ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಬೊಳುವಾರಿನಲ್ಲಿ ನೆಲಕ್ಕುರುಳಿದ ಬೃಹತ್ ಮಾವಿನ ಮರ

Posted by Vidyamaana on 2024-04-27 21:58:21 |

Share: | | | | |


ಬೊಳುವಾರಿನಲ್ಲಿ ನೆಲಕ್ಕುರುಳಿದ ಬೃಹತ್ ಮಾವಿನ ಮರ

ಪುತ್ತೂರು: ಪುತ್ತೂರು ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರಿ ಗಾತ್ರದ ಮಾವಿನ ಮರವೊಂದು ಧರಶಾಯಿಯಾದ ಘಟನೆ ಎ.27ರಂದು ನಡೆದಿದ್ದು, ಘಟನಾ ಸ್ಥಳಕ್ಮೆ ಶಾಸಕರು‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದು‌ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

 ಬಿದ್ದ ಮರದಲ್ಲಿದ್ದ ಮಾವಿನ ಕಾಯಿ ಕೊಯ್ಯಲು ಜನ ಮುಗಿ ಬಿದ್ದಿದ್ದಾರೆ.ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲೇ ಹಲವು ವರ್ಷಗಳಿಂದ ಇದ್ದ ಮಾವಿನ ಮರವೊಂದು ಸಂಜೆ ವೇಳೆ ಆಕಸ್ಮಿಕವಾಗಿ ಧರಶಾಯಿಯಾಗಿದೆ.

ನನ್ನ ಕಾರಿಗೆ ಮುತ್ತಿಗೆ ಹಾಕಿಲ್ಲ, ಬೇರೆ ಯಾರಿಗೋ ಹಾಕಿರಬಹುದು ; ಯುವಮೋರ್ಚಾ ಮುತ್ತಿಗೆ ಯತ್ನದ ಬಗ್ಗೆ ಸಿದ್ದರಾಮಯ್ಯ ಲೇವಡಿ

Posted by Vidyamaana on 2024-02-17 22:09:09 |

Share: | | | | |


ನನ್ನ ಕಾರಿಗೆ ಮುತ್ತಿಗೆ ಹಾಕಿಲ್ಲ, ಬೇರೆ ಯಾರಿಗೋ ಹಾಕಿರಬಹುದು ; ಯುವಮೋರ್ಚಾ ಮುತ್ತಿಗೆ ಯತ್ನದ ಬಗ್ಗೆ ಸಿದ್ದರಾಮಯ್ಯ ಲೇವಡಿ

ಮಂಗಳೂರು, ಫೆ.17: ನಾನು ಮುತ್ತಿಗೆ ಹಾಕಿದವರನ್ನು ನೋಡಿಲ್ಲ. ನಾನು ಬರೋದಕ್ಕೆ  ಮೊದಲೇ ಪ್ರತಿಭಟನೆ ನಡೆಸಿದ್ದಾರೆ.‌ ಹಾಗಾಗಿ ಆ ಮುತ್ತಿಗೆ ನನಗೆ ಆಗಿರೋದಲ್ಲ.‌ ಅವರು ಬೇರೆ ಯಾರಿಗೋ ಮುತ್ತಿಗೆ ಹಾಕಿರಬಹುದು. ನನಗೇ ಆಗುತ್ತಿದರೆ ನನ್ನ ಕಾರಿಗೆ ಮುತ್ತಿಗೆ ಹಾಕುತ್ತಿದ್ರು.. ಹೀಗೆಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮುತ್ತಿಗೆ ಯತ್ನವನ್ನು ಸಿಎಂ ಸಿದ್ದರಾಮಯ್ಯ ಛೇಡಿಸಿದ್ದಾರೆ. 


ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೇಳಿದಾಗ ಸಿದ್ದರಾಮಯ್ಯ ಮೇಲಿನಂತೆ ಉತ್ತರಿಸಿದರು. ಬಜೆಟಲ್ಲಿ ಮುಸ್ಲಿಮರಿಗೆ ಹೆಚ್ಚು ನೀಡಿದ್ದೀರಂತೆ ಎಂದು ಕೇಳಿದ್ದಕ್ಕೆ, ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಪಾಯಿಂಟ್ ಎಂಟರಷ್ಟು ಮಾತ್ರ ನೀಡಿದ್ದೇವೆ. ಬಿಜೆಪಿಯವರಿಗೆ ಮುಸ್ಲಿಮರನ್ನು ಕಂಡ್ರೆ ಆಗೋದಿಲ್ಲ.‌ ಹಾಗಾಗಿ ಅವರಿಗೆ ಏನು ಕೊಟ್ರೂ ಆಗೋದಿಲ್ಲ. ಅಲ್ಪಸಂಖ್ಯಾತರು ಒಟ್ಟು ಜನಸಂಖ್ಯೆಯ ಎಷ್ಟಿದ್ದಾರೆ ?ಅವರಿಗೆ ನೀಡಿದ ಅನುದಾನ ಏನು ಎಂದು ಲೆಕ್ಕ ಹಾಕಿ ಅಂತ ಹೇಳಿದ್ದಾರೆ.ಮಂಗಳೂರು, ಫೆ.17: ನಾನು ಮುತ್ತಿಗೆ ಹಾಕಿದವರನ್ನು ನೋಡಿಲ್ಲ. ನಾನು ಬರೋದಕ್ಕೆ  ಮೊದಲೇ ಪ್ರತಿಭಟನೆ ನಡೆಸಿದ್ದಾರೆ.‌ ಹಾಗಾಗಿ ಆ ಮುತ್ತಿಗೆ ನನಗೆ ಆಗಿರೋದಲ್ಲ.‌ ಅವರು ಬೇರೆ ಯಾರಿಗೋ ಮುತ್ತಿಗೆ ಹಾಕಿರಬಹುದು. ನನಗೇ ಆಗುತ್ತಿದರೆ ನನ್ನ ಕಾರಿಗೆ ಮುತ್ತಿಗೆ ಹಾಕುತ್ತಿದ್ರು.. ಹೀಗೆಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮುತ್ತಿಗೆ ಯತ್ನವನ್ನು ಸಿಎಂ ಸಿದ್ದರಾಮಯ್ಯ ಛೇಡಿಸಿದ್ದಾರೆ. 


ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೇಳಿದಾಗ ಸಿದ್ದರಾಮಯ್ಯ ಮೇಲಿನಂತೆ ಉತ್ತರಿಸಿದರು. ಬಜೆಟಲ್ಲಿ ಮುಸ್ಲಿಮರಿಗೆ ಹೆಚ್ಚು ನೀಡಿದ್ದೀರಂತೆ ಎಂದು ಕೇಳಿದ್ದಕ್ಕೆ, ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಪಾಯಿಂಟ್ ಎಂಟರಷ್ಟು ಮಾತ್ರ ನೀಡಿದ್ದೇವೆ. ಬಿಜೆಪಿಯವರಿಗೆ ಮುಸ್ಲಿಮರನ್ನು ಕಂಡ್ರೆ ಆಗೋದಿಲ್ಲ.‌ ಹಾಗಾಗಿ ಅವರಿಗೆ ಏನು ಕೊಟ್ರೂ ಆಗೋದಿಲ್ಲ. ಅಲ್ಪಸಂಖ್ಯಾತರು ಒಟ್ಟು ಜನಸಂಖ್ಯೆಯ ಎಷ್ಟಿದ್ದಾರೆ ?ಅವರಿಗೆ ನೀಡಿದ ಅನುದಾನ ಏನು ಎಂದು ಲೆಕ್ಕ ಹಾಕಿ ಅಂತ ಹೇಳಿದ್ದಾರೆ

ಪುತ್ತೂರು: ಬಡ ಡಯಾಲಿಸಿಸ್ ರೋಗಿಗಳಿಗೆ ಉಚಿತ ಮೆಡಿಸಿನ್ ಕಾರ್ಡ್

Posted by Vidyamaana on 2023-07-16 16:39:48 |

Share: | | | | |


ಪುತ್ತೂರು: ಬಡ ಡಯಾಲಿಸಿಸ್ ರೋಗಿಗಳಿಗೆ ಉಚಿತ ಮೆಡಿಸಿನ್ ಕಾರ್ಡ್

ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡುವವರ ಪೈಕಿ ತೀರಾ ಬಡವರಾಗಿದ್ದ ೨೦ ಮಂದಿ ಡಯಾಲಿಸೀಸ್ ರೋಗಿಗಳಿಗೆ ಪ್ರತೀ ತಿಂಗಳು ೧೦೦೦/- ರೂಪಾಯಿಯ ಔಷಧಿ ಮತ್ತು ಡಯಾಲಿಸೀಸ್ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಸೇವಿಸಲು ತಿಂಗಳಿಗೆ  ೪೮೦/- ರೂಪಾಯಿಯ ಕೂಪನ್ ನೀಡುವ ಕಾರ್ಯಕ್ರಮವನ್ನು ಪುತೂರು ಬೊಳ್ವಾರಿನಲ್ಲಿರುವ ಹೆಲ್ತ್ ಪ್ಲಸ್ ಮೆಡಿಕಲ್‌ನವರ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ಮೂಲಕ ಪ್ರಾರಂಭಿಸಲಾಗಿದ್ದು ಜು.೧೫ರಂದು ಒಂದು ವರ್ಷದ ಉಚಿತ ಮೆಡಿಸಿನ್ ಕಾರ್ಡ್‌ನ್ನು ವಿತರಿಸಲಾಯಿತು. ಅನಿವಾಸಿ ಭಾರತೀಯ ಅಬ್ದುಲ್ ಸತ್ತಾರ್ ಮತ್ತು ತೌಸೀರ್ ಅಹಮದ್‌ರವರು ಇದಕ್ಕೆ ಸಹಕರಿಸಿದ್ದಾರೆ.

ಹೆಲ್ತ್ ಪ್ಲಸ್ ಮೆಡಿಕಲ್ಸ್‌ನ ಪಾಲುದಾರರಾದ ಆಸಿಫ್ ಮತ್ತು ಅಕ್ಬರ್‌ರವರು ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ರಿಯಾಯಿತಿಯಲ್ಲಿ ಔಷಧಿನೀಡುವ ಕುರಿತು ತಿಳಿಸಿದರು.


ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಜಯದೀಪ್ ಮಾತನಾಡಿ ಈಗಾಗಲೇ ರೋಟರಿ ಮೂಲಕ ೬ ಡಯಾಲಿಸೀಸ್ ಮೆಶಿನ್ ಸರಕಾರಿ ಆಸ್ಪತ್ರೆಗೆ ಬಂದಿದ್ದು ಒಟ್ಟು ೧೨ ಮೆಶಿನ್ ಕಾರ್ಯಚರಿಸುತ್ತಿದೆ. ೯೪ ಜನ ರೋಗಿಗಳ ಪೈಕಿ ತೀರಾ ಬಡವರನ್ನ ಹುಡುಕಿ ಮಾಡುವ ಈ ಸೇವೆ ಅತೀ ಉತ್ತಮವಾದುದು ಆಗಿದೆ. ಸಂಘ ಸಂಸ್ತೆ ಮತ್ತು ಇನ್ನಿತರರಿಂದ ರೋಗಿಗಳಿಗೆ ಸಹಾಯ ಆದಾಗ ಅವರ ಕಷ್ಟ ತಕ್ಕ ಮಟ್ಟಿಗೆ ಪರಿಹಾರ ಆಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಫುದ್ದೀನ್ ತಂಙಳ್ ಮಾತನಾಡಿ ರೋಗಿಗಳಿಗೆ ಸಹಾಯ ಮಾಡುವುದು ಪುಣ್ಯದ ಕಾರ್ಯವಾಗಿದ್ದು ಕಷ್ಟದಲ್ಲಿದ್ದಾಗ ಸಹಾಯ ಮಾಡುವವರಿಗೆ, ಇದಕ್ಕೆ ಸಹಾಯ ಮಾಡಿದವರಿಗೆ ದೇವರು ಪ್ರತಿಫಲ ಕೊಡುತ್ತಾನೆ ಎಂದು ಹೇಳಿದರು.

ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ ಹೆಲ್ತ್ ಪ್ಲಸ್ ಮೆಡಿಕಲ್ ಮೂಲಕ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ನವರು ಕೊಡಮಾಡುವ ಈ ದಾನದಲ್ಲಿ ಸರ್ವ ದರ್ಮದವರು ಇದ್ದು ಇದು ಎಲ್ಲರ ಮನ ಗೆಲ್ಲುವ ಸಂಗತಿಯಾಗಿದೆ. ಸಮಾಜ ಸೇವೆಯಲ್ಲಿ ಅತೀ ಉತ್ತಮ ಸೇವೆ ಇದಾಗಿದ್ದು ಹೆಲ್ತ್ ಸೆಂಟರ್ ನವರ ಸೇವೆಯನ್ನು ಶ್ಲಾಘಿಸಿದರು


ಕಾರ್ಯಕ್ರಮದಲ್ಲಿ ೨೦ ಜನ ರೋಗಿಗಳಿಗೆ ಹೆಲ್ತ್ ಕಾರ್ಡ್ ನೀಡುವ ವ್ಯವಸ್ಥೆ ಮಾಡಿದ್ದು ಮುಂದಕ್ಕೆ ದಾನಿಗಳ ನೆರವಿನೊಂದಿಗೆ ಇನ್ನಷ್ಟು ರೋಗಿಗಳಿಗೆ ಸಹಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಪುತ್ತೂರು ಸರಕಾರಿ ಆಸ್ಪತ್ರೆಯ ಮಾಜಿ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ ತಿಳಿಸಿದರು.

ಪುತ್ತೂರಿನ ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಮತ್ತು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ದಾಖಲಾತಿ ಪ್ರಾರಂಭ

Posted by Vidyamaana on 2024-05-01 15:56:14 |

Share: | | | | |


ಪುತ್ತೂರಿನ ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಮತ್ತು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ದಾಖಲಾತಿ ಪ್ರಾರಂಭ

ಪುತ್ತೂರು :ಪುತ್ತೂರಿನ ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಮತ್ತು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ದಾಖಲಾತಿ ಪ್ರಾರಂಭಗೊಂಡಿದೆ.

ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ , ಡಿಪ್ಲೋಮಾ ಇನ್ ಆಪರೇಷನ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ, ಡಿಪ್ಲೋಮಾ ಇನ್ ಆಪ್ತಲ್ಮಿಕ್ ಟೆಕ್ನಾಲಜಿ ಹಾಗೂ ಬಿ ಎಸ್ಸಿ  ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ , ಬಿ ಎಸ್ಸಿ ಆಪರೇಷನ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ, ಬಿಎಸ್ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಬಿಎಸ್ಸಿ ಎಮರ್ಜೆನ್ಸಿ ಅಂಡ್ ಟ್ರಾಮಾ ಕೇರ್ ಕೋರ್ಸ್ ಗಳಿಗೆ 2024 -25 ನೇ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ.

ಎಚ್ ಡಿ ಕುಮಾರಸ್ವಾಮಿ ಭೇಟಿಗೆ ಬಿಜೆಪಿಗರಿಂದಲೇ ವಿರೋಧ

Posted by Vidyamaana on 2024-02-07 12:33:51 |

Share: | | | | |


ಎಚ್ ಡಿ ಕುಮಾರಸ್ವಾಮಿ  ಭೇಟಿಗೆ ಬಿಜೆಪಿಗರಿಂದಲೇ ವಿರೋಧ

ಬೆಂಗಳೂರು: ಬಿಜೆಪಿ ನಾಯಕರು ಪದೇಪದೆ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿರುವುದು ಕೇಸರಿಪಡೆಯ ಸಂಘಟನ ವಲಯದಲ್ಲಿ ಭಾರೀ ಆಕ್ಷೇಪಕ್ಕೆ ಕಾರಣವಾಗುತ್ತಿದ್ದು, ಬಿಡದಿ ತೋಟದ ಮನೆ ಪರ್ಯಾಯ ಶಕ್ತಿ ಕೇಂದ್ರವಾಗುತ್ತಿರುವುದು ಪಕ್ಷದ ಹಿರಿಯರ ಅಸಹನೆಗೆ ಕಾರಣವಾಗಿದೆ.


ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಘೋಷಣೆಯಾದ ಬಳಿಕ ಬಿಜೆಪಿ ನಾಯಕರು ಜಗನ್ನಾಥ ಭವನಕ್ಕಿಂತಲೂ ಹೆಚ್ಚಾಗಿ ಬಿಡದಿ ತೋಟದ ಮನೆಗೆ ಎಡತಾಕುತ್ತಿದ್ದಾರೆ. ಇದರಲ್ಲಿ ಬಹುತೇಕರು ಲೋಕಸಭಾ ಚುನಾವಣ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಅನ್ಯ ಪಕ್ಷದಿಂದ ವಲಸೆ ಬಂದವರ ಜತೆಗೆ ಬಿಜೆಪಿಯಲ್ಲಿ ಹುಟ್ಟಿ-ಬೆಳೆದ ನಾಯಕರು ಕೂಡಾ ಮಲ್ಲೇಶ್ವರದ ಬದಲು ರಾಮನಗರದತ್ತ ರಥಯಾತ್ರೆ ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ರೀತಿ ರಾಜಕೀಯ ತಳಿ ಸಂಕರ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದೆಂಬ ಚರ್ಚೆ ಪಕ್ಷದ ವಲಯದಲ್ಲಿ ತೀವ್ರವಾಗುತ್ತಿದ್ದು, ಸಂಘದಿಂದ ಸಂಘಟನೆಗೆ ನಿಯೋಜನೆಗೊಂಡ ಪ್ರಧಾನ ಕಾರ್ಯದರ್ಶಿಯೊಬ್ಬರು ಪಕ್ಷದ ವೇದಿಕೆಯಲ್ಲೇ ಕೆಲವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ಕಾಲದಲ್ಲಿ ಕುಮಾರಸ್ವಾಮಿ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಚಿವರಾದ ಆರ್‌. ಅಶೋಕ, ಸಿ.ಟಿ. ರವಿ, ವಿ. ಸೋಮಣ್ಣ, ಡಾ| ಕೆ. ಸುಧಾಕರ್‌, ಸಿ.ಪಿ. ಯೋಗೇಶ್ವರ, ಸಂಸದ ಪ್ರತಾಪ್‌ ಸಿಂಹ, ರಮೇಶ್‌ ಜಾರಕಿಹೊಳಿಯವರಂಥ ಘಟಾನುಘಟಿಗಳ ಜತೆಗೆ ಎರಡನೇ ಹಂತದಲ್ಲಿರುವ ಹಲವು ನಾಯಕರು ಬಿಡದಿ ತೋಟದ ಮನೆಗೆ ತೆರಳಿ ಕುಮಾರಸ್ವಾಮಿ ಜತೆ ರಾಜಕೀಯ ಸಮಾಲೋಚನೆ ನಡೆಸಿದ್ದಾರೆ. ಈ ಪರಿಸ್ಥಿತಿ ಮುಂದುವರಿದರೆ ಪಕ್ಷದಲ್ಲಿ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ಬಿಜೆಪಿ ಹಿರಿಯರನ್ನು ಕಾಡುತ್ತಿದೆ. ಕುಮಾರಸ್ವಾಮಿ ನೀಡಿದ ಸಲಹೆಯನ್ನು ದಿಲ್ಲಿಯಲ್ಲಿ ರಾಷ್ಟ್ರೀಯ ನಾಯಕರು ಪರಿಗಣಿಸುತ್ತಾರೆಂಬ ಕಾರಣಕ್ಕೆ ಬಿಜೆಪಿ ನಾಯಕರು ಜೆಡಿಎಸ್‌ ಪ್ರಾಂಗಣದಲ್ಲಿ ಕಾವಲು ಸೇವೆ ಪ್ರಾರಂಭಿಸಿದ್ದಾರೆಂಬ ಚರ್ಚೆ ಬಿಜೆಪಿಯಲ್ಲಿ ವ್ಯತಿರಿಕ್ತ ಪರಿಣಾಮ ಮಾಡಲಾರಂಭಿಸಿದೆ.

ಜೈಲಿನಲ್ಲಿರುವ ಮಗನಿಗೆ ಗಾಂಜಾ ತಂದ ತಾಯಿ: ಮುಂದಾಗಿದ್ದು ರೋಚಕ..!

Posted by Vidyamaana on 2024-09-05 07:55:23 |

Share: | | | | |


ಜೈಲಿನಲ್ಲಿರುವ ಮಗನಿಗೆ ಗಾಂಜಾ ತಂದ ತಾಯಿ: ಮುಂದಾಗಿದ್ದು ರೋಚಕ..!

ಅಪರಾಧ ಕೃತ್ಯ ಮಾಡಿ ಜೈಲು ಸೇರಿರುವ ಮಗನನ್ನು ಕಾಣಲು ಬರುವ ತಾಯಿ ಸಾಮಾನ್ಯವಾಗಿ ಏನನ್ನು ತರಬಹುದು. ಊಟ, ಬಟ್ಟೆ, ಇಷ್ಟವಾದ ತಿಂಡಿ ಹೀಗೆ, ಜೈಲಿನಲ್ಲಿದ್ದರೂ ಆತನಿಗೆ ಖುಷಿ ಎನಿಸಲಿ ಎನ್ನುವ ಕಾರಣಕ್ಕೆ ಮನೆಯಿಂದ ಏನಾದರೂ ತಂದು ಕೊಡಬಹುದು. ಆದರೆ ಇಲ್ಲೊಬ್ಬಳು ಮಹಾ ತಾಯಿ ಜೈಲಿನಲ್ಲಿರುವ ಮಗನನ್ನು ಕಾಣಲು, ಆತನಿಗೆ ಖುಷಿ ಪಡಿಸಲು ಜೈಲಿಗೆ ಗಾಂಜಾವನ್ನು ತೆಗೆದುಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.

47 ವರ್ಷದ ಮಹಿಳೆಯೊಬ್ಬರು ವಿಯ್ಯೂರು ಕೇಂದ್ರ ಕಾಗೃಹದಲ್ಲಿರುವ ತನ್ನ ಮಗನನ್ನು ನೋಡಲು ಬಂದಿದ್ದು, ಜೊತೆಗೆ ಆತನಿಗೆ ನೀಡಲು 80 ಗ್ರಾಂ ಗಾಂಜಾವನ್ನು ತಂದಿದ್ದಾಳೆ. ಜೈಲಿನಲ್ಲಿರುವ ಮಗನಿಗೆ ತಾಯಿಯೇ ಗಾಂಜಾ ತೆಗೆದುಕೊಂಡ ಹೋದ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Recent News


Leave a Comment: