ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಅಯೋಧ್ಯೆ ರಾಮ ಮಂದಿರ ದರ್ಶನದ ಸಮಯ ವಿಸ್ತರಣೆ : ಹೊಸ ವೇಳಾಪಟ್ಟಿ ಪರಿಶೀಲಿಸಿ

Posted by Vidyamaana on 2024-01-25 07:56:21 |

Share: | | | | |


ಅಯೋಧ್ಯೆ ರಾಮ ಮಂದಿರ ದರ್ಶನದ ಸಮಯ ವಿಸ್ತರಣೆ : ಹೊಸ ವೇಳಾಪಟ್ಟಿ ಪರಿಶೀಲಿಸಿ

ನವದೆಹಲಿ: ಅಯೋಧ್ಯೆಯ ರಾಮ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ, ದೇವಾಲಯದ ಆಡಳಿತವು ದರ್ಶನ ಸಮಯವನ್ನು ವಿಸ್ತರಿಸಲು ನಿರ್ಧರಿಸಿದೆ.ಸೀಮಿತ ಭೇಟಿಯ ಸಮಯದಿಂದಾಗಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗದ ಭಕ್ತರಿಗೆ ಈ ನಿರ್ಧಾರವು ಪರಿಹಾರವಾಗಿದೆ.ಈಗ, ಭಕ್ತರು ರಾತ್ರಿ 10 ಗಂಟೆಯವರೆಗೆ ರಾಮ್ ಲಲ್ಲಾ ದರ್ಶನ ಪಡೆಯಬಹುದು.


ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಧಿಕೃತ ಮೂಲಗಳ ಪ್ರಕಾರ, ಸುಮಾರು ಐದು ಲಕ್ಷ ಭಕ್ತರು ಪ್ರಸ್ತುತ ಅಯೋಧ್ಯೆಯಲ್ಲಿ ಕ್ಯಾಂಪ್ ಮಾಡುತ್ತಿದ್ದು, ದೇವಾಲಯದಲ್ಲಿ ದರ್ಶನ ಪಡೆಯಲು ತಮ್ಮ ಸರದಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಹೆಚ್ಚುವರಿಯಾಗಿ, ನಿಯಮಿತವಾಗಿ ಭಕ್ತರ ಪ್ರವಾಹವೂ ಬರುತ್ತಿದೆ, ಇದು ಜನಸಂದಣಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.ರಾಮಮಂದಿರಹೊಸದರ್ಶನದಸಮಯ


ಭೇಟಿಯ ಸಮಯದ ದೃಷ್ಟಿಯಿಂದ, ದೇವಾಲಯವು ಎರಡು ಪಾಳಿಗಳಲ್ಲಿ ದರ್ಶನಕ್ಕಾಗಿ ತೆರೆದಿರುತ್ತದೆ. ಬೆಳಗ್ಗೆ 7ರಿಂದ 11.30ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ ಪಾಳಿಯಲ್ಲಿ, ವಿಸ್ತೃತ ಸಮಯವು ಭಕ್ತರಿಗೆ ರಾತ್ರಿ 10 ರವರೆಗೆ ದರ್ಶನ ಪಡೆಯಲು ಅನುವು ಮಾಡಿಕೊಡುತ್ತದೆ, ಇದು ದೇವಾಲಯಕ್ಕೆ ಭೇಟಿ ನೀಡಲು ಮತ್ತು ದೈವಿಕ ಆಶೀರ್ವಾದ ಪಡೆಯಲು ಸಾಕಷ್ಟು ಸಮಯವನ್ನು ಒದಗಿಸುತ್ತದೆ.


ಭಕ್ತರು ರಾಮ್ ಲಲ್ಲಾ ದರ್ಶನವನ್ನು ಸಂಜೆ 7 ರ ಬದಲು ರಾತ್ರಿ 10 ರವರೆಗೆ ಮಾಡಬಹುದು.


ಬೆಳಿಗ್ಗೆ 7 ರಿಂದ 11.30 ರವರೆಗೆ ದರ್ಶನ ತೆರೆದಿರುತ್ತದೆ.


ಸಂಜೆ ಪಾಳಿಯಲ್ಲಿ ದರ್ಶನವು ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ.

ಪುರುಷರಕಟ್ಟೆ: ಕೆ ಎಸ್‌ ಆರ್ ಟಿ ಸಿ- ಬೈಕ್ ಡಿಕ್ಕಿ ಬೈಕ್‌ ಸವಾರ ಮೋಕ್ಷಿತ್ ಗೌಡ ಮೃತ್ಯು

Posted by Vidyamaana on 2024-05-15 09:52:02 |

Share: | | | | |


ಪುರುಷರಕಟ್ಟೆ: ಕೆ ಎಸ್‌ ಆರ್ ಟಿ ಸಿ- ಬೈಕ್ ಡಿಕ್ಕಿ  ಬೈಕ್‌ ಸವಾರ ಮೋಕ್ಷಿತ್ ಗೌಡ ಮೃತ್ಯು

ಪುತ್ತೂರು: ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ. 15ರಂದು ನಡೆದಿದೆ. 

ಬಲ್ನಾಡು :ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ವಂಶಿ ಮೃತ್ಯು

Posted by Vidyamaana on 2023-06-02 23:10:05 |

Share: | | | | |


ಬಲ್ನಾಡು :ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ವಂಶಿ ಮೃತ್ಯು

ಪುತ್ತೂರು:ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ. ಬಲ್ನಾಡು ಬಂಗಾರಡ್ಕ ನಿವಾಸಿ ವಿದ್ಯಾರ್ಥಿನಿಯೊಬ್ಬರು ಜೂ.2ರಂದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಬಲ್ನಾಡು ಬ೦ಗಾರಡ್ಕ ದಿ.ಕಮಲಾಕ್ಷ ಅವರ ಪತ್ರಿ ವಂತಿ ಬಿ.ಕೆ (17ವ)ಮೃತಪಟ್ಟವರು.ಅವರು ಎಸ್.ಎಸ್.ಎಲ್.ಸಿ ಮುಗಿಸಿ ಮುಂದೆ ಪಿಯುಸಿ ಓದಲು ಕಾಲೇಜು ಸೇರುವ ಸಿದ್ಧತೆಯಲ್ಲಿದ್ದರು.ಈ ನಡುವೆ ಅವರು ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿಂದ ಚೇತರಿಸಿಕೊಂಡು ಮನೆಗೆ ಹೋಗಿದ್ದರು.ಈ ನಡುವೆ ಮತ್ತೆ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಮೃತರು ತಾಯಿ ಬಿ.ಎಸ್ ಜಯಲತಾ ಮತ್ತು ಸಹೋದರನನ್ನು ಅಗಲಿದ್ದಾರೆ.

ಬೆಳ್ತಂಗಡಿ : ಹಳೇಕೋಟೆ ಬೈಕಿಗೆ ಲಾರಿ ಡಿಕ್ಕಿ ಸವಾರ ವಿನೋದ್ ಗೌಡ ಪಾಲಡ್ಕ ಸ್ಥಳದಲ್ಲೇ ಮೃತ್ಯು

Posted by Vidyamaana on 2024-06-01 18:09:41 |

Share: | | | | |


ಬೆಳ್ತಂಗಡಿ : ಹಳೇಕೋಟೆ  ಬೈಕಿಗೆ ಲಾರಿ ಡಿಕ್ಕಿ ಸವಾರ ವಿನೋದ್ ಗೌಡ ಪಾಲಡ್ಕ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಹಳೆಕೋಟೆ ಬಳಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ   ಘಟನೆ ನಡೆದಿದೆ.

ಬೆಳ್ತಂಗಡಿಯ ಹಳೇಕೋಟೆ ಬಳಿಯ ಪೆಟ್ರೋಲ್ ಪಂಪ್ ಬಳಿ ಮಣ್ಣು ಹೇರಿಕೊಂಡು ಹೋಗುತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಲಾರಿಯಡಿ ಸಿಲುಕಿ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಮಚ್ಚಿನದ ಕೃಷಿಕ ವಿನೋದ್ ಗೌಡ(45) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಹತ್ತೂರ ಒಡೆಯನ ಸನ್ನಿಧಾನಕ್ಕೆ ನವೀನ ಸ್ಪರ್ಶ

Posted by Vidyamaana on 2023-11-21 17:58:54 |

Share: | | | | |


ಹತ್ತೂರ ಒಡೆಯನ ಸನ್ನಿಧಾನಕ್ಕೆ ನವೀನ ಸ್ಪರ್ಶ

ಪುತ್ತೂರು: ಕರಾವಳಿ ಭಾಗ ಧಾರ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಪುತ್ತೂರನ್ನು ಟೂರಿಸಂ ಪ್ರದೇಶ ಆಗುವ ನಿಟ್ಟಿನಲ್ಲಿ ಮಾನ್ಯತೆ ನೀಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಮಾಸ್ಟರ್ ಪ್ಲಾನ್ ಸಹಿತ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ನವೀಕೃತಗೊಂಡಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಸಭಾಭವನದ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.



ಈಗಾಗಲೇ ಅಭಿವೃದ್ಧಿ ಕಾರ್ಯಕ್ರಮಗಳಲ್ಲೊಂದಾದ ಸಭಾಭವನ ಸಮರ್ಪಣೆ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಕಾರಂಜಿ, ಕೆರೆಯ ಬಳಿ ಇರುವ ಮಹಿಳಾ ಠಾಣೆ ಸ್ಥಳಾಂತರ, ತೋಡಿಗೆ ತಡೆಗೋಡೆ, ಕಂಬಳ ಗದ್ದೆ ಸ್ಥಳಾಂತರ ಹೀಗೆ ಹಲವು ಮಾಸ್ಟರ್ ಪ್ಲಾನ್ ತಯಾರಿಸಿ ಸರಕಾರಕ್ಕೆ ಕಳುಹಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. 

ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಈಗಾಗಲೇ ವ್ಯವಸ್ಥಾಪನಾ ಅಧ್ಯಕ್ಷರು ಮನವಿ ಮಾಡಿದಂತೆ ಬಿಎಸ್‍ ಎನ್‍ಎಲ್  ರಸ್ತೆಯ ಕುರಿತು ಮಾಹಿತಿ ಇಲ್ಲ. ಮಾಹಿತಿ ಪಡಕೊಂಡು ಸೂಕ್ತ ಸಹಕಾರ ನೀಡುತ್ತೇನೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಈಗಾಗಲೇ ದೇವಸ್ಥಾನದ ಅಭಿವೃದ್ಧಿಯ ಕುರಿತ ಮಾಸ್ಟರ್ ಪ್ಲ್ಯಾನ್ ಮಾಡುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಬಳಕೆಗೆ ಸಭಾಭವನ ಒಳ್ಳೆಯ ರೀತಿಯಲ್ಲಿ ಉಪಯೋಗವಾಗಲಿ ಎಂದರು. 

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆ ಇಕ್ಕಟ್ಟಾಗಿದ್ದು, ಪಕ್ಕದಲ್ಲಿರುವ ಬಿಎಸ್‍ ಎನ್‍.ಎಲ್ ನವರಿಗೆ ಬಹಳ ವರ್ಷಗಳ ಹಿಂದೆ ಜಾಗ ಮಾರಾಟ ಮಾಡಲಾಗಿದೆ. ಅದನ್ನು ಪುನಃ ಪಡೆದುಕೊಳ್ಳುವ ಅವಕಾಶ ಇದೆ. ಈ ಕುರಿತು ಸಹಾಯಕ ಆಯುಕ್ತರಲ್ಲಿ ಪರಿಶೀಲಿಸುವಂತೆ ಮನವಿ ಮಾಡಿದರು. ಕುರಿಯದಲ್ಲಿ ದೇವಸ್ಥಾನದ ಹೆಸರಿಗೆ 19 ಎಕ್ರೆ ಜಾಗ ಆರ್ ಟಿಸಿ ಆಗಿದೆ. ಅಲ್ಲಿ ಗೋಲೋಕ ಉತ್ಸವ ಮಾಡುವ ಕುರಿತು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಶುಭ ಹಾರೈಸಿದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಡಾ.ಸುಧಾ ಎಸ್‍. ರಾವ್, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ.ವಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕಾಮಗಾರಿಗೆ ದೇಣಿಗೆ ನೀಡಿದವರನ್ನು, ಇಂಜಿನಿಯರ್ ಗಳನ್ನು  ಗೌರವಿಸಲಾಯಿತು. 

ತನ್ವಿ ಈಶ್ವರ ಚಂದ್ರ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯೆ ವೀಣಾ ಬಿ.ಕೆ. ಸ್ವಾಗತಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. 

ಸಭಾ ಕಾರ್ಯಕ್ರಮದ ಮೊದಲು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಿಂದ ಭತ್ತ, ಅಕ್ಕಿ ಕಳಸದೊಂದಿಗೆ, ಹೂ, ಬಂಗಾರ, ಬೆಳ್ಳಿ, ಹಣ, ಅರಿಶಿನ ಕುಂಕುಮ/ ಕಲಶಗಳು , ತರಕಾರಿ, ತೆಂಗಿನ ಕಾಯಿ, ಅಡಿಕೆ ಗೊನೆ, ಕಾಫಿ, ಹಣ್ಣುಗಳು/ಧಾನ್ಯಗಳು, ತುಳಸಿ ಗಿಡ, ತುಪ್ಪ, ಹಾಲು, ಮಗು /ಶಿಶು, ಮುತ್ತೈದೆಯರು, ದಂಪತಿಗಳು,  ಸುವಸ್ತುಗಳೊಂದಿಗೆ ಮಂಗಳವಾದ್ಯ, ಪ್ರಾಜ್ವಲ್ಯಮಾನ ದೀಪ, ಕಲಶ ಹಿಡಿದ ಮಹಿಳೆಯರ ಸಹಿತ ಮೆರವಣಿಗೆ ಮೂಲಕ ತೆರಳಿ ಸಭಾಭವನ ಪ್ರವೇಶಿಸಲಾಯಿತು.

ಪುತ್ತೂರು ಪೇಟೆಡ್ ಇಡೀ ಕರೆಂಟ್ ಇಜ್ಜಿಗೆ

Posted by Vidyamaana on 2023-11-04 04:48:05 |

Share: | | | | |


ಪುತ್ತೂರು ಪೇಟೆಡ್ ಇಡೀ ಕರೆಂಟ್ ಇಜ್ಜಿಗೆ


ಪುತ್ತೂರು : ನಿರ್ವಹಣೆ ಮತ್ತು ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ದರ್ಬೆ ಫೀಡರ್‌ನಲ್ಲಿ ನ.4ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5 ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ಹಾರಾಡಿ, ಚಿಕ್ಕಪುತ್ತೂರು, ನೆಲ್ಲಿಕಟ್ಟೆ, ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್, ಕಲ್ಲಾರೆ, ದರ್ಬೆ ಮತ್ತು ಏಳ್ಳುಡಿ ಪರಿಸರದ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ



Leave a Comment: