ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಸುದ್ದಿಗಳು News

Posted by vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯ‌ರ್ ತಂದಿದ್ದರು. ಟಯರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್‌ ಸಮೇತ  ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 Share: | | | | |


ಹೆಣವಾಗಿ ಪತ್ತೆಯಾದ ತೈವಾನ್‌ ಶತಕೋಟ್ಯಧಿಪತಿ

Posted by Vidyamaana on 2023-05-25 05:22:44 |

Share: | | | | |


ಹೆಣವಾಗಿ ಪತ್ತೆಯಾದ ತೈವಾನ್‌ ಶತಕೋಟ್ಯಧಿಪತಿ

ತೈವಾನ್‌: ಇತ್ತೀಚೆಗಷ್ಟೇ 134 ಕೋಟಿ ರೂ.ಗಳ ಆಸ್ತಿಗೆ ಉತ್ತರಾಧಿ­ಕಾರಿಯಾಗಿದ್ದ ತೈವಾನ್‌ ಮೂಲದ ಯುವಕನೊಬ್ಬ ತಾನು ಮದುವೆ­ಯಾದ ಕೇವಲ 2 ಗಂಟೆಗಳಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.ಲೈ ಎನ್ನುವ 18 ವರ್ಷದ ಯುವಕನ ತಂದೆ ಎಪ್ರಿಲ್‌ನಲ್ಲಿ ಮೃತಪಟ್ಟಿದ್ದು ಅವರ ಸಂಪೂರ್ಣ ಆಸ್ತಿಗೆ ಮಗನನ್ನು ಉತ್ತರಾಧಿಕಾರಿಯ­ನ್ನಾ­ಗಿ­ಸಿದ್ದಾರೆ. ಬಳಿಕ ಅವರ ಆಸ್ತಿಯ ಮೇಲ್ವಿಚಾರಕರಾದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಎಸ್ಸಿಯಾ ಎಂಬುವವರು 2 ಬಾರಿ ಲೈನನ್ನು ಭೇಟಿಯಾಗಿದ್ದಾರೆ. ಅನಂತರ ಇದ್ದಕ್ಕಿದ್ದಂತೆ ಮೇ 4ರಂದು ಎಸ್ಸಿಯಾ ಮನೆಯಲ್ಲಿ ಲೈ ಶವವಾಗಿ ಪತ್ತೆಯಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲಾಗಿದೆ. ಮತ್ತೂಂದೆಡೆ ಲೈ ಮತ್ತು ಎಸ್ಸಿಯಾ ಸಲಿಂಗಕಾಮಿಗಳಾಗಿದ್ದರು ಈ ಹಿನ್ನೆಲೆ ಲೈ ಎಸ್ಸಿಯಾ ಜತೆಗೆ ತಾನು ಸಾಯುವ 2 ಗಂಟೆಗೆ ಮೊದಲಷ್ಟೇ ವಿವಾಹ ನೋಂದಣಿ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಇತ್ತ ಲೈ ಅವರ ತಾಯಿ ತನ್ನ ಮಗ ಸಲಿಂಗಕಾಮಿ ಎನ್ನುವುದನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ತೈವಾನ್‌ ಕಾನೂನಿನ ಪ್ರಕಾರ ಸಾಮಾನ್ಯ ವಿವಾಹವಾದ ದಂಪತಿಗಿರುವಂತೆಯೇ, ಸಲಿಂಗ ದಂಪತಿಗೂ ಸಂಗಾತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿರುವ ಹಿನ್ನೆಲೆ ಎಸ್ಸಿಯನೆ ಈ ಸಂಚು ರೂಪಿಸಿ ತನ್ನ ಮಗನನ್ನು ಕೊಂದಿದ್ದಾನೆಂದು ಆರೋಪಿಸಿದ್ದಾರೆ.

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : 3 ಮತ್ತು 4ನೇ ಆರೋಪಿ ಪರ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Posted by Vidyamaana on 2024-05-28 14:38:01 |

Share: | | | | |


ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : 3 ಮತ್ತು 4ನೇ ಆರೋಪಿ ಪರ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಪುತ್ತೂರು : ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮತ್ತು 4ನೇ ಆರೋಪಿಗಳಾದ ಮಂಜುನಾಥ್ (ಮಂಜ) ಹಾಗೂ ಕೇಶವ ಪಡೀಲ್ ಇವರ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಲ ದಿನಗಳ ಹಿಂದೆ ಪುತ್ತೂರು‌ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕೃತಗೊಳಿಸಿದ್ದು, ದೂರುದಾರರ ಪರ ಸರ್ಕಾರಿ ಅಭಿಯೋಜಕರಾದ ಜಯಂತಿ ವಾದಮಂಡಿಸಿದ್ದರು

ವಿಧಾನ ಪರಿಷತ್ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ಕೆ.ರಘುಪತಿ ಭಟ್‌

Posted by Vidyamaana on 2024-05-13 21:27:54 |

Share: | | | | |


ವಿಧಾನ ಪರಿಷತ್ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ಕೆ.ರಘುಪತಿ ಭಟ್‌

ಉಡುಪಿ: ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಕೈ ತಪ್ಪಿದ ಬಳಿಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಅವರು ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಘೋಷಿಸಿದ್ದಾರೆ.

Shocking Video: ಚಲಿಸುತ್ತಿರುವ ರೈಲಿನ ಮೇಲೆ ಯುವಕನ ಅಪಾಯಕಾರಿ ಸ್ಟಂಟ್

Posted by Vidyamaana on 2023-10-12 07:26:22 |

Share: | | | | |


Shocking Video: ಚಲಿಸುತ್ತಿರುವ ರೈಲಿನ ಮೇಲೆ ಯುವಕನ ಅಪಾಯಕಾರಿ ಸ್ಟಂಟ್

ನ್ಯೂಯಾರ್ಕ್ : ದಿನ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವೈರಲ್ ವಿಡಿಯೋಗಳು ಸದ್ದು ಮಾಡುತ್ತಿರುತ್ತವೆ, ಕೆಲವೊಂದು ತಮಾಷೆಯಾಗಿದ್ದರೆ ಇನ್ನು ಕೆಲವು ಜೀವಕ್ಕೆ ಅಪಾಯ ಒಡ್ಡುವ ರೀತಿಯಲ್ಲಿರುತ್ತವೆ. ಇಲ್ಲಿ ಇರುವ ವಿಡಿಯೋ ಕೂಡ ನೋಡುವಾಗ ಮೈ ಜುಂ ಎನ್ನುತ್ತದೆ.

Shocking Video:

ಅಂದಹಾಗೆ ಈ ವಿಡಿಯೋ ಕಂಡುಬಂದಿದ್ದು ನ್ಯೂಯಾರ್ಕ್ ನಲ್ಲಿ ಇಲ್ಲಿ ಓರ್ವ ಯುವಕ ವೇಗವಾಗಿ ಚಲಿಸುತ್ತಿರುವ ಮೆಟ್ರೋ ರೈಲಿನ ಮೇಲೆ ನಿಂತು ಸಾಹಸ ಪ್ರದರ್ಶನ ಮಾಡಿದ್ದಾನೆ ಈತನ ಅಪಾಯಕಾರಿ ಸ್ಟಂಟ್ ಅಲ್ಲಿನ ರೈಲ್ವೆ ನಿಲ್ದಾಣದಲ್ಲಿದ್ದ ಓರ್ವ ಸೆರೆ ಹಿಡಿದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಯುವಕನ ಈ ಸಾಹಸಕ್ಕೆ ಬಾರಿ ಆಕ್ರೋಶ ವ್ಯಕ್ತವಾಗಿದೆ.


ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಟಾಪಿಕಲ್‌ಟೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಯುವಕ ತನ್ನ ಜೀವವನ್ನು ಅಪಾಯಕ್ಕೆ ತಳ್ಳಿ ಮಾಡಿರುವ ಸಾಹಸಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಮಂದಿ ಈ ಯುವಕನ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ, ಇನ್ನೂ ಕೆಲವರು ಆತ ಯಾವುದೋ ವಿಡಿಯೋ ನೋಡಿ ಈ ರೀತಿ ಹುಚ್ಚಾಟ ಆಡುತ್ತಿದ್ದಾನೆ ಆತನನ್ನು ಬಂಧಿಸುವಂತೆ ಕೇಳಿಕೊಂಡಿದ್ದಾರೆ.

ಇನ್ನೂ ಕೆಲವರು ಆ ಯುವಕ ನಿಜ ಜೀವನದಲ್ಲಿ ಸಬ್‌ವೇ ಸರ್ಫ್ ಆಡಲು ಬಯಸಿರಬೇಕು ಹಾಗಾಗಿ ರೈಲಿನ ಮೇಲಿಂದ ಓದುತ್ತಿದ್ದಾನೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.

SSLC ಪರೀಕ್ಷೆ- 2ರ ವೇಳಾಪಟ್ಟಿ ಪ್ರಕಟ

Posted by Vidyamaana on 2024-05-10 07:29:20 |

Share: | | | | |


SSLC ಪರೀಕ್ಷೆ- 2ರ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟವಾಗಿದೆ. ಇದರ ಬೆನ್ನಲ್ಲೇ ಇದೀಗ ಅನುತ್ತೀರ್ಣರಾದವರಿಗೆ ಎಸ್ಎಸ್ಎಲ್ಸಿ ಪರೀಕ್ಷೆ -2ರ ವೇಳಾಪಟ್ಟಿ ಬಿಡುಗಡೆಯಾಗಿದೆ.

ಜೂನ್ 7ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ. ಇನ್ನೂ ಪ್ರತಿ ವಿಷಯಕ್ಕೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ಜುಲೈ 29: ಕೆನ್ನೆಡಿಗಳು ಒಂದು ಕಥಾನಕ ಕನ್ನಡ ಅನುವಾದ ಕೃತಿ ಬಿಡುಗಡೆ

Posted by Vidyamaana on 2023-07-28 10:14:00 |

Share: | | | | |


ಜುಲೈ 29: ಕೆನ್ನೆಡಿಗಳು ಒಂದು ಕಥಾನಕ ಕನ್ನಡ ಅನುವಾದ ಕೃತಿ ಬಿಡುಗಡೆ

ಪುತ್ತೂರು: ಆಂಗ್ಲ ಭಾಷೆಯ ಹೆಸರಾಂತ ಅಮೆರಿಕ ಲೇಖಕ ಪೀಟರ್ ಕೊಲ್ಲಿಯರ್ ಹಾಗೂ ಡೇವಿಡ್ ಹೊರೋವಿಟ್ಸ್ ಇವರಿಬ್ಬರು ಜಂಟಿಯಾಗಿ ರಚಿಸಿದ ‘ದಿ ಕೆನ್ನೆಡಿಸ್ ಏನ್ ಅಮೇರಿಕನ್ ಡ್ರಾಮಾ’ ಕೃತಿಯ ಕನ್ನಡ ಅನುವಾದ ‘ಕೆನ್ನೆಡಿಗಳು, ಒಂದು ಕಥಾನಕ’ ಕೃತಿ ಲೋಕಾರ್ಪಣೆ ಜುಲೈ 29 ಶನಿವಾರ ಮಧ್ಯಾಹ್ನ 2:30ಕ್ಕೆ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.

ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ್ ಕೃತಿ ಲೊಕಾರ್ಪಣೆಗೊಳಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಸಹಾಯಕ ಆಯುಕ್ತ ಗಿರೀಶ್ ನಂದನ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.‌, ಮಿತ್ರಂಪಾಡಿ ಜಯರಾಮ ರೈ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್ ಭಾಗವಹಿಸಲಿದ್ದಾರೆ. ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.


ಕರ್ತೃ ಎಂ. ಶಾಂತರಾಮ್ ರಾವ್:

ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಎಂ. ಶಾಂತರಾಮ್ ರಾವ್. ಇವರು ಭಾರತ ಸರಕಾರದ ವಾಣಿಜ್ಯ ಇಲಾಖೆಯ ಅಡಿಯ ಎಕ್ಸ್ಪೋರ್ಟ್ ಕ್ರೆಡಿಟ್ ಗ್ಯಾರೆಂಟ್ ಕಾರ್ಪೋರೇಷನ್ ಇಂಡಿಯಾ ಲಿ. (ಇಸಿಜಿಸಿ)ನ ನಿವೃತ್ತ ಅಧಿಕಾರಿ. ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರ ಸಹೋದರಿ ಶ್ರೀದೇವಿ ಹಾಗೂ ಪುತ್ತೂರಿನ ಖ್ಯಾತ ವಕೀಲರಾಗಿದ್ದ ದಿ. ಸದಾಶಿವರಾಯರ 4ನೆಯ ಪುತ್ರ ಎಂ. ಶಾಂತರಾಮ್ ರಾವ್. ಪುತ್ತೂರಿನ ಹಿರಿಯ ವಕೀಲ ರಾಮ್ ಮೋಹನ್ ರಾವ್ ಅವರ ಸಹೋದರ.


ಕೃತಿ ಕುರಿತು:

ಅಮೆರಿಕ ದೇಶದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿಯೇ ಚುನಾಯಿತ ಹಾಗೂ ಪ್ರಥಮ ಕೆಥೋಲಿಕ್ ಪಂಗಡದ ಅಧ್ಯಕ್ಷನೆಂಬ ಹೆಗ್ಗಳಿಕೆ ಹಾಗೂ ಪ್ರಸಿದ್ಧಿ ಪಡೆದ ಮಹಾನ್ ನಾಯಕ ಜಾನ್.ಎಫ್ ಕೆನ್ನಡಿ. ಇವರ ಕುಟುಂಬ ಅಮೆರಿಕಾದಲ್ಲಿ ನೆಲೆಯಾಗಿ ಯಶಸ್ಸನ್ನು ಕಂಡ  ರೋಚಕ ಕಥೆ ಈ ಕೃತಿಯಲ್ಲಿ ಸೊಗಸಾಗಿ ನಿರೂಪಣೆಗೊಂಡಿದೆ. ಅವರ ಕುಟುಂಬ ರಾಜಕೀಯವಾಗಿ ಹಾಗೂ ವ್ಯಾವಹಾರಿಕವಾಗಿ ಯಶಸ್ವಿಯಾದ ವಿವರ, ಅವರ ರಾಜಕೀಯದಲ್ಲಿನ ಏಳು ಬೀಳುಗಳು, ಕುಟುಂಬದಲ್ಲಿ ನಡೆದ ಅಚ್ಚರಿಯ ಘಟನೆಗಳು, ಅವರ ಯಶಸ್ಸು, ಅನುಭವಿಸಿದ ನೋವು - ನಲಿವು, ಅವರೊಳಗಿನ ಸ್ಪರ್ಧೆ, ಪ್ರಣಯ ಪ್ರಸಂಗಗಳು, ಭೂಗತ ಜಗತ್ತಿನೊಂದಿಗಿನ ಸಂಬಂಧಗಳು, ಮಾದಕ ವ್ಯಸನಕ್ಕೆ ದಾಸರಾದ ವಿಚಾರ, ಷೇರು ವ್ಯವಹಾರದಲ್ಲಿ ಜೋ. ಕೆನ್ನೆಡಿಯು (ಜಾನ್. ಎಫ್. ಕೆನ್ನಡಿಯ ತಂದೆ) ನಡೆಸಿದ ಅವ್ಯವಹಾರ, ಅವರ ಪ್ರತಿಷ್ಠೆಗಾಗಿ ಬುದ್ದಿಮಾಂದ್ಯ ಮಗುವನ್ನು  ಪ್ರಪಂಚದಿಂದ ದೂರವಿರಿಸಿದ ಮನಕಲುಕುವ ವಿಚಾರ, ಮುಂದಿನ ಜನಾಂಗವು ಪೇಚಿಗೆ ಸಿಲುಕಿದ ಘಟನೆಗಳ ವಿಸ್ತೃತ ವಿವರಣೆಯೇ ಈ ‘ಕೆನ್ನಡಿಗಳು ಒಂದು ಕಥಾನಕ’ ಕೃತಿಯ ಕಥಾ ವಸ್ತುವಾಗಿದೆ.

ಈ ಕೃತಿಯನ್ನು ಓದುತ್ತ ಹೋದಂತೆ ರೋಚಕತೆ ಹಾಗೂ ಓದುವ ಹಂಬಲ ಹೆಚ್ಚುತ್ತ ಹೋಗುತ್ತದೆ. ಕೆನ್ನಡಿ ಕುಟುಂಬವು ರಾಜಕೀಯವಾಗಿ ಬೆಳೆದು ಬಂದ ಪರಿ ಹೇಗೆ? ಇತ್ಯಾದಿಗಳು ಇದರಲ್ಲಿ ಸುಂದರವಾಗಿ ಬಿಂಬಿತವಾಗಿದೆ.

ಸುಮಾರು 771 ಪುಟ ಇರುವ ಈ ಕೃತಿಗೆ ಮುನ್ನುಡಿಯನ್ನು ಕ.ಸಾ.ಪ – ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಬರೆದಿದ್ದಾರೆ.



Leave a Comment: