ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಬಿಂದು ಫ್ಯಾಕ್ಟರಿಗೆ ಭೇಟಿ

Posted by Vidyamaana on 2023-04-25 16:26:51 |

Share: | | | | |


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಬಿಂದು ಫ್ಯಾಕ್ಟರಿಗೆ ಭೇಟಿ

ಪುತ್ತೂರು: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಪ್ರತಿಷ್ಠಿತ ನರಿಮೊಗರಿನಲ್ಲಿರುವ ಬಿಂದು ಫ್ಯಾಕ್ಟರಿಗೆ ಮಂಗಳವಾರ ಭೇಟಿ ನೀಡಿದರು.

ಬಿಂದು ಫ್ಯಾಕ್ಟರಿಯ ಪ್ರಮುಖರು ಹಾಗೂ ಸಿಬ್ಬಂದಿಗಳೊಂದಿಗೆ ಮಾತನಾಡಿ ಫ್ಯಾಕ್ಟರಿಯ ಕಾರ್ಯಚಟುವಟಿಕೆ ಕುರಿತು ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು

ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ವಿಫಲಗೊಳಿಸಿದ ನಿರ್ಮಲಾನಂದ ಶ್ರೀಗಳ ಕ್ರಮವನ್ನು ಸ್ವಾಗತಿಸುತ್ತೇವೆ: ಅಬ್ದುಲ್ ಮಜೀದ್ ಮೈಸೂರು

Posted by Vidyamaana on 2023-03-22 03:40:57 |

Share: | | | | |


ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ವಿಫಲಗೊಳಿಸಿದ ನಿರ್ಮಲಾನಂದ ಶ್ರೀಗಳ ಕ್ರಮವನ್ನು ಸ್ವಾಗತಿಸುತ್ತೇವೆ: ಅಬ್ದುಲ್ ಮಜೀದ್ ಮೈಸೂರು

ಬೆಂಗಳೂರು: ಉರಿ ಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ಮೂಲಕ ಒಕ್ಕಲಿಗ ಸಮುದಾಯವನ್ನು ಶತಮಾನಗಳಿಂದಲೂ ಅನ್ಯೋನ್ಯತೆಯಿಂದ ಬದುಕುತ್ತಿರುವ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಅರ್ಥ ಮಾಡಿಕೊಂಡು ಅದನ್ನು ವಿಫಲಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


ಒಕ್ಕಲಿಗ ಸಮುದಾಯ ಮತ್ತು ಟಿಪ್ಪು ಸುಲ್ತಾನ್ ನಡುವಿನ ಬಾಂಧವ್ಯ ಬಹಳ ಗಟ್ಟಿಯಾಗಿತ್ತು. ಟಿಪ್ಪು ಸುಲ್ತಾನ್ ಅವಧಿಯಲ್ಲಿ ಕೃಷಿಗೆ ಸಾಕಷ್ಟು ಒತ್ತು ನೀಡಿದ್ದರು. ಮೈಸೂರು ಪ್ರಾಂತ್ಯದ ರೈತರು ಇಂದಿಗೂ ಕೂಡ ಸಮೃದ್ಧ ನೀರಾವರಿಯನ್ನು ಹೊಂದಿರುವುದಕ್ಕೆ ಮೂಲವಾದ ಕನ್ನಂಬಾಡಿ ಕಟ್ಟೆಯನ್ನು ನಿರ್ಮಾಣಕ್ಕೆ ಅಸ್ತಿಭಾರ ಹಾಕಿದವರು ಟಿಪ್ಪು ಸುಲ್ತಾನರೆ ಆಗಿದ್ದರು.ಬಿಜೆಪಿಯ ಈ ಷಡ್ಯಂತ್ರವನ್ನು ಅರಿತ ಒಕ್ಕಲಿಗ ಸಮುದಾಯ ಅದರ ವಿರುದ್ಧ ಸೆಟೆದು ನಿಂತದ್ದು ಅಭಿನಂದನಾರ್ಹ. ಅದಕ್ಕೆ ಬಲ ತುಂಬೋ ರೀತಿಯಲ್ಲಿ ಒಕ್ಕಲಿಗ ಸಮುದಾಯದ ಶ್ರೀಗಳಾದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿ ಅವರು ತಮ್ಮ ಎಚ್ಚರಿಕೆಯ ಮೂಲಕ ಬಿಜೆಪಿಯ ಒಡೆದಾಳುವ ತಂತ್ರಕ್ಕೆ ತಡೆ ಒಡ್ಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಅವರ ಈ ಕ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಮಜೀದ್ ಅವರು, ಮುಂದಿನ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಬಿಜೆಪಿಯ ಈ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದ್ದಾರೆ.

ಪುತ್ತೂರು ಜಾತ್ರೆ:ಇಂದು ವಾಹನ ಸಂಚಾರದಲ್ಲಿ ಬದಲಾವಣೆ ಹಲವೆಡೆ ಪಾರ್ಕಿಂಗ್‌ಗೆ ವ್ಯವಸ್ಥೆ-ಸಾರ್ವಜನಿಕರ ಸಹಕಾರಕ್ಕೆ ಪೊಲೀಸ್‌ ಮನವಿ

Posted by Vidyamaana on 2024-04-17 16:12:10 |

Share: | | | | |


ಪುತ್ತೂರು ಜಾತ್ರೆ:ಇಂದು ವಾಹನ ಸಂಚಾರದಲ್ಲಿ ಬದಲಾವಣೆ  ಹಲವೆಡೆ ಪಾರ್ಕಿಂಗ್‌ಗೆ ವ್ಯವಸ್ಥೆ-ಸಾರ್ವಜನಿಕರ ಸಹಕಾರಕ್ಕೆ ಪೊಲೀಸ್‌ ಮನವಿ

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಹಿನ್ನೆಲೆಯಲ್ಲಿ  ಏ .17ರಂದು ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

 ಏ.17ರಂದು ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಮತ್ತು ರಾತ್ರಿ ನಡೆಯುವ ಬ್ರಹ್ಮರಥೋತ್ಸವದ ಅಂಗವಾಗಿ ಪುತ್ತೂರು ಪೇಟೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗುವುದು ಮತ್ತು ವಾಹನ ಪಾರ್ಕಿಂಗ್‌ಗೂ ಸೂಕ್ತ ಸ್ಥಳ ಗುರುತಿಸುವ ಕುರಿತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಪೊಲೀಸ್ ಇಲಾಖೆ ವರದಿ ನೀಡಿದೆ.ಸಹಾಯಕ ಆಯುಕ್ತರ ಪ್ರಸ್ತಾವನೆಗೆ ಜಿಲ್ಲಾಧಿಕಾರಿಯವರು ಈ ಕುರಿತು ಅಧಿಕೃತ ಆದೇಶ ಹೊರಡಿಸಲಿದ್ದಾರೆ.

 ಬದಲಾದ ವಾಹನ ಸಂಚಾರ:

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ಎಂ.ಟಿ.ರಸ್ತೆಯ ಮೂಲಕ ತೆರಳಿ, ಮುಂದೆ ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ಮೂಲಕ ತೆರಳುವುದು.


ಕಬಕ-ಮಂಗಳೂರು ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಲಿನೆಟ್‌(ಉದಯಗಿರಿ)ಬೊಳುವಾರು ಪಡೀಲ್‌- ಕೊಟೇಚಾ ಹಾಲ್ ಕ್ರಾಸ್ ಸಾಲ್ಮರ ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಪಡೀಲ್ ಕೊಟೇಚಾ ಹಾಲ್ ಕ್ರಾಸ್ ಸಾಲ್ಮರ ಎಪಿಎಂಸಿಯಾಗಿ ಬಸ್‌ನಿಲ್ದಾಣಕ್ಕೆ ಬರುವುದು.


ಮಡಿಕೇರಿ,ಸುಳ್ಯ,ಸಂಪ್ಯ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಅಶ್ವಿನಿ ಜಂಕ್ಷನ್ ದರ್ಬೆ-ಅರುಣಾ ಕಲಾ ಮಂದಿರದ ಎದುರು ರಸ್ತೆ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.

 

ಮೇ 8ರಂದು ನಟಿ ರಮ್ಯಾ ಉಪಸ್ಥಿತಿಯಲ್ಲಿ ಕಾಂಗ್ರೆಸ್ ರೋಡ್ ಶೋ.

Posted by Vidyamaana on 2023-05-06 12:25:24 |

Share: | | | | |


ಮೇ 8ರಂದು ನಟಿ ರಮ್ಯಾ ಉಪಸ್ಥಿತಿಯಲ್ಲಿ ಕಾಂಗ್ರೆಸ್ ರೋಡ್ ಶೋ.

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮೇ 8ರಂದು ಸಂಜೆ 3.30ಕ್ಕೆ ಬೊಳುವಾರಿನಿಂದ ದರ್ಬೆವರೆಗೆ ರೋಡ್ ಶೋ ನಡೆಯಲಿದ್ದು, ನಟಿ ರಮ್ಯಾ ಭಾಗವಹಿಸಲಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ರೀತಿಯ ರೋಡ್ ಶೋ ವಿಟ್ಲ ಹಾಗೂ ಉಪ್ಪಿನಂಗಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನನ್ನ ಬೂತ್-ನಾನು ಅಭ್ಯರ್ಥಿ

ಕಾಂಗ್ರೆಸ್ ಪಕ್ಷದ ವತಿಯಿಂದ “ನನ್ನ ಬೂತ್-ನಾನು ಅಭ್ಯರ್ಥಿ” ಎಂಬ ಶಿರೋನಾಮೆಯಡಿ ತಾಲೂಕಿನ 220 ಬೂತ್ಗಳಲ್ಲಿ ಮತ ಪ್ರಚಾರ ಕಾರ್ಯಕ್ರಮ ಶನಿವಾರದಿಂದ ಹಮ್ಮಿಕೊಳ್ಳಲಾಗಿದೆ. ಸುಮಾರು 5 ಸಾವಿರ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.

ಈಗಾಗಲೇ ಬಿಡುಗಡೆ ಮಾಡಲಾದ ಪ್ರಣಾಳಿಕೆಯಂತೆ 200 ಯೂನಿಟ್ ಉಚಿತ ವಿದ್ಯುತ್, 10 ಕೆ.ಜಿ.ಅಕ್ಕಿ, ಉಚಿತ ಬಸ್ ಪಾಸ್ ನೀಡಿಕೆ ಸಹಿತ ಪುತ್ತೂರಿನಲ್ಲಿ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆ ಮುಂತಾದವುಗಳನ್ನೊಳಗೊಂಡು ಕಾಂಗ್ರೆಸ್ ಹಿಂದೆ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಮನೆ ಮನೆ ತಲುಪಿಸುವ ಕಾರ್ಯ ಮಾಡಲಾಗಿದೆ. ಈಗಾಗಲೇ ಒಲವು ಕಂಡಿದ್ದು, ಬಹುಮತದಿಂದ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅನಿಮಲ್ ಹಬ್:

ಈಗಾಗಲೇ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಕಟ್ಟಡಗಳಿದ್ದು, 240 ಹುದ್ದೆಗಳು ಖಾಲಿ ಇದೆ. ಇವುಗಳನ್ನು ತುಂಬುವುದರ ಜತೆಗೆ ಕೊಯಿಲದಲ್ಲಿ ಕೋಳಿ ಆಡು ಸಾಕಣೆಗೆ ಹೆಚ್ಚಿನ ಒತ್ತು ನೀಡಿ ಎನಿಮಲ್ ಹಬ್‍ ನ್ನಾಗಿ ಪರಿವರ್ತಿಸಲಾಗುವುದು ಎಂದರು. 

ಉಳಿದಂತೆ ಡ್ರೈನೆಜ್ ವ್ಯವಸ್ಥೆ, ಕಟ್ ಕನ್ವರ್ಷನ್, ಸಿಂಗಲ್ ಲೇ ಓಟ್ ಅಪ್ರೂವಲ್  ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದ ಅವರು, ತಾಲೂಕಿನಲ್ಲಿ ಈಗಾಗಲೇ 3800 94 ಸಿ. ಅಕ್ರಮ-ಸಕ್ರಮ ಕಡತ ವಿಲೇವಾರಿಗೆ ಬಾಕಿಯಿದ್ದು, ಈ ಕುರಿತು ಪ್ರತೀ ಗ್ರಾಮಗಳಲ್ಲಿ ಸಭೆ ನಡೆಸಿ ಹಕ್ಕುಪತ್ರವನ್ನು ಮನೆ ಮನೆ ತಲುಪಿಸುವ ಕಾರ್ಯವನ್ನು ನಾನು ಗೆದ್ದು ಬಂದಲ್ಲಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. 

ಮಾನನಷ್ಟ ಮೊಕದ್ದಮೆ:

ಈಗಾಗಲೇ ನನ್ನ ಮೇಲೆ ಆರೋಪ ಹೊರಿಸಿರುವ ತಮ್ಮಣ್ಣ ಶೆಟ್ಟಿಯವರ ಮೇಲೆ ಕೇಸು ದಾಖಲಿಸಿದ್ದು, ಮೂರು ಕೋಟಿ ಮಾನನಷ್ಟ ಮೊಕ್ಕದ್ದಮೆ ಹಾಕಲಾಗಿದೆ ಎಂದರು.

ಹೈಕಮಾಂಡ್ ಅಭಿಪ್ರಾಯದಂತೆ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಕುರಿತು ಸೇರಿಸಿದ್ದಾರೆ.  ಈ ಕುರಿತು ನಮ್ಮ ವಿಚಾರವನ್ನು ಮುಂದಿನ ದಿನಗಳಲ್ಲಿ ತಿಳಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಕ್ತಾರ ಅಮಲ ರಾಮಚಂದ್ರ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ಚುನಾವಣಾ ಏಜೆಂಟ್ ಭಾಸ್ಕರ ಗೌಡ ಕೋಡಿಂಬಾಳ ಉಪಸ್ಥಿತರಿದ್ದರು.

ಮಂಗಳೂರು: ಕಾವೂರು ಸ್ಟೇಷನ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ

Posted by Vidyamaana on 2023-05-10 17:27:33 |

Share: | | | | |


ಮಂಗಳೂರು: ಕಾವೂರು ಸ್ಟೇಷನ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ

ಮಂಗಳೂರು: ನಗರದ ಮೂಡುಶೆಡ್ಡೆ ಬಳಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್‌ದೀಪ್ ಆರ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾವೂರು ಸ್ಟೇಷನ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ಮೂವರು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಗೂ ಗಾಯವಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕಮೀಷನ್ ತಿಳಿಸಿದ್ದಾರೆ

ಡಿ.31ರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು

Posted by Vidyamaana on 2024-01-07 19:51:34 |

Share: | | | | |


ಡಿ.31ರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು

ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿಯಲ್ಲಿ ಡಿ.31ರಂದು ನಡೆದ ಹೋಂಡಾ ಆಕ್ಟೀವಾ ಹಾಗೂ ಕಾರು ಅಪಘಾತದಲ್ಲಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕ್ಟೀವಾ ಸಹ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.ಇರ್ದೆ ಗ್ರಾಮದ ಉಪ್ಪಳಿಗೆ ನಾರಾಯಣ ನಾಯ್ಕ ಮತ್ತು ಕಲ್ಯಾಣ ದಂಪತಿ ಪುತ್ರ ಪ್ರವೀಣ (18) ಮೃತ ಯುವಕ.ಡಿ.31 ರಂದು ರಾತ್ರಿ ತನ್ನ ಪರಿಚಿತರೊಂದಿಗೆ ಪುತ್ತೂರಿಗೆ ಬಂದಿದ್ದ ಪ್ರವೀಣ್ ಮನೆಗೆ ಹಿಂತಿರುಗುವ ವೇಳೆ ಮುಕ್ರಂಪಾಡಿ ಸಮೀಪಿಸುತ್ತಿದ್ದಂತೆ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.


ಘಟನೆಯಿಂದ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದ ಪ್ರವೀಣ್ ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜ್ಯೋತಿಯಲ್ಲಿರುವ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರವೀಣ್ ಜ.7 ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಮೃತ ಪ್ರವೀಣ ನ ಕಣ್ಣು, ಲಿವರ್ ಹಾಗೂ ಕಿಡ್ನಿ ದಾನ ಮಾಡಲು ಮನೆಯವರು ಒಪ್ಪಿಗೆ ನೀಡಿರುವುದಾಗಿ ವರದಿಯಾಗಿದೆ.

Recent News


Leave a Comment: