಸ್​ಆರ್​ಟಿಸಿ ಬಸ್ ಹಾಗೂ ಟಾಟಾ ಸುಮೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಐದು ಜನ ಸಾವನ್ನಪ್ಪಿದ್ದು, ನಾಲ್ವವರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಬಳಿ ನಡೆದಿದೆ. ಮೃತರು ಗುಲಬರ್ಗಾ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಿ ಗ್ರಾಮದವರು ಎಂದು ತಿಳಿದುಬಂದಿದೆ.


ಗದಗ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ಮಠಕ್ಕೆ ಹೋಗುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಟಾಟಾ ಸೊಮೊ ನಲ್ಲಿದ್ದ 5 ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದರೆ. ಇನ್ನು ವಾಯುವ್ಯ ಸಾರಿಗೆ ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 




ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಿ ಗ್ರಾಮದಿಂದ ಟಾಟಾ ಸೊಮೊನಲ್ಲಿ ಶಿರಹಟ್ಟಿಯ ಫಕ್ಕೀರೇಶ್ವರ ಮಠಕ್ಕೆ ಹೊರಟಿದ್ದರು. ಆದರೆ, ಏಕಾಏಕಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಆದ್ರೆ, ವಿಧಿ ದೇವಸ್ಥಾನಕ್ಕೆ ಹೊರಟವರನ್ನು ಮಸಣಕ್ಕೆ ಕರೆದೊಯ್ದಿದೆ. ಘಟನೆ ನಡೆದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಸ್ಥಳಕ್ಕೆ ದೌಡಾಯಿಸಿ ರಸ್ತೆಯಲ್ಲಿ ಉಂಟಾಗಿದ್ದ ಟ್ರಾಫಿಕ್‌ ಕ್ಲಿಯರ್ ಮಾಡಿದರು.


ಅಪಘಾತವಾದ ರಭಸಕ್ಕೆ ಕಾರು ಸಂಪೂರ್ಣ ಹಾನಿ ಅದರಲ್ಲಿದ್ದ ಪ್ರಯಾಣಿಕರ ಮುಖ, ದೇಹದ ಭಾಗಗಳು ಗುರುತಿಸದಷ್ಟು ಹಾನಿಯಾಗಿವೆ. ಸದ್ಯ ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ

ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ವರ್ಗಾವಣೆ

Posted by Vidyamaana on 2023-11-18 04:46:21 |

Share: | | | | |


ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ವರ್ಗಾವಣೆ

ಪುತ್ತೂರು: ರಾಜ್ಯ ಸರಕಾರದಿಂದ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಆಗಿದ್ದ ಡಾ. ಗಾನ ಪಿ. ಕುಮಾರ್ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ನ 17 ಶುಕ್ರವಾರ ದಂದು ಸರಕಾರ ಆದೇಶ ಹೊರಡಿಸಿದೆ.


ಖಾಲಿಯಾಗಲಿರುವ ಅವರ ಸ್ಥಾನಕ್ಕೆ ಸದ್ಯಕ್ಕೆ ಯಾರನ್ನು ನೇಮಕ ಮಾಡಿಲ್ಲ.

ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಹೆಸರಲ್ಲಿ ವಂಚನೆ ; 7.75 ಲಕ್ಷ ಕಳಕೊಂಡ ಜೆನಿಫ‌ರ್‌

Posted by Vidyamaana on 2024-05-14 07:19:38 |

Share: | | | | |


ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಹೆಸರಲ್ಲಿ ವಂಚನೆ ; 7.75 ಲಕ್ಷ ಕಳಕೊಂಡ ಜೆನಿಫ‌ರ್‌

ಉಡುಪಿ, ಮೇ 14: ಪಾರ್ಟ್‌ ಟೈಮ್‌ ಉದ್ಯೋಗದ ಆಮಿಷಕ್ಕೆ ಒಳಗಾದ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ದೂರು ದಾಖಲಾಗಿದೆ. 


ಶಂಕರಪುರದ ಜೆನಿಫ‌ರ್‌ ಎಂಬ ಮಹಿಳೆಯ ಮೊಬೈಲ್‌ಗೆ ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಕುರಿತು ಸಂದೇಶ ಬಂದಿತ್ತು. ಆನಂತರ ಅಪರಿಚಿತ ವ್ಯಕ್ತಿ ವಾಟ್ಸಾಪ್‌ ಮೂಲಕ ಲಿಂಕ್‌ ಕಳಿಸಿದ್ದು ಟೆಲಿಗ್ರಾಮ್‌ ಆ್ಯಪ್ ನಲ್ಲಿರುವ ಓಯಸಿಸ್‌ ಫೈನಾನ್ಸ್‌ ಎಂಬ ಗ್ರೂಪ್‌ಗೆ ಜಾಯಿನ್‌ ಆಗುವಂತೆ ತಿಳಿಸಿದ್ದ. ಅದರಂತೆ ಜೆನಿಫ‌ರ್‌ ಜಾಯಿನ್‌ ವಾಟ್ಸಪ್ ಗ್ರೂಪ್ ಜಾಯಿನ್ ಆಗಿದ್ದರು. ಟೆಲಿಗ್ರಾಮ್‌ ಗ್ರೂಪ್‌ನಲ್ಲಿರುವ ಅಪರಿಚಿತ ವ್ಯಕ್ತಿಯು ವಿವಿಧ ರೀತಿಯ ಟಾಸ್ಕ್ ಗಳನ್ನು ನೀಡಿ ಅದನ್ನು ಪುರ್ಣಗೊಳಿಸಿದರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವುದಾಗಿ ನಂಬಿಸಿ ಜೆನಿಫ‌ರ್‌ನ ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದುಕೊಂಡಿದ್ದರು.

25000 ಬೆಂಬಲಿಗರೊಂದಿಗೆ ಅಶೋಕ್ ರೈ ನಾಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

Posted by Vidyamaana on 2023-04-18 13:49:46 |

Share: | | | | |


25000 ಬೆಂಬಲಿಗರೊಂದಿಗೆ ಅಶೋಕ್ ರೈ ನಾಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಪುತ್ತೂರು: ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಏ. 19ರಂದು ದರ್ಬೆ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಮಪತ್ರ ಸಲ್ಲಿಸಿ, ಬಳಿಕ ದರ್ಬೆ ವೃತ್ತಕ್ಕೆ ತೆರಳಲಿದ್ದಾರೆ. ಅಲ್ಲಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಸುಮಾರು 25000 ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದ್ದರು.

ಕಾರಿಂಜೇಶ್ವರ ದೇವಸ್ಥಾನದ ಸುತ್ತ ಗಣಿಗಾರಿಕೆ ನಿಷೇಧ ರಾಜ್ಯ ಸರಕಾರದ ಮಹತ್ವದ ಆದೇಶಕ್ಕೆ ಇದುವೇ ಕಾರಣ...!

Posted by Vidyamaana on 2023-03-14 09:32:15 |

Share: | | | | |


ಕಾರಿಂಜೇಶ್ವರ ದೇವಸ್ಥಾನದ ಸುತ್ತ ಗಣಿಗಾರಿಕೆ ನಿಷೇಧ  ರಾಜ್ಯ ಸರಕಾರದ ಮಹತ್ವದ ಆದೇಶಕ್ಕೆ ಇದುವೇ ಕಾರಣ...!

ಬಂಟ್ವಾಳ: ಮಹತ್ವದ ಬೆಳವಣಿಗೆಯಲ್ಲಿ ಐತಿಹಾಸಿಕ ಖ್ಯಾತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಲಿನ ೨ ಕಿ.ಮೀ. ಪರಿಸರದಲ್ಲಿ ಯಾವುದೇ ಗಣಿಗಾರಿಕೆ ಅಥವಾ ಕ್ರಷರ್ ಗಣಿಗಾರಿಕೆಯನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶಿಸಿದೆ.

ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತಲಿನ ೨ ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಧಾರ್ಮಿಕ ಚಟುವಟಿಕೆಗಳಿಗೆ ಕಾಯ್ದಿರಿಸಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಸುತ್ತಲಿನ ೨ ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮಾಡುವಂತಿಲ್ಲ ಎಂದು ಆದೆಶದಲ್ಲಿ ತಿಳಿಸಲಾಗಿದೆ‌.

ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದಾಗಿ ಧಾರ್ಮಿಕ ಹಾಗೂ ಐತಿಹಾಸಿಕ ಪ್ರಾಧಾನ್ಯತೆ ಹೊಂದಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನ ಅಪಾಯವನ್ನು ಎದುರು ನೋಡುವಂತಾಗಿತ್ತು. ಆದ್ದರಿಂದ ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿತ್ತು. ಹಿಂದೂ‌ ಪರ ಸಂಘಟ‌ನೆಗಳು ಹಾಗೂ ಭಕ್ತರು ಹೋರಾಟಕ್ಕೆ ಸಾಥ್ ನೀಡಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸಮಸ್ಯೆಯ ಗಂಭೀರತೆ ಅರಿತು, ರಾಜ್ಯ ಸರಕಾರದಿಂದ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇದೀಗ ರಾಜ್ಯ ಸರ್ಕಾರದ ಆದೇಶ ಸ್ಥಳೀಯರಿಗೆ ನಿರಾಳತೆಯನ್ನು ನೀಡಿದೆ.



Leave a Comment: