ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


ಗುಜರಾತ್‌ : ಆರ್ಥಿಕ ಸಮಸ್ಯೆ ಸಾಮೂಹಿಕ ಆತ್ಮಹತ್ಯೆ

Posted by Vidyamaana on 2023-10-28 20:16:31 |

Share: | | | | |


ಗುಜರಾತ್‌ : ಆರ್ಥಿಕ ಸಮಸ್ಯೆ ಸಾಮೂಹಿಕ ಆತ್ಮಹತ್ಯೆ

ಸೂರತ್, ಅ 28: ಮೂವರು‌ ‌ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಶವವಾಗಿ ಪತ್ತೆಯಾಗಿರುವ ಘಟನೆ ಗುಜರಾತ್‌ ನ ಸೂರತ್‌ನಲ್ಲಿ ಶನಿವಾರ ನಡೆದಿದೆ.


ಸೂರತ್‌ನ ಪಾಲನ್‌ಪುರ ಜಕತ್ನಾಕ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದಾರೆ.


6 ಮಂದಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದು, ಒಬ್ಬರು ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.


ಮನೀಶ್ ಸೋಲಂಕಿ, ಅವರ ಪತ್ನಿ ರೀಟಾ, ಅವರ ತಂದೆ ಕಾನು, ಅವರ ತಾಯಿ ಶೋಭಾ ಮತ್ತು ಮೂವರು ಮಕ್ಕಳಾದ ದಿಶಾ, ಕಾವ್ಯ ಮತ್ತು ಕುಶಾಲ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ಕುಟುಂಬವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿತ್ತು ಎಂದು ಬರೆದಿರುವ ಪತ್ರವನ್ನು ಪೊಲೀಸರು ಘಟಾನ ಸ್ಥಳದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.


ಆರ್ಥಿಕ ಸಮಸ್ಯೆಯಿಂದಲೇ ಈ ಹೆಜ್ಜೆಯನ್ನಿಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಹಿಂದಿನ ನಿಖರ ಕಾರಣ ತನಿಖೆ ಬಳಿಕವಷ್ಟೇ ತಿಳಿದು ಬರಬೇಕಿದೆ.


ಫರ್ನಿಚರ್‌ ವ್ಯವಹಾರವನ್ನು ಮಾಡುತ್ತಿದ್ದ ಮನೀಶ್ ಸೋಲಂಕಿ ಅವರಿಗೆ ಶನಿವಾರ ಮುಂಜಾನೆ ಕೆಲಸಗಾರರು ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದಿದ್ದಾಗ ಮನೆಯ ಬಳಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.


ಮಧ್ಯರಾತ್ರಿಯೇ ಕುಟುಂಬದ ಎಲ್ಲರಿಗೂ ವಿಷ ನೀಡಿ ಮನೀಶ್ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಅವರ ಸಾವಿನ ಸಮಯ ಹಾಗೂ ಕಾರಣಗಳು ಸ್ಪಷ್ಟವಾಗಲಿದೆ

ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣ

Posted by Vidyamaana on 2023-11-11 15:02:09 |

Share: | | | | |


ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣ

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಛೇರಿಯ ಮುಂಭಾಗದಲ್ಲಿ ತಲ್ವಾರ್‌ನೊಂದಿಗೆ ಕಾರಿನಲ್ಲಿ ಬಂದ ತಂಡ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ.10ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಶಾಂತಿಗೋಡು ಗ್ರಾಮದ ದಿನೇಶ್ ಪಂಜಿಗ(38ವ), ನರಿಮೊಗರು ಗ್ರಾಮದ ಭವಿತ್(19ವ), ಬೊಳುವಾರು ನಿವಾಸಿ ಮನ್ವಿತ್(18ವ), ಚಿಕ್ಕಮುನ್ನೂರು ಗ್ರಾಮದ ಜಯಪ್ರಕಾಶ್(18ವ), ಚಿಕ್ಕಮುನ್ನೂರು ಗ್ರಾಮದ ಚರಣ್(23ವ), ಬನ್ನೂರು ಗ್ರಾಮದ ಮನೀಶ್(23ವ), ಕಸಬ ಗ್ರಾಮದ ವಿನೀತ್(19ವ) ಸಹಿತ ಇಬ್ಬರು ಅಪ್ರಾಪ್ತ ಪ್ರಾಯದ ಬಾಲಕರನ್ನು ಪೊಲಿಸರು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ನ.11ರಂದು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಅರೋಪಿಗಳಿಗೆ ನ.15ರ ತನಕ ನ್ಯಾಯಾಂಗ ಕಸ್ಟಡಿಗೆ ನೀಡಿದ್ದಾರೆ

ಇಬ್ಬರು ಪುರುಷರೊಂದಿಗಿದ್ದ ಪತ್ನಿ; ಹೋಟೆಲ್ ಗೆ ನುಗ್ಗಿ ಚಪ್ಪಲಿಯಲ್ಲಿ ಥಳಿಸಿದ ಪತಿ

Posted by Vidyamaana on 2024-05-14 07:21:10 |

Share: | | | | |


ಇಬ್ಬರು ಪುರುಷರೊಂದಿಗಿದ್ದ ಪತ್ನಿ; ಹೋಟೆಲ್ ಗೆ ನುಗ್ಗಿ ಚಪ್ಪಲಿಯಲ್ಲಿ ಥಳಿಸಿದ ಪತಿ

ಉತ್ತರ ಪ್ರದೇಶ: ವೈದ್ಯರೊಬ್ಬರು ತನ್ನ ಪತ್ನಿಯನ್ನು ಹೋಟೆಲ್‌ ರೂಮ್ ನಲ್ಲಿ ಇತರ ಇಬ್ಬರು ಪುರುಷರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ವೇಳೆ ದಾಲ್ ನಡೆಸಿ ಹಿಡಿದು ಕೆಂಡಾಮಂಡಲವಾಗಿ ಬಡಿದಾಡಿಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ಕಡೆಯವರ ನಡುವೆ ನಡೆದ ತೀವ್ರ ವಾಗ್ವಾದ ಮತ್ತು ಘರ್ಷಣೆ ನಡೆದಿದ್ದು ಕೆಮರಾದಲ್ಲಿ ಸೆರೆಯಾಗಿದೆ.

ಪತ್ನಿಯ ಚಟುವಟಿಕೆಯಿಂದ ಅನುಮಾನಗೊಂಡ ವೈದ್ಯ ಇತರರೊಂದಿಗೆ ಗುರುವಾರ ರಾತ್ರಿ ಹೊಟೇಲ್ ಕೋಣೆಗೆ ನುಗ್ಗಿದ್ದು, ಹೆಂಡತಿಯೊಂದಿಗೆ ಇಬ್ಬರು ಪುರುಷರನ್ನು ಆಕ್ಷೇಪಾರ್ಹ ಪರಿಸ್ಥಿತಿಯಲ್ಲಿ ಕಂಡಿದ್ದಾರೆ. ಈ ವೇಳೆ ಕುಟುಂಬ ಸದಸ್ಯರು ಮತ್ತು ಇಬ್ಬರು ಪುರುಷರ ನಡುವೆ ದೈಹಿಕ ಘರ್ಷಣೆ ನಡೆದು ಹೈಡ್ರಾಮಾ ನಡೆದಿದೆ. ಘಟನೆ ಈಗ ಬಟಾಬಯಲಾಗಿದೆ.

ಪುತ್ತೂರು ನಗರ ಪೊಲೀಸ್, ಸಂಚಾರಿ ಪೊಲೀಸ್‌ ಠಾಣೆ, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಮಾದಕ ದ್ರವ್ಯ ಮುಕ್ತ ಪುತ್ತೂರು, ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮ.

Posted by Vidyamaana on 2024-08-17 06:03:25 |

Share: | | | | |


ಪುತ್ತೂರು ನಗರ ಪೊಲೀಸ್, ಸಂಚಾರಿ ಪೊಲೀಸ್‌ ಠಾಣೆ, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಮಾದಕ ದ್ರವ್ಯ ಮುಕ್ತ ಪುತ್ತೂರು, ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮ.

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರಿ ಪೊಲೀಸ್‌ ಠಾಣೆ, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್(ಅಮರ್ ಅಕ್ಟರ್ ಅಂತೋನಿ ಕ್ರಿಕೆಟ್ ಸಂಘಟಕರು) ಜಂಟಿ ಸಹಯೋಗದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಮಾದಕ ದ್ರವ್ಯ ಅಳಿಸಿ, ನಮ್ಮೂರ ಉಳಿಸಿ. ನಮ್ಮ ಜೀವ ನಮ್ಮ ರಕ್ಷಣೆ ಎಂಬ ಧೈಯವಾಕ್ಯದಡಿಯಲ್ಲಿ ಮಾದಕ ದ್ರವ್ಯ ಮುಕ್ತ ಪುತ್ತೂರು, ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮ ಆ.15 ರಂದು ಪುತ್ತೂರು ಬಸ್ಸು ನಿಲ್ದಾಣದ ಗಾಂಧಿ ಕಟ್ಟೆಯ ಬಳಿ ಜರಗಿತು.

ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್‌ಐ ಆಂಜನೇಯ ರೆಡ್ಡಿ ಮಾತನಾಡಿ, ದೇಶವನ್ನು ಕಾಯುವ ನಮ್ಮ ಹೆಮ್ಮೆಯ ಸೈನಿಕರಿಗೆ ಅವರ ಸೇವೆಗೆ ಸೆಲ್ಯೂಟ್ ಹೊಡೆಯಬೇಕಾಗಿದೆ. ಮಿಲಿಟ್ರಿ ದೇಶ ಏನೆಂಬುದನ್ನು ನಮ್ಮ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದಾಗ ದೇಶವು ದೇಶಭಕ್ತ ಎನಿಸಿಕೊಳ್ಳುವುದು. ದೇಶವನ್ನು, ಕುಟುಂಬವನ್ನು ಮುನ್ನೆಡೆಸುವ ಯುವಸಮೂಹವು ಇಂದು ಮಾದಕ ದ್ರವ್ಯದತ್ತ ಒಲವು ತೋರುತ್ತಿರುವುದು ಖೇದಕರ. ಮಾದಕ ವಸ್ತುಗಳು ಇಂದು ಅವ್ಯಾಹಕವಾಗಿ ಬೆಳೆಯುತ್ತಿದ್ದು ಇದು ಯುವಸಮೂಹವನ್ನು ದುರಂತದೆಡೆಗೆ ಸಾಗಿಸುತ್ತಿದೆ ಎಂದ ಅವರು ಪುತ್ತೂರಿನಲ್ಲಿ ೧೫೦ ಮಂದಿ ಪೊಲೀಸ್ ಇದ್ದರೂ ಎಲ್ಲವನ್ನೂ ತಡೆಯಲು ಸಾಧ್ಯವಾಗೋದಿಲ್ಲ. ಕೇವಲ ಮಾದಕ ದ್ರವ್ಯಗಳು ಮಾತ್ರವಲ್ಲ ಫೇಸ್‌ಬುಕ್ ಲವ್, ಅಪಾಯವೆಂದು ಗೊತ್ತಿದ್ದರೂ ನದಿಗಳ ದಡದಲ್ಲಿ ಸೆಳ್ಳಿ ತೆಗೆಯುವುದು, ಹಾವಿನೊಂದಿಗೆ ಸೆಲ್ಪಿ ಇವುಗಳೂ ಕೂಡ ಮಾದಕ ದ್ರವ್ಯದ ಭಾಗವೆನಿಸಿದೆ. ಆದ್ದರಿಂದ ಭಾರತ ಸದೃಢವಾಗಬೇಕಾದರೆ ಯುವಸಮೂಹ ಸದೃಢವಾಗಬೇಕು ಎಂದಾದರೆ ಯುವಸಮೂಹ ಇಂತಹ ವ್ಯಸನಗಳಿಂದ ಎಚ್ಚೆತ್ತು ಮುಂದುವರೆಯಬೇಕಾಗಿದೆ ಎಂದು ಅವರು ಹೇಳಿದರು.

ವಂಚನೆ ಪ್ರಕರಣ ; ಆರೋಪಿ ಚೈತ್ರಾ ಜೊತೆಗೆ ಕುಂದಾಪುರ ಸ್ಥಳನಾಮ ಬಳಸದಂತೆ ಮಾಧ್ಯಮಗಳಿಗೆ ಕೋರ್ಟ್​​ ತಡೆಯಾಜ್ಞೆ

Posted by Vidyamaana on 2023-09-24 07:16:32 |

Share: | | | | |


ವಂಚನೆ ಪ್ರಕರಣ ; ಆರೋಪಿ ಚೈತ್ರಾ ಜೊತೆಗೆ ಕುಂದಾಪುರ ಸ್ಥಳನಾಮ ಬಳಸದಂತೆ ಮಾಧ್ಯಮಗಳಿಗೆ ಕೋರ್ಟ್​​ ತಡೆಯಾಜ್ಞೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್​ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂ. ವಂಚನೆ ನಡೆಸಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಹೆಸರಿನ ಜೊತೆಗೆ ‘ಕುಂದಾಪುರ’ ಎಂಬ ಸ್ಥಳನಾಮ ಬಳಸದಂತೆ ಬೆಂಗಳೂರು ನಗರದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.


ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಆರೋಪಿ ಜೊತೆಗಿನ ಕುಂದಾಪುರ ಹೆಸರು ತೆಗೆದುಹಾಕುವಂತೆ ಕೋರಿ ನ್ಯಾಯಾಲಯಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಉದ್ಯಮಿ, ಪ್ರಸ್ತುತ ಬೆಂಗಳೂರು ಹನುಮಂತ ನಗರದ ನಿವಾಸಿ ಗಣೇಶ್​ ಶೆಟ್ಟಿ ಅರ್ಜಿ ಸಲ್ಲಿಸಿದ್ದರು.


ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಅವರ ಸುದ್ದಿ ಪ್ರಸಾರ ಮಾಡುವಾಗ ಹೆಸರಿನ ಜೊತೆಗೆ ಕುಂದಾಪುರ ಹೆಸರನ್ನು ಬಳಸುವುದರಿಂದ ಕುಂದಾಪುರ ಊರಿನ ಹೆಸರಿಗೆ ಘಾಸಿಯಾಗುತ್ತದೆ. ಈ ಒಂದು ಘಟನೆಯಿಂದ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಕುಂದಾಪುರ ದೇವಾಲಯಗಳಿರುವ ಮತ್ತು ಪ್ರಕೃತಿ ಸೊಬಗಿನ ಊರು. ಈ ಊರಿನ ಹೆಸರು ಆರೋಪಿಯೊಬ್ಬರ ಹೆಸರಿನ ಜೊತೆಗೆ ಥಳುಕು ಹಾಕಿದ ಕಾರಣಕ್ಕೆ ಹಾಳಾಗಬಾರದು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.


ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ತಂಡದ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು ಈ ನಡುವೆ ಚೈತ್ರಾ ಪ್ರಕರಣದಲ್ಲಿ ಕುಂದಾಪುರ ಹೆಸರನ್ನು ಪದೇ ಪದೇ ಬಳಸುತ್ತಿರುವುದರಿಂದ ಅಲ್ಲಿನ ನಿವಾಸಿಗಳ, ಸ್ಥಳೀಯರ ಭಾವನೆಗೆ ಧಕ್ಕೆಯಾಗುತ್ತಿರುವುದರಿಂದ ಮಾದ್ಯಮಗಳಿಗೆ ಕುಂದಾಪುರ ಹೆಸರನ್ನು ಬಳಸದಂತೆ ನಿರ್ಬಂಧ ನೀಡುವಂತೆ ಕೋರ್ಟ್​ ಮೊರೆ ಹೋಗಿದ್ದರು. ಅದರಂತೆ ಕೋರ್ಟ್ ತಡೆಯಾಜ್ಞೆ ವಿಧಿಸಿದ್ದು, ಹೆಸರಿನ ಜೊತೆಗೆ ಸ್ಥಳನಾಮ ಬಳಸದಂತೆ ಸಮನ್ಸ್ ನೀಡಿದೆ, ಅಲ್ಲದೆ, ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಕಾಯ್ದಿರಿಸಿದೆ. ಈ ಬಗ್ಗೆ ಹೈಕೋರ್ಟ್ ವಕೀಲರಾದ ಎಚ್. ಪವನಚಂದ್ರ ಶೆಟ್ಟಿ ವಾದಿಸಿದ್ದರು.

ನಿಂದನಾತ್ಮಕ ಭಾಷೆ ಬಳಸ್ಟೇಡಿ : ಸ್ಕೃತಿ ಇರಾನಿ ಸಮರ್ಥಿಸಿಕೊಂಡು ನೆಟ್ಟಿಗರ ಮನಗೆದ್ದ ರಾಹುಲ್ ಗಾಂಧಿ

Posted by Vidyamaana on 2024-07-12 20:43:59 |

Share: | | | | |


ನಿಂದನಾತ್ಮಕ ಭಾಷೆ ಬಳಸ್ಟೇಡಿ : ಸ್ಕೃತಿ ಇರಾನಿ ಸಮರ್ಥಿಸಿಕೊಂಡು ನೆಟ್ಟಿಗರ ಮನಗೆದ್ದ ರಾಹುಲ್ ಗಾಂಧಿ

ನವದೆಹಲಿ : ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ನಿಂದನಾತ್ಮಕ ಭಾಷೆ ಬಳಸದಂತೆ ಅವರು ಎಲ್ಲರಿಗೂ ಮನವಿ ಮಾಡಿದ್ದಾರೆ. ಸೋಲು ಮತ್ತು ಗೆಲುವು ಜೀವನದ ಒಂದು ಭಾಗ ಮತ್ತು ಅದು ಉಳಿದಿದೆ ಎಂದು ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್ ನಲ್ಲಿ ಬರೆದಿದ್ದಾರೆ.ಸ್ಮೃತಿ ಇರಾನಿ ಜಿ ಅಥವಾ ಇತರ ಯಾವುದೇ ನಾಯಕರ ವಿರುದ್ಧ ನಿಂದನಾತ್ಮಕ ಭಾಷೆಯನ್ನ ಬಳಸುವುದನ್ನ ಮತ್ತು ಕೆಟ್ಟದಾಗಿ ವರ್ತಿಸುವುದನ್ನ ನಿಲ್ಲಿಸುವಂತೆ ನಾನು ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇನೆ. ಅವರ ಟ್ವೀಟ್ ನಂತರ, ಅವರು ಹೃದಯಗಳನ್ನ ಗೆದ್ದಿದ್ದಾರೆ ಎಂದು ಜನರು ಹೇಳಿದರು



Leave a Comment: