ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಏ.4 : ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

Posted by Vidyamaana on 2024-03-28 14:00:58 |

Share: | | | | |


ಏ.4 : ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಏ.4 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಈವರೆಗೆ ಯಾವ ಪಕ್ಷದಿಂದಲೂ ನಾಮಪತ್ರ ಸಲ್ಲಿಕೆಯಾಗಿಲ್ಲ.

ನಾಮಪತ್ರಗಳನ್ನು ಸಲ್ಲಿಸಲು ಗುರುವಾರ (ಏಪ್ರಿಲ್​ 4) ಕೊನೆಯ ದಿನವಾಗಿದೆ.

ಶುಕ್ರವಾರ (ಏಪ್ರಿಲ್​ 5) ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು.

ನಾಮಪತ್ರಗಳನ್ನು ಹಿಂಪಡೆಯಲು ಸೋಮವಾರ (ಏಪ್ರಿಲ್​ 8) ಕೊನೆಯ ದಿನವಾಗಿದೆ.

ದಕ್ಷಿಣ ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್​ 26 ರಂದು ಮತದಾನ ನಡೆಯಲಿದೆ.

ಉತ್ತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ

ಮತಗಳ ಎಣಿಕೆ ಮತ್ತು ಫಲಿತಾಂಶ ಜೂನ್​ 4 ರಂದು ಪ್ರಕಟವಾಗಲಿದೆ.

ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಮಂತ್ ನಿಧನ

Posted by Vidyamaana on 2024-08-11 22:38:27 |

Share: | | | | |


ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಮಂತ್ ನಿಧನ

ಸುರತ್ಕಲ್ : ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರತ್ಕಲ್ ಕಡಂಬೋಡಿ ನಿವಾಸಿ ಹೇಮಂತ್ (50) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಅವರು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಪುತ್ತೂರು ನಗರಸಭೆ ಹೊರಗುತ್ತಿಗೆ ನೌಕರರಿಂದ ಸಾಂಕೇತಿಕ ಪ್ರತಿಭಟನೆ

Posted by Vidyamaana on 2023-02-18 14:08:58 |

Share: | | | | |


ಪುತ್ತೂರು ನಗರಸಭೆ ಹೊರಗುತ್ತಿಗೆ ನೌಕರರಿಂದ ಸಾಂಕೇತಿಕ ಪ್ರತಿಭಟನೆ

ಪುತ್ತೂರು : ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಪುತ್ತೂರು ನಗರಸಭೆಯ ಹೊರಗುತ್ತಿಗೆ ಕಾರ್ಮಿಕರಿಂದ ಸಾಂಕೇತಿಕ ಪ್ರತಿಭಟನೆ ಶನಿವಾರ ನಗರಸಭೆ ಎದುರು ನಡೆಸಯಿತು.

ಇತ್ತೀಚೆಗೆ ಕಾರ್ಮಿಕರ ಪ್ರತಿಭಟನೆ ಹಿನ್ನಲೆಯಲ್ಲಿ ನೇರಪಾವತಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಘೊಷಣೆ ಮಾಡಿಲ್ಲ ಎಂಬ ಕಾರಣಕ್ಕೆ ಹೊರಗುತ್ತಿಗೆ ಕಾರ್ಮಿಕರು ಸಹಿತ ಚಾಲಕರು ಸಾಂಕೇತಿಕ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಹೊರಗುತ್ತಿಗೆ ನೌಕರರ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ಇತ್ತೀಚೆಗೆ ಬೇಡಿಕೆ ಈಡೇರಿಕೆಗಾಗಿ ಸಂಘದ ವತಿಯಿಂದ ನಡೆಸಿದ ಪ್ರತಿಭಟನೆ ಫಲವಾಗಿ ಚಾಲಕರು, ವಾಟರ್ ಮೆನ್, ಡಾಟಾ ಅಪರೇಟರ್ ಗಳು ಸಹಿತ ಹೊರಗುತ್ತಿಗೆ ನೌಕರರಾಗಿರುವ ಎಲ್ಲಾ ಕಾರ್ಮಿಕರನ್ನು ನೇರ ಪಾವತಿಗೊಳಪಡಿಸುವ ಕುರಿತು ಬಜೆಟ್ ನಲ್ಲಿ ಘೊಷಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಈ ಭರವಸೆ ಈಡೇರಲಿಲ್ಲ. ಈ ಕುರಿತು ಉತ್ತರ ಕರ್ನಾಟಕದ ಎಲ್ಲಾ ಹೊರಗುತ್ತಿಗೆದಾರರು ದಿಕ್ಕಾರ ಕೂಗಿದ್ದಾರೆ. ಆದರೆ ನಾವು ದಿಕ್ಕಾರ ಕೂಗುವುದಿಲ್ಲ. ಮಂದಿನ ತಿಂಗಳೊಳಗೆ ಮುಖ್ಯಮಂತ್ರಿಗಳು ನಮಗೆ ನೇರಪಾವತಿ ಮಾಡಿ ಕೊಡುವ ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಮ್ಮ ಪ್ರತಿಭಟನೆ ಸಾಂಕೇತಿಕ. ಮುಂದಿನ ತಿಂಗಳು ನಮ್ಮ ಬೇಡಿಕೆ ಈಡೇರಿಸದೇ ಹೋದರೆ ಪ್ರತಿಭಟನೆಯ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಎದೆ ಝಲ್​ ಎನಿಸುವ ಹುಡುಗಿಯ ಡೇಂಜರಸ್ ಸ್ಟಂಟ್! ವೈರಲ್​ ವೀಡಿಯೋ

Posted by Vidyamaana on 2024-06-20 16:47:02 |

Share: | | | | |


ಎದೆ ಝಲ್​ ಎನಿಸುವ ಹುಡುಗಿಯ ಡೇಂಜರಸ್ ಸ್ಟಂಟ್! ವೈರಲ್​ ವೀಡಿಯೋ

ನವದೆಹಲಿ: ಪುಣೆಯ ಜಂಬೂಲ್ ವಾಡಿ ಸ್ವಾಮಿ ನಾರಾಯಣ ದೇವಸ್ಥಾನದ ಬಳಿ ಯುವತಿಯೊಬ್ಬಳು ಸಾಹಸ ಪ್ರದರ್ಶಿಸಿದ್ದಾಳೆ. ಹಾನಿಗೊಳಗಾದ ಕಟ್ಟಡದ ಮೇಲಕ್ಕೆ ಯುವತಿ ಮತ್ತು ಇಬ್ಬರು ಯುವಕರು ಹತ್ತಿದ್ದಾರೆ. ಒಬ್ಬ ಕ್ಯಾಮೆರಾ ಹಿಡಿದಿದ್ದರೆ, ಇನ್ನೊಬ್ಬ ಕಟ್ಟಡದ ಮೇಲೆ ನೇರವಾಗಿ ಮಲಗಿದ್ದಾನೆ.ಹುಡುಗಿ ಸಾಹಸ ಮಾಡಲು ಪ್ರಾರಂಭಿಸಿ, ಮೇಲಿಂದ ಕೆಳಕ್ಕೆ ಇಳಿದಿದ್ದು, ಆ ವೇಳೆ ಯುವಕ ಯುವತಿಯ ಕೈ ಹಿಡಿದಿದ್ದ. ಆಗ ಒಂದು ಕೈಯಿಂದ ಹುಡುಗನ ಕೈ ಹಿಡಿದುಕೊಂಡು ವಿಡಿಯೋ ತೆಗೆದಿದ್ದಾಳೆ.

ಕೆಎಫ್‌ಡಿಸಿ ಕಾರ್ಮಿಕರಿಗೆ ಬೋನಸ್ ನೀಡಲು ಸರಕಾರದ ಒಪ್ಪಿಗೆ

Posted by Vidyamaana on 2023-08-25 14:42:10 |

Share: | | | | |


ಕೆಎಫ್‌ಡಿಸಿ ಕಾರ್ಮಿಕರಿಗೆ ಬೋನಸ್ ನೀಡಲು ಸರಕಾರದ ಒಪ್ಪಿಗೆ

ಪುತ್ತೂರು: ಕರ್ನಾಟಕ ರಬ್ಬರ್ ನಿಗಮದಲ್ಲಿ ದಿನಗೂಲಿ ಕಾರ್ಮಿಕರಿಗೆ ಬಾಕಿ ಇರುವ ಬೋನಸ್ ನ್ನು ವಾರದೊಳಗೆ ಪಾವತಿ ಮಾಡುವುದಾಗಿ ಅರಣ್ಯ ಸಚಿವ ಈಶ್ವರಖಂಡ್ರೆ ಒಪ್ಪಿಕೊಂಡಿದ್ದಾರೆ.

ಕಳೆದ ೫೦ ವರ್ಷಗಳಿಂದ ಕರ್ನಾಟಕ ರಬ್ಬರ್ ನಿಗಮದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪ್ರತೀ ದೀಪಾವಳಿ ಸಮಯದಸಲ್ಲಿ ೨೦ ಶೇ. ಬೋನಸ್ ನೀಡುವುದಾಗಿ ಸರಕಾರ ತಿಳಿಸಿತ್ತು. ಆದರೆ ಕಳೆದ ಸಾಲಿನಲ್ಲಿ ೨೦ ಶೇ. ಬೋನಸ್‌ನಲ್ಲಿ ಕೇವಲ೮.೬೭% ಮಾತ್ರ ನೀಡಲಾಗಿತ್ತು. ಉಳಿದ ೧೧.೩೩ ಬೋನಸ್ ಬಾಕಿ ಇರಿಸಲಾಗಿತ್ತು.

ಬೋನಸ್ ಬಾಕಿ ಇರಿಸಿರುವ ಬಗ್ಗೆ ಪುತ್ತೂರು, ಸುಳ್ಯ ಮತ್ತು ಕಡಬ ಭಾಗದ ಕಾರ್ಮಿಕರು ಪುತ್ತೂರು ಶಾಸಕರಾದ ಆಶೋಕ್ ರೈಯವರಲ್ಲಿ ಮನವಿ ಮಾಡಿ ಸರಕಾರದಿಂದ ಬೋನಸ್ ತೆಗೆಸಿಕೊಡುವಂತೆ ಕೇಳಿಕೊಂಡಿದ್ದರು. ಈ ಸಂದರ್ಭದಲ್ಲಿ ಭರವಸೆ ನೀಡಿದ್ದ ಶಾಸಕರು ಈ ಬಗ್ಗೆ ಅರಣ್ಯ ಸಚಿವರನ್ನು ಭೇಟಿಯಗಿ ಅವರ ಜೊತೆ ಖುದ್ದು ಮಾತುಕತೆ ನಡೆಸಿ ಬಾಕಿ ಇರುವ ಬೋನಸ್ ಪಾವತಿ ಮಾಡುವಂತೆ ಮನವಿ ಮಾಡುವುದಾಗಿಯೂ ಮತ್ತು ಈ ವಿಚಾರವನ್ನು ಸರಕಾರದ ಗಮನಕ್ಕೆ ತರುವುದಾಗಿ ಹೇಳಿದ್ದರು. ಕಾರ್ಮಿಕರ ಬೋನಸ್ ಬಾಕಿ ಇರಿಸಿರುವ ವಿಚಾರವನ್ನು ಶಾಸಕರಾದ ಅಶೋಕ್ ರೈ ಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ತಿಳಿಸಿದ್ದರು.

ಆ. ೨೫ ರಂದು ಈ ಬಗ್ಗೆ ಸಚಿವರನ್ನು ಭೇಟಿಯಾದ ಶಾಸಕ ಅಶೋಕ್ ರೈ ಬಾಕಿ ಇರುವ ಬೋನಸ್ ನ್ನು ಕಾರ್ಮಿಕರಿಗೆ ನೀಡುವ ಬಗ್ಗೆ ಅರಣ್ಯ ಸಚಿವರಾದ ಈಶ್ವರಖಂಡ್ರೆ ಜೊತೆ ಚರ್ಚೆ ನಡೆಸಿದ್ದು ಈ ವೇಳೆ ಮಾತನಾಡಿದ ಸಚಿವರು ಒಂದು ವಾರದೊಳಗೆ ಬಾಕಿ ಇರುವ ಬೋನಸನ್ನು ಕಾರ್ಮಿಕರಿಗೆ ನೀಡಲು ಹಣಕಾಸು ಇಲಾಖೆಯು ಅನುಮತಿ ನೀಡಿದ್ದು ಬೋನಸ್ ನೀಡುವುದಾಗಿ ತಿಳಿಸಿದ್ದಾರೆ.


ಎಷ್ಟು ಕಾರ್ಮಿಕರು?

ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ ಕರ್ನಾಟಕ ರಬ್ಬರ್ ನಿಗಮದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುವ ಸುಮಾರು ೧೫ ಸಾವಿರ ಕಾರ್ಮಿಕರಿದ್ದಾರೆ. ಈ ಕಾರ್ಮಿಕರು ಹೆಚ್ಚು ದುಡಿಯಬೇಕು ಎಂಬ ಉದ್ದೇಶದಿಂದ ಸರಕಾರ ಇವರಿಗೆ ಬೋನಸ್ ನೀಡುವುದಾಗಿ ಹೇಳಿತ್ತು. ಪ್ರತೀ ದೀಪಾವಳಿ ಸಮಯದಲ್ಲಿ ಕಾರ್ಮಿಕರಿಗೆ ಅವರು ಮಾಡಿರುವ ಕೆಲಸದ ಆಧಾರದ ಮೇಲೆ ೨೦ ಶೇ ಬೋನಸ್ ನೀಡುತ್ತಿತ್ತು. ಆದರೆ ಕಳೆದ ಬಾರಿ ಪೂರ್ತಿ ಬೋನಸ್ ನೀಡಿರಲಿಲ್ಲ. ಇದೀಗ ಪುತ್ತೂರು ಶಾಸಕರಾದ ಅಶೋಕ್ ರೈಯವರ ಮುತುವರ್ಜಿಯಿಂದ ಸುಮಾರು ೧೫ ಸಾವಿರ ಕಾರ್ಮಿಕ ಕುಟುಂಬಗಳಿಗೆ ಬೋನಸ್ ಲಭಿಸುವಂತಾಗಿದೆ.


ಕೆಎಫ್‌ಡಿಸಿ ನಿಗಮದಲ್ಲಿ ದಿನಗೂಲಿ ನೌಕರರ ಬೋನಸ್ ಬಾಕಿ ಇರಿಸಿದ ಬಗ್ಗೆ ಕಾರ್ಮಿಕರು ನನ್ನ ಗಮನಕ್ಕೆ ತಂದಿದ್ದರು. ಈ ಬಗ್ಗೆ ನಾನು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದೆ. ಆ. ೨೫ ರಂದು ಅರಣ್ಯ ಸಚಿವರು ಸೀಎಂ ಆದೇಶದ ಮೇರೆಗೆ ಬೋನಸ್ ನೀಡಲು ಒಪ್ಪಿಕೊಂಡಿದ್ದು ಮುಂದಿನ ವಾರ ಎಲ್ಲರಿಗೂ ಬಾಕಿ ಇರುವ ಬೋನಸ್ ಸಿಗಲಿದೆ. ಕಾರ್ಮಿಕರ ನೋವಿಗೆ ಸ್ಪಂದಿಸಿದ ಸೀಎಂ ಸಿದ್ದರಾಮಯ್ಯ ಅವರಿಗೆ ಈ ವಿಚಾರದಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತೇನೆ

ಅಶೋಕ್‌ಕುಮಾರ್ ರೈ, ಶಾಸಕರು ಪುತ್ತೂರು

ಫೆ.27: ಉಡುಪಿಗೆ ಭೇಟಿ ನೀಡಲಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

Posted by Vidyamaana on 2023-02-26 16:07:56 |

Share: | | | | |


ಫೆ.27: ಉಡುಪಿಗೆ ಭೇಟಿ ನೀಡಲಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

ಉಡುಪಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಫೆ.27ರ ಬೆಳಗ್ಗೆ 9:30ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಲಿದ್ದು, ಉಡುಪಿಯ 5 ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಲಿರುವ 5 ಪ್ರಗತಿ ರಥಗಳಿಗೆ ಚಾಲನೆ ನೀಡಲಿದ್ದಾರೆ.

ಅಪರಾಹ್ನ 3:00 ಗಂಟೆಗೆ ಕಾರ್ಕಳದಲ್ಲಿ ನಡೆಯುವ ಬೃಹತ್ ಬೈಕ್ ಜಾಥಾದಲ್ಲಿ ಭಾಗವಹಿಸಿ, ಸಂಜೆ 4:00 ಗಂಟೆಗೆ ಅಜೆಕಾರಿನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಯುವ ಮೋರ್ಚಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಸಚಿವ ವಿ.ಸುನೀಲ್ ಕುಮಾರ್, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕೆ.ಸಿ. ಸಹಿತ ರಾಜ್ಯ ಮತ್ತು ಜಿಲ್ಲಾ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Recent News


Leave a Comment: