ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಸೌಜನ್ಯ ಪ್ರಕರಣ: ಮರುತನಿಖೆಗೆ ಇಳಂತಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮನವಿ

Posted by Vidyamaana on 2023-08-24 07:53:44 |

Share: | | | | |


ಸೌಜನ್ಯ ಪ್ರಕರಣ: ಮರುತನಿಖೆಗೆ ಇಳಂತಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮನವಿ

ಇಳಂತಿಲ: ಸೌಜನ್ಯ ಹತ್ಯೆಯ ಮರುತನಿಖೆಗೆ ಇಳಂತಿಲ ಒಕ್ಕಲಿಗ ಗ್ರಾಮ ಸಮಿತಿಯಿಂದ ಆ.24ರಂದು ಆಡಳಿತಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಒಕ್ಕಲಿಗ ಗ್ರಾಮ ಸಮಿತಿ ಇಳಂತಿಲ ಇದರ ಅಧ್ಯಕ್ಷ ಪುರಂಧರ ಗೌಡ ತುಂಬ, ಪ್ರಧಾನ ಕಾರ್ಯದರ್ಶಿ ವಿಜೇತ್ ಕುಮಾರ್ ನೇಜಿಕಾರ್ ಹಾಗೂ ಊರ ಪ್ರಮುಖರಾದ ಜಾರಪ್ಪ ಗೌಡ ದಂಡುಗ, ಕಡಿಗೇರಿ ಬಾಲಕ್ರಷ್ಣ ಗೌಡ, ಪೂವಪ್ಪ ಗೌಡ ಅರ್ಬಿ, ನಾರಾಯಣ ಗೌಡ ಕುಮೇರ್ಜಾಲ್, ತಿಮ್ಮಪ್ಪ ಗೌಡ ಬೊಬ್ಬೆ, ದಾಸಪ್ಪ ಗೌಡ ಕೋಡಿಯಡ್ಕ ಹಾಗೂ ಸಮಿತಿಯ ಪಧಾದಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.

ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

Posted by Vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು ಮೂಲದ ಮುಸ್ತಫಾ ಸಹಿತ ನಾಲ್ವರು ಬಂಧನ

Posted by Vidyamaana on 2024-08-22 22:11:57 |

Share: | | | | |


ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು ಮೂಲದ ಮುಸ್ತಫಾ ಸಹಿತ ನಾಲ್ವರು ಬಂಧನ

ಉಡುಪಿ: ಆನ್‌ಲೈನ್‌  ಟ್ರೇಡಿಂಗ್ ನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಪೊಲೀಸರು ಬಂಧಿಸಿ 13 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ.

ಉಪೇಂದ್ರ ಭಟ್ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಾಟ್ಸ್ಯಾಪ್‌ ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್‌ ಗೆ ಸೇರಿಸಿದ್ದು, ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ನ ಅಕೌಂಟ್ ನಂಬರ್‌ ನೀಡಿದ್ದಾರೆ. ವಾಟ್ಸ್ಯಾಪ್‌ ನಲ್ಲಿ ಟ್ರೇಡಿಂಗ್  ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಒಟ್ಟು 33,10,000 ಹಣ  ಡೆಪಾಸಿಟ್ ಮಾಡಿದ್ದಾರೆ. ಈ ಬಗ್ಗೆ ಉಪೇಂದ್ರ ಭಟ್ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರು ಕಂಬಳ ಈ ಎರಡು ದಿನ ಅರಮನೆ ಮೈದಾನ ರಸ್ತೆಯಲ್ಲಿ ಟ್ರಾಫಿಕ್ ಡೈವರ್ಟ್

Posted by Vidyamaana on 2023-11-24 09:47:55 |

Share: | | | | |


ಬೆಂಗಳೂರು ಕಂಬಳ  ಈ ಎರಡು ದಿನ ಅರಮನೆ ಮೈದಾನ ರಸ್ತೆಯಲ್ಲಿ ಟ್ರಾಫಿಕ್ ಡೈವರ್ಟ್

ಬೆಂಗಳೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ    ಅರಮನೆ ಮೈದಾನದಲ್ಲಿ ನ.25 ಮತ್ತು 26 ರಂದು ಬೆಂಗಳೂರು ಕಂಬಳ-ನಮ್ಮ ಕಂಬಳ ಕಾರ್ಯಕ್ರಮ ಆಯೋಜನೆಯಾಗಿದ್ದು, ಈ ಸಂಬಂಧ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಸೇರುವ ಸಾಧ್ಯತೆ ಇದೆ. ಹೀಗಾಗಿ ಅರಮನೆ ಮೈದಾನ ರಸ್ತೆಯಲ್ಲಿ ಕೆಲ ಸಂಚಾರ ಮಾರ್ಪಾಡು ಮತ್ತು ವಾಹನಗಳ ನಿಲುಗಡೆ ಸ್ಥಳ ನಿಯೋಜಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.



ನಗರದ ಸಿಬಿಡಿ ಪ್ರದೇಶ, ಬಳ್ಳಾರಿ ರಸ್ತೆ ಹೆಬ್ಟಾಳ, ಯಶವಂತಪುರ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್‌ ತಿರುವ ಪಡೆದು ಗೇಟ್‌ ನಂ-01ರ ಕೃಷ್ಣವಿಹಾರ್‌ರಲ್ಲಿ ಪ್ರವೇಶಿಸಿ, ವಾಹನ ಪಾರ್ಕ್‌ ಮಾಡಬೇಕು. ಕ್ಯಾಬ್‌ ಸೇವೆ ಬಳಸಿಕೊಳ್ಳುವವರು ಗೇಟ್‌ ನಂ.2 ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಇಳಿದು ಗೇಟ್‌ ನಂ.03 ಮೂಲಕ ಕ್ಯಾಬ್‌ಗಳು ನಿರ್ಗಮಿಸಬೇಕು. ವಾಪಸ್‌ ಹೋಗುವ ವಾಹನಗಳು ಕಡ್ಡಾಯವಾಗಿ ಜಯಮಹಲ್‌ ರಸ್ತೆಯ ಅಮಾನುಲ್ಲಾ ಖಾನ್‌ ಗೇಟ್‌ ಮೂಲಕ ತೆರಳಬೇಕು ಎಂದು ಸಂಚಾರ ಪೊಲೀಸರು ಹೇಳಿದರು.


ಪರ್ಯಾಯ ಮಾರ್ಗ: ಅರಮನೆ ರಸ್ತೆ, ಎಂ.ವಿ. ಜಯರಾಮ್‌ ರಸ್ತೆ, ಬಳ್ಳಾರಿ ರಸ್ತೆ, ಕನ್ನಿಂಗ್‌ ಹ್ಯಾಂ ರಸ್ತೆ, ಮಿಲ್ಲರ್‌ ರಸ್ತೆ, ಜಯಮಹಲ್‌ ರಸ್ತೆಗಳನ್ನು ಬಳಸದೆ ಬೇರೆ ಮಾರ್ಗದಲ್ಲಿ ಹೋಗಲು ಕೋರಲಾಗಿದೆ. ಹಾಗೆಯೇ ಪ್ಯಾಲೆಸ್‌ ರಸ್ತೆ, ಎಂ.ವಿ.ಜಯರಾಮ್‌ ರಸ್ತೆ. ಸಿ.ವಿ ರಾಮನ್‌ ರಸ್ತೆ, ವಸಂತನಗರ, ಜಯಮಹಲ್‌ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ಮೌಂಟ್‌ ಕಾರ್ಮೆಲ್‌ ಕಾಲೇಜು ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.


ಭಾರೀ ಸರಕು ಸಾಗಣೆ ವಾಹನಗಳ ಸಂಚಾರವನ್ನು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಡಿ ಕೆ ಶಿವಕುಮಾರ್

Posted by Vidyamaana on 2024-03-26 17:06:54 |

Share: | | | | |


ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಡಿ ಕೆ ಶಿವಕುಮಾರ್

ಬೆಳ್ತಂಗಡಿ : ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಸೀಟ್ ಹಂಚಿಕೆ ಕಾರ್ಯದಲ್ಲಿ ಪಕ್ಷದ ಮುಖಂಡರು ಬ್ಯುಸಿಯಾ ಗಿದ್ದರೇ, ಮತ್ತೊಂದೆಡೆ ಪ್ರಚಾರ ಆರಂಭಕ್ಕೆ ಮುನ್ನಾ ಟೆಂಪಲ್ ರನ್ ನಡೆಸುತ್ತಿದ್ದಾರೆ.ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಂದರ್ಭದಲ್ಲಿ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬಿಜೆಪಿ ಸದಸ್ಯತ್ವ ಪಡೆದ ದೇವದಾಸ್ ಕಾಪಿಕಾಡ್

Posted by Vidyamaana on 2024-09-04 22:02:50 |

Share: | | | | |


ಬಿಜೆಪಿ ಸದಸ್ಯತ್ವ ಪಡೆದ ದೇವದಾಸ್ ಕಾಪಿಕಾಡ್

ಮಂಗಳೂರು: ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ತುಳು ಕಲಾವಿದ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದರು.

ಮಂಗಳೂರಿನಲ್ಲಿ ದೇವದಾಸ್ ಕಾಪಿಕಾಡ್ ರವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ಸದಸ್ಯತ್ವ ಪಡೆದರು.

Recent News


Leave a Comment: