ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಸುದ್ದಿಗಳು News

Posted by vidyamaana on 2024-07-22 11:26:34 |

Share: | | | | |


ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಮುಕ್ಕೂರು : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



ಮೂರು ದಿನಗಳ ಮನೆಯಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಸುಂದರ ಕಾನಾವು ಅವರನ್ನು ಮಂಗಳೂರಿನ ಪಡೀಲು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಎ.ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಮೃತರ ಪಾರ್ಥಿವ ಶರೀರ ಮಂಗಳೂರಿನಲ್ಲಿ ಇದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

 Share: | | | | |


ಸುಳ್ಯ : ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಅಬಾಕಸ್ ಗಣಿತ ತರಗತಿ ಉದ್ಘಾಟನೆ

Posted by Vidyamaana on 2023-07-21 02:41:25 |

Share: | | | | |


ಸುಳ್ಯ : ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಅಬಾಕಸ್ ಗಣಿತ ತರಗತಿ ಉದ್ಘಾಟನೆ

ಸುಳ್ಯ: ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಬಾಕಸ್ ಗಣಿತ ತರಗತಿಯ ಉದ್ಘಾಟನಾ ಕಾರ್ಯಕ್ರಮ ಶಾಲಾ ಆಡಿಟೋರಿಯಂನಲ್ಲಿ ನಡೆಯಿತು. ದೀಪ ಬೆಳಗಿಸಿ ಅಬಾಕಸ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. 

ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿ, ಅಬಾಕಸ್ ತರಗತಿಯನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ವಿದ್ಯಾರ್ಥಿಗಳು ಗಣಿತದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಜೊತೆಗೆ ಅವರ ಬೌದ್ಧಿಕ ಸಾಮರ್ಥ್ಯ ವೃದ್ಧಿಗೊಳ್ಳುತ್ತದೆ ಎಂದು ತಿಳಿಸಿದರು.

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಪುತ್ತೂರು ಮತ್ತು ಸುಳ್ಯ ಇದರ ಸಿಇಓ ಪ್ರಫುಲ್ಲ ಗಣೇಶ್, ಅಬಾಕಸ್ ತರಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ. ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು.ಜೆ. ಶುಭಹಾರೈಸಿದರು.

ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ನಿರ್ದೇಶಕ ಗಣೇಶ್ ಕೈಂದಾಡಿ, ತರಬೇತುದಾರರಾದ ನಿಕ್ಷಿತಾ ಮತ್ತು ಹರ್ಷಿತಾ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು.

ಗಣಪನ ಹಬ್ಬಕ್ಕೆ ರಜೆ ಯಾವಾಗಪ್ಪಾ..? - ಚೌತಿ ಸಾರ್ವತ್ರಿಕ ರಜೆಯಲ್ಲಿ ಗೊಂದಲ

Posted by Vidyamaana on 2023-09-12 17:33:07 |

Share: | | | | |


ಗಣಪನ ಹಬ್ಬಕ್ಕೆ ರಜೆ ಯಾವಾಗಪ್ಪಾ..? - ಚೌತಿ ಸಾರ್ವತ್ರಿಕ ರಜೆಯಲ್ಲಿ ಗೊಂದಲ

ಮಂಗಳೂರು: ವಿಘ್ನ ವಿನಾಶಕನನ್ನು ಆರಾಧಿಸುವ ಹಬ್ಬವಾಗಿರುವ ಗಣೇಶ ಚೌತಿ ದೇಶದೆಲ್ಲೆಡೆ ಸಾರ್ವತ್ರಿಕವಾಗಿ ಆಚರಿಸುವ ದೊಡ್ಡ ಹಬ್ಬ. ವಿಘ್ನ ವಿನಾಶಕ ಗಣಪನ ಆರಾಧನೆಗೆ ಎಲ್ಲೆಡೆ ಸಿದ್ಧತೆ ಭರದಿಂದ ಸಾಗಿದ್ದು, ಗಣೇಶ ಮೂರ್ತಿ ರಚನೆ ಸಹಿತ ಚೌತಿ ಹಬ್ಬದ ತಯಾರಿ ಜೋರಾಗಿಯೇ ಸಾಗುತ್ತಿದೆ.

ಆದರೆ, ಈ ಸಂಭ್ರಮದ ನಡುವೆಯೇ ಈ ಬಾರಿ ರಾಜ್ಯ ಸರಕಾರ ಪ್ರಕಟಿಸಿರುವ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಚೌತಿ ಆಚರಣೆಗೆ ನೀಡಿರುವ ರಜಾ ದಿನಾಂಕ ಗೊಂದಲಕ್ಕೆ ಕಾರಣವಾಗಿದೆ.  ಈ ಬಾರಿಯ ಗಣೇಶ ಚತುರ್ಥಿ ಆಚರಿಸುವ ಸಾರ್ವತ್ರಿಕ ರಜೆಯಲ್ಲಿ ಕ್ಯಾಲೆಂಡರ್ ನಲ್ಲೇ ಗೊಂದಲವಿದ್ದು, ಒಂದು ದಿನ ಮುಂಚಿತವಾಗಿ ಸಾರ್ವತ್ರಿಕ ರಜೆ ಇರಲಿದೆ!

ಈ ಬಾರಿ ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 19ರಂದು ಗಣೇಶ ಹಬ್ಬವಿದ್ದು, ಆದರೆ ರಾಜ್ಯ ಸರಕಾರ ಪ್ರಕಟಿಸಿರುವ ರಜೆ ಪಟ್ಟಿಯಲ್ಲಿ ಚೌತಿ ರಜೆಯನ್ನು ಸೆ.18 ಎಂದು ಸರಕಾರದ ಕ್ಯಾಲೆಂಡರ್ನಲ್ಲಿ ಉಲ್ಲೇಖವಾಗಿದೆ.

ಹೀಗಾಗಿ, ರಾಜ್ಯ ಸರಕಾರಿ ನೌಕರರು ಕರ್ತವ್ಯ ಮಾಡುತ್ತಲೇ ಚೌತಿ ಹಬ್ಬವನ್ನು ಆಚರಿಸಬೇಕಾದ ಮತ್ತು ವಿದ್ಯಾರ್ಥಿಗಳು ಹಬ್ಬದ ದಿನದಂದೂ ಶಾಲೆಗೆ ಹೋಗಬೇಕಾದ ಸಂಕಷ್ಟ ಎದುರಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿ ಭಾಗದಲ್ಲೂ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯ ಸರಕಾರ ಪ್ರಕಟಿಸಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ.18ರಂದು ವರಸಿದ್ಧಿವಿನಾಯಕ ವೃತ ರಜೆ ಎಂದಿದೆ. ಪಂಚಾಂಗ ಪ್ರಕಾರ ಸೆ.18ರಂದು ಗೌರಿ ತದಿಗೆ, ಗಣೇಶ ಚತುರ್ಥಿ ಸೆ.19ರಂದು ಇದೆ.

ಕರಾವಳಿ ಭಾಗದಲ್ಲಿಯೂ ಗಣೇಶ ಹಬ್ಬ ಸೆ.19ರಂದು ನಡೆಯುವ ಕಾರಣದಿಂದ ರಜೆಯ ವಿಚಾರ ಇದೀಗ ಗೊಂದಲಕ್ಕೆ ಕಾರಣವಾಗಿದೆ.

ಶಾಸ್ತ್ರ ಪ್ರಕಾರದಲ್ಲೂ ಗಣೇಶ ಚತುರ್ಥಿ ಘಳಿಗೆ ಬೆಳಗ್ಗಿನ ಸೂರ್ಯೋದಯದ ಹೊತ್ತು ಆಗಿದ್ದರೆ, ಶಿವರಾತ್ರಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಘಳಿಗೆ ಮಧ್ಯರಾತ್ರಿಯಾಗಿರುತ್ತದೆ. ಈ ಲೆಕ್ಕಾಚಾರವನ್ನು ತಾಳೆ ಹಾಕಿದಾಗ ಸೆ.18ರ ಬೆಳಗ್ಗೆ ತದಿಗೆ ತಿಥಿಯಾದರೆ, ಮಧ್ಯಾಹ್ನ 12.38 ರಿಂದ ಚೌತಿ ಆರಂಭವಾಗಿ, ಸೆ.19ರ ಮಧ್ಯಾಹ್ನ 1.42 ರವರೆಗೆ ಈ ಘಳಿಗೆ ಇದೆ. ಸೆ.19ರ ಸೂರ್ಯೋದಯ ಘಳಿಗೆ 6.21 ಆಗಿದ್ದು ಈ ದಿನವೇ ಭಾದ್ರಪದ ಚೌತಿ ದಿನವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಶಾಲಾಡಳಿತವನ್ನು ಸಂಪರ್ಕಿಸಿ ಗಣೇಶ ಚತುರ್ಥಿ ರಜೆ ಸೆ.19ರಂದೇ ನೀಡುವಂತೆ ಕೋರಿದ್ದಾರೆ.

ಆದರೆ ‘ಸಾರ್ವತ್ರಿಕ ರಜೆ ಬದಲಾವಣೆ ಬಗ್ಗೆ ಸರಕಾರವೇ ತೀರ್ಮಾನ ಮಾಡಬೇಕಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದು ಈ ವಿಚಾರವಾಗಿ ಇನ್ನೂ ಯಾವುದೇ ಸೂಕ್ತ ನಿರ್ಧಾರ ಕೈಗೊಂಡಿಲ್ಲ.

ಒಂದುವೇಳೆ, ಸರಕಾರ ಈ ರಜಾದಿನವನ್ನು ಬದಲು ಮಾಡದಿದ್ದಲ್ಲಿ ಪ್ರತಿಪಕ್ಷ ಬಿಜೆಪಿ ಮತ್ತು ರಾಜ್ಯದ್ಲಲ್ಲಿನ ಹಿಂದು ಸಂಘಟನೆಗಳು ಈ ವಿಚಾರವನ್ನು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೊಂದು ‘ಅಸ್ತ್ರ’ ಮಾಡಿಕೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ!

ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ

Posted by Vidyamaana on 2024-05-04 11:37:44 |

Share: | | | | |


ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ

ಕೊಣನೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯಲ್ಲಿ ಕೆರೆ ಮೀನು ತಿಂದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ರವಿಕುಮಾರ್ (46) ಹಾಗೂ ಕೆ.ಆರ್. ನಗರ ತಾಲ್ಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತಪಟ್ಟವರು. ಅಲ್ಲದೆ,15 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ನೀರಿಲ್ಲದೇ ಬತ್ತಿದ್ದ ಗ್ರಾಮದ ಕೆರೆ ಕೆಸರಿನಲ್ಲಿದ್ದ ಮೀನುಗಳನ್ನು ಗ್ರಾಮಸ್ಥರು ಹಿಡಿದು ಅಡುಗೆ ಮಾಡಿದ್ದರು. ಬಳಿಕ ಸಂತೋಷದಿಂದ ತಿಂದಿದ್ದಾರೆ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

Posted by Vidyamaana on 2023-04-11 20:45:43 |

Share: | | | | |


ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

ಪುತ್ತೂರು: ರಾಜಕೀಯ ಜಂಜಾಟಕ್ಕೆ ಕಾರಣವಾಗಿದ್ದ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಅವರನ್ನು ಕಣಕ್ಕಿಳಿಸಲಾಗಿದೆ.

ಬೆಳ್ತಂಗಡಿಯಲ್ಲಿ ಭಾರೀ ಮಳೆ: ಇಂದು ಬೆಳ್ತಂಗಡಿ ತಾಲೂಕಿನ ಎಲ್ಲ ಶಾಲೆಗಳಿಗೆ ರಜೆ ಘೋಷಣೆ

Posted by Vidyamaana on 2024-07-04 07:33:08 |

Share: | | | | |


ಬೆಳ್ತಂಗಡಿಯಲ್ಲಿ ಭಾರೀ ಮಳೆ: ಇಂದು ಬೆಳ್ತಂಗಡಿ ತಾಲೂಕಿನ ಎಲ್ಲ ಶಾಲೆಗಳಿಗೆ ರಜೆ ಘೋಷಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 4 ರ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ

ಬಲ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಸುಜ್ಞಾನ ರಂಗಮಂದಿರ ಉದ್ಘಾಟನೆ

Posted by Vidyamaana on 2024-02-02 12:31:52 |

Share: | | | | |


ಬಲ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಸುಜ್ಞಾನ ರಂಗಮಂದಿರ ಉದ್ಘಾಟನೆ

ಕಡಬ: ಬಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಹಾಗೂ ಪೂರ್ವ ವಿದ್ಯಾರ್ಥಿಗಳು ಹಾಗೂ ಬಲ್ಯ ಶಾಲೆಯ ಸಮಸ್ತ ವಿದ್ಯಾಭಿಮಾನಿಗಳ ಸಹಕಾರದಿಂದ ಸುಮಾರು ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ನೂತನ ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನೂತನ  *ಪ್ರತಿಭಾ ಸುಜ್ಞಾನ* ರಂಗಮಂದಿರವನ್ನು  ಶ್ರೀ ಬಿ.ಎಂ ಲಿಂಗಪ್ಪ ಗೌಡ ಬಾಬ್ಲುಬೆಟ್ಟು ಅವರು ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ  ಕುಟ್ರುಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಸುಮನಾರವರು ಸಭಾ ಕಾರ್ಯಕ್ರಮವನ್ನು  ದೀಪ ಬೆಳಗಿಸಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ನೂತನ ರಂಗಮಂದಿರ ನಿರ್ಮಾಣದ ಶ್ರಮಿಕರಿಗೆ ಗೌರವಾರ್ಪಣೆ, ನೂತನ ರಂಗ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಹಾಗೂ ಶಾಲೆಗೆ ವಸ್ತುರೂಪದ ಕೊಡುಗೆ ನೀಡಿದವರಿಗೆ ಗೌರವಾರ್ಪಣೆ ನಡೆಯಿತು. ಪೂರ್ವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಕ್ರೀಡಾಸಂಭ್ರಮ 2023-24 ಕ್ರೀಡಾಕೂಟದ ಬಹುಮಾನ  ವಿತರಣೆ, ಪೂರ್ವ ವಿದ್ಯಾರ್ಥಿ ಸಂಘದ ಅಧಿಕಾರ ಹಸ್ತಾಂತರ  ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ 

ಪೂರ್ವ ವಿದ್ಯಾರ್ಥಿ ಸಂಘ ಹಾಗೂ ನೂತನ ರಂಗಮಂದಿರ ಸಮಿತಿಯ ಅಧ್ಯಕ್ಷರಾದ ಬಿ ಎಂ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.  ಶಾಲೆಯ ಪೂರ್ವ ವಿದ್ಯಾರ್ಥಿ, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗುಡ್ಡಪ್ಪ ಗೌಡ ನೆಲ್ಲ-ಬಲ್ಯ ಇವರು ದಿಕ್ಸೂಚಿ ಭಾಷಣ ಮಾಡಿದರು.  ಎಸ್ ಡಿ ಎಂ ಸಿ ಅಧ್ಯಕ್ಷ ವಿಲ್ಸನ್ ವಿ. ಟಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ಮೀನಾಕ್ಷಿ ನೆಲ್ಲ, ಶ್ರೀ ಪ್ರಕಾಶ್ ಬಾಕಿಲ, ಶ್ರೀಮತಿ ಪುಷ್ಪಾ.ಕೆ, ಶ್ರೀ ತುಕ್ರಪ್ಪ ನೆಲ್ಲ , ಶ್ರೀ ಕೆ.ಆರ್. ಆಚಾರ್ಯ ಪುತ್ತೂರು, ಶ್ರೀ ವಾಣಿ ನಾಗೇಶ್ ಬನಾರಿ, ಶ್ರೀ ರವಿ ಪ್ರಸಾದ್ ಆಲಾಜೆ, ಶ್ರೀ ನಾರಾಯಣ ಕೊಲ್ಲಿಮಾರು,  ಶ್ರೀ ವಿಮಲ್ ಕುಮಾರ್ ನೆಲ್ಯಾಡಿ, ಶ್ರೀ ಸತೀಶ್ಚಂದ್ರ ಶೆಟ್ಟಿ, ಶ್ರೀ ಶೇಖರ ಗೌಡ ದೇರಾಜೆ, ಶ್ರೀ ಕೊರಗಪ್ಪ ಗೌಡ ಪುಳಿತ್ತಡಿ, ಶ್ರೀ ತಿಮ್ಮಣ್ಣ ಭಟ್ ದೇವರಡ್ಕ , ಶ್ರೀಮತಿ ಅಮ್ಮಣಿ , ಶ್ರೀ ಜನಾರ್ದನ ಗೌಡ , ಹಾಗೂ ಶಾಲಾ ನಾಯಕ ಧನುಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 600ಕ್ಕಿಂತ ಹೆಚ್ಚು ಜನ , ಪೂರ್ವ ವಿದ್ಯಾರ್ಥಿಗಳು, ಊರ ಪರ ಊರ ಶಾಲಾ ವಿದ್ಯಾಭಿಮಾನಿಗಳು, ಗಣ್ಯರು ಭಾಗವಹಿಸಿದ್ದರು .ಈ ಹಿಂದೆ ಬಲ್ಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಗುರುಗಳಾದ  ರುಕ್ಮಿಣಿ ಪಿಜಕಳ, ಪೆರ್ಗಡೆ ಗೌಡ ದೇರಾಜೆ,  ಅಚ್ಚಮ್ಮ, ಜಿ. ಮಾಯಿಲಪ್ಪ ಇವರನ್ನು ಗೌರವಿಸಲಾಯಿತು. ನೂತನ ರಂಗಮಂದಿರಕ್ಕೆ ಹಾಗೂ ಶಾಲೆಗೆ ವಿಶೇಷವಾಗಿ ಸಹಕರಿಸಿದ ಹಲವಾರು ಜನರನ್ನು ಗೌರವಿಸಲಾಯಿತು.

  ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಮತ್ತು ಪೂರ್ವ ವಿದ್ಯಾರ್ಥಿಗಳಿಂದ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲೆಯ 

ಮುಖ್ಯ ಶಿಕ್ಷಕಿ ಪುಷ್ಪಾ. ಕೆ  ಸ್ವಾಗತಿಸಿ, ರಂಗ ಮಂದಿರ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಗಣೇಶ್ ಭಟ್ ದೇವರಡ್ಕ ವಂದಿಸಿದರು, ಶೇಖರಗೌಡ ಪನ್ಯಾಡಿ  ಕಾರ್ಯಕ್ರಮ ನಿರೂಪಿಸಿದರು, ರಂಗಮಂದಿರ ನಿರ್ಮಾಣ ಸಮಿತಿಯ ಉಪಾಧ್ಯಕ್ಷರಾದ ಉದಯ್ ಕುಮಾರ್ ಪುತ್ತಿಲ ಹಾಗೂ ಶಾಲಾ ಶಿಕ್ಷಕಿಯರು ಸಹಕರಿಸಿದರು.

Recent News


Leave a Comment: