ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಮಂಗಳೂರಿನಲ್ಲಿ ಫೆ.17ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

Posted by Vidyamaana on 2024-01-31 14:06:35 |

Share: | | | | |


ಮಂಗಳೂರಿನಲ್ಲಿ ಫೆ.17ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಬೆಂಗಳೂರು: ಮಂಗಳೂರಿನಲ್ಲಿ ಫೆ. 17ರಂದು ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಕಳೆದ ತಿಂಗಳಲ್ಲೆ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರದಿಂದ ಅದನ್ನು ಮುಂದೂಡಲಾಗಿತ್ತು. ಫೆ.17ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಉಪ್ಪಿನಂಗಡಿ ಗ್ರಾಪಂ: ನೂತನ ಅಧ್ಯಕ್ಷೆ ಉಪಾಧ್ಯಕ್ಷೆ ಅಧಿಕಾರ ಸ್ವೀಕಾರ

Posted by Vidyamaana on 2023-08-18 06:53:40 |

Share: | | | | |


ಉಪ್ಪಿನಂಗಡಿ ಗ್ರಾಪಂ: ನೂತನ ಅಧ್ಯಕ್ಷೆ ಉಪಾಧ್ಯಕ್ಷೆ ಅಧಿಕಾರ ಸ್ವೀಕಾರ

ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಲಲಿತಾ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವಿದ್ಯಾಲಕ್ಷ್ಮಿ ಪ್ರಭುರವರು ಆಯ್ಕೆಯಾಗಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್ ಗೆ ಎಸ್.ಡಿ.ಪಿ.ಐ.ಯ ನಾಲ್ವರು ಸದಸ್ಯರು ಬೆಂಬಲ ನೀಡಿದ್ದು, ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿತು. ಅಧಿಕಾರದಲ್ಲಿದ್ದ ಬಿಜೆಪಿ ಅಧಿಕಾರದಿಂದ ದೂರ ಉಳಿಯಿತು.

ಪದಪ್ರದಾನ ಸಮಾರಂಭದಲ್ಲಿ ಕಾಂಗ್ರೆಸ್ ನ ಉಪ್ಪಿನಂಗಡಿ ಮತ್ತು ವಿಟ್ಲ ಬ್ಲಾಕ್ ನ  ಅಧ್ಯಕ್ಷರಾದ ಡಾ| ರಾಜರಾಂ, ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಫಾ ಲತೀಫಿ ಮತ್ತು ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರಹಿಮಾನ್ ಮಠ, ಎಸ್.ಡಿ.ಪಿ.ಐ ಪರವಾಗಿ ಎಸ್.ಡಿ.ಪಿ.ಐ ಬೆಂಬಲಿತ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ರಶೀದ್ ಮಠ, ಸೌಧ ಮುಸ್ತಫಾ, ನೆಪೀಸಾ ಇಲ್ಯಾಸ್, ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಝಕರಿಯಾ ಕೊಡಿಪ್ಪಾಡಿ, ಕಾರ್ಯಕರ್ತರಾದ ಮಜೀದ್ ಮಠ,  ಶುಹೈಭ್ ಬಂಡಾಡ್ ಮುಂತಾದವರು ಉಪಸ್ಥಿತರಿದ್ದರು.

ಕುರಿಯ ಹಿ ಪ್ರಾ ಶಾಲೆ ನೂತನ ವಿವೇಕ ಕೊಠಡಿ ಉದ್ಗಾಟನೆ

Posted by Vidyamaana on 2023-12-26 20:17:28 |

Share: | | | | |


ಕುರಿಯ ಹಿ ಪ್ರಾ ಶಾಲೆ  ನೂತನ ವಿವೇಕ ಕೊಠಡಿ ಉದ್ಗಾಟನೆ

ಪುತ್ತೂರು: ಕುರಿಯ ಸರಕಾರಿ ಹಿ ಪ್ರಾ ಶಾಲೆ ಇಲ್ಲಿ‌ನಿರ್ಮಾಣವಾದ ನೂತನ ವಿವೇಕ ಕೊಠಡಿಯನ್ನು ಶಾಸಕರಾದ ಅಶೋಕ್ ರೈ ಉದ್ಘಾಟಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಪ್ರತಿಭಾವಂತರಾಗಿದ್ದು ಸೂಕ್ತ ಅವಕಾಶ ಕಲ್ಪಿಸಿದ್ದಲ್ಲಿ ಅವರು ದೊಡ್ಡ ಸಾಧಕರಾಗಬಹುದು ಎಂದು ಶಾಸಕರು ಹೇಳಿದರು.

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಣಣವನ್ನು ನೀಡಲಾಗುತ್ತದೆ. ಮಕ್ಕಳಿಗೆ ಶಾಲೆ ಮತ್ತು ಮನೆಯಲ್ಲಿ ಉತ್ತಮ ವಾತಾವರಣ‌ನಿರ್ಮಾಣವಾಗಬೇಕು.ಶಾಲೆಯಲ್ಲಿರುವ ಶಿಕ್ಷಕರು ಸಮನ್ವಯತೆಯಿಂದ ಕೆಲಸವನ್ನು ಮಾಡಬೇಕು. ಸಮನ್ವಯತೆ ಕೊರತೆಯ ಬಗ್ಗೆ ಅನೇಕ‌ದೂರುಗಳು ಕೇಳಿ ಬರುತ್ತಿದ್ದು ಆ ರೀತುಯಾಗದಂತೆ ಶಿಕ್ಷಕರುಗಳು ಎಚ್ಚರವಹಿಸಬೇಕಿದೆ ಎಂದು ಹೇಳಿದರು.


ಗ್ಯಾರಂಟಿ ಯೋಜನೆ ಮಕ್ಕಳ ಶಿಕ್ಣಣಕ್ಕೆ ಬಳಕೆ

ಸರಕಾರದ ಐದು ಗ್ಯಾರಂಟಿ ಯೋಜನೆಯು ಮಕ್ಕಳ ಶಿಕ್ಷಣಕ್ಕೆ ಬಳಕೆಯಾಗುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಮಹಿಳೆಯರ ಕೈ ಗಟ್ಟಿ ಮಾಡುವ ಉದ್ದೇಶ ಈ ಗ್ಯಾರಂಟಿ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈಯವರು ಮಾತನಾಡಿ ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಮೂಲಕ ಸರಕಾರಿ ಶಾಲೆಯನ್ನು ಉಳಿಸುವ ಕೆಲಸವನ್ನು ಮಾಡಬೇಕು. ಮನೆಯೊಂದರಲ್ಲಿ ಆರಂಭವಾದ ಕುರಿಯ ಸರಕಾರಿ ಶಾಲೆ ಆ ಬಳಿಕ ಮುಳಿ ಹುಲ್ಲಿನ ಮಾಡಿನ ಶಾಲೆಯಾಗಿ ರೂಪುಗೊಂಡು ಆ ಬಳಿಕ ಉತ್ತರೋತ್ತರ ಅಭಿವೃದ್ದಿ ಹೊಂದಿದೆ. ಸಾವಿರಾರು ಮಕ್ಕಳು ವಿದ್ಯೆ ಕಲಿತ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ವಿಚಾರವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ, ಗ್ರಾಪಂ ಸದಸ್ಯರುಗಳಾದ ಬೂಡಿಯಾರ್ ಪುರುಷೋತ್ತಮ ರೈ, ಯಾಕೂಬ್ ಕುರಿಯ, ನಾಗೇಶ್ ಎಂ, ಕಲಾವತಿ, ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ,ಕ್ಲಸ್ಟರ್ ಸಿಆರ್ ಪಿ ಪರಮೇಶ್ವರಿ, ನಿವೃತ್ತ ಬ್ಯಾಂಕ್ ಮೆನೆಜರ್ ನಾರಾಯಣ ರೈ, ಶಿಕ್ಷಕಿಯರಾದ  ಮಮತಾ, ರಶ್ಮಿತಾ ,ರಮ್ಯ, ಸಮದ್ ಕುರಿಯಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರಾದ ನವೀನ್ ಕುಮಾರ್ ಕೆ ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ಕವಿತಾ ವಂದಿಸಿದರು. ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಮಾಧ್ಯಮ ಪ್ರಕೋಷ್ಠ ಸಂಚಾಲಕರಾಗಿ ಮಹೇಶ್ ರೈ ಕೇರಿ, ಸುಶಾಂತ್ ಚಂದಳಿಕೆ

Posted by Vidyamaana on 2024-09-07 10:07:22 |

Share: | | | | |


ಬಿಜೆಪಿ ಗ್ರಾಮಾಂತರ ಮಂಡಲ ಮಾಧ್ಯಮ ಪ್ರಕೋಷ್ಠ ಸಂಚಾಲಕರಾಗಿ ಮಹೇಶ್ ರೈ ಕೇರಿ, ಸುಶಾಂತ್ ಚಂದಳಿಕೆ

ಪುತ್ತೂರು:ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಮಾಧ್ಯಮ ಪ್ರಕೋಷ್ಟದ ಸಂಚಾಲಕರಾಗಿ ಒಳಮೊಗ್ರು ಗ್ರಾ.ಪಂ.ಸದಸ್ಯ ಮಹೇಶ್ ರೈ ಕೇರಿ ಹಾಗೂ

ಮಹಿಳೆಯರೇ ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಅಪ್ಡೇಟ್ : ಮಿಸ್‌ ಮಾಡ್ದೇ ಓದಿ!

Posted by Vidyamaana on 2024-03-08 12:49:54 |

Share: | | | | |


ಮಹಿಳೆಯರೇ ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಅಪ್ಡೇಟ್ : ಮಿಸ್‌ ಮಾಡ್ದೇ ಓದಿ!

ಬೆಂಗಳೂರು : ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಗೃಹಲಕ್ಷ್ಮಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್ ಸುದ್ದಿ ಮಿಸ್ ಏನಾಪ್ಪಾ ಅಂದ್ರೆ ಗೃಹ ಲಕ್ಷ್ಮಿ ಯೋಜನೆಯ ಹಣ ಯಾರ ಖಾತೆಗೆ ಜಮಾ ಆಗುತ್ತಿಲ್ಲವೋ ಅವರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂತವರಿಗೆ ಅಂಚೆ ಇಲಾಖೆಯಲ್ಲಿ ಖಾತೆ ತೆರೆಸಿ ಆ ಖಾತೆಗೆ ಹಣ ಜಮಾ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇನ್ನು ಗೃಹಿಣಿಯ ಸಮಸ್ಯೆಯ ಪರಿಹಾರಕ್ಕೆ ಅಧಿಕಾರಿಗಳನ್ನು ನೇಮಿಸಿರುವುದರ ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಗೃಹಿಣಿಯರ ಜೊತೆ ನಿಂತು ಅವರ ಸಮಸ್ಯೆ ನಿವಾರಿಸಿ ಹಣ ಜಮಾ ಮಾಡಿಕೊಡುವಂತೆ ಸರ್ಕಾರ ಸೂಚಿಸಿದೆ. ಆಯಾ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಇದ್ದವರ ಜೊತೆಗೆ ಹೋಗಿ ಸಮಸ್ಯೆ ಪರಿಹರಿಸಲಿದ್ದಾರೆ.

ಆದಷ್ಟು ಬೇಗ ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಲೋಪದೋಷಗಳು ನಿವಾರಣೆ ಆಗಲಿದೆ. ಫಲಾನುಭವಿಗಳ ಸಮಸ್ಯೆಯನ್ನು ಪರಿಹರಿಸಲು ಸದ್ಯ ಸರ್ಕಾರವೇ ಮುಂದೆ ಬಂದಿದೆ. ಫಲಾನುಭವಿಗಳ ಸಮಸ್ಯೆ ಪರಿಹಾರವಾದ ಎಲ್ಲ ಕಂತುಗಳ ಹಣವನ್ನು ಸರ್ಕಾರ ಒಂದೇ ಬಾರಿಗೆ ಜಮಾ ಮಾಡಲಿದೆ ಎನ್ನಲಾಗುತ್ತಿದೆ.

ಮೂಡುಬಿದಿರೆ: ವಿಶಾಲ್ ಟೂರಿಸ್ಟ್ ಬಸ್ ಪಲ್ಟಿ: ಹಲವು ಮಂದಿಗೆ ಗಾಯ

Posted by Vidyamaana on 2023-08-26 01:32:33 |

Share: | | | | |


ಮೂಡುಬಿದಿರೆ: ವಿಶಾಲ್ ಟೂರಿಸ್ಟ್ ಬಸ್ ಪಲ್ಟಿ: ಹಲವು ಮಂದಿಗೆ ಗಾಯ

ಮೂಡುಬಿದಿರೆ: ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ ಶುಕ್ರವಾರ ರಾತ್ರಿ ವಿಶಾಲ್ ಟೂರಿಸ್ಟ್ ಬಸ್ ಪಲ್ಟಿಯಾಗಿ ಹಲವು ಮಂದಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಸ್ಸು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ವಿಶಾಲ್ ಟೂರಿಸ್ಟ್ ಆಗಿದ್ದು, ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ ಗಾಂಧೀನಗರದ ನಡುವೆ

ಅಪಘಾತಕ್ಕೀಡಾಗಿದೆ. ಒಟ್ಟು 27 ಮಂದಿ

ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಊರವರು ಜಮಾಯಿಸಿದ್ದಾರೆ. ತಕ್ಷಣ ಅಂಬ್ಯುಲೆನ್ಸ್ ಸೇವೆಯ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ

Recent News


Leave a Comment: