ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಕಾರ್ಕಳ | ನಕಲಿ ಪರಶುರಾಮ ಮೂರ್ತಿ: ಪ್ರಕರಣ ದಾಖಲು

Posted by Vidyamaana on 2024-06-23 17:28:15 |

Share: | | | | |


ಕಾರ್ಕಳ | ನಕಲಿ ಪರಶುರಾಮ ಮೂರ್ತಿ: ಪ್ರಕರಣ ದಾಖಲು

ಕಾರ್ಕಳ : ತಾಲ್ಲೂಕಿನ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ ಮೂರ್ತಿ ಮಾಡಿ ಕೊಡಲು ₹1.25 ಕೋಟಿ ಪಡೆದು, ನಕಲಿ ಮೂರ್ತಿಯನ್ನು ಮಾಡಿ ಕೊಟ್ಟು ಮೋಸ ಮಾಡಿದ್ದಾರೆ ಎಂಬ ಆರೋಪದಲ್ಲಿ ಕೃಷ್ಣ ಆರ್ಟ್ ವರ್ಲ್ಡ್‌ನ ಕೃಷ್ಣ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜೀನಾಮೆ

Posted by Vidyamaana on 2024-03-05 09:03:13 |

Share: | | | | |


ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜೀನಾಮೆ

ನವದೆಹಲಿ (ಮಾರ್ಚ್ 05): ಮೂರನೇ ಬಾರಿಗೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP N

non

da) ಅವರು ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುತರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಅವರು ಹಿಮಾಚಲ ಪ್ರದೇಶ ರಾಜ್ಯಸಭಾ ಸದಸ್ಯತ್ವ(Himachal pr

non

esh Rajya Sabha MP) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ನಡ್ಡಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.


ಹಿಮಾಚಲ ಪ್ರದೇಶದಿಂದ ರಾಜ್ಯಸಭೆ ಸಂಸದರಾಗಿ ಆಯ್ಕೆಯಾಗಿರುವ ಜೆಪಿ ನಡ್ಡಾ ಅವಧಿ ಏಪ್ರಿಲ್ ತಿಂಗಳಿಗೆ ಅಂತ್ಯವಾಗಲಿದೆ. ಇದಕ್ಕೂ ಮೊದಲೇ ಜೆಪಿ ನಡ್ಡಾ ಅವರು ಗುಜರಾತ್‌ನಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಸಕ್ತ ಹಿಮಾಚಲ ಪ್ರದೇಶದ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ ನೀಡಿದ್ದಾರೆ.ಇನ್ನು ಜೆಪಿ ನಡ್ಡಾ ಅವರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವಧಿಯನ್ನು ವಿಸ್ತರಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಡ್ಡಾ ಅವರ ಅಧಿಕಾರವಧಿಯಲ್ಲಿ 2024ರ ಜೂನ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಅಮಿತ್‌ ಶಾ ಈ ಘೋಷಣೆ ಮಾಡಿದ್ದರು. ಈ ಮೂಲಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಯನ್ನು ನಡ್ಡಾ ನೇತೃತ್ವದಲ್ಲೇ ಎದುರಿಸಲಿದೆ. ನಡ್ಡಾ ಅವರು 2019ರಲ್ಲಿ ಅಮಿತ್‌ ಶಾ ಅವರ ಬಳಿಕ ಮಧ್ಯಂತರ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ 2020ರಿಂದ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಕ್ಕನ ಗಂಡನೇ ಬೇಕು, ಆತನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದ ಯುವತಿ! ನೊಂದ ಯುವತಿ ಮಾಡಿದ್ದೇನು ಗೊತ್ತಾ?

Posted by Vidyamaana on 2024-07-19 08:13:00 |

Share: | | | | |


ಅಕ್ಕನ ಗಂಡನೇ ಬೇಕು, ಆತನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದ ಯುವತಿ! ನೊಂದ ಯುವತಿ ಮಾಡಿದ್ದೇನು ಗೊತ್ತಾ?

ತೆಲಂಗಾಣ: ತನ್ನ ಸ್ವಂತ ಅಕ್ಕನ ಗಂಡನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು, ಈ ಸಂಬಂಧವನ್ನು ಮನೆಯವರು ಒಪ್ಪದೇ ಇದ್ದಾಗ ಯುವತಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​​​​ನ ಹಯಾತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದರಿಂದ ನೊಂದ ಯುವತಿ ಮಾಡಿದ್ದೇನು ಗೊತ್ತಾ? 

ತೆಲಂಗಾಣ: ತನ್ನ ಸ್ವಂತ ಅಕ್ಕನ ಗಂಡನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು, ಈ ಸಂಬಂಧವನ್ನು ಮನೆಯವರು ಒಪ್ಪದೇ ಇದ್ದಾಗ ಯುವತಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​​​​ನ ಹಯಾತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಮನಿಸಿ : ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಈ ರೀತಿ ಚೆಕ್ ಮಾಡಿಕೊಳ್ಳಿ!

Posted by Vidyamaana on 2024-06-21 14:41:56 |

Share: | | | | |


ಗಮನಿಸಿ : ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಈ ರೀತಿ ಚೆಕ್ ಮಾಡಿಕೊಳ್ಳಿ!

ಬೆಂಗಳೂರು  : ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದವರ ಪಟ್ಟಿ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಸಿದವರು ಅಧಿಕೃತ ವೆಬ್‌ ಸೈಟ್‌ ಭೇಟಿ ನೀಡುವ ಮೂಲಕ ನಿಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಬಹುದು.

ಕರ್ನಾಟಕ ಪಡಿತರ ಚೀಟಿಯ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು:-

ಮೊದಲಿಗೆ, ಇಲ್ಲಿ ನೀಡಲಾದ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ

ಪ್ರವೀಣ್ ನೆಟ್ಟಾ‌ರ್ ಹತ್ಯೆ ಪ್ರಕರಣ –ಮುಸ್ತಫಾ ಪೈಚಾರ್ ಸಹಿತ ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

Posted by Vidyamaana on 2024-08-03 08:09:49 |

Share: | | | | |


ಪ್ರವೀಣ್ ನೆಟ್ಟಾ‌ರ್ ಹತ್ಯೆ ಪ್ರಕರಣ –ಮುಸ್ತಫಾ ಪೈಚಾರ್ ಸಹಿತ ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು : ದೇಶದಲ್ಲಿ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಂಧಿತ ಇಬ್ಬರು ಪ್ರಮುಖ ಆರೋಪಿಗಳಾದ ಮುಸ್ತಫಾ ಪೈಚಾರ್ ಹಾಗೂ ರಿಯಾಜ್ ಎಚ್‌.ವೈ. ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ

ಸುಳ್ಯ ತಾಲೂಕಿನ ಮುಸ್ತಫಾ ಪೈಚಾರ್ ಪ್ರಕರಣದ ಪ್ರಮುಖ ಸಂಚುಕೋರ. ಕೊಲೆಯ ಬಳಿಕ ಸುಮಾರು 2 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಈತನನ್ನುಹಾಗೂ ಆತನಿಗೆ ಆಶ್ರಯ ನೀಡಿದ್ದ ಮನಸೂರು ಪಾಷ ನನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿಕಳೆದ ಮೇ 10 ರಂದು ಬಂಧಿಸಲಾಗಿತ್ತು. ಮುಸ್ತಾಫ ರಾಜ್ಯದಲ್ಲಿ ಪಿಎಫ್‌ಐ ಸೇವಾ ತಂಡದ ಮಾಸ್ಟರ್ ತರಬೇತುದಾರನಾಗಿದ್ದ. ಈತ ಈ ತಂಡವನ್ನು ಮುನ್ನಡೆಸುತ್ತಿದ್ದ. ಈತ ಟಾರ್ಗೆಟ್ ಗಳನ್ನು ಗುರುತಿಸಿ, ಹತ್ಯೆಗೆ ಬೇಕಾದ ಪಿತೂರಿ ನಡೆಸುತ್ತಿದ್ದ ಎಂದು ಎನ್ ಐ ಎ ದೂಷರೋಪಣ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಬಾಲಿವುಡ್​ ನಟಿ ಗಾಯತ್ರಿ ಜೋಶಿ ಕಾರು ಭೀಕರ ಅಪಘಾತ ವೃದ್ಧ ದಂಪತಿ ಬಲಿ

Posted by Vidyamaana on 2023-10-04 11:50:03 |

Share: | | | | |


ಬಾಲಿವುಡ್​ ನಟಿ ಗಾಯತ್ರಿ ಜೋಶಿ ಕಾರು ಭೀಕರ ಅಪಘಾತ ವೃದ್ಧ ದಂಪತಿ ಬಲಿ

ಮುಂಬೈ(ಅ.04): ಶಾರುಖ್ ಖಾನ್ ಜೊತೆಗೆ "ಸ್ವದೇಸ್" ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಗಾಯತ್ರಿ ಜೋಶಿ ತಮ್ಮ ಪತಿ ವಿಕಾಸ್ ಒಬೆರಾಯ್ ಅವರೊಂದಿಗೆ ಇಟಲಿಯಲ್ಲಿ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತಕ್ಕೆ ಒಳಗಾಗಿದ್ದಾರೆ. ಗಾಯತ್ರಿ ಅವರ ಕಾರು ಇತರ ವಾಹನಗಳು ಮತ್ತು ಕ್ಯಾಂಪರ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.ವರದಿಗಳ ಪ್ರಕಾರ, ಲಂಬೋರ್ಘಿನಿ ಮತ್ತು ಫೆರಾರಿ ಸೇರಿದಂತೆ ಅನೇಕ ಉನ್ನತ-ಕಾರ್ಯಕ್ಷಮತೆಯ ವಾಹನಗಳು ಏಕಕಾಲದಲ್ಲಿ ಕ್ಯಾಂಪರ್ ವ್ಯಾನ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಸಾರ್ಡಿನಿಯಾದ ಗ್ರಾಮೀಣ ರಸ್ತೆಯಲ್ಲಿ ಪಲ್ಟಿಯಾಗಿವೆ, ಇದರಿಂದ ಈ ದುರಂತ ಸಂಭವಿಸಿದೆ.

Readmore....

ಬೆಚ್ಚಿಬೀಳಿಸುವಂತಹ ದೃಶ್ಯವೀಗ ವೈರಲ್



ದುರದೃಷ್ಟವಶಾತ್, ಫೆರಾರಿಗೆ ಬೆಂಕಿ ತಗುಲಿದೆ. ಇದರ ಪರಿಣಾಮವಾಗಿ ಒಳಗೆ ಕುಳಿತಿದ್ದ ದಂಪತಿಗಳು ಜೀವ ಕಳೆದುಕೊಂಡಿದ್ದಾರೆ, ಇದನ್ನು 63 ವರ್ಷದ ಮೆಲಿಸ್ಸಾ ಕ್ರೌಟ್ಲಿ ಮತ್ತು 67 ವರ್ಷದ ಸ್ವಿಟ್ಜರ್ಲೆಂಡ್‌ನ ಮಾರ್ಕಸ್ ಕ್ರೌಟ್ಲಿ ಎಂದು ಗುರುತಿಸಲಾಗಿದೆ.

ವಿಕಾಸ್ ಮತ್ತು ನಾನು ಇಟಲಿಯಲ್ಲಿದ್ದೇವೆ. ನಾವು ಇಲ್ಲಿ ಅಪಘಾತವನ್ನು ಎದುರಿಸಿದ್ದೇವೆ. ದೇವರ ದಯೆಯಿಂದ ನಾವಿಬ್ಬರೂ ಚೆನ್ನಾಗಿದ್ದೇವೆ" ಎಂದು ಗಾಯತ್ರಿ ದಿ ಫ್ರೀ ಪ್ರೆಸ್ ಜರ್ನಲ್‌ಗೆ ತಿಳಿಸಿದರು. ಈ ಭೀಕರ ಅಪಘಾತದ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ವರದಿಯ ಪ್ರಕಾರ, ಸಾರ್ಡಿನಿಯಾ ಸೂಪರ್‌ಕಾರ್ ಟೂರ್‌ನಲ್ಲಿ ಅಪಘಾತ ಸಂಭವಿಸಿದೆ, ಈ ಘಟನೆಯಲ್ಲಿ ಐಷಾರಾಮಿ ಕಾರುಗಳು ಟೆಯುಲಾಡಾದಿಂದ ಓಲ್ಬಿಯಾಕ್ಕೆ ತಮ್ಮ ಉನ್ನತ-ಮಟ್ಟದ ವಾಹನಗಳನ್ನು ಪ್ರದರ್ಶಿಸುತ್ತವೆ. ಗಾಯತ್ರಿ ಜೋಶಿ 2004 ರಲ್ಲಿ ವಿಮರ್ಶಕರ ಮೆಚ್ಚುಗೆ ಗಳಿಸಿದ ಸ್ವದೇಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಶಾರುಖ್ ಎದುರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ, ಸ್ವದೇಸ್ ನಂತರ ಗಾಯತ್ರಿ ನಟನೆಯಿಂದ ದೂರ ಸರಿದು ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸಲು ನಿರ್ಧರಿಸಿದ್ದಾರೆ.


ಅವರು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾದ ಒಬೆರಾಯ್ ಕನ್‌ಸ್ಟ್ರಕ್ಷನ್‌ನ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಒಬೆರಾಯ್ ಅವರನ್ನು ವಿವಾಹವಾಗಿದ್ದಾರೆ. ಅಂದಿನಿಂದ, ಅವರು ಹೆಚ್ಚಾಗಿ ಸಾರ್ವಜನಿಕ ಕಣ್ಣಿನಿಂದ ದೂರ ಉಳಿದಿದ್ದಾರೆ ಮತ್ತು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ

Recent News


Leave a Comment: