ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫಿ ಎ.ಪಿ. ಉಸ್ತಾದ್ ನೇಮಕ

ಸುದ್ದಿಗಳು News

Posted by vidyamaana on 2024-07-21 17:41:24 |

Share: | | | | |


ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫಿ ಎ.ಪಿ. ಉಸ್ತಾದ್ ನೇಮಕ

ಉಳ್ಳಾಲ: ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.ಖಾಝಿ ಆಯ್ಕೆಗೆ ಸಂಬಂಧಿಸಿ ಉಳ್ಳಾಲ ದರ್ಗಾ ವಠಾರದ ಮದನಿ ಹಾಲಿನಲ್ಲಿ ರವಿವಾರ ಮಧ್ಯಾಹ್ನ ನಡೆದ ಮಹಾಸಭೆ ಯಲ್ಲಿ ಎ.ಪಿ.ಉಸ್ತಾದ್ ಅವರನ್ನು ಖಾಝಿಯಾಗಿ ನೇಮಕ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

ಆಗಸ್ಟ್ 5ರಂದು ಅಧಿಕಾರ ಸ್ವೀಕಾರ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 Share: | | | | |


ಸುಳ್ಯದ ಲೊಕೇಶ್ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ

Posted by Vidyamaana on 2023-03-24 03:03:56 |

Share: | | | | |


ಸುಳ್ಯದ ಲೊಕೇಶ್ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ

ಸುಳ್ಯ: ತಾಲೂಕಿನ ಕಲ್ಮಕಾರು ಗ್ರಾಮದ ಯುವಕನೋರ್ವ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.22ರಂದು ವರದಿಯಾಗಿದೆ. ಕಲ್ಮಕಾರು ಗ್ರಾಮದ ಮೆಂಟೆಕಜೆ ತೇಜಕುಮಾರ್ ಅವರ ಪುತ್ರ ಲೋಕೇಶ (25) ಆತ್ಮಹತ್ಯೆ ಮಾಡಿಕೊಂಡ ಯುವಕ.

ಈತ ಚಿಕ್ಕಮಗಳೂರಿನಲ್ಲಿ ಜಿಯೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ತನ್ನ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಲೋಕೇಶ್ ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

BIG NEWS : ಬಿಜೆಪಿಗರ ಹಗರಣಗಳನ್ನು ಶೀಘ್ರವೇ ಬಯಲು ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

Posted by Vidyamaana on 2024-08-04 09:35:19 |

Share: | | | | |


BIG NEWS : ಬಿಜೆಪಿಗರ ಹಗರಣಗಳನ್ನು ಶೀಘ್ರವೇ ಬಯಲು ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಕಾರವಾರ : ಶೀಘ್ರವೇ ಬಿಜೆಪಿಗರ ಹಗರಣಗಳನ್ನು ಹೊರತಂದು ಮಾಡಿ, ಅವರ ಬಂಡವಾಳ ಬಯಲು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ - ಜೆಡಿಎಸ್‌ ನಾಯಕರಿಗೆ ಇಲ್ಲ.ಅವರದೇ ಹಗರಣಗಳ ರಾಶಿ ಬಿದ್ದಿದೆ, ಅವೆಲ್ಲವನ್ನೂ ಆದಷ್ಟು ಶೀಘ್ರದಲ್ಲಿ ಹೊರತಂದು ಅವರ ಬಂಡವಾಳ ಬಯಲು ಮಾಡುತ್ತೇವೆ ಎಂದರು.

ಪುತ್ತೂರು ನಗರ ವ್ಯಾಪ್ತಿಗೆ ೨೪ ಕೋಟಿ ರೂ ಅನುದಾನ ದೂರ ದೃಷ್ಟಿಯಲ್ಲಿ ನಡೆಯಲಿದೆ ನಗರದ ಕಾಮಗಾರಿಗಳು: ಅಶೋಕ್ ರೈ

Posted by Vidyamaana on 2024-01-08 07:54:09 |

Share: | | | | |


ಪುತ್ತೂರು ನಗರ ವ್ಯಾಪ್ತಿಗೆ ೨೪ ಕೋಟಿ ರೂ ಅನುದಾನ  ದೂರ ದೃಷ್ಟಿಯಲ್ಲಿ ನಡೆಯಲಿದೆ ನಗರದ ಕಾಮಗಾರಿಗಳು: ಅಶೋಕ್ ರೈ

ಪುತ್ತೂರು: ಪುತ್ತೂರು ನಗರ ವ್ಯಾಪ್ತಿಯಲ್ಲಿ ರೂ ೨೪ ಕೋಟಿ ರೂ ಕಾಮಗಾರಿ ನಡೆಯಲಿದ್ದು ಇದಕ್ಕಾಗಿ ವಿವಿಧ ಕಡೆಗಳಿಗೆ ಅನುದಾನ ಹಂಚಿಕೆ ಕೆಲಸ ನಡೆದಿದ್ದು ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ನನಡೆಯಲಿದ್ದು ದೂರ ದೃಷ್ಟಿಯ ಕಾಮಗಾರಿಗಳು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಮರೀಲ್ ಬೆದ್ರಾಳ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.


ಪುತ್ತೂರು ನಗರಕ್ಕೆ ೨೪ ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೧೦೧೦ ಕೋಟಿ ರಊ ಅನುದಾನ ಬಿಡುಗಡೆಯಾಗಿದ್ದು ಮುಂದಿನ ಒಂದೂವರೆ ವರ್ಷದೊಳಗೆ ಗ್ರಾಮೀಣ ಭಾಗದಲ್ಲೂ ದಿನದ ೨೪ ಗಂಠೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.


ಕೆಎಂಎಫ್ ಪುತ್ತೂರಿಗೆ ಶಿಫ್ಟ್ ಆಗಲಿದ್ದು ಇದರಿಂದ ಇಲ್ಲಿನ ಸುಮಾರು ೬೦೦ ಮಂದಿಗೆ ಉದ್ಯೋಗ ದೊರೆಯಲಿದೆ. ಯುವಕರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕು. ಪುತ್ತೂರಿನಲ್ಲಿ ಉದ್ಯಮ ಆರಂಭವಾದರೆ ಎಲ್ಲರಿಗೂ ಆದಾಯ ಬರಲಿದೆ. ಆಟೋ ಚಾಲಕರಿಗೆ, ಲರಿ ಚಾಲಕರಿಗೆ ಸೇರಿದಂತೆ ವಿದ್ಯಾವಂತ ನಿರುದ್ಯೋಗಿಗಳಿಗೂ ಉದ್ಯೋಗಕವಾಶ ದೊರೆಯಲಿದೆ. ಪಕ್ಷಾತೀತವಾಗಿ ಪುತ್ತೂರಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಡೆಸುತ್ತೇನೆ. ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಖಂಡಿತವಾಗಿಯೂ ಮಾಡುವುದಿಲ್ಲ. ಪುತ್ತೂರಿನ ಜನತೆಯ ಕ್ಷೇಮವೇ ನನ್ನ ಕ್ಷೇಮವಾಗಿದೆ, ನನ್ನ ಕ್ಷೇತ್ರದಲ್ಲಿ ಸೂರು, ನೀರು, ಮತ್ತು ಕರೆಂಟ್ ಇಲ್ಲದೆ ವಂಚಿತರಾಗಿರುವ ಯವುದೇ ಕುಟುಂಬ ಇರಬಾರದು, ಯಾವ ಕುಟುಂಬವೂ ಹಸಿವಿನಿಂದ ಇರಬಾರದು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

ಬೆದ್ರಾಳದಿಂದ ಸರ್ವೆತನಕ ಚತುಷ್ಪಥ ರಸ್ತೆ


ಬೆದ್ರಾಳದಿಂದ ಸರ್ವೆ ತನಕ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಈ ವಿಚಾರಕ್ಕೆ ಸಂಬಂಧಿಸಿಂದಂತೆ ಈಗಾಗಲೇ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಶಾಸಕರು ಹೇಳಿದರು. ಸರಕಾರ ಐದು ಗ್ಯಾರಂಟಿಯನ್ನು ನೀಡಿ ಪ್ರತೀ ಕುಟುಂಬಕ್ಕೂ ನೆರವಾಗಿದೆ, ಎಲ್ಲರ ಖಾತೆಗೂ ಹಣ ಜಮೆಯಾಗುತ್ತಿದೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ಜನತೆ ನೆಮ್ಮದಿಯಿಂದ ಇದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಕೊಂಚ ನೆಮ್ಮದಿ ದೊರಕಿದೆ. ಮುಂದಿನ ದಿನಗಳಲ್ಲಿ ಅಭಿವೃದ್ದಿಗೂ ಸರಕಾರ ಹೆಚ್ಚಿನ ಅನುದಾನವನ್ನು ನೀಡಲಿದೆ ಎಂದು ಶಾಸಕರು ಹೇಳಿದರು.


ಅಶೋಕ್ ರೈ ಶಾಸಕರಾಗಿದ್ದೇ ನಮ್ಮ ಭಾಗ್ಯ: ಆಲಿ


ಅಶೋಕ್ ರೈ ಶಾಸಕರಾಗಿದ್ದೇ ನಮ್ಮೆಲಲ್ಲರ ಭಾಗ್ಯವಾಗಿದೆ. ಪುತ್ತೂರಿಗೆ ಗಟ್ಸ್ ಇರುವ ಶಾಸಕರು ಬೇಕು ಎಂದು ಜನ ಆಸೆಪಟ್ಟಿದ್ದರು ಅದರಂತೆ ಗಟ್ಸ್ ಇರುವ ಶಸಕರು ನಮಗೆ ಸಿಕ್ಕಿದ್ದಾರೆ. ಈಗಾಗಲೇ ಕೋಟಿಗಟ್ಟಲೆ ಅನುದಾನವನ್ನು ಎಂಟು ತಿಂಗಳಲ್ಲಿ ಕ್ಷೇತ್ರಕ್ಕೆ ತಂದಿದ್ದಾರೆ. ಬಡವರ ಪರ ಅಪಾರ ಕಾಳಜಿ ಇರುವ ಶಾಸಕರು ಇಂದು ಕ್ಷೇತ್ರದ ಬಡವರಿಗಾಗಿ ಸರ್ವಸ್ವವನ್ನೂ ನೀಡುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಗರೋತ್ತಾನ ಯೋಜನೆಯಡಿ ಮರೀಲ್ ಬೆದ್ರಾಳ ರಸ್ತೆಗೆ ರೂ. ೫೦ ಲಕ್ಷ ವನ್ನು ಶಾಸಕರು ಮಂಜೂರು ಮಾಡಿಸುವ ಮೂಲಕ ಇಲ್ಲಿನ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ಜನರ ಎಲ್ಲಾ ಬೇಡಿಕೆಗಳು ಖಂಡಿತವಾಗಿಯೂ ಈಡೇರಲಿದೆ. ಕುಡಿಯುವ ನೀರು, ದಾರಿ ದೀಪ, ಚರಂಡಿ ಸೇರಿದಂತೆ ಜನತೆಯ ಬಹುಕಾಲದ ಬೇಡಿಕೆಗಳು ಈಡೇರಲಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದಾಲಿ ಹೇಳಿದರು.

ಸನ್ಮಾನ

ಇದೇ ಸಂದರ್ಭದಲ್ಲಿ ಆರ್ಯಾಪು ಕೃಷಿಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಮಹಮ್ಮದಾಲಿ ಹಗೂ ನೂತನ ನಿರ್ದೆಶಕರುಗಳಾಗಿ ಆಯ್ಕೆಯಾದ ರಂಜಿತ್ ಬಂಗೇರ ಹಾಗೂ ತೆರೆಸಾ ಎಂ ಸಿಕ್ವೆರಾ ಅವರನ್ನು ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಈಶ್ವರಭಟ್ ಪಂಜಿಗುಡ್ಡೆ, ಕಾಂಗ್ರೆಸ್ ಮುಖಂಡರುಗಳಾದ ಶಿವರಾಮ ಆಳ್ವ ಬಳ್ಳಮಜಲು, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಯಾಕೂಬ್ ಮುಲಾರ್, ರೆಝಾಕ್ ಖಾನ್, ಹೆರಾಲ್ಡ್ ಮಾಡ್ತಾ, ಇಬ್ರಾಹಿಂ ಟಿ ಎಂ, ಲಿಯೋ ಮಾರ‍್ಟಿಸ್,ದಿನೇಶ್, ಬೆನ್ನಿ ಡಿಸೋಜ, ತೆರೆಸಾ ಸಿಕ್ವೆರಾ, ಬೂತ್ ಅಧ್ಯಕ್ಷ ಜೀವನ್ ಮರ್ವಿನ್ ಡೆಲ್ಮೆದಾ, ಆರ್ಯಾಪು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ  ರಂಜಿತ್ ಬಂಗೇರ, ಮರೀಲ್ ರಿಕ್ಷಾ ಚಾಲಕರ ಸಂಘದ ಪಧಾಧಿಕಾರಿಗಳು ಹಗೂ ಸ್ಥಳೀಯರು ಉಪಸ್ಥಿತರಿದ್ದರು.

ವಿಟ್ಲ: ಚಾಲಕನ ನಿಯಂತ್ರಣ ಕಳೆದು ಟಿ.ಟಿ ವಾಹನ ಪಲ್ಟಿ

Posted by Vidyamaana on 2024-01-16 16:20:50 |

Share: | | | | |


ವಿಟ್ಲ: ಚಾಲಕನ ನಿಯಂತ್ರಣ ಕಳೆದು ಟಿ.ಟಿ ವಾಹನ ಪಲ್ಟಿ

ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಟಿ.ಟಿ ವಾಹನ ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ವಿಟ್ಲದ ಚಂದಳಿಕೆ ಎಂಬಲ್ಲಿ ನಡೆದಿದೆ. ಶಬರಿಮಲೆಯಿಂದ ವಿಟ್ಲ ರಸ್ತೆ ಮೂಲಕ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಚಂದಳಿಕೆ ಅಪಾಯಕಾರಿ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ.


ಟಿ.ಟಿ ವಾಹನದಲ್ಲಿದ್ದ ಆರು ಮಂದಿ ಮಾಲಾಧಾರಿಗಳು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಇವರೆಲ್ಲ ಉಜಿರೆ ಮೂಲದವರಾಗಿದ್ದು, ಶಬರಿಮಲೆ ತೆರಳಿ ಹಿಂತಿರುಗುತ್ತಿದ್ದರು.

ಪುತ್ತೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

Posted by Vidyamaana on 2023-04-20 21:02:46 |

Share: | | | | |


ಪುತ್ತೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಬ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಗುರುವಾರ ನಾಮಪತ್ರ ಸಲ್ಲಿಸಿದರು.

ಬುಧವಾರ ತನ್ನ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸುವ ಪ್ರಕಟಣೆ ನೀಡಿದ್ದರು. ಯಾವುದೋ ಕಾರಣಗಳಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ.  ಗುರುವಾರ ಬೆಳಿಗ್ಗೆ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಐ.ಸಿ.ಕೈಲಾಸ್, ಮಹಿಳಾ ಪದಾಧಿಕಾರಿಗಳಾದ ಝೊಹರಾ ನಿಸಾರ್, ಪದ್ಮಾಮಣಿ ಉಪಸ್ಥಿತರಿದ್ದರು.

ಭಾರೀ ಮಳೆ ಹಿನ್ನೆಲೆ ನಾಳೆ ಅಂಗನವಾಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted by Vidyamaana on 2023-07-05 13:56:56 |

Share: | | | | |


ಭಾರೀ ಮಳೆ  ಹಿನ್ನೆಲೆ ನಾಳೆ ಅಂಗನವಾಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು. 6ರಂದು ಕೂಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.


ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೈಗೊಂಡಿರುವ ತುರ್ತು ಕ್ರಮಗಳಿವು:


 ನೀರು ಇರುವ ತಗ್ಗು ಪ್ರದೇಶ ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸುವುದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯ ಕೈಗೊಳ್ಳಬೇಕು, ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.

 ಪ್ರವಾಸಿಗರು, ಸಾರ್ವಜನಿಕರು ನದಿ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.

 ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರತಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವುದು.

 ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂ 1077 ಹಾಗೂ ದೂರವಾಣಿ: 0824 – 2442590‌ ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Recent News


Leave a Comment: