ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

Posted by Vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಪೌರತ್ವ ಕಾಯಿದೆ ಜಾರಿ ವಿರೋಧಿಸಿ ಎಸ್‌ ಡಿಪಿಐ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ

Posted by Vidyamaana on 2024-03-14 12:49:33 |

Share: | | | | |


ಪೌರತ್ವ ಕಾಯಿದೆ ಜಾರಿ ವಿರೋಧಿಸಿ ಎಸ್‌ ಡಿಪಿಐ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ

ಪುತ್ತೂರು: ಕೇಂದ್ರ ಸರಕಾರ ಅಸಾಂವಿಧಾನಿಕ CAA ಜಾರಿ ಮಾಡಿದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಕರೆ ನೀಡಿದ್ದ ಪ್ರತಿಭಟನೆಯ ಭಾಗವಾಗಿ  ಎಸ್‌ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪುತ್ತೂರಿನ ದರ್ಬೆ ವೃತ್ತದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ  ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರ ನೇತೃತ್ವದಲ್ಲಿ  ಬೃಹತ್ ಪ್ರತಿಭಟನೆ ನಡೆಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರ ಮಾತಾಡಿ  CAA ಕಾಯ್ದೆಯು ಈ ದೇಶದ ಜಾತ್ಯಾತೀತ ಪರಂಪರೆಗೆ ಮಾರಕ ಮತ್ತು ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.


ದಿಕ್ಸೂಚಿ ಭಾಷಣ ಮಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯರೂ ಕ್ಷೇತ್ರ ಸಮಿತಿಯ ಉಸ್ತುವಾರಿಯೂ ಆಗಿರುವ ಅಬೂಬಕ್ಕರ್ ಸಿದ್ದೀಕ್ ಪುತ್ತೂರು ರವರು ಮಾತಾಡಿ ಈ ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ ಸಂವಿಧಾನದ ಆಶಯಗಳನ್ನು ಉಪಯೋಗಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷವು ಇಂದು ಅದೇ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ದೇಶವನ್ನು ಒಡೆಯುವ ಕಾರ್ಯ ಮಾಡುತ್ತಿದೆ.ಆದುದರಿಂದ ಈ ದೇಶದಿಂದಲೇ ಬಿಜೆಪಿ ಪಕ್ಷವನ್ನು ನಿರ್ನಾಮ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಮಾತಾಡಿ  ಈ ಜನವಿರೋಧಿ ಕಾನೂನನ್ನು ಹಿಂಪಡೆಯದಿದ್ದರೆ SDPI ಪಕ್ಷವು ಯಾವುದೇ ರಾಜಿ ಇಲ್ಲದೆ ದೇಶಾದ್ಯಂತ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.


ಪ್ರತಿಭಟನಾ ಸಭೆಯಲ್ಲಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಏ.ಕೆ,ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೊಡಿಪ್ಪಾಡಿ, ಕೋಶಾಧಿಕಾರಿ ವಿಶ್ವನಾಥ ಪುಂಚತ್ತಾರು, ಕ್ಷೇತ್ರ ಸಮಿತಿ ಸದಸ್ಯರಾದ ಡಿ.ಬಿ. ಮುಸ್ತಫಾ ವಿಟ್ಲ, ಅಶ್ರಫ್ ಬಾವು ಪಡೀಲ್, ಹಾಗೂ ಬ್ಲಾಕ್ ಮಟ್ಟದ ಮತ್ತು ಪಟ್ಟಣ ಸಮಿತಿ ಮತ್ತು ನಗರ ಸಮಿತಿಯ ನಾಯಕರು ಮತ್ತು ವ್ಯಾಪ್ತಿಯ ಹಲವಾರು ಕಾರ್ಯಕರ್ತರು,ಬೆಂಬಲಿಗರು ಭಾಗವಹಿಸಿದ್ದರು.


 ಪುತ್ತೂರು ಕ್ಷೇತ್ರ ಪಕ್ಷ ಸಂಘಟನಾ ಕಾರ್ಯದರ್ಶಿ ರಿಯಾಝ್ ಬಳಕ್ಕ ರವರು ಕಾರ್ಯಕ್ರಮ ನಿರೂಪಿಸಿದರು

ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Posted by Vidyamaana on 2023-08-15 23:14:52 |

Share: | | | | |


ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಪುತ್ತೂರು : ಹಯಾತುಲ್ ಇಸ್ಲಾಂ ಮದ್ರಸ ಮತ್ತು ರಹ್ಮಾನಿಯಾ ಜುಮಾ ಮಸೀದಿ ಮುಕ್ವೆ ಇದರ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವನ್ನು  ಮದರಸದ ವಠಾರದಲ್ಲಿ ಆಚರಿಸಲಾಯಿತು .ಮುಕ್ವೆ ಜಮಾ ಅತ್ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್ ಧ್ವಜಾರೋಹನ ನೆರವೇರಿಸಿದರು. ಖತೀಬರಾದ ಅನ್ವರ್ ಅಲಿ ದಾರಿಮಿ ದುವಾ ನೆರವೇರಿಸಿ ಸಂದೇಶ ಭಾಷಣ ನಡೆಸಿದರು. ಕಾರ್ಯಕ್ರಮದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ಸ್ಕೌಟ್ ಪ್ರದರ್ಶನ ನಡೆಯಿತು. ಸ್ವಾತಂತ್ರ್ಯೋತ್ಸವದ ಭಾಗವಾಗಿ ವಿದ್ಯಾರ್ಥಿಗಳಿಗೆ ನಡೆಸಲ್ಪಟ್ಟ ಸ್ಪರ್ಧಾ ಕಾರ್ಯಕ್ರಮದ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರು, ವಿದ್ಯಾರ್ಥಿಗಳು, ಜಮಾತ್ ಸಮಿತಿ ಸದಸ್ಯರು, ಪೋಷಕರು, ಜಮಾತ್ ಬಾಂಧವರು, SKSSF ಶಾಖೆಯ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಉಮರ್ ಯಮಾನಿ ಸ್ವಾಗತಿಸಿ ವಂದಿಸಿದರು

ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಮುಂಗಾರಿಗೆ ಮೆರುಗು

Posted by Vidyamaana on 2023-06-26 01:55:32 |

Share: | | | | |


ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಮುಂಗಾರಿಗೆ ಮೆರುಗು

ಪುತ್ತೂರು: ಸ್ವರ್ಣೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಜಿ.ಎಲ್. ಜ್ಯುವೆಲ್ಲರ್ಸ್ನ ಪುತ್ತೂರು ಮಳಿಗೆಯಲ್ಲಿ ಜೂ. 26ರಿಂದ ಕಿವಿಯೋಲೆ ಮತ್ತು ಉಂಗುರಗಳ ಹಬ್ಬ ನಡೆಯಲಿದೆ.

ಜನರ ಮನಗೆದ್ದಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಜ್ಯುವೆಲರ್ಸ್ 

ಸ್ವರ್ಣೋದ್ಯಮದಲ್ಲಿ 66 ವರ್ಷಗಳಿಂದ ಜನಮನ ಗೆದ್ದು ಚಿನ್ನಾಭರಣ ಪ್ರಿಯರ ಮನೆಮಾತಾಗಿ ಕರಾವಳಿ ಹಾಗೂ ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಪುತ್ತೂರು ಚಿನ್ನಾಭರಣ ಮಳಿಗೆಯಲ್ಲಿ ಜೂ.26 ರಿಂದ ಸೀಮಿತ ಆವಧಿಯ ವರೆಗೆ ‘ಕಿವಿಯೋಲೆ ಮತ್ತು ಉಂಗುರಗಳ ಹಬ್ಬ’ ಆಯೋಜಿಸಲಾಗಿದೆ.

ಮುಂಗಾರಿನ ಮೆರುಗನ್ನು ವೃದ್ಧಿಸಲು ಆಯೋಜಿಸಲಾದ ಈ ವಿಶೇಷ ಮಾರಾಟದಲ್ಲಿ ಆಕರ್ಷಕ ವಿನ್ಯಾಸದ ಕಿವಿಯೋಲೆ ಮತ್ತು ಉಂಗುರಗಳು ಕನಿಷ್ಠ ಮೇಕಿಂಗ್ ಜಾರ್ಜ್‌ನಲ್ಲಿ (10% ರಿಂದ ಆರಂಭ) ಲಭ್ಯವಿದ್ದು ಎಲ್ಲಾ ವಯೋಮಾನದ ಮಹಿಳೆಯರ ಮಕ್ಕಳ ಹಾಗೂ ಪುರುಷರಿಗೊಪ್ಪುವ ವೈವಿಧ್ಯಮಯ ಚಿನ್ನದೊಡವೆಗಳ ಸಂಗ್ರಹ ಇಲ್ಲಿದೆ.

ಅರ್ಧ ಗ್ರಾಂನಿಂದ ಮೊದಲ್ಗೊಂಡು 32 ತೂಕದ ವರೆಗೆ ವಿವಿಧ ವಿನ್ಯಾಸಗಳ ಕಿವಿಯೋಲೆಗಳ ಸಂಗ್ರಹ ಲಭ್ಯ, ಸ್ಥಳೀಯ ನುರಿತ ಕುಶಲಕರ್ಮಿಗಳಿಂದ ತಯಾರಿಸಿದ ಕಿವಿಯೋಲೆಗಳು ಮಾತ್ರವಲ್ಲದೆ ಗಿಳಿಯೋಲೆ, ಚಾಂದ್‌ಬಾಲಿ, ಕೊಲ್ಕತ್ತಾ, ರಾಜ್‌ಕೋಟ್, ಕಾರವಾರ ಮುಂತಾದ 2,900 ಮಿಕ್ಕಿ ಕಿವಿಯೋಲೆಗಳು ಹಾಗೂ 2,500ಕ್ಕೂ ಮಿಕ್ಕಿ ವಿವಿಧ ವಿನ್ಯಾಸದ ಉಂಗುರಗಳ ಸಂಗ್ರಹ ಗ್ರಾಹಕರ ಆಯ್ಕೆಗೆ ಲಭ್ಯವಿದೆ.

ಕಳೆದ ಮೇ ತಿಂಗಳಿನಲ್ಲಿ ಚಿನ್ನದ ದರ ಪ್ರತಿ ಗ್ರಾಂ ಗೆ ರೂ 5,720/- ತನಕ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲಿ ಪ್ರತಿ ಗ್ರಾಂ ಗೆ ರೂ 300/- ರಷ್ಟು ಇಳಿಕೆಯಾಗಿ ಚಿನ್ನದ ದರ ಇಳಿಕೆಯ ಪ್ರಯೋಜನವನ್ನು ಸಹ ಗ್ರಾಹಕರು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ

ಚಾಕೋಲೇಟ್‌ ಎಂದು ಭಾವಿಸಿ ಮಾತ್ರೆ ತಿಂದಿದ್ದ 4 ವರ್ಷದ ಮಗು ಸಾವು

Posted by Vidyamaana on 2024-03-08 07:22:23 |

Share: | | | | |


ಚಾಕೋಲೇಟ್‌ ಎಂದು ಭಾವಿಸಿ ಮಾತ್ರೆ ತಿಂದಿದ್ದ 4 ವರ್ಷದ ಮಗು ಸಾವು

ಪೋಷಕರೇ ಎಚ್ಚರ: ಮಕ್ಕಳ ಎದುರು ಮಾತ್ರೆಗಳನ್ನ ಇಟ್ಟು ಎಲ್ಲೂ ಹೋಗ್ಬೇಡಿ, ಅಪಾಯ ಕಟ್ಟಿಟ್ಟ ಬುತ್ತಿ


ಚಿತ್ರದುರ್ಗ: ಚಾಕೋಲೇಟ್‌ ಎಂದುಕೊಂಡು ಮನೆಯಲ್ಲಿದ್ದ ಮಾತ್ರೆ ಸೇವಿಸಿದ್ದ 4 ವರ್ಷದ ಗಂಡು ಮಗು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.ಚಿತ್ರದುರ್ಗ ತಾಲೂಕು ಕಡಬನಕಟ್ಟೆ ನಿವಾಸಿ ವಸಂತಕುಮಾರ್‌ ಹಾಗೂ ಪವಿತ್ರಾ ದಂಪತಿ ಪುತ್ರ ಹೃತ್ವಿಕ್‌ ಮೃತಪಟ್ಟ ಮಗು.ಮಾ.2ರಂದು ಮಧ್ಯಾಹ್ನ 12:30ರ ಸುಮಾರಿಗೆ ಮನೆಯಲ್ಲಿ ಯಾರೂ ಯಾರೂ ಇಲ್ಲದ ವೇಳೆ ಕಪಾಟಿನಲ್ಲಿದ್ದ ಮಾತ್ರೆಗಳನ್ನು ಮಗು ತಿಂದಿದೆ. ನಂತರ ಸುಸ್ತಾಗಿದ್ದು, ತಾಯಿಗೆ ಸನ್ನೆಯ ಮೂಲಕ ಮಾತ್ರೆ ತಿಂದಿರುವುದನ್ನು ತಿಳಿಸಿದೆ.


ತಕ್ಷಣ ಮಗುವನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಾ.3ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.6ರಂದು ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.


ಈ ಕುರಿತು ಮೃತ ಮಗುವಿನ ತಂದೆ ವಸಂತಕುಮಾರ್‌ ತುರುವನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೈವಳಿಕೆಯಲ್ಲಿ ಕೊಲೆ ಪುತ್ತೂರಿನಲ್ಲಿ ಸೆರೆ

Posted by Vidyamaana on 2023-06-03 10:52:32 |

Share: | | | | |


ಪೈವಳಿಕೆಯಲ್ಲಿ ಕೊಲೆ ಪುತ್ತೂರಿನಲ್ಲಿ ಸೆರೆ

ಪುತ್ತೂರು: ಕಾಸರಗೋಡಿನ ಪೈವಳಿಕೆಯಲ್ಲಿ ತಮ್ಮನನ್ನು ಇರಿದು ಕೊಂದ ಅಣ್ಣ ಪುತ್ತೂರಿನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ಸಹೋದರರ ನಡುವಿನ ವೈಷಮ್ಯದ ಕಾರಣದಿಂದ ಅಣ್ಣ ಜಯರಾಮ, ತಮ್ಮ ಪ್ರಭಾಕರ ನೋಂಡಾ (40) ಎಂಬವರನ್ನು ಇರಿದು ಹತ್ಯೆ ಮಾಡಿದ್ದ ಘಟನೆ ಶನಿವಾರ ಬೆಳಿಗ್ಗೆ ಪೈವಳಿಕೆಯಲ್ಲಿ ನಡೆದಿತ್ತು.

ಕೇರಳದ ಪೈವಳಿಕೆಯಲ್ಲಿ ಕೊಲೆ ಮಾಡಿ ಪುತ್ತೂರಿನಲ್ಲಿ ಬಂದು ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಪುತ್ತೂರಿನ ಕೊಂಬೆಟ್ಟಿನಿಂದ ವಶಕ್ಕೆ ಪಡೆದುಕೊಂಡಿದ್ದಾರೆ.


ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಸಹಕರಿಸಿದ್ದಾರೆ. ಪ್ರಭಾಕರ ವಿರುದ್ಧ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.



Leave a Comment: