ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಲೋಕಾಯುಕ್ತ ಕೇಸ್ ನಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಬಂಧನ

Posted by Vidyamaana on 2023-03-27 15:03:02 |

Share: | | | | |


ಲೋಕಾಯುಕ್ತ ಕೇಸ್ ನಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಬಂಧನ

ಬೆಂಗಳೂರು: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಂತ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ರೆಡ್ ಹ್ಯಾಂಡ್ ಆಗಿಯೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಪುತ್ರ ಹಾಗೂ ಶಾಸಕರ ವಿರುದ್ಧ ದೂರು ದಾಖಲಾಗಿತ್ತು. ಬಂಧನದ ಭೀತಿಯಲ್ಲಿದ್ದಂತ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದರು. ಇಂದು ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ, ಲೋಕಾಯುಕ್ತ ಪೊಲೀಸರಿಂದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಲಾಗಿದೆ.

ಲೋಕಾಯುಕ್ತ ಕೇಸ್ ನಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದಂತ ಹೈಕೋರ್ಟ್ ನಡೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರಬರೆದು ಬೆಂಗಳೂರು ವಕೀಲರ ಸಂಘವು ಆಘಾತ ವ್ಯಕ್ತ ಪಡಿಸಿತ್ತು.ಇಂದು ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಅವಧಿ ಕೊನೆಗೊಂಡಿದ್ದ ಕಾರಣ ಮತ್ತೆ ಜಾಮೀನು ಮುಂದುವರೆಸಲು ಮನವಿ ಮಾಡಲಾಗಿತ್ತು. ಆದ್ರೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠವು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದರು. ಅವರು ಚೆನ್ನಗಿರಿಯಿಂದಲೇ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಅರಿತಂತ ಲೋಕಾಯುಕ್ತ ಪೊಲೀಸರು ಮಾರ್ಗ ಮಧ್ಯೆ ಅವರನ್ನು ಪ್ರಕರಣ ಸಂಬಂಧ ಬಂಧಿಸಿದ್ದಾರೆ ಎನ್ನಲಾಗಿದೆ.

ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ ಆತ್ಮಹತ್ಯೆ

Posted by Vidyamaana on 2023-11-13 14:54:17 |

Share: | | | | |


ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ ಆತ್ಮಹತ್ಯೆ

ಮಂಗಳೂರು, ನ.13: ಎಂಬಿಬಿಎಸ್ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಜೆ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ. 


ನಸುಕಿನ ಮೂರು ಗಂಟೆ ವೇಳೆಗೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಮೊದಲ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದ ಪ್ರಕೃತಿ ಶೆಟ್ಟಿ(20) ಮೃತ ವಿದ್ಯಾರ್ಥಿನಿ. 


ಪ್ರಾಥಮಿಕ ಮಾಹಿತಿ ಪ್ರಕಾರ, ದಪ್ಪಗಿದ್ದೇನೆ ಎಂದು ವಿದ್ಯಾರ್ಥಿನಿ ಮಾನಸಿಕ ಖಿನ್ನತೆಯಲ್ಲಿದ್ದಳು. ‌ಇದೇ ಚಿಂತೆಯಲ್ಲಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇವರ ಕುಟುಂಬ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೆಲೆಸಿದ್ದು ಪ್ರಕೃತಿ ಶೆಟ್ಟಿ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಓದುತ್ತಿದ್ದರು. ತಂದೆ ಪ್ರಶಾಂತ ಶೆಟ್ಟಿ ಮತ್ತು ತಾಯಿ ಅಥಣಿಯಲ್ಲಿ ನೆಲೆಸಿದ್ದಾರೆ. ತಾಯಿ ಕಾರ್ಕಳ ಮೂಲದವರಾಗಿದ್ದು ಡಾಕ್ಟರ್ ಕಲಿಯಬೇಕೆಂಬ ಕನಸಿನಲ್ಲಿ ಪುತ್ರಿಯನ್ನು ಪ್ರತಿಷ್ಠಿತ ಎಜೆ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು.

ಬೆಂಗಳೂರು ಕಂಬಳ ನಮ್ಮ ಕಂಬಳ : ಕರೆ ವೀಕ್ಷಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Posted by Vidyamaana on 2023-11-24 20:03:56 |

Share: | | | | |


ಬೆಂಗಳೂರು ಕಂಬಳ ನಮ್ಮ ಕಂಬಳ : ಕರೆ ವೀಕ್ಷಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು : ಕಂಬಳದ ಕರೆ ಮತ್ತು ವ್ಯವಸ್ಥೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವೀಕ್ಷಿಸಿದರು.

ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಕಂಬಳ ನಮ್ಮ ಕಂಬಳ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಕೃಷಿ ಮತ್ತು ರೈತಕಲ್ಯಾಣ ಇಲಾಖೆ ರಾಜ್ಯ ಸಚಿವರು ಹಾಗೂ ಸಂಸದರಾದ ಶೋಭ ಕರಂದ್ಲಾಜೆ ಕರೆಯನ್ನು ವೀಕ್ಷಿಸಿದರು.

ಸಚಿವೆ ಕೋಣದ ಮಾಲಕರೊಂದಿಗೆ ಮಾತುಕತೆ ನಡೆಸಿ ಕೋಣಗಳ ಜೊತೆ ಪೋಟೋ ತೆಗೆದುಕೊಂಡರು.

ಈ ಸಂದರ್ಭ ಬೆಂಗಳೂರು ಕಂಬಳ ಸಮಿತಿಯ ಪದಾಧಿಕಾರಿಗಳು ಹಾಗೂ ಕಂಬಳದ ಅಭಿಮಾನಿಗಳು ಉಪಸ್ಥಿತರಿದ್ದರು.

ಮಣಿಪುರ ಬರಲು ಮೋದಿಗೆ ಮನವಿ: ಕುಸ್ತಿಪಟು ವೇದಿಕೆಯಲ್ಲೇ ಕಣ್ಣೀರು

Posted by Vidyamaana on 2024-03-12 11:07:46 |

Share: | | | | |


ಮಣಿಪುರ ಬರಲು ಮೋದಿಗೆ ಮನವಿ: ಕುಸ್ತಿಪಟು ವೇದಿಕೆಯಲ್ಲೇ ಕಣ್ಣೀರು

ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಕುರಿತಂತೆ ಹಾಗೂ ಅಲ್ಲಿನ ಸಂತ್ರಸ್ತರ ನಿವಾಸಕ್ಕೆ ಒಮ್ಮೆಯಾದರೂ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಣಿಪುರ ಮೂಲದ ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್ನ ಕುಸ್ತಿಪಟು ಒಬ್ಬರು ಪಂದ್ಯದ ವೇದಿಕೆಯಲ್ಲೇ ಮನವಿ ಮಾಡಿರುವುದು ವರದಿಯಾಗಿದೆ.


ಮ್ಯಾಟ್ರಿಕ್ಸ್‌ ಫಿಕ್ಸ್‌ ನೈಟ್‌ ಸಂಸ್ಥೆಯಿಂದ ನಡೆಸಲಾಗುವ ಮಾರ್ಷಲ್‌ ಆರ್ಟ್ಸ್ ಪಂದ್ಯದಲ್ಲಿ ಚಾಂಪಿಯನ್‌ ಶಿಪ್‌ ಬೆಲ್ಟ್ ಅನ್ನು ಎದೆಗಿರಿಸಿಕೊಂಡಿದ್ದ ಕುಸ್ತಿಪಟು ಚುಂಗ್ರೆಂಗ್‌ ಕೊರೇನ್‌ ಮಾಧ್ಯಮಗಳ ಮುಂದೆ ಭಾವುಕರಾಗಿ ಮಾತನಾಡಿದ್ದಾರೆ. ” ಮಣಿಪು ರದಲ್ಲಿ ಹಿಂಸಾಚಾರವಾಗಿ ವರ್ಷವಾಗುತ್ತಾ ಬಂದಿದೆ. ಜನರು ದಿನವೂ ಸಾಯುತ್ತಿದ್ದಾರೆ. ಹಲವರು ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಮಕ್ಕಳಿಗೆ ಓದಲಾಗು ತ್ತಿಲ್ಲ.ನಮಗೆ ಭವಿಷ್ಯದ ಚಿಂತೆ ಕಾಡುತ್ತಿದೆ. ಮೋದಿ ಜೀ ನಿಮ್ಮಲ್ಲಿ ಇದು ನನ್ನ ಕಳಕಳಿಯ ವಿನಂತಿ ಒಮ್ಮೆ ಮಣಿಪುರಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಶಾಂತಿ ಸ್ಥಾಪಿಸಿ’ ಎಂದಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

Posted by Vidyamaana on 2023-10-08 21:18:37 |

Share: | | | | |


ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ಇಸ್ರೇಲ್ ವಿರುದ್ಧ ಹಮಾಸ್ ಬಂಡುಕೋರರು ಮತ್ತೆ ಯುದ್ಧ ಸಾರಿಸಿದ್ದಾರೆ. ಪ್ಯಾಲೆಸ್ತೀನ್​ನ ಹಮಾಸ್​​ ಬಂಡುಕೋರರು ನಿನ್ನೆ(ಅ.07) ದಿಢೀರ್​​ ದಾಳಿ ನಡೆಸಿದ್ದು, ಈ ಯುದ್ಧದಲ್ಲಿ ಇದುವರೆಗೆ 300 ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ. ಮತ್ತು 1750 ಜನರು ಗಾಯಗೊಂಡಿದ್ದಾರೆ.ಈ ನಡುವೆ ಇಸ್ರೇಲ್‌ನಲ್ಲಿ ನಲೆಸಿರುವ ಸಾವಿರಾರು ಭಾರತೀಯರು ನೆಲೆಸಿದ್ದು, ಅದರಲ್ಲೂ ಕನ್ನಡಿಗರು ಸಹ ಇದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕಾಗಿಯೇ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದೆ.


ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಇಸ್ರೇಲ್‌ನಲ್ಲಿ ನಲೆಸಿರುವ ಎಲ್ಲ ಭಾರತೀಯರು ಸುರಕ್ಷಾ ಮತ್ತು ಜಾಗರೂಕರಾಗಿರುವಂತೆ ತಿಳಿಸಿದ್ದಾರೆ. ಜನನಿಬಿಡ ಪ್ರದೇಶಗಳ ಮೇಲೆ ರಾಕೆಟ್ ದಾಳಿ ಮುಂದುವರಿದಿದ್ದು, ಇನ್ನೊಂದೆಡೆ ಇಸ್ರೇಲ್ ಪ್ರವೇಶಿಸಿರುವ ಹಮಾಸ್ ಉಗ್ರರು ಇಸ್ರೇಲಿ ಪ್ರಜೆಗಳನ್ನು ಅಪಹರಿಸುತ್ತಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆ ಮನೆಯಿಂದ ಆಚೆ ಬರದಂತೆ ಸೂಚಿಸಲಾಗಿದೆ. ದೇಶದ ಜನರು ಅದರಲ್ಲೂ ಕನ್ನಡಿಗರು ಸಹ ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಿನಂತಿಸಿಕೊಂಡಿದ್ದಾರೆ.ಅನಗತ್ಯ ಪ್ರಯಾಣಗಳನ್ನು ತಪ್ಪಿಸಬೇಕು ಮತ್ತು ಸುರಕ್ಷತಾ ಅಶ್ರಯಗಳ ಹತ್ತಿರ ಇರುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ (https://www.oref.org.il/en) ಅಥವಾ ಅವರ ಸಿದ್ಧತೆ ಕರಪತ್ರವನ್ನು ನೋಡಿ. ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ಹೇಳಲಾಗಿದೆ.


ಸಹಾಯವಾಣಿ ತುರ್ತು ಸಂದರ್ಭದಲ್ಲಿ +97235226748 ನಲ್ಲಿ ಸಂಪರ್ಕಿಸಿ ಅಥವಾ consl.tel[email protected] ನಲ್ಲಿ e-ಮೇಲ್ ಸಂದೇಶವನ್ನು ಕಳುಹಿಸುವಂತೆ ತಿಳಿಸಲಾಗಿದೆ.


ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ


ಅಗತ್ಯವಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ: 080222340676, 08022253707 ಎಂದು ಸರ್ಕಾರ ಸಹಾಯವಾಣಿ ಬಿಡುಗಡೆ ಮಾಡಿದೆ.

ರಾಜಧರ್ಮ ಪಾಲಿಸಿದ ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2023-09-30 22:09:16 |

Share: | | | | |


ರಾಜಧರ್ಮ ಪಾಲಿಸಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು; ಅಧಿಕಾರದಲ್ಲಿರುವವರು ನ್ಯಾಯ ಪಾಲಿಸಬೇಕು, ರಾಜಧರ್ಮ ಪಾಲಿಸಬೇಕಾಗಿರುವುದು ಕರ್ತವ್ಯವೂ ಆಗಿದೆ ಆದರೆ ಕೆಲವರು ಆ ಕರ್ತವ್ಯವನ್ನು ಮರೆತು ಅಧಿಕಾರ ಅನುಭವಿಸಿದವರೂ ಇದ್ದಾರೆ . ಆದರೆ ಪುತ್ತೂರು ಶಾಸಕರು ಈ ವಿಚಾರದಲ್ಲಿ ತಮ್ಮ ಕರ್ತವ್ಯವನ್ನು ಮರೆತಿಲ್ಲ. ತನ್ನ ಸಹೋದರಿ ನಳಿನಿ ಶೆಟ್ಟಿ ಶನಿವಾರದಂದು ಶಾಸಕರನ್ನು ಭೇಟಿಯಾಗಲು ಶಾಸಕರ ಕಚೇರಿಗೆ ಬಂದಿದ್ದರು. ಶಾಸಕರನ್ನು ಭೇಟಿಯಾಗಲು ಬಂದಿರುವ ಸಾರ್ವಜನಿಕರ ಸಂಖ್ಯೆಯೂ ಅಪಾರವಾಗಿತ್ತು. ತನ್ನ ಸಹೋದರಿ ತನಗಾಗಿ ಕಾಯುತ್ತಿದ್ದಾರೆ ಎಂಬ ವಿಚಾರ ಶಾಸಕರಿಗೆ ಗೊತ್ತಿತ್ತು. ಆದರೆ ಶಾಸಕರು ತನ್ನ ಸಹೋದರಿಯನ್ನು ಕರೆಯಲಿಲ್ಲ.‌ಸರತಿ ಸಾಲಿನಲ್ಲೇ ಬಂದ ನಳಿನಿ ಶೆಟ್ಟಿಯವರು ಅರ್ಜಿ ಸಲ್ಲಿಸಿ ಅಲ್ಲಿಂದ ತೆರಳಿದರು.‌ಶಾಸಕರ ಈ ನ್ಯಾಯದ ನಡೆ ಅಲ್ಲಿದ್ದವರಿಗೆ ಶಾಸಕರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿತು

Recent News


Leave a Comment: