ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಸುದ್ದಿಗಳು News

Posted by vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯ‌ರ್ ತಂದಿದ್ದರು. ಟಯರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್‌ ಸಮೇತ  ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 Share: | | | | |


ಮಳೆ ಬಂದಾಗ ಈಚಲು ಹುಳು ಮನೆ ತುಂಬಾ ಹಾರಾಡುತ್ತಾ? ಡೋಂಟ್ ವರಿ, ಈ ಕೆಲಸ ಮಾಡಿದ್ರೆ ಫಟ್ ಅಂತ ಓಡಿ ಹೋಗುತ್ತೆ!

Posted by Vidyamaana on 2024-08-13 05:37:11 |

Share: | | | | |


ಮಳೆ ಬಂದಾಗ ಈಚಲು ಹುಳು ಮನೆ ತುಂಬಾ ಹಾರಾಡುತ್ತಾ? ಡೋಂಟ್ ವರಿ, ಈ ಕೆಲಸ ಮಾಡಿದ್ರೆ ಫಟ್ ಅಂತ ಓಡಿ ಹೋಗುತ್ತೆ!

ಮಳೆಗಾಲ ಬಹುತೇಕ ಮಂದಿಯ ಫೇವರೆಟ್​ ಸೀಸನ್​. ಆದರೆ ಈ ಮಳೆಗಾಲ (Rainy Season) ಆರಂಭವಾಗುತ್ತಿದ್ದಂತೆಯೇ ಕೆಲವೊಂದಷ್ಟು ರೋಗಗಳನ್ನು (Disease) ಕೂಡ ತನ್ನೊಂದಿಗೆ ಹೊತ್ತುಕೊಂಡು ಬರುತ್ತದೆ. ಅಂದರೆ ಮಳೆಗಾಲದಲ್ಲಿ ಅನೇಕ ರೀತಿಯ ಅಲರ್ಜಿಗಳು, ಸೋಂಕುಗಳು ಬೇಗ ಹರಡುತ್ತದೆ.

ಇವುಗಳ ಜೊತೆಗೆ ಮನೆಯಲ್ಲಿ ಇರುವೆ, ಕೀಟಗಳ (Insects) ಕಾಟ ಕೂಡ ಹೆಚ್ಚುತ್ತದೆ. ಮಳೆಗಾಲದಲ್ಲಿ ನಿಮ್ಮ ಮನೆಗೆ ಸೊಳ್ಳೆಗಳು, ಕೀಟಗಳು, ಇರುವೆಗಳು ಬಂದರೆ ಆತಂಕ ಪಡಬೇಡಿ. ಈ ಕೀಟಗಳನ್ನು ಓಡಿಸಲು ಕೆಲವು ತಂತ್ರಗಳನ್ನು ಬಳಸಿ. ಕೆಲವು ಮನೆಯಲ್ಲಿರುವ ವಸ್ತುಗಳನ್ನು ಬಳಸುವ ಮೂಲಕವೇ ಕೀಟಗಳನ್ನು ಮನೆಯಿಂದ ತೊಡೆದು ಹಾಕಬಹುದು. ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.

ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿ ವಂಚನೆ

Posted by Vidyamaana on 2023-11-05 08:44:53 |

Share: | | | | |


ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿ ವಂಚನೆ

ಉಡುಪಿ: ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬೆಂಗಳೂರು ಮೂಲದ ಭಕ್ತರ ಕುಟುಂಬಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ 30.73 ಲಕ್ಷ ರೂ. ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. 


ಕೊಲ್ಲೂರು ನಿವಾಸಿ ಸುಧೀರ್‌ ಕುಮಾರ್‌ ಎಂಬಾತ ವಂಚನೆ ಎಸಗಿದ ವ್ಯಕ್ತಿ. ಬೆಂಗಳೂರಿನ ದಿಲ್ನಾ ತನ್ನ ಗಂಡ ಮತ್ತು ಕುಟುಂಬ ಸದಸ್ಯರ ಜತೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದ ವೇಳೆ ತನ್ನ ಅಣ್ಣ ದಿಲೀಶ್‌ ಅವರಿಗೆ ಪರಿಚಯವಿದ್ದ ಸುಧೀರ್‌ ಕುಮಾರ್‌ ಎಂಬಾತ ಪರಿಚಯ ಆಗಿದ್ದ. ತಾನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಹಣ ಹಾಕುವಂತೆ ಕೇಳಿಕೊಂಡಿದ್ದ.


ಅಲ್ಲದೆ, ದಿಲ್ನಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸುವುದಾಗಿ ಹೇಳಿ ದಿಲ್ನಾ ಮತ್ತು ಅವರ ಅಣ್ಣ ದಿಲೀಶ್‌ ಅವರಿಂದ ಒಟ್ಟು 30,73,600 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆ ಬದಲಾವಣೆಗಾಗಿ ತಾಯಿಯ ಸಹಿ ಹಾಕಿಕೊಡುವಂತೆ ಕೇಳಿದ್ದರಿಂದ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿಸಿದಾಗ ಸುಧೀರ್‌ ಎನ್ನುವ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಲ್ಲವೆಂಬುದು ತಿಳಿದುಬಂದಿತ್ತು. ಇದರಿಂದ ದಿಲ್ನಾ ಅವರು ಸುಧೀರ್‌ ಕುಮಾರ್‌ ವಿರುದ್ಧ ಹಣ ವಂಚನೆ ಮಾಡಿರುವ ಕುರಿತು ಕೊಲ್ಲೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮೊಟ್ಟೆತ್ತಡ್ಕ - ಪಂಜಳ ರಸ್ತೆಯ ತಿರುವಿನಲ್ಲಿ ಮೋರಿ ಕುಸಿತ

Posted by Vidyamaana on 2024-02-26 21:51:31 |

Share: | | | | |


ಮೊಟ್ಟೆತ್ತಡ್ಕ - ಪಂಜಳ ರಸ್ತೆಯ ತಿರುವಿನಲ್ಲಿ ಮೋರಿ ಕುಸಿತ

ಪುತ್ತೂರು: ಇಲ್ಲಿನ ಮೊಟ್ಟೆತ್ತಡ್ಕ - ಪಂಜಳ ರಸ್ತೆಯಲ್ಲಿ ಮೋರಿಯೊಂದು ಕುಸಿದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಗೇರು ಸಂಶೋಧನಾ ನಿರ್ದೇಶನಾಲಯದ ಸಮೀಪದ ತಿರುವಿನಲ್ಲಿ ಮೋರಿ ಕುಸಿದಿದೆ. ತಿರುವಿನಲ್ಲಿ ಈ ಮೋರಿ ಇರುವ ಕಾರಣ, ವಾಹನ ಸವಾರರ ಗಮನಕ್ಕೆ ಈ ಅಪಾಯ ತಕ್ಷಣಕ್ಕೆ ಬರುತ್ತಿಲ್ಲ. ಇದರಿಂದ ಅಪಘಾತ ಸಂಭವಿಸುವ ಲಕ್ಷಣ ಹೆಚ್ಚಿದೆ.

ಮೋರಿ ಕುಸಿದಿರುವ ಬಗ್ಗೆ ಸೂಚನೆ ನೀಡಲು ಕನಿಷ್ಠ ಒಂದು ಸೂಚನಾ ಫಲಕವನ್ನು ಹಾಕಿಲ್ಲ. ಹಾಗಾಗಿ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಮೋರಿಯನ್ನು ದುರಸ್ತಿ ಮಾಡಬೇಕೆಂದು ಕುರಿಯ ಮುಂಡೂರು ಆಟೋ ಚಾಲಕರು ಮತ್ತು ಸಾರ್ವಜನಿಕರ ಆಗ್ರಹಿಸಿರುತ್ತಾರೆ.

ಇನ್ಸ್ಟಾಗ್ರಾಮ್ ಮೂಲಕ ಪರಿಚಯ

Posted by Vidyamaana on 2023-06-29 11:23:59 |

Share: | | | | |


ಇನ್ಸ್ಟಾಗ್ರಾಮ್ ಮೂಲಕ ಪರಿಚಯ

ಮಂಗಳೂರು : ಇನ್​ಸ್ಟಾಗ್ರಾಂನಲ್ಲಿ ಯುವತಿಯನ್ನು ಪರಿಚಯಮಾಡಿಕೊಂಡು ಬಳಿಕ ಪ್ರೀತಿ ಪ್ರೇಮದ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯು ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕಡಬ ಮೂಲದ ವ್ಯಕ್ತಿ ಅನೀಶ್​ ರೆಹಮಾನ್​ ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಅನೀಶ್​ ಇನ್​ಸ್ಟಾಗ್ರಾಂ ಮೂಲಕ ಯುವತಿಯ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಈ ಸ್ನೇಹ ಪ್ರೇಮಕ್ಕೂ ತಿರುಗಿತ್ತು. ಆಕೆಯನ್ನು ಭೇಟಿ ಕೂಡ ಮಾಡಿದ್ದ ಅನೀಶ್​ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾರೆ. ಹೋಟೆಲ್​​​ನಲ್ಲಿ ಯುವತಿಯೊಂದಿಗೆ ರೂಮ್​ ಮಾಡಿದ್ದ ಈ ಪಾಪಿ ನಿರಂತರ 20 ದಿನಗಳ ಕಾಲ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.ಆದರೆ ಅನೀಶ್​ ತನಗೆ ಮೋಸ ಮಾಡಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಯುವತಿಯು ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾಳೆ. ಬಂಧಿತ ಅನೀಶ್​ ವಿರುದ್ಧ ಐಪಿಸಿ ಸೆಕ್ಷನ್​ 506, 417 ಹಾಗೂ 376ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಂದಹಾಗೆ ಬಂಧಿತ ಅನೀಶ್​ ರೆಹಮಾನ್​ ಈ ಹಿಂದೆ ಕಾವೂರು ಪೊಲೀಸ್​ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ಅಡಿಯಲ್ಲಿ ಅರೆಸ್ಟ್​ ಆಗಿದ್ದ ಅನ್ನೋದು ತನಿಖೆ ವೇಳೆ ತಿಳಿದು ಬಂದಿದೆ.

ನದಿಗೆ ಹಾರಿ ತಾಯಿ-ಮಗಳು ಸೂಸೈಡ್.! ಕಾರಣ ನಿಗೂಢ

Posted by Vidyamaana on 2024-02-13 15:17:08 |

Share: | | | | |


ನದಿಗೆ ಹಾರಿ ತಾಯಿ-ಮಗಳು ಸೂಸೈಡ್.! ಕಾರಣ ನಿಗೂಢ

ಕಲಬುರಗಿ: ನದಿಗೆ ಹಾರಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ..ಶಹಬಾದ್ ಸಮೀಪದ ಕಾಗಿಣಾ ನದಿಯಲ್ಲಿ ಘಟನೆ ನಡೆದಿದ್ದು ಸಾವಿಗೆ ಶರಣಾದವರನ್ನ ತಾಯಿ ಸುಮಲತಾ ಮಗಳು ವರ್ಷಾ ಅಂತ ಗುರುತಿಸಲಾಗಿದೆ.ಮೃತರು ಕಲಬುರಗಿಯ ಎಂಬಿ ನಗರ ನಿವಾಸಿಗಳಾಗಿದ್ದು ನಿನ್ನೆ ಸಂಜೆ ಮನೆ ಬಿಟ್ಟಾದ್ದಾರೆ ಎನ್ನಲಾಗಿದೆ.ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ..

ಲೋಕಸಭಾ ಚುನಾವಣೆ ಹಿನ್ನೆಲೆ: ಪುತ್ತೂರು ತಹಸೀಲ್ದಾರ್ ವರ್ಗ

Posted by Vidyamaana on 2024-03-16 21:57:52 |

Share: | | | | |


ಲೋಕಸಭಾ ಚುನಾವಣೆ ಹಿನ್ನೆಲೆ: ಪುತ್ತೂರು ತಹಸೀಲ್ದಾರ್ ವರ್ಗ

ಪುತ್ತೂರು: ಚುನಾವಣಾ ಹಿನ್ನೆಲೆಯಲ್ಲಿ ತಹಸೀಲ್ದಾರ್ ವರ್ಗಾವಣೆಗೊಂಡಿದ್ದು, ಹೊಸ ತಹಸೀಲ್ದಾರ್ ಆಗಿ ಕುಂಞ ಅಹಮದ್ ಎನ್.ಎ. ನೇಮಕಗೊಂಡಿದ್ದಾರೆ.

ಈ ಮೊದಲು ಸುಳ್ಯ ತಾಲೂಕು ತಹಸೀಲ್ದಾರ್ ಆಗಿದ್ದ ಇವರು, ತಮ್ಮ ಕಾರ್ಯವೈಖರಿಯಿಂದ ಜನಮನ್ನಣೆ ಪಡೆದುಕೊಂಡಿದ್ದರು. ಉತ್ತಮ ಅಧಿಕಾರಿ ಎಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ತಿಳಿಸಲಾಗಿದೆ.

Recent News


Leave a Comment: