ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಸುದ್ದಿಗಳು News

Posted by vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.

2016 ರ ಕರ್ನಾಟಕ ಕೇಡರ್ ನ IPS ಅಧಿಕಾರಿ ಯತೀಶ್ ಎನ್ ಈ ಹಿಂದೆ ಮಂಡ್ಯ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 Share: | | | | |


ಮಂಗಳೂರು: ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-10-19 08:51:43 |

Share: | | | | |


ಮಂಗಳೂರು: ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ವಿಶ್ವ ಹಿಂದೂ ಪರಿಷತ್ನ ದ.ಕ. ಜಿಲ್ಲಾ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಜಾತ್ರೆಯ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ಕೇಸರಿ ಧ್ವಜ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಪಾಂಡೇಶ್ವರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.


ಅ.16ರಂದು ಶರಣ್ ಪಂಪ್ವೆಲ್ ತನ್ನ ಬೆಂಬಲಿಗರೊಂದಿಗೆ ಶ್ರೀ ಮಂಗಳಾದೇವಿ ದೇವಸ್ಥಾನ ವಠಾರದಲ್ಲಿರುವ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ಕೇಸರಿ ಧ್ವಜಗಳನ್ನು ಹಾಕಿ, ಭಕ್ತರು ತಮಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಹಿಂದೂ ವ್ಯಾಪಾರಿಗಳ ಅಂಗಡಿಗಳಿಂದ ಮಾತ್ರ ಪಡೆದುಕೊಳ್ಳುವಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದನು. ಈ ಕೃತ್ಯವು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿರುವುದಾಗಿದೆ. ಅದರಂತೆ ದಕ್ಷಿಣ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಸ್ಸೈ ಮನೋಹರ್ ಪ್ರಸಾದ್ ರವರ ದೂರಿನ ಮೇಲೆ ಶರಣ್ ಪಂಪ್ವೆಲ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಡಿಕೆ ಶಿವಕುಮಾರ್ ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಅವಘಡ

Posted by Vidyamaana on 2023-05-04 10:30:53 |

Share: | | | | |


ಡಿಕೆ ಶಿವಕುಮಾರ್ ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಅವಘಡ

ಉತ್ತರ ಕನ್ನಡ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿಯಾದ ಘಟನೆ ಇನ್ನೂ ಹಸಿಯಾಗಿರುವಾಗಲೇ ಇಂದು ಅವರು ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್ ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್ ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದ ಡಿ.ಕೆ ಶಿವಕುಮಾರ್ ಅವರು ರಾಮತೀರ್ಥದ ಹೆಲಿಪ್ಯಾಡ್ ಗೆ ಬಂದಿಳಿದರು. ಈ ವೇಳೆ, ಹೆಲಿಪ್ಯಾಡ್ ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್ ಗೆ ಸಿಗ್ನಲ್ ಕೊಡುವ ಸ್ಟೋಕ್ ಕ್ಯಾಂಡಲ್ ನಿಂದ ಬೆಂಕಿ ಆವರಿಸಿದೆ ಎಂದು ಹೇಳಲಾಗುತ್ತಿದೆ. ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯನ್ನು ಕೂಡಲೇ ಸಿಬ್ಬಂದಿ ಆರಿಸಿದ್ದು, ಬಾರೀ ದುರಂತ ತಪ್ಪಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್ ನಲ್ಲಿ ಇದ್ದವರಿಗೆ ಯಾವುದೇ ಹಾನಿಯಾಗಿಲ್ಲ.ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಆಗಬಹುದಾದ ದುರ್ಘಟನೆಯನ್ನು ತಡೆದಿದ್ದಾರೆ.

ಇಂದು ಹೊನ್ನಾವರದ ಸೆಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ನಲ್ಲಿ ಡಿಕೆಶಿ ಪ್ರಯಾಣಿಸಿದ್ದರು.

ರಾಜ್ಯದಲ್ಲಿ ಬರವಿದ್ಧಾಗಲೂ ಅಧಿಕಾರಕ್ಕಾಗಿ ಕಾಂಗ್ರೆಸ್ ಕಿತ್ತಾಟ: ನಳಿನ್ ಕಟೀಲ್

Posted by Vidyamaana on 2023-11-04 16:13:11 |

Share: | | | | |


ರಾಜ್ಯದಲ್ಲಿ ಬರವಿದ್ಧಾಗಲೂ ಅಧಿಕಾರಕ್ಕಾಗಿ ಕಾಂಗ್ರೆಸ್ ಕಿತ್ತಾಟ: ನಳಿನ್ ಕಟೀಲ್

ವಿಜಯಪುರ: ಅಧಿಕಾರಕ್ಕಾಗಿ ಕಚ್ಚಾಟ ನಡೆಸಿರುವ ಕಾಂಗ್ರೆಸ್ ಸರ್ಕಾರ ಭೀಕರ ಬರದ ಸಂಕಷ್ಟದಲ್ಲಿರುವ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ. ಎರಡು ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಅವರಿಗೆ ಇನ್ನೂ ಆಡಳಿತ ನಡೆಸುವ ವಿಧಾನ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.



ಶನಿವಾರ ಬಿಜೆಪಿ ಬರ ಅಧ್ಯಯನಕ್ಕಾಗಿ ತಮ್ಮ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನಿಗೆ ಭೇಟಿ ನೀಡಿದ ಬಳಿಕ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಭೀಕರ ಬರದಿಂದ ಕಂಗೆಟ್ಟಿರುವ ಈ ಹಂತದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದ್ದು, ರಾಜ್ಯದ ಜನ ಆಕ್ರೋಶಗೊಳ್ಳುವಂತೆ ಮಾಡಿದೆ ಎಂದು ಟೀಕಾ ಪ್ರಹಾರ ನಡೆಸಿದರು.


ರಾಜ್ಯದ ಬರದಂಥ ಸಂಕಷ್ಟದ ಸಂದಭದಲ್ಲೂ ಸಿದ್ಧರಾಮಯ್ಯ ಅವರು ರಾಜಕೀಯ ಮಾಡಲು ಹೊರಟಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾದಾಗ ಕೇಂದ್ರದ ಪರಹಾರ ನಿಧಿ ಬಿಡುಗಡೆ ಆಗುವವರೆಗೆ ಕಾಯದೆ, ಎನ್‍ಡಿಆರ್‍ಎಫ್ ನಿಮಯ ಅಂತೆಲ್ಲ ಸಮಯ ವ್ಯರ್ಥ ಮಾಡದೆ ತುರ್ತಾಗಿ ಸಂತ್ರಸ್ಥರ ನೆರವಿಗೆ ಧಾವಿಸಿದ್ದರು. ಆದರೆ ಸಿದ್ಧರಾಮಯ್ಯ ಇನ್ನಾದರೂ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಬರದ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.


ಕೇಂದ್ರ ಸರ್ಕಾರ ಕೂಡ ತನ್ನ ಅಧಿಕಾರಿಗಳ ತಂಡವನ್ನು ಕಳಿಸಿ ಅಧ್ಯಯನ ನಡೆಸಿದೆ. ಆದರೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಭಿಕರ ಬರದಿಂದಾಗಿ ಆಗಿರುವ ಒಟ್ಟು ನಷ್ಟದ ಕುರಿತು ವಿವರವನ್ನೇ ಈವರೆಗೆ ಕೇಂದ್ರಕ್ಕೆ ನೀಡಿಲ್ಲ. ಆದರೂ ಕೇಂದ್ರದ ವಿರುದ್ಧ ನೆರವು ನೀಡಿಲ್ಲ ಎಂದು ಆರೋಪಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ವಿಜಯಪುರ ಜಿಲ್ಲೆಯನ್ನೇ ಅವಲೋಕಿಸಿದರೆ ರಾಜ್ಯದ ಪ್ರಭಾವಿ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ತಿಕೋಟ ತಾಲೂಕನ್ನೇ ಬರ ಪೀಡಿತ ಘೋಷಿತ ತಾಲೂಕ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿರಲಿಲ್ಲ. ತಮ್ಮದೇ ಕ್ಷೇತ್ರವನ್ನು ಬರ ಪೀಡಿತ ಎಂದು ಘೋಷಿಸುವಲ್ಲೂ ಜಿಲ್ಲೆಯ ಸಚಿವರಿಗೆ ಸಾಧ್ಯವಾಗಿರಲಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಪಂಪ್‍ಸೆಟ್ ಆಧಾರಿತ ರೈತರು ಬೆಳೆ ಬೆಳೆಯಲು ಈ ಸರ್ಕಾರ ಸೂಕ್ತ ಹಾಗೂ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಅಲ್ಪಸರ್ವಲ್ಪ ಬೆಳೆ ಬೆಳೆದುಕೊಂಡಿರುವ ತಮ್ಮ ಬೆಳೇ ಉಳಿಸಿ ಎಂದು ಪಂಪ್‍ಸೆಟ್ ಇರುವ ರೈತರು ಗೋಗರೆದರೂ ಅವರ ಬೇಡಿಕೆಗೆ ಸ್ಪಂದಿಸುವ ಸೌಜನ್ಯ ತೋರದ ಈ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.


ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ ಬಳಿಕ ಬಿಜೆಪಿ ತಂಡಗಳು ಬರ ಪರಿಸ್ಥಿತಿ ಕುರಿತು ಕೋರ ಸಮಿತಿ ಸಭೆಯಲ್ಲಿ ಚರ್ಚಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಾಸ್ತವಿಕ ವರದಿ ನೀಡಲಿದೆ. ಅಲ್ಲದೇ ತುರ್ತಾಗಿ ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸುತ್ತದೆ ಎಂದರು.


ಈ ಹಂತದಲ್ಲಿ ರೈತರು ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು, ಬರ ಬಿದ್ದಿರುವ ಈಗ ಈರುಳ್ಳಿ, ಟೊಮ್ಯಾಟೋ ಬೆಲೆ ಏರಿಸಿದ್ದಾರೆ. ಹೋಟೆಲ್‍ಗಳಲ್ಲಿ ದರ ಏರಿಕೆ ಮಾಡಿದರೂ ರೈತರ ಬೆಳೆಗಳಿಗೆ ಬೆಲೆ ಇಲ್ಲವಾಗಿದೆ. ಕನಿಷ್ಟ ಉತ್ತಮ ವಿದ್ಯುತ್ ನೀಡುತ್ತಿಲ್ಲ ಎಂದು ಅಶ್ಲೀಲ ಶಬ್ಧಗಳಿಂದಲೇ ನಿಂದಿಸಿ ಆಕ್ರೋಶ ಹೊರ ಹಾಕಿದಾಗ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ರೈತನ ಹೆಗಲು ನೇವರಿಸಿ ಸಮಾಧಾನಿಸಿದರು.


ಇದೇ ವೇಳೆ ಸ್ಥಳದಲ್ಲಿದ್ದ ಮಹಿಳೆಯರು ಉಚಿತ ಬಸ್ ಎಂದು ನಿತ್ಯ ಕೆಲಸ ಬಿಟ್ಟು ಊರೂರಿಗೆ ತಿರುಗಲು ಆಗುತ್ತಾ? ಮಾನ ಇರುವ ಯಾರೂ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.


ಅವಳಿ ಜಿಲ್ಲೆಗಳ ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಮಾಜಿ ಸಚಿವ ಮುರುಗೇಶ ನಿರಾಣಿ,ಬೆಸ್.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಶಾಸಕರಾದ ರಮೇಶ ಭೂಸನೂರು, ಸೋಮನಗೌಡ ಸಾಸನೂರು, ಪಕ್ಷದ ಮುಖಂಡರಾದ ವಿಜುಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ಉಮೇಶ ಕಾರಜೋಳ, ಸುರೇಶ ಬಿರಾದಾರ, ಬಸವರಾಜ ಬಿರಾದಾರ ಇತರರು ಉಪಸ್ಥಿತರಿದ್ದರು.

ಸಂಕಷ್ಟಕ್ಕೆ ಸಿಲುಕಿದ ಶಬರಿಮಲೆ ಭಕ್ತರಿಗೆ ಆಶ್ರಯ: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕೊಡಗಿನ ಮಸೀದಿ

Posted by Vidyamaana on 2024-01-06 07:29:29 |

Share: | | | | |


ಸಂಕಷ್ಟಕ್ಕೆ ಸಿಲುಕಿದ ಶಬರಿಮಲೆ ಭಕ್ತರಿಗೆ ಆಶ್ರಯ: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕೊಡಗಿನ ಮಸೀದಿ

 ಮಡಿಕೇರಿ: ಪ್ರಸ್ತುತ ರಾಜಕೀಯ ಮತ್ತು ಕೋಮು ಸಂಘರ್ಷದ ಪರಿಸ್ಥಿತಿಯಲ್ಲಿ ಕೊಡಗಿನ ಮಸೀದಿಯೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.ತಿತಿಮತಿಯಲ್ಲಿರುವ ಜಾಮಾ ಮಸೀದಿಯು ಸಂಕಷ್ಟಕ್ಕೆ ಸಿಲುಕಿದ ಶಬರಿಮಲೆಯ ಭಕ್ತರಿಗೆ ಆಶ್ರಯ ಮತ್ತು ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಕಥೆಯನ್ನು ಬೆಳಗಾವಿಯಿಂದ ಕೊಡಗು ಮಾರ್ಗವಾಗಿ ಬೈಕ್ನಲ್ಲಿ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರು ಭಕ್ತರು ಗುರುವಾರ ರಾತ್ರಿ ಹವಾಮಾನ ವೈಪರೀತ್ಯ ಹಾಗೂ ಬೆಳಕು ಕಡಿಮೆಯಾದ ಕಾರಣ ಪ್ರಯಾಣ ಮುಂದುವರಿಸಲು ಸಾಧ್ಯವಾಗದೆ ತಿತಿಮತಿಯಲ್ಲಿ ಸ್ಥಗಿತಗೊಳಿಸಿದ್ದಾರೆ.


ಕಮಲೇಶ್ ಗೌರಿ, ಭೀಮಪ್ಪ ಸನದಿ, ಶಿವಾನಂದ್ ಎನ್, ಗಂಗಾಧರ್ ಬಿ ಮತ್ತು ಎಸ್ ಸಿದ್ದರೋಡ್ ಜಮ್ಮಾ ಮಸೀದಿ ಬಳಿ ಹೋಗಿ ನೆರವು ಕೇಳಿದ್ದರೂ ಮುಂದೆ ಹೇಗೆ ಹೋಗಬೇಕು ಎಂಬುದು ಗೊತ್ತಾಗಿಲ್ಲ. ನಂತರ ಮಸೀದಿ ಆಡಳಿತ ಮಂಡಳಿಯವರು ಶಬರಿಮಲೆ ಭಕ್ತರ ನೆರವಿಗೆ ಬಂದಿದ್ದು, ರಾತ್ರಿ ಮಸೀದಿಯಲ್ಲಿ ತಂಗಲು ಅನುಮತಿ ನೀಡಿದ್ದಾರೆ. ಅಲ್ಲದೇ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಸೀದಿ ಅಧ್ಯಕ್ಷ ಉಸ್ಮಾನ್ ಹಾಗೂ ಕೆ.ಕತೀಬ್ ಒದಗಿಸಿದ್ದಾರೆ.ಶುಕ್ರವಾರ ಬೆಳಗ್ಗೆ 6 ಗಂಟೆಗೆ ಐವರು ಭಕ್ತರು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಮಸೀದಿ ಸೌಹಾರ್ದತೆಯ ಸಂಕೇತವಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಉಸ್ಮಾನ್ ಹೇಳಿದರು.

ಶಾಸಕರ ರಿಪೋರ್ಟ್ ಕಾರ್ಡ್

Posted by Vidyamaana on 2023-06-09 01:54:14 |

Share: | | | | |


ಶಾಸಕರ ರಿಪೋರ್ಟ್ ಕಾರ್ಡ್

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಗುರುವಾರ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಜೊತೆಗೆ, ಮುಜರಾಯಿ ಇಲಾಖೆಯ ಹಾಗೂ ಸಾರಿಗೆ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕ್ಷೇತ್ರದ ಅಗತ್ಯ ಕಾಮಗಾರಿಗಳ ಬಗ್ಗೆ ಮನವಿ ನೀಡಿದರು.


ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಅಶೋಕ್ ರೈ ಅವರು, ಈಗಾಗಲೇ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಪುತ್ತೂರು ಜಿಲ್ಲಾ ಕೇಂದ್ರ ಸೇರಿದಂತೆ ಅನೇಕ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಶಾಸಕರು ಚರ್ಚೆ ನಡೆಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗಬೇಕಾದ ಅಭಿವೃದ್ದಿ ಕಾರ್ಯಗಳು ಮತ್ತು ಜನರ ಬೇಡಿಕೆ ಇರುವ ಯೋಜನೆಗಳ ಬಗ್ಗೆಯೂ ಸಿಎಂ ಜೊತೆ ಶಾಸಕರು ಚರ್ಚೆ ನಡೆಸಿದ್ದಾರೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಆಗಬೇಕೆಂಬ ಇಲ್ಲಿನ ಮಂದಿಯ ಬಹುಕಾಲದ ಕನಸು ಈ ಬಾರಿ ನನಸಾಗಬೇಕಿದೆ. ಇದಕ್ಕಾಗಿ ಹೆಚ್ಚಿನ ಮುತುವರ್ಜಿ ವಹಿಸುವಂತೆಯೂ ಸಿಎಂ ಬಳಿ ಶಾಸಕರು ಮನವಿ ಮಾಡಿಕೊಂಡರು.


ಮುಖ್ಯಮಂತ್ರಿಗಳು ಶಾಸಕರ ಅಭಿವೃದ್ದಿ ಮುತುವರ್ಜಿಯನ್ನು ಕಂಡು ಸಂತೋಷ ವ್ಯಕ್ತಪಡಿಸಿದರು. ಮುಂದಿನ ಐದು ವರ್ಷಗಳಲ್ಲಿ ಪುತ್ತೂರು ವಿಧಾನಸಬಾ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಮತ್ತು ಬೇಡಿಕೆಯನ್ನು ಈಡೇರಿಸುವ ಬಗ್ಗೆ ಭರವಸೆಯನ್ನು ನೀಡಿದರು.


ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳಕ್ಕೆ ಜಮೀನು ಖರೀದಿಗೆ ಮನವಿ


ಉಪ್ಪಿನಂಗಡಿಯ ಪ್ರಸಿದ್ದ ಶ್ರೀ ಸಹಸ್ರಲಿಂಗೇಶ್ವರ ದೇವಳದ ಉಪಯೋಗಕ್ಕೆ ಖಾಸಗಿ ಜಮೀನು ಖರೀದಿಸಲು ಮುಜರಾಯಿ ಇಲಾಖೆಯಿಂದ ಮಂಜೂರಾತಿ ನೀಡುವಂತೆ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಮನವಿ ನೀಡಿದರು.


ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಊರು ಹಾಗೂ ಪರವೂರುಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಿದ್ದು ಅವರಿಗೆ ತಂಗಲು ವಸತಿ, ಮೂಲಸೌಕರ್ಯಗಳು, ಸೇರಿದಂತೆ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಜಾಗದ ಕೊರತೆಯಿದೆ. ಈ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪ್ರಭಾತ್ ಪೈ ಎಂಬವರಿಗೆ ಸೇರಿದ ಸರ್ವೆ ನಂಬ 1-20 0.39 ಎಕ್ರೆ ಜಾಗವಿದೆ. ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಜಾಗದ ದಾಖಲೆ, ದರಪಟ್ಟಿ ಕುರಿತ ಸಂಪೂರ್ಣ ಮಾಹಿತಿಯನ್ನು ಸೂಕ್ತ ವರದಿಯೊಂದಿಗೆ ಇಲಾಖಾ ಅನುಮತಿಗಾಗಿ ಸಲ್ಲಿಸಿದ್ದಾರೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಎದುರುಭಾಗದ ಈಶಾನ್ಯ ದಿಕ್ಕಿನಲ್ಲಿರುವ ಜಾಗವನ್ನು ಖರೀದಿಸಲು ಇಲಾಖೆ ಅನುವು ಮಾಡಿಕೊಡಬೇಕೆಂದು ಶಾಸಕರು ಸಚಿವರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.


 


 


ಹೆಚ್ಚುವರಿ ಬಸ್, ಚಾಲನಾ ಸಿಬಂದಿ ಮತ್ತು ತಾಂತ್ರಿಕ ಸಿಬಂದಿ ನೇಮಕ ಮಾಡಲು ಮನವಿ

Ksrtc ಪುತ್ತೂರು ಡಿಪೋಗೆ ಹೆಚ್ಚುವರಿ ಬಸ್ಸು, ಚಾಲನೆ ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.


ಈ ಹಿಂದೆ ಪುತ್ತೂರು ಘಟಕ ವ್ಯಾಪ್ತಿಯಲ್ಲಿ ಸರಕಾರಿ ಬಸ್ಸುಗಳ ಕೊರತೆ ಇರಲಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕಾರ್ಮಿಕರಿಗೆ ತುಂಬಾ ಪ್ರಯೋಜನವಾಗುತ್ತಿತ್ತು ಆದರೆ ಕೋವಿಡ್ ಲಾಕ್‌ಡೌನ್ ನಂತರ ಬಸ್ಸುಗಳ ಓಡಾಟವನ್ನು ಕಡಿತಗೊಳಿಸಿರುವ ಕಾರಣ ಗ್ರಾಮೀಣ ಭಾಗದಲ್ಲಿ ಬಸ್ಸುಗಳ ಕೊರತೆ ಇದೆ. ಪುತ್ತೂರು ವಿಧಾನಸಭಾ ವ್ಯಾಪ್ತಿಯ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಬಸ್ಸುಗಳ ಕೊರತೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಬಸ್ಸುಗಳಲ್ಲಿ ಚಾಲನಾ ಸಿಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗಳ ಕೊರತೆಯೂ ಇದ್ದು . ಹೆಚ್ಚಿನ ಚಾಲಕರು ಮತ್ತು ಸಿಬಂದಿಗಳು ವರ್ಗಾವಣೆಯಾಗಿ ಬೇರೆಡೆಗೆ ತೆರಳಿದ್ದು ಇದರಿಂದಾಗಿ ಪುತ್ತೂರು ಡಿಪೋದಲ್ಲಿ ತೀವ್ರತರದ ಆಡಳಿತಾತ್ಮಕ ಸಮಸ್ಯೆಗಳು ಉಂಟಾಗಿದ್ದು . ಪುತ್ತೂರು ಡಿಪೋಗೆ ಸಲ್ಲಿಸಲಾಗಿದ್ದ ಬೇಡಿಕೆಯನ್ನು ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದಾರೆ.


ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ ಶಾಸಕರು ಮನವಿ ಸಲ್ಲಿಸಿದ್ದಾರೆ.

ದಿವ್ಯಪ್ರಭಾ ಗೌಡ ಚಿಲ್ತಡ್ಕ ಕಾಂಗ್ರೆಸ್ ಗೆ ರಾಜೀನಾಮೆ.

Posted by Vidyamaana on 2023-04-14 04:15:49 |

Share: | | | | |


ದಿವ್ಯಪ್ರಭಾ ಗೌಡ ಚಿಲ್ತಡ್ಕ ಕಾಂಗ್ರೆಸ್ ಗೆ ರಾಜೀನಾಮೆ.

ಪುತ್ತೂರು: ಕಾಂಗ್ರೆಸ್ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆಯಾಗಿದ್ದ ದಿವ್ಯಪ್ರಭಾ ಚಿಲ್ತಡ್ಕ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಗೆ ಏ‌ ೧೪ರಂದು  ಸೇರ್ಪಡೆಗೊಳ್ಳಲಿದ್ದಾರೆ.

ಕಾಂಗ್ರೆಸ್ ಮುಖಂಡೆಯಾಗಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದ ದಿವ್ಯಪ್ರಭಾ ಅವರು ಕಾಂಗ್ರೆಸಿನ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೇಟ್ ಕೈತಪ್ಪುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಕಾಂಗ್ರೆಸಿಗೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ರವರು ಎಂಎಲ್ಎ ರಘು ಆಚಾರ್ ಹಾಗೂ ಇತರ ಕಾಂಗ್ರೆಸ್ ಮುಖಂಡರ ಜೊತೆ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Recent News


Leave a Comment: