ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


ಕಡಬ - ಬೈಕ್ - ಇನ್ನೋವಾ ಅಪಘಾತ :ಬೈಕ್ ಸವಾರ ದೇವರಾಜ್ ಮೃತ್ಯು!

Posted by Vidyamaana on 2024-08-26 18:56:44 |

Share: | | | | |


ಕಡಬ - ಬೈಕ್ - ಇನ್ನೋವಾ ಅಪಘಾತ :ಬೈಕ್ ಸವಾರ ದೇವರಾಜ್ ಮೃತ್ಯು!

ಕಡಬ : ಇನ್ನೋವಾ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಸವಾರ ಮೃತಪಟ್ಟ ಘಟನೆ ಇಚಿಲಂಪಾಡಿಯ ನೂಜಿಬಾಳ್ತಿಲದಲ್ಲಿ ನಡೆದಿದೆ.

ಮೃತ ಸವಾರನನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದ ಗುತ್ಯಪ್ಪ ಎಂಬವರ ಪುತ್ರ ದೇವರಾಜ್ (22) ಎಂದು ಗುರುತಿಸಲಾಗಿದೆ.

ದೇವರಾಜ್ ತನ್ನ ಸ್ನೇಹಿತರೊಂದಿಗೆ ಬೈಕಿನಲ್ಲಿ ಧರ್ಮಸ್ಥಳ ಯಾತ್ರೆ ಮುಗಿಸಿ ಸುಬ್ರಹ್ಮಣ್ಯಕ್ಕೆ‌ ತೆರಳುತ್ತಿದ್ದ ವೇಳೆ ನೂಜಿಬಾಳ್ತಿಲ ಬೆಥನಿ‌ ಕಾಲೇಜಿನ ಮುಂಭಾಗದಲ್ಲಿ ಎದುರಿನಿಂದ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೋವಾ ವಾಹನವನ್ನು ನೋಡಿ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ದೇವರಾಜ್‌ ನನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವರದಿಯಾಗಿದೆ‌.


ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ - ವೈರಲ್ ಆಯ್ತು ಅಪರೂಪದ ವಿಡಿಯೋ..!

Posted by Vidyamaana on 2023-09-28 11:51:31 |

Share: | | | | |


ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ - ವೈರಲ್ ಆಯ್ತು ಅಪರೂಪದ ವಿಡಿಯೋ..!

ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ ಮಂತ್ರಿಗೆ ಚಹಾ ತಂದು ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.ಮೋದಿ ಅವರು ಟ್ವಿಟರ್ (ಎಕ್ಸ್‌) ನಲ್ಲಿ ಆಸಕ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರದರ್ಶನದಲ್ಲಿ ವಿವಿಧ ರೋಬೋಟ್ ಸ್ಟಾಲ್‌ಗಳಲ್ಲಿ ಹಲವಾರು ರೋಬೋಟಿಕ್ ಕ್ರಿಯೆಗಳನ್ನು ವೀಕ್ಷಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ಮತ್ತು ಸಿಎಂಗೆ ರೋಬೋಟ್ ಚಹಾವನ್ನು ನೀಡಿದೆ‌.ನೈಸರ್ಗಿಕ ವಿಕೋಪಗಳು ಅಥವಾ ಅಗ್ನಿ ಅವಘಡಗಳ ಸಂದರ್ಭದಲ್ಲಿ ಮಾನವರಿಗೆ ರೋಬೋಟ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರಧಾನಿ ಮೋದಿ ಅವರು ನೋಡಿದ್ದಾರೆಂದು ಈ ಕ್ಲಿಪ್ ತೋರಿಸಿದೆ.ರೋಬೋಟ್ ಇಂಜಿನಿಯರ್‌ಗಳು ಪಿಎಂ ಮೋದಿಯವರಿಗೆ ರೋಬೋಟ್‌ಗಳು ಹೇಗೆ ಜೀವನದ ವಿವಿಧ ಹಂತಗಳಲ್ಲಿ ಶಕ್ತರಾಗಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ವಿವರಿಸಿದ್ದಾರೆ.

ವೈರಲ್ ಆಯ್ತು ಅಪರೂಪದ ವಿಡಿಯೋ..!


ರೊಬೊಟಿಕ್ಸ್‌ ನೊಂದಿಗೆ ಭವಿಷ್ಯದ ಅಂತ್ಯವಿಲ್ಲದ ಸಾಧ್ಯತೆಗಳನ್ನು ಅನ್ವೇಷಿಸುವುದು! ಎಂದು ಟ್ವಿಟರ್ (ಎಕ್ಸ್) ಪೋಸ್ಟ್‌ ನಲ್ಲಿ ಪಿಎಂ ಮೋದಿ ಬರೆದುಕೊಂಡಿದ್ದಾರೆ.

ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ; ಚಿತ್ರದುರ್ಗದಲ್ಲಿ ಪ್ರಥಮ, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನಈ ಬಾರಿ ಬಾಲಕಿಯರೇ ಮೇಲುಗೈ

Posted by Vidyamaana on 2023-05-08 05:21:21 |

Share: | | | | |


ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ; ಚಿತ್ರದುರ್ಗದಲ್ಲಿ ಪ್ರಥಮ, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನಈ ಬಾರಿ ಬಾಲಕಿಯರೇ ಮೇಲುಗೈ

ಬೆಂಗಳೂರು; ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ 83.89 ಶೇಕಡಾ ಫಲಿತಾಂಶ ಬಂದಿದೆ. ನಾಲ್ಕು ವಿದ್ಯಾರ್ಥಿಗಳ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಚಿತ್ರದುರ್ಗ ಫಲಿಂತಾಶದಲ್ಲಿ ಪ್ರಥಮ ಸ್ಥಾನ ಪಡೆದ್ರೆ ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.

ಚಿತ್ರದುರ್ಗ ಜಿಲ್ಲೆ 96.80 ಶೇಕಡಾ ಫಲಿತಾಂಶ ಪಡೆದರೆ, ಮಂಡ್ಯ ಜಿಲ್ಲೆ 96.74 ಶೇಕಡಾ ಫಲಿತಾಂಶ ಪಡೆದಿದೆ.

ಒಡಿಶಾ ರೈಲು ದುರಂತದ ಬಗ್ಗೆ ಟ್ವಿಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ನಳೀನ್ ಕುಮಾರ್ ಕಟೀಲ್

Posted by Vidyamaana on 2023-06-03 23:22:27 |

Share: | | | | |


ಒಡಿಶಾ ರೈಲು ದುರಂತದ ಬಗ್ಗೆ ಟ್ವಿಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ನಳೀನ್ ಕುಮಾರ್ ಕಟೀಲ್

ಬೆಂಗಳೂರು: ಒಡಿಶಾ ರೈಲು ದುರಂತದ ಬಗ್ಗೆ ಟ್ವಿಟ್ ಮಾಡಲು ಹೋಗಿ ನಳೀನ್ ಕುಮಾರ್ ಕಟೀಲ್ ಯಡವಟ್ಟು ಮಾಡಿಕೊಂಡಿದ್ದಾರೆ.ಟ್ವಿಟ್ ನಲ್ಲಿ ರೈಲು ಬೋಗಿಗಳು ಹೊತ್ತಿ ಉರಿಯುತ್ತಿರುವಂತ ಯಾವುದೋ ಪೋಟೋ ಹಾಕಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂದು ಈ ಘಟನೆ ಸಂಬಂಧ ಟ್ವಿಟ್ ಮಾಡಿದ್ದಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ಒಡಿಶಾದಲ್ಲಿ ಸರಣಿ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನಾಗರಿಕ ಬಂಧುಗಳ ಆತ್ಮಕ್ಕೆ ಸದ್ಗತಿ ಕೋರುತ್ತಾ ಗಾಯಗೊಂಡಿರುವ ಪ್ರಯಾಣಿಕರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಎಂದಿದ್ದರು. ಆದ್ರೇ ಹೀಗೆ ಟ್ವಿಟ್ ಗೆ ಹಾಕಿದ್ದಂತ ಪೋಟೋ ನಿನ್ನೆಯ ಘಟನೆ ಪೋಟೋ ಆಗಿರಲಿಲ್ಲ.

ಈ ಬಗ್ಗೆ ಅನೇಕರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಮಾಡಿದ್ದಂತ ಟ್ವಿಟ್ಟರ್ ವಿಷಯದ ಪೋಟೋ ಕಂಡು ಹೌಹಾರಿದ್ದರು. ಜೊತೆಗೆ ಅಚ್ಚರಿಯನ್ನು ವ್ಯಕ್ತಪಡಿಸಿ, ಇದು ಒಡಿಶಾದಲ್ಲಿನ ರೈಲುಗಳ ಅಪಘಾತದ ಪೋಟೋವಲ್ಲ. ಬದಲಾಗಿ ವಿದೇಶದಲ್ಲಿ ನಡೆದಿದ್ದಂತ ರೈಲುಗಳ ಮುಖಾಮುಖಿ ಡಿಕ್ಕಿಯ ಪೋಟೋ ಇರಬೇಕು ಎಂಬುದಾಗಿ ಕಮೆಂಟ್ ಮಾಡಿದ್ದರು. ಕೊನೆಗೆ ಎಚ್ಚೆತ್ತುಕೊಂಡು ಫೋಟೋ ಬದಲಾಯಿಸಿದ್ದಾರೆ.

ರೋಟರಿ ಕ್ಲಬ್ ಯುವ ಪದಗ್ರಹಣ : ದಶಮಾನ ವರ್ಷದ ಅಧ್ಯಕ್ಷರಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ವಚನಾ ಜಯರಾಂ, ಕೋಶಾಧಿಕಾರಿಯಾಗಿ ಅಭಿಷ್ ಕೆ

Posted by Vidyamaana on 2024-07-10 16:45:35 |

Share: | | | | |


ರೋಟರಿ ಕ್ಲಬ್ ಯುವ ಪದಗ್ರಹಣ : ದಶಮಾನ ವರ್ಷದ ಅಧ್ಯಕ್ಷರಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ವಚನಾ ಜಯರಾಂ, ಕೋಶಾಧಿಕಾರಿಯಾಗಿ ಅಭಿಷ್ ಕೆ

ಪುತ್ತೂರು : ರೋಟರಿ ಕ್ಲಬ್ ಯುವ ಸ್ಥಾಪಿತವಾಗಿ ಹತ್ತನೇ ವರ್ಷದ ಸಂಭ್ರಮದಲ್ಲಿದೆ. 2024-25 ಅವಧಿಯ ಅಧ್ಯಕ್ಷೆಯಾಗಿ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ವಚನ ಜಯರಾಂ ಕೋಶಾಧಿಕಾರಿಯಾಗಿ ಅಭಿಷ್ ಕೆ ರವರು ಪದಗ್ರಹಣಗೊಳ್ಳಲಿದ್ದಾರೆ.

ಪದಗ್ರಹಣವನ್ನು ಪಿ.ಡಿ.ಜಿ ಡಾ. ಗೌರಿ ಹಡಿಗಾಲ್ ನೆರವೇರಿಸಲಿದ್ದಾರೆ.


ಕ್ಲಬ್ ನ ಕ್ಲಬ್ ಸರ್ವಿಸ್ ಡೈರೆಕ್ಟರ್ ಆಗಿ ಕುಸುಮ್ ರಾಜ್, ವೊಕೇಷನಲ್ ಸರ್ವಿಸ್ ಡೈರೆಕ್ಟರ್ ಆಗಿ ಗೌರವ ಭಾರದ್ವಾಜ್, ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಆಗಿ ನಿಹಾಲ್ ಶೆಟ್ಟಿ, ಇಂಟರ್ನ್ಯಾಷನಲ್ ಸರ್ವಿಸ್ ಡೈರೆಕ್ಟರ್ ಆಗಿ ವಿನೀತ್ ಶೆಣೈ, ಯುತ್ ಸರ್ವಿಸ್ ಡೈರೆಕ್ಟರ್ ಆಗಿ ಸುದರ್ಶನ್ ರೈ ಆಯ್ಕೆಯಾಗಿದ್ದಾರೆ.

ಬುಲೆಟಿನ್ ಎಡಿಟರ್ ಆಗಿ ಡಾ. ದೀಪಕ್ ಕೆ ಬಿ ಕ್ಲಬ್ ನ, ಅಸಿಸ್ಟೆಂಟ್ ಗವರ್ನರ್ ಆಗಿ ಡಾ. ಹರ್ಷಕುಮಾರ್ ರೈ, ಜೋನಲ್ ಲಿಫ್ಟಿನೆಂಟ್ ಆಗಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಕಾರ್ಯನಿರ್ವಹಿಸಲಿದ್ದಾರೆ.

ಟಿಪ್ಪರಿಗೆ ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು | ಮೃತ ಸವಾರನ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-06-10 03:37:31 |

Share: | | | | |


ಟಿಪ್ಪರಿಗೆ ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು | ಮೃತ ಸವಾರನ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಉಪ್ಪಿನಂಗಡಿ ಸಮೀಪದ ಪಂಜಳದಲ್ಲಿ ಟಿಪ್ಪರ್ ಹಾಗೂ ದ್ವಿಚಕ್ರ ನಡುವೆ ಜೂ 2 ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ನಡೆದಿದೆ.

ಮೃತ ಸವಾರ ಮಹಮ್ಮದ್ ಅನೀಸ್ ಮೃತಪಟ್ಟವರು. ಸಹಸವಾರ ಹಮೀದ್ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


ಬಿಸಿರೋಡ್ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಗೆ ನೀರಕಟ್ಟೆಯಿಂದ ಬಿಸಿರೋಡ್ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸವಾರ ಅನೀಸ್ ಅವರ ಮುಖಕ್ಕೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಸಹಸವಾರ ಹಮೀದ್ ಅವರ ಕಾಲಿಗೆ ಗಾಯವಾಗಿತ್ತು.

ಗಂಭೀರ ಗಾಯಗೊಂಡಿದ್ದ ಅನೀಸ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅನೀಸ್ ಅವರು ಮುಂಭಾಗದಿಂದ ಬರುತ್ತಿದ್ದ ಬೇರೆ ನಂಬರ್  ನ ಮೋಟಾರ್ ಸೈಕಲ್ ಸವರನಿಗೆ  ನಮಸ್ಕಾರ ಮಾಡುತ್ತಾ, ರಾಂಗ್ ಸೈಡಿನಿಂದ ವಾಹನ ಚಲಾಯಿಸುತ್ತಿದ್ದರು. ಇದರಿಂದಾಗಿ ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ಟಿಪ್ಪರ್ ಚಾಲಕ ಆಶಿಫ್ ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದ ಮೃತಪಟ್ಟ ಅನೀಸ್ ವಿರುದ್ಧ ಐಪಿಸಿ ಕಲಂ 279, 337, 304(ಎ) ಅಡಿಯಲ್ಲಿ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Comment: