ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಸುದ್ದಿಗಳು News

Posted by vidyamaana on 2024-07-23 06:33:29 | Last Updated by Vidyamaana on 2024-07-23 06:33:29

Share: | | | | |


ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಮುಂಬೈ :ಫಿಟ್ನೆಸ್ ಕಾಪಾಡಿಕೊಳ್ಳಲು ಹಲವರು ಜುಂಬಾ ಡ್ಯಾನ್ಸ್ ಮೊರೆ ಹೋಗುತ್ತಾರೆ. ಪ್ರತಿ ದಿನ ಜುಂಬಾ ಡ್ಯಾನ್ಸ್ ಕ್ಲಾಸ್‌ಗೆ ತೆರಳಿ ಬೆವರು ಹರಿಸುತ್ತಾರೆ. ಹೀಗೆ ಮಹಾರಾಷ್ಟ್ರದ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಫಿಟ್ನೆಸ್‌ಗಾಗಿ ಪ್ರತಿ ದಿನ ಜುಂಬಾ ಕ್ಲಾಸ್‌ಗೆ ತೆರಳಿ ಡ್ಯಾನ್ಸ್ ಮಾಡುತ್ತಾ ಬೆವರು ಹರಿಸುತ್ತಾರೆ.

ಇಂದು ಬೆಳಗ್ಗೆ ಜುಂಬಾ ಡ್ಯಾನ್ಸ್ ಮಾಡುತ್ತಿದ್ದಂತೆ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಉದ್ಯಮಿ ಬದುಕುಳಿಯಲಿಲ್ಲ.


ಛತ್ರಪತಿ ಸಂಭಾಜಿನಗರದ ನಿವಾಸಿಯಾಗಿರುವ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರತಿದಿನ ಜುಂಬಾ ಡ್ಯಾನ್ಸ್ ಮಾಡುತ್ತಾರೆ. ಎಂದಿನಂತೆ ಇಂದೂ ಕೂಡ ಅವಲ್ಜಿತ್ ಸಿಂಗ್ ಬಾಗ್ಗಾ ಜುಂಬಾ ಡ್ಯಾನ್ಸ್‌ಗೆ ತೆರಳಿದ್ದಾರೆ. ಅವಲ್ಜಿತ್ ಸಿಂಗ್ ರೀತಿಯಲ್ಲಿ ಇತರ ಕೆಲವರು ಜುಂಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಜುಂಬಾ ಕ್ಲಾಸ್ ತೆರಳಿ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದಾರೆ. ಹಲವರು ಇದೇ ಕ್ಲಾಸ್‌ನಲ್ಲಿ ಅವಲ್ಜಿತ್ ಸಿಂಗ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಕೊನೆಯ ಸಾಲಿನ ಬದಿಯಲ್ಲಿದ್ದ ಅವಲ್ಜಿತ್ ಸಿಂಗ್ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡಲು ಸಾಧ್ಯವಾಗದೆ ನಿಂತಿದ್ದಾರೆ. ಚೇತರಿಸಿಕೊಳ್ಳಲು ಕೆಲ ಕ್ಷಣ ನಿಂತಿದ್ದಾರೆ. ಇತರರು ಡ್ಯಾನ್ಸ್‌ನಲ್ಲಿ ತಲ್ಲೀನರಾಗಿದ್ದರು. ಆದರೆ ಅವಲ್ಜಿತ್ ಸಿಂಗ್ ಚೇತರಿಸಿಕೊಳ್ಳಲಿಲ್ಲ. ಕಾರಣ ತೀವ್ರ ಹೃದಯಾಘಾತದಿಂದ ಅವಲ್ಜಿತ್ ಕುಸಿದಿದ್ದಾರೆ. ಈ ವೇಳೆ ಮೆಲ್ಲನೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಅವಲ್ಜಿತ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಇತರರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ನೀರು ತಂದು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದಕ್ಕೂ ಅವಲ್ಜಿತ್ ಸಿಂಗ್ ಸ್ಪಂದಿಸಿಲ್ಲ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅವಲ್ಜಿತ್ ಎತ್ತಿಕೊಂಡು ವಾಹನದ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಿಸುವ ಮೊದಲೇ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರಾಣ ಪಕ್ಷಿ ಹಾರಿಹೋಗಿದೆ. ತಪಾಸಣೆ ನಡೆಸಿದ ವೈದ್ಯರು ಅವಲ್ಜಿತ್ ಸಿಂಗ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಜಿಮ್ ಅಭ್ಯಾಸದ ವೇಳೆ ಈ ರೀತಿ ಹೃದಯಾಘಾತಕ್ಕೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗೆ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಉದ್ಯಮಿ ಅವಲ್ಜಿತ್ ಸಿಂಗ್ ಬಾಗ್ಗಾ ನಿಧನ ಸುದ್ದಿ ಆತಂಕ ಹೆಚ್ಚಿಸಿದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಕವಲ್ಜಿತ್ ಸಿಂಗ್ ದಿಢೀರ್ ನಿಧನ ಇದೀಗ ಮತ್ತೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

 Share: | | | | |


ಪಾಕಿಸ್ತಾನ ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ನೀಲೇಶ್ ಬಾಲಿಯಾ ಬಂಧನ

Posted by Vidyamaana on 2023-07-08 14:27:30 |

Share: | | | | |


ಪಾಕಿಸ್ತಾನ ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ನೀಲೇಶ್ ಬಾಲಿಯಾ ಬಂಧನ

ಸೂರತ್: ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಗಡಿ ಭದ್ರತಾ ಪಡೆ (BSF) ನೌಕರನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆಬಂಧಿತ ಆರೋಪಿ ನೀಲೇಶ್ ಬಾಲಿಯಾ ಕಳೆದ ಐದು ವರ್ಷಗಳಿಂದ ಬಿಎಸ್‌ಎಫ್‌ನ ಭುಜ್ ಪ್ರಧಾನ ಕಚೇರಿಯಲ್ಲಿ ಸಿಪಿಡಬ್ಲ್ಯೂಡಿಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.2023 ರ ಜನವರಿಯಲ್ಲಿ ಪಾಕಿಸ್ಥಾನದ ಮಹಿಳಾ ಗುಪ್ತಚರ ಏಜೆಂಟ್ ಳೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ

ಕಡಬ: ಕೆ ಎಸ್ ಆರ್ ಟಿ ಸಿ ಬಸ್ ಗೆ ದಂತದಿಂದ ತಿವಿದ ಕಾಡಾನೆ - ಬಸ್ ಗೆ ಹಾನಿ

Posted by Vidyamaana on 2023-06-02 00:38:28 |

Share: | | | | |


ಕಡಬ: ಕೆ ಎಸ್ ಆರ್ ಟಿ ಸಿ ಬಸ್ ಗೆ ದಂತದಿಂದ ತಿವಿದ ಕಾಡಾನೆ - ಬಸ್ ಗೆ ಹಾನಿ

ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ  ಬಸ್ ಗೆ ಕಾಡಾನೆಯೊಂದು ದಂತದಿಂದ ತಿವಿದ ಹಿನ್ನೆಲೆಯಲ್ಲಿ ಬಸ್ ಗೆ ಹಾನಿಯಾದ ಘಟನೆ ಸುಬ್ರಹ್ಮಣ್ಯ - ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಚಾಲಕ ಅನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಿಸಿದರಾದರೂ, ಆನೆಯು ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬಸ್ಸಿಗೆ ಹಾನಿಯಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಟ್ಲ : ಆಟೋ ಚಾಲಕನಿಗೆ ಚೂರಿ ಇರಿತ; ಆರೋಪಿ ಆಫೀ ಪೊಲೀಸ್ ವಶಕ್ಕೆ

Posted by Vidyamaana on 2024-08-18 14:03:25 |

Share: | | | | |


ವಿಟ್ಲ : ಆಟೋ ಚಾಲಕನಿಗೆ ಚೂರಿ ಇರಿತ; ಆರೋಪಿ ಆಫೀ ಪೊಲೀಸ್ ವಶಕ್ಕೆ

ವಿಟ್ಲ: ಉರಿಮಜಲು ಜಂಕ್ಷನ್‌ನಲ್ಲಿ ಓರ್ವ ವ್ಯಕ್ತಿಗೆ ಎಲ್ಲರ ಕಣ್ಣಮುಂದೆಯೇ ಆರೋಪಿ ಚೂರಿ ಇರಿದ ಘಟನೆ ಭಾನುವಾರ (ಆ.18ರಂದು) ಸಂಭವಿಸಿದೆ.ಎಂಎಂಎಸ್ ಆಟೋ ಚಾಲಕ ಶರೀಫ್ ಎಂಬವನಿಗೆ ಇಡ್ಕಿದು ಪಂಚಾಯತ್‌ನ ಎದುರಲ್ಲಿ ಕಾರ್ಯಾಡಿ ನಿವಾಸಿ ಆಪೀ ಎಂಬವನು ಚೂರಿ ಇರಿದಿದ್ದಾನೆ.

ಲೀಲಣ್ಣೆ ದಾಯೆ ಇಂಚ ಮಲ್ತೊಂಡೆರ್..? ಎಲ್ಲರಲ್ಲೂ ಇದೊಂದೇ ಪ್ರಶ್ನೆ

Posted by Vidyamaana on 2023-12-15 08:30:29 |

Share: | | | | |


ಲೀಲಣ್ಣೆ ದಾಯೆ ಇಂಚ ಮಲ್ತೊಂಡೆರ್..? ಎಲ್ಲರಲ್ಲೂ ಇದೊಂದೇ ಪ್ರಶ್ನೆ

ಉಡುಪಿ: ಹೆಸರಾಂತ ರಂಗಕರ್ಮಿ, ಸಮಾಜ ಸೇವಕರಾಗಿದ್ದ ಕಾಪು ಲೀಲಾಧರ ಶೆಟ್ಟಿ (68) ತಮ್ಮ ಪತ್ನಿ ವಸುಂಧರಾ ಶೆಟ್ಟಿ(58) ಜೊತೆಗೆ ದಿಢೀರ್ ಸಾವಿಗೆ ಶರಣಾಗಿರುವುದಕ್ಕೆ ಕಾಪು ಭಾಗದಲ್ಲಿ ಮತ ಭೇದ ಇಲ್ಲದೆ ಜನಸಾಮಾನ್ಯರು ಕಣ್ಣೀರು ಸುರಿಸಿದ್ದಾರೆ. ಜನರ ಜೊತೆಗೆ ಲೀಲಾಧರ ಶೆಟ್ಟಿ ಎಷ್ಟು ಬಾಂಧವ್ಯ ಇಟ್ಟುಕೊಂಡಿದ್ದರು ಎನ್ನುವುದಕ್ಕೆ ಬುಧವಾರ ಸಂಜೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ.


ಇಬ್ಬರ ಮೃತದೇಹಗಳನ್ನೂ ತೆರೆದ ವಾಹನದಲ್ಲಿರಿಸಿ ಕಾಪು ಪೇಟೆಯಿಂದ ಮೆರವಣಿಗೆ ಮೂಲಕ ತಂದು ಕರಂದಾಡಿಯ ಶ್ರೀರಾಮ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಮೆರವಣಿಗೆ ಉದ್ದಕ್ಕೂ ಸಾವಿರಾರು ಮಂದಿ ಸೇರಿದ್ದಲ್ಲದೆ, ಎಲ್ಲರೂ ಕಣ್ಣಲ್ಲಿ ನೀರು ಸುರಿಸಿಕೊಂಡೇ ಹೆಜ್ಜೆ ಹಾಕಿದರು. ಕಾಪು ಪೇಟೆಯಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಇಡೀ ಕಾಪು ಪೇಟೆಯೇ ಸ್ಮಶಾನ ಮೌನಕ್ಕೆ ಜಾರಿತ್ತು. ಬಳಿಕ ಕರಂದಾಡಿಯ ಮನೆಯ ಆವರಣದಲ್ಲಿ ಲೀಲಾಧರ ಶೆಟ್ಟಿ ದಂಪತಿ ಶವಗಳನ್ನು ಒಂದೇ ಚಿತೆಯಲ್ಲಿಟ್ಟು ಅಗ್ನಿಸ್ಪರ್ಶ ಮಾಡಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಲಾಲಾಜಿ ಮೆಂಡನ್, ಐಕಳ ಹರೀಶ್ ಶೆಟ್ಟಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದರು.ಮರ್ಯಾದೆಗೆ ಅಂಜಿ ಸಾವಿಗೆ ಶರಣು


ಲೀಲಾಧರ ಶೆಟ್ಟಿ ಸಾವಿನ ಸುದ್ದಿ ಬರುತ್ತಲೇ, ದಿಢೀರ್ ಯಾಕೆ ಈ ರೀತಿ ಮಾಡಿಕೊಂಡರು, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಜನವೇ ಅಲ್ಲ ಅನ್ನುವುದೇ ಎಲ್ಲರ ಮಾತಾಗಿತ್ತು. ಯಾಕಂದ್ರೆ, ಸಾವಿನ ದಾರಿ ಹಿಡಿದ ಹಲವಾರು ಮಂದಿಗೆ ಲೀಲಾಧರ ಶೆಟ್ಟಿ ಅವರೇ ದಿಕ್ಕು ತೋರಿಸಿದ್ದರು. ಎಷ್ಟೋ ಮಂದಿಗೆ ಉದ್ಯೋಗ, ಸಹಾಯ ಒದಗಿಸಿ ಜನರ ಪಾಲಿಗೆ ಕರುಣಾಮಯಿ ಆಗಿದ್ದರು. ಜಾತಿ ಭೇದ ಇಲ್ಲದೆ, ಸಮಾಜದಲ್ಲಿ ಸೇವೆಯನ್ನೇ ವೃಥವನ್ನಾಗಿಸಿಕೊಂಡಿದ್ದರು. ಈಗ ತಿಳಿದುಬರುತ್ತಿರುವ ಮಾಹಿತಿ ಪ್ರಕಾರ, ಲೀಲಾಧರ ಶೆಟ್ಟಿ ದಂಪತಿ ತಮ್ಮ ಸಾವಿನ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಮರ್ಯಾದೆ ಹೋದ ಕಾರಣಕ್ಕೆ ಇಂತಹ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.   ಇದೇ ವಿಚಾರದಲ್ಲಿ ಲೀಲಾಧರ ಶೆಟ್ಟಿ ಅವರ ಅಕ್ಕನ ಮಗ ಮೋಹನ್ ಕುಮಾರ್ ಶೆಟ್ಟಿ ಕಾಪು ಠಾಣೆಗೆ ನೀಡಿರುವ ದೂರಿನಲ್ಲಿ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ಲೀಲಾಧರ ಶೆಟ್ಟಿ ದಂಪತಿ ಮಕ್ಕಳಿಲ್ಲದ ಕಾರಣ 16 ವರ್ಷಗಳ ಹಿಂದೆ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದರು. ಬೆಳೆದು ದೊಡ್ಡವಳಾಗಿದ್ದ ಆಕೆ ಪಿಯುಸಿ ಓದುತ್ತಿದ್ದಳು. ಇತ್ತೀಚೆಗೆ ಮನೆಯ ದುರಸ್ತಿ ಕಾರ್ಯಕ್ಕೆ ತಮಿಳುನಾಡು ಮೂಲದ ಯುವಕನೊಬ್ಬ ಬಂದಿದ್ದು ಆತನ ಜೊತೆಗೆ ಯುವತಿಗೆ ಪ್ರೀತಿಯಾಗಿತ್ತು. ಎರಡು ದಿನಗಳ ಹಿಂದೆ ಆಕೆ ಮನೆ ಬಿಟ್ಟು ಹೋಗಿದ್ದು, ತನ್ನನ್ನು ಹುಡುಕುವುದು ಬೇಡ. ತನ್ನ ಸ್ವಇಚ್ಛೆಯಿಂದ ತೆರಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದಳು. ಆಕೆ, ತಮಿಳುನಾಡಿನ ಯುವಕನ ಜೊತೆಗೆ ತೆರಳಿರುವ ಶಂಕೆ ಇದೆ. ಮಗಳು ನಾಪತ್ತೆಯಾದ ಬಗ್ಗೆ ಲೀಲಾಧರ ಶೆಟ್ಟಿ ದಂಪತಿ ಹುಡುಕಾಡಿದ್ದು, ಸಿಗದೇ ಇದ್ದಾಗ ಮಾನಸಿಕವಾಗಿ ಕುಗ್ಗಿದ್ದರಿಂದ ಬದುಕು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.


ದತ್ತು ಪುತ್ರಿ ಮನೆ ಬಿಟ್ಟು ಹೋಗಿದ್ದರಿಂದ ಮರ್ಯಾದೆಗೆ ಅಂಜಿ, ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿನಲ್ಲಿ ಬೇರೆ ಯಾವುದೇ ಸಂಶಯಗಳಿಲ್ಲ ಎಂದು ಮೋಹನ್ ಕುಮಾರ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ಕಾಣೆಯಾದ ಬಗ್ಗೆ ಮತ್ತು ದಂಪತಿ ಆತ್ಮಹತ್ಯೆ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನೊಳಗೆ ಇರಲೇ ಇಲ್ಲ ಆ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ

Posted by Vidyamaana on 2023-11-05 18:32:53 |

Share: | | | | |


ಕಾರಿನೊಳಗೆ ಇರಲೇ ಇಲ್ಲ ಆ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ

ತಿರುವನಂತಪುರ: ಕೇರಳದಲ್ಲೊಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಎಐ ಚಾಲಿತ ಕ್ಯಾಮೆರಾ ಟ್ರಾಫಿಕ್ ಉಲ್ಲಂಘನೆಯನ್ನು ಪತ್ತೆಹಚ್ಚಿತ್ತು. ಬಳಿಕ ಕಾರು ಮಾಲಕರಿಗೆ ದಂಡಸ ಚಲನ್ ನೀಡಿದಾಗ ಅದರಲ್ಲಿ ಎಐ ಕ್ಯಾಮೆರಾದ ಸೆರೆಹಿಡಿದಿದ್ದ ಫೋಟೋ ನೋಡಿ ಮಾಲಕರು ಗಾಬರಿಗೊಂಡಿದ್ದಾರೆ

ಏಕೆಂದರೆ, ಆ ಸಮುದಲ್ಲಿ ಕಾರಿನಲ್ಲಿ ಇಬ್ಬರೇ ಪ್ರಯಾಣಿಸುತ್ತಿದ್ದರು ಆದರೆ ದಂಡದ ಚಲನ್ ನಲ್ಲಿ ಪ್ರಿಂಟ್ ಆಗಿದ್ದ ಕಾರಿನ ಫೊಟೋದಲ್ಲಿ ಮೂವರಿರುವುದು ಕಂಡುಬಂದಿದೆ.

ಚೆರುವತ್ತೂರಿನ ಕೈತಕ್ಕಾಡ್ ಮೂಲದ ಆದಿತ್ಯನ್ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಪಯ್ಯನ್ನೂರಿನಲ್ಲಿ ಅಳವಡಿಸಲಾಗಿದ್ದ ಎಐ ಕ್ಯಾಮೆರಾದಲ್ಲಿ ಈ ಮೇಲಿನ ಚಿತ್ರ ಸೆರೆಯಾಗಿದೆ.

ಟ್ರಾಫಿಕ್ ಪೊಲೀಸರು ನೀಡಿರುವ ನೋಟೀಸ್ನಲ್ಲಿರುವ ಚಿತ್ರವು ಕಾರಿನ ಹಿಂಬದಿಯ ಸೀಟಿನಲ್ಲಿ ಇನ್ನೊಬ್ಬ ಮಹಿಳೆಯ ಆಕೃತಿಯನ್ನು ತೋರಿಸುತ್ತದೆ. ಆದರೆ ಅಂತಹ ವ್ಯಕ್ತಿ ಕಾರಿನಲ್ಲಿರಲಿಲ್ಲ ಎಂದು ಆದಿತ್ಯನ್ ಮತ್ತು ಆತನ ಕುಟುಂಬದವರು ವಾದಿಸಿದ್ದಾರೆ. ಹಾಗದರೆ ಆ ಮಹಿಳೆ ಯಾರು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.

ಚಲನ್ ಮೇಲೆ ವಾಹನದಲ್ಲಿ ಇಲ್ಲದವರ ಫೋಟೋ ಮುದ್ರಿಸಿರುವುದು ಮೋಟಾರು ವಾಹನ ಇಲಾಖೆಗೂ ಗೊಂದಲ ಮೂಡಿಸಿದ್ದು ಇದು ತಾಂತ್ರಿಕ ದೋಷದಿಂದ ಆಗಿರುವ ಎಡವಟ್ಟೋ ಅಥವಾ ಇನ್ನಾವುದಾದರೂ ‘ನಿಗೂಢ’ ಶಕ್ತಿಯ ಕೈವಾಡವೋ ಎಂಬ ಬಿಸಿ ಬಿಸಿ ಚರ್ಚೆ ಇದೀಗ ನೆಟ್ಟಿಗರ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.

ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ : ಬೇಸರ ವ್ಯಕ್ತಪಡಿಸಿದ ಡಿವಿಎಸ್‌

Posted by Vidyamaana on 2023-10-28 05:17:56 |

Share: | | | | |


ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ : ಬೇಸರ ವ್ಯಕ್ತಪಡಿಸಿದ ಡಿವಿಎಸ್‌

ಬೆಂಗಳೂರು : ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಬಗ್ಗೆ ಮಾತನಾಡೋದಕ್ಕೆ ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ ಎಂದು ದೆಹಲಿಗೆ ತೆರಳಿದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ನಿರಾಸೆ ವ್ಯಕ್ತಪಡಿಸಿದ್ದಾರೆ.ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಕುರಿತು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಅವರಿಗೆ ಡಿವಿ ಸದಾನಂದಗೌಡ ಪತ್ರ ಬರೆದಿದ್ದರು.

ಪತ್ರ ಓದಿದ್ದ ಜೆಪಿ ನಡ್ಡಾ ದೆಹಲಿಯಲ್ಲಿ ಬಂದು ಭೇಟಿ ಮಾಡಿ, ಚರ್ಚಿಸಲು ಸೂಚನೆ ನೀಡಿದ್ದರು. ಈ ಬೆನ್ನಲ್ಲೆ ಡಿವಿಎಸ್, ಜೆಪಿ ನಡ್ಡಾ ಸೇರಿದಂತೆ ಬೇರೆ ಬೇರೆ ನಾಯಕರ ಭೇಟಿಗೆ ದೆಹಲಿಗೆ ಬಂದಿದ್ದರು .ಪಂಚ ರಾಜ್ಯಗಳ ಚುನಾವಣೆ ಭರದಲ್ಲಿರುವ ವರಿಷ್ಠರು ಭೇಟಿಗೆ ಸಮಯ ನೀಡಿಲ್ಲ ಎಂದಿದ್ದಾರೆ.



Leave a Comment: