ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಡಿ ಗ್ರೂಪ್ (ರಿ) ವಿಟ್ಲ ಇದರ ವಾರ್ಷಿಕ ಮಹಾಸಭೆ -ನೂತನ ಪದಾಧಿಕಾರಿಗಳ ಆಯ್ಕೆ

Posted by Vidyamaana on 2024-02-24 12:25:46 |

Share: | | | | |


ಡಿ ಗ್ರೂಪ್ (ರಿ) ವಿಟ್ಲ ಇದರ ವಾರ್ಷಿಕ ಮಹಾಸಭೆ -ನೂತನ ಪದಾಧಿಕಾರಿಗಳ ಆಯ್ಕೆ

ವಿಟ್ಲ: ಡಿ " ಗ್ರೂಪ್ (ರಿ) ವಿಟ್ಲ ಇದರ ವಾರ್ಷಿಕ ಮಹಾಸಭೆಯು ಅಝೀಝ್ ಸನ ಇವರ ಅಧ್ಯಕ್ಷತೆಯಲ್ಲಿ ಸಂಘಟನೆಯ ಕಚೇರಿಯಲ್ಲಿ ನಡೆಯಿತು.

   ನಿರ್ಗಮನ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಇವರು ಸಂಘಟನೆಯು ನಡೆದು ಬಂದ ಹಾದಿ,ಮುಂದಿನ ಯೋಜನೆಯ ಬಗ್ಗೆ ವಿವರ ನೀಡಿದರು.

    ನಿಷ್ಕ್ರಿಯ ಸದಸ್ಯರನ್ನು ಕೈ ಬಿಟ್ಟು ಹಕೀಂ ಬಿಗ್‌ಬೇಕ್,ರಫೀಕ್ ಇಂಜಿನಿಯರ್,ಸಫ್ವಾನ್ ಎಲ್‌ಐಸಿ ಹಾಗೂ ಇಸ್ಮಾಯಿಲ್ ಸೂಪರ್ ಇವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು. ರಮ್ಝಾನ್ 28 ರಂದು ಇಫ್ತಾರ್‌ ಕೂಟ ಏರ್ಪಡಿಸುವುದಾಗಿ ತೀರ್ಮಾನಿಸಲಾಯಿತು.

     2024-25 ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

ಅಧ್ಯಕ್ಷರಾಗಿವಿ.ಎಚ್.ರಿಯಾಝ್,ಗೌರವಾಧ್ಯಕ್ಷರಾಗಿ ಅಝೀಝ್ ಸನ, ಉಪಾಧ್ಯಕ್ಷರಾಗಿ ಶೀತಲ್ ಇಕ್ಬಾಲ್, ಕಾರ್ಯದರ್ಶಿಯಾಗಿ ಶಾಕಿರ್ ಅಳಕೆಮಜಲು, ಜತೆ ಕಾರ್ಯದರ್ಶಿ ಯಾಗಿ ವಿ.ಕೆ.ಎಂ.ಹಂಝ,ಕೋಶಾಧಿಕಾರಿಯಾಗಿ ಬಶೀರ್ ಬೊಬ್ಬೆಕೇರಿ.,ಮಾದ್ಯಮ ಪ್ರತಿನಿಧಿಗಳಾಗಿ ಅಬೂಬಕರ್ ಅನಿಲಕಟ್ಟೆ ಮತ್ತು ಮಹಮ್ಮದ್ ಅಲಿ ವಿಟ್ಲ, ಗೌರವ ಸಲಹೆಗಾರರಾಗಿ ಝುಬೈರ್ ಮಾಸ್ಟರ್, ಖಲಂದರ್ ಪರ್ತಿಪ್ಪಾಡಿ, ಇಸಾಕ್ ವಿಟ್ಲ,ಸಮದ್ ಮೇಗಿನಪೇಟೆ.

ಆ್ಯಂಬುಲೆನ್ಸ್ ನಿರ್ವಹಣೆಗಾರರಾಗಿ ಹಂಝ ವಿಟ್ಲ, ತೌಸೀಫ್ ವಿಟ್ಲ, ಉಬೈದ್ ವಿಟ್ಲ, ರಫೀಕ್ ಪೊನ್ನೋಟು,

ಸೌದಿ ಅರೇಬಿಯಾ ವಕ್ತಾರರಾಗಿ ಫಾರಿಸ್ ಮತ್ತು ಮನ್ಸೂರ್ ಮಂಗಿಲಪದವು

ದುಬೈ ವಕ್ತಾರರಾಗಿ  ರಾಝಿಕ್ ಡಿ ಇವರನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

   ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ವಂದಿಸಿದರು.

ಮೊಬೈಲ್‌ನಲ್ಲಿ ಬೇರೆ ವ್ಯಕ್ತಿಯ ಜೊತೆ ಸಂಭಾಷಣೆ; ಪ್ರೀತಿಸಿ ಮದುವೆಯಾದವಳನ್ನೇ ಗುಂಡಿಕ್ಕಿ ಕೊಂದ ಗಂಡ

Posted by Vidyamaana on 2024-07-21 07:23:05 |

Share: | | | | |


ಮೊಬೈಲ್‌ನಲ್ಲಿ ಬೇರೆ ವ್ಯಕ್ತಿಯ ಜೊತೆ ಸಂಭಾಷಣೆ; ಪ್ರೀತಿಸಿ ಮದುವೆಯಾದವಳನ್ನೇ ಗುಂಡಿಕ್ಕಿ ಕೊಂದ ಗಂಡ

ಕೊಡಗು,: ಪತ್ನಿಯನ್ನೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ(Virajpet)ತಾಲ್ಲೂಕಿನ ಬೆಟೋಳಿ ಎಂಬ ಗ್ರಾಮದಲ್ಲಿ ನಡೆದಿದೆ. ಶಿಲ್ಪ (34) ಮೃತ ರ್ದುದೈವಿ. ಪ್ರೀತಿಸಿ ಮದುವೆಯಾದ ಗಂಡನಿಂದಲೆ ಕೊಲೆಯಾಗಿ ಹೋಗಿದ್ದಾಳೆ. 18 ವರ್ಷದ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಯ ಸಂಕೇತ ಎಂಬಂತೆ ಇಬ್ಬರು ಮುದ್ದಾದ ಮಕ್ಕಳು ಇದ್ದರು. ಅದ್ಯಾಕೋ ಗೊತ್ತಿಲ್ಲ ಅವರ ಕುಟುಂಬದಲ್ಲಿ ಬಿರುಗಾಳಿ ಎದ್ದಿತ್ತು. ಇದರಿಂದ ಇಬ್ಬರೂ ಕೂಡ ಬೇರೆ ಬೇರೆ ಆಗಿದ್ದರಂತೆ. ಆದರೆ, ಒಂದೆ ವಾಸವಾಗಿದ್ದ ಅವರು, ಪ್ರತ್ಯೇಕ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಬಳಿಕ ಇಬ್ಬರ ಕಟುಂಬದಲ್ಲಿ ಬಿರುಕು ಮೂಡಿದ್ದು, ವಿಚ್ಚೇದನಕ್ಕೆ ಅರ್ಜಿಕೂಡ ಹಾಕಿ ಕಾಯುತ್ತಿದ್ದರು.

ಇನ್ನು ನಿನ್ನೆ(ಶುಕ್ರವಾರ) ರಾತ್ರಿ ಮೃತ ಶಿಲ್ಪ ಮೊಬೈಲ್​ನಲ್ಲಿ ಬೇರೆ ವ್ಯಕ್ತಿಯ ಜೊತೆಯಲ್ಲಿ ಸಂಭಾಷಣೆ ನಡೆಸುತ್ತಿದ್ದಳಂತೆ, ಮಾರನೇ ದಿನವೂ ಬೆಳಗ್ಗೆ 8.45ರ ಸಮಯದಲ್ಲಿ ಮತ್ತೆ ಆ ವ್ಯಕ್ತಿಯ ಜೊತೆಯಲ್ಲಿ ಮಾತುಕತೆ ನಡೆಸಿದ್ದಳಂತೆ. ಅದೇ ಸಮಯದಲ್ಲಿ ಅಡಿಗೆ ಮನೆಗೆ ಹೋದ ಗಂಡ ಬೋಪಣ್ಣ, ಕೋವಿ ಸಮೇತ ಆಗಮಿಸಿ ಶಿಲ್ಪಾಳ ಎದೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ.

ಬಂಟ್ವಾಳ ; ಹಗಲು ವೇಳೆ ಮನೆಗೆ ನುಗ್ಗಿ 5 ಲಕ್ಷ ಮೌಲ್ಯದ ಚಿನ್ನಾಭರಣ ಎಸ್ಕೇಪ್ ಮಾಡಿದ ಕಳ್ಳರಿಬ್ಬರ ಸೆರೆ, 15 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ

Posted by Vidyamaana on 2023-09-19 06:13:51 |

Share: | | | | |


ಬಂಟ್ವಾಳ ; ಹಗಲು ವೇಳೆ ಮನೆಗೆ ನುಗ್ಗಿ 5 ಲಕ್ಷ ಮೌಲ್ಯದ ಚಿನ್ನಾಭರಣ ಎಸ್ಕೇಪ್ ಮಾಡಿದ ಕಳ್ಳರಿಬ್ಬರ ಸೆರೆ, 15 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ

ಬಂಟ್ವಾಳ, ಸೆ.18: ಹಗಲು ವೇಳೆ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಬಂಟ್ವಾಳ ‌ನಗರ ಠಾಣೆಯ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.


ಮಂಗಳೂರು ಬೆಂಗ್ರೆ ಭದ್ರಪಳ್ಳಿ ನಿವಾಸಿ ಫರಾಜ್ (27 ವ) ಹಾಗೂ ಸುರತ್ಕಲ್ ತಾಲೂಕು ಚೊಕ್ಕಬೆಟ್ಟು ಕೃಷ್ಣಾಪುರ 4ನೇ ಬ್ಲಾಕ್ ನಿವಾಸಿ ತೌಸಿಫ್ ಅಹಮ್ಮದ್  (34) ಬಂಧಿತ ಆರೋಪಿಗಳು.


ಆರೋಪಿಗಳಿಂದ ಒಟ್ಟು ರೂ. 12,23,000 ಮೌಲ್ಯದ 223 ಗ್ರಾಂ ಚಿನ್ನಾಭರಣ ಮತ್ತು ರೂ 3000 ಮೌಲ್ಯದ ಬೆಳ್ಳಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 3,30,000 ಮೌಲ್ಯದ ಮಹೀಂದ್ರ ಕೈಲೋ ಕಾರು ಮತ್ತು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರೂ 15,56,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ದೇವಮಾತ ಕಾಂಪ್ಲೆಕ್ಸ್‌ನಲ್ಲಿ ವಾಸವಿರುವ ಮೈಕಲ್ ಡಿಸೋಜಾ ಎಂಬವರ ಮನೆಯ ಎದುರಿನ ಬಾಗಿಲಿನ ಡೋರನ್ನು ಸೆ. 01 ರಂದು ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಕೋಣೆಯೊಳಗಿದ್ದ ಕಪಾಟುಗಳಿಂದ 115 ಗ್ರಾಂ ತೂಕದ ಸುಮಾರು 5,36,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಸುಮಾರು 3,000 ರೂಮೌಲ್ಯದ ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿದ ಘಟನೆ ನಡೆದಿತ್ತು‌.

ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಮುಸ್ಲಿಂ ಅಂಧ ವೃದ್ಧನ ಮೇಲೆ ಹಲ್ಲೆ: ಪ್ರಕರಣ ದಾಖಲು

Posted by Vidyamaana on 2023-12-02 12:05:19 |

Share: | | | | |


ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಮುಸ್ಲಿಂ ಅಂಧ ವೃದ್ಧನ ಮೇಲೆ ಹಲ್ಲೆ: ಪ್ರಕರಣ ದಾಖಲು

ಗಂಗಾವತಿ: ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಯುವಕರ ಗುಂಪೊಂದು ಮುಸ್ಲಿಂ ಅಂಧ ವೃದ್ಧನಿಗೆ ಥಳಿಸಿದ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮಹೆಬೂಬನಗರದ ನಿವಾಸಿ ಹುಸೇನಸಾಬ್​ (70) ಎಂಬುವರ ಮೇಲೆ ನವೆಂಬರ್​ 20ರಂದು ಹಲ್ಲೆ ನಡೆದಿದೆ. ಗಂಗಾವತಿಯ ಜಯನಗರದ ಬೈಪಾಸ್ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಯುವಕರ ಗುಂಪೊಂದು ತಮ್ಮನ್ನು ಅಡ್ಡಗಟ್ಟಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾರೆ. ಜೊತೆಗೆ ಗಡ್ಡಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದು, ಬಳಿಕ ತಮ್ಮ ಬಳಿಯಿದ್ದ ಹಣವನ್ನೂ ದೋಚಿಕೊಂಡು ಹೋಗಿದ್ದಾರೆ. ಸಮಯಕ್ಕೆ ಸರಿಯಾಗಿ ಸಮೀಪದಲ್ಲಿದ್ದ ಕುರಿಗಾಹಿ ಯುವಕರು ಸ್ಥಳಕ್ಕೆ ಆಗಮಿಸಿ ತಮ್ಮನ್ನು ರಕ್ಷಣೆ ಮಾಡಿದ್ದಾರೆ ಎಂದು ವೃದ್ಧ ದೂರಿನಲ್ಲಿ ತಿಳಿಸಿದ್ದಾರೆ.


ಜೊತೆಗೆ ವೃದ್ಧನಿಗೆ ಕೀಟಲೆ ಮಾಡಿದ ಅಪರಿಚಿತ ಯುವಕರು ಗುಂಪು ಬೆದರಿಕೆ ಹಾಕಿದ್ದರು. ಹೀಗಾಗಿ ಅವರು ಘಟನೆಯ ಬಗ್ಗೆ ಯಾರಿಗೂ ಹೇಳಿರಲಿಲ್ಲ ಎನ್ನಲಾಗಿದೆ. ಬಳಿಕ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಕೆಲವರು ಗಂಗಾವತಿಯ ಕೆಲ ಯುವಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಯುವಕರು ವೃದ್ಧನನ್ನು ಹುಡುಕಿ ಘಟನೆಯ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕುಗ್ಗಿದ್ದ ವೃದ್ಧನಿಗೆ ಸಮಾಧಾನ ಹೇಳಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಬಂಧನಕ್ಕೆ ಒತ್ತಾಯ: ಘಟನೆ ನಡೆದು ಹತ್ತು ದಿನ ಕಳೆದಿದೆ. ಪ್ರಕರಣ ದಾಖಲಾಗಿ ಒಂದು ವಾರ ಕಳೆದಿದೆ. ಆದರೆ ಇದುವರೆಗೂ ಪೊಲೀಸರು ಆರೋಪಿಗಳ ಪತ್ತೆ ಮಾಡಿಲ್ಲ. ಕೂಡಲೇ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಸ್ಟೂಡೆಂಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸಲೀಂ ಮನಿಯಾರ ಒತ್ತಾಯಿಸಿದ್ದಾರೆ. ಗಂಗಾವತಿಯಲ್ಲಿ ಎಲ್ಲರೂ ಸಹ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇಂತಹ ಘಟನೆಗಳಿಂದ ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಸಲೀಂ ಒತ್ತಾಯಿಸಿದ್ದಾರೆ.

ಪುತ್ತೂರು ಶಾಸಕರು ವಾಪಾಸು ಪಕ್ಷಕ್ಕೆ ಬಂದ್ರೆ ಸ್ವಾಗತ

Posted by Vidyamaana on 2024-05-18 05:02:27 |

Share: | | | | |


ಪುತ್ತೂರು ಶಾಸಕರು ವಾಪಾಸು ಪಕ್ಷಕ್ಕೆ ಬಂದ್ರೆ ಸ್ವಾಗತ

ಪುತ್ತೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆಗಿದೆ. ಆದರೆ ಇಲ್ಲಿ ಒಂದು ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲು ಅವರಿಗೆ ಆಗಿಲ್ಲ. ಅಂಗನವಾಡಿ ಕಟ್ಟಡ ಬಿಡಿ ದುರಸ್ಥಿಗೂ ಹಣವಿಲ್ಲ. ಹೈನುಗಾರರಿಗೆ ಪ್ರೋತ್ಸಾಹ ಧನವಿಲ್ಲ ಹೀಗೆ ಕರ್ನಾಟಕದ ಆರ್ಥಿಕ ಸ್ಥಿತಿ ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಹಂತಕ್ಕೆ ತಲುಪಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಒಂದು ವರ್ಷದಲ್ಲಿ ಎನೂ ಮಾಡಿಲ್ಲ ಎಂಬುದಕ್ಕೆ ಹಲವು ಉದಾಹರಣೆ ಇದೆ. ಇವತ್ತು ಪುತ್ತೂರಿನಲ್ಲಿ ಶಾಸಕರು ರಿಪೋರ್ಟ್ ಕಾರ್ಡ್ ಪಡೆಯಲು ಹೋಗುತ್ತಿದ್ದಾರೆ. ಅವರು ಅಂಗನವಾಡಿ ಕಾರ್ಯಕರ್ತರು, ಅಕ್ರಮ ಸಕ್ರಮ ಅರ್ಜಿಗಾಗಿ ಅಳೆದಾಡುವವರು, ಪ್ರೋತ್ಸಾಹಧನ ಸಿಗದ ಹೈನುಗಾರರ ಮನೆಗೆ ಹೋಗಿ ರಿಪೋರ್ಟ್ ಪಡೆಯಲಿ. ಒಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ, ರೈತವಿರೋಧಿ, ಹಿಂದೂ ಸಂಘಟನೆಯನ್ನು ಧಮನಿಸುವ ಸರಕಾರವಾಗಿದೆ ಎಂದರು.

ರಾಜ್ಯ ರಾಜಕಾರಣದಲ್ಲಿ ವಸಂತ್ ಬಂಗೇರರ ಹೆಸರು ಮತ್ತೆ ಮುನ್ನೆಲೆಗೆ

Posted by Vidyamaana on 2023-05-24 12:47:41 |

Share: | | | | |


ರಾಜ್ಯ ರಾಜಕಾರಣದಲ್ಲಿ ವಸಂತ್ ಬಂಗೇರರ ಹೆಸರು ಮತ್ತೆ ಮುನ್ನೆಲೆಗೆ

ಬೆಳ್ತಂಗಡಿ: ಖಡಕ್ ರಾಜಕಾರಣಿ ಎಂದೇ ಖ್ಯಾತಿ ಪಡೆದ ಬೆಳ್ತಂಗಡಿ ಮಾಜಿ ಶಾಸಕ ವಸಂತ್ ಬಂಗೇರರನ್ನು ರಾಜಕೀಯದಲ್ಲಿ ಸಕ್ರೀಯವಾಗಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಖಡಕ್ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದ ವಸಂತ್ ಬಂಗೇರರನ್ನು ಎಂ.ಎಲ್.ಸಿ. ಮಾಡಿ, ಸಚಿವರನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಸಿಎಂ ಇಂಗಿತ. ಈ ಮೂಲಕ ಕರಾವಳಿ ರಾಜಕೀಯವನ್ನು ಮತ್ತೆ ಸಕ್ರೀಯಗೊಳಿಸುವುದು ಚಾಣಕ್ಯ ಸಿದ್ದರಾಮಯ್ಯರ ತಂತ್ರ ಎಂದು ಹೇಳಲಾಗಿದೆ.

Recent News


Leave a Comment: