KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಶಾಸಕರ ಇಂದಿನ ಕಾರ್ಯಕ್ರಮ(ಜೂ.5)

Posted by Vidyamaana on 2023-06-04 23:14:37 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ(ಜೂ.5)

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 5ರಂದು ಬೆಳಿಗ್ಗೆ 9.30ಕ್ಕೆ ಉಪ್ಪಿನಂಗಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಳಾಭಿಷೇಕ ನೆರವೇರಿಸಲಿದ್ದಾರೆ.

ನಂತರ 10.30ಕ್ಕೆ ಪುತ್ತೂರು ಬಾಲವನದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗಿಯಾಗುವರು.

ಬೆಳಿಗ್ಗೆ 11.15ಕ್ಕೆ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯಲ್ಲಿ ಶಾಸಕರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

ರೈಲ್ವೆ ಸೇತುವೆ ಮೇಲೆ ಫೋಟೋ ಶೂಟ್ ಮಾಡುತ್ತಿದ್ದ ವೇಳೆಯೇ ಬಂದ ರೈಲು : 90 ಅಡಿ ಆಳದ ಕಂದಕಕ್ಕೆ ಹಾರಿದ ದಂಪತಿ

Posted by Vidyamaana on 2024-07-14 09:16:41 |

Share: | | | | |


ರೈಲ್ವೆ ಸೇತುವೆ ಮೇಲೆ ಫೋಟೋ ಶೂಟ್ ಮಾಡುತ್ತಿದ್ದ ವೇಳೆಯೇ ಬಂದ ರೈಲು : 90 ಅಡಿ ಆಳದ ಕಂದಕಕ್ಕೆ ಹಾರಿದ ದಂಪತಿ

ಪುರ: ರಾಜಸ್ಥಾನದ ಪಾಲಿ ಜಿಲ್ಲೆಯ ಜೋಗ್ಮಂಡಿ ರೈಲ್ವೆ ಸೇತುವೆಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ಪತಿ ಮತ್ತು ಪತ್ನಿ ರೈಲು ಬರುತ್ತಿರುವುದನ್ನು ನೋಡಿ ಭಯಭೀತರಾಗಿ ತಪ್ಪಿಸಿಕೊಳ್ಳಲು 90 ಅಡಿ ಆಳದ ಕಂದಕಕ್ಕೆ ಹಾರಿದ್ದಾರೆ. ಈ ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ.

ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಸೋಜತ್ ರಸ್ತೆಯ ಬಳಿಯ ಹರಿಯಮಾಲಿ ನಿವಾಸಿಗಳಾದ ರಾಹುಲ್ ಮೇವಾಡಾ (22) ಮತ್ತು ಅವರ ಪತ್ನಿ ಜಾಹ್ನವಿ (20) ಗೋರಂಘಾಟ್ ಗೆ ಭೇಟಿ ನೀಡಲು ಬಂದಿದ್ದರು. ಅವರು ಜೋಗಮಂಡಿ ಸೇತುವೆಯ ಮೀಟರ್ ಗೇಜ್ ರೈಲ್ವೆ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾರ್ವಾರ್ ಪ್ಯಾಸೆಂಜರ್ ರೈಲು ಕಮ್ಲಿಘಾಟ್ ರೈಲ್ವೆ ನಿಲ್ದಾಣದಿಂದ ಬಂದಿತು. ಆದಾಗ್ಯೂ, ರೈಲಿನ ವೇಗವು ನಿಧಾನವಾಗಿತ್ತು ಮತ್ತು ಅದು ಸೇತುವೆಯ ಮೇಲೆ ನಿಂತಿತು, ಆದರೆ ಅಷ್ಟರಲ್ಲಿ ದಂಪತಿಗಳು ಭಯಭೀತರಾಗಿ ಸೇತುವೆಯಿಂದ ಕೆಳಗೆ ಹಾರಿದ್ದರು.

ನಮ್ಮಲ್ಲಿ ಚುನಾವಣೇ ಮುಗ್ದಿದೆ ಆದ್ರೆ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿದೆ

Posted by Vidyamaana on 2024-05-01 17:00:31 |

Share: | | | | |


ನಮ್ಮಲ್ಲಿ ಚುನಾವಣೇ ಮುಗ್ದಿದೆ ಆದ್ರೆ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿದೆ

ಪುತ್ತೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯ ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ ಕೆಲವೊಂದು ಕಾರ್ಯಕ್ರಮಗಳಲ್ಲಿ ನೀತಿ ಸಂಹಿತೆ ಸಡಿಲಗೊಳಿಸಲಾಗಿದೆ. ರಾಜಕೀಯ ಚಟುವಟಿಕೆ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳಾದ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.

ಅವರು ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿದ ಸಹಾಯಕ ಕಮೀಷನರ್ ಕೋರ್ಟು ಸಭಾಂಗಣದಲ್ಲಿ ಮಧ್ಯಮಗಳಿಗೆ ಮಾಹಿತಿ ನೀಡಿದರು. 

ಪುತ್ತೂರು ಉಪವಿಭಾಗದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಶಿಸ್ತುಬದ್ಧವಾಗಿ ಚುನಾವಣೆ ನಡೆದಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಜು.೬ರ ತನಕ ನೀತಿ ಸಂಹಿತೆ ಎಲ್ಲೆಡೆ ಜಾರಿಯಲ್ಲಿರುತ್ತದೆ.

ಸುಳ್ಯ ಒಡಹುಟ್ಟಿದವರಿಂದಲೇ ಕೊಲೆಯಾದ ಉಸ್ಮಾನ್

Posted by Vidyamaana on 2023-07-14 08:18:06 |

Share: | | | | |


ಸುಳ್ಯ ಒಡಹುಟ್ಟಿದವರಿಂದಲೇ ಕೊಲೆಯಾದ ಉಸ್ಮಾನ್

ಸುಳ್ಯ : ತಮ್ಮಂದಿರು ಸೇರಿ ಅಣ್ಣನನ್ನು ಇರಿದು ಕೊಲೆಗೈದ ಘಟನೆ ಭೀಕರ ಘಟನೆ ಸುಳ್ಯ ಸಂಪಾಜೆಯ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.


ಆಸ್ತಿ ವಿವಾದ ಹಿನ್ನಲೆಯಲ್ಲಿ ಈ ಹತ್ಯೆ ನಡೆದಿದ್ದು, ಕುದ್ರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ.


ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವಿತ್ತು. ಶುಕ್ರವಾರ ಇವರು ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದರು. ಈ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ತೀವ್ರ ಚರ್ಚೆ ನಡೆದು ಕೋಪದ ತೀವ್ರತೆಯಲ್ಲಿ ಸಹೋದರರು ಸೇರಿ ಚೂರಿಯಿಂದ ಇರಿದು ಉಸ್ಮಾನ್ ನನ್ನು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ.


ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ ಜಾಗವಿದೆ ಎಂದು ತಿಳಿದು ಬಂದಿದೆ. ಸದ್ಯ ಇವರು ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ. ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಮಂಗನ ಕಾಯಿಲೆಗೆ ಶಿವಮೊಗ್ಗದ ಯುವತಿ ಬಲಿ

Posted by Vidyamaana on 2024-01-09 09:59:52 |

Share: | | | | |


ಮಂಗನ ಕಾಯಿಲೆಗೆ ಶಿವಮೊಗ್ಗದ ಯುವತಿ ಬಲಿ

ಶಿವಮೊಗ್ಗ, ಜ 09: ಮಾರಣಾಂತಿಕ ರೋಗ ಮಂಗನ ಕಾಯಿಲೆಗೆ ಹೊಸನಗರ ತಾಲೂಕು ಅರಮನೆ ಕೊಪ್ಪ ಗ್ರಾಮದ 18 ವರ್ಷ ಯುವತಿ ಸಾವನ್ನಪ್ಪಿದ್ದಾರೆ.


ಕಳೆದ ವಾರ ಯುವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ತೀವ್ರ ಜ್ವರಕ್ಕೆ ತುತ್ತಾಗಿದ್ದ ಯುವತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜ್ವರ ಕಡಿಮೆಯಾಗದ ಕಾರಣಕ್ಕೆ ಯುವತಿಯನ್ನು ಶುಕ್ರವಾರ ಮಣಿಪಾಲಕ್ಕೆ ಶಿಫ್ಟ್ ಮಾಡಲಾಗಿತ್ತು. ಯುವತಿಯು ಅರಮನೆಕೊಪ್ಪದ ನಿವಾಸಿಯಾಗಿದ್ದು, ಈಕೆಗೆ ಜ್ವರ ಬಂದು ಒಂದೆರಡು ದಿನವಾದರೂ ಕಡಿಮೆಯಾಗದ ಕಾರಣಕ್ಕೆ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಂದಾಗ ತಪಾಸಣೆ ನಡೆಸಿ ವೈದ್ಯರು, ಅನುಮಾನಗೊಂಡು ರಕ್ತ ಪರೀಕ್ಷೆ ನಡೆಸಿದಾಗ ಯುವತಿಯ ರಕ್ತದಲ್ಲಿ ಪ್ಲೇಟ್​ಲೆಟ್ ಕಡಿಮೆಯಾಗಿತ್ತು. ಆರ್​ಟಿಪಿಸಿಆರ್ ನಲ್ಲಿ ಮೊದಲು ಪರೀಕ್ಷಿಸಿದಾಗ ನೆಗೆಟಿವ್ ಬಂದಿತ್ತು. ಮತ್ತೆರಡು ಬಾರಿ ಪರೀಕ್ಷಿಸಿದಾಗ ಕೆಎಫ್​ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಪಾಸಿಟಿವ್ ಬಂದಿತ್ತು ಎಂದರು. ದುರಾದೃಷ್ಟವಶಾತ್​ ಯುವತಿ ಸೋಮವಾರ ಸಂಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.


ಯುವತಿಯಲ್ಲಿ ರಕ್ತದಲ್ಲಿ‌ ಪ್ಲೇಟ್ಲೆಟ್ ಕಡಿಮೆ ಆದಾಗ ಇವರಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಇದಕ್ಕೂ ಸಹ ಚಿಕಿತ್ಸೆ ಕೊಡಲಾಗಿತ್ತು. ಶಿವಮೊಗ್ಗದ ಆಸ್ಪತ್ರೆಯಲ್ಲಿ ಇದ್ದಾಗ ಯುವತಿಗೆ ರಕ್ತವನ್ನು ನೀಡಲಾಗಿತ್ತು. ಎಬಿಕೆ ಆರೋಗ್ಯ ಕಾರ್ಡ್​ ಮೂಲಕ ಯುವತಿಗೆ ಚಿಕಿತ್ಸೆಗೆ ಕೊಡಿಸಲಾಗಿತ್ತು. ಇನ್ನು ಅರಮನೆಕೊಪ್ಪ ಭಾಗದಲ್ಲಿ ಕೆಎಫ್​ಡಿಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಈ ಭಾಗದಲ್ಲಿ ಸುಮಾರು 10 ವರ್ಷಗಳ ನಂತರ ಕೆಎಫ್​ಡಿ ಕಾಣಿಸಿಕೊಂಡಿದೆ. ಈ ಮೂಲಕ ಕೆಎಫ್​ಡಿಗೆ ಮೊದಲ ಸಾವು ಇದಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು ಅಂಬಾರಿ ಉಡುಗೊರೆ

Posted by Vidyamaana on 2023-08-03 08:24:27 |

Share: | | | | |


ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು ಅಂಬಾರಿ ಉಡುಗೊರೆ

ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸತ್ ಭವನದಲ್ಲಿ ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.


ಸಿದ್ದರಾಮಯ್ಯ ಅವರು ಎರಡನೇ ಸಲ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯವರನ್ನು ಭೇಟಿಯಾಗುತ್ತಿರುವುದು.


ಭೇಟಿ ವೇಳೆ ಸಿದ್ದರಾಮಯ್ಯ ಅವರು, ವಿವಿಧ ಯೋಜನೆಗಳಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಅವರ ಬಳಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.


ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವರಾದ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಮನವಿ ಮಾಡಿದರು.

Recent News


Leave a Comment: