ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ ತನಿಖೆಯಲ್ಲಿ ಕಿಲಾಡಿ ಲೇಡಿ ರಶೀದಾಳ ಕರಾಳ ಮುಖ ಬಯಲು

Posted by Vidyamaana on 2023-07-13 16:29:04 |

Share: | | | | |


ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ ತನಿಖೆಯಲ್ಲಿ ಕಿಲಾಡಿ ಲೇಡಿ ರಶೀದಾಳ ಕರಾಳ ಮುಖ ಬಯಲು

ವಿಜಯವಾಡ: ಇತ್ತೀಚಿನ ದಿನಗಳಲ್ಲಿ ಮದುವೆಯ ಹೆಸರಲ್ಲಿ ಮೋಸ ಹೋಗುವವರು ಮತ್ತು ಮೋಸ ಮಾಡುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಯುವತಿಯರು, ಯುವಕರು ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ವಂಚನೆಯ ಬಲೆಗೆ ಬೀಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುವತಿಯೊಬ್ಬಳು ಎಂಟು ಮಂದಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಮುನ್ನೆಲೆಗೆ ಬಂದಿದೆ.ನಾಲ್ಕು ರಾಜ್ಯಗಳಲ್ಲಿ ವಂಚನೆ


ಮಹಾವಂಚಕಿಯ ಹೆಸರು ರಶೀದಾ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯುವತಿ ಮದುವೆ ಹೆಸರಲ್ಲಿ ಯುವಕರನ್ನು ಯಾಮಾರಿಸಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. ರಶೀದಾಗೆ ಇನ್​ಸ್ಟಾಗ್ರಾಂ ಮೂಲಕ ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲ ಮೂಲದ ಫೈನಾನ್ಶಿಯರ್​ ಮೂರ್ತಿ ಎಂಬುವರ ಪರಿಚಯವಾಗಿತ್ತು. ಹಲವು ತಿಂಗಳುಗಳ ಕಾಲ ಇಬ್ಬರ ನಡುವೆ ಮಾತುಕತೆ ನಡೆಯುತ್ತಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿ ರಶೀದಾ ಮದುವೆ ಆಗುವ ಬಯಕೆಯನ್ನು ಮೂರ್ತಿ ಮುಂದೆ ವ್ಯಕ್ತಪಡಿಸಿದಳುಹುಡುಗಿ ನೋಡಲು ಸುಂದರವಾಗಿದ್ದರಿಂದ ಮೂರ್ತಿ ಕೂಡ ಮರುಮಾತಾಡದೆ ಮದುವೆ ಓಕೆ ಎಂದರು. ಇಬ್ಬರ ಮದುವೆ ಕಳೆದ ಮಾರ್ಚ್​ 30ರಂದು ನಡೆದಿತ್ತು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ರಶೀದಾ ಇದ್ದಕ್ಕಿಂದ್ದಂತೆ ಮಾಯವಾದಳು. ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಾಣೆಯಾಗಿರುವುದನ್ನು ನೋಡಿ, ತಾನು ಮೋಸ ಹೋಗಿರುವುದು ಸಹ ಮೂರ್ತಿಗೆ ಅರ್ಥವಾಯಿತು. ಬಳಿಕ ಸ್ಥಳೀಯ ಠಾಣೆಗೆ ಆಕೆಯ ವಿರುದ್ಧ ದೂರು ನೀಡಿದರು.


ತನಿಖೆಯಲ್ಲಿ ಲೇಡಿಯ ವಂಚನೆ ಬಯಲುಮೂರ್ತಿ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ ರಶೀದಾಳ ಅಸಲಿ ಮುಖ ಬಯಲಾಯಿತು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು, ಆರ್ಥಕವಾಗಿ ಸದೃಢರಾದ ಅವಿವಾಹಿತ ಹುಡುಗರನ್ನು ಟಾರ್ಗೆಟ್​ ಮಾಡಿ, ಪರಿಚಯಿಸಿಕೊಂಡು, ಪ್ರೀತಿಯ ಹೆಸರಲ್ಲಿ ನಂಬಿಸಿ ಮದುವೆಯಾಗಿ ವಂಚನೆ ಮಾಡುತ್ತಿದ್ದಳು ಎಂಬುದು ಬಯಲಾಗಿದೆ.


ಅಂದಹಾಗೆ ಆರೋಪಿ ರಶೀದಾ ನೀಲಗಿರಿ ಮೂಲದವಳು. ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ

ಇಂದು ಕರೆಂಟ್ ಇಲ್ಲ

Posted by Vidyamaana on 2024-02-29 04:44:20 |

Share: | | | | |


ಇಂದು ಕರೆಂಟ್ ಇಲ್ಲ

ಪುತ್ತೂರು: ನಿರ್ವಹಣೆ ಮತ್ತು ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಉಪ್ಪಿನಂಗಡಿ ವಾಟರ್‌ಸಪ್ಪೆ ಮತ್ತು ಕಾಂಚನ ಮತ್ತು 110/33/11 ಕೆವಿ ಕಲ್ಲೇರಿ ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಮತ್ತು ಕಮ್ಮಾರ ಫೀಡರ್‌ನಲ್ಲಿ ಫೆ.29 ರಂದು ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 5:30 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರ ಮತ್ತು 110/33/11ಕೆವಿ ಕಣ್ಣೀರಿ ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ನಿಂದ ವಿದ್ಯುತ್ ಸರಬರಾಜಾಗುವ ಉಪ್ಪಿನಂಗಡಿ, ಕ್ಯೂಲ, ನೆಕ್ಕಿಲಾಡಿ ಬಜತ್ತೂರು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಕಾರಿನೊಳಗೆ ಇರಲೇ ಇಲ್ಲ ಆ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ

Posted by Vidyamaana on 2023-11-05 18:32:53 |

Share: | | | | |


ಕಾರಿನೊಳಗೆ ಇರಲೇ ಇಲ್ಲ ಆ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ

ತಿರುವನಂತಪುರ: ಕೇರಳದಲ್ಲೊಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಎಐ ಚಾಲಿತ ಕ್ಯಾಮೆರಾ ಟ್ರಾಫಿಕ್ ಉಲ್ಲಂಘನೆಯನ್ನು ಪತ್ತೆಹಚ್ಚಿತ್ತು. ಬಳಿಕ ಕಾರು ಮಾಲಕರಿಗೆ ದಂಡಸ ಚಲನ್ ನೀಡಿದಾಗ ಅದರಲ್ಲಿ ಎಐ ಕ್ಯಾಮೆರಾದ ಸೆರೆಹಿಡಿದಿದ್ದ ಫೋಟೋ ನೋಡಿ ಮಾಲಕರು ಗಾಬರಿಗೊಂಡಿದ್ದಾರೆ

ಏಕೆಂದರೆ, ಆ ಸಮುದಲ್ಲಿ ಕಾರಿನಲ್ಲಿ ಇಬ್ಬರೇ ಪ್ರಯಾಣಿಸುತ್ತಿದ್ದರು ಆದರೆ ದಂಡದ ಚಲನ್ ನಲ್ಲಿ ಪ್ರಿಂಟ್ ಆಗಿದ್ದ ಕಾರಿನ ಫೊಟೋದಲ್ಲಿ ಮೂವರಿರುವುದು ಕಂಡುಬಂದಿದೆ.

ಚೆರುವತ್ತೂರಿನ ಕೈತಕ್ಕಾಡ್ ಮೂಲದ ಆದಿತ್ಯನ್ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಪಯ್ಯನ್ನೂರಿನಲ್ಲಿ ಅಳವಡಿಸಲಾಗಿದ್ದ ಎಐ ಕ್ಯಾಮೆರಾದಲ್ಲಿ ಈ ಮೇಲಿನ ಚಿತ್ರ ಸೆರೆಯಾಗಿದೆ.

ಟ್ರಾಫಿಕ್ ಪೊಲೀಸರು ನೀಡಿರುವ ನೋಟೀಸ್ನಲ್ಲಿರುವ ಚಿತ್ರವು ಕಾರಿನ ಹಿಂಬದಿಯ ಸೀಟಿನಲ್ಲಿ ಇನ್ನೊಬ್ಬ ಮಹಿಳೆಯ ಆಕೃತಿಯನ್ನು ತೋರಿಸುತ್ತದೆ. ಆದರೆ ಅಂತಹ ವ್ಯಕ್ತಿ ಕಾರಿನಲ್ಲಿರಲಿಲ್ಲ ಎಂದು ಆದಿತ್ಯನ್ ಮತ್ತು ಆತನ ಕುಟುಂಬದವರು ವಾದಿಸಿದ್ದಾರೆ. ಹಾಗದರೆ ಆ ಮಹಿಳೆ ಯಾರು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.

ಚಲನ್ ಮೇಲೆ ವಾಹನದಲ್ಲಿ ಇಲ್ಲದವರ ಫೋಟೋ ಮುದ್ರಿಸಿರುವುದು ಮೋಟಾರು ವಾಹನ ಇಲಾಖೆಗೂ ಗೊಂದಲ ಮೂಡಿಸಿದ್ದು ಇದು ತಾಂತ್ರಿಕ ದೋಷದಿಂದ ಆಗಿರುವ ಎಡವಟ್ಟೋ ಅಥವಾ ಇನ್ನಾವುದಾದರೂ ‘ನಿಗೂಢ’ ಶಕ್ತಿಯ ಕೈವಾಡವೋ ಎಂಬ ಬಿಸಿ ಬಿಸಿ ಚರ್ಚೆ ಇದೀಗ ನೆಟ್ಟಿಗರ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.

ದೀಪಾವಳಿಗೆ ಮೈಸೂರು – ಮಂಗಳೂರು ನಡುವೆ ಓಡಲಿದೆ ವಿಶೇಷ ರೈಲು

Posted by Vidyamaana on 2023-11-10 07:26:53 |

Share: | | | | |


ದೀಪಾವಳಿಗೆ ಮೈಸೂರು – ಮಂಗಳೂರು ನಡುವೆ ಓಡಲಿದೆ ವಿಶೇಷ ರೈಲು

ಮಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದೆ ಊರಿಗೆ ಬರಲು ಬಸ್ಸು, ರೈಲುಗಳಲ್ಲಿ ಟಿಕೆಟು ಸಿಗುತ್ತಿಲ್ಲ ಎಂದು ಟೆನ್ಷನ್ ಮಾಡುತ್ತಿರುವವರಿಗೆ ರೈಲ್ವೇ ಇಲಾಖೆ ಒಂದು ಗುಡ್ ನ್ಯೂಸ್ ನೀಡಿದೆ. ಹಬ್ಬದ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲೊಂದನ್ನು ಇಲಾಖೆ ಬಿಟ್ಟಿದ್ದು ಅದರ ವೇಳಾಪಟ್ಟಿ ಇಂತಿದೆ.


ಬೆಳಕಿನ ಹಬ್ಬದ ಈ ವಿಶೇಷ ರೈಲು ಓಡಾಟದ ವೇಳಾಪಟ್ಟಿ ಇಂತಿದೆ.

ದಿನಾಂಕ 10/11/2023 ಶುಕ್ರವಾರ ರೈಲು ಸಂಖ್ಯೆ 07303 ಮೈಸೂರು ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮೈಸೂರಿನಿಂದ ರಾತ್ರಿ 8:30ಕ್ಕೆ ಹೊರಟು ರಾತ್ರಿ 11:25ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಅಂದರೆ ದಿನಾಂಕ 11/11/2023 ಶನಿವಾರದಂದು ಬೆಳಗ್ಗೆ 9:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.


ದಿನಾಂಕ 14/11/2023 ಬುಧವಾರ ರೈಲು ಸಂಖ್ಯೆ 07304 ಮಂಗಳೂರು ಜಂಕ್ಷನ್-ಮೈಸೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮಂಗಳೂರು ಜಂಕ್ಷನ್ನಿಂದ ಸಂಜೆ 5:15ಕ್ಕೆ ಹೊರಟು ಮರುದಿನ ಬೆಳಗ್ಗೆ 3:45ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ಬೆಳಗ್ಗೆ 3:50ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ. 


ಈ ರೈಲಿಗೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಯಶವಂತಪುರ, ಬೆಂಗಳೂರು, ಕೆಂಗೇರಿ, ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.


ಈ ರೈಲಿನಲ್ಲಿ ಜನರಲ್, ಸ್ಲೀಪರ್ ಕ್ಲಾಸ್, 3 ಟೈರ್ ಎಸಿ, 2 ಟೈರ್ ಎಸಿ ಹಾಗೂ ಪ್ರಥಮ ದರ್ಜೆಯ ಕ್ಯಾಬಿನ್ ಕೋಚ್ಗಳು ಇರಲಿದೆ. ತಮ್ಮ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳಲು ಬಯಸುವವರು ಈ ವಿಶೇಷ ರೈಲಿನ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ - ವೈರಲ್ ಆಯ್ತು ಅಪರೂಪದ ವಿಡಿಯೋ..!

Posted by Vidyamaana on 2023-09-28 11:51:31 |

Share: | | | | |


ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ - ವೈರಲ್ ಆಯ್ತು ಅಪರೂಪದ ವಿಡಿಯೋ..!

ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ ಮಂತ್ರಿಗೆ ಚಹಾ ತಂದು ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.ಮೋದಿ ಅವರು ಟ್ವಿಟರ್ (ಎಕ್ಸ್‌) ನಲ್ಲಿ ಆಸಕ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರದರ್ಶನದಲ್ಲಿ ವಿವಿಧ ರೋಬೋಟ್ ಸ್ಟಾಲ್‌ಗಳಲ್ಲಿ ಹಲವಾರು ರೋಬೋಟಿಕ್ ಕ್ರಿಯೆಗಳನ್ನು ವೀಕ್ಷಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ಮತ್ತು ಸಿಎಂಗೆ ರೋಬೋಟ್ ಚಹಾವನ್ನು ನೀಡಿದೆ‌.ನೈಸರ್ಗಿಕ ವಿಕೋಪಗಳು ಅಥವಾ ಅಗ್ನಿ ಅವಘಡಗಳ ಸಂದರ್ಭದಲ್ಲಿ ಮಾನವರಿಗೆ ರೋಬೋಟ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರಧಾನಿ ಮೋದಿ ಅವರು ನೋಡಿದ್ದಾರೆಂದು ಈ ಕ್ಲಿಪ್ ತೋರಿಸಿದೆ.ರೋಬೋಟ್ ಇಂಜಿನಿಯರ್‌ಗಳು ಪಿಎಂ ಮೋದಿಯವರಿಗೆ ರೋಬೋಟ್‌ಗಳು ಹೇಗೆ ಜೀವನದ ವಿವಿಧ ಹಂತಗಳಲ್ಲಿ ಶಕ್ತರಾಗಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ವಿವರಿಸಿದ್ದಾರೆ.

ವೈರಲ್ ಆಯ್ತು ಅಪರೂಪದ ವಿಡಿಯೋ..!


ರೊಬೊಟಿಕ್ಸ್‌ ನೊಂದಿಗೆ ಭವಿಷ್ಯದ ಅಂತ್ಯವಿಲ್ಲದ ಸಾಧ್ಯತೆಗಳನ್ನು ಅನ್ವೇಷಿಸುವುದು! ಎಂದು ಟ್ವಿಟರ್ (ಎಕ್ಸ್) ಪೋಸ್ಟ್‌ ನಲ್ಲಿ ಪಿಎಂ ಮೋದಿ ಬರೆದುಕೊಂಡಿದ್ದಾರೆ.

ಗೆಳತಿಯ ಆಕ್ಷೇಪಾರ್ಹ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದ ಗೆಳೆಯ

Posted by Vidyamaana on 2024-01-31 15:06:09 |

Share: | | | | |


ಗೆಳತಿಯ ಆಕ್ಷೇಪಾರ್ಹ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದ ಗೆಳೆಯ

ಚಿಕ್ಕಬಳ್ಳಾಪುರ, : ಯುವಕನೋರ್ವ ಯುವತಿಯ ಆಕ್ಷೇಪಾರ್ಹ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಶಿಡ್ಲಘಟ್ಟ (Sidlaghatta) ಟೌನ್‍ನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಓದುತ್ತಿರುವ ವಿದ್ಯಾರ್ಥಿನಿ, ಗೆಳೆಯನ ಕಿರುಕುಳಕ್ಕೆ ಮನನೊಂದು ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ. ಊದವಾರಪಲ್ಲಿ ಗ್ರಾಮದ ನಿವಾಸಿ ಕಾರ್ತಿಕ್.ಆರ್ ಮತ್ತು ಯುವತಿ ಇಬ್ಬರೂ ಬಾಗೇಪಲ್ಲಿ (Bagepalli) ತಾಲೂಕಿನ ಚೇಳೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ.


ಪಿಯುಸಿ ನಂತರ ಯುವತಿ ಶಿಡ್ಲಘಟ್ಟದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಳೆ. ಯುವತಿಯ ಸಹಪಾರಿಯಾಗಿದ್ದ ಯುವಕ ಏಳು ತಿಂಗಳ ಹಿಂದೆ ವಿದ್ಯಾರ್ಥಿನಿಯ ಆಕ್ಷೇಪಾರ್ಹ ಪೋಟೋಗಳನ್ನು ತೆಗೆದು ಬ್ಲಾಕ್‍ಮೇಲ್ ಮಾಡಲು ಆರಂಭಿಸಿದ್ದಾನೆ. ಇದರಿಂದ ಬೆದರಿದ ವಿದ್ಯಾರ್ಥಿನಿ ಆತನ ತಾಳಕ್ಕೆ ತಕ್ಕಂತೆ ಕುಣಿದಿದ್ದಾಳೆ.


ಬ್ಲಾಕ್‍ಮೇಲ್‍ಗೆ ಹೆದರಿ ಹೇಳಿದಂತೆ ಕೇಳಿದ ವಿದ್ಯಾರ್ಥಿನಿ


ಪಿಯುಸಿ ಸಹಪಾಠಿ ಕಾರ್ತಿಕ್ ಹೇಳಿದಂತೆ ವಿದ್ಯಾರ್ಥಿನಿ ಕೇಳಿದ್ದಾಳೆ. ಆತನ ಮನಸ್ಸೋ ಇಚ್ಚೆಯಂತೆ ಯುವತಿ ನಡೆದುಕೊಂಡಿದ್ದಾಳೆ. ಕಾರ್ತಿಕ್ ಅಕ್ಷೇಪಾರ್ಹ ಪೋಟೋ ಇಟ್ಟುಕೊಂಡು ಗೆಳತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾನಂತೆ.ವಿದ್ಯಾರ್ಥಿನಿಯ ತಂದೆಗೆ ತಿಳಿದ ಬ್ಲಾಕ್‍ಮೇಲ್


ಕಾರ್ತಿಕ್.ಆರ್ ಬ್ಲಾಕ್‍ಮೇಲ್, ಮಾನಸಿಕ, ದೈಹಿಕ ಕಿರುಕುಳ ನೀಡುವ ವಿಚಾರ ವಿದ್ಯಾರ್ಥಿನಿಯ ತಂದೆಗೆ ತಿಳಿದಿದೆ. ಇದರಿಂದ ರೊಚ್ಚಿಗೆದ್ದ ಆಕೆಯ ತಂದೆ ಮಗಳಿಗೆ ಬುದ್ದಿ ಹೇಳಿ, ಕಾರ್ತಿಕ್ ಮನೆಗೆ ಹೋಗಿ ಆತನ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ತಿಕ್ ತನ್ನ ಪಿಯುಸಿ ಸಹಪಾಠಿಯ ಅಕ್ಷೇಪಾರ್ಹ ಪೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣ ಪೇಸ್‍ಬುಕ್‍ನಲ್ಲಿ ಹರಿಬಿಟ್ಟು ಗೆಳೆತಿಯ ಬಾಳಿಗೆ ಕೊಳ್ಳೆ ಇಟ್ಟಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 354 ಹಾಗೂ ಐಟಿ ಆಕ್ಟ್ 66ಇ, 77ಎರಡಿ ದೂರು ಸಲ್ಲಿಸಿ ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.

Recent News


Leave a Comment: