ಸುಳ್ಯ : ಶಾಲಾ ಆವರಣದಲ್ಲಿ ಕೊಲೆ ಪ್ರಕರಣ; ಆರೋಪಿ ಕಡಬ ಮೂಲದ ಉದಯ ಕುಮಾರ ಬಂಧನ

ಸುದ್ದಿಗಳು News

Posted by vidyamaana on 2024-06-18 16:47:47 |

Share: | | | | |


 ಸುಳ್ಯ : ಶಾಲಾ ಆವರಣದಲ್ಲಿ ಕೊಲೆ ಪ್ರಕರಣ; ಆರೋಪಿ ಕಡಬ ಮೂಲದ ಉದಯ ಕುಮಾರ ಬಂಧನ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಡಬ ತಾಲೂಕಿನ ಎಡಮಂಗಲದ ಉದಯ ಕುಮಾರ್ ನಾಯ್ಕ್ (35) ಬಂಧಿತ ಆರೋಪಿ.ರವಿವಾರ ರಾತ್ರಿ ವಿರಾಜಪೇಟೆಯ ವಸಂತ (45) ಎಂಬ ವ್ಯಕ್ತಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಉದಯ ಕುಮಾರ್ ಗೆ ಬಾರೊಂದರಲ್ಲಿ ವಸಂತ ಎಂಬಾತನ ಪರಿಚಯವಾಗಿದ್ದು, ರವಿವಾರ ರಾತ್ರಿ ಕಾಂತಮಂಗಲಕ್ಕೆ ಅಟೋ ರಿಕ್ಷಾದಲ್ಲಿ ಬಂದು ಶಾಲಾ ಜಗಲಿಯಲ್ಲಿ ಮಲಗಿದ್ದರು. ವಸಂತ ಎಂಬವರ ಬಳಿ 800

ರೂ. ಹಣ ಇರುವುದನ್ನು ಗಮನಿಸಿ ಉದಯ ಆತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಕೊಲೆ ಮಾಡಿದ ಬಳಿಕ ಬೆಳಿಗ್ಗೆ ಹಣ ಹಾಗೂ ಮೊಬೈಲ್ ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದರು. ತನಿಖೆಗಿಳಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯೂ ಮನೆಗೆ ತೆರಳದೇ ಎಲ್ಲಂದರಲ್ಲಿ ಇರುತ್ತಿದ್ದುದು ಬೆಳಕಿಗೆ ಬಂದಿತ್ತು.

ಎಸ್.ಪಿ.ರಿಷ್ಯಂತ್ ಸಿ.ಬಿ., ಎ.ಎಸ್.ಪಿ. ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ ನೇತೃತ್ವದಲ್ಲಿ ಪುತ್ತೂರು ಇನ್ಸ್ ಪೆಕ್ಟರ್ ಸತೀಶ್ ಜೆ.ಜೆ., ಸುಳ್ಯ ಎಸೈ ಮಹೇಶ್, ಸುಬ್ರಹ್ಮಣ್ಯ ಎಸೈ ಕಾರ್ತಿಕ್, ಸಿಬ್ಬಂದಿಗಳಾದ ಉದಯ್ ಗೌಡ, ಪ್ರಕಾಶ್, ಉದಯ್, ಅನಿಲ್ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 Share: | | | | |


ಜೂ 8 :ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿ.ವಿ ಪದವಿ ಕಾಲೇಜುಗಳ ಅಂತರ್-ಕಾಲೇಜು ಫೆಸ್ಟ್.

Posted by Vidyamaana on 2023-06-08 03:58:28 |

Share: | | | | |


ಜೂ 8 :ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿ.ವಿ ಪದವಿ ಕಾಲೇಜುಗಳ ಅಂತರ್-ಕಾಲೇಜು ಫೆಸ್ಟ್.

ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಕಾಲೇಜುಗಳ ಅಂತರ್-ಕಾಲೇಜು ಮ್ಯಾನೇಜ್ಮೆಂಟ್ ಹಾಗೂ ಸಾಂಸ್ಕೃತಿಕ ಫೆಸ್ಟ್ ‘ಕೃತ್ವ ‘ಜೂ.8 ರಂದು ಕಾಲೇಜಿನಲ್ಲಿ ಜರಗಲಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಫೈನಾನ್ಸ್ ಆಫೀಸರ್ ಪ್ರೊ|ವೈ ಸಂಗಪ್ಪರವರು ಫೆಸ್ಟ್ ಅನ್ನು ದೀಪ ನ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮಾಜಿ  ಕಾರ್ಪೋರೇಟರ್ ಹಾಗೂ ಕುಳಾಯಿ ಫೌಂಡೇಶನ್ ನ ಸ್ಥಾಪಕರು, ಅಧ್ಯಕ್ಷರೂ ಆಗಿರುವ ಪ್ರತಿಭಾ ಕುಳಾಯಿ, ಪುತ್ತೂರು ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ವೈ ನರೇಂದ್ರ ರೆಡ್ಡಿರವರು ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರಿನ ವಿಝ್ಡಮ್ ಎಡ್ ನ ಡಾ|ಗುರು ತೇಜ್, ಪುತ್ತೂರು ಸ್ನೇಹ ಸಿಲ್ಕ್ಸ್ ನ ಮಾಲಕ ಸತೀಶ್ ಎಸ್.ರವರು ಭಾಗವಹಿಸಲಿದ್ದಾರೆ ಎಂದು ಅಕ್ಷಯ ಕಾಲೇಜಿನ ಫೆಸ್ಟ್ ಇದರ ಸಂಯೋಜಕ ರಕ್ಷಣಾ ಟಿ.ಆರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಗನ್ ದೀಪ್ ಎ.ಬಿ, ಕಾರ್ಯದರ್ಶಿ ಲಿಖಿತ್ ಎ.ವಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

35 ಕಾಲೇಜುಗಳು ಭಾಗವಹಿಸುವ ನಿರೀಕ್ಷೆ

ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ಪದವಿ ಕಾಲೇಜುಗಳ ಅಂತರ್-ಕಾಲೇಜು ಸ್ಪರ್ಧಾಕೂಟ ಇದಾಗಿದ್ದು ಸುಮಾರು 30 ರಿಂದ 35 ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಈ ಸ್ಪರ್ಧಾಕೂಟದಲ್ಲಿ ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಫೈನಾನ್ಸ್, ಸಮೂಹ ನೃತ್ಯ, ಮೂವೀ ಸ್ಪೂಫ್, ಸ್ಟೋರಿ ಬಿಲ್ಡಿಂಗ್, ಮಲ್ಟಿ ಟಾಸ್ಕಿಂಗ್, ಪಾಟ್ ಡೆಕೋರೇಶನ್, ಫ್ಯಾಶನ್ ಶೋ, ಟ್ಯಾಟ್ಯೂಯಿಂಗ್, ಡ್ರಾಯಿಂಗ್, ಫೇಸ್ ಆಫ್ ಕೃತ್ವ  ಹೀಗೆ  ಒಟ್ಟು 12 ಇವೆಂಟ್ ಗಳನ್ನು ಫೆಸ್ಟ್ ಹೊಂದಿದೆ

8.30 ಕೋಟಿ ಮೌಲ್ಯದ ನೋಟುಗಳ ಮಳೆ!

Posted by Vidyamaana on 2023-10-27 08:42:15 |

Share: | | | | |


8.30 ಕೋಟಿ ಮೌಲ್ಯದ ನೋಟುಗಳ ಮಳೆ!

ಪ್ರೇಗ್‌: ನೋಡ ನೋಡುತ್ತಿದ್ದಂತೆಯೇ ಆಗಸದಲ್ಲಿ ನೋಟಿನ ಮಳೆಯಾದರೆ ಏನು ಮಾಡುತ್ತೀರಿ? ಆಗಲು ಸಾಧ್ಯವೇ ಇಲ್ಲ ಬಿಡಿ ಎಂದು ಯೋಚಿಸುತ್ತಿದ್ದೀರಾ? ಚೆಕ್‌ ಗಣರಾಜ್ಯದಲ್ಲಿ ಇಂಥ  ಘಟನೆ ನಡೆ ದೇಬಿಟ್ಟಿದೆ. ಕಮಿಲ್‌ ಬಟೋಶೆಕ್‌ (ಕಜ್ಮಾ) ಎಂಬ ಟಿ.ವಿ. ನಿರೂಪಕರೊಬ್ಬರು ಹೆಲಿಕಾಪ್ಟರ್‌ ಮೂಲಕ ನೋಟುಗಳ ಮಳೆಯನ್ನೇ ಸುರಿಸಿದ್ದಾರೆ!ಆರಂಭದಲ್ಲಿ ಕಜ್ಮಾ ತಮ್ಮ ಸಿನೆಮಾ “ಒನ್‌ ಮ್ಯಾನ್‌ ಶೋ: ದಿ ಮೂವಿ’ ಯಲ್ಲಿ ಅಡಗಿರುವ ಕೋಡ್‌ವೊಂದರ ಅರ್ಥ ವಿವರಿಸುವ ಸ್ಪರ್ಧೆ ಆಯೋಜಿಸಿದ್ದರು. ಅದರಲ್ಲಿ ಗೆದ್ದ ವ ರಿಗೆ 8.30 ಕೋಟಿ ರೂ. ಬಹು ಮಾನವನ್ನೂ ಘೋಷಿಸಿದ್ದರು. ಆದರೆ, ಸ್ಪರ್ಧ ಕಷ್ಟವಾಗಿದ್ದ ಕಾರಣ ನೋಂದಣಿ ಮಾಡಿಕೊಂಡವರಲ್ಲಿ ಯಾರಿ ಗೂ ಗೆಲ್ಲಲು ಆಗಲಿಲ್ಲ. ಹೀಗಾ ಗಿ, ಕಜ್ಮಾ ಬಹುಮಾನದ ಮೊತ್ತವನ್ನು ಸ್ಪರ್ಧಾಕಾಂಕ್ಷಿಗಳಿಗೇ ಹಂಚಲು ನಿರ್ಧರಿಸಿದ್ದಾರೆ.


ಅದರಂತೆ, ಅವರೆಲ್ಲರಿಗೂ ಇಮೇಲ್‌ ಕಳುಹಿಸಿ, ಹಣ ಪಡೆಯಲು ಲೈಸಾ ಮತ್ತು ಲ್ಯಾಬೆಮ್‌ ಪ್ರದೇಶದ ಸಮೀಪದ ಹೊಲಕ್ಕೆ ಬರುವಂತೆ ಸೂಚಿಸಿದ್ದಾರೆ. ಹೇಳಿದ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್‌ನಲ್ಲಿ ಬಂದು ಕಜ್ಮಾ 8.30 ಕೋಟಿ ರೂ. ಮೊತ್ತದ ನೋಟುಗಳನ್ನು ಕೆಳಕ್ಕೆ ಎಸೆದಿದ್ದಾರೆ. ದೊಡ್ಡ ದೊಡ್ಡ ಚೀಲಗಳು, ಛತ್ರಿಗಳನ್ನು ಹಿಡಿದುಕೊಂಡು ಬಂದಿದ್ದ ಜನ, ನೋಟುಗಳ ಮಳೆಯಾಗುತ್ತಿದ್ದಂತೆ ಎಷ್ಟು ಸಾಧ್ಯವೋ ಅಷ್ಟನ್ನೂ ಬಾಚಿಕೊಂಡಿದ್ದಾರೆ!

ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಂಗಳಿಂದ ಬಿಜೆಪಿ ಅಸ್ತಿತ್ವಕ್ಕೇ ಗ್ಯಾರಂಟಿ’ ಇಲ್ಲದಾಗಿದೆ

Posted by Vidyamaana on 2023-09-14 04:35:30 |

Share: | | | | |


ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಂಗಳಿಂದ ಬಿಜೆಪಿ ಅಸ್ತಿತ್ವಕ್ಕೇ ಗ್ಯಾರಂಟಿ’ ಇಲ್ಲದಾಗಿದೆ

ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಕಾರಣಕ್ಕೆ ಬಿಜೆಪಿ ತತ್ತರಿಸಿಹೋಗಿದ್ದು ಅಸ್ತಿತ್ವ ಉಳಿಸುದಕ್ಕೋಸ್ಕರ ಪ್ರತಿಭಟನೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದ್ದಾರೆ.

ಸೆ. ೧೩ ರಂದು ಪುತ್ತೂರಿನಲ್ಲಿ ರಾಜ್ಯ ಸರಕಾರದ ವಿರುದ್ದ ಪುತ್ತೂರು ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ ಬ್ಲಾಕ್ ಅಧ್ಯಕ್ಷರು ಇದು ಪ್ರತಿಭಟನೆಗೋಸ್ಕರ ನಡೆದ ಪ್ರತಿಭಟನೆಯಾಗಿದೆ, ಪುತ್ತೂರಿನಲ್ಲಿ ಬಿಜೆಪಿಗೆ ಉಳಿಗಾಲವಿಲ್ಲದಂತ ಪರಿಸ್ಥಿತಿ ಇದೆ, ಕಾರ್ಯಕರ್ತರಿಲ್ಲದೆ ಬಿಜೆಪಿ ಕಂಗಾಲಾಗಿದೆ, ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನತೆ ನೆಮ್ಮದಿಯಿಂದ ಇದ್ದಾರೆ ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಈ ಪ್ರತಿಭಟನಾ ನಾಟಕ ಇಂದು ಪ್ರದರ್ಶನವಾಗಿದೆ ವಿನ ಅವರು ಮಡಿದ ಆರೋಪದಲ್ಲಿ ಎಳ್ಳಷ್ಟು ಸತ್ಯವಿಲ್ಲ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ಸರಕರದ ಗ್ಯಾರಂಟಿ ಯೋಜನೆಯ ಫಲವಾಗಿ ಇಂದು ರಾಜ್ಯಾದ್ಯಂತ ಬಿಜೆಪಿ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಕುಟುಂಬಕ್ಕೆ ಸೇರ್ಪಡೆಯಗುತ್ತಿದ್ದಾರೆ ಇದೆಲ್ಲವೂ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬಿಜೆಪಿಗರು ಬೆಚ್ಚಿ ಬಿದ್ದಿದ್ದಾರೆ ಅದರ ಪರಿಣಾಮವೇ ಇಂದು ನಡೆದ ಪ್ರತಿಭಟನೆಯಾಗಿದೆ ಎಂದು ಎಂ ಬಿ ವಿಶ್ವನಾಥ ರೈ ಹೇಳಿದ್ದಾರೆ.

ಇಂದು (ಜೂ 18) ಶಾಸಕ ಅಶೋಕ್ ಕುಮಾರ್ ರೈರವರಿಗೆ ಹುಟ್ಟೂರ ಸನ್ಮಾನ

Posted by Vidyamaana on 2023-06-18 03:26:18 |

Share: | | | | |


ಇಂದು (ಜೂ 18) ಶಾಸಕ ಅಶೋಕ್ ಕುಮಾರ್ ರೈರವರಿಗೆ  ಹುಟ್ಟೂರ ಸನ್ಮಾನ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈರವರಿಗೆ ಹೂಟ್ಟೂರ ಸನ್ಮಾನ ಕಾರ್ಯಕ್ರಮ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ ಜೂ.18ರಂದು ಸಂಜೆ 6.30ಕ್ಕೆ ಜರಗಲಿದೆ. ಈ ಸಂದರ್ಭದಲ್ಲಿ ಶ್ರೀಮಹಿಷಮರ್ದಿನಿ ದೇವರಿಗೆ ವಿಶೇಷ ಪೂಜೆ ನಡೆಯಲಿದ್ದು ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ವ್ಯವಸ್ಥೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಡಬ: ಟ್ಯೂಶನ್ ಗೆ ತೆರಳಿದ ಬಾಲಕ ನಾಪತ್ತೆ ಪ್ರಕರಣ ಕುಮಾರಧಾರ ನದಿಯಲ್ಲಿ ಅದ್ವೈತ್ ಮೃತದೇಹ ಪತ್ತೆ

Posted by Vidyamaana on 2023-03-30 07:51:57 |

Share: | | | | |


ಕಡಬ: ಟ್ಯೂಶನ್ ಗೆ ತೆರಳಿದ ಬಾಲಕ ನಾಪತ್ತೆ ಪ್ರಕರಣ  ಕುಮಾರಧಾರ ನದಿಯಲ್ಲಿ ಅದ್ವೈತ್ ಮೃತದೇಹ ಪತ್ತೆ

ಕಡಬ: ಟ್ಯೂಷನ್ ಗೆಂದು, ಮನೆಯಿಂದ ತೆರಳಿದ್ದ ಹತ್ತನೇ ತರಗತಿಯ ಬಾಲಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಕುಮಾರಧಾರ ನದಿಯ ನಾಕೂರು ಗಯದಲ್ಲಿ ಪತ್ತೆಯಾಗಿದ್ದು ಅಗ್ನಿ ಶಾಮಕ ದಳದವರು ಶವ ಮೇಲಕ್ಕೆತ್ತಿದ್ದಾರೆ.ಕಡಬದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಅದ್ವೈತ್ ಎಂಬಾತ ಮಾ.29ರಂದು ಟ್ಯೂಷನ್ ಗೆಂದು ತೆರಳಿದ್ದು ಬಳಿಕ ಮನೆಗೆಬಾರದೆ ನಾಪತ್ತೆಯಾಗಿದ್ದ.

ಮನೆಯವರು ಹಾಗೂ ಊರವರು ಸೇರಿಕೊಂಡು ಹುಡುಕಾಡಿದಾಗ ಬಾಲಕನ ಬ್ಯಾಗ್ ಹಾಗೂ ಐಡಿ ಕಾರ್ಡ್ ಕುಮಾರಧಾರ ನದಿಯ ನಾಕೂರು ಗಯ ಎಂಬಲ್ಲಿಪತ್ತೆಯಾಗಿದ್ದು ಅನುಮಾನಕ್ಕೆಕಾರಣವಾಗಿತ್ತು.

ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಸುದ್ದಿಗೋಷ್ಠಿ ಮುಂದೂಡಿಕೆ

Posted by Vidyamaana on 2024-03-19 11:48:44 |

Share: | | | | |


ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಸುದ್ದಿಗೋಷ್ಠಿ ಮುಂದೂಡಿಕೆ

ಬೆಂಗಳೂರು: ಇಂದು ನಿಗದಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಸುದ್ದಿಗೋಷ್ಠಿ ಮುಂದೂಡಲ್ಪಟ್ಟಿದೆ.

ಬೆಂಗಳೂರಿನಲ್ಲಿ ಇಂದು ಸದಾನಂದ ಗೌಡ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಜೊತೆ ಚರ್ಚೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮುಂದೂಡಲಾಗಿದೆ ಎಂದು ಹೇಳಲಾಗಿದೆ.



Leave a Comment: