ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಪುತ್ತೂರು : ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆರತಿ ಮೃತ್ಯು

Posted by Vidyamaana on 2024-03-05 07:22:31 |

Share: | | | | |


ಪುತ್ತೂರು : ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆರತಿ ಮೃತ್ಯು

ಪುತ್ತೂರು : ವಿಷ ಸೇವಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದ ಬಗ್ಗೆ ವರದಿಯಾಗಿದೆ.


ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆರತಿ ಮೃತ ಯುವತಿ.ಆರತಿ 15 ದಿನಗಳ ಹಿಂದೆ ವಿಷ ಸೇವಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ., ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಲ್ಲದೇ ವೈದ್ಯರ ಸಲಹೆ ಮೇರೆಗೆ ಸುಳ್ಯಕ್ಕೆ ತಂದು ಚಿಕಿತ್ಸೆ ಕೊಡಲಾಗುತ್ತಿತ್ತು ಆದರೇ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.

ಮೃತ ವಿದ್ಯಾರ್ಥಿನಿ ಐವರ್ನಾಡು ಸಮೀಪದ ಪಾಂಬಾರು ಸೋಮಸುಂದರ ಎಂಬುವವರ ಪುತ್ರಿ.

ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.ಮೃತ ವಿದ್ಯಾರ್ಥಿನಿ ತಂದೆ, ತಾಯಿ ಮತ್ತು ಓರ್ವ ಸಹೋದರರನ್ನು ಅಗಲಿದ್ದಾರೆ.

ಸೋಲಿನ ಹೊಣೆ ಹೊತ್ತ ಮುಖ್ಯಮಂತ್ರಿ ರಾಜೀನಾಮೆ

Posted by Vidyamaana on 2023-05-13 17:05:46 |

Share: | | | | |


ಸೋಲಿನ ಹೊಣೆ ಹೊತ್ತ ಮುಖ್ಯಮಂತ್ರಿ ರಾಜೀನಾಮೆ

ಬೆಂಗಳೂರು: ತೀವ್ರ ಆಘಾತಕಾರಿ ಸೋಲಿನ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶನಿವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

ಸೋಲಿನ ಹೊಣೆ ಹೊತ್ತ ಅವರು, ಅಧಿಕಾರ ಇಲ್ಲದೇ ಇದ್ದರೂ ಜನಸೇವೆ ಮಾಡುವುದಾಗಿ ತಿಳಿಸಿದರು. ಜನಸೇವೆಗೆ ತಲೆಬಾಗುವುದಾಗಿ ತಿಳಿಸಿದರು.

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ

Posted by Vidyamaana on 2023-05-31 23:25:52 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಗುರುವಾರ ಅಂದರೆ ಜೂನ್ 1ರಂದು ಸಂಜೆ 4.30ರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಲಿದ್ದಾರೆ.

*ಬೆಳಿಗ್ಗೆ 10 ಗಂಟೆಗೆ ಪುತ್ತೂರಿನಲ್ಲಿ‌ ಕ್ಲಿನಿಕ್ ಉದ್ಘಾಟನೆ*

*10.30ರಿಂದ ಸಂಜೆ 4 ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ*

*ಸಂಜೆ 4.30ರಿಂದ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಅಹವಾಲು ಸ್ವೀಕಾರ ಮಾಡಲಿದ್ದಾರೆ*

ರೈಲಿನಲ್ಲಿ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ: ಆರೋಪಿ ಶಾರುಖ್ ಸೈಫಿ ಸೆರೆ

Posted by Vidyamaana on 2023-04-05 09:15:56 |

Share: | | | | |


ರೈಲಿನಲ್ಲಿ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ: ಆರೋಪಿ ಶಾರುಖ್ ಸೈಫಿ ಸೆರೆ

ಕೇರಳ :  ಕೋಯಿಕ್ಕೋಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ಬೆಂಕಿ ಹಚ್ಚಿ ಮೂವರು ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಪ್ರಮುಖ ಆರೋಪಿ ಶಾರುಖ್ ಸೈಫಿಯನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.ಮುಂಬೈ ಕೋಯಿಕ್ಕೋಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ಬೆಂಕಿ ಹಚ್ಚಿ ಮೂವರು ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಪ್ರಮುಖ ಆರೋಪಿ ಶಾರುಖ್ ಸೈಫಿಯನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.

ಈ ಭೀಕರ ಪ್ರಕರಣದಲ್ಲಿ ಮೂವರ ಸಾವು ಮಾತ್ರವಲ್ಲದೇ 9 ಜನರು ಗಾಯಗೊಂಡಿದ್ದರು. ಕೊಯಿಕ್ಕೋಡ್‌ನಲ್ಲಿ ಅಳಪುಳಾ- ಕಣ್ಣೂರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ವಿಶೇಷ ತನಿಖಾ ದಳ ತನ್ನ ಹುಡುಕಾಟವನ್ನು ತೀವ್ರಗೊಳಿಸಿತ್ತು.

ಆರೋಪಿ ಶಾರುಖ್‌ ಸೈಫಿ ನೊಯ್ಡಾ ಮೂಲದವನಾಗಿದ್ದು, ಮಂಗಳವಾರ ಆತ ರತ್ನಗಿರಿಯಲ್ಲಿದ್ದಾನೆಂಬ ಲೊಕೇಷನ್ ಪತ್ತೆಯಾಗಿತ್ತು. ರೈಲಿಗೆ ಬೆಂಕಿ ಹಚ್ಚಿ ಅಲ್ಲಿಂದ ಕೆಳಗೆ ಜಿಗಿಯುವಾಗ ಆತನ ತಲೆಗೆ ಗಾಯಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆಯಲು ಆತ ರತ್ನಾಗಿರಿ ಜಿಲ್ಲಾಸ್ಪತ್ರೆಗೆ ತೆರಳಿದ್ದ. ಆದರೆ, ಅಲ್ಲಿ ಪೂರ್ತಿ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಪರಾರಿಯಾಗಿದ್ದ. ಬಳಿಕ ರತ್ನಾಗಿರಿಯಲ್ಲಿ ಆತನಿಗಾಗಿ ತೀವ್ರ ಶೋಧ ನಡೆಸಲಾಯಿತು ಕೊನೆಗೆ ಆತ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸದ್ಯಕ್ಕೆ ರತ್ನಾಗಿರಿ ಆರ್‌ಪಿಎಫ್ ವಶದಲ್ಲಿರುವ ಆತನನ್ನು ಕೇರಳ ಪೊಲೀಸರು ಶೀಘ್ರವೇ ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ.

ಪೈಂಟ್‌ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು ; ಪೂರ್ತಿ ತಲೆಯೇ ಕಟ್

Posted by Vidyamaana on 2023-11-09 16:38:12 |

Share: | | | | |


ಪೈಂಟ್‌ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು ; ಪೂರ್ತಿ ತಲೆಯೇ ಕಟ್

ಬೆಂಗಳೂರು, ನ 09: ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್ ಗೆ ಕೂದಲು ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ನೆಲಗದರನಹಳ್ಳಿಯ ಶ್ರೀ ಪೇಯಿಂಟ್ಸ್ ಕಾರ್ಖಾನೆಯಲ್ಲಿ ನಡೆದ ಘಟನೆಯಲ್ಲಿ ಶ್ವೇತಾ (34) ಎಂಬ ಮಹಿಳೆ ಮೃತಪಟ್ಟಿದ್ದಾರೆ. 


ಇದೊಂದು ಪೈಂಟ್‌ ಮಿಕ್ಸಿಂಗ್‌ ಕಾರ್ಖಾನೆಯಾಗಿದ್ದು, ಇಲ್ಲಿ ಒಂದು ಗ್ರೈಂಡರ್‌ನಲ್ಲಿ ಪೌಡರ್‌ ಮತ್ತು ಇತರ ಸಾಮಗ್ರಿಗಳನ್ನು ಹಾಕಿ ಬಣ್ಣವನ್ನು ತಯಾರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗ್ರೈಂಡರ್‌ಗೆ ಜಡೆ ಸಿಲುಕಿ ಮಹಿಳೆಯ ತಲೆಯೇ ಕತ್ತರಿಸಿ ಹೋಗಿದೆ.


ಗ್ರೈಂಡರ್‌ನ ಒಳಗೆ ಬಣ್ಣ ಗಟ್ಟಿಯಾಗಿತ್ತು. ಅದನ್ನು ಚೆಕ್‌ ಮಾಡಲೆಂದು ಒಳಗೆ ಬಗ್ಗಿದಾಗ ಒಮ್ಮೆಗೇ ತಲೆಕೂದಲು ಸಿಕ್ಕಿಹಾಕಿಕೊಂಡಿದೆ. ಆಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ, ಗ್ರೈಂಡರ್‌ ಸದ್ದಿನಿಂದಾಗಿ ಅವರ ಕೂಗು ಯಾರಿಗೂ ಕೇಳಿಸಲಿಲ್ಲ. ಕೊನೆಗೆ ಉಳಿದ ಕೆಲಸಗಾರರು ಬಂದು ನೋಡಿದಾಗ ಶ್ವೇತಾ ದಾರುಣವಾಗಿ ಮೃತಪಟ್ಟಿರುವುದು ಕಂಡುಬಂದಿದೆ. ತಲೆಕೂದಲು ಸಿಕ್ಕಿಕೊಂಡ ಬಳಿಕ ಬ್ಲೇಡ್‌ಗಳು ಆಕೆಯ ಕೊರಳನ್ನೇ ಕತ್ತರಿಸಿದ್ದವು.


ಶ್ವೇತಾ ಅವರು ತಮ್ಮ ಗಂಡ ಮತ್ತು ಮಗನ ಜೊತೆ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಈ ಘಟನೆಯಿಂದ ಕಾರ್ಖಾನೆ ಕಾರ್ಮಿಕರಲ್ಲಿ ಸೂತಕದ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಇಂಥ ಅಪಾಯ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಆತಂಕ ಕೂಡಾ ಕಾಡುತ್ತಿದೆ. ಪ್ರಕರಣ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ರೈತರೇ ಬೆಳೆದ ಸಾಮಾಗ್ರಿಗಳು ನೇರವಾಗಿ ಗ್ರಾಹಕರಿಗೆ

Posted by Vidyamaana on 2023-11-10 13:30:58 |

Share: | | | | |


ರೈತರೇ ಬೆಳೆದ ಸಾಮಾಗ್ರಿಗಳು ನೇರವಾಗಿ ಗ್ರಾಹಕರಿಗೆ

ಪುತ್ತೂರು: ರೈತರೇ ಬೆಳೆದ ಸಾಮಾಗ್ರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಪುತ್ತೂರು ತಾಲೂಕು ಪಂಚಾಯತ್ ಕಚೇರಿ ಮುಂಭಾಗ ನ. 11ರ ವರೆಗೆ ದೀಪ ಸಂಜೀವಿನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನ. 9ರಿಂದ ಆರಂಭಗೊಂಡಿರುವ ದೀಪ ಸಂಜೀವಿನಿ ಕಾರ್ಯಕ್ರಮವು ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುತ್ತಿದೆ. ಆದ್ದರಿಂದ ಇಲ್ಲಿ ಹಣತೆ, ದೀಪದ ಬತ್ತಿ, ಕ್ಯಾಂಡಲ್, ಕರ್ಪೂರ, ಅಗರಬತ್ತಿ ಮುಂತಾದ ಪೂಜಾ ಸಾಮಾಗ್ರಿಗಳು ರೈತರಿಂದ ನೇರವಾಗಿ ಗ್ರಾಹಕರಿಗೆ ದೊರೆಯಲಿವೆ. ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ ದಿನ್ ದಯಾಳ್ ಅಂತ್ಯೊದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು, ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸ್ವ-ಸಹಾಯ ಗುಂಪು ಇದರ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



Leave a Comment: