ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಅಡಿಕೆ ರಬ್ಬರ್‌ಗೆ ಹಳದಿ ಚುಕ್ಕೆ ರೋಗ

Posted by Vidyamaana on 2023-07-18 12:31:41 |

Share: | | | | |


ಅಡಿಕೆ ರಬ್ಬರ್‌ಗೆ ಹಳದಿ ಚುಕ್ಕೆ ರೋಗ

ಪುತ್ತೂರು: ದ ಕ ಜಿಲ್ಲೆಯಲ್ಲಿ ಅಡಿಕೆಗೆ ಮತ್ತು ರಬ್ಬರ್‌ಗೆ ಎಲೆ ಚುಕ್ಕಿ ರೋಗ ಬಂದಿದ್ದು ಇದು ಕೃಷಿಕರ ಆತಂಕಕ್ಕೆ ಕಾರಣವಾಗಿದ್ದು ಈ ರೋಗಕ್ಕೆ ಕಾರಣ ಏನೆಂಬುದನ್ನು ಪತ್ತೆ ಮಾಡಬೇಕು ಮತ್ತು ಕೃಷಿಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಸರಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಶಾಸಕರು ಮಳೆಗಾಲ ಆರಂಭದಲ್ಲೇ ಹಳದಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದರಿಂದ ಈ ರೋಗ ಎಲ್ಲಾ ಕಡೆಗಳಲ್ಲೂ ಹರಡುವ ಸಾಧ್ಯತೆ ಇದೆ. ಅಡಿಕೆಗೆ ಒಂದಲ್ಲ ಒಂದು ರೋಗ ಬರುತ್ತಲೇ ಇದ್ದು ಇದು ಕೃಷಿಕರ ಆತಂಕಕ್ಕೂ ಕಾರಣವಾಗಿದೆ. ಹಳದಿ ಎಲೆ ಚುಕ್ಕಿ ರೋಗದಿಂದ ಅಡಿಕೆ ಹಾಗೂ ರಬ್ಬರ್ ಗಿಡಗಳು ಸತ್ತು ಹೋದಲ್ಲಿ ಕೃಷಿಕರಿಗೆ ನಷ್ಟವಾಗಲಿದ್ದು ಇದಕ್ಕೆ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು. ವಿಟ್ಲದಲ್ಲಿರುವ ಸಿಪಿಸಿಆರ್‌ಐ ಎಂಬ ಸಂಸ್ಥೆ ಅಡಿಕೆ ವಿಚಾರದಲ್ಲಿ ಸಂಶೋಧನೆ ಮಾಡುವ ಕೇಂದ್ರ ಸರಕಾರದ ಒಂದು ಸಂಸ್ಥೆಯಾಗಿದ್ದು ಈ ಸಂಸ್ಥೆ ಅಡಿಕೆ ಕೃಷಿಕರ ಪರವಾಗಿ ಯಾವುದೇ ಕೆಲಸವನ್ನು ಮಾಡುತ್ತಿಲ್ಲ , ಅಡಿಕೆಗೆ ಬಂದಿರುವ ರೋಗದ ಕುರಿತು  ಸಂಶೋಧನೆ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸಂಸ್ಥೆಗೆ ಸೂಚನೆ ನೀಡಬೇಕು ಎಂದು ಶಾಸಕರು ಸರಕಾರದ ಗಮನಕ್ಕೆ ತಂದರು.

ಗಾಯಾಳು ಕೃಷಿಕರಿಗೆ ಮಾಶಾಸನ ಕೊಡಿ:

ದ ಕ ಜಿಲ್ಲೆಯಲ್ಲಿ ಸಾವಿರಾರು ಕೃಷಿಕರು ಅಡಿಕೆ ಮರ, ತೆಂಗಿನ ಮರ ಮತ್ತು ಮರಗಳಿಂದ ಬಿದ್ದು ಗಂಬೀರ ಸ್ವರೂಪದ ಗಾಯಗಳಾಗಿದೆ, ಚಿಕಿತ್ಸೆಗೂ ಸ್ಪಂದನೆ ನೀಡಲು ಸಾಧ್ಯವಾಗದೆ ಅಥವಾ ಚಿಕಿತ್ಸೆ ನೀಡಿದರೂ ಗುಣಮುಖರಾಗದೆ ಮಲಗಿದ್ದಲ್ಲೇ ಇದ್ದು ಅಂಥಹ ಕೃಷಿಕರಿಗೆ ಸರಕಾರ ತಿಂಗಳಿಗೆ ಕನಿಷ್ಟ 5೦೦೦ ಮಾಶಾಸನವನ್ನು ನೀಡಬೇಕು. ಮಲಗಿದ್ದಲ್ಲೇ ಇರುವ ಇಂಥಹ ಕೃಷಿಕರಿಗೆ ನಿತ್ಯ ಊಟಕ್ಕೆ, ಔಷಧಿ ಖರ್ಚಿಗೆ ಹಣವಿಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಇಂತವರು ರಾಜ್ಯದಲ್ಲಿ ಸುಮಾರು ೨೫ ಸಾವಿರಕ್ಕೂ ಮಿಕ್ಕಿ ಇರಬಹುದು ಅವರೆಲ್ಲರಿಗೂ ಮಾನವೀಯತೆ ನೆಲೆಯಲ್ಲಿ ಸರಕಾರ ಮಾಶಾಸನವನ್ನು ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಎಸ್ ಪಿ ಕಚೇರಿ ಸ್ಥಳಾಂತರ ಮಾಡಿ:

ಮಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಜಿಲ್ಲಾ ಎಸ್ ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಬೇಕು. ಸ್ಥಳಾಂತರಕ್ಕಾಗಿ ಕೆಲವೊಂದು ಪ್ರಕ್ರಿಯೆಗಳು ಈಗಾಗಲೇ ನಡೆದಿದ್ದು ಅದನ್ನು ಮುಂದಿನ ಬಜೆಟ್‌ನೊಳಗೆ ಕಾರ್ಯರೂಪಕ್ಕೆ ತರಬೇಕು ಎಂದು ಶಾಸಕರು ಆಗ್ರಹಿಸಿದರು. ಮಂಗಳೂರಿನಲ್ಲಿ ಕಮಿಷನರೇಟ್ ವ್ಯಾಪ್ತಿ ಇರುವ ಕಾರಣ ಗ್ರಾಮಾಂತರ ಭಾಗವಾದ ಪುತ್ತೂರಿಗೆ ಎಸ್ ಪಿ ಕಚೇರಿಯನ್ನು ಶಿಫ್ಟ್ ಮಾಡಬೇಕಾದ ಅವಶ್ಯಕತೆ ಇದ್ದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಇದು ಸಹಕಾರಿಯಾಗಲಿದೆ ಎಂದು ಶಾಸಕರು ಸರಕಾರಕ್ಕೆ ಮನವಿ ಮಾಡಿದರು.


ಪುತ್ತೂರಿನಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆಯಿಲ್ಲದ ಕಾರಣ ಬಡವರಿಗೆ ತುಂಬಾ ತೊಂದರೆಯಾಗಿದೆ ಈ ಕಾರಣಕ್ಕೆ ಪುತ್ತೂರಿಗೆ ಮೆಡಿಕಲ್ ಕಾಲೇಜಿನ ಅವಶ್ಯಕತೆ ಇದ್ದು ಈಗಾಗಲೇ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಕುರಿತು ಸರಕಾರದ ಹಂತದಲ್ಲಿ ಮಾತುಕತೆಗಳನ್ನು ನಡೆಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಅನುದಾನವನ್ನು ಕಾಯ್ದಿರುಸುವಂತೆ ಸರಕಾರಕ್ಕೆ ಮನವಿ ಮಾಡಿದರು.

ದ ಕ ಜಿಲ್ಲೆಗೆ ಬಜೆಟ್‌ನಲ್ಲಿ ಏನೂ ಸಿಗುತ್ತಿಲ್ಲ


ಕಳೆದ ೧೫ ವರ್ಷಗಳಿಂದ ಬಜೆಟ್‌ನಲ್ಲಿ ದ ಕ ಜಿಲ್ಲೆಗೆ ಏನೂ ವಿಶೇಷ ಅನುದಾನಗಳು ಸಿಗುತ್ತಿಲ್ಲ. ಮಂಗಳಾ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಇದಕ್ಕೆ ೧೦೦೦ ಕೋಟಿ ಅನುದಾನ ಬೇಕಿದ್ದು ಪ್ರತೀ ವರ್ಷ ತಲಾ ೨೦೦ ಕೋಟಿಯಂತೆ ನೀಡಿದರೆ ಈ ಯೋಜನೆಯನ್ನು ಸಾಕಾರಗೊಳಿಸಬಹುದಾಗಿದೆ. ದ ಕ ಜಿಲ್ಲೆಯವರು ಮಾತನಾಡುವುದು ಕಡಿಮೆ, ನಾವು ಇನ್ನೊಬ್ಬರು ಮಾತನಾಡುವುದನ್ನು ಕೇಳುವುದು ಮಾತ್ರ ಆಗಾಗಿ ದ ಕ ಜಿಲ್ಲೆಗೆ ವಿಶೇಷ ಒತ್ತು ನೀಡುವಂತೆ ಮನವಿ ಮಾಡಿದರು.

ಮಾತಾಡದೆ ಇಷ್ಟು ಕಾರುಬಾರು ಮಾಡುತ್ತೀರಿ

ದ ಕ ಜಿಲ್ಲೆಯವರು ಮಾತನಾಡುವುದು ಕಡಿಮೆ ನಾವು ಇನ್ನೊಬ್ಬರು ಮಾತನಾಡುವುದನ್ನು ಕೇಳುವುದು ಮಾತ್ರ ಎಂದು ಶಾಸಕರು ಸಭಾಧ್ಯಕ್ಷರಲ್ಲಿ ಹೇಳಿದಾದ “ ನೀವು ಮಾತನಾಡದೆ ಇಷ್ಟೊಂದು ಕಾರುಬಾರು ಮಾಡುತ್ತೀರಿ ಇನ್ನು ಮಾತಾಡಿದ್ರೆ ಏನು ಮಾಡಬಹುದು. ನಾವಿಬ್ಬರೂ ಒಂದೇ ಕಡೆಯಿಂದ ಬಂದವರು ನೀವಲ್ಲಿ ಕುಳಿತುಕೊಂಡಿದ್ದೀರಿ , ಉಳಿದವರು ಆ ಬದಿಯಲ್ಲಿ ವಿರೋಧ ಪಕ್ಷದಲ್ಲಿ ಕೂತಿದ್ದಾರೆ ಎಂದು ಶಾಸಕರು ಹೇಳಿದರು.

ಅಡಿಕೆಗೆ ವಿರೋಧ ಮಾಡಿದವರು ದ್ವನಿ ಸೇರಿಸ್ತಾ ಇದ್ದಾರೆ

ಕಳೆದ ಬಾರಿ ಬಿಜೆಪಿ ಅದಿಕಾರದಲ್ಲಿದ್ದಾಗ ಬಿಜೆಪಿಯವರು ಅಡಿಕೆಗೆ ವಿರೋಧ ಮಾಡುತ್ತಿದ್ದವರು ಈಗ ಅಡಿಕೆ ಬೆಳೆಗಾರರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಅರಗಜ್ಞಾನೇಂದ್ರ ಅವರಿಗೆ ಮಾತಿನಲ್ಲೇ ಏಟು ನೀಡಿದ್ದಾರೆ. ನಾವು ವಿರೋಧ ಮಾಡಿಲ್ಲ ಯಾರು ವಿರೋಧ ಮಾಡಿದವರು ಎಂದು ಅರಗಜ್ಞಾನೇಂದ್ರ ಅವರು ಮರು ಪ್ರಶ್ನಿಸಿದಾಗ ನೀವು ಏನು ಮಾಡಿದ್ದೀರಿ ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಶಾಸಕರು ಮರುತ್ತರ ನೀಡಿದರು.

ಮಂದಿನ ೨೫ ವರ್ಷ ಬಿಜೆಪಿಗೆ ವಿರೋಧ ಪಕ್ಷದ ಸ್ಥಾನ

ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಚುನಾವಣಾ ಸಮಯದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದಾಗ ನನಗೆ ಒಂದು ರಈತಿಯ ಭಯ ಇತ್ತು. ಗೆದ್ದ ಬಳಿಕವೂ ಈ ಭಯ ಇತ್ತು. ಈ ಯೋಜನೆಗಳನ್ನು ಹೇಗೆ ಸರಕಾರ ಕೊಡಬಹುದು ಎಂಬ ಆತಂಕವೂ ಇತ್ತು ಆದರೆ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಇಟ್ಟ ಬಳಿಕ ನನಗೆ ಧೈರ್ಯ ಬಂತು. ಗ್ಯಾರಂಟಿ ಯೋಜನೆಯನ್ನು ರಾಜ್ಯದ ಜನತೆ ಸ್ವೀಕರಿಸಿದ್ದಾರೆ ಈ ಕಾರಣಕ್ಕೆ ಮುಂದಿನ ೨೫ ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುತ್ತದೆ ಬಿಜೆಪಿ ವಿರೋಧ ಪಕ್ಷದಲ್ಲೇ ಕೂರಬೇಕಾದ ಸ್ಥಿತಿ ಬರಲಿದೆ ಎಂದು ಶಾಸಕರು ಹೇಳಿದರು.

ಬೆಂಗಳೂರು: ಶಿವಾಜಿನಗರದಲ್ಲಿ ಕುಸಿದುಬಿದ್ದ ನರ್ಸರಿ ಶಾಲೆ ಕಟ್ಟಡ, ತಪ್ಪಿದ ಭಾರೀ ಅನಾಹುತ

Posted by Vidyamaana on 2023-11-27 15:51:25 |

Share: | | | | |


ಬೆಂಗಳೂರು: ಶಿವಾಜಿನಗರದಲ್ಲಿ ಕುಸಿದುಬಿದ್ದ ನರ್ಸರಿ ಶಾಲೆ ಕಟ್ಟಡ, ತಪ್ಪಿದ ಭಾರೀ ಅನಾಹುತ


ಬೆಂಗಳೂರು, (ನವೆಂಬರ್ 27): ಬೆಂಗಳೂರಿನ ಶಿವಾಜಿನಗರದಲ್ಲಿ(Shivajinagar) ನರ್ಸರಿ ಶಾಲೆ ಕಟ್ಟಡವೊಂದು (School building collapsed) ಕುಸಿದುಬಿದ್ದಿದೆ. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಇಂದು (ನವೆಂಬರ್ 27) ಬೆಳಗಿನ ಜಾವ ನಸುಕಿನ ಜಾವ ಬಿದ್ದಿದೆ. ಪರಿಣಾಮ ಕಟ್ಟಡ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿವೆ. ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ವೇಳೆ ಕಟ್ಟಡ ಬಿದ್ದಿದೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ.


ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ಈ ನರ್ಸರಿ ಶಾಲೆಯಲ್ಲಿ ಸುಮಾರು 70ರಿಂದ 80 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಷ್ಟಕ್ಕೂ ಈ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದರೂ ಸಹ ಇಲ್ಲೇ ಶಾಲೆ ಸಮಯದಲ್ಲಿ ಕುಟ್ಟಡ ಕುಸಿದು ಬಿದ್ದು ದೊಡ್ಡ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.


ಇದು ಬಿಬಿಎಂಪಿಗೆ ಸೇರಿದ ಇಂಗ್ಲಿಷ್ ಸ್ಕೂಲ್. ಈ ಸ್ಕೂಲ್ ನಲ್ಲಿ ಒಟ್ಟು 90 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಅದರೆ, 90 ಮಕ್ಕಳ ಪೈಕಿ 75 ಮಕ್ಕಳು ಮಾತ್ರ ಪ್ರತಿದಿನ ಶಾಲೆಗೆ ಬರುತ್ತಿದ್ದರು. ದೇವರ ದೇವರ ದಯೆಯಿಂದ ಶಾಲಾ ಸಮಯದಲ್ಲಿ ಕಟ್ಟಡ ಬಿದ್ದಿಲ್ಲ. ಇದೀಗ ಸ್ಥಳಕ್ಕೆ ಜೆಸಿಬಿ ಆಗಮಿಸಿದ್ದು, ಕಟ್ಟಡದ ಅವಶೇಷಗಳನ್ನು ತೆರವು ಕಾರ್ಯ ನಡೆದಿದೆ. ಇನ್ನು ವಾಹನಗಳಿಗೆ ಹಾನಿಯಾಗಿದ್ದರಿಂದ ಮಾಲೀಕರು ಕಂಗಾಲಾಗಿದ್ದಾರೆ.

ಪುತ್ತೂರಿನ ಗಡಿಗ್ರಾಮಗಳಲ್ಲಿ ಬೇಟೆಗಾರನಿಗೆ ಬಲಿಯಾಗುತ್ತಿರುವ ಕಾಟಿಗಳು

Posted by Vidyamaana on 2023-09-29 12:00:28 |

Share: | | | | |


ಪುತ್ತೂರಿನ ಗಡಿಗ್ರಾಮಗಳಲ್ಲಿ ಬೇಟೆಗಾರನಿಗೆ ಬಲಿಯಾಗುತ್ತಿರುವ ಕಾಟಿಗಳು

ಪುತ್ತೂರು: ಕಾಡು ನಾಶವಾಗುತ್ತಿದ್ದಂತೆಯೇ ಆಹಾರ ಹರಿಸಿ ಕಾಡುಪ್ರಾಣಿಗಳು ನಾಡಿಗೆ ಬರುವುದು ಮತ್ತು ನಾಡಿಗೆ ಬಂದು ಕೃಷಿಗಳನ್ನು ನಾಶ ಮಾಡುವುದು ಪುತ್ತೂರು ತಾಲೂಕಿನ ಗಡಿಗ್ರಾಮಗಳಲ್ಲಿ ನಿತ್ಯದ ಪರಿಪಾಠವಾಗಿದೆ. ಕಾಡಿನಲ್ಲಿ ಆಹಾರದ ಕೊರತೆಯುಂಟಾದಾಗ ಮಾತ್ರ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತವೆ, ಆಹಾರ ಕೊರತೆಯಾಗಲು ಕಾಡುಗಳ ನಾಶವೂ ಕಾರಣವಾಗಿದೆ. ಕಾಡುಗಳ ರಕ್ಷಣೆಗೆ ಮತ್ತು ಕಾಡುಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅದೆಷ್ಟೋ ಅಧಿಕಾರಿಗಳನ್ನು ಇರಿಸಿಕೊಂಡಿದೆ, ಆದರೆ ಕಾಡು ನಾಶವಾಗುತ್ತಲೇ ಇದೆ ಕಾಡುಪ್ರಾಣಿಗಳು ನಾಡಿಗೆ ಬರುತ್ತಲೇ ಇದೆ. ಇಲ್ಲಿ ವಿಶೇಷವೇನೆಂದರೆ ನಾಡಿಗೆ ಬಂದ ಕಾಡುಪ್ರಾಣಿಗಳು ಮರಳಿ ಕಾಡು ಸೇರುವುದೇ ಇಲ್ಲ ಅವು ಮಾನವ ಹೊಟ್ಟೆ ಪಾಲಾಗುತ್ತಿದೆ ಎಂಬ ಆತಂಕದ ವಿಚಾರ ಬೆಳಕಿಗೆ ಬಂದಿದೆ.

ಪುತ್ತೂರು ತಾಲೂಕಿನ ಕೇರಳ ಗಡಿಗ್ರಾಮಗಳಲ್ಲಿ ಇಂಥಹದೊಂದು ಅಮಾನವೀಯ ಕೃತ್ಯಗಳು ನಿತ್ಯವೂ ನಡೆಯುತ್ತಿದೆ. ನೆಟ್ಟಣಿಗೆ ಮುಡ್ನೂರು, ಪಾಣಾಜೆ, ಜಾಲ್ಸೂರು ಗಡಿಗ್ರಾಮಗಳಲ್ಲಿ ಕಾಡಾಣೆಗಳ ಹಾವಳಿ ಇಲ್ಲ. ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಇದೆ. ಕಾಡುಕೋಣಗಳು ಗುಂಪುಗುಂಪಾಗಿ ರಾತ್ರಿ ವೇಳೆ ಕೆಲವೊಮ್ಮೆ ಹಗಲು ವೇಳೆಯೇ ನಾಡಿಗೆ ಬಂದು ಕೃಷಿಗಳನ್ನು ತಿಂದು ಹಾಕುತ್ತಿದೆ. ಈ ವಿಚಾರವನ್ನು ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಹೇಳುತ್ತಲೇ ಇದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದರೆ ವ್ಯವಸ್ಥೆ ಮಾಡುವ ಎಂದು ತಲೆ ಆಡಿಸುತ್ತಲೇ ಕಾಲ ಕಳೆಯುತ್ತಿದ್ದಾರೆ. ಕಾಡು ಕೋಣಗಳು ನಾಡಿಗೆ ಬರದಂತೆ ತಡೆಗಟ್ಟುವುದು ಬಿಡಿ ಆ ಗ್ರಾಮಗಳಿಗೆ ತೆರಳಿ ಪರಿಶೀಲನೆ ಮಾಡಲು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಸಮಯ ಕೂಡಿ ಬರುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.


ಕಾಡುಕೋಣ ಕೊಂದು ತಿನ್ನುತ್ತಾರೆ

ರಾತ್ರಿ ವೇಳೆ ಕೆಲವೊಂದು ಆಯಕಟ್ಟಿನ ಸ್ಥಳಗಳಿಂದಲೇ ಕಾಡುಕೋಣಗಳು ಬರುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳುವ ಬೇಟೆಗಾರರು ರಾತ್ರಿ ವೇಳೆ ಅವುಗಳನ್ನು ಗುಂಡು ಹೊಡೆದು ಸಾಯಿಸುತ್ತಾರೆ. ಕಾಡು ಕೋಣಗಳ ಬರುತ್ತವೆ , ದಾಳಿ ಮಾಡುತ್ತದೆ ಎಂಬ ಕಾರಣಕ್ಕೆ ಸಂಜೆಯಾಗುತ್ತಲೇ ಗ್ರಾಮಸ್ಥರು ಮನೆ ಸೇರುವ ಕಾರಣ ಬೇಟೆಗಾರರಿಗೆ ಅವುಗಳನ್ನು ಹಿಡಿದು ಕೊಲ್ಲಲು ಸುಲಭವಾಗುತ್ತಿದೆ. ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಅವುಗಳನ್ನು ಕೊಲ್ಲುವ ಮತ್ತು ಆ ಬಳಿಕ ಮಾಂಸ ಮಾಡಿ ಕೇರಳಕ್ಕೆ ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ. ಈಗಾಗಲೇ ನೂರಾರು ಕಾಡುಕೋಣಗಳನ್ನು ಭೇಟೆಗಾರರು ಕೊಂದು ಮುಗಿಸಿದ್ದಾರೆ ಎಂಬ ಆತಂಕದ ಮಾಹಿತಿಯನ್ನು ಗ್ರಾಮಸ್ಥರು ಹೊರ ಹಾಕಿದ್ದಾರೆ. ಕಾಡುಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಬೇಟೆಗಾರರ ಜೊತೆ ಕೆಲವೊಂದು ಮೇಲಧಿಕಾರಿಗಳಿಗೆ ನಿಟಕ ಕೃಪಾಕಟಾಕ್ಷ ಇರುವುದರಿಂದ ಇದೊಂದು ವ್ಯವಹಾರಿಕ ದಂಧೆಯಾಗಿ ಪರಿಣಮಿಸಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಕಾಡುಕೋಣಗಳೇ ನಾಶವಾದರೂ ಅಚ್ಚರಿಯಿಲ್ಲ. ಈ ಪರಿಸ್ಥಿತಿ ತಲೆದೋರುವ ಮುನ್ನ ಜಿಲ್ಲಾಮಟ್ಟದ ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ತುರ್ತು ಕ್ರಮ: ಡಿಸಿಎಫ್

ಈ ವಿಚಾರದಲ್ಲಿ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಕಾಡುಕೋಣಗಳು ಸೇರಿದಂತೆ ಕಾಡುಪ್ರಾಣಿಗಳನ್ನು ಭೇಟೆಯಾಡುವುದು ಅಕ್ಷಮ್ಯ ಅಪರಾಧವಾಗಿದೆ. ಪಾಣಭಾಜೆ, ಜಾಲ್ಸೂರು ಹಾಗೂ ಕರ್ನೂರು ಗಡಿಗ್ರಾಮದಲ್ಲಿ ವಿಶೇಷ ತಪಾಸಣೆ ಮಾಡುವಂತೆ ಕ್ರಮಕೈಗೊಳ್ಳುತ್ತೇನೆ. ಸಾರ್ವಜನಿಕರು ಇಂಥಹ ಕೃತ್ಯಗಳು ಕಂಡು ಬಂದಲ್ಲ ನೇರವಾಗಿ ನನಗೆ ಕರೆ ಮಾಡಿ ತಿಳಿಸಬಹುದು.


ಆಂಟ್ಯನಿ ಮರಯಪ್ಪನ್, ಡಿಸಿಎಫ್ ಮಂಗಳೂರು

ಶಾಸಕರ ಇಂದಿನ ಕಾರ್ಯಕ್ರಮ ಆ 1

Posted by Vidyamaana on 2023-07-31 23:20:31 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 1

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 1 ರಂದು

 ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ದ ಕ ಮತ್ತು ಉಡುಪಿ ಜಿಲ್ಲೆಯ ಭೇಟಿ ಹಿನ್ನೆಲೆಯಲ್ಲಿ ಸಿ ಎಂ ಜೊತೆ ಉಭಯ ಜಿಲ್ಲೆಗಳ ಭೇಟಿ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ

ಬೈಂದೂರು: ಯುವತಿ ನಾಪತ್ತೆ

Posted by Vidyamaana on 2023-09-22 16:21:57 |

Share: | | | | |


ಬೈಂದೂರು: ಯುವತಿ ನಾಪತ್ತೆ

ಉಡುಪಿ: ಬೈಂದೂರು ತಾಲೂಕು ಹಾಲ್ಕಲ್, ಜಡ್ಕಲ್ ಗ್ರಾಮದ ತುಂಬೆ ಮಕ್ಕಿ ನಿವಾಸಿ ಮೈತ್ರಿ (23) ಎಂಬವರು ಸೆಪ್ಟಂಬರ್ 20 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.


5 ಅಡಿ 3 ಇಂಚು ಎತ್ತರ, ದುಂಡು ಮುಖ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ.9480805434, ಕಂಟ್ರೋಲ್ ರೂಂ : 100, ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಲ್ಲೂರು ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

Posted by Vidyamaana on 2023-11-23 10:53:49 |

Share: | | | | |


ಮಂಗಳೂರು  ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

ಮಂಗಳೂರು: ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಮೃತಪಟ್ಟಿರುವ ಘಟನೆ ನಗರದ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ನಡೆದಿದೆ.


ಯಶ್ರಾಜ್ ಎಸ್.ಸುವರ್ಣ(43) ಮೃತರು ಎಂದು ತಿಳಿದು ಬಂದಿದೆ.


ನಗದರ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಮಧ್ಯರಾತ್ರಿ 12:35 ಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಯಶ್ರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ಬಾಗಿಲಿನ ಚಿಲಕ ಹಾಕಿಕೊಂಡಿದ್ದರು. ಅನಂತರ ಲಾಡ್ಜ್ ನವರು ತೆರೆದಾಗಬೆಂಕಿ ಆವರಿಸಿತ್ತು.


ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.



Leave a Comment: