ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೇಮಾವತಿ ನದಿಯಲ್ಲಿ ಆಟವಾಡುತ್ತಿದ್ದ ಯುವತಿ ನೀರಿನಲ್ಲಿ ಮುಳುಗಿ ಸಾವು!

Posted by Vidyamaana on 2023-12-25 12:55:35 |

Share: | | | | |


ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೇಮಾವತಿ ನದಿಯಲ್ಲಿ ಆಟವಾಡುತ್ತಿದ್ದ ಯುವತಿ ನೀರಿನಲ್ಲಿ ಮುಳುಗಿ ಸಾವು!

ಹೇಮಾವತಿ ನದಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ (Drowned in water) ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ಹಾಸನ: ಹೇಮಾವತಿ ನದಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ (Drowned in water) ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ನಿತ್ಯಾ (19) ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವತಿ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಗೊರೂರು ಅರಳಿಕಟ್ಟೆ ನಿವಾಸಿ ಗಿರೀಶ್ ಎಂಬುವವರ ಪುತ್ರಿ ನಿತ್ಯಾ, ಹನುಮ ಜಯಂತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿದ್ದರು. ತಮ್ಮ ಸಂಬಂಧಿಕರೊಂದಿಗೆ ಅರಳಿಕಟ್ಟೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು.ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದಾಗ ನಿತ್ಯಾ ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಭೇಟಿ ನೀಡಿದ್ದು,ನಿತ್ಯಾ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ MLA ಇನಿ ಒಂಚಿ ಉಲ್ಲೆರಿಗೆ.

Posted by Vidyamaana on 2023-08-14 02:58:39 |

Share: | | | | |


ನಮ್ಮ MLA ಇನಿ ಒಂಚಿ ಉಲ್ಲೆರಿಗೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 14 ರಂದು


ಬೆಳಗ್ಗೆ  10:00 ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ  12 ನೇ ವರ್ಷದ ಸ್ಥಾಪಕರ ದಿನಾಚರಣೆ 



ಬೆಳಗ್ಗೆ  11:00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್  ನಿ. ಬ್ಯಾಂಕಿನ  ಪುತ್ತೂರು ಶಾಖಾ ಕಟ್ಟಡದಲ್ಲಿ  ಹೊಸ ಎಟಿಎಂ ಉದ್ಘಾಟನೆ 


ಮದ್ಯಾಹ್ನ  3:00 ಗಂಟೆಗೆ ಲಯನ್ಸ್ ಕ್ಲಬ್ ತಾಲೂಕ್ ಒಕ್ಕೂಟ ಸಂಘ ಸಂಸ್ಥೆಯಿಂದ  ಆಟಿದ ಕೂಟ  ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ

ಊರಿಗೆ ಹೊರಟಿದ್ದ ಮಹಿಳೆಯನ್ನ ಮನೆಗೆ ಕರೆದೊಯ್ದು ಕೊಲೆ; ಚಿನ್ನಾಭರಣ ಕಿತ್ಕೊಂಡು ಶವ ಸಂಪ್​​ಗೆ ಎಸೆದು ದಂಪತಿ ಎಸ್ಕೇಪ್

Posted by Vidyamaana on 2024-02-16 11:39:55 |

Share: | | | | |


ಊರಿಗೆ ಹೊರಟಿದ್ದ ಮಹಿಳೆಯನ್ನ ಮನೆಗೆ ಕರೆದೊಯ್ದು ಕೊಲೆ; ಚಿನ್ನಾಭರಣ ಕಿತ್ಕೊಂಡು ಶವ ಸಂಪ್​​ಗೆ ಎಸೆದು ದಂಪತಿ ಎಸ್ಕೇಪ್

ಬೆಂಗಳೂರು, ಫೆ.15: ಊರಿಗೆ ಹೊರಟಿದ್ದ ಮಹಿಳೆಯನ್ನ ಮನೆಗೆ ಕರೆದೊಯ್ದು ಕೊಲೆ ಮಾಡಿದ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಗ್ರಾಮ ಲಕ್ಷ್ಮಿಪುರ ಗ್ರಾಮದ ನಿವಾಸಿ ಮಂಜುಳ ಮೃತ ರ್ದುದೈವಿ. ಇವರು ಟಿ.ದಾಸರಹಳ್ಳಿ(T.Dasarahalli) ಬಳಿ ಮೆಟ್ರೋ ಪಿಲ್ಲರ್ ಕೆಳಗೆ ವೀಳ್ಯದೆಲೆ ವ್ಯಾಪಾರ ಮಾಡುತ್ತಿದ್ದರು. ಊರ ಹಬ್ಬದ ಹಿನ್ನಲೆ ಫೆಬ್ರವರಿ 11ರಂದು ಮಗಳ ಮನೆಗೆ ಹೊರಟ್ಟಿದ್ದರು. ಹೀಗೆ ಹೊರಟಿದ್ದ ಮಂಜುಳಾರನ್ನ ಬಸ್ ನಿಲ್ದಾಣದವೆರಗೂ ಡ್ರಾಪ್ ಮಾಡುತ್ತೇನೆ ಎಂದು ಆರೋಪಿ ಜೀವನ್​ ಎಂಬಾತ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಪರಿಚಯಸ್ಥ ಆದ್ದರಿಂದ ಮಂಜುಳ ಅವರು ಜೀವನ್ ಗಾಡಿ ಹತ್ತಿದ್ದಾರೆ. ಬಳಿಕ ಮಂಜುಳಾ ಮೈ ಮೇಲಿನ ಚಿನ್ನಾಭರಣದ ಆಸೆಗಾಗಿ ತನ್ನ ಪತ್ನಿ ಆಶಾ ಜೊತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಬೇರೆಡೆಗೆ ಸಾಗಿಸಲಾಗದೆ ಚೀಲದಲ್ಲಿ ತುಂಬಿ ಸಂಪ್​ನಲ್ಲಿ ಹಾಕಿ ಇಬ್ಬರು ಎಸ್ಕೇಪ್ ಆಗಿದ್ದಾರೆ.ಯಾವಾಗ ಮಂಜುಳ ಮಗಳ ಮನೆಗೆ ಬರಲಿಲ್ಲವೋ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಮರುದಿನ ಅಂದರೆ ಫೆ.12ನೇ ತಾರೀಖಿನಂದು ಮಂಜುಳಾರ ಪುತ್ರ ಸಂದೀಪ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲು ಮಾಡಿದ್ದ.


ಇನ್ನು ಜೀವನ್ ಹಾಗೂ ಆಶಾ ವಾಸವಿದ್ದ ಕಟ್ಟಡದ ನೀರಿನಲ್ಲಿ 13ನೇ ತಾರೀಖಿನಂದು ದುರ್ವಾಸನೆ ಯುಕ್ತ ನೀರು ಬರಲು ಶುರುವಾಗಿತ್ತು. ಈ ವೇಳೆ ಮನೆ ಮಾಲೀಕರಾದ ದೇವರಾಜ್ ಹಾಗೂ ಭಾಗ್ಯಮ್ಮ ಸಂಪ್ ಕ್ಲೀನ್ ಮಾಡಿಸಲು ಮುಂದಾಗಿದ್ರು. ಆಗ ಸಂಪ್​ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಈ ವೇಳೆ ಎರಡನೇ ಮಹಡಿಯಲ್ಲಿ ವಾಸವಿದ್ದ ಆಶಾ ಹಾಗೂ ಜೀವನ್ ದಂಪತಿ ನಾಪತ್ತೆಯಾಗಿದ್ದರು. ಫೋನ್ ಮಾಡಿದ್ರೆ ಊರಲ್ಲಿ ಇರೋದಾಗಿ ಕಥೆ ಕಟ್ಟಿದ್ದರು. ಬಳಿಕ ಪೊಲೀಸರು ಮನೆ ಬಳಿ ಬನ್ನಿ ಸಣ್ಣ ವಿಚಾರಣೆ ಇದೆ ಎಂದಿದ್ದಾರೆ. ನಂತರ ಇಬ್ಬರೂ ಕೂಡ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪರಿಚಯಸ್ಥ ಎಂದು ನಂಬಿ ಆತನ ಜೊತೆ ಹೋದ ತಪ್ಪಿಗೆ ಮಹಿಳೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳಿಗಾಗಿ ತಲಾಶ್ ನಡೆಸಿದ್ದಾರೆ.

BMTC ಯಲ್ಲಿ 17 ಕೋಟಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಶ್ರೀರಾಮ್ ಮುಲ್ಕವನ ಬಂಧನ

Posted by Vidyamaana on 2023-10-04 19:35:09 |

Share: | | | | |


BMTC ಯಲ್ಲಿ 17 ಕೋಟಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಶ್ರೀರಾಮ್ ಮುಲ್ಕವನ ಬಂಧನ

ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆಯ(BMTC) ಮಾಜಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಒಬ್ಬರನ್ನು ಹಿರಿಯ ಅಧಿಕಾರಿಗಳ ನಕಲಿ ಸಹಿ ಮತ್ತು ಕಳೆದ ಮೂರು ವರ್ಷಗಳಲ್ಲಿ ಅನರ್ಹ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಬಿಎಂಟಿಸಿಗೆ 17 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟುಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.


💥 *ವಿದ್ಯಮಾನ Youtube Channel* *Subscribe ಆಗಿಲ್ವಾ..?*

ಬಂಧಿತ ಆರೋಪಿ ಶ್ರೀರಾಮ್ ಮುಲ್ಕವನ ಎನ್ನುವವರಾಗಿದ್ದು, ಆಪಾದಿತ ವಂಚನೆಗೆ ಸಂಬಂಧಿಸಿದಂತೆ ಬಿಎಂಟಿಸಿ ನಡೆಸಿದ ಆಂತರಿಕ ತನಿಖೆಯ ಸಮಯದಲ್ಲಿ ಹೆಸರು ಹೊರಬಂದ ನಂತರ ಬಿಎಂಟಿಸಿಯ ವಾಣಿಜ್ಯ ವಿಭಾಗದಲ್ಲಿ ಕೆಲಸ ಮಾಡಿದ ಶ್ರೀರಾಮ್ ಸೇರಿ ಇತರ ಆರು ಸಹೋದ್ಯೋಗಿಗಳನ್ನು ಅಮಾನತುಗೊಳಿಸಲಾಗಿತ್ತು.


ಅಸಿಸ್ಟೆಂಟ್ ಸೆಕ್ಯುರಿಟಿ ಮತ್ತು ವಿಜಿಲೆನ್ಸ್ ಅಧಿಕಾರಿ ರಮ್ಯಾ ಸಿ.ಕೆ. ಗಂಭೀರ ವಂಚನೆಯನ್ನು ಪತ್ತೆ ಹಚ್ಚಿದ ನಂತರ ಅಕ್ಟೋಬರ್ 2 ರಂದು ಅಮಾನತುಗೊಂಡ ಏಳು ಬಿಎಂಟಿಸಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ದೂರುದಾರರ ಪ್ರಕಾರ, ಆಪಾದಿತ ವಂಚನೆಯಿಂದಾಗಿ ನಿಗಮವು ಒಟ್ಟು 17 ಕೋಟಿ ರೂ.ಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಎಫ್‌ಐಆರ್‌ನಲ್ಲಿ ಮಾರ್ಚ್ 2020 ರಿಂದ ಸೆಪ್ಟೆಂಬರ್ 2023 ರ ನಡುವೆ ವಂಚನೆ ನಡೆದಿದೆ ಎಂದು ಹೇಳಲಾಗಿದೆ, ಇದರಿಂದಾಗಿ ನಿಗಮವು ಎರಡು ವಿಭಿನ್ನ ಪ್ರಕರಣಗಳಲ್ಲಿ 10.5 ಕೋಟಿ ರೂ. ಮತ್ತು 6.91 ಕೋಟಿ ರೂ. ನಷ್ಟವನ್ನು ಅನುಭವಿಸಿದೆ.

ಆಸ್ಟ್ರೇಲಿಯಾದಲ್ಲಿ ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್

Posted by Vidyamaana on 2024-06-22 15:30:46 |

Share: | | | | |


ಆಸ್ಟ್ರೇಲಿಯಾದಲ್ಲಿ ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್

ಪುತ್ತೂರು: ಆಸ್ಟ್ರೇಲಿಯಾದ ಕ್ಲೀನ್ ಬ್ಯಾಂಡ್ ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ಪುತ್ತೂರು  ಅಥ್ಲೆಟಿಕ್ ಕ್ಲಬ್‌ ಈಜುಪಟುಗಳಾದ ಸ್ವೀಕೃತ್ ಆನಂದ್, ಅನ್ವಿತ್ ರೈ ಬಾರಿಕೆ, ದಿಗಂತ್ ವಿ.ಎಸ್. ಹಾಗೂ ಧನ್ವಿತ್‌ ರವರು ಭಾರತ ದೇಶದ ತಂಡವನ್ನು ಪ್ರತಿನಿಧಿಸಲಿದ್ದಾರೆ.

ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ(ಆ‌ಲ್ 19ರ ತನಕ ನಡೆದ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಇವರು ಭಾಗವಹಿಸಿ ಭಾರತದ ತಂಡಕ್ಕೆ ಆಯ್ಕೆಯಾಗಿದ್ದಾರೆ. 

ಪುತ್ತೂರಿನ ಈಜು ಪಟುಗಳಾದ - ಸ್ವೀಕೃತ್ ಆನಂದ್ ಬೊಳುವಾರಿನ ಆಸ್ಟರ್‌ ಆನಂದ್ ಮತ್ತು ಸೆನೋರಿಟಾ ಆನಂದ್ ದಂಪತಿ ಪುತ್ರ ಅನ್ವಿತ್ ರೈ ಬಾರಿಕೆಯವರು ದರ್ಬೆ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಪರ್ಪುಣ ಬಾರಿಕೆ ಅನಿಲ್ ಕುಮಾರ್ ರೈ ಮತ್ತು ದಿವ್ಯಾ ಅನಿಲ್ ರೈ ದಂಪತಿ ಪುತ್ರ ದಿಗಂತ್ ವಿ.ಎಸ್‌ರವರು ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಎಸ್ ಸಿಡಿಸಿಸಿ ಬ್ಯಾಂಕ್ ಕುಂಬ್ರ ಶಾಖಾ ವ್ಯವಸ್ಥಾಪಕ ಕೂರ್ನಡ್ಕದ ವಿಶ್ವನಾಥ ಎಸ್ ಮತ್ತು ಪುತ್ತೂರು ಕ್ಯಾಂಪ್ರೋ ಚಾಕಲೇಟ್ ಫ್ಯಾಕ್ಟರಿಯ ಹಿರಿಯ ವ್ಯವಸ್ಥಾಪಕಿ

ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ಮೃತರ ಮನೆಗೆ ಎಸ್‌ಡಿಪಿಐ ಮುಖಂಡರ ಭೇಟಿ

Posted by Vidyamaana on 2024-03-24 22:11:54 |

Share: | | | | |


ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ಮೃತರ ಮನೆಗೆ ಎಸ್‌ಡಿಪಿಐ ಮುಖಂಡರ ಭೇಟಿ

ಬೆಳ್ತಂಗಡಿ (ಮಾ-24): ತುಮಕೂರುನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತ ಪಟ್ಟ ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಸಾಹುಲ್ ಹಮೀದ್, ಮದ್ದಡ್ಕ ನಿವಾಸಿ ಇಸಾಕ್, ಶಿರ್ಲಾಲ್ ನಿವಾಸಿ ಇಮ್ತಿಯಾಝ್ ಅವರ ಮನೆಗೆ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು.


   ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಯಾಝ್ ಫರಂಗಿಪೇಟೆ ಈ ಪ್ರಕರಣದಲ್ಲಿ ಯಾವುದೇ ಕಾರಣವಿಲ್ಲದೆ ಸಾಮೂಹಿಕ ಹತ್ಯೆ ಮಾಡುವ ಮೂಲಕ ದರೋಡೆ ಮತ್ತು ಡಕಾಯಿತಿ ನಡೆಸುವುದು ಅಪರಾಧಿಗಳ ಏಕೈಕ ಉದ್ದೇಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇಂತಹ ಕ್ರೂರ ಕ್ರತ್ಯ ನಡೆಯುವಾಗ ದ.ಕ ಜಿಲ್ಲೆಯ ರಾಜಕಾರಣಿಗಳು ಹಾಗು ಪ್ರಮುಖ ರಾಜಕೀಯ ಪಕ್ಷಗಳ ನೇತಾರರು  ಘಟನಾ ಸ್ಥಳಕ್ಕೆ ಬೇಟಿಯಾಗದೆ ,ಕಣ್ಣಿದ್ದು ಕುರುಡರ ವರ್ತನೆ ನಟಿಸಿ ಮೌನ  ಪಾಲಿಸಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆ  ನಡೆಯುವಾಗ ಮಾನ್ಯ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಹಾಗು ಇತರ ಅಧಿಕಾರಿಗಳು ಯಾವುದೇ ಖಂಡನೆ  ಅಥವಾ ಸೂಕ್ತವಾದ ತನಿಖೆ ನಡೆಸುವ ಭರವಸೆಯನ್ನು ನೀಡದೆ ಇರುವುದು ಅತ್ಯಂತ ಬೇಸರದ ಸಂಗತಿ ಎಂದು ತಿಳಿಸಿದರು.


   ಈ ಸಂದರ್ಭದಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸದಾತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಜಿಲ್ಲಾ ಕಾರ್ಯದರ್ಶಿಗಾಳದ ಅಕ್ಬರ್ ಬೆಳ್ತಂಗಡಿ, ಜಮಾಲ್ ಜೋಕಟ್ಟೆ, ಸುಹೈಲ್ ಖಾನ್, ಬಂಟ್ವಾಳ ಕ್ಷೇತ್ರಾಧ್ಯಕ್ಷರಾದ ಮುನೀಶ್ ಆಲಿ, ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ನವಾಝ್ ಕಟ್ಟೆ ಲ್, ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಝುಹರಿ ಕಿಲ್ಲೂರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Recent News


Leave a Comment: