ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ವೀಲಿಂಗ್ ಮಾಡಿ ವೃದ್ದನ ಬಲಿ ಪಡೆದ ಪಿಎಸ್‌ಐ ಪುತ್ರ!

Posted by Vidyamaana on 2023-09-17 14:21:32 |

Share: | | | | |


ವೀಲಿಂಗ್ ಮಾಡಿ ವೃದ್ದನ ಬಲಿ ಪಡೆದ ಪಿಎಸ್‌ಐ ಪುತ್ರ!

ನಂಜನಗೂಡು : ಪಿಎಸ್‌ಐ ಪುತ್ರನ ಪುಂಡಾಟಕ್ಕೆ‌ ಅಮಾಯಕ ವೃದ್ಧನೊಬ್ಬ ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ಬಳಿ ನಡೆದಿದೆ.ಹುಳಿಮಾವು ಗ್ರಾಮದ 68 ವರ್ಷದ ಗುರುಸ್ವಾಮಿ ಮೃತ ವೃದ್ದನಾಗಿದ್ದಾನೆ. ಗುರುಸ್ವಾಮಿ ಹಸುಗಳನ್ನು ಮೇಯಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.ಯುವಕ ಸೈಯಾದ್ ಐಮಾನ್ ವೀಲಿಂಗ್ ಮಾಡಿಕೊಂಡು ಬಂದು ವೃದ್ಧನಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಗುರುಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಸೈಯದ್ ಐಮಾನ್ ಮೈಸೂರಿನ ಉದಯಗಿರಿ ನಿವಾಸಿಯಾಗಿದ್ದಾನೆ. ಈ ಯುವಕ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಪುತ್ರನಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ವೀಲಿಂಗ್ ವಿಚಾರಕ್ಕೆ ವಶಕ್ಕೆ ಪಡೆದು ದಂಡ ಹಾಕಲಾಗಿತ್ತು. ಇದಷ್ಟೆ ಅಲ್ಲದೆ ಈತನ ವಿರುದ್ಧ ಕಳ್ಳತನ ಆರೋಪ ಕೂಡ ಇತ್ತು. ಸದ್ಯ ಆರೋಪಿ‌ ಸೈಯದ್ ಐಮಾನ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೈಸೂರಿನ ಕೆಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ಮೃತ ವೃದ್ಧನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

Posted by Vidyamaana on 2023-10-17 13:16:40 |

Share: | | | | |


ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದೆ.


ಭಾರತದಲ್ಲಿ ಮದುವೆಯಾಗುವ ಸಲಿಂಗ ದಂಪತಿಗಳ ಹಕ್ಕಿನ ವಿರುದ್ಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಐವರು ನ್ಯಾಯಾಧೀಶರ ಪೀಠವು ಭಾರತದಲ್ಲಿ ಸಲಿಂಗ ವಿವಾಹಗಳನ್ನು ಕಾನೂನುಬದ್ಧವಾಗಿ ಗುರುತಿಸಲು ನಿರಾಕರಿಸಿತು. ಅದರ ಬಗ್ಗೆ ಶಾಸನವನ್ನು ರೂಪಿಸಲು ಸಂಸತ್ತಿಗೆ ಸೂಚಿಸಿತು. ನ್ಯಾಯಾಧೀಶರು ದತ್ತು ಹಕ್ಕುಗಳು ಅಥವಾ ನಾಗರಿಕ ಒಕ್ಕೂಟದ ಮಾನ್ಯತೆಯಂತಹ ವಿಷಯಗಳ ಬಗ್ಗೆ ಒಮ್ಮತದ ತೀರ್ಪಿಗೆ ಬರಲಿಲ್ಲ, ಆದರೆ ಮದುವೆಯಾಗಲು ಯಾವುದೇ ಅನರ್ಹ ಹಕ್ಕು ಇಲ್ಲ ಎಂದು ಸರ್ವಾನುಮತದಿಂದ ಒಪ್ಪಿಕೊಂಡರು.

ಸಂವಿಧಾನದ ಅಡಿಯಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ಸರಣಿಯ ಮೇಲೆ ನ್ಯಾಯಾಲಯ ತೀರ್ಪು ನೀಡಿದೆ.

‘ಮದುವೆಯಾಗುವ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸರ್ವಾನುಮತದಿಂದ ಅಭಿಪ್ರಾಯಪಟ್ಟರು.

ಬೆಳ್ತಂಗಡಿ : ಚಾರ್ಮಾಡಿ ಯುವಕರಿಂದ ಸರಕಾರಿ ಬಸ್ ನಿಲ್ಲಿಸಿ ಹಲ್ಲೆ ಪ್ರಕರಣ

Posted by Vidyamaana on 2023-06-19 01:55:50 |

Share: | | | | |


ಬೆಳ್ತಂಗಡಿ : ಚಾರ್ಮಾಡಿ ಯುವಕರಿಂದ ಸರಕಾರಿ ಬಸ್ ನಿಲ್ಲಿಸಿ ಹಲ್ಲೆ ಪ್ರಕರಣ

ಬೆಳ್ತಂಗಡಿ: ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಮುಂದೆ ಹೋಗಿ ಎಂದು ಕಂಡೆಕ್ಟರ್ ಮುಂದೆ ತಳ್ಳಿದ ಎಂಬ ಕಾರಣಕ್ಕಾಗಿ ಬಸ್ ನಿಲ್ಲಿಸಿ ದಾಂಧಲೆ ಮಾಡಿದ ಘಟನೆ ಜೂ 17 ರಂದು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಡೆದಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂನ್ 18 ರಂದು ಕಂಡಕ್ಟರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.


ಮಂಗಳೂರಿನಿಂದ ಮೂಡಿಗೆರೆಗೆ ಸಂಚಾರಿಸುವ ಸರ್ಕಾರಿ ಬಸ್ಸಿಗೆ ಉಜಿರೆಯಲ್ಲಿ ವಿದ್ಯಾರ್ಥಿಗಳು ಹತ್ತಿದ್ದು ಈ ವೇಳೆ ನಿರ್ವಾಹಕ ಬಸ್ ಒಳಗೆ ಮುಂದೆ ಹೋಗಲು ಕೈ ಹಿಡಿದು ಮುಂದೆ ಕಳುಹಿಸುವ ಸಂದರ್ಭ ಬಸ್ ಕಂಡಕ್ಟರ್ ಹಾಗೂ ಕೆಲವು ವಿದ್ಯಾರ್ಥಿಗಳ ನಡುವೆ ಮಾತಿನ ನಡೆದಿದೆ.ಅದಲ್ಲದೇ ಈ ವಿಚಾರವನ್ನು ವಿದ್ಯಾರ್ಥಿಗಳು ಚಾರ್ಮಾಡಿಯ ಯುವಕರಿಗೆ ತಿಳಿಸಿ ಬಸ್ ಅಡ್ಡ ಹಾಕುವಂತೆ ಸೂಚಿಸಿದ್ದಾರೆ.ಈ ವಿಚಾರವನ್ನು ಬಸ್ಸಿನಲ್ಲಿದ್ದವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ತಕ್ಷಣ ಧರ್ಮಸ್ಥಳ ಠಾಣಾ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಡಿ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಬಸ್ ನಿಲ್ಲಿಸುವಂತೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.ಅದರೆ ಚೆಕ್ ಪೋಸ್ಟ್ ನಲ್ಲಿ ಬಸ್ ತಡೆದು ಹೆಚ್ಚಿನ ಗಲಾಟೆ ಅಗದಂತೆ ನೋಡಿಕೊಂಡಿದ್ದರು.ಈ ವೇಳೆ ಅಲ್ಲಿಗೆ ಆಗಮಿಸಿದ ಯುವಕರ ತಂಡ ಕಂಡೆಕ್ಟರ್ ನಲ್ಲಿ ಗಲಾಟೆ ಮಾಡಿದೆ. ಈ ವೇಳೆ ಕಂಡೆಕ್ಟರ್ ಪರವಾಗಿ ಮಾತನಾಡಿದ ಬಸ್ ಪ್ರಯಾಣಿಕರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದು. ಅದಲ್ಲದೇ ವಿಡಿಯೋ ಮಾಡುತಿದ್ದ ವ್ಯಕ್ತಿಯೊಬ್ಬರಿಗೆ ಹಲ್ಲೆಗೈದಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕದ ಡಿಪೋ ಗೆ ಸೇರಿದ ಸರಕಾರಿ ಬಸ್ ಕಂಡಕ್ಟರ್ ಶಿವಕುಮಾರ್.ಕೆ.ಎಮ್ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ದುರ್ವತ್ರನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸಂಬಂಧ ಪ್ರಕರಣ ದಾಖಲಾಯಿಸಿದ್ದು.ಅದರಂತೆ ಅಪರಿಚಿತರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ 143.147.353.341.504.506 149 i ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು

ಪ್ರಕರಣದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳಾದ  ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮೇಗಿನ ಮನೆ ನಿವಾಸಿ ಅಬೂಬಕ್ಕರ್ ಅವರ ಮಗ ಮಹಮ್ಮದ್ ಶಬೀರ್(21) ,ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮೇಗಿನ ಮನೆ ನಿವಾಸಿ ಅಬೂಬಕ್ಕರ್ ಅವರ ಮಗ ಮಹಮ್ಮದ್ ಮಹಾರೂಫ್(22), ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪಾಂಡಿಕಟ್ಟೆ ನಿವಾಸಿ ಮೊಹಮ್ಮದ್ ಅವರ ಮಗ ಮಹಮ್ಮದ್ ಮುಬಶೀರ್ (23) ಎಂಬವರನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ಜೂನ್ 18 ರಂದು ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಪ್ರಕರಣದಲ್ಲಿ ಉಳಿದ ಆರೋಪಿಗಳಿಗಾಗಿ ಧರ್ಮಸ್ಥಳ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಸುಳ್ಯ : ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಪಕ್ಷದ ಚಟುವಟಿಕೆ ಸ್ಥಗಿತಗೊಳಿಸಲು ನಿರ್ಧಾರ

Posted by Vidyamaana on 2024-02-04 18:30:52 |

Share: | | | | |


ಸುಳ್ಯ : ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಪಕ್ಷದ ಚಟುವಟಿಕೆ ಸ್ಥಗಿತಗೊಳಿಸಲು ನಿರ್ಧಾರ

ಸುಳ್ಯ :ಬಿಜೆಪಿ ಮಂಡಲ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನಲೆಯಲ್ಲಿ ಹಾಲಿ ಇರುವ ಮಂಡಲ ಸಮಿತಿ ಹಾಗೂ ಕೋರ್ ಕಮಿಟಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ಪಕ್ಷದ ಪ್ರಮುಖರು ಸಭೆ ನಡೆಸಿದ್ದಾರೆ.ಕೋರ್ ಕಮಿಟಿ ಶಿಫಾರಸ್ಸು ಮಾಡಿದವರನ್ನು ಅಧ್ಯಕ್ಷರನ್ನಾಗಿ ಮಾಡದಿರುವುದು ಸುಳ್ಯದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿದ್ದು ಇಂದು ಕ್ಷೇತ್ರದ ಬಿಜೆಪಿ ಪ್ರಮುಖರ ಸಭೆ ಬಿಜೆಪಿ ಮಂಡಲ ಸಮಿತಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕ್ಷೇತ್ರದ ಪ್ರಮುಖರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಮಂಡಲ ಸಮಿತಿಯಿಂದ ಅಧ್ಯಕ್ಷ ಸ್ಥಾನಕ್ಕೆ ವಿನಯ ಮುಳುಗಾಡು ಅವರ ಹೆಸರನ್ನು ಜಿಲ್ಲಾ ಸಮಿತಿಗೆ ಕಳುಹಿಸಲಾಗಿತ್ತು. ಆದರೆ ಪಟ್ಟಿಯಲ್ಲಿ ಇಲ್ಲದ ವೆಂಕಟ್ ವಳಲಂಬೆಯವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷದಲ್ಲಿ ತಲೆದೋರಿರುವ ಭಿನ್ನಮತ ವಿಚಾರ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ

BREAKING : ವೈದ್ಯೆ ಮೇಲೆ ಅತ್ಯಾಚಾರ ಆರೋಪ : ಯೋಗಗುರು ಪ್ರದೀಪ್ ಅರೆಸ್ಟ್!

Posted by Vidyamaana on 2024-09-02 08:54:46 |

Share: | | | | |


BREAKING : ವೈದ್ಯೆ ಮೇಲೆ ಅತ್ಯಾಚಾರ ಆರೋಪ : ಯೋಗಗುರು ಪ್ರದೀಪ್ ಅರೆಸ್ಟ್!

ಚಿಕ್ಕಮಗಳೂರು : ಎನ್ ಆರ್ ಐ ವೈದ್ಯೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಯೋಗ ಗುರು ಪ್ರದೀಪ್ ನನ್ನು ಪೊಲೀಸರು ಬಂಧಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿರುವ ಆಶ್ರಮದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ಎನ್ ಆರ್ ವೈದ್ಯೆಯೊಬ್ಬರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಯೋಗಗುರು ಪ್ರದೀಪ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಶಾಸಕರ ಇಂದಿನ ಕಾರ್ಯಕ್ರಮ

Posted by Vidyamaana on 2023-05-26 03:40:35 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ

ಪುತ್ತೂರು: ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಶಾಸಕ ಅಶೋಕ್ ಕುಮಾರ್ ರೈ ಅವರು ಹೆಜ್ಜೆ ಮುಂದಿಟ್ಟಿದ್ದಾರೆ.

ಬೆಳಿಗ್ಗೆ 10.30 ಕ್ಕೆ ನಗರಸಭೆಯಲ್ಲಿ ಅಧಿಕಾರಿಗಳ ಸಭೆ ಬಳಿಕ ಕಂದಾಯ ಕಚೇರಿ ಮಿನಿ ವಿಧಾನ ಸೌಧ ಭೇಟಿ

ಭ್ರಷ್ಟಾಚಾರವನ್ನು ತಡೆಯಬೇಕು, ಜನಸಾಮಾನ್ಯರಿಗೆ ಇಲಾಖೆಯಲ್ಲಿ ತೊಂದರೆ ಆಗಬಾರದು, ಇಲಾಖೆಗಳು ಜನಸ್ನೇಹಿಯಾಗಿ ಮೂಡಿಬರಬೇಕು ಎನ್ನುವ ದೂರದೃಷ್ಟಿಯಿಟ್ಟುಕೊಂಡು ಶಾಸಕ ಅಶೋಕ್ ಕುಮಾರ್ ರೈ ಅವರು ಶುಕ್ರವಾರ ತಾಲೂಕಿನ ಇಲಾಖೆಗಳಿಗೆ ಭೇಟಿ ನೀಡಲಿದ್ದಾರೆ.

ಇದುವರೆಗೆ ಇಲಾಖಾ ಅಧಿಕಾರಿ, ಸಿಬ್ಬಂದಿಗಳನ್ನು ಜನಪ್ರತಿನಿಧಿ, ಶಾಸಕರು ತಮ್ಮ ಬಳಿಗೆ ಕರೆಸಿಕೊಂಡಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿ ಎಂಬಂತೆ ಸ್ವತಃ ಶಾಸಕರೇ ಇಲಾಖಾ ಭೇಟಿ ನಡೆಸುತ್ತಿದ್ದಾರೆ. ಇದು ಶಾಸಕರ ಮುಂದಿನ ತಮ್ಮ ದೂರದೃಷ್ಟಿತ್ವದ ಯೋಜನೆಗಳನ್ನು ಜಾರಿಗೆ ತರಲು ಹಾಕಿಕೊಂಡ ಮೊದಲ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Recent News


Leave a Comment: