ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

Posted by Vidyamaana on 2024-04-19 11:36:09 |

Share: | | | | |


ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಗದಗ: ಬೆಳ್ಳಂಬೆಳಿಗೆ ಬೆಚ್ಚಿಬೀಳಿಸುವ ಸುದ್ದಿ ಹೊರಬಿದ್ದಿದ್ದು, ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಲಗಿದಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಆಘಾತಕಾರಿ ಘಟನೆ ಗದಗದ ನಗರದ ದಾಸರ ಓಣಿಯಲ್ಲಿ ನಡೆದಿದೆ.

ನಗರ ಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆಯವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪರಶುರಾಮ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.

ಪುತ್ತೂರು: ಖ್ಯಾತ ಪಾಕತಜ್ಞ ಖಾದರ್ ಕೆರೆಮೂಲೆ ಹೃದಯಾಘಾತದಿಂದ ನಿಧನ

Posted by Vidyamaana on 2023-09-27 20:39:28 |

Share: | | | | |


ಪುತ್ತೂರು: ಖ್ಯಾತ ಪಾಕತಜ್ಞ ಖಾದರ್ ಕೆರೆಮೂಲೆ ಹೃದಯಾಘಾತದಿಂದ ನಿಧನ

ಪುತ್ತೂರು: ಸಾಲ್ಮರ ನಿವಾಸಿ ಅಬ್ದುಲ್ ಖಾದರ್ ಕೆರೆಮೂಲೆ ಯವರು ಹೃದಯಾಘಾತದಿಂದ ಸೆ. 27ರಂದು ನಿಧನರಾದರು. 

ನುರಿತ ಪಾಕತಜ್ಞರಾಗಿದ್ದ ಅವರು, ಉಪ್ಪಿನಂಗಡಿ ಸಮೀಪದ ಕುದ್ರಡ್ಕ ಮಸೀದಿ ಕಾರ್ಯಕ್ರಮವೊಂದರಲ್ಲಿ ಅಡುಗೆ ಕೆಲಸದಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ನಿಧನರಾದರು.

ಅವರ ಅಂತಿಮ ವಿಧಿವಿಧಾನ ಸೆ. 28ರಂದು ಬೆಳಗ್ಗಿನ ನಮಾಝ್ ನ ನಂತರ ನಡೆಯಲಿದೆ. ಬೆಳಿಗ್ಗೆ 7ಕ್ಕೆ ಮಯ್ಯತ್ ನಮಾಝ್ ಮಾಡಿದ ನಂತರ ಸೈಯ್ಯದ್ ಮಲೆಯಲ್ಲಿ ದಫನ ಕಾರ್ಯ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಿವಾಹಿತೆಯೊಂದಿಗೆ ಮರಕ್ಕೆ ನೇಣು ಬಿಗಿದುಕೊಂಡ ಯುವಕ

Posted by Vidyamaana on 2023-12-28 16:50:02 |

Share: | | | | |


ವಿವಾಹಿತೆಯೊಂದಿಗೆ  ಮರಕ್ಕೆ ನೇಣು ಬಿಗಿದುಕೊಂಡ ಯುವಕ

ಕೋಲಾರ : ಒಂದೇ ಮರಕ್ಕೆ ನೇಣು ಬಿಗಿದುಕೊಂಡು (Lovers Death) ಗೃಹಿಣಿ ಹಾಗೂ ಯುವಕ ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಎಸ್ ಜಿಡಿಮಾಕಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನುಸೂಯ (35), ವಿಜಯ್ ಕುಮಾರ್ (27) ಮೃತರು.ಇವರಿಬ್ಬರು ಗ್ರಾಮದ ಹೊರವಲಯದ ಕೆರೆ ಅಂಗಳದಲ್ಲಿದ್ದ ಹೊಂಗೆ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಸೂಯ ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ, ವಯಸ್ಸಿನಲ್ಲಿ ತನಗಿಂತ 8 ವರ್ಷ ಚಿಕ್ಕವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಹಿಂದೊಮ್ಮೆ ಇವರಿಬ್ಬರು ಮನೆ ಬಿಟ್ಟು ಓಡಿ ಹೋದಾಗ ಕುಟುಂಬಸ್ಥರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇವರಿಬ್ಬರನ್ನು ಹುಡುಕಿ ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದರು.


ಈ ವೇಳೆ ಇಬ್ಬರಿಬ್ಬರ ಪ್ರೀತಿಯಾಟ ಬಯಲಾಗಿತ್ತು. ಹಲವು ಬಾರಿ ರಾಜಿ ಪಂಚಾಯತಿಯನ್ನು ಕುಟುಂಬಸ್ಥರು ಮಾಡಿದ್ದರು. ಆದರೆ ಯುವಕನ ಮೋಹಪಾಶಕ್ಕೆ ಬಿದ್ದ ಅನುಸೂಯ ಮತ್ತೆ ತನ್ನ ಗಂಡ- ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಓಡಿ ಹೋಗಿದ್ದಳು. ಬಳಿಕ ಮತ್ತೆ ರಾಜಿ ಪಂಚಾಯತಿ ನಂತರ ಅನುಸೂಯ ತವರು ಮನೆ ಸೇರಿದ್ದಳು. ಇತ್ತ ವಿಜಯ್‌ ಕುಮಾರ್‌ ಮದನಪಲ್ಲಿಯಲ್ಲಿ ಇರುವ ಮಾವನ ಮನೆ ಸೇರಿದ್ದ.ಕಳೆದ ಎರಡು ದಿನಗಳ ಹಿಂದೆ ವಿಜಯ್‌ಕುಮಾರ್‌ ತನ್ನ ತಾಯಿಗೆ ಹಾವು ಕಚ್ಚಿದೆಯೆಂದು ಮದನಪಲ್ಲಿಯಿಂದ ಬಂದಿದ್ದ. ಆದರೆ ತಾಯಿ ನೋಡಲು ಬಂದವನು ಪ್ರೇಯಸಿಯ ಜತೆಗೆ ಒಟ್ಟಿಗೆ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸ್ಥಳೀಯರು ಇಬ್ಬರ ಮೃತದೇಹವನ್ನು ಕಂಡು ರಾಯಲ್ಪಾಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕಾಗಮಿಸಿದ ಪೊಲೀಸರು ಮರದಿಂದ ಮೃತದೇಹಗಳನ್ನು ಇಳಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ತಾಯಿ ಪ್ರೀತಿಗೆ ಪುಟ್ಟ ಮಕ್ಕಳಿಬ್ಬರು ಅನಾಥರಾದರೆ, ಮಗನನ್ನು ಕಳೆದುಕೊಂಡ ವೃದ್ಧ ತಂದೆ-ತಾಯಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ರಾಯಲ್ಪಾಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸಾವಿನ ಬಗ್ಗೆ ಅನುಮಾನ : ದಫನ ಮಾಡಿದ 18 ದಿನಗಳ ಬಳಿಕ ಮರಣೋತ್ತರ ಪರೀಕ್ಷೆ

Posted by Vidyamaana on 2024-05-24 11:06:49 |

Share: | | | | |


ಸಾವಿನ ಬಗ್ಗೆ ಅನುಮಾನ : ದಫನ ಮಾಡಿದ 18 ದಿನಗಳ ಬಳಿಕ ಮರಣೋತ್ತರ ಪರೀಕ್ಷೆ

ಕನ್ಯಾನ : ಸಂಶಯಾಸ್ಪದವಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಶವ ದಫನ ಮಾಡಿದ ಬಳಿಕ, ಸಾವಿನಲ್ಲಿ ಸಂಶಯವಿದೆ ಎಂದು ಮೃತ ವ್ಯಕ್ತಿಯ ಸಹೋದರ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದಂತೆ ಕನ್ಯಾನ ಬಂಡಿತ್ತಡ್ಕ ಮಸೀದಿ ಆವರಣದಲ್ಲಿ ದಫನ ಮಾಡಿದ್ದ ಶವವನ್ನು 18 ದಿನಗಳ ಬಳಿಕ ಮೇಲೆತ್ತಿ ಮರಣೋತ್ತರ ಪರೀಕ್ಷೆಯನ್ನು ಗುರುವಾರ ನಡೆಸಲಾಯಿತು.

ಕೇರಳದ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ (44) ಅವರ ದೇಹವನ್ನು ಕನ್ಯಾನದ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ದಫನ ಮಾಡಲಾಗಿತ್ತು. ಆ ಶವವನ್ನು ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್, ಮಂಜೇಶ್ವರ ಸಿಪಿಐ ರಾಜೀವ್ ಕುಮಾರ್ ಕೆ., ಕೇರಳ ಆರೋಗ್ಯ ಇಲಾಖೆಯ ಡಾ.ಹರಿಕೃಷ್ಣ ಕಾಸರಗೋಡು, ಯೆನೆಪೋಯ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಬಿ., ವಿಟ್ಲ ಪೊಲೀಸರ ಸಮ್ಮುಖದಲ್ಲಿ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ದೇಹದ ಅಂಗಾಗಳ ಮಾದರಿಯನ್ನು ವಿಧಿವಿಜ್ಞಾನ ತಂಡ ಪಡೆದುಕೊಂಡಿದ್ದು, ತನಿಖೆಗಾಗಿ ಯೆನೆಪೋಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಬಂದಿದ್ದು, ವರದಿಯನ್ನು ಕೇರಳದ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ವಿಟ್ಲ : ಬಸ್-ಪಿಕಪ್‌ ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ

Posted by Vidyamaana on 2024-04-04 12:53:09 |

Share: | | | | |


ವಿಟ್ಲ : ಬಸ್-ಪಿಕಪ್‌ ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ

ವಿಟ್ಲ-ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಬಸ್ಸಿಗೆ ಪಿಕಪ್ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡ ಘಟನೆ ನಡೆದಿದೆ.

ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ

Posted by Vidyamaana on 2024-05-25 20:01:21 |

Share: | | | | |


ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ

ಬೆಂಗಳೂರು : ವಿಧಾನಪರಿಷತ್‌ ಚುನಾವಣೆಯಲ್ಲಿ ನೈಋತ್ಯ ಪದವೀಧರರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ರಘುಪತಿ ಭಟ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಉಚ್ಚಾಟನೆ ಆದೇಶದಲ್ಲಿ ಏನಿದೇ?: ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನಪರಿಷತ್‌ ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ.

Recent News


Leave a Comment: