KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ದರ್ಗಾದಲ್ಲಿ ಮೌಲ್ವಿಗಳಿಂದ ನವಿಲು ಗರಿ ಬಳಕೆ ವಿಚಾರ: ಬಿ.ಕೆ ಹರಿಪ್ರಸಾದ್ ಹೇಳಿದ್ದೇನು..?

Posted by Vidyamaana on 2023-10-29 11:40:47 |

Share: | | | | |


ದರ್ಗಾದಲ್ಲಿ  ಮೌಲ್ವಿಗಳಿಂದ ನವಿಲು ಗರಿ ಬಳಕೆ ವಿಚಾರ: ಬಿ.ಕೆ ಹರಿಪ್ರಸಾದ್ ಹೇಳಿದ್ದೇನು..?

ಚಿತ್ರದುರ್ಗ: ಈ ಹಿಂದೆ ಪ್ರಧಾನಮಂತ್ರಿಯವರು ನವಿಲು ಗರಿ (Peacock feather) ಧರಿಸಿದ್ದರು, ನವಿಲು ಸಾಕಿದ್ದರು. ಹಾಗೆಂದ ಮಾತ್ರಕ್ಕೆ ಪೊಲೀಸರು (Police) ಅವರನ್ನು ಹಿಡಿದುಕೊಂಡು ಹೋಗಬೇಕಾ? ಫ್ಯಾಷನ್‌ಗಾಗಿ ಹುಲಿ ಉಗುರು ಇತರೆ ವಸ್ತು ಬಳಸುವುದು ಸರಿಯಲ್ಲ, ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿದವರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Haripras

non

) ಆಗ್ರಹಿಸಿದ್ದಾರೆ.ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಹುಲಿ ಉಗುರು, ಕರಡಿ ಕೂದಲು ಸೇರಿದಂತೆ ಆನೆ ಕೂದಲು, ದಂತ ಹಾಗೂ ಇತರೆ ವಸ್ತುಗಳನ್ನು ಧರಿಸಿ ಕಾಡುಪ್ರಾಣಿಗಳನ್ನು ಅಣಕಿಸುವ ಕಾರ್ಯಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ದರ್ಗಾದಲ್ಲಿ, ಮೌಲ್ವಿಗಳಿಂದ ನವಿಲು ಗರಿ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನ ಮಂತ್ರಿಗಳೂ (Prime Minister) ನವಿಲು ಸಾಕಿದ್ದರು, ನವಿಲು ಗರಿ ಧರಿಸಿದ್ದರು. ಹಾಗಂತ ಪ್ರಧಾನಿಯವರನ್ನ ಪೊಲೀಸರು ಹಿಡಿದುಕೊಂಡು ಹೋಗಬೇಕಾ? ದರ್ಗಾಗಳಲ್ಲಿ ಮೌಲ್ವಿಗಳು ಬಳಸುವ ನವಿಲುಗರಿ ಕೂಡ ನೈಸರ್ಗಿಕವಾಗಿ ಉದುರುತ್ತದೆ. ಒಂದು ವೇಳೆ ನವಿಲನ್ನು ಕೊಂದು ಗರಿ ತಂದಿದ್ದರೆ ಅಂಥವರ ವಿರುದ್ಧವೂ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ.

ವ್ಯಾಲೆಂಟೈನ್ಸ್ ಡೇ ದಿನ ಕಿಸ್, ಬಟ್ಟೆಗಿಂತ ಇದನ್ನು ಕೇಳಿದ್ದಾರೆ ಬಹುತೇಕ ಜನ

Posted by Vidyamaana on 2024-02-13 13:28:42 |

Share: | | | | |


ವ್ಯಾಲೆಂಟೈನ್ಸ್ ಡೇ ದಿನ ಕಿಸ್, ಬಟ್ಟೆಗಿಂತ ಇದನ್ನು ಕೇಳಿದ್ದಾರೆ ಬಹುತೇಕ ಜನ

ಪ್ರೇಮಿಗಳ ದಿನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುವುದು. ಭಾರತದಲ್ಲಿ ಪ್ರೇಮಿಗಳು ಪರಸ್ಪರ ಬಟ್ಟೆ, ಹೂ, ಚಾಕೋಲೇಟ್‌, ಗ್ಯಾಜೆಟ್‌, ಮನೆ ವಸ್ತು ಸೇರಿದಂತೆ ಅನೇಕ ರೀತಿಯ ವಸ್ತುಗಳನ್ನು ನೀಡಿ ವ್ಯಾಲಂಟೈನ್ಸ್‌ ಡೇ ಆಚರಣೆ ಮಾಡುತ್ತಾರೆ.ಆದ್ರೆ ಎಲ್ಲ ದೇಶದಲ್ಲೂ ಬರೀ ವಸ್ತುಗಳೇ ಉಡುಗೊರೆಯಾಗಿ ಸಿಗಬೇಕು ಎಂದೇನಿಲ್ಲ. ಹಣವನ್ನು ಕೂಡ ಉಡುಗೊರೆ ರೂಪದಲ್ಲಿ ನೀವು ದೇಶವಿದೆ. ಯಸ್.‌ ನಾವು ಫಿಲಿಪೈನ್ಸ್‌ ಬಗ್ಗೆ ಹೇಳ್ತಿದ್ದೇವೆ.


ಪ್ರೇಮಿಗಳ ದಿನಕ್ಕೂ ಮುನ್ನ ಅಲ್ಲೊಂದು ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ ಬೇರೆ ಬೇರೆ ರಾಜ್ಯದ 1,200 ಜನರು ಪಾಲ್ಗೊಂಡಿದ್ದರು. ಈ ವೇಳೆ ವ್ಯಾಲಂಟೈನ್ಸ್‌ ಡೇ ಸಮಯದಲ್ಲಿ ಯಾವ ಉಡುಗೊರೆ ಬಯಸ್ತೀರಿ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅನೇಕರು ನೀಡಿದ ಉತ್ತರ ಹಣ. ‌ ಫಿಲಿಪೈನ್ಸ್‌ನ ಸಾಮಾಜಿಕ ಹವಾಮಾನ ಕೇಂದ್ರ ಸಮೀಕ್ಷೆ ನಡೆಸಿದ್ದು, ಎಷ್ಟು ಮಂದಿ ಯಾವ ಉಡುಗೊರೆ ಬಯಸಿದ್ದಾರೆ ಎಂಬುದನ್ನು ಅದು ಅಂಕಿ ಮೂಲಕ ವಿವರಿಸಿದೆ.ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 16ರಷ್ಟು ಮಂದಿ ಹಣ ನಿರೀಕ್ಷೆ ಮಾಡಿದ್ರೆ ಶೇಕಡಾ 11 ಮಂದಿ ಪ್ರೀತಿ ಒಡನಾಟ ಎಂದಿದ್ದಾರೆ. ಶೇಕಡಾ 10 ಮಂದಿ ಹೂವಾದ್ರೆ ಶೇಕಡಾ 9 ಮಂದಿ ಬಟ್ಟೆ ಆಯ್ಕೆ ಮಾಡಿದ್ದಾರೆ.


ಬೈಕ್‌, ವಾಹನ, ಗ್ರೀಟಿಂಗ್‌ ಕಾರ್ಡ್‌, ಕಿಸ್‌ ಕೇಳಿದವರ ಸಂಖ್ಯೆ ಶೇಕಡಾ ಒಂದಷ್ಟಿದೆ. ಸಮೀಕ್ಷೆಯಲ್ಲಿ ಇನ್ನೂ ಅನೇಕ ವಿಷ್ಯವನ್ನು ತಿಳಿಯುವ ಪ್ರಯತ್ನ ನಡೆಸಲಾಗಿದೆ. ಯಾರು ಖುಷಿಯಾಗಿದ್ದಾರೆ ಎಂಬುದನ್ನೂ ಇದ್ರಲ್ಲಿ ಪತ್ತೆ ಮಾಡಲಾಗಿದೆ. ಸಮೀಕ್ಷೆ ಪ್ರಕಾರ, ಮದುವೆಯಾದ ಶೇಕಡಾ 76ರಷ್ಟು ಪುರುಷರು ಖುಷಿಯಾಗಿದ್ರೆ ಮಹಿಳೆಯರ ಸಂಖ್ಯೆ ಶೇಕಡಾ 67ರಷ್ಟಿದೆ. ಉಡುಗೊರೆ ರೂಪದಲ್ಲಿ ಹಣ ಕೇಳಿದವರಲ್ಲಿ ಮಹಿಳೆಯರು ಮುಂದಿದ್ದಾರೆ.

ಲವರ್ ಡೆತ್‌ನೋಟ್‌ನಲ್ಲಿ ಕೋಡ್‌: ಹತ್ಯೆಗೀಡಾದ ಪ್ರೇಯಸಿ ಮೃತದೇಹ ಪತ್ತೆ!

Posted by Vidyamaana on 2024-01-19 08:41:37 |

Share: | | | | |


ಲವರ್ ಡೆತ್‌ನೋಟ್‌ನಲ್ಲಿ ಕೋಡ್‌: ಹತ್ಯೆಗೀಡಾದ ಪ್ರೇಯಸಿ ಮೃತದೇಹ ಪತ್ತೆ!

ಮುಂಬಯಿ : ಮಹಾ ರಾಷ್ಟ್ರದ ನವಿಮುಂಬಯಿ ಯಿಂದ 2023ರ ಡಿ. 12ರಂದು ನಾಪತ್ತೆಯಾಗಿದ್ದ 19 ವರ್ಷದ ಯುವತಿ ವೈಷ್ಣವಿ ಬಾಬರ್‌ ಎಂಬವರ ಶವ ಕೊನೆಗೂ ಪತ್ತೆಯಾಗಿದೆ. ವಿಚಿತ್ರವೆಂದರೆ ಶವ ಪತ್ತೆಯಾಗಿರುವುದು ಆಕೆಯ ಪ್ರಿಯಕರ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿದ್ದ ಸೀಕ್ರೆಟ್‌ ಕೋಡ್‌ನಿಂದ!ಹೌದು, ವೈಭವ ಎಂಬ ಯುವಕನ ಜತೆಗೆ ಪ್ರೀತಿಯಲ್ಲಿದ್ದ ವೈಷ್ಣವಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಆಕೆ ನಾಪತ್ತೆಯಾಗಿದ್ದ ದಿನವೇ ಇತ್ತ ವೈಭವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಶವವೇನೋ ಸಿಕ್ಕಿತ್ತು ಆದರೆ ವೈಷ್ಣವಿ ಏನಾದಳೆಂಬುದು ತಿಳಿದು ಬಂದಿರಲಿಲ್ಲ. ಬಳಿಕ ಪೊಲೀಸರು ವೈಭವ್‌ ಮೊಬೈಲ್‌ನಲ್ಲಿದ್ದ ಡೆತ್‌ನೋಟ್‌ ಗಮನಿಸಿ ದಾಗ ಅದರಲ್ಲಿ “ಎಲ್‌01-501′ ಎಂಬ ಕೋಡ್‌ ಇದ್ದದ್ದನ್ನು ಗಮನಿಸಿದ್ದಾರೆ. ಅದರ ಬೆನ್ನು ಹತ್ತಿ ತನಿಖೆ ನಡೆಸಿದಾಗ ಆ ಸಂಖ್ಯೆಯು ಅರಣ್ಯ ಇಲಾಖೆಯು ಮರ ವೊಂದರ ಮೇಲೆ ಬರೆದಿರುವ ಸಂಖ್ಯೆ ಎಂದು ತಿಳಿದುಬಂದಿದ್ದು, ಅದೇ ಮರದ ಕೆಳಗೆ ವೈಷ್ಣವಿಯ ಶವ ಹೂತಿರುವುದು ಪತ್ತೆಯಾಗಿದೆ.

ವಾಹನ ಮಾಲೀಕ ರಿಗೆ ಬಿಗ್ ರಿಲೀಫ್‌: HSRP ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ

Posted by Vidyamaana on 2024-06-12 21:00:05 |

Share: | | | | |


ವಾಹನ ಮಾಲೀಕ ರಿಗೆ ಬಿಗ್ ರಿಲೀಫ್‌: HSRP ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ

ಬೆಂಗಳೂರು : ವಾಹನ ಸವಾರರಿಗೆ ಬಿಗ್ ರಿಲೀಫ್ ಎನ್ನುವಂತೆ ಇಂದು ಹೈಕೋರ್ಟ್ ಸೆಪ್ಟೆಂಬರ್ ವರೆಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಿಸೋದಕ್ಕೆ ಅನುಮತಿ ನೀಡಿದೆ. ಹೀಗಾಗಿ ವಾಹನ ಸವಾರರು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸೋದಕ್ಕೆ ಸೆಪ್ಟೆಂಬರ್ ವರೆಗೆ ಗಡುವು ವಿಸ್ತರಣೆಯಾದಂತೆ ಆಗಿದೆ.

ಇಂದು ಬಿಎನ್ ಡಿ ಎನರ್ಜಿ ಲಿಮಿಟೆಡ್ ಮತ್ತಿತರರು ಹೈಕೋರ್ಟ್ ಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು, ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ ಅರವಿಂದ ಅವರನ್ನೊಳಗೊಂಡಂತ ನ್ಯಾಯಪೀಠವು ವಿಚಾರಣೆ ನಡೆಸಿತು.

ಬೆಳ್ತಂಗಡಿ ನೇಣು ಬಿಗಿದು ಅರ್ಚಕ ವಿಜಯ್ ಆತ್ಮಹತ್ಯೆ

Posted by Vidyamaana on 2024-05-05 08:14:27 |

Share: | | | | |


ಬೆಳ್ತಂಗಡಿ ನೇಣು ಬಿಗಿದು ಅರ್ಚಕ ವಿಜಯ್ ಆತ್ಮಹತ್ಯೆ

ಬೆಳ್ತಂಗಡಿ: ಸವಣಾಲು ಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ಶಿರಸಿ ಮೂಲದ ವಿಜಯ್‌ ಹೆಗಡೆ (33) ಅವರು ದೇವಸ್ಥಾನದ ಹಿಂಭಾಗದಲ್ಲಿ ತಾನು ವಾಸವಿಗಿದ್ದ ಮನೆಯ ಹಿಂಬದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 4ರಂದು ನಡೆದಿದೆ.ಸುಮಾರು 10 ವರ್ಷಗಳಿಂದ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.ಎಂದಿನಂತೆ ಶನಿವಾರ ಮುಂಜಾನೆ ಭಕ್ತರು ಆಗಮಿಸುವ ವೇಳೆ ಅರ್ಚಕ ವಿಜಯ್‌ ಹೆಗಡೆ ಬಾರದೇ ಇರುವುದನ್ನು ಕಂಡು ಕ್ಷೇತ್ರದ ಸಿಬಂದಿ ಹಾಗೂ ಭಕ್ತರು ಅವರು ತಂಗುತ್ತಿದ್ದ ವಸತಿಗೃಹಕ್ಕೆ ವಿಚಾರಿಸಲು ತೆರಳಿದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ.

ಉಪ್ಪಿನಂಗಡಿ : ಪತ್ನಿಗೆ ಕಿರುಕುಳ ವಂಚನೆ ಪ್ರಕರಣ

Posted by Vidyamaana on 2023-09-27 12:54:39 |

Share: | | | | |


ಉಪ್ಪಿನಂಗಡಿ : ಪತ್ನಿಗೆ ಕಿರುಕುಳ ವಂಚನೆ ಪ್ರಕರಣ

ಉಪ್ಪಿನಂಗಡಿ : ಪತ್ನಿಗೆ ವಂಚಿಸಿ ಇನ್ನೊಂದು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಮಹಮ್ಮದ್ ಜಲೀಲ್ ಬಂಧಿತ ಆರೋಪಿ.ಜಲೀಲ್ ಮೊದಲ ಪತ್ನಿಯ ತಂದೆ 2020 ರಲ್ಲಿ ಈ ಬಗ್ಗೆ ಠಾಣೆಗೆ ದೂರು ನೀಡಿದ್ದರು.


ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 128 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು.


ಜಲೀಲ್ ಪತ್ನಿ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.


2019 ರಲ್ಲಿ ಜಲೀಲ್ ಮದುವೆಯಾಗಿದ್ದು, ಮದುವೆ ಆದ ನಂತರದಲ್ಲಿ ಜಲೀಲ್ ವಿದೇಶಕ್ಕೆ ಹೋಗಿದ್ದು, ಜಲೀಲ್ ಸಹೋದರರು  ಆತನ ಪತ್ನಿ ವಾಸ ಇರುವ ಮನೆಯಲ್ಲಿಯೇ ವಾಸವಿದ್ದು, ಜಲೀಲ್ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದು, ಫೋನ್ ಕರೆಯಲ್ಲಿ  ಕುಟುಂಬಕ್ಕೆ ಮತ್ತು ಜಲೀಲ್ ಪತ್ನಿಗೆ ಅವಾಚ್ಯ ಶಬ್ದಗಳಿಂದ

ಬೈಯುವುದು ಅಲ್ಲದೆ ನೀನು ಮನೆಯಿಂದ ಹೊರಗೆ ಹೋಗು ನಾನು ನಿನಗೆ ತಲಾಖ್ ನೀಡಿರುತ್ತೇನೆ. ನೀನು ನಿನ್ನ ತವರು ಮನೆಗೆ ಹೋಗದಿದ್ದರೆ ನನ್ನ ತಮ್ಮಂದಿರಿಂದ ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ.


 ಬೈದಿರುವುದಲ್ಲದೆ  ನಿಂದಿಸುವುದು, ಆಕೆಗೆ ಆಹಾರ ನೀರು ನೀಡದೆ ಸತಾಯಿಸುವುದು, ಜೀವ ಬೆದರಿಕೆ ಹಾಕಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ.


 ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವನ್ನು ಪಿಎಸ್ಐ  ರವರ ಮಾರ್ಗದರ್ಶನದಲ್ಲಿ ಹೆಚ್ ಸಿ ಗಜೇಂದ್ರ, ಪಿಸಿ ಅಭಿಜಿತ್ ರವರು ದಸ್ತಗಿರಿ ಮಾಡಿ ಪುತ್ತೂರು ನ್ಯಾಯಲಯಕ್ಕೆ ಹಾಜರುಪಡಿಸಿದರು.

Recent News


Leave a Comment: