ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿ ಸದನದಲ್ಲಿ ತುಳುವಿನಲ್ಲೇ ವಿಚಾರಮಂಡಿಸಿದ ಶಾಸಕ ಅಶೋಕ್ ರೈ

ಸುದ್ದಿಗಳು News

Posted by vidyamaana on 2024-07-24 16:44:22 |

Share: | | | | |


ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿ ಸದನದಲ್ಲಿ ತುಳುವಿನಲ್ಲೇ ವಿಚಾರಮಂಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಸೇರಿಸಬೇಕು ಎಂದು ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ತುಳು ಭಾಷೆಯಲ್ಲೇ ವಿಧಾನಸಭಾ ಅಧಿವೇಶನದಲ್ಲಿ ವಿಚಾರವನ್ನು ಮಂಡಿಸಿದ್ದು , ಶಾಸಕರ ಬೇಡಿಕೆಗೆ ಸರಕಾರದಿಂದ ಗಟ್ಟಿ ಭರವಸೆ ದೊರೆತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಲಿದೆ ಎಂದು ಸರಕಾರ ಭರವಸೆಯನ್ನು ನೀಡಿದೆ.

ತುಳುವಿಗೆ ೨೦೦೦ ವರ್ಷದ ಇತಿಹಾಸವಿದೆ

ತುಳುಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸವಿದೆ. ತುಳು ಮಾತನಾಡುವ ಮಂದಿ ವಿಶ್ವದೆಲ್ಲೆಡೆ ಇದ್ದಾರೆ. ತುಳು ಭಾಷೆಗೆ ಮಾನ್ಯತೆ ಸಿಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿದೆ. ಎಟಂನೇ ಪರಿಚ್ಚೇಧಕ್ಕೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಇನ್ನೊಂದು ಕಡೆ ಇದೆ ಇದೆಲ್ಲದರ ನಡುವೆ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹವನ್ನು ಶಾಸಕನಾಗಿ ಕಳೆದ ಒಂದು ವರ್ಷದಿಂದ ಮಾಡುತ್ತಿದ್ದೇನೆ.

೧೯೯೪ ರಲ್ಲಿ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದ್ದಾರೆ, ೨೦೦೭ ರಲ್ಲಿ ಕೇರಳ ಸರಕಾರ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದೆ, ಆಕಾಶವಾಣಿಯಲ್ಲಿ ೧೯೭೬ ರಿಂದ ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮ ಪ್ರಸಾರವಾಗುತ್ತಿದೆ, ಅಮೇರಿಕಾದಲ್ಲಿ ಸಿಆರ್ ಎಕ್ಸಾಮ್‌ಗೆ ಅರ್ಜಿ ನಮೂನೆಯಲ್ಲೂ ವಿಶ್ವದ ೧೨೨ ಭಾಷೆಯ ಜೊತೆಗೆ ತುಳುವಿಗೆ ಮಾನ್ಯತೆ ನೀಡಲಾಗಿದೆ, ಗೂಗಲ್ ಸಂಸ್ಥೆಯವರು ತರ್ಜುಮೆ ಮಾಡಬಲ್ಲ ಭಾಷೆಗಳ ಪಟ್ಟಿಯಲ್ಲಿ ತುಳುವನ್ನು ಸೇರ್ಪಡೆ ಮಾಡಿದ್ದಾರೆ. ಇಷ್ಟೆಲ್ಲಾ ಇರುವಾಗ ನಮ್ಮ ರಾಜ್ಯದಲ್ಲಿ ತುಳುವನ್ನು ಅದಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಮೂರು ರಾಜ್ಯಗಳಿಗೆ ಅಧ್ಯಯನ ತಂಡ ಕಳಿಸಿದ್ದೇನೆ

ಬಿಹಾರ, ಪಶ್ಚಿಮಬಂಗಾಳ ಮತ್ತು ಆಂದ್ರಕ್ಕೆ ವಿಶೇಷ ಪ್ರತಿನಿಧಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ಕಳಿಸಿದ್ದೇನೆ. ಈ ಮೂರು ರಾಜ್ಯಗಳಲ್ಲಿ ಸ್ಥಳೀಯ ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಯಾವ ಆಧಾರದಲ್ಲಿ ಘೋಷಣೆ ಮಾಡಿದ್ದಾರೆ ಎಂಬುದನ್ನು ಅಧ್ಯಯನ ನಡೆಲಲಾಗಿದೆ. ಆಂದ್ರದಿಂದ ವರದಿಯನ್ನು ತರಿಸಿದ್ದೇನೆ.. ಈ ವರದಿಯನ್ನು ಸರಕಾರದ ಮುಂದೆ ಇಡಲಿದ್ದು ಅದರ ಆಧಾರದಲ್ಲಿ ಕರ್ನಾಟಕದಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ನಾನು ಸ್ವಂತ ಖರ್ಚಿನಲ್ಲೇ ಅಧ್ಯಯನ ತಂಡವನ್ನು ಮೂರು ರಾಜ್ಯಗಳಿಗೆ ಕಳಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ವಿಶ್ವದಲ್ಲೇ ತುಳವರಿದ್ದಾರೆ, ತುಳುವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ.


ನಿಕ್ಲು ಗಲಾಟೆ ಮಲ್ಪೊಡ್ಚಿ ಕುಲ್ಲುಲೆ ಮಾರ್ರೆ

ಪುತ್ತೂರು ಶಾಸಕ ಅಶೋಕ್ ರೈಯವರು ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡುವ ವೇಳೆ ಮಧ್ಯದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್‌ರಲ್ಲಿ ಈರ್ ಬೊಕ್ಕ ಪಾತೆರ‍್ಲೆ , ಇತ್ತೆ ಯಾನ್ ಪಾತರೊಂದುಲ್ಲೆ ಎಂದು ಶಾಸಕ ಅಶೋಕ್ ರೈ ವೇದವ್ಯಾಸ ಕಾಮತರಿಗೆ ಹೇಳಿದಾಗ ಮಧ್ಯಪ್ರವೇಶ ಮಾಡಿದ ಸಭಾಪತಿ ಯು ಟಿ ಖಾದರ್ ನಿಕ್ಲು ಗಲಾಟೆ ಮಲ್ಪೊಡ್ಚಿ ಮಾರ್ರೆ ಈರ್ ಕುಲ್ಲುಲೆ ಎಂದು ಶಾಸಕ ವೇದವ್ಯಾಸ ಕಾಮತರಿಗೆ ಕುಳಿತುಕೊಳ್ಳಲು ಹೇಳಿದರು.

 ಇದೇನು ಮಂಗಳೂರು ಅಧಿವೇಶನವಾ: ಆರ್ ಅಶೋಕ್

ಸದನದಲ್ಲಿ ಶಾಸಕ ಅಶೋಕ್ ರೈ ಮತ್ತು ಸಭಾಪತಿ ಯು ಟಿ ಖಾದರ್ ರವರು ತುಳುವಿನಲ್ಲಿ ಮಾತನಾಡುತ್ತಿದ್ದ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಇದೇನು ಮಂಗಳೂರು ಅಧಿವೇಶಧನವಾ? ಎಂದು ನಗುತ್ತಲೇ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ ಅಶೋಕ್ ರೈಯವರು ವಿರೋಧ ಪಕ್ಷದ ನಾಯಕರಾದ ಆರ್ ಆಶೋಕ್ ರವರೇ ನಾವು ತುಳುವಿನಲ್ಲಿ ಮಾತನಾಡಿದ್ದನ್ನು ಕನ್ನಡದಲ್ಲಿ ಹೇಳುತ್ತೇನೆ. ನೀವು ನಮ್ಮ ಹೋರಾಟಕ್ಕೆ , ನಮ್ಮ ಬೇಡಿಕೆಗೆ ಬೆಂಬಲವನ್ನು ನೀಡಬೇಕು, ಇಡೀ ಸದನ ನಮ್ಮ ನಿಲುವಿಗೆ ಬೆಂಬಲ ನೀಡಬೇಕು ಅ ಮೂಲಕ ತುಳು ಭಾಷೆಗೆ ಸರಕಾರದಿಂದ ಮಾನ್ಯತೆ ದೊರೆಯುವಂತಾಗಲಿ ಇದಕ್ಕೆ ಎಲ್ಲರ ಸಹಕಾರವನ್ನು ಕೋರಿದರು. ತುಳುವಿಗೆ ಲಿಪಿ ಇದೆ, ವಿಶ್ವದಲ್ಲೆಡೆ ತುಳು ಮಾತನಾಡುವ ಮಂದಿ ಇದ್ದಾರೆ ಎಂದು ಹೇಳಿದ ಶಾಸಕ ಅಶೋಕ್ ರೈಯವರು ಸಭಾಧ್ಯಕ್ಷೆರೇ ಈರ್ ಸಪೋರ್ಟು ಮಲ್ಪೊಡು, ಈರ್‌ನ ಸಹಕಾರ ಎಂಕ್ಲೆಗ್ ಬೋಡು ಎಂದು ಮನವಿ ಮಾಡಿದರು.

ಅಶೋಕ್ ರೈಗೆ ಅಭಿನಂದನೆ ಸಲ್ಲಿಸಿದ ವೇದವ್ಯಾಸ ಕಾಮತ್

ಸದನದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತುಳು ವಿಚಾರದಲ್ಲಿ ಪ್ರಾರಂಭದಿಂದಲೇ ಸರಕರದ ಗಮನಸೆಳೆದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಭೆಯಲ್ಲಿ ತಿಳಿಸಿದರು.

ನಿಮ್ಮ ಕಾಳಜಿಗೆ ಅಭಿನಂದನೆ; ಸಚಿವ ಖರ್ಗೆ

ತನ್ನ ಸ್ವಂತ ಖರ್ಚಿನಲ್ಲಿ ಅಧ್ಯಯನ ತಂಢವನ್ನು ಮೂರು ರಾಜ್ಯಕ್ಕೆ ಕಳುಹಿಸುವ ಮೂಲಕ ತನ್ನ ಊರಿನ ಮಾತೃಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಡಬೇಕು ಎನ್ನುವ ನಿಮ್ಮ ಕಾಳಜಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಶಾಸಕ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಿದರು. ಮಾತೃಭಷೆಯ ಮೇಲೆ ಎಲ್ಲರಿಗೂ ಪ್ರೀತಿ ಇರುತ್ತದೆ ಆದರಲ್ಲೂ ಅಶೋಕ್ ರೈಯವರು ಈವಿಚಾರದಲ್ಲಿ ಒಂದು ಹಜ್ಜೆ ಮುಂದೆ ಇದ್ದಾರೆ ಇದು ಅಭಿನಂದನಾರ್ಹ ಎಂದು ಸಚಿವರು ಸಭೆಯಲ್ಲಿ ಹೇಳಿದರು.

 ಖಂಡಿತವಾಗಿಯೂ ಬೇಡಿಕೆ ಈಡೇರಲಿದೆ: ಪ್ರಿಯಾಂಕ ಖರ್ಗೆ

ಡಾ. ಮೋಹನ್ ಆಳ್ವರ ನೇತೃತ್ವದ ಸಮಿತಿಯ ವರದಿಯಲ್ಲಿ ಸಾಧ್ಯವಿದೆ ಎಂಬುದರ ಬಗ್ಗೆ ವರದಿ ನೀಡಲಾಗಿದೆ.. ತನ್ನ ಸ್ವಂತ ಖರ್ಚಿನಲ್ಲಿ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಿದ ಶಾಸಕ ಅಶೋಕ್ ರೈಯವರ ಕಾಳಜಿಯನ್ನು ಮೆಚ್ಚಲೇಬೇಕು. ತುಳು ಭಾಷೆ, ಅದರ ಸಂಸ್ಕೃತಿ, ಅದರ ಸೌಂದರ್ಯ, ಪ್ರಾಚೀನತೆ, ಎಲ್ಲವೂ ಗೌರವದಿಂದ ಕೂಡಿದೆ. ಸರಕಾರದ ಮುಂದೆ ಈ ಪ್ರಸ್ತಾಪ ಇದೆ. ತುಳುವಿಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಲ್ಲಿ ಸರಕಾರಕ್ಕೆ ಮುತುವರ್ಜಿ ಇದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರವಾಗಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಸಭೆಗೆ ತಿಳಿಸಿದರು. ವೈಯುಕ್ತಿಕವಾಗಿಯೂ ಈ ಪ್ರಸ್ತಾಪಕ್ಕೆ ನನ್ನ ಬೆಂಬಲ ಇದೆ ಎಂದು ಸಚಿವರು ಹೇಳಿದರು.

ಸಚಿವರ ಸಭೆ ಕರೆದು ತೀರ್ಮಾನಿಸಿ: ಸಭಾಪತಿ

ಈ ವಿಚಾರದಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಚಿವರನ್ನೊಳಗೊಂಡಂತೆ ಆ ಭಾಗದ ಶಾಸಕರ ಸಭೆಯನ್ನು ಕರೆದು ತೀರ್ಮಾನ ಕೈಗೊಳ್ಳುವಂತೆ ಸಭಾಪತಿ ಯು ಟಿ ಖಾದರ್ ರವರು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚನೆಯನ್ನು ನೀಡಿದರು.

ಎರಡನೇ ಬಾರಿಗೆ ತುಳುವಿನಲ್ಲಿ ಮಾತು

ಶಾಸಕ ಅಶೋಕ್ ರೈಯವರು ತಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ತುಳುವಿನಲ್ಲಿ ಮಾತನಾಡಿದ್ದರು. ಈ ವಿಚಾರ ಅತೀ ಹೆಚ್ಚು ವೈರಲ್ ಆಗಿತ್ತು. ಅಧಿವೇಶನದ ಇತಿಹಾಸದಲ್ಲೇ ಮೊದಲ ಬಾರಿಗೆ ತುಳುವಿನಲ್ಲಿ ಮಾತನಾಡುವ ಮೂಲಕ ತುಳುವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಮಾಡಿದ್ದರು. ಇದೀಗ ಎರಡನೇ ಬಾರಿಗೆ ತುಳುವಿನಲ್ಲಿ ಅಧಿವೇಶನದಲ್ಲಿ ಮಾತನಾಡಿರುವುದು ತುಳು ಭಾಷೆಗೆ ಸಿಕ್ಕ ಮಾನ್ಯತೆ ಎಂದೇ ಹೇಳಬಹುದು

 Share: | | | | |


ಶಿರಾಡಿ ಘಾಟ್ ಗುಡ್ಡ ಕುಸಿತ : ಸ್ಥಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ

Posted by Vidyamaana on 2024-08-03 22:27:12 |

Share: | | | | |


ಶಿರಾಡಿ ಘಾಟ್ ಗುಡ್ಡ ಕುಸಿತ : ಸ್ಥಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ

ಹಾಸನ: ರಾಜ್ಯದಲ್ಲಿ ಮಳೆರಾಯನ ಆರ್ಭಟದಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಗಳೂರು, ಶಿರೂರು ಈಗ ಶಿರಾಡಿ ಘಾಟ್ ಕೂಡ ಗುಡ್ಡ ಕುಸಿತದಿಂದ ಹೊರತಾಗಿಲ್ಲ. ಇಂದು ಸಿಎಂ ಸಿದ್ದರಾಮಯ್ಯ ಅವರು ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳ ತಂಡದೊಂದಿಗೆ ಗುಡ್ಡ ಕುಸಿತದ‌ ಸ್ಥಳಕ್ಕೆ‌ ಬಂದಿದ್ದಾರೆ. ಈ ವೇಳೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಪು : ಆಲದ ಮರ ಬಿದ್ದು ಕಾರ್ಮಿಕ ಸಾವು ಇಬ್ಬರಿಗೆ ಗಾಯ

Posted by Vidyamaana on 2023-10-02 22:25:05 |

Share: | | | | |


ಕಾಪು : ಆಲದ ಮರ ಬಿದ್ದು ಕಾರ್ಮಿಕ ಸಾವು  ಇಬ್ಬರಿಗೆ ಗಾಯ

ಕಾಪು: ನಾಗಬನ ಮತ್ತು ಮನೆ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಜೂರು ಗ್ರಾಮದ ಕರಂದಾಡಿಯಲ್ಲಿ ಆ.2ರ ಸೋಮವಾರ ಮಧ್ಯಾಹ್ನ ನಡೆದಿದೆ.



ಬಿಹಾರ – ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಮೃತ ಕೂಲಿ ಕಾರ್ಮಿಕನಾಗಿದ್ದು, ಗಾಯಾಳುಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.


ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಖಾಸಗಿಯವರಿಗೆ ಸೇರಿದ ನಾಗಬನವೊಂದರ ಮೇಲೆ ವಾಲಿದ್ದ ಬೃಹತ್ ಗೋಳಿಮರವನ್ನು ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.


ಬೃಹತ್ ಗೋಳಿ ಮರವನ್ನು ಕಡಿಯುತ್ತಿದ್ದ ವೇಳೆ ಅದು ಕಾರ್ಮಿಕರ ಮೇಲೆ ಉರುಳಿ ಬಿದ್ದಿತ್ತು. ಇದರಿಂದಾಗಿ ಮೂವರು ಕಾರ್ಮಿಕರು ಮರದಡಿಗೆ ಸಿಲುಕಿಕೊಂಡಿದ್ದು, ಓರ್ವ ಮರದಡಿ ಸಿಲುಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ.  ಇಬ್ಬರನ್ನು ರಕ್ಷಿಸಿ, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮರದಡಿ ಸಿಲುಕಿರುವ ಕಾರ್ಮಿಕನನ್ನು ತೆರವುಗೊಳಿಸುವ ಕಾರ್ಯ ಬರದಿಂದ ಸಾಗುತ್ತಿದೆ. ಕಾಪು ಪೊಲೀಸರು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು ಸ್ಥಳೀಯರ ನೇತೃತ್ವದಲ್ಲಿ ಮರ ತೆರವು ಕಾರ್ಯ ಬರದಿಂದ ಸಾಗುತ್ತಿದೆ.



ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಎಸ್.ಐ. ಅಬ್ದುಲ್ ಖಾದರ್, ಕ್ರೈಂ ಎಸ್.ಐ. ಪುರುಷೋತ್ತಮ್ ಹಾಗೂ ಪೊಲೀಸ್ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರು ಮರ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

ಪೆರುವಾಯಿ, ಅಳಿಕೆಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

Posted by Vidyamaana on 2023-06-29 08:38:46 |

Share: | | | | |


ಪೆರುವಾಯಿ, ಅಳಿಕೆಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ಕಾಂಗ್ರೆಸ್ ಸರಕರದ ಐದು ಗ್ಯಾರಂಟಿಗಳಲ್ಲಿ ೧೦ ಕೇಜಿ ಉಚಿತ ಅಕ್ಕಿಯೂ ಸೇರಿಕೊಂಡಿದೆ, ಆದರೆ ೧೦ ಕೆ ಜಿ ಅಕ್ಕಿ ಬಡವರಿಗೆ ನೀಡದಂತೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅದಕ್ಕೆ ತಡೆ ಒಡ್ಡಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಅಳಿಕೆಯಲ್ಲಿ ನಡೆದ ಅಳಿಕೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.


ಬಡವರು ಮೂರು ಹೊತ್ತು ಚೆನ್ನಾಗಿ ಊಟ ಮಾಡಬೇಕು, ರಾಜ್ಯದಲ್ಲಿ ಯಾರೂ ಹಸಿವನಿಂದ ಇರಬಾರದು ಎಂದು ಸಿದ್ದರಾಮಯ್ಯ ನೇತೃತ್ವದ ಸರಕಾರ ಅನ್ನದಾಸೋಹ ಯೋಜನೆಯನ್ನು ಜಾರಿ ಮಾಡಿತ್ತು. ಕೇಂದ್ರ ಸರಕಾರ ಆರಂಭದಲ್ಲಿ ಅಕ್ಕಿ ಕೊಡುವುದಾಗಿ ಒಪ್ಪಿಕೊಂಡು ಬಳಿಕ ಅಕ್ಕಿ ಕೊಡದೆ ವಂಚನೆ ಮಾಡಿದೆ ಇದರಿಂದ ರಾಜ್ಯದ ಬಡವರಿಗೆ ಅನ್ಯಾಯವಾಗುವಂತೆ ಮಾಡಿದೆ ಎಂದು ಹೇಳಿದ ಅವರ ತಿನ್ನುವ ಅನ್ನಕ್ಕೆ ಅಡ್ಡಿ ಮಾಡುವುದು ಭಾರತದ ಸಂಸ್ಕಾರವಲ್ಲ ಯರೂ ಇಂಥಹ ಕೆಲಸವನ್ನು ಮಾಡಬಾರದು ಎಂದು ಹೇಳಿದರು.

ಕೇಂದ್ರ ದಾಸ್ತಾನು ಕೊಠಡಿಯಲ್ಲಿ ಸಾಕಷ್ಟು ಪ್ರಮಣದಲ್ಲಿ ಅಕ್ಕಿ ಇದ್ದು ಅದನ್ನು ಮಾರಾಟ ಮಾಡದೇ ಇದ್ದರೆ ಹಾಳಾಗಿ ಹೋಗಬಹುದು. ರಾಜ್ಯ ಸರಕಾರ ಕೇಂದ್ರದಿಂದ ಉಚಿತವಾಗಿ ಅಕ್ಕಿ ಕೇಳಿಲ್ಲ. ಹಣ ಕೊಟ್ಟರೂ ಕರ್ನಾಟಕಕ್ಕೆ ಅಕ್ಕಿ ಕೊಡುವುದಿಲ್ಲ ಎಂದು ಕೇಂದ್ರದ ಬಿಜೆಪಿ ಸರಕಾರ ಹೇಳಿದೆ ಎಂದು ಶಾಸಕರು ಹೇಳಿದರು. ತಿನ್ನುವ ಅನ್ನಕ್ಕೆ ಮಣ್ಣು ಹಾಕಿದ ಬಿಜೆಪಿಗರಿಗೆ ಜನ ತಕ್ಕ ಪಾಠ ಕಲಿಸಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

ಬಡವರ ಪರ ಇರುವ ರಾಜ್ಯದ ಕಾಂಗ್ರೆಸ್ ಸರಕಾರ ಬಡವರ ನೆಮ್ಮದಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಿದೆ. ಬಡವರು ಇನ್ನು ಮುಂದೆ ನೆಮ್ಮದಿಯ ದಿನಗಳನ್ನು ಕಾಣಬಹುದಾಗಿದೆ. ಉಚಿತ ಬಸ್ ಪ್ರಯಾಣ, ಉವಿತ ವಿದ್ಯುತ್, ಸೇರಿದಂತೆ ಒಟ್ಟು ಐದು ಗ್ಯಾರಂಟಿಗಳನ್ನು ಕೊಡುವ ಮೂಲಕ ಬಡವರ ಕಣ್ಣೀರೊರೆಸಲು ಕಾಂಗ್ರೆಸ್ ಸರಕಾರ ಬದ್ದವಾಗಿದೆ ಎಂದು ಹೇಳಿದರು. ಕೇಂದ್ರದ ಬಡವರ ವಿರೋಧಿ ಧೋರಣೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಶಾಸಕರು ಹೇಳಿದರು.

ತೆಂಗಿನ ಕಾಯಿ ಒಡೆದದ್ದೇ ಒಡೆದದ್ದು ಕೆಲಸ ಆಗಲಿಲ್ಲ

ನಿಮ್ಮ ರಸ್ತೆಗೆ ಅನುದಾನ ಕೊಡುತ್ತೇನೆ, ನಿಮ್ಮ ತಡೆಗೋಡೆಗೆ ಅನುದಾನ ಕೊಡುತ್ತೇನೆ, ಅದಕ್ಕೆ ಕೊಡುತ್ತೆನೆ, ಇದಕ್ಕೆ ಇಷ್ಟು ಬರುತ್ತದೆ ಎಂದು ಹೇಳಿ ಅಲ್ಲಲ್ಲಿ ಫ್ಲೆಕ್ಸ್ ಹಾಕಿಸಿ ಒಂದಷ್ಟು ಜನರನ್ನು ಸೇರಿಸಿ ಸಿಕ್ಕಸಿಕ್ಕಲ್ಲಿ ತೆಂಗಿನ ಕಾಯಿ ಒಡೆದಿದ್ದಾರೆ ವಿನಾ ಕಾಮಗಾರಿಗಳು ನಡೆದಿಲ್ಲ ಎಂದು ಶಾಸಕ ಅಶೋಕ್ ರೈ ಆರೋಪಿಸಿದರು. ತೆಂಗಿನ ಕಾಯಿ ಒಡೆದ ಬಹುತೇಕ ಕಡೆಗಳಿಗೆ ಅನುದಾನವನ್ನು ಇಟ್ಟೇ ಇಲ್ಲ ಆದರೂ ಜನರನ್ನು ನಂಬಿಸಲು ಕಾಯಿ ಒಡೆದು ಹೋಗಿದ್ದಾರೆ ಎಂದು ಹೇಳಿದರು.


ಜಿಪಂ ಮಾಜಿ ಸದಸ್ಯ ಎಂ ಎಸ್ ಮಾತನಾಡಿ ಅಳಿಕೆ ಅಂದರೆ ಅದು ಬಿಜೆಪಿಯ ಭದ್ರಕೋಡೆ ಎಂಬ ಮಾತಿತ್ತು ಆದರೆ ಅದು ಈಗ ಬದಲಾಗಿದೆ. ಜನ ವಿದ್ಯವಂತರಾಗಿದ್ದು ದಗಲ್ಬಾಜಿ ಮಾಡುವ ಬಿಜೆಪಿಯನ್ನು ದೂರ ಇಟ್ಟಿದ್ದಾರೆ. ಅಳಿಕೆ ಈಗ ಕಾಂಗ್ರೆಸ್ ಶಕ್ತಿ ಕೇಂದ್ರವಾಗಿದೆ. ಪುತ್ತೂರು ಶಾಸಕರ ನೇತೃತ್ವದಲ್ಲಿ ಅಳಿಕೆ ಗ್ರಾಮ ಅಭಿವೃದ್ದಿಯಾಗಲಿದೆ ಎಂದು ಹೇಳಿದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿದರು.

ವೇದಿಕೆಯಲ್ಲಿ  ಅಳಿಕೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೀತಾರಾಂ ಶೆಟ್ಟಿ, ರಮಾನಾಥ ವಿಟ್ಲ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮುರಳೀಧರ್ ರೈ ಮಠಂತಬೆಟ್ಟು, ಪ್ರವೀಣ್ ಚಂಧ್ರ ಆಳ್ವ ,  ಅಳಿಕೆ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಗ್ರಾಪಂ ಸದಸ್ಯರುಗಳಾದ ಪದ್ಮನಾಭಪೂಜಾರಿ, ಬಬಿತಾ, ಸರೋಜಿನಿ, ಸದಾಶಿವ ಶೆಟ್ಟಿ, ರವೀಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪೆರುವಾಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪೆರುವಾಯಿ ಗ್ರಾಪಂ ಅಧ್ಯಕ್ಷರಾದ ಬಾಲಕೃಷ್ಣ ಪುಜಾರಿ, ಸದಸ್ಯರುಗಳಾದ ಮಾಲತಿ, ಕುಮಾರಿ ರಶ್ಮಿ, ರಾಜೇಂದ್ರ ರೈ, ವಲಯಾಧ್ಯಕ್ಷರಾದ ಪಂಚ ಬಾಲ ಸೆಟ್ಟಿ, ಬೂತ್ ಅಧ್ಯಕ್ಷರಾದ ಕಾನ ಪುತ್ತು, ರಾಲ್ಫ್ ಡಿಸೋಜಾ, ಗೋಪಾಲ ನಾಯ್ಕ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ರಂಜಿತ್, ಬ್ಲಾಕ್ ಕಾರ್ಯದರ್ಶಿ ಸಿದ್ದಿಕ್, ಜಿಲ್ಲಾ ಅಲ್ಪಸಂಖ್ಯಾತ  ಘಟಕದ ಅಶೋಕ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

Posted by Vidyamaana on 2024-05-26 06:37:52 |

Share: | | | | |


ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಐದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ತುಮಕೂರು, ಕೊಡುಗು ಜಿಲ್ಲೆಗಳ ಧಾರಾಕಾರ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ಮುಂದೆ ಹುಡುಗಿಯ ವಿಷಯಕ್ಕೆ ಬಂದ್ರೆ ಕೆರಾಂದೆ ಬುಡ್ಪುಜಿ

Posted by Vidyamaana on 2024-04-06 09:46:16 |

Share: | | | | |


ಇನ್ಮುಂದೆ ಹುಡುಗಿಯ ವಿಷಯಕ್ಕೆ ಬಂದ್ರೆ ಕೆರಾಂದೆ ಬುಡ್ಪುಜಿ

ಪುತ್ತೂರು:ಯುವತಿಯೋರ್ವರನ್ನು ಪ್ರೀತಿಸುತ್ತಿದ್ದ ವಿಚಾರದಲ್ಲಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿ, ಜೀವಬೆದರಿಕೆಯೊಡ್ಡಿರುವ ಆರೋಪದ ಘಟನೆ ಕುರಿಯ ಮಲಾ‌ರ್ ಎಂಬಲ್ಲಿಂದ ವರದಿಯಾಗಿದೆ.

ಘಟನೆ ಕುರಿತು ಅಶ್ವಿತ್ ಕುಮಾರ್(24 ವ.)ರವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ತಾನು ಕುರಿಯ ಗ್ರಾಮದ ಮಲಾರ್ ಎಂಬಲ್ಲಿ ಕಟ್ಟಿಸಿದ ಹೊಸ ಮನೆಗೆ ಏ.3ರಂದು ಸಂಜೆ ನೀರು ಹಾಕುತ್ತಿದ್ದ ಸಮಯ ಪರಿಚಯದ ಸಚಿನ್ ಮುಕ್ವೆ ಎಂಬಾತ ಕರೆ ಮಾಡಿ.ನಿನ್ನಲ್ಲಿ ಮಾತನಾಡುವುದು ಇದೆ ಎಂದು ತಿಳಿಸಿದಾಗ, ತಾನು ಮಲಾರ್‌ನಲ್ಲಿದ್ದು, ದರ್ಬೆಗೆ ಬರುವುದಾಗಿ ತಿಳಿಸಿ, ಮಲಾರ್‌ನಿಂದ ತನ್ನ ಬೈಕ್‌ನಲ್ಲಿ ಹೊರಟು ಆರ್ಯಾಪು ಗ್ರಾಮದ ಕಲ್ಲರ್ಪೆಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ

BREAKING : ಮಾ.31ರ ಭಾನುವಾರವೂ ಬ್ಯಾಂಕುಗಳು ತೆರೆದಿರುತ್ವೆ : RBI ಮಹತ್ವದ ನಿರ್ಧಾರ

Posted by Vidyamaana on 2024-03-20 20:32:07 |

Share: | | | | |


BREAKING : ಮಾ.31ರ ಭಾನುವಾರವೂ ಬ್ಯಾಂಕುಗಳು ತೆರೆದಿರುತ್ವೆ : RBI ಮಹತ್ವದ ನಿರ್ಧಾರ

ನವದೆಹಲಿ : ಮಾರ್ಚ್ 31ರ ಭಾನುವಾರದಂದು ಬ್ಯಾಂಕ್ನ್ನ ತೆರೆದಿಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿರ್ಧರಿಸಿದೆ.ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಟ್ವೀಟ್ ಮೂಲಕ ಆರ್ಬಿಐ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ. ಮಾರ್ಚ್ 31, 2024 ಭಾನುವಾರವಾಗಿದ್ದರೂ, ಎಲ್ಲಾ ಬ್ಯಾಂಕುಗಳು ತೆರೆದಿರುತ್ತವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.ಪ್ರಸಕ್ತ ಹಣಕಾಸು ವರ್ಷದ 2023-24ರ ಕೊನೆಯ ದಿನವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ.!

ಈ ಹಿಂದೆ, ಆದಾಯ ತೆರಿಗೆ ಇಲಾಖೆ ತನ್ನ ಎಲ್ಲಾ ಕಚೇರಿಗಳನ್ನ ತೆರೆದಿಡಲು ನಿರ್ಧರಿಸಿತ್ತು. ಗುಡ್ ಫ್ರೈಡೆ ರಜೆ ಸೇರಿದಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳನ್ನ ಇಲಾಖೆ ರದ್ದುಗೊಳಿಸಿತ್ತು

Recent News


Leave a Comment: