ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಹಾವೇರಿ ಬಿಜೆಪಿ ಕಚೇರಿಗೆ ಬೊಮ್ಮಾಯಿ ಆಗಮಿಸುತ್ತಿದಂತೆ ಕೋಲಾಹಲ

Posted by Vidyamaana on 2024-03-15 19:56:14 |

Share: | | | | |


ಹಾವೇರಿ ಬಿಜೆಪಿ ಕಚೇರಿಗೆ ಬೊಮ್ಮಾಯಿ ಆಗಮಿಸುತ್ತಿದಂತೆ ಕೋಲಾಹಲ

ಹಾವೇರಿ: ಮಾಜಿ ಸಿಎಂ, ಶಾಸಕ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದಂತೆ ಗದ್ದಲ ಗಲಾಟೆ ನಡೆದ ಘಟನೆ ಶುಕ್ರವಾರ ನಡೆದಿದೆ.


ಕಚೇರಿಗೆ ಬೊಮ್ಮಾಯಿ ಅವರು ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಹೈ ಡ್ರಾಮಾ ನಡೆಸಿದ್ದಾರೆ.ಹಾವೇರಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಅವರನ್ನು ಎಳೆದಾಡಿ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಗ್ರಾಮೀಣ ಭಾಗದ ಅಧ್ಯಕ್ಷರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ನಗರ ಕಾರ್ಯಕರ್ತರನ್ನ ಗ್ರಾಮೀಣ ಭಾಗದ ಅಧ್ಯಕ್ಷರಾಗಿ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.

ಈ ವೇಳೆ ಬೊಮ್ಮಾಯಿ ಅವರು ಎಲ್ಲ ಸರಿ ಮಾಡುತ್ತೇನೆ, ಕಾರ್ಯಕರ್ತರು ಒಗಟ್ಟು ಪ್ರದರ್ಶಿಸಿ. ಚುನಾವಣೆ ಹತ್ತಿರ ಇದೆ ಗಲಾಟೆ ಸರಿಯಲ್ಲ ಎಂದು ಕಾರ್ಯಕರ್ತರಿಗೆ ಮನವಿ ಮಾಡಿ ಕಾರ್ಯಕ್ರಮ ಮೊಟಕುಗೊಳಿಸಿ ಕಚೇರಿಯಿಂದ ಹೊರನಡೆದಿದ್ದಾರೆ.

ಶೋಭಕ್ಕನ ಕಾರಿನ ಡೋರಿಗೆ ಗುದ್ದಿ ರಸ್ತೆಗೆ ಬಿದ್ದ ಯುವಕನ ಮೇಲೆ ಹರಿದ ಲಾರಿ

Posted by Vidyamaana on 2024-04-08 19:48:49 |

Share: | | | | |


ಶೋಭಕ್ಕನ ಕಾರಿನ ಡೋರಿಗೆ ಗುದ್ದಿ ರಸ್ತೆಗೆ ಬಿದ್ದ ಯುವಕನ ಮೇಲೆ ಹರಿದ ಲಾರಿ

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಾರಿಗೆ ಸವಾರನೊಬ್ಬ ಬಲಿಯಾಗಿದ್ದಾನೆ. ಟಿಸಿ ಪಾಳ್ಯ ನಿವಾಸಿ ಪ್ರಕಾಶ್ (35) ಮೃತ ದುರ್ದೈವಿ. ಬೆಂಗಳೂರಿನ ಕೆ.ಆರ್ ಪುರಂ ಸಮೀಪದ‌ ದೇವಸಂದ್ರ ವಿನಾಯಕ‌ ದೇವಸ್ಥಾನ ಬಳಿ ಅಪಘಾತ (Ro

non

Accident) ಸಂಭವಿಸಿದೆ.

ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಕಾರಿನ ಡೋರ್ ತೆರೆಯುವಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಪ್ರಕಾಶ್‌ ಗುದ್ದಿ ಕೆಳೆಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ಪ್ರಕಾಶ್‌ ಮೇಲೆ ಖಾಸಗಿ ಬಸ್‌ ಹರಿದಿದೆ. ಗಂಭೀರ ಗಾಯಗೊಂಡ ಪ್ರಕಾಶ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಪ್ರಕಾಶ್‌ ಮೃತಪಟ್ಟಿದ್ದಾರೆ.

ಜೆರೋಸಾ ಶಾಲೆ ಘಟನೆ ಹಿಂದೆ ವ್ಯವಸ್ಥಿತ ಪಿತೂರಿ, ಮಕ್ಕಳನ್ನು ಸ್ವಾರ್ಥಕ್ಕೆ ಬಳಸಿದ್ದು ಅಕ್ಷಮ್ಯ, ; ಸತ್ಯಶೋಧನೆ ತನಿಖೆಗೆ ಸಮಾನ ಮನಸ್ಕರ ನಿಯೋಗ ಆಗ್ರಹ

Posted by Vidyamaana on 2024-02-14 19:32:09 |

Share: | | | | |


ಜೆರೋಸಾ ಶಾಲೆ ಘಟನೆ ಹಿಂದೆ ವ್ಯವಸ್ಥಿತ ಪಿತೂರಿ, ಮಕ್ಕಳನ್ನು ಸ್ವಾರ್ಥಕ್ಕೆ ಬಳಸಿದ್ದು ಅಕ್ಷಮ್ಯ,  ; ಸತ್ಯಶೋಧನೆ ತನಿಖೆಗೆ ಸಮಾನ ಮನಸ್ಕರ ನಿಯೋಗ ಆಗ್ರಹ

ಮಂಗಳೂರು, ಫೆ.14: ಸಂತ ಜೆರೋಸಾ ಶಾಲೆಯಲ್ಲಿ ಹಿಂದು ದೇವರ ಅವಹೇಳನ ಆರೋಪಕ್ಕೆ ಸಂಬಂಧಿಸಿ ಶಾಸಕ ವೇದವ್ಯಾಸ ಕಾಮತ್ ನಡೆಸಿದ ಪ್ರತಿಭಟನೆ ವಿರೋಧಿಸಿ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು, ಗಣ್ಯ ನಾಗರಿಕ ಪ್ರತಿನಿಧಿಗಳ ನಿಯೋಗ ಜೆರೋಸಾ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದು ಒಟ್ಟು ಘಟನೆಯ ವಿವರವನ್ನು ಪಡೆದು ತೀವ್ರ ಖಂಡನೆ ವ್ಯಕ್ತಪಡಿಸಿದೆ. 


ಮತೀಯ ದ್ವೇಷದ ದಾಳಿಗೆ ಗುರಿಯಾದ ಶಾಲೆಯ ಅಧ್ಯಾಪಕರು, ಆಡಳಿತ ಮಂಡಳಿಗೆ ಸಂಘಟನೆ ವತಿಯಿಂದ ನೈತಿಕ ಬೆಂಬಲ ವ್ಯಕ್ತಪಡಿಸಲಾಯಿತು. ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿಯವರ ಪಕ್ಷಪಾತದ, ಮತೀಯ ತಾರತಮ್ಯದ,  ದುರುದ್ದೇಶ ಪೂರ್ವಕ ನಡೆಯನ್ನು ನಿಯೋಗ ಒಕ್ಕೊರಲಿನಿಂದ ಖಂಡಿಸಿತು.ರವೀಂದ್ರನಾಥ ಠಾಗೋರ "ವರ್ಕ್ ಅಂಡ್ ವರ್ಶಿಪ್" ಹಾಡಿನ ಇಂಗ್ಲಿಷ್ ಪಠ್ಯ ಸಂಬಂಧಿಸಿ ಶಿಕ್ಷಕಿಯೊಬ್ಬರು ಉಲ್ಲೇಖಿಸಿದ ವಿಷಯಗಳನ್ನು ಮತೀಯ ಶಕ್ತಿಗಳು ದುರುದ್ದೇಶದಿಂದ ತಿರುಚಿದ್ದು ಪೋಷಕರನ್ನು ದಾರಿ ತಪ್ಪಿಸಿರುವುದು ಆಡಳಿತ ಮಂಡಳಿ ಪ್ರತಿನಿಧಿಗಳ ಜೊತೆಗೆ ಚರ್ಚಿಸಿದಾಗ ಎದ್ದು ಕಾಣಿಸಿದೆ. ಶಿಕ್ಷಕಿ ಧರ್ಮ ನಿಂದನೆ ಮಾಡಿದ್ದಾರೆ ಎಂದು ಅಪರಿಚಿತ ಮಹಿಳೆಯೋರ್ವರು ಹರಿಯಬಿಟ್ಟ ವಾಯ್ಸ್ ರೆಕಾರ್ಡ್ ಅನ್ನು ಆಧಾರವಾಗಿ ಮುಂದಿಟ್ಟು ಶಿಕ್ಷಕಿಯ ಮೇಲೆ ಆರೋಪ ಮಾಡಲಾಗಿದೆ. ಈ ಕುರಿತು ಮೌಖಿಕ ದೂರು ನೀಡಿದ ನಾಲ್ಕು ಪೋಷಕರಿಗೆ ತನಿಖೆ ನಡೆಸಲು ಒಂದು ವಾರ ಸಮಯ ಕೇಳಲಾಗಿತ್ತು. ಅದಕ್ಕೆ ಆ ಪೋಷಕರು ಸಹಮತವನ್ನು ವ್ಯಕ್ತಪಡಿಸಿದ್ದರು. ಆದರೆ, ಸೋಮವಾರ ಅಪರಿಚಿತ ಗುಂಪೊಂದು ಶಾಲೆಯ ಮುಂಭಾಗ ಆಗಮಿಸಿ ಪ್ರತಿಭಟನೆ ಆರಂಭಿಸಿದ್ದು, ತಕ್ಷಣವೇ ಶಿಕ್ಷಕಿಯ ವಜಾಕ್ಕೆ ಆಗ್ರಹಿಸಿದ ವಿಚಾರ ಆಡಳಿತ ಮಂಡಳಿ ನಿಯೋಗದ ಗಮನಕ್ಕೆ ತಂದಿದ್ದು, ಈ ಬೆಳವಣಿಗೆ ಶಾಸಕರ ಬೆಂಬಲಿತ ಕೋಮು ಶಕ್ತಿಗಳ ಪಿತೂರಿ ಈ ಘಟನೆಯ ಹಿಂದಿರುವುದು ಎದ್ದು ಕಾಣುವಂತಿದೆ. ಪ್ರಥಮವಾಗಿ ವಾಯ್ಸ್ ರೆಕಾರ್ಡ್ ಹರಿಯಬಿಟ್ಟು ಧರ್ಮ ನಿಂದನೆಯ ಆರೋಪ ಹೊರಿಸಿ, ಪ್ರಚೋದಿಸಿದವರ ಹಿನ್ನಲೆ, ಉದ್ದೇಶ ಸ್ಪಷ್ಟಪಡಿಸಬೇಕಿದೆ. ಈ ಮಹಿಳೆಯ ಮನೆಯ ಮಕ್ಕಳು ಜೆರೋಸಾ ಶಾಲೆಯಲ್ಲಿ ಕಲಿಯುತ್ತಿರುವುದು ನಿಜವೇ ? ಎಂಬುದೂ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ. 


ಮೊದಲನೆಯದಾಗಿ ಇಂತಹ ದೂರು ಇದ್ದಾಗ ಪೋಷಕರು ಪೇರೆಂಟ್ಸ್ ಎಸೋಷಿಯೇಷನ್ ಗೆ ದೂರು ನೀಡಿ ಆಂತರಿಕ ತನಿಖೆಯಾಗುವಂತೆ ನೋಡಬೇಕಿತ್ತು. ಇದು ಸಾಮಾನ್ಯ ನಿಯಮ. ಇಲ್ಲಿ ಅದನ್ನು ಕಡೆಗಣಿಸಿ ಶಾಸಕರು ಹಾಗೂ ಕೋಮು ಶಕ್ತಿಗಳ ಕೈಯಲ್ಲಿ ವಿದ್ಯಾರ್ಥಿಗಳು, ಪೋಷಕರು ದಾಳಗಳಾಗಿದ್ದು ಎದ್ದು ಕಂಡ ಅಂಶ. ಬಹಳ ಪ್ರಧಾನವಾಗಿ ತನ್ನ ಕ್ಷೇತ್ರದ ಪ್ರತಿಷ್ಟಿತ ಶಾಲೆಯ ಮೇಲೆ ಆರೋಪ ಬಂದಾಗ ಶಾಸಕರಾದವರು ಮಧ್ಯಸ್ಥಿಕೆ ವಹಿಸಿ ನಿಯಮ ಪ್ರಕಾರ ಕ್ರಮ ಜರಗುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಶಾಸಕರುಗಳಾಗಿ ಜೆರೋಸಾ ಶಾಲೆಗೆ ಬರುವ ಬದಲಿಗೆ, ಬಜರಂಗದಳ, ಸಂಘ ಪರಿವಾರದ ಪ್ರತಿನಿಧಿಗಳಂತೆ ಆಗಮಿಸಿದ್ದು, ನಡೆದುಕೊಂಡದ್ದು ಎದ್ದು ಕಾಣುತ್ತಿರುವ ಅಂಶ. 


ಶಾಸಕರುಗಳು ಸ್ವತಃ ಅಲ್ಪಸಂಖ್ಯಾತ ಧರ್ಮಗಳ ಧಾರ್ಮಿಕ ನಂಬಿಕೆಗಳನ್ನು ಕೆಣಕುವಂತೆ ಮಾತಾಡಿರುವುದು, ಗೌರವಾನ್ವಿತ ಫಾದರ್ ಗಳನ್ನು ಅಸಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿರುವುದು, ಸ್ವತಃ ಧರ್ಮದ್ವೇಷದಿಂದ ಕುರುಡಾಗಿರುವುದು, ತಮ್ಮ ಶಾಸನಾತ್ಮಕ ಜವಾಬ್ದಾರಿಯನ್ನು ಮರೆತಿರುವುದು ಕ್ರಿಮಿನಲ್ ಅಪರಾಧ. ಅದಲ್ಲದೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಡಿಡಿಪಿಐ ಮೂಲಕ ಶಾಲೆಯ ಆಡಳಿತ ಮಂಡಳಿಯನ್ನು ಬೆದರಿಸಿರುವುದು, ತಾವೂ ಸ್ವತಃ ಬೆದರಿಕೆ ಒಡ್ಡಿರುವುದು ಎದ್ದು ಕಾಣಿಸುತ್ತದೆ. ಈ ರೀತಿಯ ಬೆದರಿಕೆ, ಭಯ ಸೃಷ್ಟಿಯ ಮೂಲಕ ಆರೋಪ ಹೊತ್ತ ಶಿಕ್ಷಕಿಯನ್ನು ತನಿಖೆಯೇ ಇಲ್ಲದೆ ಶಿಕ್ಷೆಗೆ ಒಳಪಡಿಸುವ ಬಲವಂತದ ಸ್ಥಿತಿಯನ್ನು ನಿರ್ಮಿಸಿರುವುದು, ಪ್ರಾಥಮಿಕ ಶಾಲೆಯ ಮಕ್ಕಳನ್ನು ಧರ್ಮ ದ್ವೇಷ ಹುಟ್ಟಿಸುವ ರೀತಿ ಪ್ರತಿಭಟನೆಗೆ ಬಳಸಿರುವುದು, ಘೋಷಣೆ, ಹೇಳಿಕೆಗೆ ಪ್ರಚೋದಿಸಿರುವುದು ಮಂಗಳೂರಿನ ನಾಗರಿಕ ಪ್ರಜ್ಞೆಗೆ ಮಾಡಿದ ಅಪಮಾನ. ಈ ಮೂಲಕ ಮಂಗಳೂರಿನಲ್ಲಿ ಕೋಮು ಹಿಂಸೆ ಸೃಷ್ಟಿಸುವ ಹುನ್ನಾರ ಶಾಸಕರುಗಳಿಗೆ ಹಾಗೂ ಅವರ ಹಿಂಬಾಲಕರುಗಳಿಗೆ ಇದ್ದದ್ದು ಸ್ಪಷ್ಟ‌ ಎಂದು ನಿಯೋಗದ ನೇತೃತ್ವ ವಹಿಸಿದ್ದ ಡಿವೈಎಫ್ಐ ಪ್ರಕಟಣೆಯಲ್ಲಿ ತಿಳಿಸಿದೆ. 


ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟರ ಈ ರೀತಿಯ ನಡೆ ಅತ್ಯಂತ ಅಪಾಯಕಾರಿಯಾಗಿದ್ದು, ಇವರ ಮೇಲೆ ದಾಂಧಲೆ, ಗೂಂಡಾಗಿರಿ, ಬೆದರಿಕೆಯ ಜೊತೆಗೆ ಕೋಮುಗಲಭೆಗೆ ಪ್ರಚೋದನೆಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಸಮಿತಿ ಆಗ್ರಹಿಸುತ್ತದೆ. ಹಾಗೆಯೇ, ಟೀಚರ್ ಧರ್ಮ ನಿಂದನೆ ಮಾಡಿರುವ ಆರೋಪದ ಕುರಿತು ಇಲಾಖಾ ತನಿಖೆ ಪಾರದರ್ಶಕವಾಗಿ ನಡೆಯಬೇಕು, ಜೊತೆಗೆ ಪ್ರಕರಣದ ಎಲ್ಲಾ ಆಯಾಮಗಳು, ಬಹಳ ಪ್ರಧಾನವಾಗಿ ಮೊದಲು ವಾಯ್ಸ್ ರೆಕಾರ್ಡ್ ಮೂಲಕ ಪ್ರಚೋದನಾತ್ಮಕವಾಗಿ ಆರೋಪ ಮಾಡಿದ ಮಹಿಳೆಯ ಹಿನ್ನೆಲೆ, ಉದ್ದೇಶ, ಪೋಷಕರಿಗಿಂತ ಮೊದಲು ಸಂಘ ಪರಿವಾರದ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸಿರುವುದು, ಶಾಲೆಯ ವಿದ್ಯಾರ್ಥಿನಿಯರ ಮೂಲಕ ಗಂಭೀರ ಆರೋಪದ, ಮತೀಯವಾದಿ ಮನಸ್ಥಿತಿಯ ಮಾಧ್ಯಮ ಹೇಳಿಕೆ ನೀಡಿರುವುದು, ವಿದ್ಯಾರ್ಥಿನಿಯರು ಧಾರ್ಮಿಕ(ದ್ವೇಷದ) ಘೋಷಣೆ, ಧಾರ್ಮಿಕ ಸಂಕೇತದ ಶಾಲುಗಳನ್ನು ಬೀಸುವಂತೆ ಮಾಡಿರುವುದು ಪ್ರಕರಣದ ಹಿಂದೆ ವ್ಯವಸ್ಥಿತ ಪಿತೂರಿ ಮೇಲ್ನೋಟಕ್ಕೆ ಕಾಣುವಂತೆ ಮಾಡಿದೆ. ಈ ಅಂಶಗಳೂ ತನಿಖೆಗೆ ಒಳಪಡಬೇಕು, ತನಿಖೆಯ ಆಧಾರದಲ್ಲಿ ಕಾನೂನು ಕ್ರಮಗಳು ಜರುಗಬೇಕು ಎಂದು ನಿಯೋಗ ಒತ್ತಾಯಿಸುತ್ತದೆ. ಅದಲ್ಲದೆ, ಪ್ರಕರಣ ಹಳಿ ತಪ್ಪಲು ಶಾಸಕರ ಅಡಿಯಾಳಿನಂತೆ ನಡೆದುಕೊಂಡ ಡಿಡಿಪಿಐ ವರ್ತನೆಯೂ ಒಂದು ಪ್ರಧಾನ ಕಾರಣ. ಡಿಡಿಪಿಐಯನ್ನು ಈ ಪ್ರಕರಣದ ತನಿಖಾ ಪ್ರಕ್ರಿಯೆಯ ಜವಾಬ್ದಾರಿಯಿಂದ ಹೊರಗಿಡಬೇಕು, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.


ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಥವಾ ಐಪಿಎಸ್,  ನ್ಯಾಯವಾದಿಗಳ ನೇತೃತ್ವದ ಗಣ್ಯರು ಒಳಗೊಂಡ ಸತ್ಯಶೋಧನಾ ಸಮಿತಿಯನ್ನು ಸರಕಾರ ರಚಿಸಬೇಕು, ಅದು ಈ ಪ್ರಕರಣದ ಎಲ್ಲಾ ಆಯಾಮಗಳ ಸಮಗ್ರ ವರದಿಯನ್ನು ನಾಗರಿಕ ಸಮಾಜದ ಮುಂದೆ ಇಡಲು ಸಾಧ್ಯ ಆಗಬೇಕು ಎಂದು ನಿಯೋಗ ಸರಕಾರದ ಬಳಿ ಮನವಿ ಮಾಡುತ್ತದೆ. ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ಈ ಪ್ರಕರಣದಲ್ಲಿ ನಡೆದುಕೊಂಡ ರೀತಿ ಅಕ್ಷಮ್ಯ. ಶಾಸನ ಸಭೆಯ ಸದಸ್ಯರು ಈ ರೀತಿ ನಡೆದುಕೊಳ್ಳುವುದು ಅಸಹಜ ಮಾತ್ರ ಅಲ್ಲ, ವ್ಯವಸ್ಥೆಯನ್ನೇ ಬುಡಮೇಲು ಮಾಡುವ ದುಷ್ಕೃತ್ಯ.  ಇವರ ಮೇಲೆ ಸಭಾಪತಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಇವರಿಗೆ ಶಾಸನ ಸಭೆಯ ಸದಸ್ಯ ಜವಾಬ್ದಾರಿ ಕುರಿತು ವಿಶೇಷ ತರಬೇತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ಯು.ಟಿ ಖಾದರ್ ಅವರಿಗೆ ನಿಯೋಗ ದೂರು ನೀಡಲಿದೆ.


ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ ಹೆಗ್ಡೆ, ಮಂಜುಳಾ ನಾಯಕ್, ನ್ಯಾಯವಾದಿಗಳಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ಕಾಂಗ್ರೆಸ್ ಮುಖಂಡರಾದ ಪಿ.ವಿ ಮೋಹನ್, ಮಾಜಿ ಮೇಯರ್ ಕೆ. ಅಶ್ರಫ್, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಹಿರಿಯ ಕಾರ್ಮಿಕ ನೇತಾರರಾದ ಬಾಲಕೃಷ್ಣ ಶೆಟ್ಟಿ, ಸಿಪಿಐಎಂ ನ ಸುನಿಲ್ ಕುಮಾರ್ ಬಜಾಲ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ ಶೆಟ್ಟಿ,  ಭಾರತಿ ಬೋಳಾರ, ವಿವಿಧ ಸಂಘಟನೆಗಳ ಸ್ಟಾನಿ ಅಳ್ವಾರಿಸ್, ಎರಿಕ್ ಲೋಬೋ, ಅನಿಲ್ ಲೋಬೋ, ಸಮರ್ಥ್ ಭಟ್, ಯೋಗೀಶ್ ನಾಯಕ್, ನೆಲ್ಸನ್ ರೋಚ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಯೋಗಿತಾ, ನಿವೃತ್ತ ಪ್ರಾಧ್ಯಾಪಕರುಗಳಾದ ಡಾ. ಶಿವರಾಮ ಶೆಟ್ಟಿ, ಡಾ.ವಸಂತ ಕುಮಾರ್ ಇದ್ದರು

ಮಾಜಿ ಸಿಎಂ ಯಡಿಯೂರಪ್ಪ ಕಾಲಿಗೆ ಗಾಯ

Posted by Vidyamaana on 2023-10-15 22:13:34 |

Share: | | | | |


ಮಾಜಿ ಸಿಎಂ ಯಡಿಯೂರಪ್ಪ ಕಾಲಿಗೆ ಗಾಯ

ರಾಯಚೂರು (ಅ.15): ರಾಜ್ಯದ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದಿಂದ ರಾಯಚೂರು ನಗರಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗುವಾಗ ಕಾಲು ಉಳುಕಿದೆ. ಹೆಲಿಕಾಪ್ಟರ್‌ ಹತ್ತುವಾಗ ಕಾಲು ಉಳುಕಿದ್ದು, ನಂತರ ಹೆಲಿಕಾಪ್ಟರ್‌ ಇಳಿಯಲಾಗದೇ ಪರದಾಡಿದ ಪ್ರಸಂಗ ನಡೆದಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ದೂರದ ಪ್ರಯಾಣವನ್ನೂ ಮಾಡುವುದಿಲ್ಲ. ವಯೋಸಹಜವಾಗಿ ಸ್ನಾಯು ಹಾಗೂ ಕೀಲು- ಮೂಳೆಗಳಲ್ಲಿ ಶಕ್ತಿ ಕುಂದಿದ್ದು ಮೊದಲಿನಂತೆ ಸಕ್ರಿಯವಾಗಿ ರಾಜಕೀಯದಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲವೆಡೆ ರಾಜ್ಯ ಸಂಚಾರ ಮಾಡಿ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಅದೇ ರೀತಿ ಇಂದು ಮಧ್ಯಾಹ್ನ ಭದ್ರತಾ ಸಿಬ್ಬಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದಿಂದ ಹೆಲಿಕಾಪ್ಟರ್‌ನಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರಿಗೆ ತೆರಳುವಾಗ ಘಟನೆ ನಡೆದಿದೆ. ಶಿಕಾರಿಪುರದಲ್ಲಿ ಹೆಲಿಕಾಪ್ಟರ್‌ ಹತ್ತುವಾಗ ಯಡಿಯೂರಪ್ಪ ಅವರ ಕಾಲು ಉಳುಕಿದೆ. ಇದಾದ ನಂತರ ಹೆಲಿಕಾಪ್ಟರ್‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆದಿದ್ದಾರೆ. ನಂತರ ಲಿಂಗಸಗೂರಿನಲ್ಲಿ ಇಳಿಯುವಾಗ ಕಾಲಿಗೆ ಪೆಟ್ಟು ಆಗಿದೆ ಎಂದು ತಿಳಿಸಿದ್ದಾರೆ. ಆಗ ಸಹಾಯಕರೊಂದಿಗೆ ಇಳಿಯಲು ಪ್ರಯತ್ನಿಸಿದರೂ ತೀವ್ರ ನೋವಿನಿಂದ ಕಾಲೂರಲೂ ಸಾಧ್ಯವಾಗದೇ ಪರದಾಡಿದ್ದಾರೆ.

ಬಪ್ಪಳಿಗೆ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

Posted by Vidyamaana on 2023-09-13 11:05:38 |

Share: | | | | |


ಬಪ್ಪಳಿಗೆ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಬಪ್ಪಳಿಗೆಯ ಉತ್ಸಾಹಿ ತರುಣರ ಸಂಘಟನೆಯಾದ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯ 2023-25ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಮೋನು ಬಪ್ಪಳಿಗೆ ಯವರು ಪುನರಾಯ್ಕೆ ಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಾಹಿಕ್, ಕೋಶಾಧಿಕಾರಿಯಾಗಿ ಅಲ್ತಾಫ್ ಯು. ಕೆ ಆಯ್ಕೆಯಾದರು.

 ಸ್ಥಳೀಯ ಮದ್ರಸ  ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆಯು ನಡೆದಿದೆ. ಮಸ್ಜಿದುನ್ನೂರು ಮಸೀದಿ ಹಾಗೂ ಮದ್ರಸ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಲವ್ಲಿಯವರ ಅಧ್ಯಕ್ಷತೆಯಲ್ಲಿ, ಸ್ಥಳೀಯ ಖತೀಬರೂ ಸಮಿತಿಯ ಗೌರವಾಧ್ಯಕ್ಷರೂ ಆದ ಸಿರಾಜುದ್ದೀನ್ ಫೈಝಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ,ಸಾಂಘಿಕ ಕ್ಷೇತ್ರದಲ್ಲಿ ಯುವಕರ ಜವಾಬ್ದಾರಿಯನ್ನು ವಿವರಿಸಿದರು.ಮಸೀದಿಯ ಪ್ರಧಾನ ಕಾರ್ಯದರ್ಶಿಗಳಾದ ಇಕ್ಬಾಲ್ ಯು.ಕೆ.ಯವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ಗಳನ್ನು ನಿರ್ವಹಿಸಿದರು.

  ಕಳೆದ ನಲುವತ್ತಕ್ಕಿಂತಲೂ ಅಧಿಕ ವರ್ಷಗಳಿಂದ  ಮೊಹಲ್ಲಾ ಬಾಂಧವರ  ಸಾಮಾಜಿಕ, ಸಾಮುದಾಯಿಕ, ಶೈಕ್ಷಣಿಕ ಹಾಗೂ ಇನ್ನಿತರ ಕಾರ್ಯಗಳಿಗೆ ತನ್ನದೇ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಸಮಿತಿಯು ಜನಪರ ಸೇವೆಗಳಿಂದ ಜನಪ್ರಿಯತೆ ಗಳಿಸಿದೆ.

ಯೌವ್ವನ ಒಳಿತಿಗಾಗಿ ಎಂಬ ಘೋಷ ವಾಕ್ಯದಡಿ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯರ ಸೇರ್ಪಡೆಗಾಗಿ ಒಂದು ತಿಂಗಳ ಕಾಲ ನಡೆಸಿದ  ಸದಸ್ಯತ್ವ ಅಭಿಯಾನದ ಮೂಲಕ ಸಮಿತಿಗೆ ಸೇರ್ಪಡೆಗೊಂಡ ಸದಸ್ಯರಲ್ಲಿ ಇಪ್ಪತ್ತೊಂದು ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಉಪಾಧ್ಯಕ್ಷರುಗಳಾಗಿ ಸವಾದ್ ಲಬಾಂಬ,

ಹಾಜಿ ಸಾದಿಕ್ ಕೆ.ವೈ.ಪಿ.,

ಜೊತೆಕಾರ್ಯದರ್ಶಿಗಳಾಗಿ ನೂರುದ್ದೀನ್ ಬಿ.ಹೆಚ್,

ಆಸೀಫ್ ಪಿ.ಬಿ ,ಸಂಘಟನಾ ಕಾರ್ಯದರ್ಶಿಗಳಾಗಿ ಬಶೀರ್ ಬಂಗಾರಿ,ಉಮರ್ ಕರ್ಕುಂಜ,

ತುರ್ತು ಸೇವೆಗಳ ಉಸ್ತುವಾರಿಗಳಾಗಿ ಶರೀಫ್,ಇಸಾಕ್ ಕರ್ಕುಂಜ, ರಮೀಝ್, ಮಸೂದ್, ಸವಾದ್ ಪಿ.ಬಿ, ಉಮರ್, ಆಶಿಕ್ ಜನತಾ ಸ್ಕೇಲ್.ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಜಲಾಲ್ ಪಿ.ಬಿ, ಶಾಕಿರ್, ಸಜಾಬ್ ಯಸ್. ಕೆ,  ಹುರೈಸ್ ಜನತಾ ಸ್ಕೇಲ್,   ಫಾರೂಕ್,ಕಲೀಲ್, ಸಫ್ವಾನ್,, ಶಿಹಾಬ್ ಪಿ.ಬಿ  ಯವರನ್ನು ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು .

ಬಿ.ಹೆಚ್.ಅಬ್ದುಲ್ ರಝಾಕ್ ಸ್ವಾಗತಿಸಿ, ವಂದಿಸಿದರು.

ಇಸ್ಮಾಯಿಲ್ ಹಾನಿಯೆಹ್ ಹತ್ಯೆ ಪ್ರಕರಣ: ಇರಾನ್‌ನ ಉನ್ನತ ಸೇನಾಧಿಕಾರಿಗಳು ಸಹಿತ 20ಕ್ಕೂ ಅಧಿಕ ಜನರ ಬಂಧನ

Posted by Vidyamaana on 2024-08-04 17:27:40 |

Share: | | | | |


ಇಸ್ಮಾಯಿಲ್ ಹಾನಿಯೆಹ್ ಹತ್ಯೆ ಪ್ರಕರಣ: ಇರಾನ್‌ನ ಉನ್ನತ ಸೇನಾಧಿಕಾರಿಗಳು ಸಹಿತ 20ಕ್ಕೂ ಅಧಿಕ ಜನರ ಬಂಧನ

ಟೆಹ್ರಾನ್: ಟೆಹ್ರಾನ್‍ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹಾನಿಯೆಹ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇರಾನ್‌ನ ಉನ್ನತ ಸೇನಾಧಿಕಾರಿಗಳು, ಗುಪ್ತಚರ ಅಧಿಕಾರಿಗಳ ಸಹಿತ 20ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇರಾನ್‍ನ ಭದ್ರತಾ ಪಡೆಗಳು ಹಾನಿಯೆಹ್ ತಂಗಿದ್ದ ಅತಿಥಿ ಗೃಹವನ್ನು ಶೋಧಿಸಿದ್ದು, ಸಿಬ್ಬಂದಿಯನ್ನು ಬಂಧಿಸಿ ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಅತಿಥಿ ಗೃಹದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ.

Recent News


Leave a Comment: