ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಬೆಳ್ತಂಗಡಿ : ಡ್ರಾಯಿಂಗ್ ಶಿಕ್ಷಕ ರೂಪೇಶ್ ನ ಅಶ್ಲೀಲ ಮೆಸೇಜ್ ; ಮನನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

Posted by Vidyamaana on 2024-02-12 21:19:40 |

Share: | | | | |


ಬೆಳ್ತಂಗಡಿ : ಡ್ರಾಯಿಂಗ್ ಶಿಕ್ಷಕ ರೂಪೇಶ್ ನ ಅಶ್ಲೀಲ ಮೆಸೇಜ್ ; ಮನನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಬೆಳ್ತಂಗಡಿ, ಫೆ.12: ಡ್ರಾಯಿಂಗ್ ಶಿಕ್ಷಕನೊಬ್ಬ ತನ್ನ ಬಗ್ಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಸಾವಿಗೆ ಶರಣಾದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದ್ದು ಧರ್ಮಸ್ಥಳ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. 


ವಿಷ ಸೇವನೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ವಾರದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಫೆ.12ರಂದು ಮೃತಪಟ್ಟಿದ್ದಾಳೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ಧರ್ಮಸ್ಥಳದ ನಿವಾಸಿ 16 ವರ್ಷದ ಹುಡುಗಿ ಮೃತ ವಿದ್ಯಾರ್ಥಿನಿ. ಶಾಲೆಯ ಡ್ರಾಯಿಂಗ್ ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ಮೃತಪಟ್ಟ ವಿದ್ಯಾರ್ಥಿನಿಯ ಬಗ್ಗೆ ಬೇರೊಬ್ಬ ವಿದ್ಯಾರ್ಥಿನಿಗೆ ಅವಮಾನ ಆಗುವ ರೀತಿಯಲ್ಲಿ ಮೆಸೇಜ್ ಮಾಡಿದ್ದ. ಈ ಬಗ್ಗೆ ಆಕೆ ವಿಷಯವನ್ನು ವಿದ್ಯಾರ್ಥಿನಿಗೆ ತಿಳಿಸಿದ್ದಳು. ಇದರಿಂದ ನೊಂದ ವಿದ್ಯಾರ್ಥಿನಿ ಮನೆಯವರಿಗೆ ತಿಳಿಸಿದ್ದಳು. ಮರುದಿನ ತಾಯಿ ಜೊತೆ ಹೋಗಿ ವಿದ್ಯಾರ್ಥಿನಿ ವಿಚಾರಿಸಿದ್ದಾಳೆ. 


ಬಳಿಕ ಫೆ.7ರಂದು ವಿದ್ಯಾರ್ಥಿನಿ ಶಾಲೆಗೆ ಬರುವಾಗ ಬಿಸ್ಕೆಟ್ ಪ್ಯಾಕೆಟ್ ಜೊತೆ ಇಲಿ ಪಾಷಾಣ ಅಂಗಡಿಯಿಂದ ಖರೀದಿಸಿ ತಂದಿದ್ದಾಳೆ ಎನ್ನಲಾಗಿದೆ. ಶಾಲೆಯಲ್ಲಿ ಬಿಸ್ಕೆಟ್ ಜೊತೆ ಇಲಿ ಪಾಷಾಣ ಪೇಸ್ಟ್ ಮಿಕ್ಸ್ ಮಾಡಿ ಸೇವಿಸಿದ್ದು ಪ್ರಜ್ಞೆ ಕಳಕೊಂಡಿದ್ದಳು.‌ ತಕ್ಷಣ ಶಾಲೆಯ ಶಿಕ್ಷಕರು ಆಕೆಯನ್ನು ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ವಿದ್ಯಾರ್ಥಿನಿ ಲಿವರ್ ಮತ್ತು ಕಿಡ್ನಿ ನಿಷ್ಕ್ರಿಯವಾಗಿ ಫೆ.12 ರಂದು ಮುಂಜಾನೆ 5:30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾಳೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ವಿದ್ಯಾರ್ಥಿನಿ ತಾಯಿ ನೀಡಿದ ದೂರಿನ ಮೇರೆಗೆ IPC 354D, 509, POSO Act 12 , 75JJ Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶಿಕ್ಷಕ ರೂಪೇಶ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ದ.ಕ ಜಿಲ್ಲೆಯಲ್ಲಿ ಮಳೆ ಹಾನಿಯಿಂದ 54.36 ಕೋಟಿ ನಷ್ಟ: 638 ಮನೆಗಳಿಗೆ ಹಾನಿ; ಗುಂಡೂರಾವ್ ಮಾಹಿತಿ

Posted by Vidyamaana on 2024-08-03 04:49:52 |

Share: | | | | |


ದ.ಕ ಜಿಲ್ಲೆಯಲ್ಲಿ ಮಳೆ ಹಾನಿಯಿಂದ 54.36 ಕೋಟಿ ನಷ್ಟ: 638 ಮನೆಗಳಿಗೆ ಹಾನಿ; ಗುಂಡೂರಾವ್ ಮಾಹಿತಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 54.36 ಕೋಟಿ ನಷ್ಟವಾಗಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.


ಇನ್ನು 20 ಕೋಟಿ ರೂ. ವಿಕೋಪ ನಿರ್ವಹಣೆಗೆ ಹಣ ಇದೆ. ಅದ್ಯಪಾಡಿ, ಕೆತ್ತಿಕಲ್‌ಗೆ ಪರಿಹಾರ ಕಂಡು ಹಿಡಿಯಲು ತಜ್ಞರ ತಂಡದಿಂಲೂ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ. ಮಳೆ ಹಾನಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 54.36 ಕೋಟಿ ನಷ್ಟವಾಗಿದೆ ಎಂದರು.

ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಇದುವರೆಗೆ 11 ಮಂದಿ ಜೀವ ಕಳೆದುಕೊಂಡಿದ್ದಾರೆ. 154 ಮನೆಗಳು ಪೂರ್ತಿ ಹಾನಿ, 484 ಮನೆಗಳು ಭಾಗಶಃ ಹಾನಿಯಾಗಿದೆ ಎಂದಿದ್ದಾರೆ.

ಜನನ-ಮರಣ ನೋಂದಣಿಗೆ ಈಗ ಆಧಾರ್ ಕಾರ್ಡ್ ಕಡ್ಡಾಯವಲ್ಲ : ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

Posted by Vidyamaana on 2023-06-30 02:01:02 |

Share: | | | | |


ಜನನ-ಮರಣ ನೋಂದಣಿಗೆ ಈಗ ಆಧಾರ್ ಕಾರ್ಡ್ ಕಡ್ಡಾಯವಲ್ಲ : ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ನವದೆಹಲಿ : ದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಸಮಯದಲ್ಲಿ ಆಧಾರ್ ದೃಢೀಕರಣವನ್ನ ಕೈಗೊಳ್ಳಲು ರಿಜಿಸ್ಟ್ರಾರ್ ಜನರಲ್ (RGI) ಕಚೇರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದಾಗ್ಯೂ, ಅಂತಹ ನೋಂದಣಿಗೆ ಆಧಾರ್ ಕಡ್ಡಾಯವಲ್ಲ. ಜನನ ಮತ್ತು ಮರಣ ನೋಂದಣಿ ಸಮಯದಲ್ಲಿ ಒದಗಿಸಲಾದ ಗುರುತಿನ ವಿವರಗಳನ್ನ ದೃಢೀಕರಿಸಲು ಆಧಾರ್ ಡೇಟಾಬೇಸ್ನ್ನ ಬಳಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆರ್ಜಿಐ ಕಚೇರಿಗೆ ಅನುಮತಿ ನೀಡಿದೆ ಎಂದು ಜೂನ್ 27 ರಂದು ಪ್ರಕಟವಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಜನನ ಮತ್ತು ಮರಣ ನೋಂದಣಿ ಕಾಯ್ದೆ 1969 ಏನು.?

ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ರ ಅಡಿಯಲ್ಲಿ, ನೇಮಕಗೊಂಡ ರಿಜಿಸ್ಟ್ರಾರ್ಗೆ ಆಧಾರ್ ಸಂಖ್ಯೆಯ ಪರಿಶೀಲನೆಗಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ಹೌದು ಅಥವಾ ಇಲ್ಲ ಆಧಾರ್ ದೃಢೀಕರಣವನ್ನ ಕೈಗೊಳ್ಳಲು ಅವಕಾಶ ನೀಡಲಾಗುವುದು ಎಂದು ಅದು ಹೇಳುತ್ತದೆ.


ಜನನದ ಸಂದರ್ಭದಲ್ಲಿ ಮಗು, ಪೋಷಕರು ಮತ್ತು ಮಾಹಿತಿದಾರರ ಗುರುತನ್ನ ಸ್ಥಾಪಿಸುವ ಉದ್ದೇಶಕ್ಕಾಗಿ ಮತ್ತು ಜನನ ಮತ್ತು ಮರಣದ ನೋಂದಣಿಯ ಸಮಯದಲ್ಲಿ ಒದಗಿಸಲಾದ ಪ್ರಕರಣದಲ್ಲಿ, ಪೋಷಕರು, ಸಂಗಾತಿ ಹಾಗೂ ಮಾಹಿತಿದಾರರ ಗುರುತನ್ನ ಸ್ಥಾಪಿಸುವ ಉದ್ದೇಶಕ್ಕಾಗಿ ಪ್ರಕರಣ ಇರಬಹುದುಆಧಾರ್ ದೃಢೀಕರಣದ ಬಳಕೆಗೆ ಸಂಬಂಧಿಸಿದಂತೆ ಸಚಿವಾಲಯ ನಿಗದಿಪಡಿಸಿದ ಮಾರ್ಗಸೂಚಿಗಳನ್ನ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತಗಳು ಅನುಸರಿಸುತ್ತವೆ. ಉತ್ತಮ ಆಡಳಿತ, ಸಾರ್ವಜನಿಕ ಹಣದ ಹರಿವು ಮತ್ತು ಸುಗಮ ಜೀವನವನ್ನ ಉತ್ತೇಜಿಸಲು ಸಂಸ್ಥೆಗಳನ್ನ ವಿನಂತಿಸುವ ಮೂಲಕ ಕೇಂದ್ರ ಸರ್ಕಾರವು ಆಧಾರ್ ದೃಢೀಕರಣವನ್ನ ಅನುಮತಿಸಬಹುದು ಎಂದು ಸಚಿವಾಲಯವು 2020 ರಲ್ಲಿ ನಿಯಮಗಳನ್ನ ಅಧಿಸೂಚನೆ ಹೊರಡಿಸಿತು.

ಮಾಲ್​ನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಅಶ್ವಥ್ ನಾರಾಯಣ್ ಪೊಲೀಸ್ ವಶಕ್ಕೆ

Posted by Vidyamaana on 2023-11-01 13:18:22 |

Share: | | | | |


ಮಾಲ್​ನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಅಶ್ವಥ್ ನಾರಾಯಣ್ ಪೊಲೀಸ್ ವಶಕ್ಕೆ

ಬೆಂಗಳೂರು : ನಗರದ ಮಾಲ್​ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮಿ ವ್ಯಕ್ತಿಯ ಬಂಧನವಾಗಿದೆ. ಬಂಧಿತ ನಿವೃತ್ತ ಶಿಕ್ಷಕ ಎಂದು ತಿಳಿದು ಬಂದಿದೆ. ವ್ಯಕ್ತಿಯನ್ನು ಬಸವೇಶ್ವರ ನಗರದ ಅಶ್ವಥ್ ನಾರಾಯಣ್ ಎಂದು ಗುರುತಿಸಲಾಗಿದೆ. ಆರೋಪಿ ಅಶ್ವಥ್ ನಾರಾಯಣ್ ವಾಸವಿದ್ದ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದನು.ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪ್ರತಿಷ್ಠಿತ ಮಾಲ್​ ನಲ್ಲಿ ಲೈಂಗಿಕ ಕಿರುಕುಳ (Sexual harassment) ನೀಡಿರುವ ವಿಡಿಯೋ ವೈರಲ್ (Viral Video) ಆಗಿತ್ತು. ಯಶವಂತ್ ಎಂಬ ಯುವಕ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ರು. 


ಅಕ್ಟೋಬರ್ 29ರ ಭಾನುವಾರ ಸಂಜೆ ಸುಮಾರು 6.30ರ ವೇಳೆಗೆ ಬೆಂಗಳೂರಿನ ಲೂಲು ಮಾಲ್​ನಲ್ಲಿ ಈ ಘಟನೆ ನಡೆದಿತ್ತು.

ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಯ ಕೊಲೆಗೈದು ರೈಲಿಗೆ ತಲೆಕೊಟ್ಟ ಶರತ್

Posted by Vidyamaana on 2024-03-05 21:27:17 |

Share: | | | | |


ಪ್ರೀತಿ ನಿರಾಕರಿಸಿದ  ವಿದ್ಯಾರ್ಥಿನಿಯ ಕೊಲೆಗೈದು ರೈಲಿಗೆ ತಲೆಕೊಟ್ಟ ಶರತ್

ಹಾಸನ : ಪ್ರೀತಿ ನಿರಾಕರಿಸಿದ ಶಾಲಾ ಬಾಲಕಿಯನ್ನು ಕೊಂದು ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಕೊಲೆಯಾದ ಬಾಲಕಿಯಾಗಿದ್ದು, ಶರತ್‌ (23) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು  ಭೂಮಿಕಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಶರತ್ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ವಿದ್ಯಾರ್ಥಿನಿ ಭೂಮಿಕಾ ಶಾಲೆ ಮುಗಿಸಿ ಮನೆಗೆ ಹೋಗುವಾಗ ತೋಟದಲ್ಲಿ ಆಕೆಯನ್ನು ಅಡ್ಡಗಟ್ಟಿದ ಶರತ್‌ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.


ಕೊಲೆ ಮಾಡಿದ ಬಳಿಕ ಅರಸೀಕೆರೆ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಖಾಸಗಿ ಕಾಲೇಜು ಹಾಸ್ಟೆಲ್ ನಲ್ಲಿ ಫುಡ್ ಪಾಯ್ಸನ್ ವಿದ್ಯಾರ್ಥಿಗಳು ಅಸ್ವಸ್ಥ

Posted by Vidyamaana on 2024-02-08 12:28:27 |

Share: | | | | |


ಖಾಸಗಿ ಕಾಲೇಜು ಹಾಸ್ಟೆಲ್ ನಲ್ಲಿ ಫುಡ್ ಪಾಯ್ಸನ್ ವಿದ್ಯಾರ್ಥಿಗಳು ಅಸ್ವಸ್ಥ

ಮಂಗಳೂರು, ಫೆ.8: ಮಂಗಳೂರು ನಗರ ಹೊರವಲಯದ ವಳಚ್ಚಿಲ್  ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ಫುಡ್ ಪಾಯ್ಸನ್ ಆಗಿದ್ದು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 


ಕಾಲೇಜು ಹಾಸ್ಟೆಲ್ ನಲ್ಲಿ ಮಂಗಳವಾರ ರಾತ್ರಿ ಆಹಾರ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಬಳಿಕ ತುರ್ತಾಗಿ ತುಂಬೆ ಮತ್ತು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.‌ ರಾತ್ರಿ ಊಟ ಮಾಡಿದ ಬಳಿಕ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. 


ಹೊಟ್ಟೆ ನೋವಿನಿಂದ ನರಳಿದ ಕಾರಣ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ‌ಊಟದಲ್ಲಿ ಹುಳ ಬಿದ್ದು ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಕಾಲೇಜು ಹಾಸ್ಟೆಲ್ ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸ್ವಸ್ಥರಾದವರು ಕೇರಳದ ವಿದ್ಯಾರ್ಥಿಗಳಾಗಿದ್ದು ಬುಧವಾರ ಸಂಜೆ ಹೊತ್ತಿಗೆ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ತಿಳಿದುಬಂದಿದೆ. ‌

Recent News


Leave a Comment: