ಹತ್ತೂರ ಒಡೆಯನ ನೆಲಕ್ಕೆ ಕಾಲಿಟ್ಟ MRPL ತೆಂಕಿಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

ಸುದ್ದಿಗಳು News

Posted by vidyamaana on 2024-07-23 21:30:52 |

Share: | | | | |


ಹತ್ತೂರ ಒಡೆಯನ ನೆಲಕ್ಕೆ ಕಾಲಿಟ್ಟ MRPL ತೆಂಕಿಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

ಪುತ್ತೂರು: ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕಾ ಸಂಸ್ಥೆ ಒ.ಎನ್.ಜಿ.ಸಿ.ಯ ಅಂಗ ಸಂಸ್ಥೆಯಾಗಿರುವ ಎಂ.ಆರ್.ಪಿ.ಎಲ್.ನ ಹೈಕ್ಯೂ ರಿಟೇಲ್ ಔಟ್ ಲೆಟ್ ಮಹೇಶ್ವರ ಪೆಟ್ರೋಲಿಯಂ ಜು.21ರಂದು ಮಾಣಿ-ಮೈಸೂರು ರಾಷ್ಟಿಯ ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಶುಭಾರಂಭ ಗೊಂಡಿತ್ತು . ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಂಸ್ಥೆಯ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸವಣೂರು ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ಸವಣೂರು ಸೀತಾರಾಮ ರೈ, ಸ್ಥಳೀಯ ನಗರ ಸಭಾ ಸದಸ್ಯೆ ಯಶೋಧಾ ಪೂಜಾರಿ ಮತ್ತು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪೆಟ್ರೋಲ್ ಹಾಕುವ ಯಂತ್ರಗಳ ರಿಬ್ಬನ್ ಕತ್ತರಿಸುವ ಮೂಲಕ ಸಾಂಕೇತಿಕವಾಗಿ ತೈಲ ತುಂಬುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿರುವ ವಾಮನ್ ಪೈ ಅವರು ಉಚಿತ ನೈಟ್ರೋಜನ್ ಪೂರೈಕ್ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಬಳಿಕ, ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲೆ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭ ಗೊಂಡಿತ್ತು . ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಕಿನಾರ ಅವರು ಅತಿಥಿ ಗಣ್ಯರನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಕಾರ್ಯಾಚರಣೆಗೆ ಅಧಿಕೃತ ಚಾಲನೆಯನ್ನು ನೀಡಿದರು.

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕರಾಗಿರುವ ಗಣೇಶ್ ಭಟ್ ಅವರು ಮಾತನಾಡಿ, ತಲಪಾಡಿಯ ದುರ್ಗಾಪರಮೇಶ್ವರಿ ದೇವರು ಈ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಅವರಿಗೆ ಕುಲದೇವರಾಗಿರುವ ಕಾರಣ ತಲಪಾಡಿ ಕ್ಷೇತ್ರöಕ್ಕೂ ಪುತ್ತೂರಿಗೂ ವಿಶೇಷ ನಂಟಿದೆ ಎಂದು ಹೇಳಿದರು. ಶಿವಪ್ರಸಾದ್ ಶೆಟ್ಟಿ ಅವರು ದೈವಭಕ್ತರಾಗಿದ್ದು ಅವರ ಸತ್ಕರ್ಮ ಮತ್ತು ದೇವರ ಮೇಲೆ ಅವರಿಟ್ಟ ಭಕ್ತಿ ಹಾಗೂ ಗುರು-ಹಿರಿಯರ ಮೇಲಿನ ಗೌರವ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ದೈವ-ದೇವರ ಅನುಗ್ರಹದೊಂದಿಗೆ ಈ ನೂತನ ಸಂಸ್ಥೆಯು ಉತ್ತಮ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿ ಇನ್ನಷ್ಟು ಹೆಸರುವಾಸಿಯಾಗಲಿ ಎಂದು ಅವರು ಶುಭಾಶೀರ್ವಾದ ನೀಡಿದರು.

Additional Image

ದ.ಕ. ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಭಗವಂತನನ್ನು ತೋರಿಸುವವ ಗುರು, ಜ್ಞಾನವನ್ನು ಕೊಡುವವ ಗುರು ಎಂಬ ಮಾತನ್ನು ನಮ್ಮ ಹಿರಿಯತು ಹೇಳಿದ್ದಾರೆ. ಅಂತಹ ಗುರುವಿನ ಪ್ರೇರಣೆ ಇರತಕ್ಕಂತಹ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಪುಣ್ಯಸಂದರ್ಭವಾಗಿರುವ ಈ ಗುರುಪೂರ್ಣಮಿಯ ದಿನದಂದು ಈ ಪುತ್ತೂರಿನ ಪುಣ್ಯ ನೆಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆ ಉದ್ಘಾಟನೆಗೊಂಡಿರುವುದು ಈ ಸಂಸ್ಥೆಗೆ ಗುರುಹಿರಿಯರ ಆಶೀರ್ವಾದ ಇದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು. ಈ ಸಂಸ್ಥೆಯು ಎಂ.ಆರ್.ಪಿ.ಎಲ್.ನ ಒಂದಹ ಅತ್ಯುನ್ನತ ಸಂಸ್ಥೆಯಾಗಿ ಬೆಳೆಯುತ್ತದೆ, ಮಾತ್ರವಲ್ಲದೇ ಶಿವಪ್ರಸಾದ್ ಶೆಟ್ಟಿ ಅವರು ಓರ್ವ ಯಸಸ್ವಿ ಪೆಟ್ರೋಲಿಯಂ ಉದ್ಯಮಿಯಾಗಿ ಬೆಳೆಯುತ್ತಾರೆ ಎಂಬ ವಿಶ್ವಾಸವನ್ನು ಕಟೀಲ್ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಶಿವಪ್ರಸಾದ್ ಅವರು ಭೂವ್ಯವಹಾರದಲ್ಲಿ ಓರ್ವ ಯಶಸ್ವಿ ಉದ್ಯಮಿಯಾಗಿ ಪುತ್ತೂರಿನ ಮಟ್ಟಿಗೆ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಶ್ರೀಮಂತಿಕೆ ಬಂದಾಗ ಕೆಲವರಿಗೆ ಎಲ್ಲವೂ ಮರೀತದೆ, ಆದರೆ ಶಿವಪ್ರಸಾದ್ ಅವರು ತಮ್ಮಲ್ಲಿರುವ ಹೃದಯ ಶ್ರೀಮಂತಿಕೆಯಿAದ ತಮ್ಮ ವ್ಯವಹಾರದ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಶಿವಪ್ರಸಾದ್ ಅವರು ಓರ್ವ ಧಾರ್ಮಿಕ ಮನೋಭಾವದ ವ್ಯಕ್ತಿ ಎಂಬುದಕ್ಕೆ ಉದಾಹರಣೆಯಾಗಿ, ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಸಂದರ್ಭದಲ್ಲಿ ಒಂದು ಗುಡಿ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ತನ್ನದು ಎಂದು ಮಾತುಕೊಟ್ಟು ಅದರಂತೆ ನಡೆದುಕೊಂಡ ವಿಚಾರವನ್ನು ಕಟೀಲ್ ಅವರು ಸಭೆಯ ಮುಂದೆ ಬಿಚ್ಚಿಟ್ಟರು. ತೈಲೋದ್ಯಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು ಎಂ.ಆರ್.ಪಿ.ಎಲ್, ಭಾರತ್ ಪೆಟ್ರೋಲಿಯಂ ಸಹಿತ ಎಲ್ಲಾ ಸಂಸ್ಥೆಗಳೂ ಸ್ಪರ್ಧಾತ್ಮಕ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇದು ಈ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಪುತ್ತೂರು ಪರಿಸರದಲ್ಲಿ ಎಂ.ಆರ್.ಪಿ.ಎಲ್.ನ ಪ್ರಥಮ ಔಟ್ ಲೆಟ್ ಪ್ರಾರಂಭಿಸುವ ಅವಕಾಶ ಶಿವಪ್ರಸಾದ್ ಅವರಿಗೆ ಸಿಕ್ಕಿರುವುದಕ್ಕೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಮತ್ತು ಈ ಉದ್ಯಮದಲ್ಲಿ ಶಿವಪ್ರಸಾದ್ ಅವರಿಗೆ ಯಶಸ್ಸು ಲಭಿಸಲಿ ಎಂಬ ಸದಾಶಯದ ನುಡಿಗಳನ್ನು ನಳಿನ್ ಕುಮಾರ್ ಕಟೀಲ್ ನೀಡಿದರು. 

Additional Image


Additional Image

ವ್ಯಕ್ತಿಯೊಬ್ಬರು ಉದ್ಯಮದಲ್ಲಿ ಬೆಳೆದರೂ ಕೂಡ ಹೇಗೆ ತನ್ನ ಪಾಡಿಗೆ ತನ್ನ ವ್ಯವಹಾರವನ್ನು ನಡೆಸಿಕೊಂಡು ಸಾಮಾಜಿಕವಾಗಿಯೂ, ಧಾರ್ಮಿಕವಾಗಿಯೂ ತನ್ನನ್ನು ತೊಡಗಿಸಕೊಳ್ಳುತ್ತಾರೆ ಎಂಬುದಕ್ಕೆ ಶಿವಪ್ರಸಾದ್ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು. ಕಳೆದ ಸಲ ಮಹಾಲಿಂಗೇಶ್ವರ ದೇವರಿಗೆ ಒಂದಷ್ಟು ಜನರ ಸಹಕಾರದೊಂದಿಗೆ ಬಂಗಾರದ ಮಾಲೆಯನ್ನು ಒಪ್ಪಿಸುವಲ್ಲಿ ಮುಂದಾಳತ್ವವನ್ನು ಶಿವಪ್ರಸಾದ್ ಅವರು ವಹಿಸಿಕೊಂಡಿರುವುದು ಅವರಲ್ಲಿರುವ ಧಾರ್ಮಿಲ ಪ್ರಜ್ಞೆಗೆ ಸಾಕ್ಷಿ ಎಂಬ ವಿಚಾರವನ್ನು ಶಾಸಕರು ಈ ಸಂದರ್ಬದಲ್ಲಿ ವಿಶೇಷವಾಗಿ ಶ್ಲಾಘಿಸಿದರು.

 Share: | | | | |


ತರಕಾರಿ ವ್ಯಾಪಾರಿಯ ತಳ್ಳುಗಾಡಿ ಕದ್ದೊಯ್ದ ಖತರ್ನಾಕ್‌ ಕಳ್ಳ

Posted by Vidyamaana on 2024-07-18 12:04:56 |

Share: | | | | |


ತರಕಾರಿ ವ್ಯಾಪಾರಿಯ ತಳ್ಳುಗಾಡಿ ಕದ್ದೊಯ್ದ ಖತರ್ನಾಕ್‌ ಕಳ್ಳ

ಮೈಸೂರು, ಜು.17: ಕಾಲ ಕೆಟ್ಟೋಗಿದೆ ಶ್ರೀಮಂತರ ಬಳಿ ಚಿನ್ನ, ಬೆಳ್ಳಿ ಹಣ ಕದಿಯುತ್ತಿದ್ದವರು, ಈಗ ಬಡವರ ವಸ್ತುಗಳನ್ನು ಕದಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿ(Mysore)ನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಹೌದು, ಮೈಸೂರಿನ ಹೃದಯಭಾಗದಲ್ಲಿರುವ ಸರಸ್ವತಿಪುರಂನಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ತಿಮ್ಮೇಗೌಡ ಎಂಬುವವರ ತಳ್ಳುವ ಗಾಡಿಯನ್ನು ಕಳ್ಳತನ ಮಾಡಲಾಗಿದೆ.

ಪ್ರತಿದಿನವೂ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದ ತಿಮ್ಮೇಗೌಡ ಅವರ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿದೆ. ಸಾಲ ಸೋಲ ಮಾಡಿ ಒಂದು ತಳ್ಳುವ ಗಾಡಿ ಖರೀದಿ ಮಾಡಿ ಅದರಲ್ಲಿ ಈರುಳ್ಳಿ ತರಕಾರಿ ಮಾರಿ ಜೀವನ ನಡೆಸುತ್ತಿದ್ದರು. ಪ್ರತಿದಿನ ಸರಸ್ವತಿಪುರಂ ಬಡಾವಣೆಯ ಜವರೇಗೌಡ ಪಾರ್ಕ್‌ ಬಳಿ ವ್ಯಾಪಾರ ಮಾಡುತ್ತಿದ್ದರು. ಕಳೆದ ಸೋಮವಾರ ಸಹ ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಮಳೆ ಶುರುವಾದ ಕಾರಣ ವ್ಯಾಪಾರ ನಿಲ್ಲಿಸಿ ತರಕಾರಿ

ಆತ್ಮಹತ್ಯೆಗೆ ಶರಣಾದ ಸಹೋದರಿಯರು

Posted by Vidyamaana on 2023-10-03 20:05:50 |

Share: | | | | |


ಆತ್ಮಹತ್ಯೆಗೆ ಶರಣಾದ ಸಹೋದರಿಯರು

ಮಂಗಳೂರು, ಅ.3: ನಗರದ ಕದ್ರಿ ಕಂಬ್ಳದ ಬಳಿಯ ಚಂದ್ರಿಕಾ ಬಡಾವಣೆಯಲ್ಲಿ ಒಂದೇ ಮನೆಯಲ್ಲಿ ವಾಸವಿದ್ದ ವೃದ್ಧ ಅಕ್ಕ, ತಂಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


ಲತಾ ಭಂಡಾರಿ(70) ಮತ್ತು ಅವರ ಅಕ್ಕ ಸುಂದರಿ ಶೆಟ್ಟಿ(80) ಮೃತ ಸೋದರಿಯರು. ಲತಾ ಭಂಡಾರಿ ಅವರ ಪತಿ ಜಗನ್ನಾಥ ಭಂಡಾರಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಮಂಗಳವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಸಂಜೆ 4.30ರ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಬಂದ್ ಆಗಿತ್ತು. ಕಿಟಕಿಯಿಂದ ನೋಡಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.


ಇವರಿಗೆ ಮಕ್ಕಳಿರಲಿಲ್ಲ ಎನ್ನಲಾಗುತ್ತಿದ್ದು, ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಕದ್ರಿ ಪೊಲೀಸರು ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.

ಅತ್ಯಾಚಾರ ಯತ್ನ ಆರೋಪ – ಬಂಧಿತ ಯುವಕನಿಗೆ ಸಿಕ್ತು ಜಾಮೀನು

Posted by Vidyamaana on 2024-04-28 14:14:12 |

Share: | | | | |


ಅತ್ಯಾಚಾರ ಯತ್ನ ಆರೋಪ – ಬಂಧಿತ ಯುವಕನಿಗೆ ಸಿಕ್ತು ಜಾಮೀನು

ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಹರ್ಷಿತ್ ಎಂಬ ಇನ್ನೋರ್ವ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಕಳೆದ ಮಾ.13ರಂದು ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ವಾಮಂಜೂರು ಮೂಲದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕವಿದ್ದು,ಆಕೆಯ ಕೋರಿಕೆಯಂತೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ.ಯುವಕನ ಸ್ನೇಹಿತರಿಬ್ಬರು ಇದನ್ನು ದುರುಪಯೋಗಪಡಿಸಿಕೊಂಡು ವಾಮಂಜೂರಿನ ಆತನ ಸ್ನೇಹಿತೆಯ ನಂಬ‌ರ್ ಪಡೆದು ಆಕೆಗೆ ಉದ್ಯೋಗ ಕೊಡಿಸುವುದಾಗಿ ಪುತ್ತೂರಿಗೆ ಕರೆಸಿದ್ದರು.ಯುವತಿಯು ತನ್ನ ಸ್ನೇಹಿತೆಯ ಜೊತೆಗೆ ಮಾ.13ರಂದು ಪುತ್ತೂರಿಗೆ ಬಂದಾಗ ಆಪಾದಿತ ಯುವಕರಿಬ್ಬರು ಆಕೆಗೆ ಪ್ರೊಫೈಲ್ ಬರೆಯಲೆಂದು ಹೇಳಿ ಆಕೆಯನ್ನು ಬನ್ನೂರು ಗ್ರಾಮದ ಬನ್ನೂರು ಬೈಲು ಬಾಲಏಸು ಮಂದಿರ ಬಳಿಯ ನಿರ್ಜನ ಮನೆಯೊಂದಕ್ಕೆ ಕರೆದೊಯ್ದರು.

ಆಶೀರ್ವಾದ್ ಗಿಫ್ಟ್ ಸ್ಕೀಂನ ಡ್ರಾ ಫಲಿತಾಂಶ

Posted by Vidyamaana on 2024-05-28 12:59:39 |

Share: | | | | |


ಆಶೀರ್ವಾದ್ ಗಿಫ್ಟ್ ಸ್ಕೀಂನ ಡ್ರಾ ಫಲಿತಾಂಶ

ಪುತ್ತೂರು: ಇಲ್ಲಿನ ದರ್ಬೆ ಮೊಯಿದ್ದೀನ್ ಬಿಲ್ಡಿಂಗಿನಲ್ಲಿರುವ ಆಶೀರ್ವಾದ್ ಎಂಟರ್ ಪ್ರೈಸಸ್ ಗಿಫ್ಟ್ ಸ್ಕೀಂನ‌ ಡ್ರಾ ಫಲಿತಾಂಶದ ಬಹುಮಾನವನ್ನು ವಿಜೇತ ಗ್ರಾಹಕರಿಗೆ ಹಸ್ತಾಂತರಿಸಲಾಯಿತು.

ಪ್ರತಿ ತಿಂಗಳು 15ನೇ ತಾರೀಕಿನಂದು ಈ ಡ್ರಾ ಮಾಡಲಾಗುತ್ತದೆ. ಪಾರದರ್ಶಕತೆ ಹಾಗೂ ಗ್ರಾಹಕರಿಗೆ ನೇರ ವೀಕ್ಷಣೆಗೆ ಸುಲಭವಾಗುವ ನಿಟ್ಟಿನಲ್ಲಿ ಡ್ರಾದ ನೇರ ಪ್ರಸಾರ ವಿದ್ಯಮಾನದಲ್ಲಿ ನಡೆಯುತ್ತದೆ.

BREAKING : ಬಿಜೆಪಿಯ ಅಭ್ಯರ್ಥಿಗಳ 5ನೆ ಪಟ್ಟಿ ಬಿಡುಗಡೆ : ಅನಂತ್ ಕುಮಾರ್ ಹೆಗಡೆ ಬದಲು ಕಾಗೇರಿಗೆ ಮಣೆ ಹಾಕಿದ ಹೈಕಮಾಂಡ್

Posted by Vidyamaana on 2024-03-24 21:28:06 |

Share: | | | | |


BREAKING : ಬಿಜೆಪಿಯ ಅಭ್ಯರ್ಥಿಗಳ 5ನೆ ಪಟ್ಟಿ ಬಿಡುಗಡೆ : ಅನಂತ್ ಕುಮಾರ್ ಹೆಗಡೆ ಬದಲು ಕಾಗೇರಿಗೆ ಮಣೆ ಹಾಕಿದ ಹೈಕಮಾಂಡ್

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ 5ನೇ ಪಟ್ಟಿ ಬಿಡುಗಡೆ ಮಾಡಿದ್ದು ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅನಂತ್ ಕುಮಾರ್ ಹೆಗಡೆ ಬದಲು ಇದೀಗ ಹೈಕಮಾಂಡ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಿದೆ.ಅಲ್ಲದೆ ಇದೇ ವೇಳೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಜಗದೀಶ್ ಶೆಟ್ಟರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬದಲು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಅಲ್ಲದೆ ಹೈಕಮಾಂಡ್ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿಯ ಮಾಜಿ ಸಚಿವ ಸುಧಾಕರ್ ಅವರಿಗೆ ಕೂಡ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ.ಬಿಜೆಪಿ 5ನೇ ಪಟ್ಟೆ ಬಿಡುಗಡೆಯಾಗಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ


1)ಉತ್ತರ ಕನ್ನಡ ಲೋಕಸಭಾ ಕ್ಷೇತ್ರ - ವಿಶ್ವೇಶ್ವರ ಹೆಗಡೆ ಕಾಗೇರಿ

2)ಚಿಕ್ಕಬಳ್ಳಾಪುರ ಕ್ಷೇತ್ರ -ಡಾ. ಕೆ ಸುಧಾಕರ್

3) ಬೆಳಗಾವಿ ಲೋಕಸಭಾ ಕ್ಷೇತ್ರ- ಜಗದೀಶ್ ಶೆಟ್ಟರ್

4). ರಾಯಚೂರು ಲೋಕಸಭಾ ಕ್ಷೇತ್ರ-ರಾಜಾಅಮರೇಶ್ವರ ನಾಯಕಗೆ ಬಿಜೆಪಿ ಟಿಕೇಟ್ ನೀಡಿದೆ.

ಪತ್ನಿ ಶೀಲ ಶಂಕಿಸಿದ ಪತಿ; ಎದೆಗೆ ಇರಿದು ಕೊಲೆ ಮಾಡಿದ ಪತ್ನಿ

Posted by Vidyamaana on 2023-12-21 16:33:16 |

Share: | | | | |


ಪತ್ನಿ ಶೀಲ ಶಂಕಿಸಿದ ಪತಿ; ಎದೆಗೆ ಇರಿದು ಕೊಲೆ ಮಾಡಿದ ಪತ್ನಿ

ಬೆಂಗಳೂರು ; ರಾತ್ರಿ ವೇಳೆ ಫೋನ್‌ ನಲ್ಲಿ ಯಾರ ಜೊತೆಯೋ ಹರಟೆ ಹೊಡೆಯುತ್ತಿದ್ದ ಪತ್ನಿಯ ಬಗ್ಗೆ ಕುಡುಕ ಪತಿ ಅನುಮಾನ ಪಟ್ಟಿದ್ದಾನೆ. ಯಾರ ಜೊತೆಯೋ ನಿನಗೆ ಅನೈತಿಕ ಸಂಬಂಧ ಇದೆ ಎಂದು ಜಗಳ ತೆಗೆದಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ ರೋಸಿಹೋದ ಪತ್ನಿ, ಪತಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಳೆ.ಬೆಂಗಳೂರಿನ ಹುಳಿಮಾವಿನ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ.


ಈ ಕಾಲೇಜಿನಲ್ಲಿ ದಂಪತಿ ಸೆಕ್ಯೂರಿಟಿ ಗಾರ್ಡ್‌ ಹಾಗೂ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಾರೆ. ನಿನ್ನೆ ಸಂಜೆ ಮನೆಯಿಂದ ಹೊರಹೋಗಿದ್ದ ಪತ್ನಿ ಉಮೇಶ್‌ ದಾಳಿ ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಬಂದಿದ್ದ. ಈ ವೇಳೆ ಪತ್ನಿ ಮನಿಷಾ ದಾಮಿ ಮೊಬೈಲ್‌ನಲ್ಲಿ ಯಾರ ಜೊತೆಯೂ ಮಾತನಾಡುತ್ತಿದ್ದಳು. ಇದರಿಂದ ಅನುಮಾನಗೊಂಡು ಪತಿ ಉಮೇಶ್‌ ದಾಮಿ ಜಗಳ ತೆಗೆದಿದ್ದಾನೆ.


ಆರೋಪಿ ಮನಿಷಾಳನ್ನು ಹುಳಿಮಾವು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ಧಾರೆ.

Recent News


Leave a Comment: