ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಕಾಂಗ್ರೆಸ್‌ ಸರ್ಕಾರ ಅಸಮರ್ಥ: ತಮಿಳುನಾಡಿಗೆ ಕಾವೇರಿ ನೀರು ಹರಿಯ ಬಿಡುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪ್ರತಿಭಟನೆ

Posted by Vidyamaana on 2023-09-27 18:09:27 |

Share: | | | | |


ಕಾಂಗ್ರೆಸ್‌ ಸರ್ಕಾರ ಅಸಮರ್ಥ: ತಮಿಳುನಾಡಿಗೆ ಕಾವೇರಿ ನೀರು ಹರಿಯ ಬಿಡುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್  ಜಂಟಿ ಪ್ರತಿಭಟನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಯ ಬಿಡುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಬುಧವಾರ ವಿಧಾನ ಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಜಂಟಿ ಪ್ರತಿಭಟನೆ ನಡೆಸಲಾಯಿತು.


ಕಾವೇರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಸಮರ್ಥವಾಗಿದೆ ಎಂದು ಉಭಯ ಪಕ್ಷಗಳ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.


ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಮಾಜಿ ಸಚಿವರು, ಸಂಸದರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಜನಹಿತವನ್ನು ಸಂಪೂರ್ಣ ಮರೆತು ಸಿದ್ದರಾಮಯ್ಯರವರು ಮತ್ತು ಡಿ.ಕೆ. ಶಿವಕುಮಾರ್‌ರವರು ತಮಿಳುನಾಡಿನ ಏಜೆಂಟ್‌ ರೀತಿ ವರ್ತಿಸುತ್ತಿದ್ದಾರೆ, ಇದನ್ನು ಖಂಡಿಸಿ ಪ್ರತಿಭಟಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷ ಒಂದಾಗಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ. ರಾಜಕೀಯ ದೊಂಬರಾಟಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಿಡಿ ಕಾರಿದ್ದಾರೆ.

ಕಾಪು : ರಂಗ ಕಲಾವಿದ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

Posted by Vidyamaana on 2023-12-13 09:16:32 |

Share: | | | | |


ಕಾಪು : ರಂಗ ಕಲಾವಿದ  ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

ಕಾಪು: ಸಮಾಜ ಸೇವಕ, ಹಿರಿಯ ರಂಗ ಕಲಾವಿದ, ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು, ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ (68) ಅವರು ಪತ್ನಿ ವಸುಂಧರಾ ಶೆಟ್ಟಿ (58) ಸಮೇತರಾಗಿ ಮಂಗಳವಾರ ಮಧ್ಯರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.



ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಮಂಗಳವಾರ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ‌ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ‌ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.


ಸಾವಿನ ಬಗ್ಗೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.


 ಎಲ್.ಐ.ಸಿ. ಏಜಂಟರಾಗಿ, ಕಲಾ ಸಂಘಟಕ, ಕಲಾಪೋಷಕರಾಗಿದ್ದ ಅವರು ವಿವಿಧ ಕಾರ್ಯಕ್ರಮಗಳ ಆಯೋಜಕರಾಗಿ ಕಲೆ, ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ, ಜನಪದ, ಶೈಕ್ಷಣಿಕ ಕ್ಷೇತ್ರಗಳ ಪೋಷಕರಾಗಿ ಸ್ಚಾರ್ಥವಿಲ್ಲದೇ, ಕಳಂಕ ರಹಿತರಾಗಿ ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದರು. ಅವರ ಸೇವೆಗಾಗಿ ಎಲ್ಲರೂ ಅವರನ್ನು ಆತ್ಮೀಯವಾಗಿ ಲೀಲಣ್ಣ ಎಂದೇ ಕರೆಯುತ್ತಿದ್ದರು.

ತೇಜಾ ರಾಮಕೃಷ್ಣ ಭಟ್ ನಾಪತ್ತೆ

Posted by Vidyamaana on 2024-03-13 16:47:16 |

Share: | | | | |


ತೇಜಾ ರಾಮಕೃಷ್ಣ ಭಟ್ ನಾಪತ್ತೆ

ಯಲ್ಲಾಪುರ :ಯುವತಿಯೊಬ್ಬಳು ಕಾಣೆಯಾದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ ತಾಲೂಕಿನ ಚಂದ್ಗುಳಿಯ ದೇಸಾಯಿಮನೆ ತೇಜಾ ರಾಮಕೃಷ್ಣ ಭಟ್ಟ (26)ಕಾಣೆಯಾದ ಯುವತಿ.ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಕಳೆದ ಡಿಸೆಂಬರ್ 20 ರಂದು ಹುಬ್ಬಳ್ಳಿಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದು, ಅಲ್ಲಿಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ಈವರೆಗೂ ಮರಳಿ ಬಂದಿಲ್ಲ. ಈ ಕುರಿತು ತಂದೆ ರಾಮಕೃಷ್ಣ ಎಸ್ ಭಟ್ಟ ದೇಸಾಯಿಮನೆ ಪೋಲಿಸ್ ದೂರು ನೀಡಿದ್ದಾರೆ.

ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಕಪ್ಪು ಕೂದಲು ಹೊಂದಿದ್ದು, ಕನ್ನಡ, ಇಂಗ್ಲಿಷ್ ಮಾತನಾಡುತ್ತಾಳೆ. ಈಕೆ ಎಲ್ಲಿಯಾದರೂ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

ಹುಚ್ಚ ಅವನು ಎತ್ತಿಕೊಂಡು ಹೊರಗೆ ಹಾಕ್ರೀ... ಶಾಸಕ ವೇದವ್ಯಾಸ್ ಕಾಮತ್ ಬಗ್ಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ

Posted by Vidyamaana on 2024-02-21 13:12:27 |

Share: | | | | |


ಹುಚ್ಚ ಅವನು  ಎತ್ತಿಕೊಂಡು ಹೊರಗೆ ಹಾಕ್ರೀ... ಶಾಸಕ ವೇದವ್ಯಾಸ್ ಕಾಮತ್ ಬಗ್ಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ

ಬೆಂಗಳೂರು, ಫೆ.20: ವಿಧಾನಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರ ಅನುದಾನ ತಾರತಮ್ಯ ಮಾಡ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ಕೊಡುತ್ತಿದ್ದಾಗ, ಎದ್ದು ನಿಂತು ವಿರೋಧಿಸಿದ್ದಕ್ಕೆ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಕಾಂಗ್ರೆಸ್ ಶಾಸಕರು ಹುಚ್ಚ ಎಂದು ರೇಗಿಸಿದ ಘಟನೆ ನಡೆದಿದೆ.


ಫುಡ್ ಕಾರ್ಪೊರೇಶನ್ ಕಡೆಯಿಂದ ನಾವು ಅಕ್ಕಿ ಕೇಳಿದ್ದೆವು. ಅದರ ಮ್ಯಾನೇಜರ್ ಓಕೆಯೆಂದು ಹೇಳಿದ್ದೂ ಆಗಿತ್ತು. ಆದರೆ ಕೇಂದ್ರ ಸರಕಾರದವರು ರಾಜಕೀಯ ಕಾರಣಕ್ಕೆ ರಾಜ್ಯಕ್ಕೆ ಅಕ್ಕಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ವಿರೋಧಿಸಿದ ವಿಪಕ್ಷ ನಾಯಕ ಅಶೋಕ್, ನೀವು ಗ್ಯಾರಂಟಿ ಘೋಷಣೆ ಮಾಡಿದಾಗ ಕೇಂದ್ರವನ್ನು ಕೇಳಿದ್ರಾ.. ಆನಂತರ ಕೇಂದ್ರ ಅಕ್ಕಿ ಕೊಡಲಿಲ್ಲ ಎಂದರೆ ಹೇಗೆ. ಅಕ್ಕಿಯನ್ನು ಮ್ಯಾನೇಜರ್ ಕೊಡೋದಾ ಎಂದು ಛೇಡಿಸಿದರು.


ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಆಹಾರ ಭದ್ರತಾ ನಿಗಮ ಅನ್ನೋದು ಸ್ವತಂತ್ರ ಸಂಸ್ಥೆ ಎಂದು ಹೇಳಲು ಹೊರಟಾಗ ಎದ್ದು ನಿಂತ ವೇದವ್ಯಾಸ ಕಾಮತ್, ಸ್ವತಂತ್ರ ಸಂಸ್ಥೆಯಲ್ಲ. ಕೇಂದ್ರಕ್ಕೆ ಅಧಿಕಾರ ಇದೆಯೆಂದು ಹೇಳಲು ಹೊರಟರು. ಕಾಂಗ್ರೆಸ್ ಶಾಸಕರು ಅದಕ್ಕೆ ವಿರೋಧಿಸಿ ಗದ್ದಲ ಎಬ್ಬಿಸಿದ್ದಾರೆ. ಏಯ್ ಹುಚ್ಚಾ ಅವನು. ಹೊರಗೆ ಹಾಕಿ ಎಂದು ಕೂಗಿದ್ದಾರೆ. ಇದರಿಂದ ಕುಪಿತರಾದ ವೇದವ್ಯಾಸ್ ಅವರನ್ನು ಖಾದರ್ ಕುಳಿತುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹುಚ್ಚ ನೀವು ಎಂದು ವೇದವ್ಯಾಸ್ ಹೇಳಿದ್ದಕ್ಕೆ ಖಾದರ್ ಗರಂ ಆಗಿದ್ದು ನೀವೊಮ್ಮೆ ಕೂತ್ಕೊಳ್ಳಿ ಮಾರ್ರೆ, ಸರಿಯಾಗಿ ತಿಳಿದುಕೊಳ್ಳದೆ ಮಾತಾಡಬೇಡಿ ಎಂದಿದ್ದಾರೆ.


ಇದನ್ನು ಕೇಳಿದ ಆಡಳಿತ ಪಕ್ಷದ ಸದಸ್ಯರು, ವೇದವ್ಯಾಸ ಗುರಿಯಾಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭಾಧ್ಯಕ್ಷ ಪೀಠಕ್ಕೆ ಗೌರವ ಕೊಡಬೇಕಲ್ಲ. ಹುಚ್ಚ ಅಂತಾನೆ, ಅವನನ್ನು ಎತ್ತಿ ಹೊರಗೆ ಹಾಕ್ರೀ ಎಂದು ಗದ್ದಲ ಎಬ್ಬಿಸಿದ್ದಾರೆ. ಮುಖ್ಯಮಂತ್ರಿ ಮಾತಾಡೋವಾಗ ನಡುವೆ ಬಾಯಿ ಹಾಕ್ತಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹುಚ್ಚ ಅವನು ಎಂದು ಹೇಳಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

Posted by Vidyamaana on 2024-06-11 14:40:36 |

Share: | | | | |


ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

ಬೆಂಗಳೂರು : ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಅವಧಿ ವಿಸ್ತರಣೆ ಮಾಡಿ ಜೂನ್.‌ 12ಕ್ಕೆ ಗಡುವು ವಿಸ್ತರಿಸಿದೆ

2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ರಾಜ್ಯ ಸಾರಿಗೆ ಇಲಾಖೆ ಜೂನ್‌ 12 ರವರೆಗೆ ಎಚ್ ಎಸ್ ಆರ್ ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಸ ನೀಡಿದೆ. ಅದಾದನಂತರ ಜೂನ್.‌13 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಫ್ಯಾನ್‍ಗೆ ನೇಣು ಬಿಗಿದುಕೊಂಡು ವರ್ಷಿಣಿ ಆತ್ಮಹತ್ಯೆ

Posted by Vidyamaana on 2024-01-01 13:00:27 |

Share: | | | | |


ಫ್ಯಾನ್‍ಗೆ ನೇಣು ಬಿಗಿದುಕೊಂಡು ವರ್ಷಿಣಿ ಆತ್ಮಹತ್ಯೆ

ಬೆಂಗಳೂರು: ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಧಾಮನಗರದಲ್ಲಿ ನಡೆದಿದೆ.ವರ್ಷಿಣಿ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.


ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿರುವ ಈಕೆ ಜಯನಗರದ ಕಾಲೇಜ್ ಒಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Recent News


Leave a Comment: