ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ರಾಜ್ಯಾಧ್ಯಂತ ಕಲರ್‌ ಕಾಟನ್‌ ಕ್ಯಾಂಡಿ ನಿಷೇಧ- ಸಚಿವ ದಿನೇಶ್ ಗುಂಡೂರಾವ್ ಘೋಷಣೆ

Posted by Vidyamaana on 2024-03-11 12:58:02 |

Share: | | | | |


ರಾಜ್ಯಾಧ್ಯಂತ ಕಲರ್‌ ಕಾಟನ್‌ ಕ್ಯಾಂಡಿ ನಿಷೇಧ- ಸಚಿವ ದಿನೇಶ್ ಗುಂಡೂರಾವ್ ಘೋಷಣೆ

ಗಳೂರು:ರಾಜ್ಯಾಧ್ಯಂತ ಕಾಟನ್‌ ಕ್ಯಾಂಡಿ ನಿಷೇಧ ಮಾಡಲಾಗಿದೆ ಅಂತ ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ಅವರು ಹೇಳಿದರು. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಅವರು ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ವಿವಿಧ ಕಡೆಗಳಲ್ಲಿ ಎರಡು ಪದಾರ್ಥಗಳಲ್ಲಿ ನ ಸ್ಯಾಂಪಲ್‌ಗಳನ್ನು ಸಂಗ್ರಹಿಸ ಮಾಡಲಾಯಿತು.ಗೋಬಿ ಮಂಚೂರಿಯ 121 ಮಾದರಿಯನ್ನು ಸಂಗ್ರಹ ಮಾಡಲಾಯಿತು. ಇದಲ್ಲದೇ ಇದರಲ್ಲಿ ಎರಡು ವಿಶಕಾರಿ ಅಂಶಗಳು ಪತ್ತೆಯಾಗಿದ್ದು, ಇದರಿಂದ ಇದರ ಸೇವನೆ ಮಾಡುವುದು ಯೋಗ್ಯವಲ್ಲ ಅಂತ ಹೇಳಿದರು. ಇದನ್ನು ದಿನ ನಿತ್ಯ ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಂಭವಿದೆ ಅಂಥ ಹೇಳಿದರು. ಇದನ್ನು ಬಳಕೆ ಮಾಡುವುದು ಕಾನೂನು ಬಾಹಿರ ಅಂಥ ಹೇಳಿದರು.


ಮಾದರಿಗಳನ್ನು ಬೇರೆ ಬೇರೆ ಕಡೆ ಸಂಗ್ರಹಿಸಲಾಗಿತ್ತು. 171 ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಕೃತಕ ಬಣ್ಣಗಳ ಅಸುರಕ್ಷಿತ ಮಾದರಿಯನ್ನು ಪತ್ತೆ ಹಚ್ಚಿರೋದು 107 ಇದೆ. ಸೋ ಗೋಬಿ ಮಂಚೂರಿನೂ ಮಾಡಿದ್ದೇವೆ, ಕ್ಯಾಂಡಿಯನ್ನೂ ಮಾಡಿದ್ದೇವೆ ಎಂದರು.


ಒಂದು ರೋಡಮೈನ್ ಬೀ, ಇನ್ನೊಂದು ಟಾಟ್ರಾಸೈನ್ ಅಂತ ಅದು ಇವತ್ತು ನಾವು ಈ ಒಂದು ಪದಾರ್ಥಗಳಲ್ಲಿ, ನಮ್ಮ ಸ್ಯಾಂಪಲ್ಲಿನಲ್ಲಿ ಸಿಕ್ಕಿದೆ. ಇದು ನಮ್ಮ ಉಪಯೋಗಕ್ಕೆ ಅನ್ ಸೇಫ್. ರೋಡಮೈನ್ ಬೀ ಕ್ಯಾನ್ಸರ್ ಗೆ ಬರೋದಕ್ಕೆ ಒಂದು ರೀತಿ ಕಾರಣವಾಗುತ್ತದೆ. ಈ ಕೆಮಿಕಲ್ ಅವಕಾಶ ಮಾಡಿಕೊಡುತ್ತದೆ. ವಿಶೇಷವಾಗಿ ಈ ಬಣ್ಣವನ್ನು ಯೂಸ್ ಮಾಡುವ ಹಾಗೋ ಇಲ್ಲ. ಯಾವ ಪದಾರ್ಥಗಳಲ್ಲೂ ಯೂಸ್ ಮಾಡೋ ಹಾಗೇಇಲ್ಲ. ಹಾಗಿದ್ದರೂ ಅದನ್ನು ಸ್ಯಾಂಪಲ್ ಗಳಲ್ಲಿ ಪರೀಕ್ಷೆಯಲ್ಲಿ ಬಳಕೆ ಮಾಡಿರೋದು ಕಂಡು ಬಂದಿದೆ ಎಂದರು.


ಯಾಕೆ ರೋಡಮೈನ್ ಬೀ ಬಳಕೆ ಮಾಡುತ್ತಾರೆ ಅಂದರೇ ಪಿಂಕ್ ಕಲರ್ ಬರೋದಕ್ಕೆ ಬಳಕೆ ಮಾಡುತ್ತಾರೆ. ಈಗ ನಮ್ಮ ಆರೋಗ್ಯ ಇಲಾಖೆಯ ಆಯುಕ್ತರು ಕೂಡ ಸುತ್ತೋಲೆ ಹೊರಡಿಸುತ್ತಾರೆ. ಅದನ್ನು ಬಳಕೆ ಮಾಡುವಂತಿಲ್ಲ. ಬಳಕೆ ಮಾಡಿದ್ರೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


ಗೋಬಿ ಮಂಚೂರಿ ಇದೊಂದು ಪುಡ್ ಐಟಂ. ಟಾಟ್ರಾಸೈನ್ ಏನಿದೆ ಅದು ಅಪ್ರೂವ್ಡ್ ಆರ್ಟಿಫಿಷಲ್ ಪುಡ್ ಕಲ್ಲರ್. ಕೆಮಿಕಲ್ ಬಳಕೆ ಮಾಡದಂತ ಗೋಬಿಮಂಚೂರಿಯನ್ನು ಬಳಕೆಗೆ ಅವಕಾಶ ನೀಡಲಾಗುತ್ತದೆ. ವಿತ್ ಔಟ್ ಕಲರ್ ಬಳಕೆ ಮಾಡಿರದ ಕ್ಯಾಂಡಿಯನ್ನು ಬಳಕೆ ಮಾಡೋದಕ್ಕೆ ಅವಕಾಶ ನೀಡಲಾಗುತ್ತದೆ. ಅದರ ಹೊರತಾಗಿ ಕಲರ್ ಬಳಕೆ ಮಾಡುವಂತ ಗೋಬಿಮಂಚೂರಿ, ಕ್ಯಾಂಡಿ ನಿಷೇಧ ಮಾಡಲಾಗುತ್ತಿದೆ ಎಂಬುದಾಗಿ ಘೋಷಣೆ ಮಾಡಿದರು

ನನ್ನ ಬೂತ್ ನಾನೇ ಅಭ್ಯರ್ಥಿ ಕಾಂಗ್ರೆಸ್ಸಿನಿಂದ ವಿಶೇಷ ಅಭಿಯಾನ

Posted by Vidyamaana on 2023-05-07 06:52:22 |

Share: | | | | |


ನನ್ನ ಬೂತ್ ನಾನೇ ಅಭ್ಯರ್ಥಿ ಕಾಂಗ್ರೆಸ್ಸಿನಿಂದ ವಿಶೇಷ ಅಭಿಯಾನ

ಪುತ್ತೂರು: ಮೇ 10ರ೦ದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನೇನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪರವಾಗಿ ಮೇ 6ರಂದು ನನ್ನ ಬೂತ್ ನಾನೇ ಅಭ್ಯರ್ಥಿ ವಿಶೇಷ ಅಭಿಯಾನ ನಡೆಯಿತು.


ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 220 ಬೂತ್‌ಗಳಿಗೂ ಒಂದೇ ದಿನ ತೆರಳಿ ಅಭ್ಯರ್ಥಿ ಪರ ಮತಯಾಚಿಸಿದರು. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಗ್ಯಾರೆಂಟಿಗಳ ಭರವಸೆ, ಪಕ್ಷ ಮಾಡಿರುವ ಸಾಧನೆ ಮತ್ತು ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಮಾಡಿರುವ ಜನ ಸೇವೆ ಇತ್ಯಾದಿಗಳ ಕುರಿತು ಮತದಾರರಿಗೆ ಮಾಹಿತಿ ನೀಡಿದ ಪಕ್ಷದ ಕಾರ್ಯಕರ್ತರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಪುತ್ತೂರಿನ ಸರ್ವಾಂಗೀಣ ಅಭಿವೃದ್ಧಿಗೆ ಆಶೀರ್ವದಿಸುವಂತೆ ಕೋರಿದರು.

ಕರಾವಳಿಗೆ ರೆಡ್ ಅಲರ್ಟ್ ಘೋಷಣೆ

Posted by Vidyamaana on 2023-07-04 21:16:49 |

Share: | | | | |


ಕರಾವಳಿಗೆ ರೆಡ್ ಅಲರ್ಟ್ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು.5ರ ವರೆಗೆ ರೆಡ್ ಅಲಟ್೯ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜು.5ರಂದು ರಜೆ ಘೋಷಿಸಲಾಗಿದೆ.


ಇದಲ್ಲದೆ, ನೀರು ಇರುವ ತಗ್ಗು ಪ್ರದೇಶ ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸುವುದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯ ಕೈಗೊಳ್ಳಬೇಕು, ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಜಾಗೃತರಾಗಿದ್ದು ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಖಾಸಗಿ ಬಸ್‌ ಆಕ್ಟಿವಾ ಗೆ ಡಿಕ್ಕಿ: ಆಕ್ಟಿವಾ ಸವಾರ ಪರಾರಿ ನಿವಾಸಿ ಧರನೇಂದ್ರ ಮೃತ್ಯು

Posted by Vidyamaana on 2024-02-04 19:35:22 |

Share: | | | | |


ಖಾಸಗಿ ಬಸ್‌ ಆಕ್ಟಿವಾ ಗೆ ಡಿಕ್ಕಿ: ಆಕ್ಟಿವಾ ಸವಾರ ಪರಾರಿ ನಿವಾಸಿ ಧರನೇಂದ್ರ  ಮೃತ್ಯು

ಬೆಳ್ತಂಗಡಿ: ಖಾಸಗಿ ಬಸ್ಸಿನ ವೇಗದ ಅವಂತಾರದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರು ಎಳೆದುಕೊಂಡ ಹೋದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿ ಸಮೀಪ ಫೆ.4 ರಂದು(ಇಂದು) ಸಂಜೆ ನಡೆದಿದೆ. 



ಮೃತಪಟ್ಟ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಧರಣೇಂದ್ರ (24) ಎನ್ನಲಾಗಿದೆ. ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತಿದ್ದ ವೇಳೆ ಬೆಳ್ತಂಗಡಿ ಕಡೆಗೆ ವೇಗವಾಗಿ ಬರುತಿದ್ದ ಶ್ರೀ ದುರ್ಗಾ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ನಂತರ ಸ್ವಲ್ಪ ದೂರ ಸ್ಕೂಟರ್ ಸಮೇತ ಬಸ್ ಎಳೆದುಕೊಂಡು ಹೋಗಿದೆ. 


ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗೊಂಡಿದ್ದು.ತಕ್ಷಣ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಮನೆ ಮನೆಗೆ ಬಂದು ಅನಿಲ ಸುರಕತೆಯ ತಪಾಸಣೆ ಕಡ್ಡಾಯವಲ್ಲ:ಡಿಸಿ

Posted by Vidyamaana on 2023-08-17 04:48:48 |

Share: | | | | |


ಮನೆ ಮನೆಗೆ ಬಂದು ಅನಿಲ ಸುರಕತೆಯ ತಪಾಸಣೆ ಕಡ್ಡಾಯವಲ್ಲ:ಡಿಸಿ

ಪುತ್ತೂರು:ಎಚ್‌.ಪಿ.ಗ್ಯಾಸ್‌ ಏಜೆನ್ಸಿಗಳಿಂದ ತೈಲಕಂಪೆನಿಯ ನಿರ್ದೇಶಾನುಸಾರ ಅನಿಲ ಸುರಕ್ಷತೆಯ ತಪಾಸಣೆಯನ್ನು ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯಗೊಳಿಸಲಾಗಿದೆ. ಆದರೆ ಗ್ರಾಹಕರ ಮನೆಗೆ ಬಂದು ಅಡುಗೆ ಅನಿಲ ತಪಾಸಣೆ ಕಡ್ಡಾಯವಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.ಪೆಟ್ರೋಲಿಯಮ್ ಕಂಪೆನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತೆರಳಿ ಅಡುಗೆ ಕೋಣೆಯಲ್ಲಿ ಗ್ಯಾಸ್ ಅನ್ನು ಪರಿಶೀಲಿಸಿ,ಪರಿಶೀಲಿಸಿರುವುದಕ್ಕೆ ಸೇವಾ ಶುಲ್ಕವಾಗಿ ರೂ.236 ಅನ್ನು ತರಬೇಕೆಂದೂ, ರಬ್ಬರ್ ಟ್ಯೂಬ್, ಬದಲಾಯಿಸಬೇಕಾದಲ್ಲಿ ರೂ.190 ಅನ್ನು ನೀಡಬೇಕೆಂಬುದಾಗಿ ತಿಳಿಸಲಾಗಿರುತ್ತದೆ.ಆದರೆ, ಈ ರೀತಿಯ ಅನಿಲ ಸುರಕ್ಷತೆಯ ತಪಾಸಣೆಯು ಗ್ರಾಹಕರಿಗೆ ಕಡ್ಡಾಯವಾಗಿರುವುದಿಲ್ಲ, ಗ್ಯಾಸ್‌ ಏಜೆನ್ಸಿಯವರು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಿ ಗ್ರಾಹಕರು ಬಯಸಿದ್ದೇ ಆದಲ್ಲಿ ಅವರ ಅನುಮತಿ ಮೇರೆಗೆ ಮಾತ್ರ ಗ್ರಾಹಕರ ಮನೆಯೊಳಗೆ ಹೋಗಿ ಅನಿಲ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ.ಸಾರ್ವಜನಿಕರು ತಮ್ಮ ಸುರಕ್ಷತೆಗಾಗಿ ಅಡುಗೆ ಅನಿಲ ತಪಾಸಣೆಯನ್ನು ಕೈಗೊಳ್ಳಬೇಕಾಗಿದ್ದಲ್ಲಿ ತಮ್ಮ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂತಪುರಂ ಎ.ಪಿ ಉಸ್ತಾದ್ ಗೆ ಮಲೇಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

Posted by Vidyamaana on 2023-07-19 17:13:38 |

Share: | | | | |


ಕಾಂತಪುರಂ ಎ.ಪಿ ಉಸ್ತಾದ್ ಗೆ ಮಲೇಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ಕೋಝಿಕ್ಕೋಡ್: ಮಲೇಷ್ಯಾ ಸರಕಾರ ಜಾಗತಿಕ ಇಸ್ಲಾಮಿಕ್ ವಿದ್ವಾಂಸರಿಗೆ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಹಿಜ್ರಾ ಪುರಸ್ಕಾರವನ್ನು ಮಲೇಷ್ಯಾದ ರಾಜ ಅಲ್ ಸುಲ್ತಾನ್ ಅಬ್ದುಲ್ಲಾಹ್ ಅಹ್ಮದ್ ಶಾ ಅವರು ಬುಧವಾರ ಕೌಲಾಲಂಪುರದ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರಾಂಡ್ ಮುಸ್ಲಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ಪ್ರದಾನ ಮಾಡಿದರು.ಪ್ರವಾದಿ ಮುಹಮ್ಮದ್ (ಸ) ಅವರ ಸ್ಮರಣಾರ್ಥ ಇಸ್ಲಾಮಿಕ್ ಕ್ಯಾಲೆಂಡರ್ ನ ಮೊದಲ ದಿನ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಪ್ರಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಕಾಂತಪುರಂ ಎ ಪಿ ಉಸ್ತಾದ್ ಪಾತ್ರರಾಗಿದ್ದಾರೆ. ಇದು ಇಸ್ಲಾಮಿಕ್ ಜಗತ್ತಿನಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು 3 ಎಂಬ ಕೀರ್ತಿಗೆ ಪಾತ್ರವಾಗಿದೆ.


ಪ್ರಧಾನಿ ಅನ್ವರ್ ಇಬ್ರಾಹಿಂ, ಧಾರ್ಮಿಕ ಸಚಿವ ಮದ್ ನಹೀಮ್ ಬಿನ್ ಮುಕ್ತಾರ್ ಸಹಿತ ಮಲೇಷ್ಯಾ ಸರಕಾರದ ಪ್ರಮುಖ ಸಚಿವರು, ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.


ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರ ವಿಶೇಷ ಆಹ್ವಾನದ ಮೇರೆಗೆ ಐದು ದಿನಗಳ ಪ್ರವಾಸಕ್ಕಾಗಿ ಎ.ಪಿ ಅಬೂಬಕರ್ ಮುಸ್ಲಿಯಾರ್ ಮಲೇಷ್ಯಾ ತಲುಪಿದ್ದಾರೆ.


ಇದಕ್ಕೂ ಮೊದಲು ಮಲೇಷ್ಯಾ ಪ್ರಧಾನಿ ಕಳುಹಿಸಿಕೊಟ್ಟ ವಿಶೇಷ ವಿಮಾನದ ಮೂಲಕ ಕೋಝಿಕ್ಕೋಡ್ ವಿಮಾನ ನಿಲ್ದಾಣದಿಂದ ತೆರಳಿ ಕೌಲಾಲಂಪುರ ವಿಮಾನ ನಿಲ್ದಾಣಕ್ಕೆ ತಲುಪಿದ್ದ ಕಾಂತಪುರಂ ಅವರನ್ನು ಸರ್ಕಾರಿ ಪ್ರತಿನಿಧಿಗಳು ಮತ್ತು ಮರ್ಕಝ್ ಗ್ಲೋಬಲ್ ಮಲೇಷಿಯಾ ಚಾಪ್ಟರ್ ಪ್ರತಿನಿಧಿಗಳು ಬರಮಾಡಿಕೊಂಡರು.ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಂತಪುರಂ ಅವರು, 9 ತಿಂಗಳ ಬಳಿಕ, ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮಲೇಷ್ಯಾದಲ್ಲಿ ನಡೆಯಲಿರುವ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.


ಜುಲೈ 22 ಶನಿವಾರ ಕಾಂತಪುರಂ, ಸಹೀಹುಲ್ ಬುಖಾರಿ ವಿದ್ವಾಂಸರ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಆ ಕಾರ್ಯಕ್ರಮವನ್ನು ಅಲ್ಲಿನ ಪ್ರಧಾನಿ ಅನ್ವರ್ ಇಬ್ರಾಹಿಂ ಉದ್ಘಾಟಿಸುವರು. ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಮುಹಮ್ಮದ್ ನಹೀಮ್ ಬಿನ್ ಮುಖಾರ್, ಶೇಖ್ ಡಾ. ಉಸಾಮಾ ಅಲ್ ಅಝರಿ, ಮುಸ್ಲಿ ಡಾ. ಲುಕ್ಕಾನ್ ಬಿನ್ ಹಾಜಿ ಅಬ್ದುಲ್ಲಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ

Recent News


Leave a Comment: