ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಮಠದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್‌

Posted by Vidyamaana on 2024-07-06 12:19:18 |

Share: | | | | |


ಮಠದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್‌

ರಾಯಚೂರು: ಭಕ್ತರಿಗೆ ಸೇರಿದ್ದ 40 ಲಕ್ಷ ರೂಪಾಯಿ ಹಣವನ್ನು ಸ್ವಂತಕ್ಕೆ ಮಾಡಿಕೊಳ್ಳುವುದಕ್ಕೆ ಸಂಚು ರೂಪಿಸಿ ದರೋಡೆ ಕತೆಯನ್ನು ಸೃ ಷ್ಟಿಸಿದ ಸ್ವಾಮೀಜಿಯ ಕಳ್ಳಾಟ (Cheating case) ಬಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಪ್ರಾಥಮಿಕ ಹಂತದಲ್ಲಿಯೇ ಸ್ವಾಮೀಜಿಯ ಕತೆ ಬಹಿರಂಗಗೊಂಡಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿರೋ ವಿಜಯಮಹಾಂತೇಶ್ವರ ಶಾಖಾ ಮಠ ನುಗ್ಗಿದ ದರೋಡೆಕೋರರು ತಮ್ಮನ್ನು ಬೆದರಿಸಿ 40 ಲಕ್ಷ ರೂಪಾಯಿ ಹಣ ದರೋಡೆ ಮಾಡಿದ್ದಾರೆ ಎಂದು ಇಲ್ಲಿನ ವಿಜಯಮಹಾಂತೇಶ್ವರ ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ ದೂರು ನೀಡಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಂಚಲನ ಮೂಡಿತ್ತು. ಮಠಕ್ಕೆ ನುಗ್ಗಿ ಹಣವನ್ನು ದರೋಡೆ ಮಾಡಿದವರನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ, ದೂರು ನೀಡಿದ ಸ್ವಾಮೀಜಿಯ ಕೆಲವೊಂದು ನಡೆ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು ಎಫ್​ಐಆರ್​ ದಾಖಲಿಸಿ ಒಂದೇ ದಿನದಲ್ಲಿ ದರೋಡೆ ಕೇಸನ್ನು ಭೇದಿಸಿದ್ದಾರೆ.

ಕೊಳ್ತಿಗೆ ವಲಯ ಕಾಂಗ್ರೆಸ್‌ಕಾರ್ಯಕರ್ತರ ಸಭೆ ಶಾಸಕರಿಗೆ ಸನ್ಮಾನ

Posted by Vidyamaana on 2023-09-27 12:27:06 |

Share: | | | | |


ಕೊಳ್ತಿಗೆ ವಲಯ ಕಾಂಗ್ರೆಸ್‌ಕಾರ್ಯಕರ್ತರ ಸಭೆ ಶಾಸಕರಿಗೆ ಸನ್ಮಾನ

ಪುತ್ತೂರು; ನಾವು ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಚ್ಚೇದಿನ್ ಕೊಡುತ್ತೇವೆ, ಜನರಿಗೆ ನೆಮ್ಮದಿಯ ಜೀವನ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಜನರ ಖಾತೆಗೆ ನಯಾ ಪೈಸೆ ನೀಡಿಲ್ಲ ಮತ್ತು ನೆಮ್ಮದಿಯ ಜೀವನವನ್ನೂ ನೀಡಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಆರೋಪಿಸಿದರು.

ಕೊಳ್ತಿಗೆ ವಲಯ ಕಾಂಗ್ರೆಸ್ ವತಿಯಿಂದ ಕೊಳ್ತಿಗೆ ಅಂಭೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಚುನಾವಣೆಯ ಸಂದರ್ಬದಲ್ಲಿ ರಾಜ್ಯದ ಜನತೆಗೆ ಕೊಟ್ಟಿದ್ದ ಗ್ಯಾರಂಟಿಯನ್ನು ಕಾಂಗ್ರೆಸ್ ಈಡೇರಿಸಿದೆ. ಜನರ ಖಾತೆಗೆ ಹಣವನ್ನು ನೀಡಿದ್ದೇವೆ, ಅಕ್ಕಿಯನ್ನು ನೀಡಿದ್ದೇವೆ, ಉಚಿತ ಕರೆಂಟ್ , ಮತ್ತು ಗೃಹಲಕ್ಷಿ ಯೋಜನೆಯ ೨ ಸಾವಿರ ಹಣ ಮತ್ತು ಉಚಿತ ಬಸ್ ಪ್ರಯಾಣವನ್ನು ಮಾಡಿದ್ದೇವೆ ಇ|ಂಥಹ ಒಂದೇ ಒಂದು ಕಾರ್ಯಕ್ರಮ ಬಿಜೆಪಿ ನೀಡಿದೆಯಾ? ಎಂದು ಪ್ರಶ್ನಿಸಿದರು. ಬಡವರು ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಚುನಾವಣೆಯ ಸಂದರ್ಬದಲ್ಲಿ ಜನರಲ್ಲಿ ಕೋಮು ಭಾವನೆಯನ್ನು ಬಿತ್ತಿ ಧರ್ಮದ ಆಧಾರದಲ್ಲಿ ಮತ ಪಡೆದು ಅಧಿಕಾರಕ್ಕೇರುವ ಬಿಜೆಪಿ ಬಳಿಕ ಜನರನ್ನು ಮರೆಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ, ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಲೇ ಬಿಜೆಪಿ ಗರು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.


ಎದೆಹುಬ್ಬಿಸಿ ನಡೆಯಿರಿ ಸರಕಾರ ನಮ್ಮದೇ: ಎಂ ಬಿ ವಿಶ್ವನಾಥ ರೈ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಕಿತ್ತು ಎನ್ನುವಷ್ಟರ ಮಟ್ಟಿಗೆ ರಾಜ್ಯದ ಬಿಜೆಪಿ ಅಡಳಿತ ಜನರಿಗೆ ಬೇಡವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ಸಮಾಧಾನಪಡುವಂತಾಯಿತು, ಪುತ್ತೂರಿನಲ್ಲಿ ನಮ್ಮದೇ ಶಾಸಕರಿದ್ದು ರಾಜ್ಯದಲ್ಲಿ ನಮ್ಮದೇ ಸರಕಾರ ಇದೆ ಇಷ್ಟು ದಿನ ತಲೆಬಾಗಿದ್ದು ಸಾಕು ಇನ್ನು ಎದೆ ಹುಬ್ಬಿಸಿ ನಡೆಯಿರಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದರು.

ಪುತ್ತೂರು ಶಾಸಕರಾದ ಅಶೋಕ್ ರೈಯವರು ಪುತ್ತೂರಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಶಾಸಕರ ಕಚೇರಿಗೆ ಬಂದು ಸಾವಿರಾರು ಮಂದಿ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ, ಭರವಸೆ ಮಾತ್ರ ನೀಡದೆ ಕೆಲಸ ಮಾಡಿ ತೋರಿಸುವ ತಾಕತ್ತು ನಮ್ಮ ಶಾಸಕರಿಗೆ ಇದೆ ಎಂಬುದು ಜನರಿಗೆ ಗೊತ್ತಾಗಿದೆ, ಮುಂದಿನ ಐದು ವರ್ಷದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪುತ್ತೂರು ಅಭಿವೃದ್ದಿ ಹೊಂದಲಿದೆ ಎಂದು ಹೇಳಿದರು.


ಪುತ್ತೂರಿಗೂ ಐದು ಗ್ಯಾರಂಟಿ : ಹೇಮನಾಥ ಶೆಟ್ಟಿ

ರಾಜ್ಯದಲ್ಲಿ ಕಾಂಗ್ರೆಸ್ ಜನತೆಗೆ ಐದು ಗ್ಯಾರಂಟಿ ಕೊಟ್ಟಿದ್ದರೆ ಪುತ್ತೂರು ಶಾಸಕರು ಕ್ಷೇತ್ರಕ್ಕೆ ಐದು ಗ್ಯಾರಂಟಿಯನ್ನು ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆಎಂಎಫ್ ಸ್ಥಳಾಂತರ, ಕೊಯಿಲ ಜಾನುವಾರು ಕೇಂದ್ರದ ಅಭಿವೃದ್ದಿ ಮತ್ತು ಪುತ್ತೂರು ನಗರದಲ್ಲಿ ಸಮಗ್ರ ಅಭಿವೃದ್ದಿ ಈ ಐದು ಗ್ಯಾರಂಟಿಯನ್ನು ಶಾಸಕರು ನೀಡಿದ್ದಾರೆ. ಇವುಗಳ ಪೈಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ೯೬೦ ಕೋಟಿ ಬಿಡುಗಡೆಯಾಗಿದೆ, ನಗರದ ಚರಂಡಿ ಕಾಮಗಾರಿಗೂ ೫೦೦ ಕೋಟಿ ಬಿಡುಗಡೆಯಾಗಿದೆ, ಕೆಎಂಎಫ್ ಸ್ಥಳಾಂತರಕ್ಕೆ ಜಾಗ ನಿಗಧಿಪಡಿಸಲಾಗಿದೆ, ಜಾನುವಾರು ಕೆಂದ್ರಕ್ಕೂ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದ ಅವರು ಈ ಐದು ಗ್ಯಾರಂಟಿಗಳು ಜಾರಿಯಾದ ಬಳಿಕ ಪುತ್ತೂರಿನ ಚಿತ್ರಣವೇ ಬದಲಾಗಲಿದೆ. ಇಲ್ಲಿನ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲಿದೆ, ಜನರ ಓಡಾಟ ಹೆಚ್ಚಾಗಿ ಪುತ್ತೂರಿನಲ್ಲಿ ವ್ಯಾಪಾರ, ವ್ಯವಹಾರ ಜಾಸ್ತಿಯಗಲಿದ್ದು ಒಟ್ಟಿನಲ್ಲಿ ಮುಂದೆ ಪುತ್ತೂರು ಜನತೆಗೆ ನೆಮ್ಮದಿಯ ದಿನಗಳು ಖಂಡಿತವಾಗಿಯೂ ಬರುತ್ತದೆ ಎಂದು ಹೇಳಿದರು.



ಶಾಸಕರಿಗೆ ಗಟ್ಸ್ ಇದೆ ಎಂಬುದು ಜನತೆಗೆ ಗೊತ್ತಾಗಿದೆ: ಬಡಗನ್ನೂರು

ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಸಕ ಅಶೋಕ್ ರೈ ಯವರಿಗೆ ಗಟ್ಸ್ ಇದೆ ಎಂಬುದು ಜನರಿಗೆ ಗೊತ್ತಾಗಿದೆ ಈ ಕಾರಣಕ್ಕೆ ಅವರು ಹೋದಲ್ಲೆಲ್ಲಾ ಜನ ಸುತ್ತುವರಿಯುತ್ತಾರೆ ಎಂದು ಹೇಳಿದರು. ನುಡಿದಂತೆ ನಡೆಯುವ ಮೂಲಕ ಶಾಸಕರು ಜನ ಮೆಚ್ಚುಗೆ ಗಳಿಸಿದ್ದಾರೆ.ಬಡವರ ಪರ ಅಪಾರ ಕಾಳಜಿ ಇರುವ ಶಾಸಕ ರೈಗಳ ಬಳಿ ನಿತ್ಯವೂ ನೂರಾರು ಸಮಸ್ಯೆಗಳನ್ನು ಹೊತ್ತ ಬಡವರು ಭೇಟಿಯಗಿ ಸಮಸ್ಯೆ ಇತ್ಯರ್ಥಮಾಡಿಕೊಳ್ಳುತ್ತಿದ್ದಾರೆ , ಈ ಹಿಂದೆ ಈ ಪರಿಪಾಟ ಇರಲಿಲ್ಲ ಶಾಸಕರು ಏನೆಲ್ಲಾ ಮಾಡಬಹುದು ಎಂಬುದನ್ನು ಅಶೋಕ್ ರೈ ತೋರಿಸಿಕೊಟ್ಟಿದ್ದಾರೆ. ಜನರ ಪರ ಕೆಲಸ ಮಾಡಲು ಶಾಸಕರಾದವರಿಗೆ ಗಟ್ಸ್ ಬೇಕು ಎಂಬುದು ಜನ ಮಾತನಾಡತೊಡಗಿದ್ದಾರೆ ಎಂದು ಬಡಗನ್ನೂರುರವರು ಹೇಳಿದರು. ಭೃಷ್ಟಾಚಾರ ಮುಕ್ತ ಪುತ್ತೂರನ್ನಾಗಿ ಮಾಡುವಲ್ಲಿ ಅವರ ಶ್ರಮ ಸಫಲವಾಗಲಿದೆ ಎಂದು ಹೇಳಿದರು.



ಕಾಂಗ್ರೆಸ್ಸನ್ನು ಮರೆಯದಿರಿ: ಅಮಲರಾಮಚಂದ್ರ

ಕಳೆದ ಮೂರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಜನತೆಗೆ ನೆಮ್ಮದಿಯ ಜೀವನವನ್ನು ನೀಡಿದೆ, ಎಲ್ಲರ ಖಾತೆಗೂ ಹಣ ಬಂದಿದೆ, ನಾವು ಸುಳ್ಳು ಹೇಳಿ ಮೋಸ ಮಾಡುವವರಲ್ಲ ನಮ್ಮದೇನಿದ್ದರೂ ನುಡಿದಂತೆ ನಡೆಯುವ ಜಾಯಾಮಾನವಾಗಿದ್ದು ನೆಮ್ಮದಿಯ ಬದುಕು ನೀಡಿದ ಕಾಂಗ್ರೆಸ್ಸನ್ನು ಯಾರೂ ಮರೆಯಬಾರದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಅಮಲರಾಮಚಂದ್ರ ಮನವಿ ಮಾಡಿದರು. ಕೊಳ್ತಿಗೆಯಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಕೊಳ್ತಿಗೆಯ ಬಿಜೆಪಿಗರು ಇಲ್ಲಿನ ತಮಿಳು ನಿವಾಸಿಗಳಿಗೆ ತೊಂದರೆ ನೀಡಿದ್ದಾರೆ, ಅವರು ಮನೆ ನಿರ್ಮಾಣ ಮಾಡಲು ಸರಕಾರ ಜಾಗ ಕೊಟ್ಟರೂ ಅಲ್ಲಿ ಮನೆ ನಿರ್ಮಾಣ ಮಾಡಲು ಬಿಜೆಪಿ ಅಡ್ಡಿಪಡಿಸಿತ್ತು, ಶಾಸಕರಾದ ಅಶೋಕ್ ರೈ ಆ ಕುಟುಂಬಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು.


 ನಿಗಮ ಕೊಡಿ

ಸಭೆಯಲ್ಲಿ ಮಾತನಾಡಿದ ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷರಾದ ಕೆ ಎಸ್ ಪ್ರಮೋದ್‌ರವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಾವು ಹೇಮನಾಥ ಶೆಟ್ಟಿಯವರು ಪಕ್ಷಕ್ಕಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದವರು ಅವರಿಗೆ ಸರಕಾರ ಉನ್ನತ ಹುದ್ದೆಯನ್ನು ನೀಡಬೇಕು. ಅರಣ್ಯ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಹೇಳಿದಾಗ ಸಭೆಯಲ್ಲಿದ್ದ ಕಾರ್ಯಕರ್ತರು ಒಕ್ಕೊರಳನಿಂದ ಅನುಮೋದನೆ ಮಾಡಿದರು.

ಶಾಸಕರು ಈ ವಿಚಾರವನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಹೇಮನಾಥ ಶೆಟ್ಟಿಯವರು ಹಿರಿಯರು ಅವರನ್ನು ಬಿಟ್ಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ವಲಯಾಧ್ಯಕ್ಷರಾದ ವೆಂಕಟ್ರಮಣ ಗೌಡ, ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ, ಪ್ರದೀಪ್‌ಕುಮಾರ್ ಪಾಂಬಾರು,  ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಧರ್ ಪೂಜಾರಿ , ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಮುರಳೀದರ ಎಸ್ ಪಿ, ಗ್ರಾಪಂ ಸದಸ್ಯರುಗಳಖಾದ ಪವನ್ ಡಿ ಜಿ, ಕೊಳ್ತಿಗೆ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ವಸಂತಕುಮಾರ ರೈ ದುಗ್ಗಳ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ, ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಸಾಮಾಜಿಕ ಜಾಲತಾಣದ ಸಿದ್ದಿಕ್ ಸುಲ್ತಾನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಪಾಣಜೆ, ಗ್ರಾಪಂ ಅಧ್ಯಕ್ಷರಾದ ಅಕ್ಕಮ್ಮ, ಕೊಳ್ತಿಗೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಕೆ ಜಿ

ಗ್ರಾಪಂ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಕಾಂಗ್ರೆಸ್ ಕಾರ್ಯಕರ್ತರು, ಊರವರು, ಅಭಿಮಾನಿಗಳು

ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷರಾದ ಪ್ರಮೋದ್ ಕೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸಭೆಯಲ್ಲಿ ಶಾಸಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿನೋದ್ ರೈ ಕೆಳಗಿನ ಮನೆ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ : ವೇಣೂರು ಕೊರಗಜ್ಜ ಕಟ್ಟೆಗೆ ಬೆಂಕಿ ಇಟ್ಟ ಪ್ರಕರಣ

Posted by Vidyamaana on 2023-07-17 13:20:25 |

Share: | | | | |


ಬೆಳ್ತಂಗಡಿ : ವೇಣೂರು ಕೊರಗಜ್ಜ ಕಟ್ಟೆಗೆ ಬೆಂಕಿ ಇಟ್ಟ ಪ್ರಕರಣ

ಬೆಳ್ತಂಗಡಿ: ಭೂಮಿ ವಿಚಾರಕ್ಕೆ ಗಲಾಟೆ ನಡೆದು ಕಾರ್ಣಿಕ ದೈವ ಕೊರಗಜ್ಜನ ಗುಡಿಗೇ ಬೆಂಕಿ ಹಚ್ಚಿದ ಘಟನೆ ವೇಣೂರು ಗ್ರಾಮದ ಬಾಡಾರಿನ ಕೊರಗಕಲ್ಲು ಬಳಿಯ ಕೊರಗಜ್ಜನ ಕಟ್ಟೆಯಲ್ಲಿ ಜು.11 ರಂದು ನಡೆದಿತ್ತು. 

ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಐದು ಜನರ ಮೇಲೆ ಪ್ರಕರಣ ದಾಖಲಾಗಿ ಓರ್ವ ಆರೋಪಿ ಹರೀಶ್ ಪೂಜಾರಿಯನ್ನು ಬಂಧಿಸಿದ್ದರು.  ಬಳಿಕ ಮತ್ತೆ ಕೌಂಟರ್ ಅಗಿ 13 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇದರಿಂದ  ಊರವರು ಇದರ ತನಿಖೆಗೆ ಆಗ್ರಹಿಸಿದ್ದರು.



ಈ ಹಿನ್ನಲೆ ಇಂದು (ಜು.17) ರಂದು ಬೆಳ್ತಂಗಡಿ ತಹಶಿಲ್ದಾರ್ ಸುರೇಶ್ ಕುಮಾರ್ ನೇತೃತ್ವದಲ್ಲಿ ಜಾಗದ ಸರ್ವೆ ನಡೆದಿದ್ದು ಸರ್ವೆಯಲ್ಲಿ ಕೊರಗಜ್ಜನ ಕಟ್ಟೆ ಇರುವ ಸ್ಥಳ ಸರಕಾರಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ. 


ಊರವರ ಸಹಕರದಲ್ಲಿ ನಡೆದ ಸರ್ವೆ ಕಾರ್ಯದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಸುರೇಶ್ ಕುಮಾರ್ ಮತ್ತು ಸಿಬ್ಬಂದಿಗಳು, ಸರ್ವೆ ಇಲಾಖೆ ಅಧಿಕಾರಿಗಳು, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದಕುಮಾರ್, ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೌಮ್ಯ ಮತ್ತು ಸಬ್ ಇನ್ಸ್ಪೆಕ್ಟರ್ ಆನಂದ ಹಾಗೂ 20 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭದ್ರತೆ ವಹಿಸಿದರು


*ಪ್ರಕರಣದ ಹಿನ್ನೆಲೆ:* ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಬಾಡಾರಿನ ಕೊರಗಕಲ್ಲು ಬಳಿ ಕೊರಗಜ್ಜನ ಕಟ್ಟೆ ಇದೆ. ಸಾರ್ವಜನಿಕರು ಸಮಿತಿ ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು. ಆದರೆ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಸಾರ್ವಜನಿಕ ಹಸ್ತಕ್ಷೇಪ ಮಾಡಬಾರದೆಂದು ತಗಾದೆ ಎತ್ತಿದ್ದರು. ಈ ತಗಾದೆ ಕೆಲವು ವರ್ಷಗಳಿಂದ ಏರ್ಪಟ್ಟಿತ್ತು. ಬಳಿಕ ಆ ವ್ಯಕ್ತಿ ಗುಡಿಗೆ ಜುಲೈ 11 ರಂದು ಹರೀಶ್ ಪೂಜಾರಿ ಬೆಂಕಿ ಹಚ್ಚಿದ್ದು, ಇದನ್ನು ಖಂಡಿಸಿದ ಸ್ವಾಮಿ ಕೊರಗಜ್ಜ ಸಮಿತಿಯು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದ್ವಿತೀಯ ಪಿಯುಸಿಯಲ್ಲಿ ಮಾರ್ಕ್ಸ್‌ ಕಡಿಮೆ ಬಂದಿದ್ದಕ್ಕೆ ಮಗಳನ್ನೇ ಕೊಂದ ತಾಯಿ!

Posted by Vidyamaana on 2024-04-30 08:26:23 |

Share: | | | | |


ದ್ವಿತೀಯ ಪಿಯುಸಿಯಲ್ಲಿ ಮಾರ್ಕ್ಸ್‌ ಕಡಿಮೆ ಬಂದಿದ್ದಕ್ಕೆ   ಮಗಳನ್ನೇ ಕೊಂದ ತಾಯಿ!

ಬೆಂಗಳೂರು: ತಾಯಿಯೇ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ತಾಯಿ ಮೇಲೆ ಮಗಳು ಕೂಡ ಚಾಕುವಿನಿಂದ ದಾಳಿ ಮಾಡಿದ್ದು, ಗಾಯಗೊಂಡ ತಾಯಿ ಆಸ್ಪತ್ರೆ ಪಾಲಾಗಿದ್ದಾರೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಮಗಳ ನಡುವೆ ಜಗಳ ನಡೆದಿದೆ. ಎಕ್ಸಾಂಗೆ ಕಾಲೇಜಿಗೆ ಹೋಗ್ತೀನಿ ಎಂದು ಮನೆಯಿಂದ ಹೊರಡುತ್ತಿದ್ದ ಮಗಳು ಪರೀಕ್ಷೆಗೆ ಗೈರು ಹಾಜರಾಗಿದ್ದ ವಿಚಾರ ಸೋಮವಾರ ತಾಯಿಗೆ ತಿಳಿದಿದ್ದು, ಜಗಳ ಶುರು ಆಗಿತ್ತು

ಲೋಕ ಸಮರ ಶಾಕಿಂಗ್ ನ್ಯೂಸ್ - ರಾಜ್ಯದಿಂದ ಸ್ಪರ್ಧೆಗಿಳಿತಿದ್ದಾರೆ ಸೆಂಟ್ರಲ್ ಮಿನಿಸ್ಟರ್ಸ್

Posted by Vidyamaana on 2024-01-13 04:36:09 |

Share: | | | | |


ಲೋಕ ಸಮರ ಶಾಕಿಂಗ್ ನ್ಯೂಸ್ - ರಾಜ್ಯದಿಂದ ಸ್ಪರ್ಧೆಗಿಳಿತಿದ್ದಾರೆ ಸೆಂಟ್ರಲ್ ಮಿನಿಸ್ಟರ್ಸ್

ಬೆಂಗಳೂರು ಜನವರಿ 13: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಈ ಬಾರಿ ಮ್ಯಾಜಿಕ್ ಮಾಡಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರ ನಾಯಕರನ್ನು ಕರ್ನಾಟಕದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಹೌದು.... ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಬಹುದು ಎಂದು ಬಿಜೆಪಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಬಿಜೆಪಿ ಬಯಸಿದೆ. ಅದರಂತೆ ನಿರ್ಮಲಾ, ಜೈಶಂಕರ್ ಅವರಂಥವರಿಗೆ ಸೂಕ್ತ ಸೀಟುಗಳನ್ನು ಹುಡುಕಲಾಗುತ್ತಿದೆ. ನಿರ್ಮಲಾ ಅವರು ಕರ್ನಾಟಕ ಮತ್ತು ಜೈಶಂಕರ್ ಬೆಂಗಳೂರು ದಕ್ಷಿಣದಿಂದ ಪ್ರತಿನಿಧಿಸುವ ಚಿಂತನೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ, ಪ್ರಸ್ತುತ ಕೇಸರಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಿಂದ ನಿರ್ಮಲಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಜೊತೆಗೆ ಜೈಶಂಕರ್‌ಗೆ ಹಲವು ಆಯ್ಕೆಗಳಿವೆ. ಹಿಂದುತ್ವದ ಫೈರ್‌ಬ್ರಾಂಡ್ ಅನಂತಕುಮಾರ್ ಹೆಗಡೆ ಪ್ರಸ್ತುತ ಸಂಸದರಾಗಿರುವ ಉತ್ತರ ಕನ್ನಡ ಬಿಜೆಪಿಯ ಮತ್ತೊಂದು ಭದ್ರಕೋಟೆಯಾಗಿದ್ದು, ರಾಜತಾಂತ್ರಿಕ-ರಾಜಕಾರಣಿ ಇಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಪಕ್ಷ ಚಿಂತಿಸುತ್ತಿದೆ. BJP Candidate List: ಲೋಕಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ್ಯಾರು? ಇಲ್ಲಿದೆಸಂಭವನೀಯ ಪಟ್ಟಿ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳು ಜೈಶಂಕರ್‌ಗೆ ಸುರಕ್ಷಿತವಾಗಿರುತ್ತವೆ ಎಂದು ಬಿಜೆಪಿ ಭಾವಿಸಿದೆ. ಹೀಗಾಗಿ ಜೈಶಂಕರ್ ಅವರು ಬೆಂಗಳೂರಿಗೆ ಆಗಾಗ್ಗೆ ಬರುತ್ತಿದ್ದಾರೆ. ಈ ನಗರದೊಂದಿಗೆ ಅವರು ದೀರ್ಘ ವೈಯಕ್ತಿಕ ಒಡನಾಟ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಅವರು ಇಲ್ಲಿನ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಬಿಜೆಪಿಯ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಜೈಶಂಕರ್ ಬೆಂಗಳೂರಿಗೆ ಹಲವು ಬಾರಿ ಭೇಟಿ ನೀಡಿದ್ದರು. ಅವರು ಶಿಕ್ಷಣ ಸಂಸ್ಥೆಗಳು, ಕಬ್ಬನ್ ಪಾರ್ಕ್‌ಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿದ್ದರು ಮತ್ತು ಪ್ರಸಿದ್ಧ ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿಯೂ ತಿನ್ನಲು ಅವರು ಹೋಗಿರುವುದಿದೆ. ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಅವರು ಕಳೆದ ವಾರ ಇಲ್ಲಿಗೆ ಬಂದಿದ್ದರು. ಬೆಂಗಳೂರು ದಕ್ಷಿಣಕ್ಕೆ ಕರ್ನಾಟಕ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೆಸರು ಕೇಳಿಬರುತ್ತಿದೆ ಎಂದುಹೇಳಲಾಗುತ್ತಿದೆ. ತೇಜಸ್ವಿನಿ ದಿವಂಗತ ಎಚ್‌ಎನ್ ಅನಂತಕುಮಾರ್ ಅವರು ಪತ್ನಿ, ಅನಂತಕುಮಾರ್ 1996 ರಿಂದ ಸತತ ಆರು ಅವಧಿಗೆ ಬೆಂಗಳೂರು ದಕ್ಷಿಣವನ್ನು ಪ್ರತಿನಿಧಿಸಿದ ಬಿಜೆಪಿ ಧೀಮಂತರು. 2018 ರಲ್ಲಿ ಅವರ ಅಕಾಲಿಕ ಮರಣದ ನಂತರ, ತೇಜಸ್ವಿನಿ ಅವರು 2019 ರ ಲೋಕಸಭಾ ಅಭ್ಯರ್ಥಿಯಾಗಿ ಉತ್ತರಾಧಿಕಾರಿಯಾಗುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿಯು ರಾಜಕೀಯವಾಗಿ ಹಸಿರು ನಿಶಾನೆ ತೋರಿದ್ದ ಸೂರ್ಯ ಅವರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿತು.

ರಾತ್ರಿ ವೇಳೆ ಠಾಣೆಗೆ ಹಾಜರಾದ ಹರೀಶ್ ಪೂಂಜ ; ಠಾಣೆಯಲ್ಲೇ ವಿಚಾರಣೆ - ಜಾಮೀನು,ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಪ್ರೆಸ್ ನೋಟ್ ಬಿಡುಗಡೆ

Posted by Vidyamaana on 2024-05-23 04:56:11 |

Share: | | | | |


ರಾತ್ರಿ ವೇಳೆ ಠಾಣೆಗೆ ಹಾಜರಾದ ಹರೀಶ್ ಪೂಂಜ ; ಠಾಣೆಯಲ್ಲೇ ವಿಚಾರಣೆ - ಜಾಮೀನು,ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಪ್ರೆಸ್ ನೋಟ್ ಬಿಡುಗಡೆ

ಮಂಗಳೂರು, ಮೇ.22: ದಿನವಿಡೀ ಪ್ರತಿಭಟನೆ, ಹೈಡ್ರಾಮಾ ನಾಟಕದ ಬಳಿಕ ರಾತ್ರಿ ವೇಳೆಗೆ ಶಾಸಕ ಹರೀಶ್ ಪೂಂಜ ವಕೀಲರು ಮತ್ತು ಪಕ್ಷದ ನಾಯಕರ ಜೊತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ರಾತ್ರಿ 9.30ಕ್ಕೆ ಜಿಲ್ಲೆಯ ಇತರ ಬಿಜೆಪಿ ಶಾಸಕರು, ವಕೀಲರು ಮತ್ತು ಇತರ ನಾಯಕರ ಜೊತೆಗೆ ಪೂಂಜ ಠಾಣೆಗೆ ಹಾಜರಾಗಿದ್ದು, ವಿಚಾರಣೆ ಎದುರಿಸಿದ್ದಾರೆ. 

ಸಂಜೆ ವೇಳೆಗೆ ತಾನೇ ಖುದ್ದಾಗಿ ಶಾಸಕರನ್ನು ಪೊಲೀಸ್ ಠಾಣೆಗೆ ಕರೆತರುವುದಾಗಿ ಸಂಸದ ನಳಿನ್ ಕುಮಾರ್ ಹೇಳಿದ್ದರಿಂದ ಪೊಲೀಸರು ಠಾಣೆಗೆ ಹಿಂತಿರುಗಿದ್ದರು.‌ ಅದರಂತೆ, ಸಂಸದರ ಸೂಚನೆಯಂತೆ ಬಿಜೆಪಿ ನಾಯಕರ ಜೊತೆಗೆ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ಠಾಣೆಗೆ ಬಂದಿದ್ದು ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ.

Recent News


Leave a Comment: