ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಸುದ್ದಿಗಳು News

Posted by vidyamaana on 2024-07-05 17:43:40 |

Share: | | | | |


ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ .ಈ ಮೂಲಕ ಆಟೋ, ಕ್ಯಾಬ್ ಚಾಲಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.ಕಳೆದ ವರ್ಷ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು.

ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿತ್ತು ಸಾರಿಗೆ ಸಂಘಟನೆಗಳ ಮನವಿ ಬೆನ್ನಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಮುಂದಾಗಿದೆ.

ಈ ಹಿನ್ನೆಲೆ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು. 11 ತಂಡವನ್ನು ರಚಿಸಿ ಆರ್ಟಿಓ ಅಧಿಕಾರಿಗಳ ನೇತೃತ್ವದಲ್ಲಿ ಸೀಜ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್‌ಇಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

 Share: | | | | |


ಕಾಡಾನೆ ಸೆರೆ ಕಾರ್ಯಾಚರಣೆ ನಂತರ ಸ್ಥಳದಲ್ಲಿ ವಾಗ್ವಾದ. ಅಧಿಕಾರಿಗಳಿಗೆ ಹಲ್ಲೆ

Posted by Vidyamaana on 2023-02-23 23:23:37 |

Share: | | | | |


ಕಾಡಾನೆ ಸೆರೆ ಕಾರ್ಯಾಚರಣೆ ನಂತರ ಸ್ಥಳದಲ್ಲಿ ವಾಗ್ವಾದ. ಅಧಿಕಾರಿಗಳಿಗೆ ಹಲ್ಲೆ

ಕಡಬ, ಫೆ.23. ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ನಂತರ ಉಳಿದ ಆನೆಗಳನ್ನು ಸೆರೆ ಹಿಡಯುವಂತೆ ಆಗ್ರಹಿಸಿ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಜೀಪ್ ಗೆ ಹಾನಿಗೈದಿರುವ ಘಟನೆ ವರದಿಯಾಗಿದೆ.ನರಹಂತಕ ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಿದ ನಂತರ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದು, ಇದಕ್ಕೊಪ್ಪದ ಸಾರ್ವಜನಿಕರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಯಾರೋ ಕಿಡಿಗೇಡಿಗಳು ಇಲಾಖೆಯ ವಾಹನಗಳಿಗೆ ಹಾನಿ ಉಂಟುಮಾಡಿ ಅಧಿಕಾರಿಗಳಿಗೆ ಹಲ್ಲೆಗೈದಿದ್ದು, ಘಟನೆಗೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಿಜೋರಾಂನಲ್ಲಿ ಸಂಘಟನೆಗಳ ಬೆದರಿಕೆ: ಮೈತೆಯ್ ಗಳ ಏರ್ ಲಿಫ್ಟ್ ಗೆ ಸಿದ್ಧತೆ

Posted by Vidyamaana on 2023-07-23 13:52:04 |

Share: | | | | |


ಮಿಜೋರಾಂನಲ್ಲಿ   ಸಂಘಟನೆಗಳ ಬೆದರಿಕೆ: ಮೈತೆಯ್ ಗಳ ಏರ್ ಲಿಫ್ಟ್ ಗೆ ಸಿದ್ಧತೆ

ಐಜ್ವಾಲ್‌: ಮಣಿಪುರದಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಎರಡು ಸಮುದಾಯಗಳಲ್ಲಿ ಒಂದಾದ ಮೈತೆಯ್ ಸಮುದಾಯದ ಜನರಿಗೆ ಮಿಜೋರಾಂನಲ್ಲಿ ಮಾಜಿ ಉಗ್ರಗಾಮಿಗಳ ಸಂಘಟನೆ ಬೆದರಿಕೆ ಹಾಕಿದ ಬೆನ್ನಲ್ಲೇ ಐಜ್ವಾಲ್‌ನಿಂದ ವಿಮಾನದಲ್ಲಿ ಕರೆ ತರಲು ಮಣಿಪುರ ಸರಕಾರ ಯೋಜಿಸಿದೆ.

ಮಿಜೋರಾಂ ಸರಕಾರ ಸುರಕ್ಷತೆ ಗಾಗಿ ತಮ್ಮ ತಾಯ್ನಾಡಿಗೆ ಮರಳುವಂತೆ ಮೈತೆಯ್ ಗಳನ್ನು ಕೇಳಿಕೊಂಡ ನಂತರ ಈ ನಿರ್ಧಾರವನ್ನು ಮಣಿಪುರ ಸರಕಾರ ಕೈಗೊಂಡಿದೆ.

ಮೇ 4 ರಂದು ಪುರುಷರ ಗುಂಪು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಮಿಜೋ ಯುವಕರಲ್ಲಿ ಭಾರೀ ಆಕ್ರೋಶ ಇದೆ ಎಂದು ಭದ್ರತಾ ಪಡೆಗಳು ಹೇಳಿದೆ.

ಮಣಿಪುರ ಸರಕಾರವು ಐಜ್ವಾಲ್-ಇಂಫಾಲ್ ಮತ್ತು ಐಜ್ವಾಲ್-ಸಿಲ್ಚಾರ್ ನಡುವೆ ವಿಶೇಷ ATR ವಿಮಾನಗಳ ಮೂಲಕ ಮಿಜೋರಾಂನಿಂದ ಜನರನ್ನು ಏರ್ಲಿಫ್ಟ್ ಮಾಡಲು ಯೋಜಿಸುತ್ತಿದೆ. ಮಿಜೋರಾಂ ಪೊಲೀಸರು ಐಜ್ವಾಲ್ ನಗರದಲ್ಲಿ ಮೈತೆಯ್ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದೆ

ಉಪ್ಪಿನಂಗಡಿ ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ ಡಿಯೋ ಅಪಘಾತ ಕುಪ್ಪೆಟ್ಟಿ ಅಬೂಬಕ್ಕರ್ ಸಿದ್ದೀಕ್ ಮೃತ್ಯು ಸವಾರ ಗಂಭೀರ ನಕಲಿ ನಂಬರ್ ಪ್ಲೇಟ್ ಪತ್ತೆ.

Posted by Vidyamaana on 2023-02-10 03:26:59 |

Share: | | | | |


ಉಪ್ಪಿನಂಗಡಿ ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ ಡಿಯೋ ಅಪಘಾತ ಕುಪ್ಪೆಟ್ಟಿ ಅಬೂಬಕ್ಕರ್ ಸಿದ್ದೀಕ್  ಮೃತ್ಯು ಸವಾರ ಗಂಭೀರ ನಕಲಿ ನಂಬರ್ ಪ್ಲೇಟ್ ಪತ್ತೆ.

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಶಾಲೆಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಡಿಯೋ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ದುರ್ಘಟನೆ ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ಫೆ. 1 ರಂದು ಸಂಭವಿಸಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಓರ್ವ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಪ್ಪೆಟ್ಟಿಯ ಅಬೂಬಕ್ಕರ್ ಸಿದ್ದೀಕ್ ಎಂಬಾತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಫೆಬ್ರವರಿ 1 ರಂದು ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ದಿಂದ ಉಪ್ಪಿನಂಗಡಿಯಿಂದ ಕುಪ್ಪೆಟ್ಟಿ ಕಡೆಗೆ ಅತೀ ವೇಗದಿಂದ ಚಲಾಯಿಸಿಕೊಂಡು ಬಂದ ಡಿಯೋ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಉಪ್ಪಿನಂಗಡಿಯಿಂದ ಕಲ್ಲೇಗಿ ಕಡೆಗೆ ಚಲಿಸುತ್ತಿದ್ದ ಜೀತೋ ಟೆಂಪೊಗೆ ಹಿಂಬದಿಯಿಂದ ಡಿಕಿ ಹೊಡೆದಿದೆ ಎನಲಾಗಿದೆ. ಆದರೆ ಸ್ಕೂಟರ್ ಜೀತೋ ಟೆಂಪೊಗೆ ಡಿಕ್ಕಿ ಹೊಡೆದಿರುವ ಬಗ್ಗೆ ಜೀತೋ ಟೆಂಪೋದಲ್ಲಿ ಯಾವುದೇ ಕುರುಹುಗಳು ಪತ್ತೆ ಆಗಿಲ್ಲ ಎನ್ನಲಾಗಿದೆ.ಅಪ್ರಾಪ್ತ ಸ್ಕೂಟರ್ ಸವಾರರು ಹೆಲ್ಮಟ್ ಧರಿಸದ ಕಾರಣ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ಸಂದರ್ಭದಲ್ಲಿ ಸವಾರ ಮತ್ತು ಸಹ ಸವಾರನ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಸಹ ಸವಾರ ಕುಪ್ಪೆಟ್ಟಿಯ ಅಬೂಬಕ್ಕರ್ ಸಿದ್ದೀಕ್ ಎಂಬಾತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ KA 53 ER 6958 ಡಿಯೋ ಸ್ಕೂಟರಿನ ನಂಬರ್ ಪ್ಲೇಟ್ ನಕಲಿಯಾಗಿದ್ದು, ಈ ಬಗ್ಗೆ ಬಂಟ್ವಾಳದ ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ದೂರನ್ನು ನೀಡಿದ್ದು, ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದಡಿಯೋ ಸ್ಕೂಟರಿನ ಅಸಲಿ ಮಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

       ಅಜಾಗರೂಕತೆ ಮತ್ತು ನಿರ್ಲಕ್ಷ್ಯತನ, ಹೆಲ್ಮಟ್ ಧರಿಸದೆ, ಇನ್ಸುರೆನ್ಸ್ ಇಲ್ಲದೆ,ಡ್ರೈವಿಂಗ್ ಲೈಸನ್ಸ್ ಇಲ್ಲದ ಅಪ್ರಾಪ್ತ ಮಕ್ಕಳಿಂದ ಸ್ಕೂಟರ್ ಚಲಾವಣೆ ಎಂಬ ಕಾರಣದಿಂದ ಪುತ್ತೂರು ಸಂಚಾರಿ  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

BREAKING: ಈಶ್ವರಪ್ಪನ ಪುತ್ರನಿಗೂ ಶುರುವಾಯ್ತು ಅಶ್ಲೀಲ ಸಿಡಿ ಭಯ!:ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ

Posted by Vidyamaana on 2024-05-01 04:35:20 |

Share: | | | | |


BREAKING: ಈಶ್ವರಪ್ಪನ ಪುತ್ರನಿಗೂ ಶುರುವಾಯ್ತು ಅಶ್ಲೀಲ ಸಿಡಿ ಭಯ!:ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ದೃಶ್ಯಾವಳಿಗಳು ವೈರಲ್ ಆಗಿವೆ. ಈ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೂ ಆದೇಶಿಸಿದೆ. ಈ ಬೆನ್ನಲ್ಲೇ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಗೂ ಅಶ್ಲೀಲ ಸಿಡಿ ಭೀತಿ ಎದುರಾಗಿದೆ.ಹೀಗಾಗಿ ಅವರು ನಿರ್ಬಂಧಕಾಜ್ಞೆಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಬೆನ್ನಲ್ಲೇ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕೆ.ಇ ಕಾಂತೇಶ್ ಅವರಿಗೂ ಅಶ್ಲೀಲ ಸಿಡಿ ಭೀತಿ ಎದುರಾಗಿದೆ.

ಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

Posted by Vidyamaana on 2023-06-21 05:10:54 |

Share: | | | | |


ಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲೇ ಸಾವನ್ನಪ್ಪಿದ ಘಟನೆ ಜೂ 20 ಬೆಳಿಗ್ಗೆ ಗರ್ಡಾಡಿ ಬಳಿ ನಡೆದಿದೆ.ಪಡಂಗಡಿ ಸಮೀಪದ ಒಡಿಲು ಎಂಬಲ್ಲಿಯ ದಿಕ್ಷೀತ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ವೇಣೂರು ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಧರ್ಮಸ್ಥಳದಿಂದ ಹುಬ್ಬಳ್ಳಿಗೆ ತೆರಳುತಿದ್ದ ಬಸ್ ಗರ್ಡಾಡಿ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಕಳೆದ ಕೆಲವು ಸಮಯಗಳ ಹಿಂದೆ ಇದೇ ಜಾಗದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನೇಹಾ ತಂದೆಗೆ ಕಾಲ್ ಮಾಡಿದ ಸಿಎಂ -ನಾವು ನಿಮ್ಮ ಜೊತೆ ಇರ್ತೀವಿ ಎಂದು ಧೈರ್ಯ ತುಂಬಿದ ಸಿದ್ದರಾಮಯ್ಯ

Posted by Vidyamaana on 2024-04-24 03:39:44 |

Share: | | | | |


ನೇಹಾ ತಂದೆಗೆ ಕಾಲ್ ಮಾಡಿದ ಸಿಎಂ -ನಾವು ನಿಮ್ಮ ಜೊತೆ ಇರ್ತೀವಿ ಎಂದು ಧೈರ್ಯ ತುಂಬಿದ ಸಿದ್ದರಾಮಯ್ಯ

ಹುಬ್ಬಳ್ಳಿ , ಏ.23: ಇತ್ತೀಚೆಗೆ ಕೊಲೆಯಾದ ಕಾಲೇಜು ಯುವತಿ ನೇಹಾ ಅವರ ತಂದೆ ನಿರಂಜನ ಹಿರೇಮಠ ಜೊತೆ ಸಿಎಂ ಸಿದ್ದರಾಮಯ್ಯ ಫೋನ್ ಮೂಲಕ ಮಾತನಾಡಿ, "ವೆರಿ ಸ್ವಾರಿ. ನಾವು ನಿಮ್ಮ ಜೊತೆ ಇರ್ತೀವಿ" ಎಂದು ಧೈರ್ಯ ತುಂಬಿದ್ದಾರೆ. ಸಚಿವ ಎಚ್.ಕೆ.ಪಾಟೀಲ್ ಅವರು ನಿರಂಜನ ಹಿರೇಮಠ ಅವರ ಮನೆಗೆ ಭೇಟಿ ನೀಡಿದ ವೇಳೆ ಸಿಎಂ ಫೋನ್‌ ಮೂಲಕ ಮಾತನಾಡಿದ್ದಾರೆ.

ಬಳಿಕ ಪ್ರತಿಕ್ರಿಯಿಸಿದ ನಿರಂಜನ ಹಿರೇಮಠ, "ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಕ್ಕೆ ಸಮಾಧಾನವಿದೆ. ಸ್ಪೆಷಲ್ ಕೋರ್ಟ್ ವಿಚಾರಕ್ಕೂ ಸಮಾಧಾನ ತರಿಸಿದೆ. ಸಿಎಂಗೆ ಧನ್ಯವಾದ" ಎಂದರು.

ಸಚಿವ ಎಚ್.ಕೆ.ಪಾಟೀಲ ಪ್ರತಿಕ್ರಿಯಿಸಿ, ನ್ಯಾಯದಾನ ವಿಳಂಬವಾಗಬಾರದೆಂದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಇವತ್ತು ಉಚ್ಛ ನ್ಯಾಯಾಲಯಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ ಪತ್ರ ತಲುಪುತ್ತದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ. ಅನಿವಾರ್ಯ ಕಾರಣದಿಂದ ಸಿಎಂ ಇಲ್ಲಿಗೆ ಬರಲು ಆಗಿಲ್ಲ. ಹೀಗಾಗಿ, ನಿರಂಜನ್ ಹಿರೇಮಠ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದಾರೆ ಎಂದು ತಿಳಿಸಿದರು.

ತಪ್ಪು ಮಾಹಿತಿಯಿಂದ ಮಾತನಾಡಿದ್ದೇನೆ ;

"ನನ್ನ ಮಗಳ ಕೊಲೆ ಪ್ರಕರಣದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿದೆ. ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದೇವೆ. ಪೊಲೀಸ್ ಆಯುಕ್ತರ ವಿರುದ್ಧವೂ ಮಾತನಾಡಿದ್ದೇನೆ. ದುಃಖದಲ್ಲಿ ಮಾಹಿತಿ ಕೊರತೆಯಿಂದ ಮಾತನಾಡಿದ್ದೆ" ಎಂದು ತಂದೆ ನಿರಂಜನ ಹಿರೇಮಠ ಇದೇ ಸಂದರ್ಭದಲ್ಲಿ ಹೇಳಿದರು.

Recent News


Leave a Comment: