ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ರಶ್ಯನ್ ತೈಲ ಖರೀದಿಯಲ್ಲಿ ಹೆಚ್ಚುಳ

Posted by Vidyamaana on 2023-01-19 09:02:36 |

Share: | | | | |


ರಶ್ಯನ್ ತೈಲ ಖರೀದಿಯಲ್ಲಿ ಹೆಚ್ಚುಳ

   ಭಾರತ ಕಳೆದ ವರ್ಷಕ್ಕಿಂತ 33 ಪಟ್ಟು ಹೆಚ್ಚು ರಶ್ಯನ್ ತೈಲವನ್ನು ಖರೀದಿಸುತ್ತಿದೆ. ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿ ಭಾರತ ಕಳೆದ ಡಿಸೆಂಬರ್ನಲ್ಲಿ ರಶ್ಯದಿಂದ ದಿನಕ್ಕೆ ಸರಾಸರಿ 12 ಲಕ್ಷ ಬ್ಯಾರೆಲ್ಗಳನ್ನು ಖರೀದಿಸಿದೆ ಎನ್ನುತ್ತಿವೆ ವರದಿಗಳು. ಇದು ದಾಖಲೆ ಪ್ರಮಾಣದ ತೈಲ ಖರೀದಿಯಾಗಿದೆ. ಹಿಂದಿನ ವರ್ಷಕ್ಕಿಂತ ಭಾರೀ ದೊಡ್ಡ ಮೊತ್ತದ ಆಮದು ಇದಾಗಿದೆ. ಈ ಪ್ರಮಾಣ ನವೆಂಬರ್ನಲ್ಲಿ ಖರೀದಿಸಿದ್ದಕ್ಕಿಂತ ಶೇ.29ರಷ್ಟು ಜಾಸ್ತಿ.

ಹಲವು ತಿಂಗಳುಗಳ ಹಿಂದೆ ಇರಾಕ್ ಮತ್ತು ಸೌದಿ ಅರೇಬಿಯವನ್ನು ಹಿಂದಿಕ್ಕಿದ ನಂತರ ರಶ್ಯವು ಈಗ ಸುಲಭವಾಗಿ ಭಾರತದ ಅತಿದೊಡ್ಡ ತೈಲ ಮೂಲವಾಗಿದೆ. ಉಕ್ರೇನ್ ಆಕ್ರಮಣದಿಂದ ಅನೇಕ ಖರೀದಿದಾರರು ರಶ್ಯದಿಂದ ತೈಲ ಖರೀದಿಸುವುದಕ್ಕೆ ಹಿಂದೇಟು ಹಾಕಿರುವ ಹೊತ್ತಲ್ಲಿ ಭಾರತೀಯ ಸಂಸ್ಕರಣಾಗಾರಗಳು ಅಗ್ಗದ ರಶ್ಯದ ಕಚ್ಚಾ ತೈಲವನ್ನು ದೊಡ್ಡ ಮಟ್ಟದಲ್ಲಿ ಆಮದು ಮಾಡಿಕೊಳ್ಳುತ್ತಿವೆ. ರಶ್ಯ ತನ್ನ ಕಚ್ಚಾ ತೈಲವನ್ನು ಭಾರತೀಯ ಸಂಸ್ಕರಣಾಗಾರಗಳಿಗೆ ಆಕರ್ಷಕ ರಿಯಾಯಿತಿಯಲ್ಲಿ ನೀಡಿದೆ. ಇದರ ಪರಿಣಾಮವಾಗಿ ರಶ್ಯದ ಕಚ್ಚಾ ತೈಲದ ಅತಿದೊಡ್ಡ ಆಮದುದಾರ ದೇಶವಾಗಿ ಭಾರತ ಚೀನಾವನ್ನು ಮೀರಿಸಿದೆ.

ಭಾರತವು ತನ್ನ ತೈಲ ಬೇಡಿಕೆಯ ಶೇ. 85ಕ್ಕಿಂತ ಹೆಚ್ಚಿನ ಪ್ರಮಾಣದ ಆಮದು ಮಾಡಿಕೊಳ್ಳುತ್ತಿದೆ. ಮೇ ತಿಂಗಳಿನಿಂದ ಡೀಸೆಲ್ ಮತ್ತು ಗ್ಯಾಸೋಲಿನ್ನ ಪಂಪ್ ಬೆಲೆಗಳನ್ನು ಹೆಚ್ಚಿಸದಂತೆ ಸರಕಾರದಿಂದ ತಡೆಯಲ್ಪಟ್ಟ ಸರಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಅಗ್ಗದ ರಶ್ಯದ ಆಮದುಗಳಿಗೆ ಹೆಚ್ಚು ಒಲವು ತೋರಿವೆ.

ಭಾರತಕ್ಕೆ ತೈಲ ಪೂರೈಸುವ ಇತರ ಎರಡು ಪ್ರಮುಖ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಕೂಡ ಕಳೆದ ತಿಂಗಳು ಹೆಚ್ಚಾಗಿದೆ. ಇರಾಕ್ನಿಂದ ದಿನಕ್ಕೆ 8,86,000 ಬ್ಯಾರೆಲ್ಗಳು ಅಂದರೆ ಶೇ. 7ರಷ್ಟು ಏರಿಕೆಯಾಗಿದ್ದರೆ, ಸೌದಿ ಅರೇಬಿಯದಿಂದ ದಿನಕ್ಕೆ 7,48,000 ಬ್ಯಾರೆಲ್ಗಳು ಅಂದರೆ ಶೇ. 12ರಷ್ಟು ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ.

ಉಕ್ರೇನ್ ಮೇಲೆ ರಶ್ಯ ಯುದ್ಧ ಆರಂಭಿಸಿದಾಗಿನಿಂದ ರಶ್ಯ ಮತ್ತು ಭಾರತದ ಮಧ್ಯೆ ತೈಲ ವ್ಯವಹಾರ ಸಾಕಷ್ಟು ಹೆಚ್ಚಿದೆ. ಎಪ್ರಿಲ್ ತಿಂಗಳಿನಿಂದೀಚೆ ರಶ್ಯದಿಂದ ಭಾರತ ಆಮದು ಮಾಡಿಕೊಂಡ ಕಚ್ಚಾ ತೈಲದ ಪ್ರಮಾಣ ಐವತ್ತು ಪಟ್ಟು ಹೆಚ್ಚಾಗಿದೆ. ಉಕ್ರೇನ್ ಯುದ್ಧಕ್ಕೆ ಮುನ್ನ ರಶ್ಯದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣ ಶೇ. 0.2 ಮಾತ್ರ. ಈಗ ವಿದೇಶಗಳಿಂದ ಭಾರತ ಆಮದು ಮಾಡಿಕೊಳ್ಳುವ ತೈಲದಲ್ಲಿ ರಶ್ಯದ ಪಾಲು ಶೇ. 10ಕ್ಕೆ ಹೆಚ್ಚಿದೆ.

ಮೇ ತಿಂಗಳಲ್ಲಿ ಭಾರತೀಯ ಕಂಪೆನಿಗಳು ರಶ್ಯನ್ ತೈಲ ಕಂಪೆನಿಗಳಿಂದ 25 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಖರೀದಿ ಮಾಡಿದ್ದವು. ಇದರೊಂದಿಗೆ ಭಾರತಕ್ಕೆ ತೈಲ ಸರಬರಾಜು ಮಾಡುವ ದೇಶಗಳ ಪೈಕಿ ರಶ್ಯ ಸೌದಿ ಅರೇಬಿಯವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿತ್ತು. ಇರಾಕ್ ಭಾರತಕ್ಕೆ ಈಗಲೂ ಅತಿದೊಡ್ಡ ತೈಲ ಸರಬರಾಜುದಾರ ದೇಶವಾಗಿ ಮುಂದುವರಿದಿದೆ.

ಎಲ್ಲವೂ ಉಕ್ರೇನ್ ಯುದ್ಧದ ಪರಿಣಾಮ. ಉಕ್ರೇನ್ ಯುದ್ಧ ಶುರುವಾದಾಗಿನಿಂದ ರಶ್ಯ ಮೇಲೆ ವಿವಿಧ ರೀತಿಯ ಅಂತರ್ರಾಷ್ಟ್ರೀಯ ನಿಷೇಧಗಳನ್ನು ಹೇರಲಾಗಿದೆ. ತತ್ಪರಿಣಾಮವಾಗಿ ರಶ್ಯದಿಂದ ಅತಿ ಕಡಿಮೆ ಬೆಲೆಗೆ ತೈಲ ಬಿಕರಿಯಾಗುತ್ತಿದೆ. ಭಾರತ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳುತ್ತಿದ್ದು, ಭಾರತೀಯ ತೈಲ ಸಂಸ್ಕರಣ ಸಂಸ್ಥೆಗಳು ಕಡಿಮೆ ಬೆಲೆಗೆ ರಶ್ಯ ತೈಲವನ್ನು ಖರೀದಿ ಮಾಡುತ್ತಿವೆ. ಹೀಗಾಗಿಯೇ ಎಪ್ರಿಲ್ ನಂತರದ ಅವಧಿಯಲ್ಲಿ ರಶ್ಯದಿಂದ ಭಾರತ ಆಮದು ಮಾಡಿಕೊಳ್ಳುವ ತೈಲ ಪ್ರಮಾಣ ಹೆಚ್ಚುತ್ತಿರುವುದು.

ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಶ್ಯ ಮೇಲೆ ಅಮೆರಿಕ ಹಾಗೂ ಅನೇಕ ಯುರೋಪಿಯನ್ ದೇಶಗಳು ನಿರ್ಬಂಧಗಳನ್ನು ಹೇರಿವೆ. ರಶ್ಯ ಜೊತೆ ಯಾವುದೇ ವ್ಯವಹಾರ ಮಾಡದಂತೆ ಇತರ ಹಲವು ದೇಶಗಳಿಗೆ ತಾಕೀತು ಮಾಡುತ್ತಿವೆ. ಹೀಗಿದ್ದರೂ ಭಾರತ ರಶ್ಯ ಜೊತೆ ಮಿಲಿಟರಿ ಶಸ್ತ್ರಾಸ್ತ್ರ ಖರೀದಿ ಮುಂದುವರಿಸುತ್ತಿದೆ, ಈಗ ತೈಲ ಖರೀದಿ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ರಶ್ಯದೊಂದಿಗಿನ ತಾನು ಹೊಂದಿರುವ ವ್ಯವಹಾರವನ್ನು ಭಾರತ ಸಮರ್ಥಿಸಿಕೊಳ್ಳುತ್ತಿದೆ. ತನ್ನ ಹಿತಾಸಕ್ತಿಗೆ ತಕ್ಕಂತೆ ನಡೆ ಇಡುವುದಾಗಿ ಭಾರತ ಸ್ಪಷ್ಟಪಡಿಸಿದೆ.

ಈಗ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಮತ್ತು ಬಳಕೆ ಮಾಡುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುವುದು. ಭಾರತದಲ್ಲಿ ಬಳಕೆಯಾಗುವ ತೈಲದಲ್ಲಿ ಶೇ. 85ರಷ್ಟು ಪ್ರಮಾಣವು ಬೇರೆ ದೇಶಗಳಿಂದ ಆಮದಾಗಿರುವಂಥವೇ. ಇರಾಕ್ ಮತ್ತು ಸೌದಿ ಅರೇಬಿಯ ಸಾಂಪ್ರದಾಯಿಕವಾಗಿ ಭಾರತಕ್ಕೆ ಅತಿ ಹೆಚ್ಚು ತೈಲ ಸರಬರಾಜು ಮಾಡುತ್ತಿದ್ದ ದೇಶಗಳು. ಈಗ ರಶ್ಯ ಪ್ರವೇಶವಾಗಿದೆ.

ಉಕ್ರೇನ್ ಮತ್ತು ರಶ್ಯ ಯುದ್ಧದ ಪರಿಣಾಮ ಬೇರೆ ತೈಲ ಮಾರುಕಟ್ಟೆಗಳಲ್ಲಿ ಬೆಲೆ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಅಮೆರಿಕ ಮತ್ತಿತರ ದೇಶಗಳ ಒತ್ತಡದಿಂದಾಗಿ ರಶ್ಯದಿಂದ ತೈಲ ಖರೀದಿಸಲು ಹಲವು ದೇಶಗಳು ಹಿಂದೇಟು ಹಾಕಿವೆ. ಹೀಗಾಗಿ, ರಶ್ಯದ ಉರಲ್ನಲ್ಲಿರುವ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿರುವ ದೇಶಗಳು ಕಡಿಮೆಯೇ. ಹೀಗಾಗಿ, ರಶ್ಯದ ತೈಲ ಕಡಿಮೆ ಬೆಲೆಗೆ ಸಿಗುತ್ತಿದೆ. ಭಾರತದ ತೈಲ ಸಂಸ್ಕರಣ ಕಂಪೆನಿಗಳು ರಶ್ಯದಿಂದ ಒಂದು ಬ್ಯಾರಲ್ಗೆ 30 ಡಾಲರ್ ರಿಯಾ ಯಿತಿ ದರದಲ್ಲಿ ಕಚ್ಚಾ ತೈಲ ಖರೀದಿ ಮಾಡುತ್ತಿವೆ.

ರಶ್ಯ ತೈಲ ಖರೀದಿ ಸಮರ್ಥಿಸಿದ ಭಾರತ

ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು, ಪರಸ್ಪರರ ಹಿತಾಸಕ್ತಿ ಹಾಗೂ ದ್ವಿಪಕ್ಷೀಯ ಸಹಕಾರ ಬಲಪಡಿಸುವ ಸಂಬಂಧ ಭಾರತ ಮತ್ತು ರಷ್ಯಾ ಮಂಗಳವಾರ ಮಾಸ್ಕೊದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದವು.

ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಅವರು ಮಾತುಕತೆಯಲ್ಲಿ ಭಾಗಿಯಾಗಿದ್ದರು.

ಫೆಬ್ರುವರಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಘರ್ಷ ಶುರುವಾದ ನಂತರ ಉಭಯ ಸಚಿವರು ಈಗಾಗಲೇ ನಾಲ್ಕು ಬಾರಿ ಪರಸ್ಪರ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದ್ದರು.

ಭಾರತ ಮತ್ತು ರಷ್ಯಾ ನಡುವಿನ ಹಿತಾಸಕ್ತಿಗಳ ಬಗ್ಗೆ ಸಹಜ ಚರ್ಚೆ ನಡೆಸಿದ್ದೇವೆ. ಅಸ್ಥಿರತೆಯ ಈ ಕಾಲದಲ್ಲಿ, ನಾವು ನಿಜವಾಗಿಯೂ ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ನೆರವಾಗುವ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ತೈಲ ಮತ್ತು ಅನಿಲ ಖರೀದಿಯಲ್ಲಿ ಮೂರನೇ ಅತಿದೊಡ್ಡ ಗ್ರಾಹಕ ಎನಿಸಿರುವ ನಮ್ಮ ದೇಶದ ಆದಾಯವು ಹೆಚ್ಚಿಲ್ಲದ ಕಾರಣ, ನಾವು ಕೈಗೆಟಕುವ ದರದಲ್ಲಿ ಇಂಧನ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಜತೆಗಿನ ಸಂಬಂಧ ಭಾರತಕ್ಕೆ ಪ್ರಯೋಜನಕಾರಿಯಾಗಿದೆ. ರಷ್ಯಾ ಜತೆಗೆ ನಮ್ಮ ಬಾಂಧವ್ಯವನ್ನು ಮುಂದುವರಿಸುತ್ತೇವೆ’ ಎಂದು ಜೈಶಂಕರ್, ರಷ್ಯಾದಿಂದ ತೈಲ ಖರೀದಿ ಸಮರ್ಥಿಸಿಕೊಂಡರು.

ಇದು ಯುದ್ಧ ಕಾಲವಲ್ಲ’ವೆಂದು ಪುಟಿನ್ ಅವರಿಗೆ ಮೋದಿ ಹೇಳಿದ್ದ ಕಿವಿ ಮಾತನ್ನು ನೆನಪಿಸಿದ ಅವರು, ಉಕ್ರೇನ್ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಗಮನಿಸಿಯೇ ಉಭಯ ರಾಷ್ಟ್ರಗಳಿಗೂ ಮಾತುಕತೆಗೆ ಮರಳುವಂತೆ ಭಾರತ ಬಲವಾಗಿ ಒತ್ತಾಯಿಸುತ್ತಲೇ ಇದೆ’ ಎಂದು ಎಸ್. ಜೈಶಂಕರ್ ಹೇಳಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಭಾರತ ಈವರೆಗೆ ಖಂಡಿಸಿಲ್ಲ. ರಾಜತಾಂತ್ರಿಕತೆ ಮತ್ತು ಮಾತುಕತೆ ಮೂಲಕವೇ ಬಿಕ್ಕಟ್ಟು ಶಮನಕ್ಕೆ ಭಾರತ ಉಭಯತ್ರರನ್ನು ಒತ್ತಾಯಿಸುತ್ತಲೇ ಇದೆ.  


ಪುಟಿನ್ ಜತೆ ಮಾತುಕತೆಗೆ ಝೆಲೆನ್ಸ್ಕಿ ಒಲವು

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿದ್ದ ಉಕ್ರೇನ್ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಶಾಂತಿ ಮಾತುಕತೆ ಸಾಧ್ಯತೆಯತ್ತ ಸಾಗುವ ಸುಳಿವು ನೀಡಿದೆ. 

       ಅಮೆರಿಕದಲ್ಲಿ ನಡೆಯಲಿರುವ ಪ್ರಮುಖ ಚುನಾವಣೆಯ ಹಿನ್ನೆಲೆಯಲ್ಲಿ ಉಕ್ರೇನ್ ನಿಲುವು ಬದಲಿಸಿಕೊಂಡಿದ್ದು, ಪುಟಿನ್ ಜತೆಗೆ ಶಾಂತಿ ಮಾತುಕತೆ ನಡೆಸುವ ಸಾಧ್ಯತೆಯ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸುಳಿವು ನೀಡಿದ್ದಾರೆ.

       ಸೋಮವಾರ ತಡವಾಗಿ ವಿಶ್ವ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ ಅವರು ‘ರಷ್ಯಾವನ್ನು ನಿಜವಾದ ಶಾಂತಿ ಮಾತುಕತೆಗಳಿಗೆ ಮರಳುವಂತೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.

        ಉಕ್ರೇನ್ನ ಎಲ್ಲ ಆಕ್ರಮಿತ ಭೂಮಿಯನ್ನು ಹಿಂದಿರುಗಿಸಬೇಕು, ಯುದ್ಧದಿಂದ ಉಂಟಾದ ಹಾನಿ ಮತ್ತು ಯುದ್ಧ ಅಪರಾಧಗಳ ವಿಚಾರಣೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಝೆಲೆನ್ಸ್ಕಿ ಅವರು ಪುಟಿನ್ ಜತೆಗಿನ ಶಾಂತಿ ಮಾತುಕತೆಗೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ರಿಪಬ್ಲಿಕನ್ ಪಕ್ಷದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೆ ಬೈಡನ್ ಸರ್ಕಾರ ಉಕ್ರೇನ್ಗೆ ಮಿಲಿಟರಿ ಮತ್ತು ಆರ್ಥಿಕ ನೆರವಿನ ಪ್ಯಾಕೇಜ್ ಮುಂದುವರಿಸುವುದು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಝೆಲೆನ್ಸ್ಕಿ ಅವರು, ಪುಟಿನ್ ಜತೆಗೆ ಮಾತುಕತೆ ಅಸಾಧ್ಯವೆಂದಿದ್ದ ರಾಗವನ್ನು ಈಗ ಬದಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

      ರಷ್ಯಾದ ವಿದೇಶಾಂಗ ಉಪ ಸಚಿವ ಆಂಡ್ರೀ ರುದೆನ್ಕೊ ಅವರು, ಮಾತುಕತೆಗೆ ಪುನಾ ಮರಳಲು ರಷ್ಯಾ ಯಾವುದೇ ಷರತ್ತುಗಳನ್ನು ಮುಂದಿಟ್ಟಿಲ್ಲ. ಆದರೆ, ಮಾತುಕತೆ ನಡೆಸಲು ಉಕ್ರೇನ್ಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಆರೋಪಿಸಿದರು.

ಮೊಂಬತ್ತಿ ಮುಂದೆ ಬೈಕ್‌ಗೆ ಪೆಟ್ರೋಲ್ ಸುರಿಯುವಾಗ ಸ್ಫೋಟ: ಯುವತಿ ಸಾವು

Posted by Vidyamaana on 2023-12-11 07:41:15 |

Share: | | | | |


ಮೊಂಬತ್ತಿ ಮುಂದೆ ಬೈಕ್‌ಗೆ ಪೆಟ್ರೋಲ್ ಸುರಿಯುವಾಗ ಸ್ಫೋಟ: ಯುವತಿ ಸಾವು

ಕುಣಿಗಲ್: ಯಡೆಯೂರು ಹೋಬಳಿಯ ಕಟ್ಟಿಗೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮೊಂಬತ್ತಿ ಬೆಳಕಿನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕುವಾಗ ಪೆಟ್ರೊಲ್‌ ಬಾಟಲ್‌ ಕೈತಪ್ಪಿ ಸ್ಫೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸೌಂದರ್ಯ (16) ಭಾನುವಾರ ಮೃತಪಟ್ಟಿದ್ದಾರೆ. ಗ್ರಾಮದ ಲಕ್ಷ್ಮಣರವರ ಮಗಳು ಸೌಂದರ್ಯ ಪಟ್ಟಣದ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿ ಓದುತ್ತಿದ್ದರು.ಶುಕ್ರವಾರ ರಾತ್ರಿ ಮನೆಯ ಅಂಗಡಿಯಲ್ಲಿ ವಿದ್ಯುತ್ ಇಲ್ಲದಾಗ ಮೊಂಬತ್ತಿ ಹಚ್ಚಿ ಇಡಲಾಗಿತ್ತು. ಎದುರಿನಲ್ಲಿಯೇ ಬೈಕ್‌ಗೆ ಪೆಟ್ರೋಲ್ ಹಾಕುವಾಗ ತಕ್ಷಣ ವಿದ್ಯುತ್ ಬಂದಾಗ ಗಾಬರಿಗೊಂಡ ಸೌಂದರ್ಯ ಪೆಟ್ರೋಲ್ ಬಾಟಲಿ ಕೈ ಬಿಟ್ಟ ಕಾರಣ ಪೆಟ್ರೋಲ್ ಚೆಲ್ಲಿ ಮೇಣದಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡು ಅಂಗಡಿ ಸಾಮಗ್ರಿ ಆಹುತಿಯಾಗಿತ್ತು. ಗಾಯಗೊಂಡಿದ್ದ ಸಾಂದರ್ಯ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಬಕ: ಬಸ್ - ಬೈಕ್ ನಡುವೆ ಅಪಘಾತ -ಬೈಕ್ ಸವಾರ ಕೈಕಂಬ ನಿವಾಸಿ ಆಶಿಕ್ ಮೃತ್ಯು

Posted by Vidyamaana on 2023-12-16 21:08:11 |

Share: | | | | |


ಕಬಕ: ಬಸ್ - ಬೈಕ್ ನಡುವೆ ಅಪಘಾತ -ಬೈಕ್ ಸವಾರ ಕೈಕಂಬ ನಿವಾಸಿ ಆಶಿಕ್ ಮೃತ್ಯು

ಪುತ್ತೂರು ಡಿ.16. ಬಸ್‌ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯದ ಕಬಕ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.ಮೃತ ಯುವಕನನ್ನು ಬಿ.ಸಿ.ರೋಡ್ ಕೈಕಂಬ ನಿವಾಸಿ ಆಶಿಕ್ ಎಂದು ಗುರುತಿಸಲಾಗಿದೆ. ಕಬಕ ಕೂವೆಹಿತ್ತಿಲು ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್‌ ಹಾಗೂ ಸ್ಕೂಟರ್ ನಡುವೆ ಅಪಘಾತ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

ಖರ್ಗೆ ಭೇಟಿಯಾದ ಪುತ್ತೂರು ಶಾಸಕ ಅಶೋಕ್ ರೈ

Posted by Vidyamaana on 2023-05-19 15:46:03 |

Share: | | | | |


ಖರ್ಗೆ ಭೇಟಿಯಾದ ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿಯಲ್ಲಿ ಭೇಟಿಯಾದ ಪುತ್ತೂರು ಶಾಸಕ ಅಶೋಕ್ ರೈಯವರು ಖರ್ಗೆ ಜೊತೆ ಮಾತುಕತೆ ನಡೆಸಿದರು. ಪುತ್ತೂರು ಶಾಸಕರಾದ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ ಅವರು ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾದರು.

ಭಾರೀ ಮಳೆ ಹಿನ್ನಲೆ : ನಾಳೆ (ಜೂ. 27) ದ.ಕ. ಜಿಲ್ಲಾದ್ಯಂತ ಶಾಲೆಗಳಿಗೆ ರಜೆ

Posted by Vidyamaana on 2024-06-26 19:19:30 |

Share: | | | | |


ಭಾರೀ ಮಳೆ ಹಿನ್ನಲೆ : ನಾಳೆ (ಜೂ. 27) ದ.ಕ. ಜಿಲ್ಲಾದ್ಯಂತ ಶಾಲೆಗಳಿಗೆ ರಜೆ

ಮಂಗಳೂರು: ಜೂನ್ 27ರಂದು ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆಯಾದ ಹಿನ್ನೆಲೆಯಲ್ಲಿ ನಾಳೆ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇದರ ಪ್ರಕಟನೆ ಹೀಗಿದೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ: 27-06-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ.

ಕೇರಳದಲ್ಲಿ ಚಿಕನ್ ಶವರ್ಮಾ ತಿಂದ ರಾಹುಲ್ ಮೃತ್ಯು : ಹೊಟೇಲ್‌ಗೆ ಬೀಗ

Posted by Vidyamaana on 2023-10-26 22:22:40 |

Share: | | | | |


ಕೇರಳದಲ್ಲಿ ಚಿಕನ್ ಶವರ್ಮಾ ತಿಂದ ರಾಹುಲ್ ಮೃತ್ಯು : ಹೊಟೇಲ್‌ಗೆ ಬೀಗ

ಕೊಚ್ಚಿ: ನಗರದ ಹೊಟೇಲೊಂದರಿಂದ ಆನ್​ಲೈನ್​ ಮೂಲಕ ಚಿಕನ್ ಶವರ್ಮಾ ತರಿಸಿ ತಿಂದ ಯುವಕ ತೀವ್ರ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.


ಕೊಟ್ಟಾಯಂ ಮೂಲದ ರಾಹುಲ್​ ನಾಯರ್ (24) ಮೃತ ಯುವಕ.  ಕೊಟ್ಟಾಯಂ ಮೂಲದ ರಾಹುಲ್​ ಆನ್​ಲೈನ್ ಮೂಲಕ ‘ಲೇ ಹಯಾತ್’ ಎಂಬ ​ ರೆಸ್ಟೋರೆಂಟ್​ನಿಂದ ಚಿಕನ್ ಶವರ್ಮಾವನ್ನು ತರಿಸಿಕೊಂಡಿದ್ದಾನೆ. ಅದನ್ನು ತಿಂದ ಬಳಿಕ ಇದ್ದಕ್ಕಿದ್ದ ಹಾಗೆ ತೀವ್ರ ಅನಾರೋಗ್ಯಕ್ಕೀಡಾಗಿ ಕಾಕ್ಕನಾಡುನಲ್ಲಿನ ಸನ್​ರೈಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಬಳಿಕ ಕೊಂಚ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದು, ಬಳಿಕ  ಹೊಟ್ಟೆಯಲ್ಲಿ ನೋವು ಕಾಣಿಸಿದ್ದರಿಂದ ಅಕ್ಟೋಬರ್ 22 ರಂದು ಆಸ್ಪತ್ರೆಗೆ ಮತ್ತೆ ದಾಖಲು ಆಗಿದ್ದನು ಎನ್ನಲಾಗಿದೆ.


ಎರಡನೇ ಸಲ ಆಸ್ಪತ್ರೆ ಸೇರಿದ ಯುವಕನ ಸ್ಥಿತಿ ಗಂಭೀರವಾಗುತ್ತಾ ಹೋಗಿದ್ದು, ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ರಿಲೀಸ್ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ಯುವಕನ ಕಿಡ್ನಿ ಹಾಗೂ ಲೀವರ್ ಹಾನಿಯಾಗಿದ್ದು ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.  ಕಿಡ್ನಿ ಮತ್ತು ಲಿವರ್ ಹಾಳಾಗಲು ಕಾರಣ ದೇಹದಲ್ಲಿ ವಿಷ ಸೇರಿರುವುದು ಪಕ್ಕಾ. ಇದು ಆತ ತಿಂದ ಚಿಕನ್ ಶವರ್ಮಾ ಪದಾರ್ಥದಿಂದ ಆಗಿದಿಯೋ ಅಥವಾ ಬೇರೆ ಆಹಾರದಿಂದ ಆಗಿದಿಯೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ವೈದ್ಯರು  ಹೇಳಿದ್ದಾರೆ.


ಮೃತ ಯುವಕನ ಸಂಬಂಧಿಕರು ರೆಸ್ಟೋರೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಸರ್ಕಾರದ ಆದೇಶದಂತೆ ಅದನ್ನು ಮುಚ್ಚಲಾಗಿದೆ. ರೆಸ್ಟೋರೆಂಟ್ ಮಾಲಕರ ವಿರುದ್ಧ ತೃಕ್ಕಾಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಸಿ ಮೊಟ್ಟೆ, ಬೇಯಿಸದ ಎಣ್ಣೆ, ಬೆಳ್ಳುಳ್ಳಿ ಸೇರಿಸಿ ಮಾಡುವ ಮಸಾಲೆಯೊಂದು ಶವರ್ಮಾ ಜೊತೆ ಹೇರಳವಾಗಿ ಬೆರೆಸಲಾಗುತ್ತಿದ್ದು, ಆ ಬಿಳಿಯಾದ ಪದಾರ್ಥ ಸ್ವಲ್ಚ ಹಳೆಯದಾದರೂ ವಿಷವಾಗಿ ಮಾರ್ಪಾಡಾಗುತ್ತೆ ಎಂದು ಹೇಳಲಾಗುತ್ತಿದೆ. ಇಂತಹ ಪದಾರ್ಥ ತಿಂದು ಸಾವನ್ನಪ್ಪಿದ ಇತರ ಘಟನೆಗಳೂ ಇವೆ. ತಿಂಡಿಪ್ರಿಯರು ಎಚ್ಚರವಾಗಬೇಕಾಗಿದೆ ಎಂದು ನಾಗರಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

Recent News


Leave a Comment: